ಯಾವ ರಾಶಿಯವರು ಅತೀ ಹೆಚ್ಚು ಹಾರ್ಡ್ ವರ್ಕ್ ಮಾಡುತ್ತಾರೆ? ಇಲ್ಲಿದೆ ಡಿಟೇಲ್ಸ್

Posted By: Sushma Charhra
Subscribe to Boldsky

ಹಾರ್ಡ್ ವರ್ಕ್ ಅಂದರೆ ಕಷ್ಟಪಟ್ಟು, ಶ್ರಮಪಟ್ಟು ಕೆಲಸ ಮಾಡುವುದು ಅಷ್ಟು ಸುಲಭವಲ್ಲ. ಹೆಚ್ಚು ಶ್ರಮ ಪಟ್ಟು ದುಡಿಯುವುದಕ್ಕೆ ಯಾವುದೇ ಅಡ್ಡ ಮಾರ್ಗಗಳಿರುವುದಿಲ್ಲ ಅಂದರೆ ಕೆಲಸವನ್ನು ಸುಲಭಗೊಳಿಸಿ ಶ್ರಮ ಕಡಿಮೆ ಮಾಡಿಕೊಳ್ಳಲು ಸಾಧ್ಯವಾಗುವುದಿಲ್ಲ. ಇಂತಹ ಕೆಲಸವನ್ನು ಪ್ರತಿಯೊಬ್ಬರೂ ಉತ್ತಮ ಭವಿಷ್ಯದ ನಿರೀಕ್ಷೆ ಇಟ್ಟಿಕೊಂಡೇ ಮಾಡುತ್ತಾರೆ.

ಅದು ಕೆಲವರಿಗೆ ಕೈ ಹಿಡಿದರೆ ಇನ್ನೂ ಕೆಲವರಿಗೆ ಶ್ರಮ ಕೇವಲ ಶ್ರಮವಾಗಿಯೇ ಉಳಿದು ಬಿಡುತ್ತದೆ. ಮತ್ತಷ್ಟು ಶ್ರಮ ಪಡುವಂತಾಗುವುದೂ ಉಂಟು. ಮೂರು ವಿಧದ ಶ್ರಮದ ಚಿಹ್ನೆಗಳನ್ನು ರಾಶಿಚಕ್ರದ ಆಧಾರದಲ್ಲಿ ಹೇಳಬಹುದಂತೆ. ಹಾಗಾದ್ರೆ ನಿಮ್ಮ ರಾಶಿ ಯಾವುದು. ನೀವು ಯಾವ ರೀತಿಯ ಶ್ರಮ ಜೀವಿ ಅನ್ನುವುದನ್ನು ಈ ಕೆಳಗಿನ ರಾಶಿಚಕ್ರದ ವಿವರ ನೋಡಿ ತಿಳಿದುಕೊಳ್ಳಿ....

ಮಕರ

ಮಕರ

12 ರಾಶಿಗಳಲ್ಲಿ ಕಠಿಣ ಕೆಲಸಗಾರರು ಯಾರು ಎಂದು ನೋಡುವುದಾದರೆ ಮೊದಲಿಗೆ ನಿಲ್ಲುವುದು ಮಕರ ರಾಶಿಯವರು. ಅದು ಚಿಕ್ಕ ಕೆಲಸವೇ ಆಗಿರಲಿ ದೊಡ್ಡ ಕೆಲಸವೇ ಆಗಿರಲಿ ಇವರಿಗೆ ಅದರಿಂದ ಸುಸ್ತಾಗುವುದಿಲ್ಲ. ಇವರು ಬಹಳ ಕೆಲಸಗಾರರು ಅನ್ನುವುದಕ್ಕೆ ಮಕರ ರಾಶಿಯ ಚಿಹ್ನೆಯೇ ಸಾಕ್ಷಿ. ಮಕರ ರಾಶಿಯವರು ತಮ್ಮ ಗುರಿಯ ಬಗ್ಗೆ ಅವರ ಗಮನ ಹೆಚ್ಚು ಕೇಂದ್ರೀಕೃತವಾಗಿರುತ್ತದೆ ಮತ್ತು ಅದಕ್ಕಾಗಿ ಅವರು ಬಹಳ ಹೋರಾಟ ನಡೆಸುತ್ತಾರೆ.ಯಾವುದೇ ಕೆಲಸದಲ್ಲಾಗಲಿ ತಾವೇ ಜಯಶಾಲಿಗಳಾಗಬೇಕೆಂದು ಶ್ರಮಿಸುತ್ತಾರೆ.

ಕುಂಭ

ಕುಂಭ

ಕುಂಭ ರಾಶಿಯವರದ್ದು ನೀರು ತುಂಬಿರುವ ಕೊಡಪಾನದ ಚಿತ್ರ. ಎರಡನೇ ಸ್ಥಾನದಲ್ಲಿ ಕುಂಭ ರಾಶಿಯವರನ್ನು ನಿಲ್ಲಿಸಬಹುದು.. ಈ ರಾಶಿ ಚಕ್ರದವರು ಯಾವುದೇ ಕೆಲಸದಲ್ಲಾಗಲಿ ಹೆಚ್ಚು ಚಾಲ್ತಿಯಲ್ಲಿರುತ್ತಾರೆ. ಇವರ ಕನಸುಗಳು ಭಾರೀ ದೊಡ್ಡದು ಮತ್ತು ಕೆಲವೊಮ್ಮೆ ಅದನ್ನು ಸಾಧಿಸಲೂ ಸಾಧ್ಯವಾಗದಿರುವಷ್ಟು ಕನಸು ಕಾಣುವ ಪ್ರವೃತ್ತಿ ಇವರಲ್ಲಿರುತ್ತೆ. ಆದರೆ ಅದನ್ನು ಸಾಕಾರಗೊಳಿಸಿಕೊಳ್ಳಲು ತಮ್ಮನ್ನ ತಾವು ಬಲತುಂಬಿಕೊಂಡು ಮುನ್ನುಗ್ಗಿ ಕೆಲಸ ಮಾಡುತ್ತಾರೆ. ತಮ್ಮ ಕನಸಿನ ಕೆಲಸ ಪೂರ್ಣಗೊಳಿಸಲು ಎಷ್ಟೇ ಕಷ್ಟ ಪಡುವುದಾದರೂ ಅದಕ್ಕಿವರು ಸಿದ್ಧರಿರುತ್ತಾರೆ.

ಮೀನ

ಮೀನ

ಮೂರನೇ ಸ್ಥಾನದಲ್ಲಿ ನಿಲ್ಲುವ ಮೀನ ರಾಶಿಯವರದ್ದು ಹಗಲುಗನಸು ಹೆಚ್ಟು. ಆದರೆ ಅದನ್ನೇ ಅವರು ಅಧ್ಬುತವಾದ ಕನಸು ಎಂದು ಭಾವಿಸಿ ಶ್ರಮಿಸಿ ಸಾಕಾರಗೊಳಿಸುತ್ತಾರೆ. ಇವರು ತಮ್ಮ ಕೆಲಸವನ್ನು ಯಾವತ್ತೂ ಅಪೂರ್ಣಗೊಳಿಸುವುದಿಲ್ಲ. ಹಿಡಿದ ಕೆಲಸವನ್ನು ಸಂಪೂರ್ಣಗೊಳಿಸಿಯೇ ಸಿದ್ಧ ಅನ್ನುವ ಪ್ರವೃತ್ತಿಯವರು.

ಮೇಷ

ಮೇಷ

ಮೇಷ ರಾಶಿಯವರು ಎಲ್ಲರನ್ನೂ ಮತ್ತೂ ಎಲ್ಲದನ್ನೂ ಪ್ರೀತಿಸುವ ಮನೋಭಾವದವರು. ಋಣಾತ್ಮಕವಾಗಿ ಸಾಧಿಸಲು ಇಚ್ಛೆ ಪಡದ ಇವರು, ತಮ್ಮ ಕೆಲಸವನ್ನು ಪೂರ್ಣ ಗೊಳಿಸಲು ಬಹಳ ಶ್ರಮಿಸುತ್ತಾರೆ. ಕೆಲವೊಮ್ಮೆ ಬಹಳ ಚಾಕಚಕ್ಯತೆ ಬಳಸುವುದರಿಂದ ತಮಗೆ ಜೀವನದ ಮೇಲೆ ಪರಿಣಾಮ ಬೀರುವಂತಹ ಸಂದರ್ಬವನ್ನು ತಾವೇ ತಂದುಕೊಂಡು ಬಿಡುತ್ತಾರೆ. ಇವರು ಕೆಲಸಗಳು ಐಷಾರಾಮಿಯಾಗಿರುತ್ತೆ ಮತ್ತು ಹಾಗೇ ಇರಬೇಕು ಎಂದು ಇವರು ಬಯಸುತ್ತಾರೆ

ವೃಷಭ

ವೃಷಭ

ವೃಷಭ ರಾಶಿಯವರು ಸ್ಥಿರತೆಗೆ ಪ್ರಸಿದ್ಧಿ ಪಡೆದವರು. ಇವರಲ್ಲಿ ಎಲ್ಲರನ್ನೂ ಸೆಳೆಯುವಂತಹ ಸ್ಪೆಷಲ್ ಅಟ್ರಾಕ್ಷನ್ ಪವರ್ ಇರುತ್ತೆ. ಮತ್ತು ವಿಹಂಗಮವಾದ ದೃಷ್ಟಿಕೋನವನ್ನು ಇವರು ಹೊಂದಿರುತ್ತಾರೆ. ಇವರು ಕೊಟ್ಟರೆ ಸಂಪೂರ್ಣವಾಗಿ ಕೊಡುತ್ತಾರೆ. ಕೊಡದೆ ಇದ್ದರೆ ಏನನ್ನೂ ಕೊಡುವುದಿಲ್ಲ. ಅರ್ಧಂಬರ್ಧ ಅನ್ನೋದು ಇವರಿಗೆ ತಿಳಿದೇ ಇಲ್ಲ. ಕೆಲಸವನ್ನು ನಾಜೂಕಾಗಿ ಮಾಡುವ ಇವರು ಒಮ್ಮೊಮ್ಮೆ ಕೆಲಸದಲ್ಲಿ ಸಮತೋಲನ ಇಲ್ಲವೆಂದು ಭಾವಿಸುವುದುಂಟು.

ಮಿಥುನ

ಮಿಥುನ

ಕಷ್ಟದ ವಿಚಾರ ಬಂದಾಗ ಇವರು ಅಷ್ಟು ಸ್ಥಿರವಾಗಿರುವುದಿಲ್ಲ ಮತ್ತು ಅದನ್ನು ಸಹಿಸಿಕೊಳ್ಳುವ ಪ್ರವೃತ್ತಿಯವರು ಇವರಲ್ಲ. ಆದರೆ ಇವರದ್ದೊಂದು ಸ್ಪೆಷಲ್ ಕ್ವಾಲಿಟಿ ಇದೆ.ಏಕಕಾಲದಲ್ಲಿ ಬೇರೆಬೇರೆ ಕೆಲಸದಲ್ಲಿ ತೊಡಗಿಕೊಳ್ಳುವ ಸಾಮರ್ಥ್ಯವನ್ನು ಇವರು ಹೊಂದಿದ್ದಾರೆ. ಇವರು ಬಹಳ ವಿವೇಚನೆ ಉಳ್ಳವರಾಗಿರುತ್ತಾರೆ. ಇವರು ಯಾವುದಾದರೂ ಕೆಲಸವನ್ನು ಇಷ್ಟಪಟ್ಟರೆ, ಅದನ್ನು ಪೂರ್ಣಗೊಳಿಸಲು ಇವರು ಬೆಸ್ಟ್ ಆಗಿ ಕೆಲಸ ಮಾಡುತ್ತಾರೆ.

ವೃಶ್ಚಿಕ

ವೃಶ್ಚಿಕ

ನೋಡೋಕೆ ಹಾರ್ಡ್ ವರ್ಕ್ ಮಾಡುವವರಂತೆ ಇವರು ಕಾಣಿಸುವುದಿಲ್ಲ. ಇವರು ಭಾವನೆಗಳಿಗೆ ಹೆಚ್ಚು ಬೆಲೆ ಕೊಡುವವರು. ಆದರೆ ಹಾಗೆ ಕಾಣಿಸಿಕೊಳ್ಳದೇ ಇರುವುದು ಇವರ ಮೈನಸ್ ಪಾಯಿಂಟ್. ಕೆಲಸದ ವಿಷಯ ಬಂದಾಗ ಕೆಲಸ ಯಾವುದು ಅನ್ನುವುದಕ್ಕಿಂತ ಕೆಲಸವನ್ನು ಯಾರಿಗೊಸ್ಕರ ಮಾಡಬೇಕು ಅನ್ನುವುದನ್ನು ಹೆಚ್ಚು ಯೋಚಿಸುತ್ತಾರೆ. ಒಂದು ವೇಳೆ ಅದು ಅವರ ಪ್ರೀತಿಪಾತ್ರರ ಕೆಲಸವಾಗಿದ್ದರೆ ಇವರು ಖಂಡಿತ ಆ ಕೆಲಸವನ್ನು ಪೂರ್ಣಗೊಳಿಸುತ್ತಾರೆ.

ಸಿಂಹ

ಸಿಂಹ

ಸಿಂಹ ರಾಶಿಯವರು ಕೇವಲ ಮಹತ್ವಾಕಾಂಕ್ಷೆ ಉಳ್ಳವರು ಮಾತ್ರವಲ್ಲ ತಮ್ಮ ಶಕ್ತಿಯ ಬಗ್ಗೆ ಬಹಳ ಪ್ರೀತಿ ಉಳ್ಳವರಾಗಿರುತ್ತಾರೆ. ಇವೆರಡರ ಬಲವು ಅವರಲ್ಲೊಂದು ಪ್ರೇರಕಶಕ್ತಿಯನ್ನು ಹುಟ್ಟುಹಾಕಿರುತ್ತೆ. ಅವರು ಯಾವಾಗಲೂ ತಮ್ಮ ಕೆಲಸವು ತಮ್ಮ ಶಕ್ತಿಯ ಬಲದಿಂದಲೇ ಆಗುತ್ತೆ ಎಂದು ಭಾವಿಸುತ್ತಾರೆ ಮತ್ತು ತಮ್ಮ ಶಕ್ತಿಯ ಪ್ರಯೋಗವನ್ನು ಆಗಾಗ ತಮ್ಮ ಕೆಲಸದಲ್ಲಿ ತೋರಿಸುತ್ತಲೇ ಇರುತ್ತಾರೆ.

ಕನ್ಯಾ

ಕನ್ಯಾ

ಕನ್ಯಾ ರಾಶಿಯವರದ್ದು ಸಂಘಟಿತವಾದ ಜೀವನ. ತುಂಬಾ ಕಷ್ಟ ಪಟ್ಟು ಜೀವನ ನಡೆಸುವುದನ್ನು ಅವರು ಯಾವಾಗಲೂ ಇಷ್ಟಪಡುವುದಿಲ್ಲ.ಒಂದೇ ರೀತಿಯ ಕೆಲಸವನ್ನು ಮಾಡುತ್ತಿದ್ದರೆ ಕನ್ಯಾ ರಾಶಿಯವರಿಗೆ ಬೇಗನೆ ಬೇಸರವಾಗುತ್ತೆ. ಒಂದೇ ವಿಚಾರಕ್ಕೆ ತಮ್ಮ ಸಂಪೂರ್ಣ ಶ್ರಮವನ್ನು ಹಾಕಲು ಯಾವಾಗಲೂ ಅವರು ಇಷ್ಟಪಡುವುದಿಲ್ಲ. ಕಡಿಮೆ ಶ್ರಮದಲ್ಲಿ ಹೆಚ್ಚು ಫಲಿತಾಂಶ ಪಡೆಯಲು ಇವರು ಬಯಸುತ್ತಾರೆ ಇದೇ ಕಾರಣಕ್ಕೆ ಕೆಲವೊಮ್ಮೆ ಇವರು ತೊಂದರೆಗೆ ಒಳಗಾಗುತ್ತಾರೆ.

 ತುಲಾ

ತುಲಾ

ಪ್ರತಿಯೊಂದನ್ನೂ ಸುಲಭದಲ್ಲಿ ತೆಗೆದುಕೊಳ್ಳುವುದು ತುಲಾ ರಾಶಿಯವರ ಸ್ವಭಾವ. ಮತ್ತಷ್ಟು ಮಾಡಬೇಕು, ಇನ್ನಷ್ಟು ಕೆಲಸ ಮಾಡಬೇಕು ಅನ್ನೋ ಇವರ ಸ್ವಭಾವಕ್ಕೆ ಒಂದೇ ಒಂದು ಕಾರಣ ಎಂದರೆ ಇವರು ಬಯಸುವ ಐಷಾರಾಮಿ ಜೀವನ.ನಿಧಾನವೇ ಪ್ರಧಾನ ಅನ್ನುವಂತೆ ಆದಷ್ಟು ನಿಧಾನವಾಗಿ ಕೆಲಸ ಮಾಡಿಯಾದರೂ ತಮ್ಮ ಗುರಿಯತ್ತ ಮುನ್ನಡೆಯುವ ಪ್ರವೃತ್ತಿ ಇವರದ್ದು.

ಕರ್ಕಾಟಕ

ಕರ್ಕಾಟಕ

ಕರ್ಕಾಟಕ ರಾಶಿಯವರು ಮೂಲರೂಪಕ್ಕೆ ಎಣಿಕೆ ಮಾಡಿದರೆ ಸ್ವಲ್ಪ ಭಿನ್ನವಾಗಿರುತ್ತಾರೆ. ಪ್ರತಿ ಕೆಲಸಕ್ಕೂ ಲೆಕ್ಕಾಚಾರ ಹಾಕುವವರು ಇವರು. ತಮ್ಮ ಮುಂದಿನ ಕೆಲಸ ಮಾಡಬೇಕೆಂದರೆ ಅದರಿಂದ ಲಾಭ ಎಷ್ಟು ನಷ್ಟ ಎಷ್ಟು ಎಂದು ಯೋಚಿಸಿ ತಮ್ಮ ಎಷ್ಟು ಎಫರ್ಟ್ ಹಾಕಬೇಕು ಎಂದು ಯೋಚಿಸುತ್ತಾರೆ. ಇವರ ಪ್ರತಿ ಹೆಜ್ಜೆಯೂ ತಮ್ಮ ಮುಂದಿನ ಹೆಜ್ಜೆಗೆ ಏನು ಮಾಡಬೇಕು ಎಷ್ಟು ಮಾಡಬೇಕು ಅನ್ನುವ ಲೆಕ್ಕಾಚಾರದಲ್ಲೇ ಇರುತ್ತೆ.

ಧನು

ಧನು

ಭಾರೀ ಸೋಮಾರಿ ಸ್ವಭಾವದವರು ಇವರು. ಇಷ್ಟವಿರಲಿ, ಇಲ್ಲದೇ ಇರಲಿ ಕಠಿಣವಾಗಿ ಕೆಲಸ ಮಾಡುವ ವಿಷಯದಲ್ಲಿ ಇವರನ್ನು ಕೊನೆಯಲ್ಲೇ ಇಡಬೇಕು. ಇವರು ತಿರುಗುತ್ತಲೇ ಇರಲು ಇಷ್ಟ ಪಡುತ್ತಾರೆ. ಇವರು ಹೊಸದನ್ನು ಅನ್ವೇಷಿಸಲು ಇಷ್ಟ ಪಡುತ್ತಾರೆ. ನಿಯಮಿತವಾಗಿ ಯೋಜಿಸಿದ ಕೆಲಸವನ್ನು ಮಾಡಲು ಇವರು ಇಷ್ಟ ಪಡುವುದಿಲ್ಲ.

English summary

These Zodiac Signs Are the most Hardest workers

There are three most hardworking signs as per the Zodiac chart. Keep scrolling to know about them and each zodiac sign.