For Quick Alerts
ALLOW NOTIFICATIONS  
For Daily Alerts

  ಶವಪೆಟ್ಟಿಗೆಯಲ್ಲಿ ಹನ್ನೊಂದು ದಿನ ಜೀವಂತವಾಗಿ ದಫನಗೊಂಡಿದ್ದ ಮಹಿಳೆ!

  |

  ಇದುವರೆಗೆ ನೀವು ಅನುಭವಿಸಿದ ಕ್ಷಣಗಳಲ್ಲಿ ಅತ್ಯಂತ ಭಯಾನಕ ಕ್ಷಣ ಯಾವುದೆಂದು ಹೇಳಬಲ್ಲಿರಾ? ಈ ಪ್ರಸಂಗದ ಬಗ್ಗೆ ಕೇಳಿದರೆ ನಿಮ್ಮ ರೋಮ ರೋಮಗಳು ಭಯದಿಂದ ನಿಲ್ಲುವುದಂತೂ ಖಚಿತ. ಇದು ರೋಸಾಂಜೆಲಾ ಆಲ್ಮೇಡಾ ಡಾಸ್ ಸ್ಯಾಂಟೋಸ್ ಎಂಬ ಮೂವತ್ತೇಳು ವರ್ಷ ವಯಸ್ಸಿನ ಮಹಿಳೆಯ ಕಥೆಯಾಗಿದೆ. ಹನ್ನೊಂದು ದಿನಗಳ ಹಿಂದೆ ಈಕೆಯದ್ದು ಸ್ವಾಭಾವಿಕ ಮರಣ ಎಂದು ಪರಿಗಣಿಸಿ ಆಕೆಯ ಧರ್ಮದ ಪ್ರಕಾರ ಅಂತ್ಯಸಂಸ್ಕಾರವನ್ನೂ ನಡೆಸಲಾಗಿತ್ತು.

  ಆದರೆ ಅಂದು ಆಕೆಯನ್ನು ದಫನಗೊಳಿಸಿದ್ದ ಗೋರಿಯೊಳಗಿನಿಂದ ಚೀತ್ಕಾರಗಳು ಕೇಳಿ ಬಂದ ಕಾರಣ ಕೆಲವು ಧೈರ್ಯವಂತರು ತಕ್ಷಣ ಗೋರಿಯನ್ನು ಅಗೆದು ತಮ್ಮ ಜೀವಮಾನದ ಅತ್ಯಂತ ವಿಲಕ್ಷಣವಾದ, ಯಾರೂ ಇದುವರೆಗೆ ಅನುವಹಿಸದ, ಕೇಳದ, ನೋಡದ ಅನುಭವವನ್ನು ಪಡೆದರು. ಈ ಅನುಭವ ಹೇಗಿತ್ತು ಎಂಬ ವಿವರಗಳನ್ನು ಲೇಖನದ ಕೊನೆಯಲ್ಲಿರುವ ವೀಡಿಯೋ ಮೂಲಕ ನೋಡಿ. ಇಡಿಯ ಪ್ರಸಂಗವನ್ನು ಈ ವೀಡಿಯೋದಲ್ಲಿ ಸಂಗ್ರಹಿಸಲಾಗಿದೆ.... 

  ಈ ಪ್ರಸಂಗ ನಡೆದದ್ದೆಲ್ಲಿ?

  ಈ ಪ್ರಸಂಗ ನಡೆದದ್ದೆಲ್ಲಿ?

  ಈ ಪ್ರಸಂಗ ಬ್ರೆಜಿಲ್ ದೇಶದಲ್ಲಿ ನಡೆದಿದೆ. ಈ ದೇಶದ ರಿಚಾವೋ ಡಾಲ್ ನೇವೆಸ್ ಎಂಬ ಪಟ್ಟಣದ ನಿವಾಸಿಯಾಗಿದ್ದ ರೋಸಾಂಜೆಲಾ ಆಲ್ಮೇಡಾ ಡಾಸ್ ಸ್ಯಾಂಟೋಸ್ ಎಂಬ ಮೂವತ್ತೇಳು ವರ್ಷ ವಯಸ್ಸಿನ ಮಹಿಳೆಯನ್ನು ಸಹಜ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ ಎಂದು ಪರಿಗಣಿಸಿ ಮರಣಪತ್ರವನ್ನೂ ನೀಡಲಾಗಿತ್ತು. ಈ ಪತ್ರದಲ್ಲಿ ನೀಡಿರುವ ವಿವರಗಳ ಪ್ರಕಾರ ಈಕೆಗೆ ಎರಡು ಹೃದಯಾಘಾತಗಳಾಗಿದ್ದವು ಹಾಗೂ ನಂಜಿನ ಆಘಾತದಿಂದ ಸಾವು ಸಂಭವಿಸಿತ್ತು.

  ಈಕೆಯ ಕುಟುಂಬದವರ ಪ್ರಕಾರ

  ಈಕೆಯ ಕುಟುಂಬದವರ ಪ್ರಕಾರ

  ವರದಿಗಳಲ್ಲಿ ಪ್ರಕಟವಾದ ವಿವರಗಳ ಪ್ರಕಾರ ವೈದ್ಯರು ಈಕೆಯನ್ನು ಮರಣಿಸಿದ್ದಾಳೆ ಎಂದು ದೃಢೀಕರಿಸಿದ ಬಳಿಕ ಈಕೆಯ ಮನೆಯವರು ಈಕೆಯನ್ನು ಮನೆಗೆ ಕರೆತಂದಿದ್ದರು. ಆದರೆ ಆ ಸಮಯದಲ್ಲಿ ಆಕೆಯ ಮೈ ಬೆಚ್ಚಗೇ ಇತ್ತು. ಆದರೆ ವೈದ್ಯರು ಹೇಳಿದ ಮೇಲೆ ಇನ್ನೇನು ಉಳಿದಿದೆ ಎಂದುಕೊಂಡ ಮನೆಯವರು ಮರುದಿನ ತಮ್ಮ ಧರ್ಮದ ಪ್ರಕಾರ ಅಂತಿಮ ಸಂಸ್ಕಾರವನ್ನು ಬ್ರೆಜಿಲ್ ನ ಈಶಾನ್ಯ ಭಾಗದಲ್ಲಿರುವ ಸೆನ್ಹೋರಾ ಸಾಂಟಾನಾ ಎಂಬ ರುದ್ರಭೂಮಿಯಲ್ಲಿ ನಡೆಸಿದರು.

  ಈಕೆ ಹನ್ನೊಂದು ದಿನಗಳ ಕಾಲ ಗೋರಿಯಲ್ಲಿದ್ದಳು

  ಈಕೆ ಹನ್ನೊಂದು ದಿನಗಳ ಕಾಲ ಗೋರಿಯಲ್ಲಿದ್ದಳು

  ಅಂದಿನಿಂದ ಸುಮಾರು ಹತ್ತು ದಿನಗಳವರೆಗೆ ಯಾವುದೇ ಘಟನೆ ಸಂಭವಿಸಿರಲಿಲ್ಲ. ಆದರೆ ಹನ್ನೊಂದನೆಯ ದಿನ ರುದ್ರಭೂಮಿಯ ಬಳಿ ನೆಲೆಸಿದ ಜನರಿಗೆ ಗೋರಿಯೊಳಗಿನಿಂದ ಚೀತ್ಕರಿಸುವ ಸದ್ದು ಕೇಳಿಬರುತ್ತಿತ್ತು. ಈ ಸದ್ದನ್ನು ಸ್ಪಷ್ಟವಾಗಿಯೇ ಆಲಿಸಿದ ಕೆಲವು ಧೈರ್ಯವಂತರು ಗೋರಿಯನ್ನು ಅಗೆದು ಶವಪೆಟ್ಟಿಗೆಯನ್ನು ಹೊರತೆಗೆದು ಮೊಳೆಗಳನ್ನು ನಿವಾರಿಸಿ ಮುಚ್ಚಳ ತೆರೆಯಲು ಕೊಂಚ ಹೊತ್ತೇ ಬೇಕಾಗಿತ್ತು.

  ಪೆಟ್ಟಿಗೆಯ ಮೊಳೆಗಳು ಸಡಿಲವಾಗಿದ್ದವು

  ಪೆಟ್ಟಿಗೆಯ ಮೊಳೆಗಳು ಸಡಿಲವಾಗಿದ್ದವು

  ಪೆಟ್ಟಿಗೆಯನ್ನು ಮೊದಲಾಗಿ ನೋಡಿದಾಗ ಒಳಗಿನಿಂದ ಹೊರದೂಡಲು ಯತ್ನಿಸಿದ್ದಂತೆ ಮೊಳೆಗಳು ಕೊಂಚವೇ ಹೊರಬಂದಿದ್ದವು. ಮುಚ್ಚಳ ತೆರೆದ ಬಳಿಕ ನೋಡಿದಾಗ ಆ ಮಹಿಳೆಯ ಹಣೆ ಮತ್ತು ಕೈಬೆರಳುಗಳಿಗೆ ಗಾಯಗಳಾದ ಗುರುತುಗಳಿದ್ದವು. ದೇಹವನ್ನು ಮಲಗಿಸಿದ್ದ ಭಂಗಿಯೂ ಬದಲಾಗಿತ್ತು. ಈ ಎಲ್ಲಾ ವಿವರಗಳು ಆಕೆ ಪೆಟ್ಟಿಗೆಯನ್ನು ಒಡೆದು ಹೊರಬರಲು ಹರಸಾಹಸ ಪಟ್ಟಿದ್ದಳೆಂದು ಸ್ಪಷ್ಟವಾಗಿಯೇ ಹೇಳಬಹುದಾಗಿತ್ತು.

  ವಿಡಿಯೋ

  ಈ ಘಟನೆಯ ಎಲ್ಲಾ ವಿವರಗಳನ್ನು ಕುತೂಹಲಿಯೊಬ್ಬರು ತಮ್ಮ ಮೊಬೈಲಿನಲ್ಲಿ ಚಿತ್ರೀಕರಿಸಿದ್ದು ಈಗ ಎಲ್ಲೆಡೆ ಅಂತರ್ಜಾಲದ ಮೂಲಕ ಹರಿದಾಡುತ್ತಿದೆ. ಆದರೆ ಈ ವಿಡಿಯೋವನ್ನು ಗಡಿಬಿಡಿಯಲ್ಲಿ ಮುಗಿಸಿದಂತೆ ಕಾಣುತ್ತಿದೆ ಹಾಗೂ ಅಂತಿಮ ಕ್ಷಣಗಳಲ್ಲಿ ದೇಹವನ್ನು ತೋರಿಸಲಾಗಿಲ್ಲ.

  ಈ ಬಗ್ಗೆ ಅಧಿಕಾರಿಗಳ ಸ್ಪಷ್ಟನೆ

  ಈ ಬಗ್ಗೆ ಅಧಿಕಾರಿಗಳ ಸ್ಪಷ್ಟನೆ

  ಈ ಸದ್ದುಗಳು ಬಂದಿದ್ದಾದರೂ ಹೇಗೆ? ಮಹಿಳೆಯ ಮರಣವಾಗಿದೆ ಎಂದು ವೈದ್ಯರು ತಪ್ಪಾಗಿ ದೃಢೀಕರಣ ನೀಡಿದ್ದರೇ? ಈ ಸದ್ದುಗಳು ಹೊರಡಿಸುವುದು ಯಾವುದೋ ಪಡ್ಡೆ ಹುಡುಗರ ಕಿತಾಪತಿ ಏಕಾಗಿರಬಾರದು? ಎಂಬೆಲ್ಲಾ ಪ್ರಶ್ನೆಗಳಿಗೆ ಸಂಬಂಧಪಟ್ಟ ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ. ಈ ಬಗ್ಗೆ ನಿಮ್ಮ ಅಭಿಪ್ರಾಯವೇನು? ನಿಮ್ಮ ಅನಿಸಿಕೆಗಳನ್ನು ಕೆಳಗಿನ ಕಮೆಂಟ್ಸ್ ಭಾಗದಲ್ಲಿ ಬರೆದು ಖಂಡಿತಾ ತಿಳಿಸಿ.

  English summary

  woman-who-was-buried-11-days-screamed-from-her-grave

  What do you think is the most scariest thing that you have ever experienced? We bet, this case will take your fear to another different level! This is the case of a woman named Rosangela Almeida dos Santos, 37 years. She had apparently died 11 days back and was buried with proper customs and rituals. It is stated that people started hearing screams from her grave and the next thing they did was to dig up the grave, wherein they had the most eccentric experience that one could ever believe.
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more