ಉದುರಿದ ಕೂದಲಿನಿಂದ ಏನು ಮಾಡುತ್ತಾರೆ ಎನ್ನುವುದು ಗೊತ್ತಿದೆಯೇ?

Posted By: Divya pandit Pandit
Subscribe to Boldsky

ಸಾಮಾನ್ಯವಾಗಿ ಪ್ರತಿಯೊಬ್ಬ ಮಹಿಳೆಯು ಉದ್ದದ ಕೂದಲನ್ನು ಬಯಸುತ್ತಾರೆ. ಆದರೆ ನಿತ್ಯ ಉದುರುವ ಸಮಸ್ಯೆಯಿಂದ ಅನೇಕ ಕೂದಲನ್ನು ಕಳೆದುಕೊಳ್ಳುತ್ತಾರೆ. ಕೂದಲು ಉದುರುವಿಕೆಯಿಂದ ಬಹಳ ಚಿಂತೆಯನ್ನು ಸಹ ಮಾಡುತ್ತಾರೆ. ಕೂದಲು ಉದುರುವಿಕೆಯು ಅಪಸಾಮಾನ್ಯತೆಯಿಂದ ಅಥವಾ ಸಾಮಾನ್ಯ ಪ್ರತಿಕ್ರಿಯೆಯಿಂದ ಉಂಟಾಗಬಹುದು. ಆದರೆ ಉದುರಿದ ಕೂದಲನ್ನು ಕಸದ ಬುಟ್ಟಿಗೆ ಹಾಕುವುದು ಅಥವಾ ಮಾರಾಟ ಮಾಡುವುದು ಎಲ್ಲರಿಗೂ ತಿಳಿದ ವಿಚಾರ. ಇದರಿಂದ ಕೃತಕ ಕೂದಲಿನ ಟೊಪ್ಪಿಗಳನ್ನು ಮಾಡಬಹುದೇ ಹೊರತು ಇನ್ಯಾವುದೇ ಪ್ರಯೋಜನಕ್ಕೆ ಬಾರದು ಎನ್ನುವುದು ನಮ್ಮೆಲ್ಲರ ಭಾವನೆ.

ಉದುರಿದ ಕೂದಲಿನಿಂದ ಏನೆಲ್ಲಾ ಮಾಡಬಹುದು ಎನ್ನುವುದನ್ನು ಕೇಳಿದರೆ ನಿಮಗೆ ಆಶ್ಚರ್ಯ ಉಂಟಾಗಬಹುದು. ಏಕೆಂದರೆ ತ್ಯಾಜ್ಯ ಅಥವಾ ಕಸ ಎಂದು ಪರಿಗಣಿಸುವ ಉದುರಿದ ಕೂದಲಿನಿಂದ ಏನೆಲ್ಲಾ ವಸ್ತುಗಳನ್ನು ತಯಾರಿಸಬಹುದು? ಯಾವೆಲ್ಲಾ ಉಪಯೋಗಕ್ಕೆ ಬಳಸಬಹುದು ಎನ್ನುವುದನ್ನು ನೀವು ಅರಿತರೆ ಹೀಗೂ ಮಾಡುತ್ತಾರಾ? ಎನ್ನುವ ಪ್ರಶ್ನೆ ಖಂಡಿತವಾಗಿಯೂ ನಿಮ್ಮನ್ನು ಕಾಡದೆ ಬಿಡದು. ಹೌದು, ಬೇಡದ ಕೂದಲಿನಿಂದ ವಿವಿಧ ಪ್ರಯೋಜನಗಳಿಗೆ ಬಳಸಿ ಸೈ ಎನಿಸಿಕೊಂಡವರಿದ್ದಾರೆ. ಹಾಗಾದರೆ ಅವರು ಯಾರು? ಯಾವೆಲ್ಲಾ ವಸ್ತುಗಳನ್ನು ತಯಾರಿಸಿದ್ದರು? ಎನ್ನುವುದನ್ನು ತಿಳಿಯಲು ಮುಂದಿರುವ ವಿವರಣೆಯನ್ನು ಪರಿಶೀಲಿಸಿ.

ಹ್ಯೂಮನ್ ಹೇರ್ ಚೇರ್

ಹ್ಯೂಮನ್ ಹೇರ್ ಚೇರ್

ಲಂಡನ್ ಮೂಲದ ಮಾಜಿ ಕೇಶವಿನ್ಯಾಸಕಾರನಾದ ರೊನಾಲ್ಡ್ ಥಾಂಪ್ಸನ್ ಕೂದಲ ವಿನ್ಯಾಸದಲ್ಲಿ ಸಾಕಷ್ಟು ಪ್ರಸಿದ್ಧಿಯನ್ನು ಪಡೆದುಕೊಂಡಿದ್ದರು. ಇವರು ಉದುರಿದ ಕೂದಲನ್ನು ಬಳಸಿಕೊಂಡು "ಸ್ಟಿಲೆಟ್ಟೋ ಚೇರ್" ಎಂದು ಕೂದಲಿನ ವಿಶೇಷ ಕುರ್ಚಿಯನ್ನು ತಯಾರಿಸಿದ್ದಾರೆ. ಈ ಕುರ್ಚಿಯನ್ನು ತಯಾರಿಸಲು ಲಂಡನ್‍ಅಲ್ಲಿ ಇರುವ ಅನೇಕ ಸಲೋನ್ಸ್‍ಗಳಿಂದ ಕೂದಲನ್ನು ಸಂಗ್ರಹಿಸಿದ್ದರು ಎಂದು ಹೇಳಲಾಗುತ್ತದೆ.

Image Courtesy:

ಆಭರಣಗಳು

ಆಭರಣಗಳು

ವಿಕ್ಟೋರಿಯನ್ನರು ಸತ್ತವರ ಕುರಿತು ದುಃಖಿಸುವ ಪರಿಯೇ ಒಂದು ವಿಶೇಷವಾದದ್ದು. ಇವರು ರಾಣಿ ವಿಕ್ಟೋರಿಯಾ ನಿಧನವಾದಾಗ ರಾಜನ ಕೂದಲಿನಿಂದ ನೈಜ ಪದಕವನ್ನು ರಾಣಿಯ ಕೊರಳಿಗೆ ಹಾಕಿದ್ದರು ಎನ್ನಲಾಗುತ್ತದೆ.

Image Courtesy:

ಹೇರ್ ಸೋಯಾ ಸಾಸ್

ಹೇರ್ ಸೋಯಾ ಸಾಸ್

ವರದಿಗಾರರ ಪ್ರಕಾರ ಒಂದು ಚೀನಿ ಕಂಪನಿಯು ಸೋಯಾ ಸಾಸ್‍ಗೆ ಹೊಸ ಪದಾರ್ಥವಾಗಿ ಮಾನವನ ಕೂದಲನ್ನು ಬಳಸಿದ್ದರು ಎನ್ನಲಾಗುತ್ತದೆ. ಮಾನವನ ಕೂದಲು ಅಧಿಕ ಪ್ರಮಾಣದ ಪ್ರೋಟೀನ್‍ಗಳನ್ನು ಒಳಗೊಂಡಿದ್ದುದರಿಂದ ಸಾಸ್‍ಗೆ ಬಳಸಿದ್ದರು ಎನ್ನಲಾಗುತ್ತದೆ.

ರಸಗೊಬ್ಬರದ ರೂಪ

ರಸಗೊಬ್ಬರದ ರೂಪ

ಮಾನವನ ಕೂದಲನ್ನು ಬಳಸಿ ರಸಗೊಬ್ಬರವನ್ನು ತಯಾರಿಸಲಾಗಿದೆ. ಇದು ಕಳೆ ನಿರೋಧಕ ಶಕ್ತಿಯನ್ನು ಹೊಂದಿರುವುದರಿಂದ ಬೆಳೆಗಳಿಗೆ ಪೂರಕ ಶಕ್ತಿಯನ್ನು ಒದಗಿಸಿ, ಕಳೆಗಳಾಗದಂತೆ ತಡೆಗಟ್ಟುತ್ತವೆ. ಪ್ರಾಚೀನ ಕಾಲದ ಚೀನಿ ರೈತರು ತಮ್ಮ ಕೂದಲುಗಳನ್ನು ಬೆಳೆಗಳನ್ನು ಬೆಳೆಯಲು ಹಾಗೂ ಗೊಬ್ಬರದ ರೂಪದಲ್ಲಿ ಬಳಸುತ್ತಿದ್ದರು ಎನ್ನಲಾಗುವುದು.

Image Courtesy:

ಧೂಪದ್ರವ್ಯ

ಧೂಪದ್ರವ್ಯ

ಕೂದಲನ್ನು ಸುಟ್ಟರೆ ಕೆಟ್ಟ ಪರಿಮಳ ಬರುವುದು ಸಹಜ. ಆದರೆ ಬಾಬಸ್ ಮತ್ತು ಚೇತನ ವೈದ್ಯರು ಮಾನವನ ಕೂದಲನ್ನು ಸುಟ್ಟು ಧೂಪವನ್ನು ತಯಾರಿಸಿದ್ದಾರೆ. ಈ ಧೂಪದ ಭಯಾನಕ ವಾಸನೆಯಿಂದ ದುಷ್ಟ ಆತ್ಮಗಳನ್ನು ದೂರ ಗೊಳಿಸುವ ಪ್ರಯತ್ನಕ್ಕೆ ತಯಾರಿಸಿದ್ದರು ಎಂದು ಹೇಳಲಾಗುತ್ತದೆ.

ಉಡುಪು ತಯಾರಿಸಲು

ಉಡುಪು ತಯಾರಿಸಲು

ಉದುರಿದ ಕೇಶರಾಶಿಗಳಿಂದ ಒಳ ಉಡುಪು, ಟೋಪಿಗಳು, ಅಂಗಿಗಳು, ಬಿಕನಿ ತಯಾರಿಸಲು ಬಳಸುತ್ತಿದ್ದರು. ಸಾರಾ ಲೂಯಿಸ್ ಬ್ರಿಯಾನ್ ಹೆಸರಿನ ವಿನ್ಯಾಸಕರು ತಯಾರಿಸಿದ್ದರು. ಇದು ತುರಿಕೆಗಳ ನಿರೋಧಕವನ್ನು ಹೊಂದಿತ್ತು ಎನ್ನಲಾಗುತ್ತದೆ. ಇದನ್ನು ಆನ್‍ಲೈನ್ ಮಾರಾಟ ಮಾಡಲು ಪ್ರಯತ್ನಿಸಿದ್ದರು ಎನ್ನಲಾಗುತ್ತದೆ.

Image Courtesy:

ಪ್ರಾಣಿಗಳನ್ನು ದೂರ ಇಡುತ್ತವೆ

ಪ್ರಾಣಿಗಳನ್ನು ದೂರ ಇಡುತ್ತವೆ

ಮಾನವನ ಕೂದಲಿನಿಂದ ಅನೇಕ ಪ್ರಾಣಿಗಳು ದೂರ ಉಳಿಯುತ್ತವೆ. ನಿಮಗೆ ಇದು ನಿಜವೇ ಎಂದು ಪರೀಕ್ಷಿಸಬೇಕು ಎಂದುಕೊಂಡಿದ್ದರೆ, ಒಂದು ಚೀಲದಲ್ಲಿ ಉದುರಿದ ಕೂದಲನ್ನು ತುಂಬಿ, ಪ್ರಾಣಿಗಳು ಬರುವ ಸ್ಥಳಗಳಲ್ಲಿ ಇರಿಸಿ. ಅದರ ಸುತ್ತ ಯಾವ ಪ್ರಾಣಿಯು ಬರದು. ಜೊತೆಗೆ ಆ ಚೀಲದ ಬಳಿಯ ಆವರಣದಲ್ಲೆಲ್ಲೂ ಪ್ರಾಣಿಗಳು ಸುಳಿಯುವುದಿಲ್ಲ.

English summary

Weird Ways Human Hair Has Been Used

People tend to have a phobia when they see loose hair and to shock the world, there are those too who make a business using these loose hair and make products out of this hair! Surprised? Don't be! What we are about to tell you can make you go "Wow".Here, in this article, we are sharing the list of some of the most bizarre things that people have made using human hair! The list will surely shock some and may make a few feel disgusted as well! So, go ahead and check the list...