ಈ ಐದು ರಾಶಿಚಕ್ರದವರಿಗೆ ಮಾತ್ರ ಇಂತಹ ವಿಶೇಷ ಶಕ್ತಿ ಇರುವುದು...

By: Deepu
Subscribe to Boldsky
ಈ ಐದು ರಾಶಿಯವರಿಗೆ ವಿಶೇಷ ಅಂತಃಪ್ರಜ್ಞೆ ಇರುತ್ತೆ | Oneindia Kannada

ಕೆಲವರು ಕೆಲವು ಸಂದರ್ಭಗಳ ಬಗ್ಗೆ ಅಥವಾ ವಿಚಾರಗಳ ಕುರಿತು ಮಾನಸಿಕವಾಗಿ ಸೂಕ್ತ ರೀತಿಯಮ ಮಾಹಿತಿಯನ್ನು ಹೊಂದಿರುತ್ತಾರೆ. ಜೊತೆಗೆ ಹೀಗೆ ಆಗಬಹುದು ಎನ್ನುವ ಭವಿಷ್ಯವನ್ನು ನುಡಿಯುತ್ತಾರೆ. ಅಂತಹ ವ್ಯಕ್ತಿಗಳನ್ನು ವಿಶೇಷ ಶಕ್ತಿ ಹೊಂದಿರುವ ವ್ಯಕ್ತಿಗಳು ಎಂದು ಗುರುತಿಸುವುದು ಉಂಟು. ಆದರೆ ವಾಸ್ತವವಾಗಿ ಹೇಳುವುದಾದರೆ ಭವಿಷ್ಯವನ್ನು ಹೇಳಬಹುದಾದ ಶಕ್ತಿಯನ್ನು ಹೊಂದಿರುವ ವ್ಯಕ್ತಿಗೆ ವಿಶೇಷವಾದ ಅಂತಃಪ್ರಜ್ಞೆ ಹೊಂದಿರುತ್ತಾನೆ ಎನ್ನಬಹುದು. ವ್ಯಕ್ತಿ ಸುಳ್ಳು ಹೇಳುವುದನ್ನು ಅವರು ಊಹಿಸಬಹುದು ಅಥವಾ ಗುರುತಿಸಬಹುದು.

ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಹೇಳುವುದಾದರೆ ಊಹೆ ಅಥವಾ ಅಂತಃಪ್ರಜ್ಞೆ ಹೊಂದಿರುವ ವ್ಯಕ್ತಿಗಳು ರಾಶಿ ಚಕ್ರದ ಪ್ರಭಾವಕ್ಕೆ ಒಳಗಾಗಿರುತ್ತಾರೆ. 12 ರಾಶಿಚಕ್ರಗಳಲ್ಲಿ ಕೇವಲ 5 ರಾಶಿಚಕ್ರವು ಈ ಒಂದು ವಿಶೇಷ ಶಕ್ತಿಯನ್ನು ಹೊಂದಿದೆ. ಈ ರಾಶಿಚಕ್ರದ ವ್ಯಕ್ತಿಗಳು ಅತ್ಯುತ್ತಮವಾದ ಅಂತಃಪ್ರಜ್ಞೆ ಹೊಂದಿರುತ್ತಾರೆ ಎಂದು ಹೇಳಲಾಗುತ್ತದೆ. ನಿಮಗೂ ನಿಮ್ಮ ರಾಶಿಚಕ್ರಕ್ಕೆ ಈ ಒಂದು ವಿಶೇಷ ಶಕ್ತಿ ಇದೆಯೇ? ಎನ್ನುವುದನ್ನು ನೀವು ತಿಳಿದುಕೊಳ್ಳಬೇಕೆಂದರೆ ಮುಂದಿರುವ ವಿವರಣೆಯನ್ನು ಓದಿ...

ಮಿಥುನ: ಮೇ 21-ಜೂನ್20

ಮಿಥುನ: ಮೇ 21-ಜೂನ್20

ಈ ರಾಶಿಯವರು ಅತ್ಯುತ್ತಮ ಅಂತಃಪ್ರಜ್ಞೆಯ ಶಕ್ತಿಯನ್ನು ಹೊಂದಿರುತ್ತಾರೆ. ಇವರಿಗೆ ಕೆಟ್ಟ ಸಂದರ್ಭಗಳು ಎದುರಾದರೆ ಅಥವಾ ಅನುಭವಕ್ಕೆ ಬಂದರೆ ಮುಂದೇನಾಗುವುದು ಎನ್ನುವುದನ್ನು ಊಹಿಸುವ ಶಕ್ತಿ ಹೊಂದಿರುತ್ತಾರೆ. ಉತ್ತಮ ಸಂವಹನ ಕಾರರಾಗಿರುವ ಇವರು ಮುಂಬರುವ ಸಮಸ್ಯೆಗಳಿಂದ ಹೇಗೆ ಪಾರಾಗಬಹುದು ಎನ್ನುವುದನ್ನು ಅವರು ಯೋಚಿಸಿರುತ್ತಾರೆ ಮತ್ತು ಪಾರಾಗುತ್ತರೆ ಸಹ. ಇನ್ನು ಇವರು ಇವರು ಹೊಸ ಹೊಸ ವಿಚಾರವನ್ನು ಕಲಿಯುತ್ತಾ ಇರುತ್ತಾರೆ. ಹೊಸ ಹೊಸ ಜಾಗಗಳಿಗೆ ಭೇಟಿ ನೀಡುತ್ತಿರುತ್ತಾರೆ ಮತ್ತು ಹೊಸಬರನ್ನು ಭೇಟಿ ಮಾಡುತ್ತಿರುತ್ತಾರೆ ಆ ಮೂಲಕ ಯಶಸ್ಸನ್ನು ಗಳಿಸುತ್ತಾರೆ. ಅಲ್ಲದೆ ಈ ರಾಶಿಯವರು ತುಂಬಾ ನುರಿತ ಸಂವಹನಕಾರರಾಗಿರುತ್ತಾರೆ. ಚರ್ಚೆ ಮತ್ತು ಆಲೋಚನೆಗಳನ್ನು ಹಂಚಿ ಕೊಳ್ಳುವುದಲ್ಲಿ ನೈಪುಣ್ಯತೆ ಪಡೆದಿರುತ್ತಾರೆ. ಹುರಿದುಂಬಿಸುವ ಹಾಗೂ ಆಸಕ್ತಿ ಹುಟ್ಟಿಸುವಂತಹ ವೃತ್ತಿ ಅವರಿಗೆ ಬೇಕಾಗಿದೆ. ಈ ರಾಶಿಯವರಿಗೆ ಹೊಂದಿಕೊಳ್ಳುವ ವೃತ್ತಿಗಳೆಂದರೆ ಕಲೆ, ವಿನ್ಯಾಸ, ವಾಸ್ತುಶಿಲ್ಪ, ನರ್ಸಿಂಗ್, ಮಾರಾಟ, ಕಾನೂನು ಜಾರಿ ಮತ್ತು ಅಗ್ನಿಶಾಮಕದಲ್ಲಿ ಕೆಲಸಗಳು. ಇವರು ಸ್ವಭಾವತಹ ಸ್ಥಿರವಾದ ಮನಸ್ಸಿನವರು. ಹಾಗಿದ್ದರೂ ಹೆಚ್ಚು ಕಷ್ಟ ಪಟ್ಟು ದುಡಿಯುವ ವ್ಯಕ್ತಿಗಳು. ಇವರನ್ನು ಇಷ್ಟ ಪಟ್ಟವರಿಗಾಗಿ ಹಾಗೂ ತಾವು ಕಂಡ ಕನಸನ್ನು ನೆರವೇರಿಸಿಕೊಳ್ಳಲು ಎಷ್ಟೇ ಕಷ್ಟವಾದರೂ ಶ್ರಮದಿಂದ ಪೂರೈಸುತ್ತಾರೆ. ಇವರು ಹೊಸ ಹೊಸ ವಿಚಾರವನ್ನು ಕಲಿಯುತ್ತಾ ಇರುತ್ತಾರೆ. ಹೊಸ ಹೊಸ ಜಾಗಗಳಿಗೆ ಭೇಟಿ ನೀಡುತ್ತಿರುತ್ತಾರೆ ಮತ್ತು ಹೊಸಬರನ್ನು ಭೇಟಿ ಮಾಡುತ್ತಿರುತ್ತಾರೆ ಆ ಮೂಲಕ ಯಶಸ್ಸನ್ನು ಗಳಿಸುತ್ತಾರೆ. ಅಲ್ಲದೆ ಈ ರಾಶಿಯವರು ತುಂಬಾ ನುರಿತ ಸಂವಹನಕಾರರಾಗಿರುತ್ತಾರೆ. ಚರ್ಚೆ ಮತ್ತು ಆಲೋಚನೆಗಳನ್ನು ಹಂಚಿಕೊಳ್ಳುವುದಲ್ಲಿ ನೈಪುಣ್ಯತೆ ಪಡೆದಿರುತ್ತಾರೆ. ಹುರಿದುಂಬಿಸುವ ಹಾಗೂ ಆಸಕ್ತಿ ಹುಟ್ಟಿಸುವಂತಹ ವೃತ್ತಿ ಅವರಿಗೆ ಬೇಕಾಗಿದೆ.

ವೃಶ್ಚಿಕ:: ಅಕ್ಟೋಬರ್ 23- ನವೆಂಬರ್ 22

ವೃಶ್ಚಿಕ:: ಅಕ್ಟೋಬರ್ 23- ನವೆಂಬರ್ 22

ಇವರು ಮಾನಸಿಕವಾಗಿ ಅತ್ಯುತ್ತಮವಾದ ಮೆದುಳಿನ ಸಾಮರ್ಥ್ಯ ಹೊಂದಿರುತ್ತಾರೆ. ಇವರು ನಿರಂತರವಾಗಿ ಕಾರ್ಯನಿರ್ವಹಿಸುತ್ತಿರುತ್ತಾರೆ. ಇವರು ಇತರರ ಜನರ ಮನಸ್ಸನ್ನು ಓದುವುದು ಮತ್ತು ಅವರ ನೈಜ ಉದ್ದೇಶಗಳನ್ನು ಕಂಡುಹಿಡಿಯುವಲ್ಲಿ ಅವರಿಗೆ ಉತ್ತಮ ಸಾಮರ್ಥ್ಯವಿದೆ. ಒಬ್ಬ ವ್ಯಕ್ತಿಯ ಪಾತ್ರವನ್ನು ನಿರ್ಣಯಿಸುವಲ್ಲಿ ಅವರು ತುಂಬಾ ಚಾಣಾಕ್ಷರು. ತಮ್ಮ ತೀರ್ಪಿನ ಕುರಿತು ತೀರ್ಪು ನೀಡುತ್ತಿರುವ ಜನರಲ್ಲಿ ಅತ್ಯುತ್ತಮವಾದ ಗುಣಗಳನ್ನು ಕಂಡುಕೊಳ್ಳುತ್ತಾರೆ. ಇದಲ್ಲದೆ ಯಾರು ನಕಲಿ ಎಂದು ತಿಳಿದುಕೊಳ್ಳುವುದರಲ್ಲಿಯೂ ಸಹ ಚಾಣಾಕ್ಷರು ಇವರು. ಚೇಳಿನ ಚಿಹ್ನೆಯನ್ನು ಹೊಂದಿರುವ ಇವರು ಸಾಕಷ್ಟು ಕೆಸವನ್ನು ಮಾಡುತ್ತಾರೆ. ಆದರೆ ಅದನ್ನು ಬಹಳ ಶ್ರಮ ಪಟ್ಟು ಮಾಡುವ ಗೋಜಿಗೆ ಹೋಗುವುದಿಲ್ಲ. ಆಸೆಯನ್ನು ಹೊಂದಿರುತ್ತಾರೆಯಾದರೂ ನಿಧಾನವಾಗಿ ಕೆಲಸ ನಿರ್ವಹಿಸುತ್ತಾರೆ. ಇವರು ಒಳ್ಳೆಯ ಪತ್ತೆದಾರರು ಮತ್ತು ಸತ್ಯವನ್ನು ಹೊರತೆಗೆಯುವ ಸಾಮರ್ಥ್ಯವನ್ನು ಹೊಂದಿರುವವರಾಗಿರುತ್ತಾರೆ. ಅಷ್ಟೇ ಅಲ್ಲದೆ ಸಂಪನ್ಮೂಲ, ವಿಶ್ಲೇಷಾತ್ಮಕ ಹಾಗೂ ಅರ್ಥಗರ್ಭಿತ ಸ್ವಭಾವದವರು ಇವರಾಗಿರುತ್ತಾರೆ. ಇವರು ಒಳ್ಳೆಯ ಪತ್ತೆದಾರರು ಮತ್ತು ಸತ್ಯವನ್ನು ಹೊರತೆಗೆಯುವ ಸಾಮರ್ಥ್ಯವನ್ನು ಹೊಂದಿರುವವರಾಗಿರುತ್ತಾರೆ. ಇವರಿಗೆ ಹೊಂದಿಕೆಯಾಗುವಂತಹ ಕೆಲಸವೆಂದರೆ ಕಾನೂನು ಸೇವೆ, ಇಂಜಿನಿಯರಿಂಗ್, ವಿಜ್ಞಾನ, ಶಿಕ್ಷಣ ಮತ್ತು ಕಾಮಗಾರಿ.

ಧನು: ನವೆಂಬರ್ 22-ಡಿಸೆಂಬರ್ 22

ಧನು: ನವೆಂಬರ್ 22-ಡಿಸೆಂಬರ್ 22

ಇವರು ಅತ್ಯುತ್ತಮ ಧ್ಯಾನ ಮಾಡುವ ಶಕ್ತಿಯನ್ನು ಹೊಂದಿರುತ್ತಾರೆ. ಒಮ್ಮೆ ಇವರು ಕಣ್ಮುಚ್ಚಿ ಯಾವುದಾದರೊಂದು ವಿಚಾರಕ್ಕೆ ತೀರ್ಮಾನ ಕೈಗೊಂಡರೆ ಅದು ಕಾರ್ಯ ರೂಪಕ್ಕೆ ಬರುತ್ತದೆ. ಕೆಲವು ವಿಚಾರಗಳಿಗೆ ಹೃದಯದಿಂದ ನಿರ್ಧರಿಸುವ ಬದಲು ಕಿವಿಮಾತುಗಳಿಂದ ನಿರ್ಧರಿಸಬಹುದು ಎನ್ನುವ ಧೋರಣೆಯನ್ನು ತಳೆಯುತ್ತಾರೆ. ಧನುರ್ ರಾಶಿ ಇವರು ಜೀವನದಲ್ಲಿ ತುಂಬಾ ಆಶಾವಾದಿಗಳಾಗಿರುತ್ತಾರೆ ಮತ್ತು ನಿಷ್ಕಪಟ ಮನಸ್ಸಿನವರಾಗಿರುತ್ತಾರೆ. ಇವರು ಜೀವನದಲ್ಲಿ ವಾಸ್ತವ ಗುರಿಗಳನ್ನು ಇರಿಸಿಕೊಂಡು ಅದರತ್ತ ಗಮನಹರಿಸುವುದು ಒಳ್ಳೆಯದು. ಇದರಿಂದ ಮುಂದೆ ಎದುರಾಗುವ ಅಡೆತಡೆಗಳನ್ನು ನಿವಾರಿಸಿಕೊಳ್ಳಬಹುದು. ಜೊತೆಗೆ ಇದರಿಂದ ಇವರ ಧನಾತ್ಮಕ ಮನೋಭಾವ ಮತ್ತು ಶಕ್ತಿ ಸಹ ಉಳಿತಾಯವಾಗುತ್ತದೆ. ಇನ್ನು ಈ ವ್ಯಕ್ತಿಗಳು ಆಧ್ಯಾತ್ಮಿಕ, ಧನಾತ್ಮಕ ಮತ್ತು ನೈತಿಕತೆಯ ಸ್ವಭಾವ ಹೊಂದಿರುವವರಾಗಿರುತ್ತಾರೆ. ಇವರು ಪ್ರವಾಸ ಪ್ರಿಯರು ಮತ್ತು ಯಾವುದೇ ಹುದ್ದೆಗೆ ಬೇಕಾಗುವಂತಹ ಶಿಕ್ಷಣವನ್ನು ಸಂಪಾದಿಸುವವರು.ಇವರು ಆಲಸ್ಯ ಪ್ರವೃತ್ತಿಯವರು ಎನ್ನಬಹುದು. ಶ್ರಮಪಟ್ಟು ಕೆಲಸಮಾಡುವವರಲ್ಲಿ ಕೊನೆ ಸ್ಥಾನವನ್ನು ಪಡೆದುಕೊಳ್ಳುವರು. ಇವರಿಗೆ ಯಾವುದೇ ಸಂಘಟಿತ ಯೋಜನೆ, ಆಲೋಚನೆ ಇರುವುದಿಲ್ಲ. ಹಾಗೆಯೇ ಮಾಡಬೇಕೆಂದಿದ್ದ ಕೆಲಸವನ್ನು ಮಾಡಿ ಮುಗಿಸುತ್ತಾರೆ ಎನ್ನಬಹುದು. ಧನುರ್ ರಾಶಿ ಇವರು ಜೀವನದಲ್ಲಿ ತುಂಬಾ ಆಶಾವಾದಿಗಳಾಗಿರುತ್ತಾರೆ ಮತ್ತು ನಿಷ್ಕಪಟ ಮನಸ್ಸಿನವರಾಗಿರುತ್ತಾರೆ. ಇವರು ಜೀವನದಲ್ಲಿ ವಾಸ್ತವ ಗುರಿಗಳನ್ನು ಇರಿಸಿಕೊಂಡು ಅದರತ್ತ ಗಮನಹರಿಸುವುದು ಒಳ್ಳೆಯದು. ಇದರಿಂದ ಮುಂದೆ ಎದುರಾಗುವ ಅಡೆತಡೆಗಳನ್ನು ನಿವಾರಿಸಿಕೊಳ್ಳಬಹುದು. ಜೊತೆಗೆ ಇದರಿಂದ ಇವರ ಧನಾತ್ಮಕ ಮನೋಭಾವ ಮತ್ತು ಶಕ್ತಿ ಸಹ ಉಳಿತಾಯವಾಗುತ್ತದೆ. ಇನ್ನು ಈ ವ್ಯಕ್ತಿಗಳು ಆಧ್ಯಾತ್ಮಿಕ, ಧನಾತ್ಮಕ ಮತ್ತು ನೈತಿಕತೆಯ ಸ್ವಭಾವ ಹೊಂದಿರುವವರಾಗಿರುತ್ತಾರೆ. ಇವರು ಪ್ರವಾಸ ಪ್ರಿಯರು ಮತ್ತು ಯಾವುದೇ ಹುದ್ದೆಗೆ ಬೇಕಾಗುವಂತಹ ಶಿಕ್ಷಣವನ್ನು ಸಂಪಾದಿಸುವವರು. ಇವರಿಗೆ ಹೊಂದಾಣಿಕೆಯಾಗುವ ಕೆಲಸವೆಂದರೆ ಸಂಕಲನ, ಬರಹ, ಮಾರ್ಕೆಟಿಂಗ್, ಮನೋರಂಜನೆ, ಸೇನೆ ಮತ್ತು ಸಾರ್ವಜನಿಕ ಸಂಪರ್ಕ.

ಕುಂಭ: ಜನವರಿ 20-ಫೆಬ್ರುವರಿ 18

ಕುಂಭ: ಜನವರಿ 20-ಫೆಬ್ರುವರಿ 18

ಈ ವ್ಯಕ್ತಿಗಳು ಎಲ್ಲಾ ರಾಶಿಚಕ್ರದ ಚಿಹ್ನೆಗಳಿಗಿಂತ ಅತ್ಯಂತ ಅರ್ಥಗರ್ಭಿತ ಎಂದು ಪರಿಗಣಿಸಲಾತ್ತದೆ. ಇದು ಬಹುಪಾಲು ಅಚ್ಚರಿಯಂತೆ ಎನಿಸಬಹುದು. ಆದರೆ ಇದು ಸತ್ಯ. ಅವರ ಒಳನೋಟಗಳು ಯಾವುದೇ ನಿರ್ದಿಷ್ಟ ಪರಿಸ್ಥಿತಿಯ ಮೂಲಕ ಮಾರ್ಗದರ್ಶನ ಮಾಡುವ ಸಾಮರ್ಥ್ಯವನ್ನು ಹೊಂದಿರುತ್ತದೆ. ನೀರಿನಿಂದ ಕೂಡಿರುವ ಚಿಹ್ನೆ ಇವರದ್ದು. ಶ್ರಮಪಟ್ಟು ಕೆಲಸ ಮಾಡುವುದರಲ್ಲಿ ಇವರದ್ದು ಎರಡನೇ ಸ್ಥಾನ ಎನ್ನಬಹುದು. ಇವರು ಅನೇಕ ಕನಸನ್ನು ಹೊಂದಿರುತ್ತಾರೆ ಅದನ್ನು ನೆರವೇರಿಸಿಕೊಳ್ಳಲು ಎಂತಹ ಕೆಲಸವನ್ನಾದರೂ ಮಾಡುತ್ತಾರೆ. ಕೈಗೆತ್ತಿಕೊಂಡ ಕನಸನ್ನು ಪೂರ್ಣಗೊಳಿಸುವಲ್ಲಿ ನಿಸ್ಸೀಮರು ಎನ್ನಬಹುದು. ಇವರು ಜೀವನದಲ್ಲಿ ಹಲವಾರು ಜನರನ್ನು ಭೇಟಿ ಮಾಡುತ್ತಾರೆ ಮತ್ತು ದೇಶ ಸುತ್ತಿ ಕಲಿಯುತ್ತಾರೆ. ಇವರ ಪ್ರವಾಸಗಳು ಇವರ ವೃತ್ತಿಗೆ ಸಹಾಯವನ್ನು ಮಾಡುತ್ತದೆ. ಜೊತೆಗೆ ಸೃಜನಶೀಲತೆಯನ್ನು ಸಹ ಹೆಚ್ಚಿಸುತ್ತದೆ ಹಾಗು ಯಶಸ್ಸನ್ನು ನೀಡುತ್ತದೆ. ಇವರು ಮೂಲತಃ ಸಂಶೋಧಕರು ಮತ್ತು ಅಸಂಪ್ರದಾಯಿಕ ಚಿಂತಕರಾಗಿರುತ್ತಾರೆ. ಇವರಿಗೆ ಹೊಸ ತಂತ್ರಜ್ಞಾನವು ಕೊಡುಗೆಯಾಗಿ ಬಂದಿರುತ್ತದೆ. ಇವರಿಗೆ ಹೊಂದಿಕೆಯಾಗುವ ವೃತ್ತಿಗಳೆಂದರೆ ಖಗೋಳಶಾಸ್ತ್ರ, ಫೋಟೋಗ್ರಾಫಿ, ವಾಯುಯಾನ ಮತ್ತು ಕಂಪ್ಯೂಟರ್ ತಂತ್ರಜ್ಞಾನ. ಇವರು ತುಂಬಾ ವಿಶ್ವಾಸಾರ್ಹ, ಪ್ರಾಯೋಗಿಕ ಮತ್ತು ಪ್ರಾಮಾಣಿಕ ವ್ಯಕ್ತಿಗಳಾಗಿರುತ್ತಾರೆ. ಅತಿರಂಜಿತ ಜೀವನಶೈಲಿ ಅಥವಾ ಆಧ್ಯಾತ್ಮಿಕತೆಯ ಸೊಬಗು ಇರುವಂತಹ ಉದ್ಯೋಗವನ್ನು ಇವರು ಇಷ್ಟಪಡುತ್ತಾರೆ. ಇವರಿಗೆ ಹೊಂದಿಕೆಯಾಗುವಂತಹ ವೃತ್ತಿಗಳೆಂದರೆ ಹಣಕಾಸು, ಲೆಕ್ಕಪತ್ರ ನಿರ್ವಹಣಿ, ಇಂಟೀರಿಯರ್ ಡಿಸೈನ್, ನರ್ಸಿಂಗ್, ಇಂಜಿನಿಯರಿಂಗ್, ಕಾನೂನು, ಮಾರ್ಕೆಟಿಂಗ್ ಮತ್ತು ಪಿಆರ್ ವೃತ್ತಿ ಮಾಡಬಹುದಾಗಿದೆ.

ಮೀನ: ಫೆಬ್ರವರಿ 18 - ಮಾರ್ಚ್ 20

ಮೀನ: ಫೆಬ್ರವರಿ 18 - ಮಾರ್ಚ್ 20

ಈ ವ್ಯಕ್ತಿಗಳು ಸ್ವಭಾವತಃ ಬಹಳ ಅರ್ಥಗರ್ಭಿತ ಮತ್ತು ಬೌದ್ಧಿಕರಾಗಿರುತ್ತಾರೆ. ಅವರು ಯಾವಾಗಲೂ ವ್ಯಕ್ತಿಗಳಂತೆ ಪ್ರತಿಬಿಂಬಿಸುವ ಚಿಂತನಶೀಲರಾಗಿದ್ದಾರೆ. ತಮ್ಮ ದಿನನಿತ್ಯದ ಜೀವನದಲ್ಲಿ ಅವರು ಭೇಟಿ ನೀಡುವ ಜನರಿಗೆ ಆಧ್ಯಾತ್ಮಿಕ ಸಂಪರ್ಕವಿದೆ ಎಂದು ಅವರು ಭಾವಿಸುತ್ತಾರೆ. ಅವರು ಯಾವಾಗಲೂ ತೆರೆದ ಹೃದಯವನ್ನು ಅನುಸರಿಸುತ್ತಾರೆ. ಅವರ ಅಂತಃಪ್ರಜ್ಞೆಯು ಅವರ ಹೃದಯದಿಂದ ನೇರವಾಗಿ ಹರಿಯುತ್ತದೆ. ಒಬ್ಬ ಸ್ವಯಂಸೇವಕರಾಗಿ ಜನರಿಗೆ ಸಹಾಯ ಮಾಡುವುದರ ಮೂಲಕ ಇವರ ವ್ಯಕ್ತಿತ್ವ ಪ್ರಕಾಶಮಯವಾಗುತ್ತದೆ. ಹಾಗೆಂದು ಸ್ವಂತ ವಿಚಾರಗಳನ್ನು ಮರೆಯಬೇಡಿ ಎಂದು ನಾವು ಹೇಳುತ್ತಿಲ್ಲ. ಸ್ವಂತ ವಿಚಾರ ಮತ್ತು ಸಮಾಜ ಎರಡನ್ನೂ ಸಮತೋಲನದಿಂದ ನಿಭಾಯಿಸಿದರೆ ಇವರಿಗೆ ಯಶಸ್ಸು ಕಟ್ಟಿಟ್ಟ ಬುತ್ತಿ. ಈ ರಾಶಿಯ ಹೆಚ್ಚಿನವರು ಹುತಾತ್ಮರಾಗುತ್ತಾರೆಂದು ಹೇಳಲಾಗುತ್ತದೆ. ಇವರು ತಮ್ಮ ಅಗತ್ಯತೆಯನ್ನು ಬದಿಗಿಟ್ಟು ಇತರರ ಅಗತ್ಯತೆಗಳನ್ನು ಮೊದಲು ಪೂರೈಸುವವರು. ಇವರಿಗೆ ಹೊಂದಿಕೆಯಾಗುವ ವೃತ್ತಿಯೆಂದರೆ ಆರೋಗ್ಯ, ಆರೈಕೆ, ಸಾಮಾಜಿಕ ಕೆಲಸ ಮತ್ತು ಲೋಕೋಪಕಾರ.

English summary

these-zodiacs-have-the-strongest-sense-intuition

Do you know that your guessing or intuition power is related to your zodiac sign? Well, there are only 5 zodiac signs which are the lucky ones that are known to possess intuitive powers of guessing what goes on in the minds of others, as they have the best and strongest intuition powers. Check out if your zodiac sign also falls in this category of having the best intuition power.
Story first published: Monday, January 1, 2018, 23:33 [IST]
Please Wait while comments are loading...
Subscribe Newsletter