ಈ ಆರು ರಾಶಿಚಕ್ರದ ಮಹಿಳೆಯರು ಪುರುಷರನ್ನು ಬಹುಬೇಗ ಆಕರ್ಷಿಸುತ್ತಾರಂತೆ!

Posted By: Deepu
Subscribe to Boldsky

ಪುರುಷರು ಸಾಮಾನ್ಯವಾಗಿ ತಾವು ಬಯಸುವ ಮಹಿಳೆ ಅಥವಾ ತಮ್ಮ ಪಾಲುದಾರರಾಗುವ ಮಹಿಳೆಯರು ಅತ್ಯಂತ ಸುಂದರವಾಗಿರಬೇಕು. ಎಲ್ಲರೆದುರು ಹೆಚ್ಚು ಆಕರ್ಷಣೆಯಿಂದ ಕೂಡಿರಬೇಕು ಎಂದು ಬಯಸುತ್ತಾರೆ. ಆದರೆ ಕೆಲವು ಮಹಿಳೆಯರು ಕೇವಲ ಬಾಹ್ಯ ಸೌಂದರ್ಯದಿಂದಷ್ಟೇ ಅಲ್ಲ ತಮ್ಮ ಆಂತರಿಕ ಸೌಂದರ್ಯದಿಂದಲೂ ಬಹುಬೇಗ ಪುರುಷರನ್ನು ಆಕರ್ಷಿಸುತ್ತಾರೆ ಎಂದು ಹೇಳಲಾಗುತ್ತದೆ.

ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಕೆಲವು ಮಹಿಳೆಯರ ರಾಶಿಚಕ್ರದ ಅನುಗುಣವಾಗಿ ಪುರುಷರನ್ನು ಬಹು ಬೇಗ ಆಕರ್ಷಿಸುತ್ತಾರೆ. ಅವರ ಗುಣಗಳು ಹಾಗೂ ಸೌಂದರ್ಯವು ಪುರುಷರ ಮೆಚ್ಚುಗೆಗೆ ಕಾರಣವಾಗುತ್ತದೆ ಎಂದು ಹೇಳಲಾಗುತ್ತದೆ. ಹಾಗಾದರೆ ನಿಮ್ಮ ರಾಶಿಚಕ್ರವು ಇಲ್ಲಿ ನೀಡಿರುವ ಆಕರ್ಷಣೆಯ ರಾಶಿಕ್ರದ ಪಟ್ಟಿಯಲ್ಲಿದೆಯೇ ಎಂದು ಪರೀಕ್ಷಿಸಿ....

ವೃಶ್ಚಿಕ

ವೃಶ್ಚಿಕ

ಈ ರಾಶಿಚಕ್ರದ ಮಹಿಳೆಯರು ಪುರುಷರನ್ನು ಬಹುಬೇಗ ಆಕರ್ಷಿಸುತ್ತಾರೆ. ಪ್ರಣಯದ ವಿಚಾರದಲ್ಲಿ ಅತ್ಯಂತ ಪ್ರೇರಣೀಯ ಸಂಗತಿಗಳಾಗಿರುತ್ತಾರೆ. ಇವರು ತಮ್ಮನ್ನು ಇಷ್ಟಪಡುವವರನ್ನು ತೀವ್ರವಾಗಿ ಪ್ರೀತಿಸುತ್ತಾರೆ. ನವೀನ ಹಾಗೂ ತಮಾಷೆಯ ಪ್ರವೃತ್ತಿಯು ಪುರುಷರನ್ನು ಬಹುಬೇಗ ಆಕರ್ಷಿಸುತ್ತದೆ.

ಸಿಂಹ

ಸಿಂಹ

ಈ ರಾಶಿಯವರು ಪುರುಷರನ್ನು ಆಕರ್ಷಿಸಲು ಅಧಿಕ ಪ್ರಯತ್ನ ಮಾಡಬೇಕೆಂದಿಲ್ಲ. ಅವರು ಸುಲಭವಾಗಿ ಆಕರ್ಷಿಸುತ್ತಾರೆ. ಇವರಲ್ಲಿ ನಂಬಲಾಗದಂತಹ ಸಾಮರ್ಥ್ಯ ಹಾಗೂ ಆತ್ಮ ವಿಶ್ವಾಸವನ್ನು ಹೊಂದಿರುತ್ತಾರೆ. ಪುರುಷರು ಇವರ ಪ್ರೀತಿಯಲ್ಲಿ ಬಹಳ ಸುಲಭವಾಗಿ ಬೀಳುತ್ತಾರೆ. ಪ್ರಬಲ ವ್ಯಕ್ತಿತ್ವ ಹೊಂದಿರುವ ಇವರನ್ನು ಪುರುಷರು ಅಷ್ಟು ಸುಲಭವಾಗಿ ಮರೆಯಲಾರರು.

ಧನು

ಧನು

ಈ ರಾಶಿಯ ಮಹಿಳೆಯರು ಅನಿರೀಕ್ಷಿತವಾಗಿರುತ್ತಾರೆ. ಇವರು ಸಂತೋಷವಾಗಿರುವ ಪರಿ ಪುರುಷರನ್ನು ಆಕರ್ಷಣೆಗೆ ಹಾಗೂ ಆಶ್ಚರ್ಯಕ್ಕೆ ಒಳಗಾಗುವಂತೆ ಮಾಡುವುದು. ಈ ಚಿಹ್ನೆಯ ಮಹಿಳೆಯರು ಅತ್ಯುತ್ತಮ ಸ್ನೇಹಿತರಾಗಿರುತ್ತಾರೆ. ಸುಲಭವಾಗಿ ಪುರುಷರ ಮನಸ್ಸನ್ನು ವಶಪಡಿಸಿಕೊಳ್ಳುತ್ತಾರೆ ಎಂದು ಹೇಳಲಾಗುವುದು.

ಮಕರ

ಮಕರ

ಈ ರಾಶಿಯ ಮಹಿಳೆಯರು ಅತ್ಯಂತ ಶಾಂತ ಸ್ವಭಾವವನ್ನು ಹೊಂದಿರುತ್ತಾರೆ. ಇವರು ಸಂಗಾತಿಯಾದ ಮೇಲೆ ಅತ್ಯುತ್ತಮ ರೀತಿಯ ಸಹಕಾರ ನೀಡುವರು. ಅಕ್ಕರೆ, ಸಹಾನೂ ಭೂತಿ ಹಾಗೂ ಉತ್ತಮ ಗುಣಗಳು ಪುರುಷರನ್ನು ಬಹುಬೇಗ ಆಕರ್ಷಿಸುವುದು. ಪುರುಷರು ಎಂದಿಗೂ ಇವರನ್ನು ಬಿಟ್ಟು ಹೋಗಲು ಮನಸ್ಸು ಮಾಡರು.

ಕುಂಭ

ಕುಂಭ

ಈ ರಾಶಿಯ ಮಹಿಳೆಯರು ತಮ್ಮ ಅಭಿಪ್ರಾಯಗಳಿಗೆ ನಿಷ್ಠರಾಗಿ ಹಾಗೂ ಪ್ರಾಮಾಣಿಕರಾಗಿ ಇರುತ್ತಾರೆ. ಇದು ಪುರುಷರಿಗೆ ಬಹಳ ಇಷ್ಟವಾಗುವ ಸಂಗತಿಯಾಗಿರುತ್ತದೆ. ಇವರು ತಮ್ಮ ಆಕರ್ಷಕ ಗುಣಗಳಿಂದಲೇ ಪುರುಷರನ್ನು ಬಂಧಿಸುತ್ತಾರೆ ಎನ್ನಲಾಗುವುದು.

ಮೀನ

ಮೀನ

ಈ ರಾಶಿಯ ಮಹಿಳೆಯರು ತಮ್ಮ ಭಾವನೆಯನ್ನು ವ್ಯಕ್ತಪಡಿಸುವಾಗ ಯಾವುದೇ ಅಡ್ಡಿ-ಆತಂಕವನ್ನು ತೋರುವುದಿಲ್ಲ. ಪ್ರಣಯ, ವಿಶ್ವಾಸ ಹಾಗೂ ನಿದರ್ಶನಗಳ ಮೂಲಕ ಪುರುಷರನ್ನು ಬಹುಬೇಗ ಆಕರ್ಷಿಸುತ್ತಾರೆ. ಇವರು ಯಾವುದೇ ವಸ್ತು ಮತ್ತು ವಿಷಯಗಳಿಗೆ ಅಂಜಿಕೆಯನ್ನು ವ್ಯಕ್ತಪಡಿಸುವುದಿಲ್ಲ. ಏಕೆಂದರೆ ಇವರು ಎಲ್ಲಕ್ಕಿಂತ ಸಂಬಂಧಗಳಿಗೆ ಹೆಚ್ಚಿನ ಮಹತ್ವ ನೀಡುತ್ತಾರೆ.

English summary

Women Of These Zodiac Signs Attract Men Easily

What is it that attracts men to women? Is it their charm or the characteristics or is it that they just fall for them, as they are attractive in their own way? Well, through astrology, you tend to get your answers, as it reveals some of the zodiac sign women who can attract men instantly. Check out below if your zodiac sign is also listed here and if you are the lucky one!
Story first published: Tuesday, April 10, 2018, 10:33 [IST]