ಈ ಆರು ರಾಶಿಯವರ ವರ್ತನೆ ಕ್ರೂರತೆಯಿಂದ ಕೂಡಿರುತ್ತದೆಯಂತೆ!

Posted By: Deepu
Subscribe to Boldsky

ಕೆಲವು ವ್ಯಕ್ತಿಗಳು ಏನು ಮಾತನಾಡುತ್ತಾರೆ? ಅವರ ಉದ್ದೇಶಗಳೇನು? ಎನ್ನುವುದು ಅರ್ಥವಾಗುವುದಿಲ್ಲ. ಕೆಲವೊಮ್ಮೆ ಹಿಂಸಾತ್ಮಕ ಗುಣವನ್ನು ತೋರಿಸಬಲ್ಲರು. ಈ ರೀತಿಯ ಗೊಂದಲದ ಸ್ವಭಾವ ಹಾಗೂ ವರ್ತನೆಗಳು ಇವೆ ಎಂದಾದರೆ ಅದು ಕೇವಲ ವ್ಯಕ್ತಿಯ ದೋಷವಲ್ಲ. ಅದು ಆ ವ್ಯಕ್ತಿಯನ್ನು ನಿಯಂತ್ರಿಸುವ ರಾಶಿ ಚಕ್ರದ ಪ್ರಭಾವ ಎನ್ನಬಹುದು. ಹೌದು, ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ವ್ಯಕ್ತಿಯ ವರ್ತನೆ ಹಾಗೂ ಮಾನಸಿಕ ಗುಣಗಳು ರಾಶಿಚಕ್ರ ಹಾಗೂ ಗ್ರಹಗತಿಗಳ ಪ್ರಭಾವದಿಂದ ಕೂಡಿರುತ್ತದೆ ಎನ್ನಲಾಗುವುದು.

ಹನ್ನೆರಡು ರಾಶಿಚಕ್ರಗಳಲ್ಲಿ ಕೆಲವು ಆಯ್ದ ರಾಶಿ ಚಕ್ರಗಳು ಮಾತ್ರ ಕ್ರೂರವಾದ ಅಥವಾ ಹಿಂಸಾತ್ಮಕ ವರ್ತನೆಯನ್ನು ತೋರುತ್ತವೆ. ಕೆಲವು ಸ್ವಭಾವಗಳ ಮೂಲಕ ಜನರಲ್ಲಿ ಅಹಿತಕರವಾದ ಭಾವನೆಯನ್ನು ಮೂಡಿಸುತ್ತಾರೆ. ಹಾಗಾದರೆ ಆ ಆಯ್ದ ರಾಶಿಚಕ್ರಗಳು ಯಾವವು? ಅವುಗಳ ಗುಣಗಳು ಹೇಗಿರುತ್ತವೆ ಎನ್ನುವುದನ್ನು ನೀವು ತಿಳಿದುಕೊಳ್ಳಬೇಕು ಎಂದುಕೊಂಡಿದ್ದರೆ ಮುಂದಿರುವ ವಿವರಣೆಯನ್ನು ಪರಿಶೀಲಿಸಿ...

ತುಲಾ: ಸಪ್ಟೆಂಬರ್ 23-ಅಕ್ಟೋಬರ್ 22

ತುಲಾ: ಸಪ್ಟೆಂಬರ್ 23-ಅಕ್ಟೋಬರ್ 22

ಈ ರಾಶಿಚಕ್ರದವರು ಸಾಮಾನ್ಯವಾಗಿ ಗೊಂದಲಮಯವಾದ ಸ್ವಭಾವದಿಂದ ಕೂಡಿರುತ್ತಾರೆ ಎನ್ನಲಾಗುವುದು. ಇವರ ಉದ್ದೇಶ ಇತರರನ್ನು ನೋಯಿಸುವುದಾಗಿರುವುದಿಲ್ಲ. ಆದರೆ ಕೆಲವು ಸನ್ನಿವೇಶಗಳು ಇವರನ್ನು ಕೆರಳಿಸುವಂತೆ ಮಾಡುತ್ತದೆ. ಇವರಿಗೆ ಒಂದೇ ವೇಳೆಯಲ್ಲಿ ಸಮಧಾನದ ಪ್ರವೃತ್ತಿಗೆ ತಿರುಗುವುದು ಕಷ್ಟವಾಗುವುದು.

ಕುಂಭ: ಜನವರಿ 20-ಫೆಬ್ರವರಿ 18

ಕುಂಭ: ಜನವರಿ 20-ಫೆಬ್ರವರಿ 18

ಅತ್ಯಂತ ಗೊಂದಲದ ಸ್ವಭಾವ ಹೊಂದಿರುವ ರಾಶಿಚಕ್ರಗಳಲ್ಲಿ ಇದೂ ಇಂದು. ಈ ರಾಶಿಯವರ ಸಂವೇದನೆಗಳಿ ಮಿಶ್ರ ಸಂಕೇತವನ್ನು ಹೊಂದಿರುತ್ತವೆ. ಇವರು ತಮ್ಮದೇ ಆದ ಆದರ್ಶ ನೀತಿಯಲ್ಲಿ ಒಳ್ಳೆಯ ವ್ಯಕ್ತಿಗಳಾಗಿ ವರ್ತಿಸುತ್ತಾರೆ. ಇವರ ಸಂವೇದನೆಗಳು ಬಹುಕಾಲ ಒಂದೇ ಬಗೆಯಲ್ಲಿ ಇರುವುದಿಲ್ಲ. ಆಗಾಗ ಬದಲಾವಣೆಯನ್ನು ಕಾಣುವುದು. ಇದು ಇತರರಿಗೆ ಗೊಂದಲವನ್ನು ಹುಟ್ಟಿಸುತ್ತದೆ.

ವೃಶ್ಚಿಕ: ಅಕ್ಟೋಬರ್23-ನವೆಂಬರ್ 21

ವೃಶ್ಚಿಕ: ಅಕ್ಟೋಬರ್23-ನವೆಂಬರ್ 21

ಈ ರಾಶಿಚಕ್ರದವರು ಸ್ವಭಾವತಃ ರಹಸ್ಯವಾದ ಸ್ವಭಾವವನ್ನು ಹೊಂದಿರುತ್ತಾರೆ. ಇವರು ತಮ್ಮದೇ ಆದ ರೀತಿಯಲ್ಲಿ ತಮ್ಮನ್ನು ತಾವು ಬಹಿರಂಗವಾಗಿ ವ್ಯಕ್ತ ಪಡಿಸಿಕೊಳ್ಳುತ್ತಾರೆ. ಇವರು ತಮ್ಮ ಆಸೆಗೆ ತಕ್ಕಂತೆ ಹೇಗೆ ಸಂತೋಷವಾಗಿ ಕೆಲಸ ನಿರ್ವಹಿಸಬೇಕು ಎನ್ನುವುದನ್ನು ತಿಳಿದಿರುತ್ತಾರೆ. ಅದರಂತೆಯೇ ಕೆಲಸವನ್ನು ನಿರ್ವಹಿಸುತ್ತಾರೆ. ಅದು ಇತರರಿಗೆ ಗೊಂದಲವನ್ನು ಸೃಷ್ಟಿ ಮಾಡುತ್ತದೆ.

ಮಿಥುನ: ಮೇ 21-ಜೂನ್ 20

ಮಿಥುನ: ಮೇ 21-ಜೂನ್ 20

ಈ ರಾಶಿಚಕ್ರದವರು ಏನು ಬಯಸುತ್ತಾರೆ ಎಂದು ಹೇಳಲು ಸಾಧ್ಯವಿಲ್ಲ. ಕೆಲವೊಂದು ವಿಚಾರವನ್ನು ತಮ್ಮಲ್ಲಿಯೇ ಇಟ್ಟು ಕೊಳ್ಳುತ್ತಾರೆ. ಇನ್ನೂ ಕೆಲವೊಂದು ವಿಚಾರವನ್ನು ಇತರರಲ್ಲಿ ಹಂಚಿಕೊಳ್ಳುತ್ತಾರೆ. ಹಾಗಾಗಿ ಇವರನ್ನು ಗೊಂದಲಮಯ ಸ್ವಭಾವದವರು ಎಂದು ಗುರುತಿಸಲಾಗುತ್ತದೆ.

ಕರ್ಕ: ಜೂನ್ 21-ಜುಲೈ22

ಕರ್ಕ: ಜೂನ್ 21-ಜುಲೈ22

ಈ ರಾಶಿಯವರು ಅತ್ಯಂತ ಕಾಳಜಿಯನ್ನು ಹೊಂದಿರುವವರು ಹಾಗೂ ಪ್ರಣಯ ಪೂರಕ ಸ್ವಭಾವವನ್ನು ಹೊಂದಿದವರು ಎನ್ನಲಾಗುವುದು. ಇವರು ಸಂವಹನ ಕಲೆಯನ್ನು ಅಷ್ಟಾಗಿ ತಿಳಿದಿರುವುದಿಲ್ಲ. ಇವರು ಏನು ತಿಳಿದಿದ್ದಾರೆ? ಏನು ತಿಳಿದಿಲ್ಲ? ಎನ್ನುವುದು ಜನರಿಗೆ ಬಹುಬೇಗ ಅರ್ಥವಾಗದು. ಹಾಗಾಗಿಯೇ ಇವರೊಂದು ಗೊಂದಲಮಯವಾದ ವ್ಯಕ್ತಿತ್ವ ಎಂದು ನಿರ್ಧರಿಸುತ್ತಾರೆ.

ಧನು: ನವೆಂಬರ್ 22- ಡಿಸೆಂಬರ್ 21

ಧನು: ನವೆಂಬರ್ 22- ಡಿಸೆಂಬರ್ 21

ಇವರು ತಾವು ಮಾಡುವ ಕೆಲಸದ ಬಗ್ಗೆ ಮುಂಚಿತವಾಗಿ ಯಾವುದೇ ಬಗೆಯಲ್ಲೂ ಯೋಚಿಸಿರುವುದಿಲ್ಲ. ಇವರನ್ನು ಅಜಾಗರೂಕತೆ ಹೊಂದಿರುವ ವ್ಯಕ್ತಿಗಳು ಎಂದು ಸಹ ನಿರ್ಧರಿಸಲಾಗುವುದು. ಇವರು ತಮ್ಮ ಸ್ವಾತಂತ್ರ್ಯವನ್ನು ಪ್ರೀತಿಸುತ್ತಾರೆ. ತಮ್ಮ ಕನಸನ್ನು ಬಹಿರಂಗ ಪಡಿಸುವಾಗ ಗೊಂದಲಕ್ಕೆ ಒಳಗಾದವರಂತೆ ತೋರುತ್ತಾರೆ. ಇದು ಇತರರಿಗೆ ಗೊಂದಲವನ್ನು ಉಂಟುಮಾಡುತ್ತದೆ.

English summary

these-zodiac-signs-are-known-be-the-most-confusing-ones

There are so many people that confuse us with their words and talk. These confused individuals can be related to the characteristics of their particular zodiac signs. According to astrology, there are a few zodiac signs, the individuals of which are known to give mixed signals. These signals are mostly confusing to the other person. So, find out more about the zodiac signs that are ranked as the ones having the most confused souls.