ವಾರದ ಭವಿಷ್ಯ : 4 ಮಾರ್ಚ್ 2018- 10 ಮಾರ್ಚ್ 2018

Posted By: Divya Panith
Subscribe to Boldsky

ನಮ್ಮ ಬದುಕಿಗೆ ಪ್ರತಿಯೊಂದು ಕ್ಷಣವೂ ಬಹಳ ಪ್ರಮುಖವಾದುದ್ದು. ಏಕೆಂದರೆ ಯಾವ ಘಳಿಗೆಯಲ್ಲಿ ಯಾರ ಭವಿಷ್ಯ ಹೇಗೆ ಬದಲಾವಣೆಯನ್ನು ಕಾಣುತ್ತದೆ ಎನ್ನುವುದನ್ನು ಹೇಳಲು ಸಾಧ್ಯವಿಲ್ಲ. ನಮ್ಮ ಕುಂಡಲಿಯಲ್ಲಿ ಗ್ರಹಗತಿಗಳ ಸಂಚಾರ ಹಾಗೂ ರಾಶಿ ಚಕ್ರಗಳ ಪ್ರಭಾವವು ಬಹಳ ಪ್ರಬಲವಾದ ಪರಿಣಾಮವನ್ನು ಬೀರುತ್ತವೆ. ತಿಂಗಳ ಆರಂಭವನ್ನು ಕಂಡ ನಾವು ಈಗಾಗಲೇ ಅನೇಕ ಬದಲಾವಣೆಯನ್ನು ಅನುಭವಿಸುತ್ತಿದ್ದೇವೆ.

ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಈ ತಿಂಗಳು ಗ್ರಹಗತಿಗಳ ಸಂಚಾರ ವಿವಿಧ ಬಗೆಯ ವ್ಯತ್ಯಾಸಗಳನ್ನು ತಂದೊಡ್ಡುತ್ತವೆ. ಅವುಗಳ ಅನ್ವಯದಡಿಯಲ್ಲಿ ಕೆಲವು ರಾಶಿ ಚಕ್ರದವರು ಉತ್ತಮ ಫಲಿತಾಂಶವನ್ನು, ಇನ್ನೂ ಕೆಲವು ರಾಶಿಚಕ್ರದವರು ಮಧ್ಯಮ ಫಲಿತಾಂಶವನ್ನು ಹಾಗೂ ಕೆಲವರು ದುಃಖಗಳನ್ನು ಅನುಭವಿಸುವ ಸಾಧ್ಯತೆಗಳಿವೆ. ಇದೇ ತಿಂಗಳ 4-10ನೇ ತಾರೀಖಿನ ಒಳಗೆ ಯಾವೆಲ್ಲಾ ಬದಲಾವಣೆ ಹಾಗೂ ಪ್ರಭಾವವನ್ನು ಅನುಭವಿಸಬೇಕಾಗುವುದು ಎನ್ನುವುದನ್ನು ತಿಳಿಯಲು ಮುಂದಿರುವ ವಿವರಣೆಯನ್ನು ಅರಿಯಿರಿ.

ಮೇಷ: ಮಾರ್ಚ್ 21- ಏಪ್ರಿಲ್19

ಮೇಷ: ಮಾರ್ಚ್ 21- ಏಪ್ರಿಲ್19

ಅದೃಷ್ಟ ದಿನಾಂಕ 8 ಮತ್ತು 9. ಅದೃಷ್ಟ ಬಣ್ಣ ಕೆಂಪು.

ಈ ವರ್ಷದ ಆರಂಭದಲ್ಲಿ ನಿಮಗೆ ವೃತ್ತಿಯ ವಿಚಾರವು ಕೇಂದ್ರೀಕೃತವಾಗಿರುವುದು. ಬುಧ ಮತ್ತು ಶುಕ್ರನು ನಿಮ್ಮ ಚಿಹ್ನೆಯಾಗಿ ಚಲಿಸುವರು. ಇದರ ಪರಿಣಾಮವಾಗಿ ನೀವು ನಿಮ್ಮ ವೈಯಕ್ತಿಕ ಬದುಕಲ್ಲಿ ಹಾಗೂ ವೃತ್ತಿ ಜೀವನದಲ್ಲಿ ಬಹಳಷ್ಟು ಭರವಸೆ ಹಾಗೂ ಹೊಂದಾಣಿಕೆಯನ್ನು ಮಾಡಿಕೊಳ್ಳಬೇಕಾಗುವುದು. ಅದು ನಿಮಗೆ ಇಷ್ಟದ ವಿಚಾರವೇ ಆಗಲಿದೆ. ನೀವು ಈ ಸಮಯದಲ್ಲಿ ಕೆಲವು ಅನಗತ್ಯ ಕೆಲಸ ಹಾಗೂ ಅನಗತ್ಯ ಸಂಬಂಧಗಳನ್ನು ಗುರುತಿಸಿ, ಅದರಿಂದ ಆಚೆ ಬರುವಿರಿ.

ವೃಷಭ: ಏಪ್ರಿಲ್20-ಮೇ 20

ವೃಷಭ: ಏಪ್ರಿಲ್20-ಮೇ 20

ಅದೃಷ್ಟ ದಿನಾಂಕ 10. ಅದೃಷ್ಟ ಬಣ್ಣ ಹಸಿರು.

ಬುಧ ಮತ್ತು ಶುಕ್ರನು ಮೇಷ ರಾಶಿಯ ಪ್ರವೇಶ ಪಡೆಯುವುದರಿಂದ ನಿಮ್ಮ 12ನೇ ಮನೆಯು ಸಕ್ರಿಯಗೊಳ್ಳುವುದು. ಇದರ ಪರಿಣಾಮವಾಗಿ ನೀವು ಆಧ್ಯಾತ್ಮಿಕ ಚಿಂತನೆಗಳ ಬಗ್ಗೆ ಹೆಚ್ಚು ಒಲವನ್ನು ತೋರುವಿರಿ. ಇದರಿಂದ ನಿಮ್ಮ ಮನೆಯ ಪರಿಸರವು ಹೆಚ್ಚು ಕ್ರಿಯಾತ್ಮಕವಾಗಿ ರಚಿಸುವುದು. ನೀವು ನಿಮ್ಮ ಉದ್ದೇಶ ಮತ್ತು ಭಾವನೆಗಳ ಕುರಿತು ಮುಕ್ತ ಮತ್ತು ಪ್ರಾಮಾಣಿಕವಾಗಿ ಇರಬೇಕಾದ ಸಮಯ. ಗುರುವು ಗುರುವು ನಿಮ್ಮ ಚಿಹ್ನೆಯನ್ನು ಹಿಮ್ಮೆಟ್ಟಿಸುತ್ತಿರುವುದರಿಂದ ನಿಮ್ಮ ಸಂಬಂಧವನ್ನು ಪುನರುಜ್ಜೀವನಗೊಳಿಸಬಹುದು. ಜೊತೆಗೆ ಪರಿಪೂರ್ಣವಾದ ಕೆಲವು ಅವಕಾಶಗಳು ಕೈಗೂಡಿ ಬರುವುದು.

ಮಿಥುನ: ಮೇ 21-ಜೂನ್20

ಮಿಥುನ: ಮೇ 21-ಜೂನ್20

ಅದೃಷ್ಟ ದಿನಾಂಕ 5. ಅದೃಷ್ಟ ಬಣ್ಣ ಹಳದಿ.

ಬುಧ ಮತ್ತು ಶುಕ್ರ ಮೇಷರಾಶಿಯನ್ನು ಪ್ರವೇಶಿಸುವುದರಿಂದ ಈ ರಾಶಿಚಕ್ರದವರ 11ನೇ ಮನೆಯು ಸಕ್ರಿಯಗೊಳ್ಳುತ್ತದೆ. ಇದರಿಂದ ನಿಮ್ಮ ಸ್ನೇಹ ಸಂಬಂಧವು ಬೆಳವಣಿಗೆ ಹೊಂದುವುದು. ಹಿಂದೆ ಇದ್ದ ಆತ್ಮೀಯತೆಯಂತೆ ನಿಮ್ಮ ಹಿಂದಿನ ಸ್ನೇಹಿತರೊಂದಿಗೆ ಹಠಾತ್ ಸ್ನೇಹ ಹಾಗೂ ಹೊಂದಾಣಿಕೆಯನ್ನು ನೀವು ತೋರಬಹುದು. ನಿಮ್ಮ ಆರನೇ ಮನೆಯಲ್ಲಿ ಗುರುವು ಪುನಃ ಕಾಣಿಸಿಕೊಳ್ಳುತ್ತಿರುವುದರಿಂದ ನಿಮ್ಮ ಆರೋಗ್ಯದಲ್ಲಿ ಸುಧಾರಣೆ ಉಂಟಾಗುವುದು. ಅಲ್ಲದೆ ಮಾನಸಿಕವಾಗಿಯೂ ಕ್ರಿಯಾತ್ಮಕವಾಗಿ ವರ್ತಿಸುವಿರಿ. ಭೌತಿಕವಾಗಿಯೂ ಪೂಜ್ಯತೆಗೆ ಒಳಗಾಗುವ ಸಾಧ್ಯತೆಗಳಿವೆ.

ಕರ್ಕ: ಜೂನ್21-ಜುಲೈ 22

ಕರ್ಕ: ಜೂನ್21-ಜುಲೈ 22

ಅದೃಷ್ಟ ದಿನಾಂಕ 6 ಮತ್ತು 7. ಅದೃಷ್ಟ ಬಣ್ಣ ಬಿಳಿ

ಬುಧ ಮತ್ತು ಶುಕ್ರ ಮೇಷ ರಾಶಿಯನ್ನು ಪ್ರವೇಶಿಸುವುದರಿಂದ ಈ ರಾಶಿಚಕ್ರದವರ 10ನೇ ಮನೆಯು ಸಕ್ರಿಯಗೊಳ್ಳುತ್ತದೆ. ಇದರ ಪರಿಣಾಮವಾಗಿ ಈ ರಾಶಿಯವರು ವೃತ್ತಿ ಜೀವನದಲ್ಲಿ ಗುರಿ ಸಾಧನೆ ಗೈಯುವರು. ಜೀವನದಲ್ಲಿ ಯಶಸ್ಸು ಮತ್ತು ಸಾರ್ವಜನಿಕ ಕ್ಷೇತ್ರದಲ್ಲಿ ಖ್ಯಾತಿ ಉಂಟಾಗುವುದು. ನಿಮ್ಮ ಕೆಲಸದ ಬಗ್ಗೆ ನಿಮಗೆ ಅಪಾರ ಪ್ರೀತಿ ಉಂಟಾಗುವುದು. ಕೆಲವು ಗಂಭೀರ ಬದ್ಧತೆಯ ಸಾಧ್ಯತೆಗಳಿವೆ. 5ನೇ ಮನೆಯಲ್ಲಿ ಗುರುವು ಪುನಃ ಕಾಣಿಸಿಕೊಳ್ಳುವಾಗ ವಸ್ತುಗಳು ದಿಕ್ಕನ್ನು ಬದಲಾಯಿಸಬಹುದು. ನೀವು ದೂರ ಓಡಿ ಹೋಗುವ ನಿರ್ಧಾರವನ್ನು ಸಹ ಕೈಗೊಳ್ಳುವ ಸಾಧ್ಯತೆಗಳಿವೆ.

ಸಿಂಹ: ಜುಲೈ23-ಆಗಸ್ಟ್23

ಸಿಂಹ: ಜುಲೈ23-ಆಗಸ್ಟ್23

ಅದೃಷ್ಟ ದಿನಾಂಕ 8 ಮತ್ತು 9. ಅದೃಷ್ಟ ಬಣ್ಣ ಹೊಂಬಣ್ಣ.

ಬುಧ ಮತ್ತು ಶುಕ್ರ ಮೇಷರಾಶಿಯನ್ನು ಪ್ರವೇಶಿಸುವುದರಿಂದ ಈ ರಾಶಿ ಚಕ್ರದವರ 9ನೇ ಮನೆಯು ಸಕ್ರಿಯಗೊಳ್ಳುತ್ತದೆ. ಇದರ ಪರಿಣಾಮವಾಗಿ ಈ ರಾಶಿಯವರು ಕಲಿಕೆಯ ವಿಚಾರದಲ್ಲಿ ಆಸಕ್ತಿಯನ್ನು ತೋರುವರು ಅಥವಾ ಸಕ್ರಿಯಗೊಳ್ಳುವರು. ಓದಿನ ಬಗ್ಗೆ ಹೆಚ್ಚಿನ ಕುತೂಹಲ ಕೆರಳುವುದು ಎನ್ನಲಾಗುತ್ತದೆ. 4ನೇ ಮನೆಯಲ್ಲಿ ಗುರುವು ಪುನಃ ಕಾಣಿಸಿಕೊಳ್ಳುವುದರಿಂದ ನೀವು ಕಲೆ, ಸಂಗೀತ, ಫ್ಯಾಷನ್, ಆಭರಣ ಸೇರಿದಂತೆ ಇನ್ನಿತರ ವಿಚಾರಗಳಲ್ಲಿ ಹೆಚ್ಚಿನ ಒಲವು ತೋರುವಿರಿ. ಮನೆಯ ಮಾರಾಟ ಮಾಡಲು ಅಥವಾ ಹೊಸ ಮನೆಯ ಖರೀದಿಗೆ ಇದು ಸಹಾಯ ಮಾಡುವುದು.

ಕನ್ಯಾ: ಆಗಸ್ಟ್ 24-ಸಪ್ಟೆಂಬರ್23

ಕನ್ಯಾ: ಆಗಸ್ಟ್ 24-ಸಪ್ಟೆಂಬರ್23

ಅದೃಷ್ಟ ದಿನಾಂಕ 10. ಅದೃಷ್ಟ ಬಣ್ಣ ಹಸಿರು ಮತ್ತು ಕಂದು ಬಣ್ಣ.

ಬುಧ ಮತ್ತು ಶುಕ್ರ ಮೇಷರಾಶಿಯನ್ನು ಪ್ರವೇಶಿಸುವುದರಿಂದ ಈ ರಾಶಿಚಕ್ರದವರ 8ನೇ ಮನೆಯು ಸಕ್ರಿಯಗೊಳ್ಳುತ್ತದೆ. ಈ ಪ್ರಕ್ರಿಯೆಯ ಪರಿಣಾಮವಾಗಿ ಇತರರೊಂದಿಗೆ ಅನ್ಯೋನ್ಯತೆ ಹೆಚ್ಚಾಗುವುದು. ಅನ್ಯೋನ್ಯತೆ ಎಂದರೆ ಕೇವಲ ಭೌತಿಕತೆಯನ್ನು ಪಡೆದುಕೊಳ್ಳುವುದರ ಅರ್ಥವಲ್ಲ. ಇದು ವ್ಯಕ್ತಿಕ ಸ್ಥಳ ಅಥವಾ ವಸ್ತುಗಳ ಹಂಚಿಕೆಯಲ್ಲಿ ಇರಬಹುದು. ನಿಮ್ಮ 3ನೇ ಮನೆಯಲ್ಲಿ ಗುರುವು ಬರುವುದರಿಂದ ಸಂಬಂಧಗಳಲ್ಲಿ ಅಥವಾ ಕೆಲಸದ ವಿಚಾರದಲ್ಲಿ ವಿಶೇಷವಾದ ಆಶ್ಚರ್ಯವನ್ನು ಅನುಭವಿಸಬೇಕಾಗುವುದು.

ತುಲಾ: ಸೆಪ್ಟೆಂಬರ್24- ಅಕ್ಟೋಬರ್23

ತುಲಾ: ಸೆಪ್ಟೆಂಬರ್24- ಅಕ್ಟೋಬರ್23

ಅದೃಷ್ಟ ದಿನಾಂಕ 5 ಮತ್ತು 5. ಅದೃಷ್ಟ ಬಣ್ಣ ಗುಲಾಬಿ.

ಬುಧ ಮತ್ತು ಶುಕ್ರ ಮೇಷರಾಶಿಯನ್ನು ಪ್ರವೇಶಿಸುವುದರಿಂದ ಈ ರಾಶಿಚಕ್ರದವರ 7ನೇ ಮನೆಯು ಸಕ್ರಿಯಗೊಳ್ಳುತ್ತದೆ. ಈ ಪ್ರಕ್ರಿಯೆಯ ಪರಿಣಾಮವಾಗಿ ನೀವು ವಿವಾಹ ವಿಚಾರದಲ್ಲಿ ಬದ್ಧರಾಗಬಹುದು. 7ನೇ ಮನೆಯು ವಿವಾಹದ ಮನೆಯಾಗಿರುವುದರಿಂದ ನಿಮ್ಮ ಬದ್ಧತೆಗಳು ಅಥವಾ ಅಗತ್ಯತೆ ತೀವ್ರವಾಗುವುದು. ಅಲ್ಲದೆ ಈ ವಿಚಾರವಾಗಿ ಆಳವಾದ ನಿರ್ಣಯ ಹೊಂದುವಿರಿ. ನಿಮ್ಮ 2ನೇ ಮನೆಯಲ್ಲಿ ಗುರುವು ಬರುವುದರಿಂದ ಹೂಡಿಕೆಗಳಿಗೆ ಸಂಬಂಧಿಸಿದಂತೆ ಕೆಲವು ಮಹತ್ವ ಪೂರ್ಣ ನಿರ್ಣಯವನ್ನು ಕೈಗೊಳ್ಳುವಿರಿ.

ವೃಶ್ಚಿಕ: ಅಕ್ಟೋಬರ್24-ನವೆಂಬರ್22

ವೃಶ್ಚಿಕ: ಅಕ್ಟೋಬರ್24-ನವೆಂಬರ್22

ಅದೃಷ್ಟ ದಿನಾಂಕ 6 ಮತ್ತು 7. ಅದೃಷ್ಟ ಬಣ್ಣ ಕಪ್ಪು.

ಬುಧ ಮತ್ತು ಶುಕ್ರ ಮೇಷರಾಶಿಯನ್ನು ಪ್ರವೇಶಿಸುವುದರಿಂದ ಈ ರಾಶಿಚಕ್ರದವರ 6ನೇ ಮನೆಯು ಸಕ್ರಿಯಗೊಳ್ಳುತ್ತದೆ. ಇದು ಆರೋಗ್ಯದ ಮನೆಯನ್ನು ಸೂಚಿಸುತ್ತದೆ. ನಿಮಗೆ ಬೇಕಾದ ರೀತಿಯಲ್ಲಿಯೇ ನಿಮ್ಮ ದೈಹಿಕ ಆರೋಗ್ಯವು ಸುಧಾರಣೆಯನ್ನು ಕಾಣುವುದು. ಆರೋಗ್ಯ ಮತ್ತು ಸ್ವಯಂ ಸಂಬಂಧದಲ್ಲಿ ಸುಧಾರಣೆಯನ್ನು ಕಾಣುವರು. ನಿಮ್ಮ 1ನೇ ಮನೆಯಲ್ಲಿ ಗುರುವು ಬರುವುದರಿಂದ ಸ್ವಯಂ ಸುಧಾರಣೆ ಎನ್ನುವುದು ವಾರಾಂತ್ಯದಲ್ಲಿ ನಿಮ್ಮ ಆಧ್ಯತೆಯಂತೆ ನೆರವೇರುವುದು.

ಧನು: ನವೆಂಬರ್ 23- ಡಿಸೆಂಬರ್ 22

ಧನು: ನವೆಂಬರ್ 23- ಡಿಸೆಂಬರ್ 22

ಅದೃಷ್ಟ ದಿನಾಂಕ 8 ಮತ್ತು 9. ಅದೃಷ್ಟ ಬಣ್ಣ ನೇರಳೆ ಬಣ್ಣ.

ಬುಧ ಮತ್ತು ಶುಕ್ರ ಮೇಷ ರಾಶಿಯನ್ನು ಪ್ರವೇಶಿಸುವುದರಿಂದ ಈ ರಾಶಿಚಕ್ರದವರ 5ನೇ ಮನೆಯು ಸಕ್ರಿಯಗೊಳ್ಳುತ್ತದೆ. ಇದು ಸ್ವಯಂ ಅಭಿವ್ಯಕ್ತಿಯ ಮನೆ ಎನ್ನಲಾಗುವುದು. ಈ ವಾರದಲ್ಲಿ ನಿಮ್ಮ ಸ್ವಯಂ ಆಸೆಗಳನ್ನು ನೆರವೇರಿಸಿಕೊಳ್ಳಬಹುದು. ನಿಮಗೆ ಪುಸ್ತಕ ಬರೆಯುವ ಆಸೆ ಇದ್ದರೆ ಅಥವಾ ಆಲೋಚನೆಗಳನ್ನು ವ್ಯಕ್ತಪಡಿಸುವ ಹಂಬಲವಿದ್ದರೆ ವಾರಾಂತ್ಯದಲ್ಲಿ ನೆರವೇರಿಸಿಕೊಳ್ಳಬಹುದು. ನಿಮ್ಮ 12ನೇ ಮನೆಯಲ್ಲಿ ಗುರುವು ಬರುವುದರಿಂದ ನೀವು ನಿಮ್ಮ ಹಳೆಯ ಸಂಬಂಧದದಲ್ಲಿ ಉಂಟಾದ ವೈಮನಸ್ಸು ಶಮನಗೊಳ್ಳುವುದು. ಜೊತೆಗೆ ಹೊಸ ರೀತಿಯಲ್ಲಿ ಪುನಃ ಪ್ರಾರಂಭವಾಗುವುದು.

ಮಕರ: ಡಿಸೆಂಬರ್23-ಜನವರಿ20

ಮಕರ: ಡಿಸೆಂಬರ್23-ಜನವರಿ20

ಅದೃಷ್ಟ ದಿನಾಂಕ 8 ಮತ್ತು 9. ಅದೃಷ್ಟ ಬಣ್ಣ ನೇರಳೆ ಬಣ್ಣ.

ಬುಧ ಮತ್ತು ಶುಕ್ರ ಮೇಷ ರಾಶಿಯನ್ನು ಪ್ರವೇಶಿಸುವುದರಿಂದ ಈ ರಾಶಿಚಕ್ರದವರ 4ನೇ ಮನೆಯು ಸಕ್ರಿಯಗೊಳ್ಳುತ್ತದೆ. ಇದು ಕುಟುಂಬದ ಮನೆ ಎನ್ನಬಹುದು. ನಿಮ್ಮ ಕುಟುಂಬದ ಬಗ್ಗೆ ಹೆಚ್ಚು ಗಮನ ನೀಡುವಂತೆ ಮಾಡುವುದು. ಪೋಷಕರಿಗೆ ಹಾಗೂ ಸಂಗಾತಿಗೆ ಬೇಕಾದ ರೀತಿಯಲ್ಲಿ ನಿಮ್ಮ ವರ್ತನೆಯನ್ನು ತೋರುವಿರಿ. ಜೊತೆಗೆ ಉತ್ತಮ ಸಹಕಾರ ಮತ್ತು ಕೆಲಸವನ್ನು ನಿರ್ವಹಿಸುವಿರಿ. 11ನೇ ಮನೆಯಲ್ಲಿ ಗುರುವು ಪುನಃ ಪ್ರವೇಶಿಸುವುದರಿಂದ, ನಿಮಗೆ ಇದೊಂದು ಪ್ರತಿಬಿಂಬದ ಸಮಯ ಎನ್ನಬಹುದು. ಕೆಲವರು ವ್ಯಾಪಾರ ವಹಿವಾಟುಗಳಲ್ಲಿ ಒಪ್ಪಂದ ಮಾಡಿಕೊಳ್ಳುವ ಸಾಧ್ಯತೆಗಳಿವೆ.

ಕುಂಭ: ಜನವರಿ21-ಫೆಬ್ರುವರಿ 18

ಕುಂಭ: ಜನವರಿ21-ಫೆಬ್ರುವರಿ 18

ಅದೃಷ್ಟ ದಿನಾಂಕ 7 ಮತ್ತು 8. ಅದೃಷ್ಟ ಬಣ್ಣ ನೀಲಿ.

ಬುಧ ಮತ್ತು ಶುಕ್ರ ಮೇಷ ರಾಶಿಯನ್ನು ಪ್ರವೇಶಿಸುವುದರಿಂದ ಈ ರಾಶಿಚಕ್ರದವರ 3ನೇ ಮನೆಯು ಸಕ್ರಿಯಗೊಳ್ಳುತ್ತದೆ. ಇದನ್ನು ಒಡಹುಟ್ಟಿದವರ ಮನೆ ಎಂದು ಗುರುತಿಸಲಾಗುವುದು. ಈ ಪ್ರಕ್ರಿಯೆಯ ಅನುಗುಣವಾಗಿ ನೀವು ನಿಮ್ಮ ಕುಟುಂಬ, ಸ್ನೇಹಿತರು ಹಾಗೂ ಒಡಹುಟ್ಟಿದವರೊಂದಿಗೆ ಹೆಚ್ಚಿನ ಸಮಯವನ್ನು ಕಳೆಯುವ ಸಾಧ್ಯತೆಗಳಿವೆ. ಅಲ್ಲದೆ ಅದಕ್ಕಾಗಿ ನಿಮ್ಮಲ್ಲಿ ವಿಶೇಷವಾದ ಹೊಸ ಶಕ್ತಿಯು ಕಾಣಿಸಿಕೊಳ್ಳುವುದು. ನಿಮ್ಮ 10ನೇ ಮನೆಯಲ್ಲಿ ಗುರುವು ಪುನಃ ಕಾಣಿಸಿಕೊಳ್ಳುವುದರಿಂದ ನೀವು ಸಾರ್ವಜನಿಕವಾಗಿ ಖ್ಯಾತಿ ಪಡೆಯುವ ಸಾಧ್ಯತೆಗಳಿವೆ.

ಮೀನ: ಫೆಬ್ರುವರಿ 19- ಮಾರ್ಚ್20

ಮೀನ: ಫೆಬ್ರುವರಿ 19- ಮಾರ್ಚ್20

ಅದೃಷ್ಟ ದಿನಾಂಕ 6 ಮತ್ತು 7. ಅದೃಷ್ಟ ತಿಳಿ ಹಸಿರು.

ಬುಧ ಮತ್ತು ಶುಕ್ರ ಮೇಷ ರಾಶಿಯನ್ನು ಪ್ರವೇಶಿಸುವುದರಿಂದ ಈ ರಾಶಿಚಕ್ರದವರ 2ನೇ ಮನೆಯು ಸಕ್ರಿಯಗೊಳ್ಳುತ್ತದೆ. ಇದನ್ನು ಹಣ, ವಾಡಿಕೆ ಮತ್ತು ಪರಿಸರದ ಮನೆ ಎಂದು ಗುರುತಿಸಲಾಗುತ್ತದೆ. ಹಣದ ವಿಚಾರದಲ್ಲಿ ವಿಷಯದಲ್ಲಿ ಸಕ್ರಿಯವಾಗುವ ಸಾಧ್ಯತೆಗಳಿವೆ. ಹೊಸ ಹೂಡಿಕೆಯನ್ನು ಮಾಡುವ ಸಾಧ್ಯತೆಗಳಿವೆ. ಈ ವಿಚಾರದಲ್ಲಿ ನೀವು ಅತ್ಯಂತ ಬುದ್ಧಿವಂತಿಕೆಯಿಂದ ನಿರ್ಧಾರವನ್ನು ಕೈಗೊಳ್ಳಬೇಕಾಗುವುದು. ನಿಮ್ಮ 9ನೇ ಮನೆಯಲ್ಲಿ ಗುರುವು ಪುನಃ ಕಾಣಿಸಿಕೊಳ್ಳುವುದರಿಂದ ನೀವು ಓದಿನ ಕಡೆ ಹೆಚ್ಚಿನ ಗಮನ ಹರಿಸಬಹುದು. ಅದಕ್ಕಾಗಿ ಹೊಸ ಹೊಸ ಪುಸ್ತಕಗಳನ್ನು ಖರೀದಿಸಲು ಬಯಸುವಿರಿ.

English summary

Weekly Predictions For Each Zodiac Sign: 4-10th March, 2018

With just two weeks away from us entering the Aries season, there are many changes that each zodiac sign is going through currently! This week, i.e., March 4-10th, 2018, is said to be important for many zodiac signs, as most of them could face a lot of changes. It's totally normal to feel more sensitive and in tune with the problems of the past in this week. So, go ahead and find out on what the week has in store for you!
Story first published: Tuesday, March 6, 2018, 7:00 [IST]