ಮುಂಬರಲಿರುವ ದಿನಗಳಲ್ಲಿ ಈ ಮೂರು ರಾಶಿಯವರಿಗೆ ಕಷ್ಟದ ಮೇಲೆ ಕಷ್ಟ ಬರಬಹುದು!

Posted By: Deepu
Subscribe to Boldsky

ಎಲ್ಲರ ಜೀವನದಲ್ಲೂ ಹಲವು ತಿರುವುಗಳು, ಏರುಪೇರುಗಳು ಬರುತ್ತಾ ಹೋಗುತ್ತವೆ, ಕೆಲವೊಂದಿಷ್ಟು ದುಃಖ, ಒಂದಿಷ್ಟು ಸಂತೋಷ, ಸಂಬಂಧಗಳಲ್ಲಿ ಬದಲಾವಣೆ, ಉದ್ಯೋಗದಲ್ಲಿ ಲಾಭ ನಷ್ಟ ಹೀಗೆ ಪ್ರತಿಯೊಂದು ಅನುಭವವು ವಿಶೇಷವಾಗಿರುತ್ತದೆ. ಕೆಲವೊಂದು ಅನುಭವಗಳ ಪ್ರಮಾಣ ಹೆಚ್ಚಾಗಿರಬಹುದು. ಕೆಲವೊಂದು ಕಡಿಮೆ ಪ್ರಮಾಣದಲ್ಲಿ ಅನುಭಕ್ಕೆ ಬರಬಹುದು. ಆದರೆ ಅವೆಲ್ಲವೂ ಬದುಕಿನ ಅರ್ಥವನ್ನು ತಿಳಿಸಿಕೊಟ್ಟಿರುತ್ತವೆ. ಅವುಗಳ ಆಧಾರದ ಮೇಲೆಯೇ ಯಾವುದು ಸರಿ? ಯಾವುದು ತಪ್ಪು? ಎನ್ನುವ ಪಾಠವನ್ನು ಕಲಿತಿರುತ್ತೇವೆ. ಇದೆಲ್ಲಾವು ಕೆಲವೊಮ್ಮೆ ಗ್ರಹಗತಿಗಳ ಬದಲಾವಣೆಯಿಂದ ಆಗುತ್ತದೆ.

ಅಂತೆಯೇ ಇನ್ನು ಗ್ರಹಗತಿಗಳ ಸಂಚಾರ ಕೆಲವು ರಾಶಿಯವರಿಗೆ ಉತ್ತಮ ಫಲವನ್ನು ನೀಡಿದರೆ ಕೆಲವು ರಾಶಿಯವರಿಗೆ ಕೆಟ್ಟ ಪರಿಣಾಮ ಅಥವಾ ಮಧ್ಯಮ ಲಾಭವನ್ನು ತಂದುಕೊಡುತ್ತದೆ. ಹಾಗಾಗಿ ಗ್ರಹಗತಿಗಳ ಸಂಚಾರಕ್ಕೆ ಅನುಗುಣವಾಗಿ ನಾವು ಸಹ ಸೂಕ್ತ ರೀತಿಯಲ್ಲಿ ಪರಿಹಾರೋಪಾಯ ಅಥವಾ ಎಚ್ಚರಿಕೆಯಲ್ಲಿ ಇರಬೇಕಾಗುವುದು. ಈಗಾಗಲೇ ಹೊಸ ವರ್ಷ ಪ್ರಾರಂಭವಾಗಿ ಕೆಲವು ಒಂದುವರೆ ತಿಂಗಳುಗಳೇ ಕಳೆದಿದ್ದೇವೆ. ಕೆಲವರು ಉತ್ತಮ ಫಲವನ್ನು ಪಡೆದಿರಬಹುದು. ಕೆಲವರು ಯಾವುದೇ ಬದಲಾವಣೆಯನ್ನು ಕಾಣದಿರಬಹುದು. ಇನ್ನೂ ಕೆಲವರಿಗೆ ಅದೇ ಕಷ್ಟ ನೋವುಗಳು ಮುಂದುವರಿದಿರಬಹುದು. 

ಕೆಲವು ರಾಶಿ ಚಕ್ರದವರು ಅಷ್ಟಾಗಿ ಶುಭ ಫಲವನ್ನು ಅನುಭವಿಸುವುದಿಲ್ಲ. ಅವರಿಗೆ ಕೆಲವು ನೋವುಗಳು, ವಿಫಲತೆ, ಬೇಸರ ಹಾಗೂ ನಷ್ಟಗಳು ಹೆಚ್ಚು ಸಮಸ್ಯೆಯಾಗಿ ಕಾಡುವುದು ಎಂದು ಹೇಳಲಾಗುತ್ತದೆ. ಹಾಗಾದರೆ ಆ ರಾಶಿಗಳು ಯಾವವು? ಆ ರಾಶಿಯವರು ನೀವಾ? ಎನ್ನುವ ಅನೇಕ ಪ್ರಶ್ನೆಗಳಿಗೆ ಉತ್ತರ ಹುಡುಕುವ ಕಾತುರದಲ್ಲಿದ್ದರೆ ಈ ಮುಂದಿರುವ ಸೂಕ್ತ ವಿವರಣೆಯನ್ನು ಪರಿಶೀಲಿಸಿ...  

ಮಿಥುನ

ಮಿಥುನ

ಶನಿಗ್ರಹವು ಮಕರ ರಾಶಿಗೆ ಸ್ಥಳಾಂತರಿಸುವ ಕಾರಣದಿಂದ ಈ ವರ್ಷವು ನಿಮಗೆ ಕಠಿಣವಾದ ವರ್ಷ ಆಗುವುದು. ನಿಮ್ಮ ಎಂಟನೇ ಮನೆಯ ಹಣ, ಸಾವು, ಸಾಲಗಳು ಮತ್ತು ಅನ್ಯೋನ್ಯತೆಗೆ ಸಂಬಂಧಿಸಿದಂತೆ ನೋವು ಅಥವಾ ಬೇಸರವನ್ನು ಅನುಭವಿಸಬೇಕಾಗುವುದು. ಜನರಿಂದ ಹೇಗೆ ದೂರವಾಗುತ್ತೀರಿ ಅಥವಾ ಮಂದಿಯೊಂದಿಗೆ ಹೇಗೆ ಬೆರೆಯಬೇಕು ಎನ್ನುವುದರ ಬಗ್ಗೆ ನೀವೇ ತಿಳಿದುಕೊಳ್ಳುವಿರಿ. ಎಂಟನೆಯ ಮನೆ ವಿಷಯಗಳು ವಿನೋದವನ್ನು ನೀಡುವುದಿಲ್ಲ. ಬದಲಿಗೆ ಆಳವಾದ ಭೀತಿ ಮತ್ತು ನೋವನ್ನು ನೀಡುತ್ತದೆ.

ಆರೋಗ್ಯದಲ್ಲೂ ಏರುಪೇರಾಗುವ ಸಾಧ್ಯತೆ ಇದೆ...

ಆರೋಗ್ಯದಲ್ಲೂ ಏರುಪೇರಾಗುವ ಸಾಧ್ಯತೆ ಇದೆ...

ಈ ರಾಶಿಯವರಿಗೆ ವಾಸನೆ, ಶ್ವಾಸಕೋಶ ಮತ್ತು ಉಸಿರಾಟಕ್ಕೆ ಸಂಬಂಧಿಸಿದ ಸಮಸ್ಯೆಗಳು ಪ್ರಭಲವಾಗಿ ಕಾಡುತ್ತವೆ. ಸಾಮಾನ್ಯವಾಗಿ ಶೀತಗಳು, ಜ್ವಾಲೆ, ಕೆಮ್ಮುಗಳಂತಹ ಸಮಸ್ಯೆಗಳು ಇವರನ್ನು ಆಗಾಗ ಕಾಡುತ್ತದೆ.ಈ ರಾಶಿಯಲ್ಲಿ ಪ್ರಾಬಲ್ಯ ಹೊಂದಿರುವ ಗ್ರಹವೆಂದರೆ ಬುಧ. ಬುಧನನ್ನು ಆಳುವ ದೇವರೆಂದರೆ 'ಶ್ರೀಮನ್ನಾರಾಯಣ' ಆದ್ದರಿಂದ ಮಿಥುನ ರಾಶಿಯವರು ಸ್ವಾಮಿ ಶ್ರೀಮನ್ನಾರಾಯಣನನ್ನು ಪೂಜಿಸುವ ಮೂಲಕ ಜೀವನದಲ್ಲಿ ಬಹಳಷ್ಟನ್ನು ಪಡೆಯಬಹುದು.

ಪ್ರೀತಿಯಲ್ಲೂ ಮೊಸವಾಗಲಿದೆ

ಪ್ರೀತಿಯಲ್ಲೂ ಮೊಸವಾಗಲಿದೆ

ಅಷ್ಟೇ ಅಲ್ಲದೆ, ಇವರಿಗೆ ಪ್ರೀತಿಯಲ್ಲೂ ಮೋಸವಾಗಲಿದೆ... 2017ರ ಅಂತ್ಯದಲ್ಲಿ ಶನಿಯು ಮಕರ ರಾಶಿಗೆ ಪ್ರವೇಶ ಪಡೆದಿದೆ. ಮುಂದಿನ ಎರಡೂವರೆ ವರ್ಷಗಳ ಕಾಲವೂ ಇದು ಹಾಗೆಯೇ ಮುಂದುವರಿಯಲಿದೆ. ಈ ಪರಿಣಾಮದಿಂದ ವ್ಯಕ್ತಿಯ ಪ್ರೀತಿ ಹಾಗೂ ಸಂಬಂಧಗಳ ಮೇಲೆ ಹೆಚ್ಚಿನ ಪ್ರಭಾವ ಉಂಟಾಗುವುದು. ಈ ಬದಲಾವಣೆಯಿಂದ ವ್ಯಕ್ತಿಯ ಪ್ರೀತಿಯ ಜೀವನದಲ್ಲಿ ಗೊಂದಲಗಳು ಹಾಗೂ ಭಿನ್ನಾಭಿಪ್ರಾಯಗಳು ಹೆಚ್ಚುವುದು. ವ್ಯಕ್ತಿ ಯಾವ ಬಗೆಯ ಹವ್ಯಾಸಗಳನ್ನು ಮುಂದುವರಿಸುತ್ತಾನೆ ಹಾಗೂ ಆತ ಈ ಮೊದಲು ಯಾವ ಬಗೆಯ ಜೀವನ ಕ್ರಮವನ್ನು ಎದುರಿಸುತ್ತಾ ಬಂದಿದ್ದಾನೆ ಎನ್ನುವುದು ಸಹ ಬಹುಮುಖ್ಯವಾದ ಪಾತ್ರವನ್ನು ವಹಿಸುತ್ತದೆ.

ಕರ್ಕ

ಕರ್ಕ

ಶನಿಯು ಈ ವರ್ಷ ನಿಮ್ಮ 7ನೇ ಮನೆಯಲ್ಲಿ ಸಂಚರಿಸುತ್ತಾನೆ. ಈ ಪರಿಣಾಮದಿಂದ ನೀವು ಎಷ್ಟು ಬದ್ಧತೆಯನ್ನು ಪಡೆದುಕೊಳ್ಳುವಿರಿ ಎನ್ನುವ ಪರೀಕ್ಷೆಗೆ ಒಳಗಾಗುತ್ತೀರಿ. ನಿಮ್ಮ ಸ್ವಂತ ಯೋಗಕ್ಷೇಮಕ್ಕೆ ಇತರರ ಮೇಲೆ ಅವಲಂಭಿತರಾಗುವ ಸಾಧ್ಯತೆಗಳಿವೆ. ಆದಷ್ಟು ನಿಮ್ಮ ವಿವೇಕಯುತವಾದ ವರ್ತನೆಯನ್ನು ತೋರುವುದು ಸೂಕ್ತ. ಕೆಲವು ಕೆಟ್ಟ ಆಲೋಚನೆಗಳು ನಿಮ್ಮ ದಾರಿಯನ್ನು ತಪ್ಪಿಸಬಹುದು. ಅದರ ಬಗ್ಗೆ ನೀವು ಸೂಕ್ತರೀತಿಯಲ್ಲಿ ತಿಳಿದುಕೊಳ್ಳಬೇಕು. ಬೇರೆಯವರು ಎಷ್ಟೇ ನೋವಿನಲ್ಲಿದ್ದರೂ ನೀವು ಎಲ್ಲರೂ ಒಮ್ಮೆ ನೋವಿನ ಭಾವನೆಗೆ ಒಳಗಾಗುತ್ತಾರೆ ಎನ್ನುವ ಭಾವನೆಯನ್ನು ತಳೆದಿರುತ್ತೀರಿ. ಬೇರೆಯವರು ಹೇಗಿದ್ದಾರೆ ಎನ್ನುವುದರ ಬಗ್ಗೆ ನೀವು ಚಿಂತಿಸದಿರಿ. ನಿಮ್ಮಿಂದ ಬೇರೆಯವರಿಗೆ ಎಷ್ಟು ಸಗಹಾಯವಾಗುವುದು? ನಿಮ್ಮ ಸ್ಥಿತಿಯೇನು? ನಿಮ್ಮ ಪರಿಸ್ಥಿತಿಗೆ ನೀವು ಹೇಗಿರಬೇಕು ಎನ್ನುವುದನ್ನು ಮೊದಲು ಅರಿತಿರಬೇಕು. ನೀವು ನಿಮ್ಮನ್ನು ಪ್ರೀತಿಸುವುದು ಹಾಗೂ ಇತರರೊಂದಿಗೆ ಬೆರೆಯುವ ಗುಣವನ್ನು ಕಲಿಯಬೇಕಿದೆ. ಆಗಲೇ ನಿಮ್ಮ ದುಃಖ ಸ್ವಲ್ಪ ಹಗುರವಾಗಲು ಸಾಧ್ಯ.

ಧನು

ಧನು

ಈ ರಾಶಿಯವರು ಸಾಮಾನ್ಯವಾಗಿ ಅದೃಷ್ಟವನ್ನು ಹೊಂದಿರುತ್ತಾರೆ. ಇವರು ಗುರುವಿನ ಆಳ್ವಿಕೆಯಲ್ಲಿರುವುದರಿಂದ ಉತ್ತಮ ಫಲಗಳನ್ನು ಅನುಭವಿಸುತ್ತೀರಿ. ಈ ವರ್ಷ ಶನಿಯು ಮಕರ ರಾಶಿಯಲ್ಲಿ ಸಂಚಾರ ಬೆಳೆಸಿರುವುದರಿಂದ ನಿಮ್ಮ ಮೇಲೆ ಕೆಲವು ಕಷ್ಟದ ಪರಿಣಾಮ ಬೀರುವ ಸಾಧ್ಯತೆಗಳಿವೆ. ನೀವು ಇತರರನ್ನು ದ್ವೇಷಿಸುವ ಗೋಜಿಗೆ ಹೋಗುವಂತಹ ಪರಿಸ್ಥಿತಿ ಎದುರಾಗಬಹುದು. ಆದರೆ ಅದನ್ನು ತಡೆದು ಹೇಗೆ ನಿಭಾಯಿಸಬೇಕು ಎನ್ನುವುದನ್ನು ತಿಳಿಯಬೇಕು.

ಧನು

ಧನು

ನೀವು ಸಂಪಾದಿಸಿದ ಹಣವನ್ನು ಹೇಗೆ ಕಾಪಾಡಿಕೊಳ್ಳಬೇಕು? ಹೇಗೆ ವ್ಯಯಿಸಬೇಕು ಎನ್ನುವುದರ ಮೇಲೆ ನಿಮ್ಮ ಹಿಡಿತ ಇರಬೇಕಾಗುವುದು. ಇಲ್ಲವಾದರೆ ಪರಿಸ್ಥಿತಿ ಚಿಂತನೆಗೆ ಒಳಗಾಗಿಸುತ್ತದೆ. ಈ ವರ್ಷ ನಿಮಗೆ ಗೆಲವು ನಿಧಾನಗತಿಯಲ್ಲಿ ದೊರೆಯುವುದು. ಹಾಗಾಗಿ ಆದಷ್ಟು ತಾಳ್ಮೆ ಮತ್ತು ಎಚ್ಚರಿಕೆಯಿಂದ ವ್ಯವಹರಿಸಬೇಕು. 2018ರಲ್ಲಿ ಬರುವ ಸಮಸ್ಯೆಗಳನ್ನು ನಿಭಾಯಿಸುವುದರ ಮೂಲಕ ನಿಮ್ಮ ಜೀವನದಲ್ಲಿ ಯಾವುದು ಮುಖ್ಯ ಎನ್ನುವುದನ್ನು ನೀವು ಅರಿತುಕೊಳ್ಳುವಿರಿ.

ಆರೋಗ್ಯದಲ್ಲೂ ಏರುಪೇರಾಗುವುದು!

ಆರೋಗ್ಯದಲ್ಲೂ ಏರುಪೇರಾಗುವುದು!

ಈ ರಾಶಿಯವರಿಗೆ ದೃಷ್ಟಿ, ತೊಡೆ, ಸೊಂಟ ಮತ್ತು ಯಕೃತ್ತಿನ ಸಮಸ್ಯೆಗಳು ಹೆಚ್ಚು ಕಾಡುವುದು. ದುರ್ಬಲ ದೃಷ್ಟಿ ದೋಷ, ತೂಕದ ಸಮಸ್ಯೆ ಮತ್ತು ಯಕೃತ್ತಿನ ಸಮಸ್ಯೆಗಳಿಂದ ಬಳಲುತ್ತಾರೆ. ಈ ರಾಶಿಯಲ್ಲಿ ಗುರು ಪ್ರಾಬಲ್ಯ ಹೊಂದಿರುತ್ತಾನೆ. ಗುರುಗ್ರಹದ ಅಧಿಪತಿ ಎಂದರೆ "ಶ್ರೀ ದಕ್ಷಿಣಾಮೂರ್ತಿ" ದಕ್ಷಿಣಾಮೂರ್ತಿಯೂ ಶಿವನ ಅವತಾರಗಳಲ್ಲೊಂದಾಗಿದ್ದು ಈತನು ಬುದ್ಧಿಮತ್ತೆ ಮತ್ತು ಜ್ಞಾನದ ಆಗರವಾಗಿದ್ದಾನೆ. ಆದ್ದರಿಂದ ಧನುರಾಶಿಯವರು ದಕ್ಷಿಣಾಮೂರ್ತಿಯನ್ನು ಆರಾಧಿಸುವ ಮೂಲಕ ಅಪಾರ ಜ್ಞಾನ ಮತ್ತು ತಿಳಿವಳಿಕೆ ಪಡೆದು ಜೀವನದಲ್ಲಿ ಬಹಳಷ್ಟನ್ನು ಸಾಧಿಸಬಹುದು.

English summary

Upcoming days will be the worst for three Zodiac Signs...

Well, 2018 has already gotten off to a really raucous start, with bomb threats getting fired off by both the president and the National Weather Service. It certainly already has the feeling of 2017-plus, doesn't it? It might not be a new year for Trump, but it's a new year for us. Unless of course, you're one of the following three zodiac signs. 2018 will be a tough year for three zodiac signs in particular, but that actually isn't a bad thing because inastrology, a challenging year brings you a lot of payoff in the same ways that your life does.