ರಾಶಿ ಚಕ್ರದ ಅನುಸಾರ, ಯಾವ್ಯಾವ ರಾಶಿಯವರ ಗುಣ ನಡತೆ ಹೇಗಿರುತ್ತದೆ ನೋಡಿ

Posted By: Deepu
Subscribe to Boldsky

ಮನುಷ್ಯನ ಭಾವನೆಯು ಬಹಳ ವಿಭಿನ್ನವಾಗಿರುತ್ತದೆ. ಒಬ್ಬರಿಗಿಂತ ಒಬ್ಬರ ಭಾವನೆ ಹಾಗೂ ಸ್ವಭಾವಗಳು ಭಿನ್ನತೆಯನ್ನು ಪಡೆದುಕೊಂಡಿರುತ್ತದೆ. ಒಂದೇ ಕುಟುಂಬದಲ್ಲಿ ಹುಟ್ಟಿ ಬೆಳೆದಿದ್ದರೂ ಸಹ ವ್ಯಕ್ತಿಯಿಂದ ವ್ಯಕ್ತಿಗೆ ಭಾವನೆಗಳು, ಆಸೆ, ಅಭಿರುಚಿ, ನಡತೆ ಹಾಗೂ ಶೈಲಿ ಎಲ್ಲವೂ ವ್ಯತ್ಯಾಸದಿಂದ ಕೂಡಿರುತ್ತದೆ. ಇದಕ್ಕೆ ಪ್ರಮುಖ ಕಾರಣ ಅವರು ಜನಿಸಿದ ರಾಶಿ ಚಕ್ರಗಳು ಎನ್ನುತ್ತದೆ ಜ್ಯೋತಿಷ್ಯ ಶಾಸ್ತ್ರ. ರಾಶಿ ಚಕ್ರದ ಅಭಿರುಚಿಯ ಆಧಾರದ ಮೇಲೆಯೇ ವ್ಯಕ್ತಿಯ ಸ್ವಭಾವವನ್ನು ಗುರುತಿಸಬಹುದು.

ಇತರರೊಂದಿಗೆ ಬೆರೆಯಲು ಭಾವನೆಗಳು ಅತ್ಯಂತ ಪ್ರಮುಖವಾದ ಪಾತ್ರವನ್ನು ವಹಿಸುತ್ತದೆ. ಒಬ್ಬ ವ್ಯಕ್ತಿಯ ಗುಣವು ನಮಗೆ ಇಷ್ಟವಾಗುತ್ತದೆ ಎಂದಾಗ ಮಾತ್ರ ನಾವು ಇತರೊಂದಿಗೆ ಸುಲಭವಾಗಿ ಬೆರೆಯಲು ಹಾಗೂ ಉತ್ತಮ ಸಂಬಂಧ ಹೊಂದಲು ಅನುಕೂಲವಾಗುವುದು. ನಿಮಗೆ ನಿಮ್ಮ ಹಾಗೂ ನಿಮ್ಮವರ ಸ್ವಭಾವ ಹಾಗೂ ಗುಣಗಳ ಬಗ್ಗೆ ತಿಳಿದುಕೊಳ್ಳಬೇಕು ಎನಿಸಿದ್ದರೆ ಬೋಲ್ಡ್ ಸ್ಕೈ ಈ ಮುಂದೆ ನೀಡಿರುವ ವಿಶೇಷವಾದ ವಿವರಣೆಯನ್ನು ಅರಿಯಿರಿ. 

ಮೇಷ (Mar 29 - Apr 19)

ಮೇಷ (Mar 29 - Apr 19)

ಇವರು ಜೀವನದಲ್ಲಿ ಸಾಕಷ್ಟು ಧೈರ್ಯವನ್ನು ಹೊಂದಿರುವ ವ್ಯಕ್ತಿಗಳಾಗಿರುತ್ತಾರೆ. ಇವರು ಯಾವುದೇ ಕಾರಣಕ್ಕೂ ತಮ್ಮ ಭಾವನೆಗಳನ್ನು ಮರೆಮಾಚುವುದಿಲ್ಲ. ಹಾಗೆಯೇ ತಾವು ದುರ್ಬಲ ವ್ಯಕ್ತಿತ್ವದವರು ಅಥವಾ ಸ್ವಭಾವದವರು ಎಂದು ತೋರಿಸಿಕೊಳ್ಳಲು ಇಷ್ಟ ಪಡುವುದಿಲ್ಲ. ಇವರ ದುಃಖವು ಹತಾಶೆ ಮತ್ತು ಕೋಪದ ರೂಪದಲ್ಲಿ ವ್ಯಕ್ತವಾಗುತ್ತದೆ.

ವೃಷಭ: 21 ಏಪ್ರಿಲ್ -21 ಮೇ

ವೃಷಭ: 21 ಏಪ್ರಿಲ್ -21 ಮೇ

ಇವರು ತಮ್ಮ ಗುಣವನ್ನು ಅಥವಾ ಭಾವನೆಯನ್ನು ಸುಲಭವಾಗಿ ಮರೆಮಾಡುತ್ತಾರೆ. ಇವರು ತಮ್ಮ ಭಾವನೆಗೆ ವಿರುದ್ಧವಾಗಿ ವರ್ತಿಸುವುದು ಮತ್ತು ಭಾವನೆಯೊಂದಿಗೆ ವ್ಯವಹರಿಸುವುದನ್ನು ದ್ವೇಷಿಸುತ್ತಾರೆ. ಇವರು ತಮಗೆ ಎಷ್ಟೇ ಕಷ್ಟವಾದರೂ ಇತರರಿಂದ ಸಹಾಯವನ್ನು ಅಂಗಲಾಚುವುದಿಲ್ಲ.

ಮಿಥುನ: ಮೇ 21 ಜೂನ್ 20

ಮಿಥುನ: ಮೇ 21 ಜೂನ್ 20

ಇವರು ಸಾಮಾಜಿಕವಾಗಿ ಎಲ್ಲರೊಂದಿಗೂ ಮುಕ್ತವಾಗಿ ಬೆರೆಯುತ್ತಾರೆ. ತಮ್ಮ ಭಾವನೆಗಳನ್ನು ಹಿಡಿದಿಡುವ ಪ್ರಯತ್ನವನ್ನು ಮಾಡುವುದಿಲ್ಲ. ತಮ್ಮ ಭಾವನೆಯನ್ನು ಸುಲಭವಾಗಿ ತಮ್ಮ ಪ್ರೀತಿಪಾತ್ರರಿಗೆ ಅರ್ಥವಾಗುವಂತೆ ಮಾಡುತ್ತಾರೆ. ಇವರು ಬಯಸಿದಾಗ ವ್ಯಕ್ತಿಗಳು ಸಹಾಯ ಮಾಡದೆ ಇರುವಾಗ ಖಿನ್ನತೆಗೆ ಒಳಗಾಗುವ ಸಾಧ್ಯತೆಗಳೂ ಇರುತ್ತವೆ.

ಕರ್ಕ: ಜೂನ್ 21-ಜುಲೈ 22

ಕರ್ಕ: ಜೂನ್ 21-ಜುಲೈ 22

ಇವರು ಸ್ವಲ್ಪ ಜಟಿಲ ಸ್ವಭಾವದವರು ಎನ್ನಬಹುದು. ಇವರಿಗೆ ತಮ್ಮ ಭಾವನೆಯೊಂದಿಗೆ ಹೇಗೆ ವ್ಯವಹರಿಸಬೇಕು ಎನ್ನುವುದು ತಿಳಿಯುವುದಿಲ್ಲ. ಯಾವ ಸಂದರ್ಭದಲ್ಲಿ ಹೇಗೆ ಮಾತನಾಡಬೇಕು ಎನ್ನುವುದು ತಿಳಿಯದೆ ಗೊಂದಲಕ್ಕೆ ಒಳಗಾಗುತ್ತಾರೆ.

ಸಿಂಹ: ಜುಲೈ 23-ಆಗಸ್ಟ್ 23

ಸಿಂಹ: ಜುಲೈ 23-ಆಗಸ್ಟ್ 23

ಇವರು ಭಾವೋದ್ರಿಕ್ತ ಜನರು ಎನ್ನಬಹುದು. ತಮ್ಮ ಹೃದಯವನ್ನು ಇತರರಿಗೆ ಸುಲಭವಾಗಿ ನೀಡಬಲ್ಲರು. ಯಾವುದೇ ಭಗೆಯ ಭಾವನೆಯನ್ನು ಹತೋಟಿಯಲ್ಲಿ ಇಟ್ಟುಕೊಳ್ಳುವುದಿಲ್ಲ. ಜನರು ಹೇಗೆ ಅರ್ಥ ಮಾಡಿಕೊಳ್ಳುತ್ತಾರೆ ಎನ್ನುವುದರ ಬಗ್ಗೆ ಹೆಚ್ಚು ತಲೆಕೆಡಿಸಿಕೊಳ್ಳುವುದಿಲ್ಲ.

ಕನ್ಯಾ: ಆಗಸ್ಟ್ 24-ಸೆಪ್ಟಂಬರ್ 23

ಕನ್ಯಾ: ಆಗಸ್ಟ್ 24-ಸೆಪ್ಟಂಬರ್ 23

ಇವರು ತಮ್ಮ ಭಾವನೆಯನ್ನು ಒಂದು ಪ್ರಾಯೋಗಿಕ ವಿಧಾನದಲ್ಲಿ ತೋರುತ್ತಾರೆ. ಇವರು ತಮ್ಮ ಅಸಮಧಾನಗಳನ್ನು ಅಷ್ಟು ಸುಲಭವಾಗಿ ಇತರರೊಂದಿಗೆ ತೋರಿಸಿಕೊಳ್ಳುವುದಿಲ್ಲ. ತೀವ್ರವಾದ ಭಾವನೆಗಳನ್ನು ಸಹ ಇವರು ದ್ವೇಷಿಸುತ್ತಾರೆ.

ತುಲಾ: ಸೆಪ್ಟಂಬರ್ 24-ಅಕ್ಟೋಬರ್ 23

ತುಲಾ: ಸೆಪ್ಟಂಬರ್ 24-ಅಕ್ಟೋಬರ್ 23

ಇವರು ಸದಾ ಸಮತೋಲವನ್ನು ಕಾಯ್ದುಕೊಳ್ಳುತ್ತಾರೆ. ತಮ್ಮ ಭಾವನೆಯನ್ನು ಮರೆಮಾಚುವರು. ಪ್ರೀತಿ ಪಾತ್ರರ ಅಭಿಪ್ರಾಯವನ್ನು ಕೇಂದ್ರೀಕರಿಸಲು ಗಮನ ನೀಡುತ್ತಾರೆ. ಅಲ್ಲದೆ ಕೆಲವು ಕಗ್ಗಂಟಾದ ವಿಚಾರಗಳನ್ನು ತಪ್ಪಿಸಲು ಪ್ರಯತ್ನ ಮಾಡುತ್ತಾರೆ. ಇವರು ತಮ್ಮ ಕೆಲವು ಕೆಟ್ಟ ವಿಚಾರಗಳನ್ನು ಮರೆಮಾಚುತ್ತಾರೆ. ಕೆಲವೊಮ್ಮೆ ಇತರರಿಗೂ ತೊಂದರೆ ಉಯಂಟಾಗುವ ಸಾಧ್ಯತೆಗಳಿರುತ್ತವೆ.

ವೃಶ್ಚಿಕ: 24 ಅಕ್ಟೋಬರ್ -22 ನವೆಂಬರ್

ವೃಶ್ಚಿಕ: 24 ಅಕ್ಟೋಬರ್ -22 ನವೆಂಬರ್

ಇವರು ಕೆಲವು ಭಾವನೆಯಲ್ಲಿ ತೇಲಾಡಲು ಪ್ರಸಿದ್ಧರಾಗಿದ್ದಾರೆ. ಇವರಿಗೆ ತಮ್ಮ ಭಾವನೆಯನ್ನು ಹೇಗೆ ವ್ಯಕ್ತ ಪಡಿಸಬೇಕು? ಹೇಗೆ ನಿಯಂತ್ರಿಸಬೇಕು ಎನ್ನುವುದು ತಿಳಿದಿಲ್ಲ. ಹಾಗಾಗಿ ಕೆಲವೊಮ್ಮೆ ಇವರು ಗೊಂದಲಗಳಿಗೆ ಒಳಗಾಗುವ ಸಾಧ್ಯತೆಗಳಿವೆ. ಇವರು ಪ್ರತಿಕಾರದ ವ್ಯಕ್ತಿಗಳಾಗಿರುವುದರಿಂದ ಇವರನ್ನು ಪ್ರೇರೇಪಿಸುವ ಅಗತ್ಯ ಇರುವುದಿಲ್ಲ.

ಧನು: 23 ನವೆಂಬರ್ -22 ಡಿಸೆಂಬರ್

ಧನು: 23 ನವೆಂಬರ್ -22 ಡಿಸೆಂಬರ್

ಈ ವ್ಯಕ್ತಿಗಳು ಭಾವೋದ್ರಿಕ್ತರಾಗುತ್ತಾರೆ. ಇತರರ ಮುಂದೆ ತಮ್ಮ ಭಾವನೆಯನ್ನು ವ್ಯಕ್ತಪಡಿಸಲು ಕಷ್ಟವಾಗುವುದು. ಇವರ ಬಹುತೇಕ ಭಾವನೆಗಳು ದುಃಖ, ತೀಕ್ಷಣತೆ ಹಾಗೂ ಖಿನ್ನತೆಯಿಂದಲೂ ಕೂಡಿರುವ ಸಾಧ್ಯತೆಗಳಿರುತ್ತವೆ.

ಮಕರ: ಡಿಸೆಂಬರ್ 23-ಜನವರಿ 20

ಮಕರ: ಡಿಸೆಂಬರ್ 23-ಜನವರಿ 20

ಇವರು ಸಾಮಾನ್ಯವಾಗಿ ಎಲ್ಲಾ ವಿಚಾರಗಳ ಕುರಿತು ವಿಷ್ಲೇಶಣೆ ಹಾಗೂ ಪ್ರಾಯೋಗಿಕ ವ್ಯಕ್ತಿತ್ವ ಹೊಂದಿದವರಾಗಿರುತ್ತಾರೆ. ಭಾವನೆಗಳನ್ನು ನಿಯಂತ್ರಿಸುವಲ್ಲಿಯೂ ಸಹ ಸಮರ್ಥರಾಗಿರುತ್ತಾರೆ. ಇವರ ಸುತ್ತಲಿನವರನ್ನು ಇವರು ಗೊಂದಲಕ್ಕೀಡು ಮಾಡಬಹುದು. ಹಾಗಾಗಿ ಆದಷ್ಟು ಜಾಗರೂಕರಾಗಿರಬೇಕು.

ಕುಂಭ: ಜನವರಿ 20-ಫೆಬ್ರವರಿ 18

ಕುಂಭ: ಜನವರಿ 20-ಫೆಬ್ರವರಿ 18

ಇವರು ಅತ್ಯಂತ ಆಳವಾದ ಭಾವನೆಯನ್ನು ಹೊಂದಿರುತ್ತಾರೆ. ಇವರಿಗೆ ಇವರ ಭಾವನೆಯನ್ನು ಹೇಗೆ ವ್ಯಕ್ತಪಡಿಸಬೇಕು ಎನ್ನುವುದು ತಿಳಿದಿಲ್ಲ. ಇವರು ಎಲ್ಲರಿಂದಲೂ ಗಮನ ಸೆಳೆಯಲು ಪ್ರಯತ್ನಿಸುತ್ತಾರೆ. ಆದರೆ ಅದು ಅನೇಕ ಸಂದರ್ಭದಲ್ಲಿ ವಿಫಲವಾಗುತ್ತದೆ.

ಮೀನ: 20 ಫೆಬ್ರವರಿ -20 ಮಾರ್ಚ್

ಮೀನ: 20 ಫೆಬ್ರವರಿ -20 ಮಾರ್ಚ್

ಇವರು ಕನಸಲ್ಲಿಯೇ ಮುಳುಗಿ ಹೋಗುವ ವ್ಯಕ್ತಿಗಳು ಎನ್ನಬಹುದು. ಭಾವನೆಗಳಿಗೆ ಅನುಸಾರವಾಗಿ ತಮ್ಮನ್ನು ತಾವು ತೊಡಗಿಸಿಕೊಳ್ಳುತ್ತಾರೆ. ಇವರು ಅತ್ಯಂತ ಸೂಕ್ಷ್ಮ ಮನಃಸ್ಥಿತಿಯನ್ನು ಹೊಂದುವುದರಿಂದ ಖಿನ್ನತೆ, ದುಃಖ, ಆತಂಕ ಮತ್ತು ಹತಾಶೆಗೆ ಒಳಗಾಗುತ್ತಾರೆ.

English summary

understanding-the-emotions-of-each-zodiac-sign

Can you imagine that the way you react in certain situations can be based on the fact that your zodiac sign had a major role to play in this? Well, according to astrology, there are certain ways in which each individual reacts to different emotions based on the zodiac sign. From being cranky for no reason to having sudden mood swings, everything on how we react to particular situations can be related to our zodiac signs.
Story first published: Monday, February 19, 2018, 23:30 [IST]