Latest Updates
-
ಹೊರಗಿನ ಜ್ಯೂಸ್ ಬಿಡಿ..!! ಬಿಸಿಲಿಗೆ ಕಿಕ್ ಕೊಡೋ ಸ್ಪೆಷಲ್ ಶರಬತ್ತುಗಳಿವು! ಮನೆಯಲ್ಲಿ ಸಿಂಪಲ್ ಆಗಿ ಮಾಡಿ -
Dum Idli: ಇದು ಬ್ರೇಕ್ ಫಾಸ್ಟ್ನ ರಾಜ! ಉಳಿದ ಇಡ್ಲಿಗಳಿಂದ ಸ್ಪೈಸಿ ದಮ್ ಇಡ್ಲಿ.. ಹೋಟೆಲ್ ಶೈಲಿಯಲ್ಲಿ ಮಾಡೋದು ಹೇಗೆ? -
ಯುಗಾದಿ ದಿನ ಈ 5 ಕೆಲಸ ಮಾಡಲೇಬೇಕು! ಪಚಡಿ ತಿನ್ನುವಾಗ ಈ ಶ್ಲೋಕ ಹೇಳಿ.. ಧರ್ಮಸಿಂಧು ರಹಸ್ಯ ಇಲ್ಲಿದೆ -
Ugadi Special Recipes: ನಿಮಿಷಗಳಲ್ಲಿ 3 ಸೂಪರ್ ರೆಸಿಪಿಗಳು! ಅಡುಗೆ ಬಾರದವರಿಗೂ ಇದು ಸುಲಭ -
ಹುಷಾರ್.. ಚೈತ್ರ ನವರಾತ್ರಿ ಬಳಿಕ ಈ ರಾಶಿಯವರಿಗೆ ಸಾಲು ಸಾಲು ಕಷ್ಟ! ಯಾರಿಗೆ ಲಾಭ, ಯಾರಿಗೆ ನಷ್ಟ ತಿಳಿಯಿರಿ -
ಯುಗಾದಿಗೆ ಈ 4 ಖಾದ್ಯಗಳನ್ನು ಮಾಡಲೇಬೇಕು! ನಿಮ್ಮ ಹಬ್ಬ ಇನ್ನಷ್ಟು ಸ್ಪೆಷಲ್.. ಸಂಪೂರ್ಣ ಲಿಸ್ಟ್ ಇಲ್ಲಿದೆ -
ಯುಗಾದಿ ದಿನ.. ಪ್ರೇಮ ಜೀವನದಲ್ಲಿ ಯಾರಿಗೆ ಬೇವು? ಯಾರಿಗೆ ಬೆಲ್ಲ? -
March 19 Horoscope: ಯುಗಾದಿ ದಿನ ಯಾರಿಗೆ ಶುಭದಿನ? -
Ugadi Wishes 2026: ಯುಗಾದಿ 2026ರ ಶುಭಾಶಯಗಳು! ಸ್ನೇಹಿತರು, ಕುಟುಂಬದವರಿಗೆ ಕಳುಹಿಸಲು ಇಲ್ಲಿವೆ 50+ ಸಂದೇಶಗಳು -
ಹಬ್ಬಕ್ಕೆ ಮಾಡಿ ಗೋಧಿ ಪಾಯಸ: ಚೂರು ಉಳಿಯದಂತೆ ಖಾಲಿ ಮಾಡೋಡು ಖಚಿತ!
ನೋಡಿ ಈ 5 ರಾಶಿಚಕ್ರದ ಜನರಿಗೆ, ಅತಿಯಾದ ನಿರಾಶೆಯ ಭಾವ ಕಾಡುತ್ತದೆಯಂತೆ
ಪ್ರತಿಯೊಬ್ಬರ ಜೀವನವು ಏರಿಳಿತದಿಂದ ಕೂಡಿರುತ್ತದೆ. ಹಾಗಾಗಿ ನಾವು ಆದಷ್ಟು ಧನಾತ್ಮಕ ಚಿಂತನೆಗಳೊಂದಿಗೆ ಮಾನಸಿಕವಾಗಿ ಹರ್ಷಚಿತ್ತದಿಂದ ಇರಬೇಕು. ಪ್ರತಿ ಬಾರಿಯೂ ವ್ಯಕ್ತಿ ಬಯಸಿದ ಯಶಸ್ಸು ಅಥವಾ ಸಂತೋಷವು ದೊರೆಯುತ್ತದೆ ಎಂದು ಹೇಳಲಾಗುವುದಿಲ್ಲ. ಜೀವನದ ಚಕ್ರ ಎನ್ನುವುದು ಒಮ್ಮೆ ಸಂತೋಷವನ್ನು ನೀಡಿದರೆ ಇನ್ನೊಮ್ಮೆ ದುಃಖವನ್ನು ತಂದೊಡ್ಡುತ್ತದೆ. ಆಗ ಸಂದರ್ಭಕ್ಕೆ ತಕ್ಕಂತೆ ನಮ್ಮನ್ನು ನಾವು ನಿಯಂತ್ರಣದಲ್ಲಿಟ್ಟು ಕೊಳ್ಳಬೇಕು. ಕಷ್ಟ ಅಥವಾ ದುಃಖದ ಸಂದರ್ಭದಲ್ಲಿಯೂ ಅತಿಯಾದ ನಿರಾಶೆಗೆ ಒಳಗಾಗದೆ ಭಾವನೆಗಳ ನಿಯಂತ್ರಣ ಸಾಮರ್ಥ್ಯ ಇರಬೇಕು.
ಕೆಲವರು ಜೀವನದಲ್ಲಿ ಸಂತೋಷ ಎದುರಾದರೆ ಸುಗಮವಾಗಿ ಜೀವನವನ್ನು ಮುಂದುವರಿಸುತ್ತಾರೆ. ಅದೇ ಅವರ ನಿರೀಕ್ಷೆಗಳು ಅಥವಾ ಬಯಕೆಗಳು ಈಡೇರದೆ ಇದ್ದಾಗ ಬಹುಬೇಗ ನಿರಾಶೆಗೆ ಒಳಗಾಗುವರು. ಯಾರು ಸಾಕಷ್ಟು ನಕಾರಾತ್ಮಕ ಚಿಂತನೆಗಳನ್ನು ಹೊಂದಿರುತ್ತಾರೆ?, ಅತಿಯಾದ ಆಶಾವಾದಿಗಳಾಗಿರುತ್ತಾರೆ?, ಯಾವುದರ ಬಗ್ಗೆಯೂ ಭರವಸೆ ಅಥವಾ ನಂಬಿಕೆ ಇರುವುದಿಲ್ಲವೋ ಅವರಿಗೆ ಅತಿಯಾದ ನಿರಾಶೆಯ ಭಾವ ಕಾಡುವುದು.
ಜ್ಯೋತೊಷ್ಯ ಶಾಸ್ತ್ರದ ಪ್ರಕಾರ ಎಲ್ಲಾ ರಾಶಿಚಕ್ರದವರಲ್ಲಿಯೂ ನಿರಾಶೆಯ ಭಾವ ಎನ್ನುವುದು ಇದ್ದೇ ಇರುತ್ತದೆ. ಆದರೆ ಕೆಲವು ರಾಶಿಚಕ್ರದವರಲ್ಲಿ ನಿರಾಶೆಯ ಭಾವದ ಪ್ರಮಾಣ ಹೆಚ್ಚಾಗಿರುತ್ತದೆ ಎನ್ನಲಾಗುವುದು. ಅವರು ಬಹುಬೇಗ ಭಾವನೆಯಲ್ಲಿ ವ್ಯತ್ಯಾಸ ಹಾಗೂ ದುಃಖದ ಸಂವೇದನೆಯನ್ನು ಕಂಡುಕೊಳ್ಳುತ್ತಾರೆ. ಇವರು ನಿರಾಶೆಗೆ ಒಳಗಾಗುವುದು ಸಹಜ ಪ್ರಕ್ರಿಯೆಯಾಗಬಹುದು. ಆದರೆ ಅದರ ನಿಯಂತ್ರಣದಲ್ಲಿಯೂ ಹೆಚ್ಚು ಗಮನನೀಡ ಬೇಕಾಗುವುದು. ಹಾಗಾದರೆ ಆ ರಾಶಿಚಕ್ರದವರು ಯಾರು? ಅವರು ಅದರ ನಿಯಂತ್ರಣಕ್ಕೆ ಯಾವ ಕ್ರಮ ಅನ್ವಯಿಸಬೇಕು? ಜೀವನದಲ್ಲಿ ಸಮತೋಲನ ಕಂಡುಕೊಳ್ಳುವುದು ಹೇಗೆ? ಎನ್ನುವುದರ ಕುರಿತು ತಿಳಿಯಲು ಮುಂದಿನ ವಿವರಣೆಯನ್ನು ಪರಿಶೀಲಿಸಿ....

ವೃಷಭ
ಈ ರಾಶಿಯ ಚಿಹ್ನೆಯನ್ನು ನಿಶ್ಚಿತ ಚಿಹ್ನೆ ಎಂದು ಹೇಳಲಾಗುವುದು. ಅನಿರೀಕ್ಷಿತ ವಿಷಯಗಳು ಸಂಭವಿಸುವುದನ್ನು ಇವರು ಇಷ್ಟಪಡುವುದಿಲ್ಲ. ಅನಿರೀಕ್ಷಿತ ಅಥವಾ ನಿರೀಕ್ಷಿತ ವಿಷಯಗಳಲ್ಲಿ ಅಡಚಣೆ ಉಂಟಾದರೆ ಸ್ವಾಭಾವಿಕವಾಗಿ ತೀವ್ರತರದ ನಿರಾಶೆಗೆ ಒಳಗಾಗುತ್ತಾರೆ. ನಿರಾಶೆಗೆ ಒಳಗಾದರೆ ಇವರಲ್ಲಿ ಮೊಂಡುತನದ ಸ್ವಭಾವ ಹೆಚ್ಚಾಗುವುದು.ಕೆಲವು ಕಠೋರ ಟೀಕೆಗಳನ್ನು ಕೈಗೊಳ್ಳುವ ಸಾಧ್ಯತೆಗಳಿರುತ್ತವೆ.

ವೃಷಭ
ಇವರು ತಮ್ಮ ಮನಃಸ್ಥಿತಿಯಲ್ಲಿ ಬದಲಾವಣೆಯನ್ನು ಕಾಣಲು ಹೊಸ ವಿಚಾರಗಳಿಗೆ ತೆರೆದುಕೊಳ್ಳಬೇಕು. ಆಗ ತಮ್ಮನ್ನು ತಾವು ಆನಂದವಾಗಿಸಿಕೊಳ್ಳಲು ಸಹಾಯವಾಗುವುದು. ಅಲ್ಲದೆ ಆಶಾವಾದವನ್ನು ಅನುಭವಿಸುವರು.
Most Read: ವೃತ್ತಿ ಜೀವನದ ಯಶಸ್ಸನ್ನು ಸೂಚಿಸುವ ಅಂಗೈ ರೇಖೆಗಳು!- ನಿಮ್ಮದೂ ಪರಿಶೀಲಿಸಿಕೊಳ್ಳಿ

ಕರ್ಕ
ಈ ರಾಶಿಯ ವ್ಯಕ್ತಿಗಳು ಅತ್ಯಂತ ಸೂಕ್ಷ್ಮ ಸ್ವಭಾವದ ವ್ಯಕ್ತಿಗಳಾಗಿರುತ್ತಾರೆ. ಹಾಗಾಗಿಯೇ ಇವರು ಯಾವುದೇ ವಿಷಯವನ್ನಾದರೂ ಬಹುಬೇಗ ನಕಾರಾತ್ಮಕವಾಗಿ ತೆಗೆದುಕೊಳ್ಳುತ್ತಾರೆ. ಜೀವನದ ಬಗ್ಗೆ ನಿರಾಶಾವಾದ ಭಾವನೆಯನ್ನು ಹೊಂದುವಾಗ ತಮ್ಮ ಮನಸ್ಸಿನ ಮಾತುಗಳನ್ನು ಅಥವಾ ವಿಚಾರಗಳನ್ನು ಮುಚ್ಚಿಡುವ ಪ್ರಯತ್ನ ಮಾಡುವರು.

ಕರ್ಕ
ಇವರಲ್ಲಿರುವ ವಿಪರೀತವಾದ ಸೂಕ್ಷ್ಮ ಸ್ವಭಾವವೇ ಅತಿಯಾದ ನಿರಾಶೆಯ ಭಾವನೆ ಬೆಳೆಯಲು ಕಾರಣವಾಗುವುದು. ಇವರು ವಿಷಯಗಳನ್ನು ಸ್ವೀಕರಿಸುವಾಗ ವಾಸ್ತವದ ಚಿಂತನೆ ನಡೆಸಬೇಕು. ಸೂಕ್ಷ್ಮತೆಯಿಂದ ಹೊರ ಬರುವ ಪ್ರಯತ್ನ ಮಾಡಿದರೆ ಜೀವನದಲ್ಲಿ ಸಾಕಷ್ಟು ಸಂತೋಷದಿಂದ ಇರುವರು.

ಕನ್ಯಾ
ಈ ರಾಶಿಚಕ್ರದವರು ಅತ್ಯಂತ ನಿರಾಶಾವಾದಿ ಚಿಹ್ನೆಗಳಲ್ಲಿ ಒಬ್ಬರು ಎನ್ನಲಾಗುವುದು. ಈ ರಾಶಿಯ ವ್ಯಕ್ತಿಗಳು ಜೀವನದಲ್ಲಿ ಪರಿಪೂರ್ಣತೆಯನ್ನು ಹೊಂದಲು ಪ್ರಯತ್ನಿಸುತ್ತಾರೆ. ಹಾಗಾಗಿ ಇವರು ಅಂದುಕೊಂಡ ವಿಚಾರ ಅಥವಾ ಜೀವನದ ಯಾವುದೇ ಸಂಗತಿಗಳು ಅಂದುಕೊಂಡ ರೀತಿಯಲ್ಲಿ ಹೋಗದೆ ಇದ್ದರೆ ಅತಿಯಾದ ನಿರಾಶೆಯ ಭಾವಕ್ಕೆ ಒಳಗಾಗುವರು.

ಕನ್ಯಾ
ಇವರು ಸಮಸ್ಯೆಗಳು ಎದುರಾದಾಗ ಅದರ ಕುರಿತು ಗಮನವನ್ನು ಕೇಂದ್ರೀಕರಿಸುವುದನ್ನು ಬಿಟ್ಟು ಪರಿಹಾರವನ್ನು ಅಳವಡಿಸಿಕೊಳ್ಳುವುದರಲ್ಲಿ ಹೆಚ್ಚಿನ ಗಮನವನ್ನು ನೀಡಿದರೆ ನಕಾರಾತ್ಮಕ ಚಿಂತನೆಗಳು ಅಥವಾ ಭಾವನೆಗಳು ದೂರ ಸರಿಯುವವು. ಜೊತೆಗೆ ಆಶಾವಾದದ ಬದುಕು ಇವರದ್ದಾಗುತ್ತದೆ.

ವೃಶ್ಚಿಕ
ಈ ರಾಶಿಯ ವ್ಯಕ್ತಿಗಳು ಪತ್ತೆದಾರರು ಎನ್ನಲಾಗುವುದು. ಇವರಲ್ಲಿ ಸತ್ಯವನ್ನು ಕಂಡುಕೊಳ್ಳುವ ಸ್ಪಷ್ಟವಾದ ಸ್ವಭಾವ ಇರುತ್ತದೆ ಎಂದು ಹೇಳಲಾಗುವುದು. ಇವರು ಸ್ವಭಾವತಃ ಅತಿಯಾದ ನಂಬಿಕೆಗೆ ಒಳಗಾಗುವರು. ಜೊತೆಗೆ ವಿಷಯಗಳ ಬಗ್ಗೆ ಸೂಕ್ತವಾದ ಕಾರ್ಯ ಸೂಚಿಯಾಗಿರಲು ಪ್ರಯತ್ನಿಸುವರು.
Most Read: ಶ್ರೀಲಂಕಾದ ಗುಹೆಯೊಂದರಲ್ಲಿ ರಾವಣನ ದೇಹವು ಇಂದಿಗೂ ಇದೆ ಎನ್ನುವ ವದಂತಿ ಇದೆ!

ವೃಶ್ಚಿಕ
ಇವರು ಎಲ್ಲಾ ವಿಚಾರದಲ್ಲೂ ಅನಗತ್ಯವಾಗಿ ತೆಗೆದುಕೊಳ್ಳುವ ನಿರ್ಣಯಗಳನ್ನು ನಿರ್ಧರಿಸುವುದನ್ನು ನಿಲ್ಲಿಸಬೇಕು. ಆಗ ಅನಗತ್ಯ ವ್ಯಸನಗಳು ನಿಲ್ಲುವುದು. ಜೊತೆಗೆ ಅನಗತ್ಯವಾಗಿ ತಳೆಯುವ ನಿರಾಶೆಯ ಭಾವವು ಕಡಿಮೆಯಾಗುವುದು.

ಮಕರ
ಈ ರಾಶಿಚಕ್ರವು ಶನಿ ಗ್ರಹದಿಂದ ಆಳಲ್ಪಡುವ ರಾಶಿಚಕ್ರ. ಇವರು ಸ್ವಭಾವತಃ ಅತ್ಯಂತ ಗಂಭೀರ ವ್ಯಕ್ತಿಗಳಾಗಿರುತ್ತಾರೆ. ಇವರ ಗಂಭೀರ ಸ್ಥಿತಿಯು ನಿರಾಶದಾಯಕ ಸ್ಥಿತಿಯನ್ನು ಹೆಚ್ಚಿಸಲು ಪ್ರಚೋದನೆ ನೀಡುವುದು. ಅಲ್ಲದೆ ಇವರ ಕೆಲವು ಯೋಜನೆಗಳು ವಿಚಿತ್ರವಾಗಿರುತ್ತವೆ ಎಂದು ಸಹ ಹೇಳಲಾಗುವುದು. ಇವರು ಬಹುತೇಕ ವಿಚಾರಗಳಲ್ಲಿ ಹಿಂದೆ ಸರಿಯಲು ಇಷ್ಟಪಡದ ವ್ಯಕ್ತಿಗಳಾಗಿರುತ್ತಾರೆ.

ಮಕರ
ಇವರ ನಿರೀಕ್ಷೆಗೆ ಹಾಗೂ ಪ್ರಗತಿಗೆ ಅಡ್ಡಿ ಉಂಟಾದಾಗ ನಿರಾಶೆಯು ಹೆಚ್ಚುವುದು. ಕೆಲಸ ಹಾಗೂ ನಿರ್ವಹಣೆಯ ವಿಚಾರದಲ್ಲಿ ಸಮತೋಲನವನ್ನು ಕಾಯ್ದುಕೊಳ್ಳಬೇಕು. ಆಗ ಸ್ವಲ್ಪ ವಿಶ್ರಾಂತಿಯು ದೊರೆಯುವುದು. ಸಣ್ಣ ಸಣ್ಣ ಬದಲಾವಣೆಗಳಿಗೆ ತಮ್ಮನ್ನು ತಾವು ತೆರೆದುಕೊಂಡರೆ ನಿರಾಶೆಯ ಭಾವ ಕಡಿಮೆಯಾಗುತ್ತಾ ಸಾಗುವುದು. ಸಕಾರಾತ್ಮಕ ಚಿಂತನೆಗಳಿಂದ ಸಂತೋಷದ ಮಾರ್ಗವನ್ನು ಕಂಡುಕೊಳ್ಳುವರು.



Click it and Unblock the Notifications











