For Quick Alerts
ALLOW NOTIFICATIONS  
For Daily Alerts

ಇದೇ ಕಾರಣಕ್ಕೆ ಮನೆಯಲ್ಲಿ ಜಗಳ, ಅಶಾಂತಿ ಉಂಟಾಗುವುದು!

By Divya Pandith
|

ನಮ್ಮ ಸುತ್ತಲಿನ ಪರಿಸರದಲ್ಲಿ ಧನಾತ್ಮಕ ಶಕ್ತಿ ಮತ್ತು ಋಣಾತ್ಮಕ ಶಕ್ತಿ ಎನ್ನುವ ವಿಶೇಷ ಶಕ್ತಿಗಳಿರುತ್ತವೆ ಎನ್ನುವುದನ್ನು ನಾವು ನಂಬಲೇ ಬೇಕು. ಜೀವನದಲ್ಲಿ ಸಮೃದ್ಧಿ ಮತ್ತು ಪ್ರೀತಿ, ಅದೃಷ್ಟವನ್ನು ಪಡೆದುಕೊಳ್ಳುವ ಸಲುವಾಗಿ ಜನರು ವಿವಿಧ ರೀತಿಯ ಆಚರಣೆ, ಕಾರ್ಯ ಮತ್ತು ತಾಯತಗಳಂತಹ ವಿಶೇಷ ವಸ್ತುಗಳ ಮೊರೆ ಹೋಗುತ್ತಾರೆ. ಕೆಲವು ಸಂಪ್ರದಾಯಗಳ ಪ್ರಕಾರ ಕೆಲವು ವಸ್ತು ಮತ್ತು ಆಚರಣೆಯಿಂದ ಸಕಾರಾತ್ಮಕ ಶಕ್ತಿಯು ಆಕರ್ಷಣೆಗೆ ಒಳಗಾಗುತ್ತದೆ. ಕೆಲವು ವಸ್ತುಗಳಿಗೆ ಋಣಾತ್ಮಕ ಶಕ್ತಿಯು ಆಕರ್ಷಿತವಾಗುತ್ತದೆ.

ಕೆಲವು ನಂಬಿಕೆಯ ಪ್ರಕಾರ ಮುರಿದ ಕನ್ನಡಕ, ವಿಲಕ್ಷಣ ವಸ್ತುಗಳು, ಒಡೆದ ದೇವರ ಪೋಟೋ, ಬಿರುಕು ಬಿಟ್ಟ ಪಾತ್ರೆಗಳು, ಕಲೆಗಳು ಸೇರಿದಂತೆ ಇನ್ನಿತರ ವಸ್ತುಗಳಿಗೆ ಬಹುಬೇಗ ನಕಾರಾತ್ಮಕ ಶಕ್ತಿಗಳು ಆಕರ್ಷಿತವಾಗುತ್ತವೆ. ಹಾಗಾಗಿ ಮನೆಯಲ್ಲಿ ಅಂತಹ ವಸ್ತುಗಳನ್ನು ಇಡಬಾರದು. ಹಾಗೊಮ್ಮೆ ಇದೆ ಎಂದಾದರೆ ಬಹುಬೇಗ ಮನೆಯಿಂದ ಆಚೆ ಇಡಬೇಕು. ಮನೆಯೊಳಗೆ ಇದ್ದರೆ ನಕಾರಾತ್ಮಕ ಅಥವಾ ಋಣಾತ್ಮಕ ಶಕ್ತಿ ಪ್ರವೇಶ ಪಡೆದುಕೊಂಡು, ವಿವಿಧ ಸಮಸ್ಯೆಗಳನ್ನು ಸೃಷ್ಟಿಸುತ್ತವೆ.

ಮನೆಯ ಸುರಕ್ಷತೆ ಹಾಗೂ ಧನಾತ್ಮಕ ಶಕ್ತಿಯ ಪ್ರವೇಶ ಪಡೆಯಲು ಕೆಲವು ಮುನ್ನೆಚ್ಚರಿಕೆ ಕ್ರಮಗಳನ್ನು ವಹಿಸಬೇಕು. ಆಗಲೇ ನಾವು ಹಾಗೂ ನಮ್ಮವರ ಸುರಕ್ಷತೆಯನ್ನು ಕಾಯ್ದುಕೊಳ್ಳಬಹುದು. ಅಂತಹ ಒಂದು ಸೂಕ್ತ ವರ್ತನೆ ಹಾಗೂ ಕೆಲಸಗಳನ್ನು ಯಾವ ಪರಿಯಲ್ಲಿ ಕೈಗೊಳ್ಳಬಹುದು ಎನ್ನುವುದನ್ನು ಈ ಮುಂದೆ ವಿವರಿಸಲಾಗಿದೆ...

ಮನೆಯಲ್ಲಿ ಅನಗತ್ಯವಾಗಿ ವಸ್ತುಗಳನ್ನು ತುಂಬಿಸುವುದು

ಮನೆಯಲ್ಲಿ ಅನಗತ್ಯವಾಗಿ ವಸ್ತುಗಳನ್ನು ತುಂಬಿಸುವುದು

ಮನೆಯಲ್ಲಿರುವ ಸ್ಥಳಾವಕಾಶದಲ್ಲಿ ಅಗತ್ಯವಿರುವಷ್ಟು ಮಾತ್ರ ವಸ್ತುಗಳನ್ನಿರಿಸಬೇಕು. ಅತಿ ಹೆಚ್ಚು ಮತ್ತು ಅನಗತ್ಯವಾದ ವಸ್ತುಗಳನ್ನು ಅಡ್ಡಾದಿಡ್ಡಿಯಾಗಿರಿಸಿದರೆ ಧನಾತ್ಮಕ ಶಕ್ತಿಯ ಪ್ರವಹನೆಗೆ ಅಡ್ಡಿಯಾಗುತ್ತದೆ. ಆದ್ದರಿಂದ ವಸ್ತುಗಳು ಸಾಧ್ಯವಾದಷ್ಟು ಕೋಣೆಯ ಬದಿಗಳಲ್ಲಿ ಒಪ್ಪ ಓರಣವಾಗಿದ್ದು ನಡುವಣ ಸ್ಥಳ ಖಾಲಿ ಇರುವಂತೆ ನೋಡಿಕೊಳ್ಳಬೇಕು.

ಸಿಹಿ ತಿಂಡಿ ಹಿಡಿದುಕೊಳ್ಳುವುದು...

ಸಿಹಿ ತಿಂಡಿ ಹಿಡಿದುಕೊಳ್ಳುವುದು...

ನಿಮಗೆ ಯಾರಾದರೂ ಸಿಹಿ ತಿಂಡಿಯನ್ನು ಕೊಟ್ಟರೆ ಅದನ್ನು ಆಗಲೇ ತಿಂದು ಮುಗಿಸಿ. ಅರ್ಧ ತಿನ್ನುವುದು ಅಥವಾ ತಿನ್ನದೆ ಅಲ್ಲೇ ಇಡುವುದನ್ನು ಮಾಡಿದರೆ ನೋಣಗಳು ಹಾಗೂ ಕ್ರಿಮಿ ಕೀಟಗಳು ಅದನ್ನು ತಿನ್ನಲು ಮನೆಯೊಳಗೆ ಪ್ರವೇಶ ಪಡೆದುಕೊಳ್ಳುತ್ತವೆ. ಅದರಿಂದ ಋಣಾತ್ಮಕ ಶಕ್ತಿ ಮನೆಯೊಳಗೆ ಆಗಮಿಸುತ್ತವೆ.

ಕೊಳಕು ಬಟ್ಟೆ ಧರಿಸುವುದು...

ಕೊಳಕು ಬಟ್ಟೆ ಧರಿಸುವುದು...

ಕೊಳಕು ಬಟ್ಟೆಗಳನ್ನು ಧರಿಸುವುದರಿಂದ ಸೂಕ್ಷ್ಮ ಜೀವಿಗಳ ವಾಹಕವಾಗಿರುತ್ತವೆ. ಮನೆಯಲ್ಲಿ ಕಳಪೆ ಮಟ್ಟದ ವಾಸ್ತುಗಳನ್ನು ಒಳಗೊಂಡಿದೆ ಎಂದು ಪರಿಗಣಿಸಲಾಗುತ್ತದೆ. ಜೊತೆಗೆ ಕೆಟ್ಟ ಶಕ್ತಿಗಳು ಮನೆಯನ್ನು ಪ್ರವೇಶಿಸುವ ಸಾಧ್ಯತೆಗಳಿವೆ.

ಮನೆಯಲ್ಲಿ ದೇವತೆಗಳು

ಮನೆಯಲ್ಲಿ ದೇವತೆಗಳು

ಮನೆಯಲ್ಲಿ ದೇವತೆಗಳ ಫೋಟೋ ಅಥವಾ ವಿಗ್ರಹಗಳ ಮುಖವು ಪರಸ್ಪರ ಎದುರು ಬದುರು ಇರದಂತೆ ನೋಡಿಕೊಳ್ಳಬೇಕು. ಎದುರು ಬದುರು ಮುಖ ಬರುವಂತೆ ಇಟ್ಟರೆ ವಾಸ್ತು ದೋಷ ಹಾಗೂ ದುಷ್ಟ ಶಕ್ತಿಗಳ ಆಗಮನವಾಗುವುದು.

ಋಣಾತ್ಮಕ ಶಕ್ತಿ

ಋಣಾತ್ಮಕ ಶಕ್ತಿ

ಮನೆಯ ಮಂದಿಯೊಂದಿಗೆ ಮಾತನಾಡುವಾಗ ಸಿಟ್ಟು, ಬೇಸರ ಹಾಗೂ ಆಗಾಗ ಕಲಹಗಳು ಉಂಟಾಗುತ್ತಿದ್ದರೆ ಮನೆಯಲ್ಲಿ ನಕಾರಾತ್ಮಕ ಶಕ್ತಿ ಇದೆ ಎಂದು ತಿಳಿಯಬಹುದು. ಅದಕ್ಕಾಗಿ ಸೂಕ್ತ ಪರಿಹಾರ ಮಾಡಿಕೊಳ್ಳುವುದು ಸೂಕ್ತ. ಕೆಲವೊಮ್ಮೆಮನೆಯಲ್ಲಿ ನಕಾರಾತ್ಮಕ ಶಕ್ತಿ ಇದೆ ಎಂದಾದರೆ ಮನೆಯಲ್ಲಿ ಪರಸ್ಪರ ಟೀಕೆಗಳು ಉಂಟಾಗುತ್ತವೆ. ವ್ಯಕ್ತಿಗಳ ನಡುವೆ ಹೊಂದಾಣಿಕೆ ಅಥವಾ ಸಾಮರಸ್ಯದ ಗುಣಗಳು ಕಡಿಮೆಯಾಗಿರುತ್ತವೆ. ಚಿಕ್ಕ ಪುಟ್ಟ ವಿಚಾರಗಳಿಗೂ ಕೂಗಾಡುವುದನ್ನು ಕಾಣಬಹುದು.

ತಪ್ಪು ಕಲ್ಪನೆಗಳು

ತಪ್ಪು ಕಲ್ಪನೆಗಳು

ಮನೆ ಮಂದಿಯ ನಡುವೆ ಚಿಕ್ಕ ಪುಟ್ಟ ವಿಚಾರಗಳಿಗೂ ತಪ್ಪು ಕಲ್ಪನೆಯನ್ನು ಪಡೆದುಕೊಳ್ಳುತ್ತಾರೆ. ಸದಾ ತಾವು ಹೇಳುವುದೇ ಸರಿ ಎನ್ನುವುದನ್ನು ಸಾಧಿಸುತ್ತಾರೆ. ಅಲ್ಲದೆ ಮಾನಸಿಕವಾಗಿ ಕೆಲವು ವಿಚಾರವಾಗಿ ಕೊರಗುತ್ತಾರೆ.

ಒಬ್ಬರನ್ನು ಒಬ್ಬರು ದೂರಿಕೊಳ್ಳುವುದು...

ಒಬ್ಬರನ್ನು ಒಬ್ಬರು ದೂರಿಕೊಳ್ಳುವುದು...

ಮನೆಯಲ್ಲಿ ಅತಿಯಾದ ನಕಾರಾತ್ಮಕ ಶಕ್ತಿ ಇದೆ ಎಂದಾದರೆ ವ್ಯಕ್ತಿಗಳು ಪರಸ್ಪರ ದೂರಿಕೊಳ್ಳುತ್ತಾರೆ. ಜೊತೆಗೆ ಆ ದೂರುಗಳಿಗೆ ಪರಿಹಾರವಾಗಿ ಏನನ್ನೂ ಮಾಡಲು ಸಾಧ್ಯವಾಗದು. ಅದರ ಬಗ್ಗೆ ಒಂದಿಷ್ಟು ದುಃಖಕ್ಕೆ ಒಳಗಾಗುವ ಸಾಧ್ಯತೆಯೂ ಇರುತ್ತದೆ.

ನಕಾರಾತ್ಮಕ ಶಕ್ತಿಯನ್ನು ತೆಗೆಯುವುದು ಹೇಗೆ?

ನಕಾರಾತ್ಮಕ ಶಕ್ತಿಯನ್ನು ತೆಗೆಯುವುದು ಹೇಗೆ?

ಸಮುದ್ರದ ಉಪ್ಪು

ಸಮುದ್ರದ ಉಪ್ಪು ಹಾಗೂ ಉಪ್ಪಿನ ನೀರು ಅತ್ಯುತ್ತಮ ಶಕ್ತಿಯನ್ನು ಹೊಂದಿರುತ್ತದೆ ಎಂದು ಹೇಳಲಾಗುತ್ತದೆ. ಸಮುದ್ರದ ಉಪ್ಪಿನ ನೀರನ್ನು ಮನೆಯಲ್ಲಿ ಚಿಮುಕಿಸುವುದು ಅಥವಾ ಮನೆಯೊಳಗೆ ಅದನ್ನು ಇಡುವುದರಿಂದ ನಕಾರಾತ್ಮಕ ಶಕ್ತಿ ಮನೆಯಿಂದ ದೂರ ಸರಿಯುವುದು.

ಮನೆಯನ್ನು ಸ್ವಚ್ಛಗೊಳಿಸಿ

ಮನೆಯನ್ನು ಸ್ವಚ್ಛಗೊಳಿಸಿ

ಮನೆಯನ್ನು ಪ್ರತಿದಿನ ಸ್ವಚ್ಛಗೊಳಿಸಬೇಕು. ವಿಶೇಷವಾಗಿ ಧೂಳು ತೆಗೆಯುವುದು, ಕಿಟಕಿ ಹಾಗೂ ಬಾಗಿಲುಗಳ ಪರದೆಯನ್ನು ನಿಯಮಿತವಾಗಿ ಸ್ವಚ್ಛಗಿಳಿಸುತ್ತಿರಬೇಕು. ಅಲ್ಲದೆ ಮನೆಯಲ್ಲಿ ಕೊಳಚೆಗಳಂತಹ ಹೊಲಸು ಇರದಂತೆ ನೋಡಿಕೊಳ್ಳಬೇಕು.

ಗೊಂದಲ ನಿರ್ಮೂಲನೆ

ಗೊಂದಲ ನಿರ್ಮೂಲನೆ

ಹಾಳಾದ ಬಟ್ಟೆ, ಪಾತ್ರೆಗಳಂತಹ ವಸ್ತುಗಳನ್ನು ಮನೆಯಿಂದ ಆಚೆ ಹಾಕಬೇಕು. ಇದರಿಂದ ನಕಾರಾತ್ಮಕ ಶಕ್ತಿಯನ್ನು ಮನೆಯೊಳಗೆ ಪ್ರವೇಶಿಸದಂತೆ ತಡೆಯಬಹುದು. ದಾನ ಮಾಡುವುದು ಮತ್ತು ಪವಿತ್ರ ವಸ್ತುಗಳನ್ನು ಮನೆಯಲ್ಲಿ ಇಟ್ಟುಕೊಳ್ಳುವುದರಿಂದ ಸಕಾರಾತ್ಮಕ ಶಕ್ತಿಯನ್ನು ಆಮಂತ್ರಿಸಬಹುದು.

ಶಬ್ದಗಳನ್ನು ಮಾಡದಿರಿ

ಶಬ್ದಗಳನ್ನು ಮಾಡದಿರಿ

ಮನೆಯಲ್ಲಿ ಅನವಶ್ಯಕ ಗಲಾಟೆ ಮಾಡದಿರಿ. ಪವಿತ್ರ ವಸ್ತುಗಳ ನಾದವನ್ನು ಮೊಳಗಲು ಬಿಡಿ. ಇದರಿಂದ ಸಕಾರಾತ್ಮಕ ಶಕ್ತಿ ಮನೆಯೊಳಗೆ ಬರುವುದು. ಮನೆಯಲ್ಲಿದ್ದ ಸಮಸ್ಯೆಗಳು ನಿಧಾನವಾಗಿ ಕರಗುವುದು.

ಕಿಟಕಿಗಳನ್ನು ತೆರೆದಿಡಿ

ಕಿಟಕಿಗಳನ್ನು ತೆರೆದಿಡಿ

ಕಿಟಕಿಯನ್ನು ಆದಷ್ಟು ತೆರೆದಿಡುವಂತೆ ನೋಡಿಕೊಳ್ಳಿ. ತಾಜಾ ಗಾಳಿಗಳು ಮನೆಯಲ್ಲಿ ಆವರಿಸಿರುತ್ತದೆ. ಇದರಿಂದ ಧನಾತ್ಮಕ ಶಕ್ತಿಯು ಉತ್ತೇಜನಗೊಳ್ಳುತ್ತದೆ ಎನ್ನಲಾಗುವುದು.

ಧ್ಯಾನ ಮಾಡಿ

ಧ್ಯಾನ ಮಾಡಿ

ಮನೆಯಲ್ಲಿ ಒಂದು ಸೂಕ್ತ ಪ್ರದೇಶವನ್ನು ಧ್ಯಾನ ಮಾಡಲು ಮೀಸಲಿಡಿ. ಆ ಪ್ರದೇಶದಲ್ಲಿ ಸೂರ್ಯನ ಕಿರಣಗಳು ಬೀಳುವಂತಿರಲಿ. ಇದರಿಂದ ದೇವತೆಗಳು ಮನೆಯ ಒಳಗೆ ಪ್ರವೇಶಿಸುತ್ತವೆ. ಉತ್ತಮ ಶಕ್ತಿಯು ನಮ್ಮನ್ನು ಕಾಪಾಡುತ್ತದೆ.

ಮೇಣದ ಬತ್ತಿ ಹಚ್ಚಿ

ಮೇಣದ ಬತ್ತಿ ಹಚ್ಚಿ

ಸುವಾಸನೆ ಭರಿತ ಮೇಣದ ಬತ್ತಿಯನ್ನು ಉರಿಸಿ. ಇದರಿಂದ ಸಕಾರಾತ್ಮಕ ಶಕ್ತಿಯು ಆಕರ್ಷಿತಗೊಳ್ಳುತ್ತದೆ. ನಕಾರಾತ್ಮಕ ಶಕ್ತಿಯು ದೂರಗೊಳ್ಳುವುದು.

ಪೀಠೋಪಕರಣಗಳು

ಪೀಠೋಪಕರಣಗಳು

ಪ್ರತಿ 2-3 ತಿಂಗಳಿಗೆ ಒಮ್ಮೆಯಾದರೂ ಪೀಠೋಪಕರಣಗಳನ್ನು ಸ್ವಚ್ಛಗೊಳಿಸಿ. ಸೋಫಾದ ಕವರ್‍ಗಳನ್ನು ಬದಲಾಯಿಸಿ. ಆದಷ್ಟು ಸ್ವಚ್ಛಗೊಳಿಸುತ್ತಿರಿ. ಇಲ್ಲವಾದರೆ ಕ್ರಿಮಿ ಕೀಟಗಳು ಹಾಗೂ ಇಲಿಗಳಂತಹ ಪ್ರಾಣಿಗಳು ಮನೆಯೊಳಗೆ ಪ್ರವೇಶ ಪಡೆಯುತ್ತವೆ. ಜೊತೆಗೆ ಋಣಾತ್ಮಕ ಶಕ್ತಿಯು ಆಕರ್ಷಿತಗೊಳ್ಳುತ್ತದೆ.

ಒಳಾಂಗಣ ಸಸ್ಯಗಳು

ಒಳಾಂಗಣ ಸಸ್ಯಗಳು

ಒಳಾಂಗಣ ಸಸ್ಯಗಳನ್ನು ಮನೆಯಲ್ಲಿ ಇರಿಸುವುದರಿಂದ ಮನೆಯಲ್ಲಿ ಆಮ್ಲಜನಕದ ಪ್ರಮಾಣ ಹೆಚ್ಚಿರುತ್ತದೆ. ಜೊತೆಗೆ ವಾತಾವರಣವು ಶುದ್ಧ ಹಾಗೂ ತಾಜಾತನದಿಂದ ಕೂಡಿರುತ್ತದೆ. ಸಕಾರಾತ್ಮಕ ಶಕ್ತಿಯು ಆಕರ್ಷಿತಗೊಳ್ಳುತ್ತದೆ.

ಬೆಳ್ಳುಳ್ಳಿ

ಬೆಳ್ಳುಳ್ಳಿ

ಬೆಳ್ಳುಳ್ಳಿಯ ಎಸಳುಗಳನ್ನು ಕೆಲವು ಸೂಕ್ತ ಪ್ರದೇಶದಲ್ಲಿ ಇರಿಸುವುದರಿಂದ ಮನೆಯೊಳಗೆ ಪ್ರವೇಶ ಪಡೆದಯುವ ಸೂಕ್ಷ್ಮಾಣು ಹಾಗೂ ನಕಾರಾತ್ಮಕ ಶಕ್ತಿಯನ್ನು ನಿಯಂತ್ರಿಸಬಹುದು.

ಹರಳುಗಳು

ಹರಳುಗಳು

ಮನೆಯಲ್ಲಿ ಕೆಲವು ಸ್ಫಟಿಕದ ಹರಳುಗಳನ್ನು ಮನೆಯ ಬಾಗಿಲು, ಕಿಟಕಿ, ಮೆಟ್ಟಿಲು, ಮನೆಯೊಳಗಿನ ಮೂಲೆಗಳಲ್ಲಿ ಇರಿಸಿ. ಅದನ್ನು ಇರಿಸುವುದರಿಂದ ನಕಾರಾತ್ಮಕ ಶಕ್ತಿಯು ಮನೆಯ ಒಳಗೆ ಪ್ರವೇಶಿಸದು. ಅಲ್ಲದೆ ಮನೆಯ ಸೌಂದರ್ಯವೂ ಹೆಚ್ಚುವುದು.

English summary

Things That Create Negative Energy at Home

Many people might not believe but there are good energies as well as bad energies in the world. In order to attract good luck, love, prosperity and monetary benefits, people place various kinds of objects and amulets in the house at different places. However, there are times when certain objects attract bad and negative energy and they co-exist with the ones which emanate positive energy. This can lead to interference of energy in the house and the positive energy might not be able to show its effects.
X
Desktop Bottom Promotion