For Quick Alerts
ALLOW NOTIFICATIONS  
For Daily Alerts

ನೋಡಿ, ಇದೇ ಕಾರಣಕ್ಕೆ ವಿವಾಹಕ್ಕೂ ಮೊದಲು 'ರಾಶಿ ಚಕ್ರ' ನೋಡಬೇಕೆಂದು ಹೇಳುವುದು

By Deepu
|

ಒಬ್ಬ ವ್ಯಕ್ತಿಯನ್ನು ಸರಿಯಾಗಿ ತಿಳಿದುಕೊಳ್ಳಬೇಕು ಎಂದರೆ ಮೊದಲು ಅವನ ರಾಶಿಚಕ್ರ ಹಾಗೂ ಕುಂಡಲಿಯ ಪರಿಶೀಲಿಸಬೇಕು. ಜೀವನದ ಪಾಲುದಾರರಾಗಿ ಜೀವನ ಪೂರ್ತಿ ನಮ್ಮೊಂದಿಗೆ ಇರುವ ವ್ಯಕ್ತಿ ಎಂದಾಗ ಅವರ ಬಗ್ಗೆ ಸೂಕ್ತವಾದ ಮಾಹಿತಿ ಹಾಗೂ ಹೊಂದಾಣಿಕೆಯ ವಿಚಾರದ ಬಗ್ಗೆ ತಿಳಿದುಕೊಳ್ಳುವ ಅನಿವಾರ್ಯತೆ ಇರುತ್ತದೆ. ಬೇರೆ ಬೇರೆ ಕುಟುಂಬ, ವಾತಾವರಣ ಹಾಗೂ ಆಚಾರ ವಿಚಾರಗಳ ಹಿನ್ನೆಲೆಯಲ್ಲಿ ಹುಟ್ಟಿ ಬೆಳೆದವರು ವಿವಾಹ ಎನ್ನುವ ಬಂಧನದ ನಂತರ ಒಂದೇ ಸೂರಿನಡಿಯಲ್ಲಿ ಬದುಕಬೇಕು ಎಂದಾಗ ಸಾಕಷ್ಟು ಹೊಂದಾಣಿಕೆಯನ್ನು ನಿರ್ವಹಿಸಬೇಕಾಗುತ್ತದೆ.

ಸಂಗಾತಿಯಾಗುವವರ ವ್ಯಕ್ತಿತ್ವ ಹಾಗೂ ಸ್ವಭಾವವನ್ನು ಅರಿತುಕೊಂಡಿದ್ದರೆ ಸಂಬಂಧದ ಸ್ಥಿತಿಗತಿಯಲ್ಲಿ ಅತ್ಯುತ್ತಮ ಸುಧಾರಣೆಯನ್ನು ಕಾಣಬಹುದು. ಜೊತೆಗೆ ಮುಂದಿನ ಜೀವನದಲ್ಲಿ ಉಂಟಾಗಬಹುದಾದ ಅನೇಕ ಸಮಸ್ಯೆಗಳನ್ನು ಮುನ್ನೆಚ್ಚರಿಕೆಯಾಗಿ ನಿಯಂತ್ರಿಸಿಕೊಳ್ಳಬಹುದು ಎನ್ನುವುದನ್ನು ಜ್ಯೋತಿಷ್ಯ ಶಾಸ್ತ್ರ ತಿಳಿಸುತ್ತದೆ. ನಿಮ್ಮ ಸಂಗಾತಿಯ ರಾಶಿಚಕ್ರದ ಚಿಹ್ನೆ ಏನನ್ನು ಊಹಿಸುತ್ತಾರೆ ಎನ್ನುವುದನ್ನು ತಿಳಿದುಕೊಳ್ಳಲು ನಿಮಗೆ ಆಸಕ್ತಿ ಇದ್ದರೆ ಬೋಲ್ಡ್ ಸ್ಕೈ ಈ ಮುಂದೆ ವಿವರಿಸಿರುವ ವಿವರಣೆಯನ್ನು ಅರಿಯಿರಿ....

ಮೇಷ: 28 ಮಾರ್ಚ್ -20 ಏಪ್ರಿಲ್

ಮೇಷ: 28 ಮಾರ್ಚ್ -20 ಏಪ್ರಿಲ್

ನಿಮ್ಮ ರಾಶಿಚಕ್ರಕ್ಕೆ ಅನುಗುಣವಾಗಿ ಹಠಾತ್ ಪ್ರವೃತ್ತಿಯನ್ನು ಹೊಂದಿದವರಾಗಿರುತ್ತಾರೆ. ಎರಡು ಬಾರಿ ಆಲೋಚನೆ ಮಾಡುವ ಮೊದಲು ವಿಷಯವನ್ನು ಹೇಳಿಬಿಡುತ್ತಾರೆ. ಏಕೆಂದರೆ ಅವರು ಭಯ ಹಾಗೂ ನಿರಾತಂಕದ ಪ್ರವೃತ್ತಿಯವರಾಗಿರುತ್ತಾರೆ. ಇವರಿಗೆ ಯಾವುದೇ ಕಡಿವಾಣಗಳು ಇವರನ್ನು ನಿಯಂತ್ರಿಸುವುದಿಲ್ಲ.

ವೃಷಭ: 21 ಏಪ್ರಿಲ್ -21 ಮೇ

ವೃಷಭ: 21 ಏಪ್ರಿಲ್ -21 ಮೇ

ಈ ರಾಶಿಯ ಚಿಹ್ನೆಯವರು ಸಾಮಾನ್ಯವಾಗಿ ಮೊಂಡುತನದ ಸ್ವಭಾವ ಹೊಂದಿರುತ್ತಾರೆ. ಅವರು ಮಾಡುವ ಕೆಲಸವನ್ನು ಹೆಚ್ಚು ಇಷ್ಟಪಡಬಹುದು. ಇತರರಿಗಾಗಿ ತಮ್ಮನ್ನು ತಾವು ಬದಲಿಸಿಕೊಳ್ಳಲು ಇಷ್ಟಪಡದ ವ್ಯಕ್ತಿಗಳಾಗಿರುತ್ತಾರೆ. ಇವರು ತಮಗೆ ಅಗತ್ಯವಿರುವ ವಿಚಾರಗಳ ಕುರಿತು ಪರಿಗಣಿಸಬಹುದು.

ಮಿಥುನ: ಮೇ 21 ಜೂನ್ 20

ಮಿಥುನ: ಮೇ 21 ಜೂನ್ 20

ಈ ರಾಶಿಚಕ್ರಕ್ಕೆ ಅನುಸಾರವಾಗಿ ವ್ಯಕ್ತಿ ಹೆಚ್ಚು ನಿರ್ಣಯಿಸುವುದಿಲ್ಲ. ಇವರು ಏನು ನಿರ್ಣಯಿಸುತ್ತಾರೆ ಎಂಬುದನ್ನು ನಿರ್ಧರಿಸಲು ಇತರರಿಗೆ ಸಾಧ್ಯವಾಗುವುದಿಲ್ಲ. ಇವರು ಯಾವುದೋ ಒಂದು ವಿಚಾರಕ್ಕಾಗಿ ಬಂಧಿಯಾಗುವುದಿಲ್ಲ.

ಕರ್ಕ: ಜೂನ್ 21-ಜುಲೈ 22

ಕರ್ಕ: ಜೂನ್ 21-ಜುಲೈ 22

ಈ ರಾಶಿ ಚಕ್ರದವರು ಕುಟುಂಬಕ್ಕೆ ಮೊದಲ ಆಧ್ಯತೆ ನೀಡುತ್ತಾರೆ. ತಮ್ಮ ಆತ್ಮೀಯ ವ್ಯಕ್ತಿಗಳು ಅಥವಾ ಸ್ನೇಹಿತರನ್ನು ತಮ್ಮ ಕುಟುಂಬದವರನ್ನಾಗಿಯೇ ಪರಿಗಣಿಸುತ್ತಾರೆ. ಇವರು ತಾವು ಇಷ್ಟ ಪಡುವ ವ್ಯಕ್ತಿಗಳಿಗಾಗಿ ಏನುಬೇಕಾದರೂ ಮಾಡಬಲ್ಲರು.

ಸಿಂಹ: ಜುಲೈ 23-ಆಗಸ್ಟ್ 23

ಸಿಂಹ: ಜುಲೈ 23-ಆಗಸ್ಟ್ 23

ಇವರು ಎಲ್ಲಾ ಸಮಯದಲ್ಲೂ ಕೇಂದ್ರಬಿಂದುವಾಗಿರಲು ಇಷ್ಟಪಡುತ್ತಾರೆ. ಇವರು ಅಂದುಕೊಂಡಂತೆ ವಿಷಯಗಳು ಇದ್ದರೆ ಅದನ್ನು ಬಹಳ ಇಷ್ಟಪಡುತ್ತಾರೆ. ಇತರರೊಂದಿಗೆ ಇರುವಾಗ ಇವರು ತಮ್ಮನ್ನು ತಾವು ಹೆಚ್ಚು ಕಾಳಜಿಯಿಂದ ನೋಡಿಕೊಳ್ಳುತ್ತಾರೆ. ಇವರು ಸ್ವಲ್ಪ ಸ್ವ ಕೇಂದ್ರೀಕೃತ ಸ್ವಭಾವ ಹೊಂದಿದವರಾಗಿದ್ದರೂ ಆತ್ಮವಿಶ್ವಾಸ ಬಲವಾಗಿರುತ್ತದೆ. ತಮ್ಮ ಮನಸ್ಸಿಗೆ ಇಷ್ಟವಾದುದ್ದನ್ನು ಮಾಡಲು ಮುಂದಾಗುತ್ತಾರೆ.

 ಕನ್ಯಾ: ಆಗಸ್ಟ್ 24-ಸಪ್ಟೆಂಬರ್ 23 ಕಾಫಿ

ಕನ್ಯಾ: ಆಗಸ್ಟ್ 24-ಸಪ್ಟೆಂಬರ್ 23 ಕಾಫಿ

ಈ ರಾಶಿಯವರು ಎಲ್ಲವನ್ನೂ ಅವಲೋಕಿಸಲು ಇಷ್ಟಪಡುತ್ತಾರೆ. ಎಚ್ಚರಿಕೆಯಿಂದ ಹಾಗೂ ಸೂಕ್ಷ್ಮವಾಗಿ ಇರಲು ಬಯಸುತ್ತಾರೆ. ಅಲ್ಲದೆ ಒಂದೇ ಸಮಯದಲ್ಲಿ ಎಲ್ಲವನ್ನೂ ಯೋಜಿಸಲು ಬಯಸುತ್ತಾರೆ. ಏಕೆಂದರೆ ಇವರು ಸಾಮಾನ್ಯವಾಗಿ ನಕಾರಾತ್ಮಕ ಚಿಂತನೆಗಳನ್ನು ಹೆಚ್ಚಾಗಿ ಮಾಡುತ್ತಾರೆ.

ತುಲಾ: ಸೆಪ್ಟಂಬರ್ 24-ಅಕ್ಟೋಬರ್ 23

ತುಲಾ: ಸೆಪ್ಟಂಬರ್ 24-ಅಕ್ಟೋಬರ್ 23

ಇವರು ಏಕಾಂಗಿಯಾಗಿರುವುದನ್ನು ದ್ವೇಷಿಸುತ್ತಾರೆ. ಇವರು ನಮ್ಮೊಂದಿಗೆ ಎಲ್ಲವನ್ನೂ ಮಾಡಲು ಸಿದ್ಧರಾಗಿರುತ್ತಾರೆ. ಎಲ್ಲವನ್ನೂ ಇವರು ಆನಂದಿಸುವುದಿಲ್ಲ. ಮತ್ತೊಂದೆಡೆ ಇವರು ಕೆಲವು ವಿಚಾರವನ್ನು ಪ್ರಮುಖವಾಗಿ ಪರಿಗಣಿಸುವರು. ಸಮಾನತೆಯನ್ನು ಪರಿಗಣಿಸುವ ಇವರು ಎಲ್ಲರನ್ನೂ ಸಂತೋಷವಾಗಿಯೇ ಕಾಣುತ್ತಾರೆ.

ವೃಶ್ಚಿಕ: 24 ಅಕ್ಟೋಬರ್ -22 ನವೆಂಬರ್

ವೃಶ್ಚಿಕ: 24 ಅಕ್ಟೋಬರ್ -22 ನವೆಂಬರ್

ಈ ರಾಶಿಚಕ್ರದವರು ಹಾಸ್ಯಾಸ್ಪದವಾದ ಅಸೂಯೆಯನ್ನು ಹೊಂದಿರುತ್ತಾರೆ. ಅವರ ಅಸೂಯೆಗೆ ಇದು ಸರ್ವಕಾಲಿಕ ಅರ್ಥವಿರುವುದಿಲ್ಲ. ಇನ್ನೊಂದೆಡೆ ಇತರರು ಹೆಚ್ಚು ಇಷ್ಟಪಡುವಂತೆ ವರ್ತಿಸುತ್ತಾರೆ. ಇತರರ ಬಗ್ಗೆ ಹೆಚ್ಚು ವಿಶ್ವಾಸವನ್ನು ಹೊಂದಿರುತ್ತಾರೆ.

ಧನು: 23 ನವೆಂಬರ್ -22 ಡಿಸೆಂಬರ್

ಧನು: 23 ನವೆಂಬರ್ -22 ಡಿಸೆಂಬರ್

ಈ ರಾಶಿಚಕ್ರದವರು ತಾವು ಇದ್ದಂತೆ ತೋರುವುದಿಲ್ಲ. ಸಂಬಂಧದಲ್ಲಿ ಅಂಟಿಕೊಂಡಿರುವ ಅಥವಾ ಉಸಿರುಗಟ್ಟಿರುವಂತೆ ಭಾವಿಸಿದರೆ ಅವರು ಪಲಾಯನ ಆಗುವ ಸಾಧ್ಯತೆಗಳಿವೆ. ಈ ಜಗತ್ತಿನಲ್ಲಿ ಎಲ್ಲವನ್ನೂ ಅನ್ವೇಷಿಸಲು ಅವರು ಪ್ರೀತಿಸುತ್ತಾರೆ.

ಮಕರ: ಡಿಸೆಂಬರ್ 23-ಜನವರಿ 20

ಮಕರ: ಡಿಸೆಂಬರ್ 23-ಜನವರಿ 20

ಇವರು ವ್ಯಕ್ತಿಗಳ ಬಗ್ಗೆ ಹೆಚ್ಚು ಗೌರವ ಹೊಂದಿರುತ್ತಾರೆ. ತಮ್ಮ ಪದಗಳಿಂದ ಇತರರನ್ನೂ ನೋಯಿಸುವುದಿಲ್ಲ. ಇವರು ತಮ್ಮ ಪದಗಳಿಗೆ ಹೆಚ್ಚು ಅಂಟಿಕೊಂಡಿರುತ್ತಾರೆ. ಪಾಲುದಾರರು ಸಹ ತಮ್ಮೊಂದಿಗೆ ಹೆಚ್ಚು ಅಂಟಿಕೊಂಡಿರುವಂತೆ ಇರಬೇಕು ಎಂದು ಬಯಸುತ್ತಾರೆ.

ಕುಂಭ: ಜನವರಿ 20-ಫೆಬ್ರವರಿ 18

ಕುಂಭ: ಜನವರಿ 20-ಫೆಬ್ರವರಿ 18

ಈ ವ್ಯಕ್ತಿಗಳು ತಮ್ಮ ಸಮಯವನ್ನು ಮಾತ್ರ ಆನಂದಿಸುತ್ತಾರೆ. ಒಂಟಿಯಾಗಿರುವುದನ್ನು ಹೆಚ್ಚು ಇಷ್ಟಪಡುವುದರಿಂದ ಪಾಲುದಾರರೊಂದಿಗೆ ಇರುವಾಗಲೂ ಕೆಲವೊಮ್ಮೆ ತಮ್ಮ ಸ್ಥಾನವನ್ನು ಉಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ತಮ್ಮ ಬಲವನ್ನು ಪುನಃಶ್ಚೇತನ ಗೊಳಿಸಲು ಹೆಚ್ಚು ಬಯಸುತ್ತಾರೆ. ಅವರು ತಮ್ಮ ವಿವೇಕವನ್ನು ಉಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ.

ಮೀನ: 20 ಫೆಬ್ರವರಿ -20 ಮಾರ್ಚ್

ಮೀನ: 20 ಫೆಬ್ರವರಿ -20 ಮಾರ್ಚ್

ಈ ವ್ಯಕ್ತಿಗಳು ತುಂಬಾ ಭಾವನಾತ್ಮಕವಾಗಿ ಇರುತ್ತಾರೆ. ಸೂಕ್ಷ್ಮ ಮನೋಭಾವವನ್ನು ಹೊಂದಿರುವ ಇವರು ಸಹಾನೂಭೂತಿಯನ್ನು ತೋರುತ್ತಾರೆ. ಅವರ ಪ್ರೀತಿ ಪಾತ್ರರು ನೋವನ್ನು ಹೊಂದಿರುವಾಗ ಹೆಚ್ಚಿನ ಕಾಳಜಿಯನ್ನು ತೋರುವರು. ಅಂತೆಯೇ ಅವರು ವ್ಯಕ್ತ ಪಡಿಸುವ ರೀತಿಯಲ್ಲಿ ಯಾವುದೇ ತೊಂದರೆಗಳು ಇರುವುದಿಲ್ಲ ಎಂದು ಹೇಳಲಾಗುವುದು.

English summary

what-you-should-know-about-each-zodiac-sign-before-marrying

To know or to understand a person in a better way, one needs to learn about their zodiac sign. This trick works the best when you learn about your partner's zodiac sign. Here, in this article, we reveal to you the facts and traits that you need to know about your partner's zodiac sign.
X
Desktop Bottom Promotion