ಇದು ಮಾನವನ ಮುಖ ಹೋಲುವ ನಾಯಿ! ಇಂಟರ್ನೆಟ್‌ನಲ್ಲಿ ವಿಡಿಯೋ ವೈರಲ್!

Posted By: Deepu
Subscribe to Boldsky
ವಿಲಕ್ಷಣ ಸತ್ಯ : ಮಾನವನ ಮುಖ ಹೋಲುವ ನಾಯಿಯ ಫೋಟೋ ವೈರಲ್ | Oneindia Kannada

ಮಾನವನ ಮುಖವನ್ನೇ ಹೋಲುವ ನಾಯಿಯ ಚಿತ್ರವೊಂದು ಅಂತರ್ಜಾಲ ಜಗತ್ತನ್ನೇ ಸಮರೋಪಾದಿಯಲ್ಲಿ ಆವರಿಸಿದೆ. ಇದು ನಿಜವೋ ಸುಳ್ಳೋ ಎಂದು ನಿಮಗೂ ಅನುಮಾನ ಎದುರಾಗಿರಬೇಕಲ್ಲವೇ? ಇಂದು ವಿಶ್ವಮಟ್ಟದ ಜನಪ್ರಿಯತೆ ಪಡೆದಿರುವ ಈ ನಾಯಿಯ ಬಗ್ಗೆ ನೀವು ಅರಿತಿರದೇ ಇದ್ದರೆ ಹೇಗೆ? ಅದರಲ್ಲೂ ಕೆಳಗೆ ನೀಡಲಾಗಿರುವ ವಿಡಿಯೋ ಚಿತ್ರಣದಲ್ಲಿ ನಾಯಿ ಕಣ್ಣು ಮಿಟುಕಿಸುವುದನ್ನು ನೋಡಿದರೆ ಚಕಿತರಾಗಿರದೇ ಇರಲು ಸಾಧ್ಯವೇ ಇಲ್ಲ. ಬನ್ನಿ, ಈ ಬಗ್ಗೆ ಹೆಚ್ಚಿನ ಮಾಹಿತಿಯನ್ನು ನೋಡೋಣ...

’ಯೋಗಿ’-ಈ ಹೆಸರಿನ ನಾಯಿಯನ್ನು ಭೇಟಿಯಾಗಿ

’ಯೋಗಿ’-ಈ ಹೆಸರಿನ ನಾಯಿಯನ್ನು ಭೇಟಿಯಾಗಿ

ಈ ನಾಯಿಗೆ ಈಗ ಒಂದು ವರ್ಷ ವಯಸ್ಸು. ತಳಿ: ಶಿ-ಫೂ. ಈ ನಾಯಿಯ ಚಿತ್ರ ಯಾವಾಗ ಅಂತರ್ಜಾಲದಲ್ಲಿ ಪ್ರಕಟಗೊಂಡಿತೋ, ಜಗತ್ತಿನಾದ್ಯಂತ ಸಂಚಲನೆಯುಂಟುಮಾಡಿದೆ. ಇದಕ್ಕೆ ಕಾರಣ ಯೋಗಿಯ ಮುಖ ಮನುಷ್ಯರ ಚಹರೆಯನ್ನೇ ಹೋಲುವುದು!

ನಾಯಿಯ ಕಣ್ಣುಗಳು ಪುರುಷರ ಕಣ್ಣುಗಳನ್ನೇ ಹೋಲುತ್ತವೆ!

ನಾಯಿಯ ಕಣ್ಣುಗಳು ಪುರುಷರ ಕಣ್ಣುಗಳನ್ನೇ ಹೋಲುತ್ತವೆ!

ಈ ನಾಯಿಯ ಕಣ್ಣುಗಳನ್ನು ಗಮನಿಸಿದವರು ನೀಡಿದ ಪ್ರಚಾರವೇ ಇದಕ್ಕೆ ಸಿಕ್ಕಿದ ಜನಪ್ರಿಯತೆಗೆ ಕಾರಣವಾಗಿದೆ. ಈ ನಾಯಿಯ ಒಡೆಯರಾದ ಚಾಂಟಾಲ್ ಡೆಸ್ಜಾರ್ಡಿನ್ಸ್ ಎಂಬುವರು ತಮ್ಮ ಸಹೋದರಿ ಡಾರ್ಲಾ ರೊಂದಿಗೆ ಈ ನಾಯಿಯ ಚಿತ್ರವನ್ನು ಕ್ಲಿಕ್ಕಿಸಿ ಆಕೆಯ ಫೇಸ್ಬುಕ್ ಖಾತೆಯಲ್ಲಿ ಪ್ರಕಟಿಸಿದ್ದರು. ಈ ಚಿತ್ರವನ್ನು ಗಮನಿಸಿದವರು ಈ ನಾಯಿಯ ಕಣ್ಣುಗಳು ಪುರುಷರ ಕಣ್ಣುಗಳನ್ನೇ ಹೋಲುತ್ತವೆ ಎಂದು ಪ್ರತಿಕ್ರಿಯಿಸಿದ್ದರು.

Image Courtesy - Facebook

ಆದರೆ ಇದು ನಿಜವಲ್ಲದೇ ಇರಬಹುದು!

ಆದರೆ ಇದು ನಿಜವಲ್ಲದೇ ಇರಬಹುದು!

ನಾಯಿಯ ಮುಖವೆಂದಾದರೂ ಮನುಷ್ಯರಂತಿರಲು ಸಾಧ್ಯವೇ? ಯಾರಾದರೂ ಕಿಡಿಗೇಡಿಗಳು ಮನುಷ್ಯರ ಮುಖವನ್ನು ನಾಯಿಯ ದೇಹಕ್ಕೆ ಫೋಟೋಶಾಪ್ ಅಥವಾ ಸ್ವಾಪ್ ಆಪ್ ಮೂಲಕ ಕಸಿ ಮಾಡಿರಬಾರದೇಕೆ? ಈ ಅನುಮಾನವನ್ನೂ ಹಲವರು ವ್ಯಕ್ತಪಡಿಸಿದ್ದಾರೆ. ಅಲ್ಲದೇ ಅಗ್ಗದ ಜನಪ್ರಿಯತೆ ಪಡೆದುಕೊಳ್ಳಲು ಜನರು ಏನೇನೋ ಮಾಡುತ್ತಿರಬೇಕಾದರೆ ಹೀಗೂ ಏಕಾಗಬಾರದು? ಆದರೆ ಈ ಅನುಮಾನವನ್ನು ವ್ಯಕ್ತಪಡಿಸಿದವರು ಸಾಕ್ಷಾತ್ ಈ ನಾಯಿಯನ್ನು ಕಂಡ ಬಳಿಕ ತಮ್ಮ ಅನುಮಾನವನ್ನು ಪರಿಹರಿಸಿಕೊಂಡು, ಇದು ಮಾನವಮೊಗದ ನಾಯಿಯೇ ಹೌದು ಎಂದು ಖಚಿತಪಡಿಸಿದ್ದಾರೆ.

ವೀಡಿಯೋವನ್ನು ವೀಕ್ಷಿಸಿ...

ಈ ನಾಯಿ ನಿಜಕ್ಕೂ ಈ ಜಗತ್ತಿನಲ್ಲಿದೆ ಎಂಬುದನ್ನು ತಿಳಿದುಕೊಳ್ಳಲು ಕೆಳಗಿನ ವೀಡಿಯೋ ವನ್ನು ವೀಕ್ಷಿಸಿ. ಈ ನಾಯಿ ನಿರ್ಭಾವುಕನಾಗಿ ಕ್ಯಾಮೆರಾವನ್ನೇ ತದೇಕಚಿತ್ತದಿಂದ ಗಮನಿಸುತ್ತಿದೆ ಹಾಗೂ ಕಣ್ಣನ್ನೂ ಹೊಡೆಯುತ್ತಿದೆ. ಅದರಲ್ಲೂ ಒಂದು ಕಣ್ಣನ್ನು ಮಿಟುಕಿಸುವುದನ್ನು ನೋಡಿದರೆ ನೀವು ಚಕಿತರಾಗದೇ ಇರಲಾರಿರಿ. ಮನುಷ್ಯರ ಮುಖವನ್ನೇ ಹೋಲುವ ಈ ನಾಯಿಯ ಚಿತ್ರ ಎಲ್ಲರನ್ನೂ ದಂಗುಬಡಿಸಿದೆ. ಇಂತಹ ಅಚ್ಚರಿಯ ಸಂಗತಿಗಳು ನಿಮಗೆ ಇಷ್ಟವಾಗುತ್ತಿದೆಯೇ? ಹಾಗಿದ್ದಲ್ಲಿ ಈ ಪುಟವನ್ನು ಆಗಾಗ ಗಮನಿಸುತ್ತಿರಿ. ವಿಶ್ವದ ಇನ್ನೂ ಹಲವಾರು ಅಚ್ಚರಿಯ ಸಂಗತಿಗಳು ಇಲ್ಲಿ ಶೀಘ್ರವೇ ಪ್ರಕಟಗೊಳ್ಳಲಿವೆ.

English summary

This Dog has a Human Face & It's all over internet

The world is going crazy with pictures of a dog that resembles a human face! Yogi, a 1-year-old pup, seems to have a human-like face and this is for real! His eyes resembles a grown-up man! The dog is unaware of his stardom and his owner claims that he is just a regular pup with human features and is quite smart.