Related Articles
-
ಪುಲ್ವಾಮಾ ದಾಳಿ: ಪ್ರಧಾನಿ ಅಧ್ಯಕ್ಷತೆಯಲ್ಲಿ ಇಂದು ಭದ್ರತಾ ಸಭೆ
-
ಆಕರ್ಷಕ ಬೆಲೆಗಳಲ್ಲಿ ಬಿಡುಗಡೆಯಾದ ಮಹೀಂದ್ರಾ ಎಕ್ಸ್ಯುವಿ300
-
ಕಡಿಮೆ ಮೆಮೊರಿ ಮತ್ತು ರ್ಯಾಮ್ ಇರುವ ಫೋನನ್ನು ಖರೀದಿಸಲೇಬಾರದು ಏಕೆ?
-
ಡಾಲಿ ಫಸ್ಟ್ ಲುಕ್: ಮತ್ತೆ ನಟರಾಕ್ಷಸನ ಆಗಮನ
-
ಪ್ರಧಾನ ಮಂತ್ರಿ ಶ್ರಮಯೋಗಿ ಮಾನ್ಧನ್ ಯೋಜನೆ: ತಿಂಗಳಿಗೆ 3000 ಪಿಂಚಣಿ
-
ಪುರುಷರಲ್ಲಿ ಫಲವತ್ತತೆ ಹೆಚ್ಚಿಸಲು ಕೆಲವು ಸಲಹೆಗಳು
-
ಐಸಿಸಿ ವಿಶ್ವಕಪ್ ಕ್ರಿಕೆಟ್ 2019 ವೇಳಾಪಟ್ಟಿ ಪ್ರಕಟ
-
ಕೋಲಾರ ಜಿಲ್ಲಾ ನ್ಯಾಯಾಲಯದಲ್ಲಿ ಶೀಘ್ರಲಿಪಿಗಾರ ಹುದ್ದೆಗಳಿಗೆ ಅರ್ಜಿ ಹಾಕಿ
ಅಚ್ಚರಿ ಗೊಳಿಸಲಿರುವ ವಿಲಕ್ಷಣ ಭವಿಷ್ಯಗಳು! ಹೀಗೂ ಆಗಬಹುದೇ?
ಹೊಸ ವರ್ಷ ಬಂತೆಂದರೆ ಸಾಮಾನ್ಯವಾಗಿ ಎಲ್ಲರೂ ಖುಷಿ ಪಡುತ್ತಾರೆ. ಜೀವನದಲ್ಲಿ ಏನಾದರೂ ಹೊಸತನ್ನು ಅನುಭವಿಸಬಹುದೇ? ಅಥವಾ ಖುಷಿಯ ಸಂಗತಿಗಳು ಇರಬಹುದೇ? ಭವಿಷ್ಯದಲ್ಲಿ ಸಕಾರಾತ್ಮಕ ಬದಲಾವಣೆ ಉಂಟಾಗುವುದು ಎನ್ನುವ ಭರವಸೆ ಮತ್ತು ಕುತೂಹಲ ಇರುತ್ತದೆ. ನಿಜ, 2018ರಲ್ಲಿ ಕೆಲವು ಗ್ರಹಗಳ ಸಂಚಾರವು ಅನೇಕ ಶುಭ ಫಲಗಳನ್ನು ನೀಡಲಿವೆ ಎನ್ನಲಾಗುತ್ತದೆ.
ಅದೇ ರೀತಿ ಈ ವರ್ಷ ಕೆಲವು ವಿಲಕ್ಷಣ ವಿಷಯಗಳು ನಡೆಯುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ನಾಸ್ಟ್ರಾಡಾಮಸ್ ಮತ್ತು ಬಾಬಾ ವ್ಯಾಂಗ್ ಹೇಳುವ ಪ್ರಕಾರ 2018ರಲ್ಲಿ ಕೆಲವು ವಿಲಕ್ಷಣ ಭವಿಷ್ಯವಾಣಿ ಸಂಭವಿಸಲಿದೆ ಎಂದು ಹೇಳಲಾಗುತ್ತಿದೆ. ಈ ವಿಷಯವು ದಿಗಿಲು ಹಾಗೂ ವಿನೋದವನ್ನುಂಟು ಮಾಡಬಹುದು. ಹಾಗಾದರೆ ಅದು ಯಾವ ಬಗೆಯ ಭವಿಷ್ಯ ಎನ್ನುವ ಕುತೂಹಲ ಈಗಾಗಲೇ ನಿಮ್ಮನ್ನು ಕಾಡಲು ಪ್ರಾರಂಭಿಸಿದೆ ಎಂದರೆ ಈ ಮುಂದಿರುವ ವಿವರಣೆಯನ್ನು ಪರಿಶೀಲಿಸಿ...
ಜ್ವಾಲಾಮುಖಿ
ಪ್ರಪಂಚದಾದ್ಯಂತ ಅನೇಕ ಜ್ವಾಲಾಮುಖಿ ಸ್ಫೋಟಗಳು ನಡೆಯುತ್ತಲೇ ಇರುತ್ತವೆ. ಪ್ರಪಂಚದ ಕೆಲವೆಡೆ ಸುಮಾರು 5 ನಿಮಿಷಗಳ ಕಾಲ ಭೂ ಕಂಪನ ನಡೆಯುತ್ತದೆ. ನಾಸ್ಟ್ರಾಡಾಮಸ್ ಅವರ ಪ್ರಕಾರ 2018ರಲ್ಲಿ ಜ್ವಾಲಾಮುಖಿ ಹಾಗೂ ಭೂಕಂಪನ ಹೆಚ್ಚುವ ಸಾಧ್ಯತೆ ಇದೆ. ಅಲ್ಲದೆ ಕೆಲವೆಡೆ ಜನರು ಹೆಪ್ಪುಗಟ್ಟಿರುವ ಚಿತ್ರವನ್ನು ಕಾಣುವ ಸಾಧ್ಯತೆಗಳಿವೆ ಎಂದು ಹೇಳುತ್ತಿದ್ದಾರೆ.
ಯುಎಸ್‍ಎ ಪಶ್ಚಿಮ ಕರಾವಳಿಯಲ್ಲಿ ಮಿತಿಮೀರಿದ ಭೂಕಂಪ
ನಾಸ್ಟ್ರಾಡಾಮಸ್ ಅವರ ಪ್ರಕಾರ ಅಮೇರಿಕಾದಲ್ಲಿ ಭೂಕಂಪ ಸಂಭವಿಸುತ್ತದೆ ಎನ್ನುವ ಒಂದು ಅಂದಾಜು ಮಾಡಿದ್ದಾರೆ. ಭೂಕಂಪವು ನಿರ್ದಿಷ್ಟವಾಗಿ ಅಮೆರಿಕಾ ಸಂಯುಕ್ತ ಸಂಸ್ಥಾನದ ಪ್ರಾಶ್ಚಾತ್ಯ ಪ್ರದೇಶದಲ್ಲಿ ನಡೆಯುವುದು. ಈ ಕುರಿತು ಎಚ್ಚರಿಕೆಯಿಂದ ಇರಬೇಕು ಎಂದು ಹೇಳಿದ್ದಾರೆ. ಪ್ರಪಂಚದಾದ್ಯಂತವು ಕೆಲವೊಮ್ಮೆ ಭೂಕಂಪ ಸಂಭವಿಸುವುದು ಎಂದಿದ್ದಾರೆ.
ವಿಶ್ವ ಯುದ್ಧ 3 ಈ ವರ್ಷದಿಂದ ಆರಂಭವಾಗುವುದು. 27 ವರ್ಷದ ನಂತರ ಕೊನೆಗೊಳ್ಳುವುದು
ನಾಸ್ಟ್ರಾಡಾಮಸ್ ಅವರ ಪ್ರಕಾರ ವಿಶ್ವ ಯುದ್ಧ 3 ಈ ವರ್ಷ ಆರಂಭವಾಗುವುದು. ಫ್ರಾನ್ಸ್‌ನಲ್ಲಿ ದೊಡ್ಡ ಯುದ್ಧವು ಪ್ರಾರಂಭವಾಗುವುದು. ಯುರೋಪ್‍ನಲ್ಲಿ ಕೆಲವು ದಾಳಿಗಳು ಪ್ರಾರಂಭವಾಗುವುದು. ಇದು ಎಲ್ಲರ ಮೇಲೆ ದೀರ್ಘವಾದ ಭಯವನ್ನು ಹುಟ್ಟಿಸುವುದು. ಅಂತಿಮವಾಗಿ ಶಾಂತಿ ಲಭಿಸುವುದು. ಅದನ್ನು ಕೆಲವರು ಅನುಭವಿಸುತ್ತಾರೆ. ಎರಡು ಮಹಾನ್ ವಿಶ್ವ ಶಕ್ತಿಯ ನಡುವೆ ಯುದ್ಧ ಪ್ರಾರಂಭವಾಗುತ್ತದೆ. ಆ ಯುದ್ಧವು 27 ವರ್ಷಗಳ ಕಾಲ ನಡೆಯುವುದು ಎಂದಿದ್ದಾರೆ.
ಪುಟಿನ್ ಚುನಾಯಿತರಾದಾಗ
ಈ ವರ್ಷದ ವಿಲಕ್ಷಣದ ವಿಚಾರದಲ್ಲಿ ಪುಟಿನ್ ಆಯ್ಕೆಯಾಗುವ ಸಾಧ್ಯತೆಗಳಿವೆ. ವಿರೋಧ ಪಕ್ಷದ ನಾಯಕಿಯಾಗಿರುವ ಅಲೆಕ್ಸಿ ಅವರನ್ನು ಅಧ್ಯಕ್ಷರ ಸ್ಥಾನಕ್ಕೆ ನಿಷೇಧಿಸಲಾಗುತ್ತದೆ. ಪುಟಿನ್ ಅವರ ಆಯ್ಕೆಯಿಂದ ರಷ್ಯಾದಲ್ಲಿ ಪ್ರಬಲ ರಾಜಕೀಯ ವ್ಯಕ್ತಿಯಾಗಿ 25 ವರ್ಷಗಳ ಕಾಲ ಆಡಳಿತ ನಡೆಸುವರು.
ಹೊಸ ಶಕ್ತಿಯ ಆವಿಷ್ಕಾರ
ಶಕ್ತಿಯ ಹೊಸ ಮೂಲಕ್ಕಾಗಿ ವಿಜ್ಞಾನಿಗಳು ಶುಕ್ರಗ್ರಹದ ಕಡೆಗೆ ಗಮನ ಹರಿಸುತ್ತಾರೆ. ಖಗೋಳದಲ್ಲಿ ಕೆಲವು ವಿಶೇಷ ಶಕ್ತಿಗಳನ್ನು ಪತ್ತೆ ಹಚ್ಚುವರು ಎಂದು ಊಹಿಸಿದ್ದಾರೆ.
ಶಕ್ತಿ ಶಾಲಿ ರಾಷ್ಟ್ರ ಚೀನಾ
ಬಾಬಾ ವಂಗ ಅವರ ಪ್ರಕಾರ 2018ರಲ್ಲಿ ಶಕ್ತಿಶಾಲಿ ರಾಷ್ಟ್ರವಾಗಿ ಚೀನಾ ಹೊರಹೊಮ್ಮಲಿದೆ. ಈ ವಿಚಾರ ಈಗಾಗಲೆ ಎಲ್ಲೆಡೆ ಅಂದರೆ ವಾಹಿನಿ ಹಾಗೂ ಇಂಟರ್‌ನೆಟ್ ಮೂಲಕ ಪ್ರಸಾರಗೊಂಡಿದೆ ಎಂದು ಹೇಳಲಾಗುತ್ತಿದೆ. ಈ ಭವಿಷ್ಯವಾಣಿಗಳು ನಿಜವಾಗುವುದೇ ಎನ್ನುವುದನ್ನು ಕಾದು ನೋಡಬೇಕಷ್ಟೆ.