ಈ ಎಂಟು ರಾಶಿಚಕ್ರದವರು ಸುಳ್ಳು ಹೇಳುವುದರಲ್ಲಿ ಪಂಡಿತರು!

Posted By: Deepu
Subscribe to Boldsky

ಕೆಲವರು ಸುಳ್ಳನ್ನು ಕೂಡ ಸತ್ಯವೆನ್ನುವಂತೆ ಬಿಂಬಿಸಿ ಹೇಳುವಲ್ಲಿ ನಿಫುಣರಾಗಿರುತ್ತಾರೆ. ಸುಳ್ಳು ಯಾವತ್ತಿದ್ದರೂ ಸುಳ್ಳೇ. ಇದು ಸತ್ಯವಾಗಲು ಸಾಧ್ಯವಿಲ್ಲ. ಸುಳ್ಳು ಹೇಳಿದವನಿಗೆ ಯಾವಾಗಲೂ ತಾನು ಸಿಕ್ಕಿಹಾಕಿಕೊಳ್ಳುತ್ತೇನೆಂಬ ಭಯ ಕಾಡುತ್ತಾ ಇರುವುದು. ಆದರೆ ಸತ್ಯ ಹೇಳಿದವನಿಗೆ ಇಂತಹ ಭಯ ಕಾಡದು. ಆದರೆ ಸುಳ್ಳು ಹೇಳುವಲ್ಲಿ ನಿಪುಣರಾಗಲು ನಿಮ್ಮ ರಾಶಿ ಕೂಡ ಪ್ರಮುಖ ಪಾತ್ರ ನಿರ್ವಹಿಸುವುದು ಎಂದು ಹೇಳಲಾಗುತ್ತದೆ. ಇದನ್ನು ಕೇಳಿ ಅಚ್ಚರಿಯಾಗಬಹುದು.

ಆದರೆ ಇದು ನಿಜ. ಕೆಲವೊಂದು ರಾಶಿಯಲ್ಲಿ ಹುಟ್ಟಿದವರು ಯಾವ ರೀತಿ ಸುಳ್ಳು ಪೋಣಿಸುತ್ತಾರೆಂದರೆ ಅದನ್ನು ನೀವು ನಂಬಲೇಬೇಕು. ಈ ರಾಶಿಯವರು ಬೇರೆ ರಾಶಿಯವರಿಗಿಂತ ಹೆಚ್ಚಿಗೆ ಸುಳ್ಳು ಹೇಳುತ್ತಾರೆ. ರಾಶಿಯ ಪ್ರಭಾವದಿಂದಲೂ ಅವರು ಸುಳ್ಳುಗಾರರಾಗಿರುವರು. ಇದರ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಬೋಲ್ಡ್ ಸ್ಕೈ ನಿಮಗೆ ತಿಳಿಸಿಕೊಡಲಿದೆ.... 

ಮೇಷ

ಮೇಷ

ಇವರು ಸಾಮಾನ್ಯವಾಗಿ ಸುಳ್ಳು ಹೇಳುವುದಿಲ್ಲ. ಪ್ರತಿಯೊಬ್ಬರನ್ನು ಮುಖಾಮುಖಿಯಾಗಿ ಎದುರಿಸುವ ವಿಶ್ವಾಸ ಅವರಿಗಿರುತ್ತದೆ. ಜೊತೆಗೆ ಅವರು ಯಾರಿಗೂ ಭಯ ಪಡುವುದಿಲ್ಲ. ಹಾಗೊಮ್ಮೆ ಅವರು ಸುಳ್ಳು ಹೇಳುತ್ತಾರೆ ಎಂದಾದರೆ ಅದು ಯಾರನ್ನೋ ಉಳಿಸುವ ಉದ್ದೇಶವಾಗಿರುತ್ತದೆ. ಈ ರಾಶಿಯ ಜನರು ಕೊಂಚ ಸೋಮಾರಿಗಳಾಗಿದ್ದು ತಮ್ಮ ಕಾರ್ಯಗಳಿಗೆ ಎಲ್ಲಿಯವರೆಗೆ ಅಂತಿಮ ಕರೆ ಬರುವುದಿಲ್ಲವೋ ಅಲ್ಲಿಯವರೆಗೆ ಮುಂದೂಡುವ ಅಭ್ಯಾಸ ದವರಾಗಿರುತ್ತಾರೆ. ಒಂದು ವೇಳೆ ಸುಳ್ಳು ಹೇಳುವ ಸಂದರ್ಭ ಬಂದರೆ ಸಮಯಕ್ಕೊಂದು ಸುಳ್ಳು ಹೇಳಲು ಸಾಧ್ಯವಾದರೂ ಇದರ ಪರಿಣಾಮಗಳನ್ನು ಸಮರ್ಥಿಸಿಕೊಳ್ಳುವ ಚಾಕಚಕ್ಯತೆ ಇವರಿಗಿರುವುದಿಲ್ಲ. ಆದ್ದರಿಂದ ಇನ್ನೊಂದು ಸುಳ್ಳು ಹೇಳಿ ಗೋಜಲಾಗಿಸಿ ಒಟ್ಟಾರೆ ತಮ್ಮ ಕೆಲಸವಾಗುವಂತೆ ನೋಡಿಕೊಳ್ಳುತ್ತಾರೆ. ಆದರೆ ತಮ್ಮ ಕೆಲವನ್ನು ಮಾತ್ರ ಅರ್ಧಂಬರ್ಧ ಮಾಡದೇ ಪೂರ್ಣಗೊಳಿಸುವ ಜಾಯಾಮಾನ ಇವರದ್ದು. ಪ್ರಾಮಾಣಿಕತೆಯ ವಿಷಯ ಬಂದರೆ ಇವರು ಅತ್ಯಂತ ಪ್ರಾಮಾಣಿಕರಾಗಿದ್ದು ಸದಾ ಸಹಾಯ ಮಾಡುವವರೂ ಆಗಿರುತ್ತಾರೆ.

ವೃಷಭ ರಾಶಿ: (20 ಏಪ್ರಿಲ್ - 20 ಮೇ)

ವೃಷಭ ರಾಶಿ: (20 ಏಪ್ರಿಲ್ - 20 ಮೇ)

ಈ ರಾಶಿಯವರು ಅಪ್ರಾಮಾಣಿಕರಲ್ಲ. ಇವರು ಹೇಳಿದಂತಹ ಮಾತಿಗೆ ಅಂಟಿಕೊಳ್ಳುವವರೂ ಅಲ್ಲ. ಇವರು ತುಂಬಾ ಭಾವನಾತ್ಮಕ ವ್ಯಕ್ತಿಗಳೆಂದು ಗುರುತಿಸಲ್ಪಟ್ಟವರು. ಇವರು ತುಂಬಾ ಆತಂಕಿತ ಹಾಗೂ ಸಂಘರ್ಷದವರು. ಅವರ ಅಪ್ರಾಮಾಣಿಕತೆಯು ಅವರ ವಿಶ್ವಾಸಾರ್ಹತೆಯಿಂದ ಹುಟ್ಟಿರುವುದಾಗಿದೆ.

ಮಿಥುನ 22 ಮೇ -21 ಜೂನ್

ಮಿಥುನ 22 ಮೇ -21 ಜೂನ್

ಇವರು ಒಬ್ಬ ಉತ್ತಮ ಸುಳ್ಳುಗಾರರು ಎಂದು ಹೇಳಬಹುದು. ಇವರು ಎಲ್ಲವನ್ನು ನಿಜ ಹೇಳುವುದಿಲ್ಲ. ಕೆಲವು ಸಂದರ್ಭದಲ್ಲಿ ಇವರು ಸತ್ಯವನ್ನು ಹೇಳುತ್ತಾರೆ. ಸಾಮಾನ್ಯವಾಗಿ ಈ ವರ್ಗದ ಜನರು ದ್ವಂದ್ವ ಪ್ರವೃತ್ತಿಯುಳ್ಳವರಾಗಿರುತ್ತಾರೆ. ಇದೇ ಇವರನ್ನು ಅತಿ ದೊಡ್ಡ ಸುಳ್ಳು ಗಾರನಾಗಿಸಿದೆ. ಈ ಅಭ್ಯಾಸದಿಂದ ಇವರು ಸಂದರ್ಭಕ್ಕನುಸಾರವಾಗಿ ಸುಳ್ಳು ಹೇಳುತ್ತಾ ತಮ್ಮ ಬೇಳೆ ಬೇಯಿಸಿಕೊಳ್ಳುತ್ತಾರೆ. ಇತರ ರಾಶಿಗಳಿಗೆ ಹೋಲಿಸಿದರೆ ಸುಳ್ಳು ಹೇಳುವ ಪ್ರಮಾಣ ಇವರಲ್ಲಿ ಹೆಚ್ಚು.

ಕಟಕ

ಕಟಕ

ಇವರು ಎಲ್ಲಾ ಸಂದರ್ಭದಲ್ಲೂ ಸುಳ್ಳನ್ನು ಹೇಳುವುದಿಲ್ಲ. ಕೆಲವು ಸೂಕ್ತ ಸಮಯ ಅಥವಾ ಅಂದರ್ಭಗಳು ಒದಗಿ ಬಂದರೆ ಸುಳ್ಳನ್ನು ಹೇಳುವುರು. ಅನಿವಾರ್ಯತೆ ಇದೆ ಎನ್ನುವ ಸಂದರ್ಭದಲ್ಲಿ ಇವರು ಸುಳ್ಳನ್ನು ಹೇಳುವರು. ಏಡಿಯ ಶರೀರ ಹೇಗೆ ಹೊರಗೆ ದೃಢವಾಗಿದ್ದು ಒಳಗಡೆಯಿಂದ ಮೆತ್ತರಿಗುತ್ತದೆಯೋ, ಅಂತೆಯೇ ಈ ರಾಶಿಯ ಜನರು ಇತರರು ತಿಳಿದಿರುವುದಕ್ಕಿಂತಲೂ ಹೆಚ್ಚು ಮೃದುವಾಗಿರುತ್ತಾರೆ. ಸ್ವಭಾವತಃ ಇವರು ಒಳ್ಳೆಯವರಾಗಿದ್ದು ಇತರರ ಏಳ್ಗೆಯಲ್ಲಿಯೇ ತಮ್ಮ ಏಳ್ಗೆಯನ್ನು ಕಾಣುತ್ತಾರೆ. ಆದ್ದರಿಂದ ಕೇವಲ ಇತರರಿಗೆ ಒಳ್ಳೆಯದಾಗುವುದಿದ್ದರೆ ಮಾತ್ರ ಇವರು ಸುಳ್ಳು ಹೇಳುತ್ತಾರೆ. ಸಮಯ ಮತ್ತು ಸಂದರ್ಭ ನೋಡಿ ಇವರು ಸುಳ್ಳುಗಳನ್ನು ಹೇಳುತ್ತಾರಾದರೂ ಇದರ ಹಿಂದೆ ಯಾವುದೇ ದುರುದ್ದೇಶವಿಲ್ಲದೇ ಕೇವಲ ಪರಿಸ್ಥಿತಿ ನಿಭಾಯಿಸುವುದಾಗಿರುತ್ತದೆ.

ಸಿಂಹ (23 ಜುಲೈ–22 ಆಗಸ್ಟ್)

ಸಿಂಹ (23 ಜುಲೈ–22 ಆಗಸ್ಟ್)

ಇವರು ಹೆಚ್ಚಾಗಿ ಸುಳ್ಳು ಹೇಳುವುದಿಲ್ಲ. ಆದರೆ ಸತ್ಯವನ್ನು ಉತ್ಪ್ರೇಕ್ಷೆ ಮಾಡುತ್ತಾರೆ. ಹೇಳಿದಂತೆ ಮಾಡುವ ಪ್ರವೃತ್ತಿ ಇವರದ್ದಾಗಿರುತ್ತದೆ. ಇವರು ಸತ್ಯವಂತರು ಹಾಗೂ ವಿಶಿಷ್ಟ ವ್ಯಕ್ತಿಗಳು ಎಂದು ಪರಿಗಣಿಸಬಹುದು. ಇವರು ತಮ್ಮನ್ನು ತಾವು ಜಟಿಲ ಸ್ಥಿತಿಯಿಂದ ಹೊರತರುವ ಪ್ರಯತ್ನವನ್ನು ಮಾಡುತ್ತಾರೆ. ತಮ್ಮ ಗುರಿಯ ಬಗ್ಗೆ ಸ್ಪಷ್ಟ ನಿಲುವನ್ನು ಹೊಂದಿರುವ ಇವರು ಧೈರ್ಯವಂತರೂ ನೇರ ನಡವಳಿಕೆಯ ಸ್ವಭಾವದವರೂ ಆಗಿರುತ್ತಾರೆ. ಸ್ಪರ್ಧೆಗೆ ಸದಾ ಸಿದ್ಧರಿರುವ ಇವರು ಸ್ಪರ್ಧೆಯಲ್ಲಿ ಗೆಲ್ಲಲು ಸತ್ಯದ ಭಂಡಾರ ಖಾಲಿಯಾದರೆ ಸುಳ್ಳುಗಳನ್ನು ಬಳಸಲು ಹಿಂಜರಿಯುವುದಿಲ್ಲ. ಇತರರು ತಮ್ಮ ಜೀವನದಲ್ಲಿ ನಾಟಕವಾಡುವುದನ್ನು, ಸುಳ್ಳು ಹೇಳುವುದನ್ನು ಸಹಿಸದ ಇವರು ಆ ವ್ಯಕ್ತಿಗಳ ಸಂಗವನ್ನೇ ಬಿಟ್ಟುಬಿಡುತ್ತಾರೆ. ವ್ಯಂಗ್ಯವೆಂದರೆ ಇದೇ ಸುಳ್ಳುಗಳನ್ನು ಇವರೇ ಹೇಳಿ ಎದುರಿನವರು ತಮ್ಮೊಂದಿಗೆ ಸ್ನೇಹದಿಂದಿರಬೇಕೆಂದು ಬಯಸುತ್ತಾರೆ.

ಕನ್ಯಾ ರಾಶಿ: (23 ಆಗಸ್ಟ್ - 22 ಸೆಪ್ಟೆಂಬರ್)

ಕನ್ಯಾ ರಾಶಿ: (23 ಆಗಸ್ಟ್ - 22 ಸೆಪ್ಟೆಂಬರ್)

ಇವರು ಸುಳ್ಳು ಹೇಳುವುದನ್ನು ದ್ವೇಷಿಸುತ್ತಾರೆ. ಬೇರೆಯವರನ್ನು ಉಳಿಸುವ ಉದ್ದೇಶಕ್ಕೆ ಕೆಲವು ಬಾರಿ ಸುಳ್ಳು ಹೇಳಬಹುದು. ಆದರೆ ತಪ್ಪು ಮಾಡಿರುವುದಕ್ಕೆ ಬಹಳ ಚಿಂತೆ ಮಾಡುತ್ತಾರೆ. ಹಾಗೂಮ್ಮೆ ಇವರು ಸುಳ್ಳು ಹೇಳಿದರೆ ಅವರ ಮುಖದ ಭಾವನೆಯಲ್ಲಿ ತಿಳಿದುಕೊಳ್ಳಬಹುದು. ಇವರು ಸುಳ್ಳು ಹೇಳುವಾಗ ಹೆಚ್ಚು ಭಯ ಪಡುತ್ತಾರೆ.

ತುಲಾ: ಸೆಪ್ಟಂಬರ್ 24-ಅಕ್ಟೋಬರ್ 23

ತುಲಾ: ಸೆಪ್ಟಂಬರ್ 24-ಅಕ್ಟೋಬರ್ 23

ಇತರ ಎಲ್ಲಾ ರಾಶಿಗಳಿಗೆ ಹೋಲಿಸಿ ನೋಡಿದರೆ ಈ ರಾಶಿಯವರು ಹೆಚ್ಚು ಸುಳ್ಳು ಹೇಳುವವರಾಗಿರುವರು. ಕೆಟ್ಟ ಉದ್ದೇಶಗಳಿಂದಾಗಿ ಇವರು ಸುಳ್ಳು ಹೇಳುವುದಿಲ್ಲವೆನ್ನುವುದು ಪ್ರಮುಖ ವಿಚಾರ. ಯಾವುದೇ ಜಗಳ ತಡೆಯುವ ಸಲುವಾಗಿ ಇವರು ಸುಳ್ಳು ಹೆಳುತ್ತಾರೆ. ಸುಳ್ಳು ಹೇಳುವಂತಹ ನಡೆತೆಯು ತುಂಬಾ ಮುಗ್ದವೆಂದು ಭಾವಿಸುವರು ಮತ್ತು ಇತರರಿಗೆ ತೊಂದರೆ ಉಂಟು ಮಾಡುವುದರಿಂದ ಇವರು ದೂರ ಉಳಿಯುವರು.

ಮೀನ (19 ಫೆಬ್ರವರಿ–20 ಮಾರ್ಚ್)

ಮೀನ (19 ಫೆಬ್ರವರಿ–20 ಮಾರ್ಚ್)

ಇವರು ಸುಳ್ಳು ಹೇಳುವುದು ಕಡಿಮೆ. ಹಾಗೊಮ್ಮೆ ಸುಳ್ಳು ನುಡಿದರೆ ಸುಳ್ಳು ಮತ್ತು ಸತ್ಯಗಳ ನಡುವೆ ಯಾವುದು ನಿಜ? ಎಂದು ಅರಿಯುವುದು ಕಷ್ಟ. ಇವರಿಗೆ ಕೆಲವು ಸಂದರ್ಭದಲ್ಲಿ ಸುಳ್ಳು ಹೇಳಬೇಕು ಎಂದು ಎನಿಸಿದರೆ ಸರಾಗವಾಗಿ ಸುಳ್ಳು ಹೇಳುತ್ತಾರೆ. ಅದು ವ್ಯಂಗ್ಯತೆಯನ್ನು ಹೊಂದಿರುವ ಸಾಧ್ಯತೆ ಇರುತ್ತದೆ. ಅಲದೆ ಕೆಲವೊಮ್ಮೆ ಈ ವರ್ಗದ ಜನರು ದ್ವಂದ್ವ ಪ್ರವೃತ್ತಿಯುಳ್ಳವರಾಗಿರುತ್ತಾರೆ. ಇದೇ ಇವರನ್ನು ಅತಿ ದೊಡ್ಡ ಸುಳ್ಳುಗಾರನಾಗಿಸಿದೆ. ಈ ಅಭ್ಯಾಸದಿಂದ ಇವರು ಸಂದರ್ಭಕ್ಕನುಸಾರವಾಗಿ ಸುಳ್ಳು ಹೇಳುತ್ತಾ ತಮ್ಮ ಬೇಳೆ ಬೇಯಿಸಿಕೊಳ್ಳುತ್ತಾರೆ. ಇತರ ರಾಶಿಗಳಿಗೆ ಹೋಲಿಸಿದರೆ ಸುಳ್ಳು ಹೇಳುವ ಪ್ರಮಾಣ ಇವರಲ್ಲಿ ಹೆಚ್ಚು.

 
English summary

These zodiac sign peoples tells the most lies!

How good are you at lying? Well, your zodiac sign can play a role in how good you can be in lying. This sounds crazy, right? But, yes, according to astrology these signs are the best in lying. Here is a list of the best liars according to your zodiac sign. Find out about this... These people generally tend to lie more than others, and some seem naturally better than others and this is definitely due to the zodiac sign's impact on them... Check them out...