Latest Updates
-
ಹಬ್ಬಕ್ಕೆ ಮಾಡಿ ಗೋಧಿ ಪಾಯಸ: ಚೂರು ಉಳಿಯದಂತೆ ಖಾಲಿ ಮಾಡೋಡು ಖಚಿತ! -
ಈರುಳ್ಳಿ ಬೇಡ.. ಬೆಳ್ಳುಳ್ಳಿ ಬೇಡ..!! ಬ್ರಾಹ್ಮಣ ಶೈಲಿಯ ವೆಜ್ ಕುರ್ಮಾ ಮಾಡೋದು ಹೇಗೆ? ಇಲ್ಲಿದೆ ಸೀಕ್ರೆಟ್ -
ಯುಗಾದಿ ಹಬ್ಬದಲ್ಲಿ ಮಾಡಿ ಬದನೆಕಾಯಿ ಗೊಜ್ಜು! ಅದ್ಭುತ ರುಚಿ ರೆಸಿಪಿ -
Happy Ugadi 2026: ಯುಗಾದಿ ಶುಭಾಶಯಗಳು! ನಿಮ್ಮ ಪ್ರೀತಿಪಾತ್ರರಿಗೆ ಕಳುಹಿಸಿ ಈ ಹಾರ್ಟ್ ಟಚಿಂಗ್ ಶುಭಾಶಯ, ಮೆಸೇಜ್ಗಳು -
ಮಾರ್ಚ್ 21ಕ್ಕೆ ಶನಿ ನಕ್ಷತ್ರ ಬದಲಾವಣೆ: ಈ 4 ರಾಶಿಯವರ ಜೀವನದಲ್ಲಿ ಬರಲಿದೆ ಬಯಸಿದ ಭಾಗ್ಯ! -
ಯುಗಾದಿಗೆ ಸ್ಪೆಷಲ್.. ತೆಲಂಗಾಣ ಶೈಲಿಯ ಸಾಫ್ಟ್ ನೇತಿ ಒಬ್ಬಟ್ಟು ಮಾಡಿ! ಬಾಯಲ್ಲಿ ಇಟ್ಟರೆ ಕರಗುವ ರುಚಿ -
ಮಾಮೂಲಿ ಅಲ್ಲ ಆಂಧ್ರ ಶೈಲಿಯ ಬೇವು-ಬೆಲ್ಲ ಮಾಡಿ: ಯುಗಾದಿ ಸಂಭ್ರಮ ದುಪ್ಪಟ್ಟಾಗಿಸಿ! -
ಸಮ್ಮರ್ ಸ್ಪೆಷಲ್.. ಈ ಹೊಸ ರುಚಿಯ ಕಪ್ಪು ದ್ರಾಕ್ಷಿ ಲೆಮನೇಡ್ ಮಾಡಿ! ಬೇಸಿಗೆಯಲ್ಲಿ ಕೂಲ್ ಕೂಲ್ ಆಗಿ -
Ugadi 2026: ಯುಗಾದಿ ಹಬ್ಬದಂದು ಬೇವು-ಬೆಲ್ಲ ಸವಿಯುವುದರ ವೈಜ್ಞಾನಿಕ ಕಾರಣ ಏನು ಗೊತ್ತಾ? -
ದಶಕಗಳ ಬಳಿಕ ಅಪರೂಪದ ರಾಜಯೋಗ! ಈ ರಾಶಿಗಳಿಗೆ ಹರಿದು ಬರಲಿದೆ ಸಂಪತ್ತು.. ನಿಮ್ಮ ಕಷ್ಟಗಳೆಲ್ಲಾ ದೂರ!
ವೃತ್ತಿ ಜೀವನದ ಯಶಸ್ಸನ್ನು ಸೂಚಿಸುವ ಅಂಗೈ ರೇಖೆಗಳು!- ನಿಮ್ಮದೂ ಪರಿಶೀಲಿಸಿಕೊಳ್ಳಿ
ಜ್ಯೋತಿಷಿಯ ಮುಂದೆ ಹೋಗಿ ಅಂಗೈಯನ್ನು ಹಿಡಿದಾಗ ಪ್ರತಿಯೊಬ್ಬನಿಗೂ ತನ್ನ ಮುಂದಿನ ಜೀವನ ಹಾಗೂ ವೃತ್ತಿಯಲ್ಲಿ ಎಷ್ಟರ ಮಟ್ಟಿಗೆ ಯಶಸ್ಸು ಸಿಗಲಿದೆ ಎನ್ನುವ ಪ್ರಶ್ನೆಯು ಮನಸ್ಸಿನಲ್ಲಿ ಕೊರೆಯುತ್ತಲಿರುವುದು. ಕೆಲವರಿಗೆ ಜೀವನದಲ್ಲಿ ಯಶಸ್ಸು ಸಿಗುವಂತಹ ರೇಖೆಗಳು ಅಂಗೈಯಲ್ಲಿದ್ದರೆ, ಇನ್ನು ಕೆಲವರ ವೃತ್ತಿ ಜೀವನವು ಸಫಲವಾಗುವ ರೇಖೆಗಳು ಇರುವುದು.
ಹಸ್ತಮುದ್ರಿಕಾ ಶಾಸ್ತ್ರಜ್ಞರು ಅಂಗೈಯಲ್ಲಿರುವ ರೇಖೆಗಳು ಜೀವನ ಹಾಗೂ ವೃತ್ತಿಯ ಯಶಸ್ಸನ್ನು ಹೇಗೆ ತಿಳಿಸುವುದು ಎಂದು ಹೇಳಲಿದ್ದಾರೆ. ವಿಧಿರೇಖೆ ಮತ್ತು ಸೂರ್ಯನ ರೇಖೆಯು ವ್ಯಕ್ತಿಯ ವೃತ್ತಿಯನ್ನು ನಿರ್ಧರಿಸುವಲ್ಲಿ ಪ್ರಮುಖ ಪಾತ್ರ ವಹಿಸುವುದು ಎಂದು ಹೇಳಲಾಗುತ್ತದೆ. ಈ ಲೇಖನದಲ್ಲಿ ನಾವು ಅಂಗೈಯಲ್ಲಿ ಇರುವಂತಹ ರೇಖೆಗಳನ್ನು ನೋಡಿಕೊಂಡು ಜೀವನದಲ್ಲಿ ಯಶಸ್ಸು ಪಡೆಯುವುದು ಹೇಗೆ ಎಂದು ತಿಳಿಯುವ...

ಜೀವನ ರೇಖೆಯ ಕವಲು ಗುರುವಿನ ಬೆಟ್ಟಕ್ಕೆ ಹೋದರೆ…
ವ್ಯಕ್ತಿಯೊಬ್ಬನ ಜೀವನ ರೇಖೆಯ ಕವಲು ಗುರುವಿನ ಬೆಟ್ಟದ ಕಡೆಗೆ ಹೋಗುತ್ತಲಿದ್ದರೆ, ಆ ವ್ಯಕ್ತಿಯಲ್ಲಿ ಶ್ರೇಷ್ಠ ನಾಯಕತ್ವದ ಗುಣಗಳು ಇದೆ ಎಂದು ಹೇಳಬಹುದು. ಇವು ವೃತ್ತಿ ಸಂಬಂಧ ವಿಚಾರದಲ್ಲಿ ವಿದೇಶಕ್ಕೆ ಪ್ರಯಾಣಿಸುವರು ಮತ್ತು ಇವರು ಶ್ರೇಷ್ಠ ಶಿಕ್ಷಕರಾಗುವರು.

ಜೀವನರೇಖೆಯ ಕವಲು ಧ್ವಜದ ಆಕಾರದಲ್ಲಿದ್ದರೆ…
ಜೀವನರೇಖೆಯ ಗೆರೆಯು ಧ್ವಜದ ಆಕಾರದಲ್ಲಿದ್ದರೆ ಆಗ ಆ ವ್ಯಕ್ತಿಯು ಶ್ರೇಷ್ಠ ಕವಿ ಅಥವಾ ಲೇಖನನಾಗುವನು. ಅವರಿಗೆ ಹುಟ್ಟಿನಿಂದಲೇ ಬರವಣಿಗೆ ಪ್ರತಿಭೆಯು ಬಂದಿರುವುದು.

ಜೀವನ ರೇಖೆಯು ಕವಲೊಡೆದಿದ್ದರೆ
ಜೀವನ ರೇಖೆಯು ಕವಲೊಡೆದಿದ್ದರೆ ಆಗ ಆ ವ್ಯಕ್ತಿಗಳು ಅಷ್ಟು ಅದೃಷ್ಟವಂತರಲ್ಲ. ಇವರು ಜೀವನದಲ್ಲಿ ತುಂಬಾ ಕಷ್ಟಪಡುವರು. ಇವರಿಗೆ 30ರ ಹರೆಯದ ಬಳಿಕವೇ ಯಶಸ್ಸು ಎನ್ನುವುದು ಸಿಗುವುದು.

ಜೀವನ ರೇಖೆಯ ಕವಲು ಶನಿಯ ಬೆಟ್ಟಕ್ಕೆ ಹೋಗುತ್ತಲಿದ್ದರೆ…
ಜೀವನ ರೇಖೆಯ ಕವಲು ಶನಿಯ ಬೆಟ್ಟಕ್ಕೆ ಹೋಗುತ್ತಲಿದ್ದರೆ ಆಗ ಆ ವ್ಯಕ್ತಿಯು ಕಲ್ಲಿದ್ದಲು, ಕಟ್ಟಡ ಗುತ್ತಿಗೆ, ಯಂತ್ರೋಪಕರಣ, ತೈಲ ಅಥವಾ ಚರ್ಮದ ಉದ್ಯಮದಲ್ಲಿ ಯಶಸ್ಸನ್ನು ಪಡೆಯುತ್ತಾನೆ.

ಜೀವನರೇಖೆಯ ಕವಲು ಸೂರ್ಯನ ಬೆಟ್ಟಕ್ಕೆ ಹೋಗುತ್ತಲಿದ್ದರೆ…
ಜೀವನರೇಖೆಯ ಕವಲು ಸೂರ್ಯನ ಬೆಟ್ಟಕ್ಕೆ ಸಾಗುತ್ತಲಿದ್ದರೆ ಆಗ ಆ ವ್ಯಕ್ತಿಯು ಮನೋರಂಜನಾ ಕ್ಷೇತ್ರದಲ್ಲಿ ದೊಡ್ಡ ಕಲಾವಿದನಾಗುವನು. ಇಂತಹ ವ್ಯಕ್ತಿಗಳು ಸರ್ಕಾರಿ ಉದ್ಯೋಗದಲ್ಲಿ ಉನ್ನತ ಸ್ಥಾನವು ದೊರಕುವುದು.

ಜೀವನರೇಖೆ ಕವಲು ಬುಧನ ಬೆಟ್ಟಕ್ಕೆ ಸಾಗುತ್ತಲಿದ್ದರೆ…
ಜೀವನರೇಖೆಯ ಕವಲು ಬುಧನ ಬೆಟ್ಟಕ್ಕೆ ಸಾಗುತ್ತಲಿದ್ದರೆ ಇಂತಹ ವ್ಯಕ್ತಿಯು ಗಣಿತ ಹಾಗೂ ಲೆಕ್ಕಾಚಾರದಲ್ಲಿ ತುಂಬಾ ಶ್ರೇಷ್ಠನಾಗಿರುವನು. ಇಂತಹ ವ್ಯಕ್ತಿಗಳು ಸಿಎ, ಸಂವಹನ ಮಾಧ್ಯಮ ಹಾಗೂ ಲೆಕ್ಕಪರಿಶೋಧಕರಾಗಿ ಯಶಸ್ಸು ಗಳಿಸುವರು. ಜೀವನರೇಖೆಯ ಕವಲು ಸೂರ್ಯನ ಬೆಟ್ಟಕ್ಕೆ ಹೋಗುತ್ತಲಿದ್ದರೆ...ಇನ್ನು ಅಂಗೈಯಲ್ಲಿನ ರೇಖೆಗಳು ನಮ್ಮ ಜೀವನದ ಪ್ರತಿಯೊಂದು ಕಷ್ಟ-ಸುಖವನ್ನು ಬಿಚ್ಚಿಡುತ್ತದೆ ಎಂದು ಜೋತಿಷ್ಯಶಾಸ್ತ್ರವು ಹೇಳುತ್ತದೆ. ಅಂಗೈಯಲ್ಲಿರುವ ಪ್ರತಿಯೊಂದು ರೇಖೆಯು ನಮ್ಮ ಜೀವನದ ಒಂದೊಂದು ವಿಷಯವನ್ನು ಬಿಚ್ಚಿಡುತ್ತದೆ. ಅದೃಷ್ಟ, ದುರಾದೃಷ್ಟ, ಸುಖ-ದುಃಖ ಹೀಗೆ ಪ್ರತಿಯೊಂದು ನಮ್ಮ ಅಂಗೈಯಲ್ಲಿ ಕಾಣಿಸುತ್ತಾ ಇರುತ್ತದೆ. ಆದರೆ ಇದು ಎಲ್ಲರಿಗೂ ಅರ್ಥ ಮಾಡಿಕೊಳ್ಳಲು ಸಾಧ್ಯವಾಗುವುದಿಲ್ಲ. ಅದರ ಬಗ್ಗೆ ಸರಿಯಾಗಿ ತಿಳಿದುಕೊಂಡು ಕಲಿತುಕೊಂಡಿರುವವರಿಗೆ ಮಾತ್ರ ಇದನ್ನು ಅರ್ಥ ಮಾಡಿಕೊಳ್ಳಲು ಸಾಧ್ಯ. ಅದರಲ್ಲೂ ಅಂಗೈಯಲ್ಲಿ ಇರುವಂತಹ ಮದುವೆ ರೇಖೆಯಿಂದ ವೈವಾಹಿಕ ಜೀವನ, ಪ್ರೀತಿ ಮತ್ತು ಸಂಬಂಧ ಇತ್ಯಾದಿ ಬಗ್ಗೆ ತಿಳಿದುಕೊಳ್ಳಬಹುದು... ಮುಂದೆ ಓದಿ

ರೇಖೆಯು ನೇರವಾಗಿರುವುದು ಯಾವಾಗ?
ನೇರ ಹಾಗೂ ಉದ್ದವಾಗಿರುವಂತಹ ಮದುವೆಯ ರೇಖೆಯು ವ್ಯಕ್ತಿಯ ದೀರ್ಘ ಪ್ರೀತಿಯ ಜೀವನದ ಬಗ್ಗೆ ಹೇಳುತ್ತದೆ. ಅವರಿಗೆ ಜೀವನದ ಬಗ್ಗೆ ಫ್ಯಾಷನ್ ಇರುತ್ತದೆ ಮತ್ತು ಕೌಟುಂಬಿಕ ಜೀವನ ಸಂತೋಷದಿಂದ ಕೂಡಿರುತ್ತದೆ. ಅಂಗೈಯಲ್ಲಿ ಒಂದೇ ಮದುವೆಯ ರೇಖೆಯು ದೀರ್ಘ ಹಾಗೂ ಉದ್ದವಾಗಿ ಇದು ಸೂರ್ಯನ ರೇಖೆಗೆ ಸ್ಪರ್ಶಿಸುತ್ತಾ ಇದ್ದರೆ ಇವರು ಕೇವಲ ವೈವಾಹಿಕ ಜೀವನದಲ್ಲಿ ಸಂತೋಷವನ್ನು ಕಾಣುವುದು ಮಾತ್ರವಲ್ಲದೆ ಮದುವೆ ಬಳಿಕ ದೊಡ್ಡ ಯಶಸ್ಸನ್ನು ಪಡೆಯುತ್ತಾರೆ.

ರೇಖೆಯು ಸಣ್ಣದಾಗಿದ್ದರೆ
ಮದುವೆ ರೇಖೆಯು ತುಂಬಾ ಸಣ್ಣದಾಗಿದ್ದರೆ ಆ ವ್ಯಕ್ತಿಯು ವಿರುದ್ಧ ಲಿಂಗದ ವ್ಯಕ್ತಿಯ ಕಡೆ ಹೆಚ್ಚು ಆಕರ್ಷಣೆ ಹೊಂದಿಲ್ಲವೆಂದು ಹೇಳಬಹುದು. ರೇಖೆಯಲ್ಲಿ ಆಳವಿಲ್ಲದೆ ಇದ್ದರೆ ವಿರುದ್ಧ ಲಿಂಗವನ್ನು ಪಡೆಯುವ ತಾಳ್ಮೆಯನ್ನು ಕಳಕೊಂಡಿದ್ದಾರೆ ಎನ್ನಬಹುದು. ಅವರು ಆಳವಾಗಿ ಪ್ರೀತಿಯಲ್ಲಿ ಮುಳುಗುವುದು ತುಂಬಾ ಕಷ್ಟ. ಇವರು ತುಂಬಾ ವಿಳಂಬವಾಗಿ ಮದುವೆಯಾಗುತ್ತಾರೆ.

ರೇಖೆಯು ವಕ್ರವಾಗಿ ಕೆಳಮುಖವಾಗಿದ್ದರೆ
ಈ ಚಿತ್ರದಲ್ಲಿ ತೋರಿಸಿರುವಂತೆ ಮದುವೆ ರೇಖೆಯು ಅಂತ್ಯದಲ್ಲಿ ಕೆಳಮುಖವಾಗಿ ಸಾಗಿದರೆ ಅದು ಒಳ್ಳೆಯ ಸೂಚನೆಯಲ್ಲ. ಸಂಗಾತಿಯು ಅವರಿಗಿಂತ ಮೊದಲು ಸಾಯುತ್ತಾರೆ ಎನ್ನುವುದು ಇದರ ಸೂಚನೆಯಾಗಿದೆ. ವಕ್ರವಾಗಿ ಒಮ್ಮೆಲೇ ಕೆಳಮುಖವಾಗಿದ್ದರೆ ಸಂಗಾತಿಗೆ ಯಾವುದಾದರೂ ಸಂಕಷ್ಟ ಎದುರಾಗಬಹುದು ಎಂದು ಹೇಳಲಾಗುತ್ತದೆ. ಇದನ್ನು ಹೊರತುಪಡಿಸಿ ಮದುವೆಯ ಕಿರಿಕಿರಿ ಮತ್ತು ಸಂಗಾತಿ ಜತೆ ವ್ಯಕ್ತಿತ್ವದ ಜಗಳವನ್ನು ಇದು ತೋರಿಸುತ್ತದೆ.

ರೇಖೆಯು ವಕ್ರವಾಗಿ ಮೇಲ್ಮುಖವಾಗಿ ಸಾಗಿದಾಗ
ಮದುವೆಯ ರೇಖೆಯು ವಕ್ರವಾಗಿ ಮೇಲ್ಮುಖವಾಗಿ ಸಾಗಿದಾಗ ಆ ವ್ಯಕ್ತಿಯ ವೈವಾಹಿಕ ಜೀವನದಲ್ಲಿ ನೆಲೆನಿಂತಿದ್ದಾನೆ ಮತ್ತು ಪ್ರೀತಿಯನ್ನು ಕಂಡುಕೊಂಡಿದ್ದಾನೆ ಎನ್ನಬಹುದು. ಅವರು ಯಾವತ್ತೂ ತಮ್ಮ ಆರ್ಥಿಕತೆ ಬಗ್ಗೆ ಚಿಂತೆ ಮಾಡುವುದಿಲ್ಲ ಮತ್ತು ಸಂಗಾತಿ ಜತೆಗೆ ಸೇರಿಕೊಂಡು ಶ್ರೀಮಂತ ಜೀವನವನ್ನು ತಮ್ಮದಾಗಿಸಿಕೊಳ್ಳುತ್ತಾರೆ. ಮದುವೆ ರೇಖೆಯು ಮೇಲಕ್ಕೆ ಹೋದಷ್ಟು ಆ ವ್ಯಕ್ತಿಯು ಸಂತೋಷವಾಗಿರುತ್ತಾನೆ.

ಈ ನಿರ್ದೇಶನದಲ್ಲಿ ಕವಲೊಡೆದಿದ್ದರೆ......
ರೇಖೆಯು ಆರಂಭದಲ್ಲೇ Y ಆಕಾರದಲ್ಲಿ ಕವಲೊಡೆದಿದ್ದರೆ ಇದು ತುಂಬಾ ಕೆಟ್ಟ ಸಂಕೇತವಾಗಿದೆ. ಇದು ಸಂಗಾತಿಯಿಂದ ಬೇರ್ಪಡುವ ಅಥವಾ ವಿಚ್ಛೇದನದ ಸೂಚನೆಯಾಗಿದೆ. ಕವಲು ದೊಡ್ಡದಾಗಿರದಿದ್ದರೆ ಅದು ಅಷ್ಟು ಕೆಟ್ಟದೇನಲ್ಲ. ಸ್ವಲ್ಪ ಸಮಯ ದೂರವಿದ್ದ ಬಳಿಕ ಮತ್ತೆ ಜತೆಯಾಗುವುದನ್ನು ಇದು ತೋರಿಸುತ್ತದೆ.

ಬೇರೆ ದಾರಿಯಲ್ಲಿ ಕವಲೊಡೆದಿದ್ದರೆ.....
ರೇಖೆಯು ಅಂತ್ಯದಲ್ಲಿ ಕವಲೊಡೆದಿದ್ದರೆ ಆಗ ವ್ಯಕ್ತಿಯ ವೈವಾಹಿಕ ಜೀವನವು ತುಂಬಾ ಸಮಸ್ಯೆಗಳನ್ನು ಎದುರಿಸಲಿದೆ ಮತ್ತು ವಿಚ್ಛೇದನವಾಗುವ ಸಾಧ್ಯತೆಯಿದೆ ಎನ್ನಬಹುದು. ಅವರ ಸಂಪೂರ್ಣ ಜೀವನವು ಗೊಂದಲದಲ್ಲೇ ನಿಂತಿರುತ್ತದೆ.

ಮದುವೆ ರೇಖೆ ತುಂಬಾ ಸಣ್ಣದಾಗಿ ಮೇಲೆ ಹಾಗೂ ಕೆಳಗಿದ್ದರೆ
ಮದುವೆ ರೇಖೆಯ ಮೇಲ್ಭಾಗ ಅಥವಾ ಕೆಳಭಾಗದಲ್ಲಿ ಸಣ್ಣ ರೇಖೆಯಿದ್ದರೆ ಆ ವ್ಯಕ್ತಿಯು ಹಲವಾರು ಜಗಳ ಮಾಡಿರುತ್ತಾನೆ, ಸಂಬಂಧವು ಚೆನ್ನಾಗಿರುವುದಿಲ್ಲ ಮತ್ತು ಆತನ ಸ್ವ ನಡತೆಯು ಸರಿಯಾಗಿರುವುದಿಲ್ಲ. ಅವರು ಬೇಗನೆ ಅನಾರೋಗ್ಯಕ್ಕೆ ಒಳಗಾಗುತ್ತಾರೆ.

ಮದುವೆ ರೇಖೆಯು ಅಲೆಅಲೆಯಾಗಿದ್ದಾಗ
ಮದುವೆ ರೇಖೆಯು ಅಲೆಅಲೆಯಾಗಿ ಇದ್ದಾಗ ಆ ವ್ಯಕ್ತಿಯು ಭಾವನಾತ್ಮಕವಾಗಿ ಅಥವಾ ವೈವಾಹಿಕ ಜೀವನದಲ್ಲಿ ಸಮಸ್ಯೆಯನ್ನು ಎದುರಿಸುತ್ತಾನೆ. ಅವರು ಮೊಂಡುತನ, ನಿರ್ದಯಿ ಮತ್ತು ಗೃಹವಿರಹಿಯಾಗಿರುತ್ತಾರೆ. ಇದರಿಂದ ಅವರು ಬೇಗನೆ ಸಂಗಾತಿಯಿಂದ ದೂರವಾಗುತ್ತಾರೆ ಅಥವಾ ವಿಚ್ಛೇದನ ಪಡೆಯುತ್ತಾರೆ.

ಸಮಾನಾಂತರ ರೇಖೆಗಳು
ಉದ್ದದಲ್ಲಿ ವ್ಯತ್ಯಾಸವಿರುವಂತಹ ಎರಡು ಸಮಾನಾಂತರ ಮದುವೆ ರೇಖೆಗಳೂ ಇದ್ದರೆ ಆಗ ವ್ಯಕ್ತಿಯು ತ್ರಿಕೋನ ಪ್ರೇಮದ ಪರಿಸ್ಥಿತಿಯಲ್ಲಿ ಸಿಲುಕುತ್ತಾನೆ.

ಈ ಹಾದಿಯಲ್ಲಿ ಸಮಾನಾಂತರ ರೇಖೆಗಳು ಇದ್ದರೆ
ಎರಡು ಮದುವೆ ರೇಖೆಗಳಲ್ಲಿ ಒಂದು ಉದ್ದಗೆ ಮತ್ತೊಂದು ಗಿಡ್ಡದಾಗಿದ್ದರೆ ಮತ್ತು ಆ ರೇಖೆಗಳು ಸಮಾನಾಂತರವಾಗಿ ಇರದಿದ್ದರೆ ಇದು ವಿಚ್ಛೇದನ ಮತ್ತು ಸಂಗಾತಿಯಿಂದ ದೂರವಾಗುವುದನ್ನು ಸೂಚಿಸುವುದು.

ಮೂರು ಮದುವೆ ರೇಖೆಗಳು
ವ್ಯಕ್ತಿಯ ಅಂಗೈಯಲ್ಲಿ ಮೂರು ಮದುವೆ ರೇಖೆಗಳೂ ಇದ್ದರೆ ಆ ವ್ಯಕ್ತಿಯು ಭಾವನಾತ್ಮಕವಾಗಿ ಮಿಶ್ರವಾಗಿರುತ್ತಾನೆ ಮತ್ತು ದುರ್ಬಲ ನೈತಿಕ ಪರಿಕಲ್ಪನೆಯನ್ನು ಹೊಂದಿರುತ್ತಾನೆ. ಜೀವನದ ಬಗ್ಗೆ ಅವರ ಕಲ್ಪನೆ ತುಂಬಾ ಬಡವಾಗಿರುತ್ತದೆ. ಅವರು ನಿಜವಾಗಿಯೂ ಪ್ರತಿಭಾವಂತರು, ರೋಮ್ಯಾಂಟಿಕ್ ಮತ್ತು ವಿರುದ್ಧ ಲಿಂಗದ ಬಗ್ಗೆ ಫ್ಯಾಷನ್ ಹೊಂದಿರುತ್ತಾರೆ.



Click it and Unblock the Notifications











