2016-18 ವರ್ಷಗಳಿಂದ ಪ್ರತಿ ರಾಶಿಯ ವ್ಯಕ್ತಿಗಳೂ ಕಲಿಯಬೇಕಾದ ಸಂಗತಿಗಳು

Posted By: Arshad Hussain
Subscribe to Boldsky

ಕಲಿಯುವಿಕೆಗೆ ಯಾವುದೇ ವಯಸ್ಸಿನ ಮಿತಿಯಿಲ್ಲ, ಯಾವುದೇ ದಿನದ ನಿರ್ಬಂಧವಿಲ್ಲ. ಪ್ರತಿದಿನವೂ ಹೊಸ ಹೊಸ ವಿಷಯಗಳನ್ನು ಕಲಿಯುತ್ತಾ ಹೋಗಬೇಕು. ಆದರೆ ಅಗತ್ಯ ವಿಷಯಗಳನ್ನು ಹೆಚ್ಚಾಗಿ ಕಲಿತು ಅನಗತ್ಯ ವಿಷಯಗಳ ಬಗ್ಗೆ ಹೆಚ್ಚು ತಲೆಕೆಡಿಸಿಕೊಳ್ಳದಿರುವುದು ಜಾಣತನ. ನಿಮ್ಮ ರಾಶಿಯ ಪ್ರಕಾರ ಯಾವ ವಿಷಯ ಕಲಿಯುವುದು ಉತ್ತಮ ಎಂದು ಕಂಡುಕೊಂಡರೆ ನಿಮ್ಮ ಆಯ್ಕೆ ಸುಲಭವಾಗುತ್ತದೆ. ಬನ್ನಿ, ಯಾವ ರಾಶಿಯವರಿಗೆ ಪ್ರತಿವರ್ಷ ಕಲಿಯಲು ಯಾವ ವಿಷಯ ಉತ್ತಮ ಎಂಬುದನ್ನು ನೋಡೊಣ:

ಇಂದು, ಬೋಲ್ಡ್ ಸ್ಕೈ ತಂಡ ಈ ನಿಟ್ಟಿನಲ್ಲಿ ಕಳೆದ ಎರಡು ವರ್ಷಗಳಲ್ಲಿ ಕಲಿತಿರಬೇಕಾಗಿದ್ದ ಹಾಗೂ ಈ ವರ್ಷ ಕಲಿಯಬೇಕಾದ ವಿಷಯಗಳನ್ನು ಸಂಗ್ರಹಿಸಿ ನೀಡಲು ಹರ್ಷಿಸುತ್ತಿದೆ. ಇವುಗಳನ್ನು ಹೋಲಿಸಿ ನೋಡಿಕೊಂಡು ಕಲಿಕಾ ಮಾರ್ಗದಲ್ಲಿ ನೀವು ಸೂಕ್ತದಾರಿಯಲ್ಲಿದ್ದೀರೇ ಎಂದು ಪರಿಶೀಲಿಸಿ ಈ ವರ್ಷ ಇನ್ನೂ ಉತ್ತಮ ಸಾಧನೆ ಸಾಧಿಸಲು ಈ ಮಾಹಿತಿ ನೆರವಾಗುತ್ತದೆ...

ಮೇಷ (21 ಮಾರ್ಚ್–19 ಏಪ್ರಿಲ್)

ಮೇಷ (21 ಮಾರ್ಚ್–19 ಏಪ್ರಿಲ್)

2016 ನೇ ವರ್ಷದಲ್ಲಿ: ಇದು ಸ್ವಯಂ-ಸಿದ್ಧಿಗೆ ಸೂಕ್ತವಾದ ವರ್ಷವಾಗಿತ್ತು, ಈ ವರ್ಷ ಹಲವು ವ್ಯಕ್ತಿಗಳು ತಮ್ಮಲ್ಲಿ ತಮ್ಮನ್ನೇ ಹೊಸ ವ್ಯಕ್ತಿಯನ್ನಾಗಿ ಕಂಡುಕೊಂಡಿದ್ದಾರೆ.

2017ನೇ ವರ್ಷದಲ್ಲಿ: ಈ ರಾಶಿಗೆ ಸೇರಿದ ವ್ಯಕ್ತಿಗಳು ಈ ವರ್ಷದಲ್ಲಿ ಹೊಸ ಸವಾಲು ಎದುರಿಸಿದ್ದರು ಹಾಗೂ ಭಿನ್ನವಾದ ದೃಷ್ಟಿಕೋನದ ಮೂಲಕ ಉತ್ತಮ ಅವಕಾಶಗಳು ದೊರಕಿತ್ತು.

2018 ನೇ ವರ್ಷದಲ್ಲಿ: ಈ ವರ್ಷದಲ್ಲಿ ಬಹುಕಾಲ ಉತ್ತರಿಸದೇ ಉಳಿದ ಪ್ರಶ್ನೆಗಳಿಗೆ ಉತ್ತರ ಕಂಡುಕೊಳ್ಳುವ ಪ್ರಯತ್ನಗಳಾಗುತ್ತವೆ. ಈ ವ್ಯಕ್ತಿಗಳು ತಮ್ಮ ಜೀವನದಲ್ಲಿ ಏನು ಸಾಧಿಸಬೇಕು ಎಂಬ ಬಗ್ಗೆ ಹೆಚ್ಚು ಗಮನ ನೀಡಬೇಕಾಗುತ್ತದೆ.

ವೃಷಭ (20 ಏಪ್ರಿಲ್–21 ಮೇ)

ವೃಷಭ (20 ಏಪ್ರಿಲ್–21 ಮೇ)

2016 ನೇ ವರ್ಷದಲ್ಲಿ: ಈ ವ್ಯಕ್ತಿಗಳು ತಮ್ಮ ಜೀವನದ ಕೆಲವು ವಿಷಯಗಳ ಬಗ್ಗೆ ಮರುಶೋಧನೆ ಮಾಡುವಂತೆ ಒತ್ತಡ ಬಂದಿತ್ತು. ಇವರು ಹೊಸ ಸವಾಲುಗಳನ್ನು ಎದುರಿಸಬೇಕಾಗಿತ್ತು.

2017 ನೇ ವರ್ಷದಲ್ಲಿ: ಈ ವರ್ಷದಲ್ಲಿ ಇವರಿಗೆ ಹೊಸ ಮಿತಿಗಳು ಹಾಗೂ ಗಡಿಗಳ ಬಗ್ಗೆ ಅರಿತುಕೊಳ್ಳುವುದು ಹಾಗೂ ತಮ್ಮ ಬಗ್ಗೆ ವಿಮರ್ಶಿಬೇಕಾಗಿತ್ತು.

2018 ನೇ ವರ್ಷದಲ್ಲಿ: ಪ್ರಸ್ತುತ ವರ್ಷದಲ್ಲಿ ಈ ವ್ಯಕ್ತಿಗಳು ತಮ್ಮ ಬಗ್ಗೆ ಆತ್ಮವಿಮರ್ಶೆ ಮಾಡಿಕೊಳ್ಳುವರು ಹಾಗೂ ಕೊಂಚ ಶಾಂತಿಯನ್ನೂ ಪಡೆಯಲಿದ್ದಾರೆ. ಇದರ ಹೊರತಾಗಿ ವೈಯಕ್ತಿಕ ಹಾಗೂ ವೃತ್ತಿಪರ ಜೀವನದಲ್ಲಿ ಇವರು ಅದೃಷ್ಟಶಾಲಿಗಳಾಗಿರುತ್ತಾರೆ.

ಮಿಥುನ (22 ಮೇ–21 ಜೂನ್)

ಮಿಥುನ (22 ಮೇ–21 ಜೂನ್)

2016 ನೇ ವರ್ಷದಲ್ಲಿ: ಇವರು ತಮ್ಮ ಪ್ರೀತಿಪಾತ್ರರ ಬಗ್ಗೆ ಹಚ್ಚು ಕಾಳಜಿ ವಹಿಸಬೇಕಾಗಿತ್ತು ಹಾಗೂ ಇವರಿಗೆ ಹೊಸ ಸವಾಲುಗಳು ಎದುರಾಗಿದ್ದು ಇದನ್ನು ಇವರು ಧೈರ್ಯದಿಂದ ಎದುರಿಸಿದರು ಮತ್ತು ಹೆಚ್ಚಿನ ಶಕ್ತಿ ವ್ಯಯಿಸಿದರು.

2017 ನೇ ವರ್ಷದಲ್ಲಿ: ಕಳೆದ ವರ್ಷ ಇವರಿಗೆ ತಮ್ಮ ಪ್ರಾಣ ಸ್ನೇಹಿತರು ಯಾರು ಎಂಬುದನ್ನು ಕಂಡುಕೊಳ್ಳಬೇಕಾಗಿತ್ತು ಹಾಗೂ ಆ ಪ್ರಕಾರ ತಮ್ಮ ಸಾಮಾಜಿಕ ವಲಯವನ್ನು ಕೊಂಚ ಬದಲಿಸಲೂಬೇಕಾಗಿತ್ತು.

2018 ನೇ ವರ್ಷದಲ್ಲಿ: ಪ್ರಸ್ತುತ ವರ್ಷದಲ್ಲಿ ಇವರು ತಾವು ಮಾಡಬಯಸಿದ ಕೆಲಸವನ್ನು ಮಾಡಬೇಕಾಗುತ್ತದೆ ಹಾಗೂ ಈ ಮೂಲಕ ಇವರ ಜೀವನದಲ್ಲಿ ಹೆಚ್ಚಿನ ವೈವಿಧ್ಯತೆ ದೊರಕುತ್ತದೆ.

ಕಟಕ (22 ಜೂನ್–22 ಜುಲೈ)

ಕಟಕ (22 ಜೂನ್–22 ಜುಲೈ)

2016 ನೇ ವರ್ಷದಲ್ಲಿ: ಈ ವರ್ಷ ಕೆಲವರಿಗೆ ಹೊಸತೊಂದನ್ನು ಪ್ರಾರಂಭಿಸುವ ವರ್ಷವಾಗಿತ್ತು. ಇವರು ಈ ಮೂಲಕ ಪ್ರಬುದ್ಧತೆಯನ್ನೂ ಗಳಿಸುವಂತಾಯಿತು.

2017 ನೇ ವರ್ಷದಲ್ಲಿ: ಕಳೆದ ವರ್ಷ ಇವರು ತಮ್ಮ ಕನಸನ್ನು ನನಸಾಗಿಸುವ ಪ್ರಯತ್ನ ಮಾಡಬೇಕಾಗಿತ್ತು.

2018ನೇ ವರ್ಷದಲ್ಲಿ: ಈ ವರ್ಷ ಇವರು ತಮ್ಮತನವನ್ನು ಉಳಿಸಿಕೊಂಡು ಹೋಗುವರು ಹಾಗೂ ಹೀಗಿದ್ದೇ ನೆಮ್ಮದಿಯನ್ನು ಪಡೆಯುವರು.

ಸಿಂಹ (23 ಜುಲೈ–22 ಆಗಸ್ಟ್)

ಸಿಂಹ (23 ಜುಲೈ–22 ಆಗಸ್ಟ್)

2016 ನೇ ವರ್ಷದಲ್ಲಿ: ಈ ವರ್ಷ ಇವರು ತಮ್ಮ ಜೀವನದ ಗುರಿಗಳನ್ನು ಸಾಧಿಸುವ ನಿಟ್ಟಿನಲ್ಲಿ ತಮ್ಮ ಯೋಜನೆಗಳ ಬಗ್ಗೆ ಹೆಚ್ಚು ತಲೆಕೆಡಿಸಿಕೊಳ್ಳದೇ ಹೇಗೆ ಸಾಗುತ್ತದೋ ಹಾಗೇ ಸಾಗಲಿ ಎಂದು ಬಿಡಬೇಕಾಗಿತ್ತು.

2017 ನೇ ವರ್ಷದಲ್ಲಿ: ಕಳೆದ ವರ್ಷ ಇವರು ತಮ್ಮ ಆತ್ಮವಿಶ್ವಾಸವನ್ನು ಮರುಗಳಿಸಿ ಹೋರಾಟವನ್ನು ಪುನಃ ಪ್ರಾರಂಭಿಸಬೇಕಿತ್ತು.

2018 ನೇ ವರ್ಷದಲ್ಲಿ: ಪ್ರಸ್ತುತ ವರ್ಷದಲ್ಲಿ ಇವರು ಹೊಸ ವಿಷಯಗಳನ್ನು ಕಲಿತು ತಮ್ಮ ವ್ಯಾಪ್ತಿಯನ್ನು ಹೆಚ್ಚಿಸಿಕೊಳ್ಳುವರು.

ಕನ್ಯಾ (23 ಆಗಸ್ಟ್–22 ಸೆಪ್ಟೆಂಬರ್)

ಕನ್ಯಾ (23 ಆಗಸ್ಟ್–22 ಸೆಪ್ಟೆಂಬರ್)

2016 ನೇ ವರ್ಷದಲ್ಲಿ: ಈ ವರ್ಷದಲ್ಲಿ ಯಾವ ಯೋಜನೆ ನಡೆಯುತ್ತಿಲ್ಲವೋ ಆ ಎಲ್ಲಾ ವಿಷಯಗಳಿಂದ ಹೊರಬರಬೇಕಾಗಿತ್ತು.

2017 ನೇ ವರ್ಷದಲ್ಲಿ : ಕಳೆದ ವರ್ಷ ಸೋಲಿನ ಅಪಾಯವಿದ್ದ ಹೊಸ ವಿಷಯವೊಂದನ್ನು ಕಲಿಯಬೇಕಾಗಿತ್ತು.

2018 ನೇ ವರ್ಷದಲ್ಲಿ: ಪ್ರಸ್ತುತ ವರ್ಷದಲ್ಲಿ ಇವರು ಕೆಲವು ಕಠಿಣ ನಿರ್ಧಾರಗಳನ್ನು ಕೈಗೊಳ್ಳುವರು.

ತುಲಾ (23 ಸೆಪ್ಟೆಂಬರ್-22 ಅಕ್ಟೋಬರ್)

ತುಲಾ (23 ಸೆಪ್ಟೆಂಬರ್-22 ಅಕ್ಟೋಬರ್)

2016 ನೇ ವರ್ಷದಲ್ಲಿ: ಈ ವ್ಯಕ್ತಿಗಳು ಕೊನೆಯಲ್ಲಿ ಸಿಗುವಂತಾಗುವ ಕೆಲವು ಹೊಸ ವಿಷಯಗಳನ್ನು ಪ್ರಾರಂಭಿಸಬೇಕಿತ್ತು.

2017 ನೇ ವರ್ಷದಲ್ಲಿ: ಕಳೆದ ವರ್ಷ ಇವರು ನೆಟ್ಟಿದ್ದ ಬೀಜಗಳು ಮೊಳಕೆಯೊಡೆಯುತ್ತಿವೆಯೇ ಎಂದು ಪರಿಶೀಲಿಸಿ ತಮ್ಮನ್ನು ತಾವು ಮುಂದುವರೆಯುವಂತೆ ಪ್ರೇರೇಪಿಸಬೇಕಿತ್ತು.

2018 ನೇ ವರ್ಷದಲ್ಲಿ: ಈ ವರ್ಷ 2016ರಲ್ಲಿ ಪ್ರಾರಂಭಿಸಿದ್ದ ಯೋಜನೆಗಳು ಫಲಕೊಡುವುವು ಹಾಗೂ ಈ ಮೂಲಕ ಹೊಸ ಹಾಗೂ ಮುಂದುವರೆದ ಪರಿಸರಕ್ಕೆ ಹೊಂದಿಕೊಳ್ಳುವರು.

ವೃಶ್ಚಿಕ (23 ಅಕ್ಟೋಬರ್–22 ನವೆಂಬರ್)

ವೃಶ್ಚಿಕ (23 ಅಕ್ಟೋಬರ್–22 ನವೆಂಬರ್)

2016 ನೇ ವರ್ಷದಲ್ಲಿ: ಈ ವರ್ಷದಲ್ಲಿ ಇವರು ಕೆಲವು ವಿಶಯಗಳ ವಿಶ್ಲೇಷಣೆಯನ್ನು ಸ್ವತಃ ನಿರ್ವಹಿಸಬೇಕಿತ್ತು.

2017 ನೇ ವರ್ಷದಲ್ಲಿ: ಕಳೆದ ವರ್ಷದಲ್ಲಿ ಇವರು ತಮ್ಮ ಅಂತರ್ಗತ ಭಾವನೆಗಳಿಗೆ ಹೆಚ್ಚು ಪ್ರಾಮುಖ್ಯತೆ ನೀಡಬೇಕಾಗಿತ್ತು.

2018 ನೇ ವರ್ಷದಲ್ಲಿ: ಪ್ರಸ್ತುತ ವರ್ಷದಲ್ಲಿ ಇವರು ಹೊಸದಾದ ವಿಷಯವೊಂದನ್ನು ಪ್ರಾರಂಭಿಸಬೇಕಿದೆ ಹಾಗೂ ಈ ವರ್ಷ ಹೊಸ ಯೋಜನೆ ಪ್ರಾರಂಭಿಸಲು ಸೂಕ್ತವೂ ಆಗಿದೆ.

ಧನು (23 ನವೆಂಬರ್–21 ಡಿಸೆಂಬರ್)

ಧನು (23 ನವೆಂಬರ್–21 ಡಿಸೆಂಬರ್)

2016 ನೇ ವರ್ಷದಲ್ಲಿ: ಈ ವರ್ಷ ಆತ್ಮಾವಲೋಕನಕ್ಕೆ ಒಳಗಾಗಲು ಮತ್ತು ಅಭಿವೃದ್ದಿಗೊಳ್ಳಲು ಸೂಕ್ತವಾದ ವರ್ಷವಾಗಿತ್ತು.

2017 ನೇ ವರ್ಷದಲ್ಲಿ: ಕಳೆದ ವರ್ಷ ಈ ವ್ಯಕ್ತಿಗಳು ತಮಗೆ ಆಪ್ತರಾಗಿರುವವ ಅಗತ್ಯಕ್ಕೆ ನೆರವಾಗಲು ಲಭ್ಯರಾಗಬೇಕಿತ್ತು.

2018 ನೇ ವರ್ಷದಲ್ಲಿ: ಈ ವರ್ಷದಲ್ಲಿ ಇವರು ಉತ್ತಮ ಫಲಿತಾಂಶ ಪಡೆಯಬೇಕಾದರೆ ಕೆಲವು ಧನಾತ್ಮಕ ಬದಲಾವಣೆಗಳನ್ನು ಅಳವಡಿಸಿಕೊಳ್ಳಬೇಕಿದೆ.

ಮಕರ (22 ಡಿಸೆಂಬರ್-20 ಜನವರಿ)

ಮಕರ (22 ಡಿಸೆಂಬರ್-20 ಜನವರಿ)

2016 ನೇ ವರ್ಷದಲ್ಲಿ: ಈ ವರ್ಷದಲ್ಲಿ ಇವರು ತಮ್ಮ ಸ್ವಂತ ಬುದ್ದಿಯನ್ನು ಹೇಗೆ ಉಪಯೋಗಿಸಬೇಕು ಎಂದು ಕಲಿಯಬೇಕಿತ್ತು.

2017 ನೇ ವರ್ಷದಲ್ಲಿ: ಕಳೆದ ವರ್ಷ ಇವರು ತಮ್ಮ ಜೀವನದಲ್ಲಿ ಏನು ತಪ್ಪಾಗಿದೆ ಎಂಬುದನ್ನು ವಿಮರ್ಶಿಸಬೇಕಾಗಿತ್ತು.

2018 ನೇ ವರ್ಷದಲ್ಲಿ: ಪ್ರಸ್ತುತ ವರ್ಷದಲ್ಲಿ ಇವರು ತಮ್ಮನ್ನು ತಾವೇ ಅರಿತುಕೊಳ್ಳಲು ಯತ್ನಿಸಲು ಆರಂಬಿಸಬೇಕು.

ಕುಂಭ (21 ಜನವರಿ- 18 ಫೆಬ್ರವರಿ)

ಕುಂಭ (21 ಜನವರಿ- 18 ಫೆಬ್ರವರಿ)

2016 ನೇ ವರ್ಷದಲ್ಲಿ: ಈ ವರ್ಷದಲ್ಲಿ ಇವರು ತಾಳ್ಮೆಯಿಂದಿರಲು ಕಲಿಯಬೇಕಿತ್ತು.

2017 ನೇ ವರ್ಷದಲ್ಲಿ: ಕಳೆದ ವರ್ಷ ಇವರು ತಮ್ಮ ಸುತ್ತ ಮುತ್ತಲಿರುವ ವ್ಯಕ್ತಿಗಳ ವಿಶ್ವಾಸ ಗಳಿಸಬೇಕಿತ್ತು.

2018 ನೇ ವರ್ಷದಲ್ಲಿ: ಪ್ರಸ್ತುತ ವರ್ಷದಲ್ಲಿ ಇವರು ತಮ್ಮ ಸುತ್ತ ಮುತ್ತಲಿನವರೊಂದಿಗೆ ಹೇಗೆ ಕೆಲಸ ಮಾಡಬೇಕು ಹಾಗೂ ಅಸ್ತಿತ್ವ ಉಳಿಸಿಕೊಳ್ಳಬೇಕು ಎಂದು ಕಲಿಯಬೇಕಿದೆ.

ಮೀನ (19 ಫೆಬ್ರವರಿ–20 ಮಾರ್ಚ್)

ಮೀನ (19 ಫೆಬ್ರವರಿ–20 ಮಾರ್ಚ್)

2016 ನೇ ವರ್ಷದಲ್ಲಿ: ಈ ವರ್ಷದಲ್ಲಿ ಇವರು ತಮ್ಮ ಹಳೆಯ ಸಂಗತಿಗಳನ್ನು ಹೇಗೆ ಸರಿಪಡಿಸುವುದು ಎಂಬುದನ್ನು ಪ್ರಯತ್ನಿಸಬೇಕಿತ್ತು.

2017 ನೇ ವರ್ಷದಲ್ಲಿ: ಕಳೆದ ವರ್ಷ ಇವರು ಜೀವನದಲ್ಲಿ ಕೆಲವು ಬದಲಾವಣೆಗಳ ಮೂಲಕ ಉತ್ತಮಗೊಳ್ಳಲು ಯತ್ನಿಸಬೇಕಿತ್ತು.

2018 ನೇ ವರ್ಷದಲ್ಲಿ: ಪ್ರಸ್ತುತ ವರ್ಷದಲ್ಲಿ ಇವರು ಕೆಲವು ಮುಖ್ಯ ನಿರ್ಧಾರಗಳನ್ನು ಕೈಗೊಳ್ಳುವ ಮೂಲಕ ಉತ್ತಮ ವ್ಯಕ್ತಿಯಾಗಲು ಯತ್ನಿಸಬೇಕು. ನಿಮ್ಮಲ್ಲಿ ಎಷ್ಟು ಜನರು 2016ರಿಂದಲೂ ತಮ್ಮ ಬಗ್ಗೆ ಯೋಚಿಸಿದಿರಿ? ಈ ಬಗ್ಗೆ ನಿಮ್ಮ ಅನಿಸಿಕೆಗಳನ್ನು ಕೆಳಗಿನ ಕಮೆಂಟ್ಸ್ಭಾ ಗದಲ್ಲಿ ಬರೆದು ನಮಗೆ ಖಂಡಿತಾ ತಿಳಿಸಿ.

English summary

Things That Each Zodiac Sign Is Supposed To Learn From 2016-18

Each day is a learning one and a new beginning to start off new things. So have you been learning new things as per your zodiac sign? Well, here are some of the things that individuals of each zodiac sign are supposed to learn every year. We, here at Boldsky, have combined the last two years and this year's list of things which each individual is supposed to learn.