2018 ರಾಶಿ ಭವಿಷ್ಯ: ಈ ಮೂರು ರಾಶಿ ಚಕ್ರದವರು ಈ ವರ್ಷ ಹೆಚ್ಚು ಮಿಂಚಲಿದ್ದಾರೆ!

By Deepu
Subscribe to Boldsky

ಗ್ರಹಗತಿಗಳ ಸಂಚಾರ ಹಾಗೂ ಅದರ ಫಲಗಳ ಆಧಾರದ ಮೇಲೆ ಭವಿಷ್ಯದ ಅದೃಷ್ಟವನ್ನು ನಿರ್ಧರಿಸಲಾಗುತ್ತದೆ. 2018ರಲ್ಲಿ ರಾಶಿಚಕ್ರಕ್ಕೆ ಅನುಗುಣವಾಗಿ ಗ್ರಹಗಳು ತಮ್ಮ ಮನೆಯನ್ನು ಬದಲಾಯಿಸುತ್ತಾ ಸಾಗುತ್ತವೆ. ಇವು ಮನೆಯನ್ನು ಬದಲಿಸುವಾಗ ಕೆಲವು ಪರಿಣಾಮ ಹಾಗೂ ಒಳಿತನ್ನು ತಂದುಕೊಡುತ್ತವೆ. ಅವುಗಳ ಫಲವನ್ನು ವ್ಯಕ್ತಿ ಅನುಭವಿಸುತ್ತಾನೆ ಎಂದು ಜ್ಯೋತಿಷ್ಯ ಶಾಸ್ತ್ರ ಹೇಳುತ್ತದೆ. ಅನುಭವಕ್ಕೆ ಬರುವ ಫಲಗಳು ನಮಗೆ ಹೆಚ್ಚು ಅದೃಷ್ಟ ಹಾಗೂ ಸಂತೋಷವನ್ನು ತಂದುಕೊಟ್ಟರೆ ಅದೊಂದು ಉತ್ತಮ ಬದಲಾವಣೆ ಎಂದು ಪರಿಗಣಿಸುವುದು ಸಹಜ.

ಈ ಬಾರಿ ಅಂದರೆ 2018ರಲ್ಲಿ ಗ್ರಹಗಳು ಸಂಚರಿಸುವ ಪರಿಯಿಂದ ಅನೇಕ ಉತ್ತಮ ಫಲಗಳು ಪ್ರತಿಯೊಂದು ರಾಶಿಯವರಿಗೂ ಲಭಿಸುತ್ತದೆ ಎನ್ನಲಾಗುತ್ತಿದೆ. ಅದರಲ್ಲೂ ಕೆಲವು ಸೀಮಿತ ರಾಶಿಚಕ್ರದವರು ಅತಿಹೆಚ್ಚು ಅನುಭವವನ್ನು ಹಾಗೂ ಅದೃಷ್ಟವನ್ನು ಪಡೆದುಕೊಳ್ಳುವ ಸಾಧ್ಯತೆ ಹೆಚ್ಚೆಂದು ಹೇಳಲಾಗುತ್ತಿದೆ. ಹಾಗಾದರೆ ಆ ರಾಶಿ ಚಕ್ರಗಳು ಯಾವವು? ಅವು ಯಾವೆಲ್ಲಾ ಬಗೆಯ ವಿಭಿನ್ನ ಅದೃಷ್ಟವನ್ನು ಪಡೆದುಕೊಳ್ಳುವರು. ಅದು ಬೇರೆ ರಾಶಿಚಕ್ರದವರಿಗಿಂತ ಹೇಗೆ ವಿಶೇಷತೆಯನ್ನು ಪಡೆದುಕೊಂಡಿದೆ ಎನ್ನುವುದನ್ನು ತಿಳಿದುಕೊಳ್ಳುವ ಕುತೂಹಲವಿದ್ದರೆ ಮುಂದೆ ಓದಿ... 

ಮೇಷ

ಮೇಷ

ಈ ವರ್ಷವನ್ನು ಮೇಷ ರಾಶಿಯವರಿಗೆ ಸಂಪೂರ್ಣವಾಗಿ ಮಾರ್ಪಾಡು ತರುವಂತಹ ವರ್ಷ ಎಂದು ಹೇಳಲಾಗುತ್ತದೆ. ಅನೇಕ ಸ್ಪರ್ಧಾತ್ಮಕ ವಿಚಾರವನ್ನು ನೀವು ಎದುರಿಸುವಿರಿ. ಅದರಲ್ಲಿ ಅದ್ಭುತ ಗೆಲವುವನ್ನು ಪಡೆದುಕೊಳ್ಳುವುದರ ಮೂಲಕ ಜನಪ್ರಿಯತೆಯನ್ನು ಗಳಿಸುವಿರಿ. ನಿಮ್ಮ ಅಧಿಕ ಪರಿಶ್ರಮ ಇಲ್ಲದೆಯೇ ಉತ್ತಮ ಫಲಿತಾಂಶ ಹಾಗೂ ಶ್ರೇಯಸ್ಸನ್ನು ಪಡೆದುಕೊಳ್ಳುವಿರಿ ಎಂದು ಹೇಳಲಾಗುತ್ತದೆ.ನಿಮ್ಮ ರಾಶಿಗೆ ಅನುಗುಣವಾಗಿ ಹೇಳುವುದಾದರೆ ಗುರುವು ವೃಶ್ಚಿಕ ರಾಶಿಯಿಂದ ಚಲಿಸುತ್ತಾನೆ. ಹಾಗಾಗಿ ನಿಮ್ಮ ಭವಿಷ್ಯದಲ್ಲಿ ಮಹತ್ತರ ಬದಲಾವಣೆಯನ್ನು ನೀವು ನಿರೀಕ್ಷಿಸಬಹುದಾಗಿದೆ. ಕೆಲವು ನಿಮ್ಮ ನಿರೀಕ್ಷಿತ ಗುರಿಯನ್ನು ಸಾಧಿಸಲು ಈ ವರ್ಷ ಅನುಕೂಲವನ್ನು ಸೃಷ್ಟಿಸಿಕೊಡುವುದು. ಜೊತೆಗೆ ಅದರ ಉತ್ತಮ ಫಲಿತಾಂಶವನ್ನು ಶೀಘ್ರದಲ್ಲಿಯೇ ಪಡೆದುಕೊಳ್ಳುವಿರಿ. ಈ ಹಿಂದೆ ನೀವು ಪಟ್ಟ ಶ್ರಮಗಳು ಹಾಗೂ ಪೂರ್ವ ತಯಾರಿಯು ಈಗ ಸದುಪಯೋಗಕ್ಕೆ ಬರಲಿದೆ.

ಮೇಷ

ಮೇಷ

ಇನ್ನು ನಕಾರಾತ್ಮಕ ವಿಚಾರದಿಂದ ಹೊರಬರಲು ಈ ವರ್ಷ ನಿಮಗೆ ಅನುಕೂಲಕರವಾಗಿದೆ. 2018 ನಿಮಗೆ ಸಂತೋಷದ ಕೀಲಿಯನ್ನು ಕಾಣಿಸಿಕೊಡುತ್ತದೆ. ಹಾಗಂತ ಒಂದೇ ರಾತ್ರಿಯಲ್ಲಿ ನೀವು ಅದೃಷ್ಟವನ್ನು ಬದಲಿಸಲು ಸಾಧ್ಯವಿಲ್ಲ. ನಿಧಾನವಾಗಿ ಪಡೆದುಕೊಳ್ಳುವಿರಿ. ಬಹುತೇಕವಾಗಿ ಹೆಚ್ಚು ಅದೃಷ್ಟವನ್ನು ಪಡೆದುಕೊಳ್ಳಲಿರು ಈ ವರ್ಷ ನೀವು ಜೀವನದ ನಿಯಂತ್ರಣದ ಬಗ್ಗೆ ಅರಿಯುವಿರಿ. ಇನ್ನು ಸೋಮವಾರ, ಶುಕ್ರವಾರ ಮತ್ತು ಶನಿವಾರ ಈ ರಾಶಿಚಕ್ರಕ್ಕೆ ಅದೃಷ್ಟದ ದಿನಗಳು. ಈ ದಿನಗಳಲ್ಲಿ ಹೂಡಿಕೆ ಮಾಡುವ ದೃಷ್ಟಿಯಿಂದ ಉತ್ತಮವೆಂದು ಪರಿಗಣಿಸಲಾಗುತ್ತದೆ. ಮೇಷ ರಾಶಿಯವರು ಸದಾ ಗೆಲುವನ್ನು ಸಾಧಿಸುವ ಹವಣಿಕೆಯಲ್ಲಿರುತ್ತಾರೆ. ಇವರು ತಮ್ಮ ಮೊದಲನೇ ಸ್ಥಾನವನ್ನು ಬಿಟ್ಟು ಎರಡನೇ ಸ್ಥಾನದಲ್ಲಿ ನಿಲ್ಲಲು ಬಯಸುವುದಿಲ್ಲ. ಇವರು ಸದಾ ಸ್ಪರ್ಧಾತ್ಮಕ ಮನೋಭಾವದಲ್ಲಿಯೇ ಇರುತ್ತಾರೆ ಎನ್ನಬಹುದು. ಇವರು ಹೊಸ ವರುಷದಲ್ಲಿ ಅಂದರೆ 2018ರಲ್ಲಿ ಆರೋಗ್ಯಕರ ಪೈಪೋಟಿ ನಡೆಸಬೇಕಾಗಿದೆ. ಅದಕ್ಕಾಗಿ ಈಗಿನಿಂದಲೇ ಸೂಕ್ತ ರೀತಿಯ ತಯಾರಿ ಮಾಡಿಕೊಳ್ಳಬೇಕು.

ತುಲಾ

ತುಲಾ

ಈ ವರ್ಷ ಇವರು ಅನಿರೀಕ್ಷಿತ ಸಂಬಂಧಗಳಿಂದ ಸಿಹಿ ಭರವಸೆಗಳನ್ನು ಅನುಭವಿಸುವಿರಿ. ಮಕ್ಕಳಿಲ್ಲದವರಿಗೆ ಮಕ್ಕಳ ಭಾಗ್ಯವನ್ನು ಪಡೆದುಕೊಳ್ಳುವ ಸಾಧ್ಯತೆಗಳಿವೆ. ಕೆಲವು ಗ್ರಹಗಳ ಸಕಾರಾತ್ಮಕ ಬದಲಾವಣೆಯಿಂದ ಲೈಂಗಿಕ ಜೀವನ ಹಾಗೂ ಸಂಬಂಧಗಳಲ್ಲಿ ಉತ್ತಮ ಬೆಳವಣಿಗೆಯನ್ನು ಕಾಣುವಿರಿ. ಅಲ್ಲದೆ ನೀವು ಬಯಸಿದ ವ್ಯಕ್ತಿಗಳೊಂದಿಗೆ ವಿವಾಹ ಆಗುವ ಸಾಧ್ಯತೆಗಳಿವೆ. ಸಂಬಂಧದಲ್ಲಿ ದೃಢತೆಯನ್ನು ಪಡೆದುಕೊಳ್ಳಲು ಗ್ರಹಗತಿಗಳು ಉತ್ತಮ ಪರಿಸರವನ್ನೇ ಸೃಷ್ಟಿಸಿಕೊಡುವುದು. ಈ ವರ್ಷ ಹೆಚ್ಚಿನ ಕೆಲಸ ಕಾರ್ಯಗಳು ನಿಮ್ಮ ಬಯಕೆ ಹಾಗೂ ಇಷ್ಟದಂತೆಯೇ ಆಗುವುದು. ಆರೋಗ್ಯದಲ್ಲಿ ಉತ್ತಮ ಸುಧಾರಣೆಯನ್ನು ಕಾಣುವಿರಿ. ಆರ್ಥಿಕವಾಗಿ ಲಾಭವು ಉಂಟಾಗುವುದು. ನಿಮ್ಮ ವೈಯಕ್ತಿಕ ಜೀವನದಲ್ಲಿ ಆರೋಗ್ಯ ಕರ ಸಂಬಂಧದ ಗಡಿಯನ್ನು ಸೃಷ್ಟಿಸಿಕೊಳ್ಳುವಿರಿ. ಇದರಿಂದ ಇತರರು ಆಕರ್ಷಿತರಾಗುವ ಸಾಧ್ಯತೆಗಳೂ ಇವೆ.

ತುಲಾ

ತುಲಾ

ಈ ರಾಶಿಚಕ್ರದವರು ಅತ್ಯಂತ ಅದೃಷ್ಟ ಹೊಂದಿದ ವ್ಯಕ್ತಿಗಳ ಸಾಲಲ್ಲಿ ಎರಡನೆ ಸ್ಥಾನ ಪಡೆದುಕೊಳ್ಳುತ್ತಾರೆ ಎನ್ನಬಹುದು. ಈ ಹಿಂದಿನ ವರ್ಷದಲ್ಲಿ ಅಂದರೆ 2017ರಲ್ಲಿ ಅಷ್ಟಾಗಿ ಅದೃಷ್ಟವನ್ನು ಹೊಂದಿರಲಿಲ್ಲ ಎಂತಲೇ ಹೇಳಬಹುದು. ಆದರೆ 2018 ನಿಮಗೆ ಅತ್ಯಂತ ಅದೃಷ್ಟಕರವಾದ ವರ್ಷವಾಗಲಿದೆ. ವರ್ಷ ಪೂರ್ತಿ ಸಂತೋಷ ಕರವಾದ ಜೀವನವನ್ನು ಅನುಭವಿಸಲಿದ್ದೀರಿ. ನಿಮ್ಮ ನಿಷ್ಠಾವಂತ ವರ್ತನೆ ನಿಮಗೆ ಪೂರಕವಾದ ಫಲಿತಾಂಶವನ್ನೇ ನೀಡಲಿದೆ. ಇನ್ನು ಈ ಹೊಸ ವರ್ಷದಲ್ಲಿ ಈ ರಾಶಿಚಕ್ರವು ಸಾಕಷ್ಟು ಒತ್ತಡ ಮತ್ತು ಸವಾಲುಗಳನ್ನು ಎದುರಿಸಲಿದೆ. ಆದರೆ ಅವರು ಚಿಂತೆ ಮಾಡಬೇಕಾಗಿಲ್ಲ, ಏಕೆಂದರೆ ಅವರು 100% ರಷ್ಟು ಲಾಭದಾಯಕ ಮತ್ತು ಪೂರೈಸುವ ದಿನಗಳನ್ನೂ ಹೊಂದಿರುತ್ತಾರೆ. ಈ ಹೊಸ ವರ್ಷದಲ್ಲಿ ಈ ರಾಶಿಚಕ್ರದ ಚಿಹ್ನೆಗಳಿಗೆ ಶನಿವಾರ ಮತ್ತು ಭಾನುವಾರಗಳು ಅದೃಷ್ಟದ ದಿನಗಳು. ಇವರು ತಮ್ಮ ಸುತ್ತಲಿನ ಎಲ್ಲಾ ಜನರನ್ನು ಸಂಪೂರ್ಣವಾಗಿ ಸಂತೋಷದಿಂದ ಇರಿಸಿಕೊಳ್ಳಲು ಸಾಧ್ಯವಿಲ್ಲ ಎನ್ನುವುದನ್ನು ಅರ್ಥಮಾಡಿ ಕೊಳ್ಳಬೇಕು. ಇವರು ಬೇರೆಯವರನ್ನು ಸಂತೋಷಪಡಿಸುವ ಕಾರ್ಯವನ್ನು ಮೊದಲು ನಿಲ್ಲಿಸಬೇಕು. ಜೊತೆಗೆ ತಮ್ಮ ಕಾರ್ಯದ ಬಗ್ಗೆ ಹೆಚ್ಚು ಗಮನ ನೀಡಬೇಕು. 2018ರಲ್ಲಿ ಇವರು ಬೇರೆಯವರ ಸಂತೋಷಕ್ಕಾಗಿ ಮಾಡುವ ಆಲೋಚನೆಗಳನ್ನು ನಿಲ್ಲಿಸಿ, ತಮ್ಮ ಅಭಿವೃದ್ಧಿಯ ಕಡೆಗೆ ಗಮನ ನೀಡಬೇಕಾಗುವುದು.

ವೃಶ್ಚಿಕ

ವೃಶ್ಚಿಕ

ಗುರುವು ನಿಮ್ಮ ಮೊದಲನೇ ಮನೆಯಲ್ಲಿ ಬರುತ್ತಾನೆ. ಅದನ್ನು ಅವನ ಸ್ವ ಸ್ಥಾನ ಎಂತಲೂ ಕರೆಯಲಾಗುತ್ತದೆ. ವೈಯಕ್ತಿಕ ಜೀವನದ ಕೆಲವು ಆಗು ಹೋಗುಗಳನ್ನು ಮೊದಲನೆ ಮನೆಯ ಗುರುವು ನಿಯಂತ್ರಿಸುತ್ತಾನೆ ಎನ್ನಲಾಗುವುದು. ಗುರುವು ಜೀವನದ ಎಲ್ಲಾ ಬಗೆಯ ಯಶಸ್ಸು ಹಾಗೂ ಅಭಿವೃದ್ಧಿಗೆ ಕಾರಣವಾಗುತ್ತಾನೆ. ಅಲ್ಲದೆ ನಿಮ್ಮ ಬಾಹ್ಯ ಮತ್ತು ಭೌತಿಕ ನೋಟಗಳಲ್ಲಿ ಸುಧಾರಣೆ ತರುವುದರ ಮೇಲೂ ಪರಿಣಾಮ ಬೀರುವನು ಎನ್ನಲಾಗುವುದು. ಈ ಹಿಂದೆ ನೀವು ಅನೇಕ ಪ್ರಯತ್ನಗಳನ್ನು ಹಾಗೂ ಬೇಸರದ ಸಂಗತಿಗಳನ್ನು ಅನುಭವಿಸಿರಬಹುದು. ಆದರೆ ಈ ಮುಂದಿನ ಜೀವನದಲ್ಲಿ ಗುರುವು ಹೆಚ್ಚು ಸಮಾಧಾನ ಹಾಗೂ ಖುಷಿಯನ್ನು ತಂದುಕೊಡುವನು ಎನ್ನಲಾಗುತ್ತದೆ. ಬಯಸಿದ್ದನ್ನು ಪಡೆಯಲು ಸ್ವಲ್ಪ ಪ್ರಯತ್ನಗಳಿಂದಲೇ ಪಡೆದುಕೊಳ್ಳುವಿರಿ. ನಿಮ್ಮ ಜೀವನದಲ್ಲಿ ಯಶಸ್ಸನ್ನು ಸಾಧಿಸುವಿರಿ. ಆದರೆ ನಿಮ್ಮ ಭಾವನೆಗಳ ಹಿಡಿತ ಹಾಗೂ ತಾಳ್ಮೆಯ ವಿಚಾರದಲ್ಲಿ ಹೆಚ್ಚು ಗಮನ ನೀಡಬೇಕು. ಅಧಿಕ ತಾಳ್ಮೆ ಹೊಂದಿದ್ದರೆ ಇನ್ನಷ್ಟು ಸುಖ ಪ್ರದವಾದ ಸನ್ನಿವೇಶಗಳನ್ನು ಅನುಭವಕ್ಕೆ ತಂದುಕೊಳ್ಳುವಿರಿ.

ವೃಶ್ಚಿಕ

ವೃಶ್ಚಿಕ

2018ರಲ್ಲಿ ಈ ರಾಶಿಯವರು ತಕ್ಕ ಮಟ್ಟಿನ ಅದೃಷ್ಟವನ್ನು ಅನುಭವಿಸುವಿರಿ. ಜನರು ನಿಮ್ಮನ್ನು ಹೆಚ್ಚು ನಂಬುತ್ತಾರೆ. ಸೂಕ್ತ ನಿರ್ಧಾರ ಹಾಗೂ ಕಾರ್ಯವನ್ನು ಕೈಗೊಳ್ಳಬೇಕು. ಇವರಿಗೆ ಸೋಮವಾರ, ಶುಕ್ರವಾರ ಮತ್ತು ಭಾನುವಾರಗಳು ತಮ್ಮ ಅದೃಷ್ಟದ ದಿನಗಳಲ್ಲಿ ಅದನ್ನು ಮಾಡಬಹುದು. ಇನ್ನು ಇವರು ಸೂಕ್ತ ವ್ಯಕ್ತಿಯನ್ನು ಆರಿಸಿಕೊಳ್ಳುವಲ್ಲಿ ವಿಫಲರಾಗುತ್ತಾರೆ. ಇದರಿಂದ ತಮ್ಮ ವಿಶ್ವಾಸ ಹಾಗೂ ನಂಬಿಕೆಯನ್ನು ಕಳೆದುಕೊಂಡು ತಮ್ಮ ತನವನ್ನು ಕಳೆದು ಕೊಳ್ಳುತ್ತಾರೆ ಎನ್ನಬಹುದು. 2018ರಲ್ಲಿ ಇವರು ಸೂಕ್ತ ವ್ಯಕ್ತಿಯ ಆಯ್ಕೆ ಮಾಡುವ ಪರಿಯನ್ನು ತಿಳಿಯಬೇಕಿದೆ. ಅದೊಂದು ಅವರ ಜೀವನವನ್ನು ಸರಿಯಾದ ಹಾದಿಯಲ್ಲಿ ನಡೆಸಿಕೊಂಡು ಹೋಗಲು ಸೂಕ್ತವಾದ ವರ್ಷವಾಗಿದೆ ಎಂದು ಹೇಳಬಹುದು.

For Quick Alerts
ALLOW NOTIFICATIONS
For Daily Alerts

    English summary

    This Will Be A Big Year For These 3 Zodiac Signs, Here's Why

    Is it too late to continue wishing every Uber driver, deli worker, receptionist and friend a "Happy New Year" when you see them? we usually keep this greeting going for as long as we can; although 2018 will be a lucky year for these zodiac signs, so wishing them a happy 2018 may not be necessary. astrology (ultimately) as a non-predictive art, but it is also a map of potential energy, and if you take advantage of its timing, your belief in that energy can empower your intentions, increasing the likelihood of your success.
    We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more