For Quick Alerts
ALLOW NOTIFICATIONS  
For Daily Alerts

  ರಾಶಿ ಭವಿಷ್ಯ: ಪ್ರತಿಯೊಂದು ರಾಶಿಯವರ ಇನ್ನೊಂದು ಮುಖದ ಪರಿಚಯ

  By Deepu
  |

  ಪ್ರತಿಯೊಬ್ಬರು ಧನಾತ್ಮಕ ಮತ್ತು ಋಣಾತ್ಮಕ ಗುಣವನ್ನು ಹೊಂದಿರುತ್ತಾರೆ. ತಮ್ಮ ವ್ಯಕ್ತಿತ್ವದಲ್ಲಿ ಇರುವ ಸಾಮಥ್ರ್ಯ ಮತ್ತು ದೌರ್ಬಲ್ಯದ ಆಧಾರದ ಮೇಲೆಯೇ ಜೀವನದಲ್ಲಿ ಏಳಿಗೆಯನ್ನು ಕಾಣುತ್ತಾರೆ. ಅಂತೆಯೇ ನಾವು ಯಾವಾಗಲೂ ಧನಾತ್ಮಕ ಅಥವಾ ಉತ್ತಮವಾದ ವಿಚಾರಗಳ ಕುರಿತಾಗಿಯೇ ಹೆಚ್ಚು ಗಮನ ನೀಡುವುದು ಸಹಜ. ನಾವು ಹೆಚ್ಚು ಪ್ರಾಮುಖ್ಯತೆಯನ್ನು ಪಡೆದಿಲ್ಲ ಎಂದು ತಿಳಿದಿರುತ್ತೇವೋ ಅದು ಕೆಲವೊಮ್ಮೆ ನಮಗೆ ವಿಶೇಷ ಫಲವನ್ನು ನೀಡುವ ಸಾಧ್ಯತೆಗಳಿರುತ್ತವೆ.

  ಎಲೆಮರೆಯ ಕಾಯಂತೆ ಇರುವ ವ್ಯಕ್ತಿಯ ಕೆಲವು ಗುಣಗಳು ವಿಶೇಷತೆಯನ್ನೂ ನೀಡುವುದು. ಕೆಲವೊಮ್ಮೆ ನಕಾರಾತ್ಮಕ ವಿಚಾರಗಳನ್ನು ಪ್ರತಿಬಿಂಬಿಸಬಹುದು. ಇಂತಹ ಗುಣಗಳು ಕೇವಲ ಸೀಮಿತ ವ್ಯಕ್ತಿಗಳಲ್ಲಿ ಅಡಕವಾಗಿರುವುದಿಲ್ಲ. ಪ್ರತಿ 12 ರಾಶಿಚಕ್ರದವರಲ್ಲೂ ಇಂತಹ ಗುಣಗಳು ಇರುತ್ತವೆ ಅದನ್ನು ನಾವು ಗುರುತಿಸುವ ಅಥವಾ ತಿಳಿದುಕೊಳ್ಳುವ ಪ್ರಯತ್ನ ಮಾಡಬೇಕು. ಆಗಲೇ ನಮಗೆ ಯಾವುದು ಹೆಚ್ಚು ವಿಶೇಷವಾದದ್ದು? ಹಾಗೂ ವ್ಯಕ್ತಿಯ ಸ್ವಭಾವ ಅರಿವಿಗೆ ಬರುವುದು. ನಿಮಗೂ ಈ ವಿಚಾರದ ಕುರಿತು ಇನ್ನಷ್ಟು ತಿಳಿದುಕೊಳ್ಳಲು ಮುಂದಿರುವ ವಿವರಣೆಯನ್ನು ಅರಿಯಿರಿ... 

  ಮೇಷ

  ಮೇಷ

  ಈ ರಾಶಿಯವರು ಶಕ್ತಿಯ ಸಮೃದ್ಧತೆಯನ್ನು ಹೊಂದಿರುತ್ತಾರೆ. ಉತ್ತಮ ಜೀವನ ನಡೆಸಬಲ್ಲರು. ಇವರು ಚಾಲಿತ ಮತ್ತು ಭಾವೋದ್ರಿಕ್ತ ಸ್ವಭಾವದವರು ಎನ್ನಬಹುದು. ಇವರ ಪ್ರೇರಣೆ ಮಹತ್ವ ಪೂರ್ಣದ್ದಾಗಿರುತ್ತದೆ. ಇವರು ಇರುವ ಜಾಗದಲ್ಲಿ ಬೆಳಕಿರುವಂತೆ ಅಥವಾ ಸಂತೋಷ ಇರುವಂತೆ ನೋಡಿಕೊಳ್ಳುವರು. ಉತ್ತಮ ಆತ್ಮವಿಶ್ವಾಸ ಮತ್ತು ಇಷ್ಟಕ್ಕೆ ಅನುಸಾರವಾಗಿ ನಡೆದುಕೊಳ್ಳುವ ವ್ಯಕ್ತಿಗಳು ಎನ್ನಬಹುದು. ಇವರು ಪರಿಸ್ಥಿತಿಯನ್ನು ಸೂಕ್ತ ರೀತಿಯಲ್ಲಿ ಎದುರಿಸುವರು. ಅಲ್ಲದೆ ಯಾವುದೇ ಕಾರಣಕ್ಕೂ ಸವಾಲುಗಳಿಂದ ದೂರ ಸರಿಯುವುದಿಲ್ಲ.

  ಮೇಷ ರಾಶಿಯವರ ಇನ್ನೊಂದು ಮುಖ

  ಮೇಷ ರಾಶಿಯವರ ಇನ್ನೊಂದು ಮುಖ

  ಈ ರಾಶಿಯವರ ನಕಾರಾತ್ಮಕ ಗುಣಗಳೆಂದರೆ ಸುಲಭವಾಗಿ ಸಿಟ್ಟಿಗೇಳುವುದು. ಬಹಳ ಮೂಡಿ ಮತ್ತು ಆಕ್ರಮಣಶೀಲರೂ ಹೌದು. ತಾವು ಅಂದುಕೊಂಡಂತೆ ಕೆಲಸ ನಡೆಯದಿದ್ದರೆ ಬಹುಬೇಗ ಕೋಪಕ್ಕೆ ಒಳಗಾಗುತ್ತಾರೆ. ತಮ್ಮ ಕಷ್ಟಗೊಂದಿಗೆ ಇತರರಲ್ಲೂ ಸಮಸ್ಯೆಯನ್ನು ಬಯಸುವರು. ತಮ್ಮ ಬೆಂಕಿಯಿಂದ ಇತರರಿಗೆ ಬೆಳಕಾಗುವಂತೆ ಮಾಡುವರು.

  ವೃಷಭ

  ವೃಷಭ

  ಈ ರಾಶಿಯವರು ತಮ್ಮ ಜೀವನದಲ್ಲಿ ಸ್ಥಿರತೆಯನ್ನು ಕಾಯ್ದುಕೊಳ್ಳಲು ಬಹಳ ಕಷ್ಟಪಟ್ಟು ಕೆಲಸ ಮಾಡುತ್ತಾರೆ. ಇವರು ತಮ್ಮ ಪ್ರೀತಿಪಾತ್ರರಿಗೆ ಹೆಚ್ಚು ಸಮಯವನ್ನು ನೀಡುವರು. ಅಲ್ಲದೆ ತಮ್ಮ ಪ್ರೀತಿಗೆ ನಿಷ್ಠಾವಂತರಾಗಿ ಇರುವರು. ಜೀವನದಲ್ಲಿ ಉತ್ತಮ ವಿಷಯಗಳನ್ನು ಪ್ರೀತಿಸುವ ಇವರು ಕಠಿಣ ಕೆಲಸಗಳನ್ನು ಮಾಡುವರು. ಈ ವ್ಯಕ್ತಿಗಳು ಪ್ರೀತಿಪಾತ್ರರು, ವಿಶ್ವಾಸಾರ್ಹರು ಮತ್ತು ಯೋಗ್ಯ ವ್ಯಕ್ತಿಗಳು ಎಂದು ಹೇಳಬಹುದು.

  ವೃಷಭ ರಾಶಿಯವರ ಇನ್ನೊಂದು ಮುಖ

  ವೃಷಭ ರಾಶಿಯವರ ಇನ್ನೊಂದು ಮುಖ

  ಈ ರಾಶಿಯವರಲ್ಲಿ ಬಹಳ ಮೊಂಡುತನವಿರುತ್ತದೆ. ಇವರು ಅಷ್ಟು ಸುಲಭವಾಗಿ ರಾಜಿಯಾಗದವರು ಎನ್ನಬಹುದು. ಇವರು ಬಹಳಷ್ಟು ಸ್ವಾರ್ಥಿಯಾಗಿರುತ್ತಾರೆ. ಇವರು ಹೆಚ್ಚು ತಮಾಷೆಯಾಗಿ ಇರಲು ನೋಡುತ್ತಾರೆ.

  ಮಿಥುನ

  ಮಿಥುನ

  ಈ ರಾಶಿಚಕ್ರವನ್ನು ಅವಳಿಗಳು ಎಂದು ಕರೆಯಲಾಗುತ್ತದೆ. ಹಾಗಾಗಿ ಈ ರಾಶಿಚಕ್ರದವರನ್ನು ಧ್ರುವೀಣರು ಎಂದು ಹೇಳಬಹುದು. ತೆರೆದ ಮನಸ್ಸಿನವರು ಹಾಗೂ ಉತ್ತಮ ಸ್ನೇಹಿತರಾಗಿರುತ್ತಾರೆ. ಸಾಮಾನ್ಯವಾಗಿ ಇವರು ಸಾಹಸ ಕೆಲಸಗಳಿಗೆ ಮುಂದಾಗುತ್ತಾರೆ.

  ಮಿಥುನ ರಾಶಿಯವರ ಇನ್ನೊಂದು ಮುಖ

  ಮಿಥುನ ರಾಶಿಯವರ ಇನ್ನೊಂದು ಮುಖ

  ಇವರ ಇನ್ನೊಂದು ಮುಖದ ಬಗ್ಗೆ ಹೇಳಬೇಕೆಂದರೆ ಅತ್ಯಂತ ವಿಶ್ರಾಂತಿ ಪ್ರಿಯರಾಗಿರುತ್ತಾರೆ. ಇವರು ಒತ್ತಡಕ್ಕೆ ಒಳಗಾದಾಗ ಅಥವಾ ನಿರುತ್ಸಾಹಕ್ಕೆ ಒಳಗಾದಾಗ ಇಲ್ಲವೇ ಯಾವುದಾದರೂ ವಿಶೇಷ ವಿಚಾರದಲ್ಲಿ ಆಸಕ್ತಿ ಹೊಂದಿರುವಾಗ ಅವುಗಳಲ್ಲಿ ವಿಶೇಷವಾದ ವ್ಯಕ್ತಿತ್ವ ಹೊರಹೊಮ್ಮುವುದು. ಈ ರಾಶಿಯವರಲ್ಲಿ ದ್ವಿಮುಖ ವ್ಯಕ್ತಿತ್ವ ಇರುತ್ತದೆ ಎಂದು ಹೇಳಬಹುದು.

   ಕರ್ಕ

  ಕರ್ಕ

  ಈ ರಾಶಿಯವರಲ್ಲಿ ಅನೇಕ ಧನಾತ್ಮಕ ಗುಣಗಳಿರುತ್ತವೆ. ಇವರಲ್ಲಿ ಕಡಿಮೆ ಪ್ರಮಾಣದ ಸ್ವಾಭಿಮಾನ ಇರುವುದರಿಂದ ಜನರಲ್ಲಿ ಬಹುಬೇಗ ಬೆರೆಯುತ್ತಾರೆ. ಅಂತ್ಯವಿಲ್ಲದೆ ಕಾಳಜಿಯ ಸ್ವಭಾವ, ಭಾವಪರವಶತೆ, ನಿಷ್ಠತೆ, ಆಳವಾದ ಭಾವನೆಗಳು ಇವರಲ್ಲಿ ನೈಸರ್ಗಿಕವಾಗಿಯೇ ಬಂದಿರುತ್ತದೆ. ಉತ್ತಮ ಕೇಳುಗರಾದ ಇವರು ಸೃಜನಾತ್ಮಕ ಸ್ವಭಾವದವರೂ ಹೌದು. ಪ್ರಾಮಾಣಿಕರಾಗಿರುವ ಇವರು ಸೂಕ್ಷ್ಮ ಮತ್ತು ಸುಂದರವಾದ ವ್ಯಕ್ತಿಗಳು ಆಗಿರುವರು.

  ಕರ್ಕ ರಾಶಿಯವರ ಇನ್ನೊಂದು ಮುಖ

  ಕರ್ಕ ರಾಶಿಯವರ ಇನ್ನೊಂದು ಮುಖ

  ಇವರ ಇನ್ನೊಂದು ಮುಖದ ಬಗ್ಗೆ ಹೇಳಬೇಕೆಂದರೆ ಅನೇಕ ರಾಕ್ಷಸರ ಜೊತೆ ವ್ಯವಹರಿಸುತ್ತಿರುತ್ತಾರೆ. ಸುತ್ತಲಿನ ಸಮಾಜಕ್ಕೆ ಸೂಕ್ಷ್ಮತೆಯನ್ನು ಹೊಂದಿದವರಂತೆ ಕಾಣುವ ಇವರು ಆತಂಕ, ಖಿನ್ನತೆ ಹಾಗೂ ಮಾನಸಿಕ ಅಸ್ವಸ್ಥತೆಗೆ ಒಳಗಾಗುತ್ತಾರೆ.

  ಸಿಂಹ

  ಸಿಂಹ

  ಈ ರಾಶಿಯವರು ಹುಟ್ಟಿದಾಗಿನಿಂದಲೇ ನಾಯಕತ್ವ ಗುಣವನ್ನು ಹೊಂದಿರುತ್ತಾರೆ. ಇವರು ಎಂತಹದ್ದೇ ಕೆಲಸದಲ್ಲಾದರೂ ತೊಡಗಿಕೊಳ್ಳುವಷ್ಟು ನಿಪುಣರು. ಇವರು ಅತ್ಯುತ್ತಮ ತಮಾಷೆಗಾರರು, ಮಹತ್ವಾಕಾಂಕ್ಷೆ ಉಳ್ಳವರು, ಹೊಸ ವಿಚಾರಗಳಿಗೆ ತೆರೆದುಕೊಳ್ಳುವರು ಹಾಗೂ ಬುದ್ಧಿವಂತರು ಎಂದು ಹೇಳಲಾಗುವುದು.

  ಸಿಂಹ ರಾಶಿಯವರ ಇನ್ನೊಂದು ಮುಖ

  ಸಿಂಹ ರಾಶಿಯವರ ಇನ್ನೊಂದು ಮುಖ

  ಇವರ ಇನ್ನೊಂದು ಮುಖದ ಬಗ್ಗೆ ಹೇಳಬೇಕೆಂದರೆ ಬಹಳ ಸ್ವಾರ್ಥ ಚಿಂತನೆ ಉಳ್ಳವರು. ತಮ್ಮ ಬಗ್ಗೆ ಅತಿಯಾಗಿ ಹೆಮ್ಮೆಪಡುವವರು ಹಾಗೂ ವಿಪರೀತವಾದ ನಾಟಕೀಯ ಪ್ರವೃತ್ತಿಯನ್ನು ತೋರುವರು. ಇತರರೊಂದಿಗೆ ಕಾರ್ಯ ನಿರ್ವಹಿಸಲು ತಮ್ಮ ಕೆಲವು ಸಮಯವನ್ನು ಮಾತ್ರ ಸೀಮಿತವಾಗಿ ಇಡುತ್ತಾರೆ. ಅನೇಕ ಬಾರಿ ಇವರು ತಾವೇ ಮೇಲುಗೈ ಸಾಧಿಸಬೇಕು ಎಂದು ಬಯಸುತ್ತಾರೆ.

  ಕನ್ಯಾ

  ಕನ್ಯಾ

  ಹೆಚ್ಚು ಭಾವನಾತ್ಮಕ ವ್ತಕ್ತಿಗಳಾದ ಇವರು ಹೆಚ್ಚಿನ ವಿಶ್ಲೇಷಣೆಗೆ ಒಳಗಾಗುತ್ತಾರೆ. ಅವರು ವಿಷಯಗಳನ್ನು ಕ್ರಮಬದ್ಧವಾದ, ವಿಶ್ಲೇಷಣಾತ್ಮಕವಾದ ಮತ್ತು ತಾರ್ಕಿಕ ರೀತಿಯಲ್ಲಿ ನೋಡುತ್ತಾರೆ. ಇವರು ಸಮಸ್ಯೆಗಳ ನಿವಾರಣೆಗೆ ತ್ಯುತ್ತಮ ಪರಿಹಾರಕರು ಮತ್ತು ಕೇಳುಗರಾಗಿರುತ್ತಾರೆ.

  ಕನ್ಯಾ ರಾಶಿಯವರ ಇನ್ನೊಂದು ಮುಖ

  ಕನ್ಯಾ ರಾಶಿಯವರ ಇನ್ನೊಂದು ಮುಖ

  ಇವರ ಇನ್ನೊಂದು ಮುಖದ ಬಗ್ಗೆ ಹೇಳಬೇಕೆಂದರೆ ವಿಷಯಗಳನ್ನು ಹೆಚ್ಚು ವಿಶ್ಲೇಷಿಸುವ ಮತ್ತು ಜೀವನವನ್ನು ಅತ್ಯಂತ ಗಂಭೀರವಾಗಿ ಪರಿಗಣಿಸುವ ವ್ಯಕ್ತಿತ್ವ ಹೊಂದಿರುತ್ತಾರೆ. ಇವರು ವಿಷಯ ಅಥವಾ ಸಮಯಕ್ಕೆ ಸೂಕ್ತವಾಗಿ ನಡೆದುಕೊಳ್ಳಲು ಕಷ್ಟವಾಗುವುದು. ಇವರು ಕೆಲವು ಯೋಜನೆಯಡಿಯಲ್ಲಿ ಕೆಲಸ ಕೈಗೊಳ್ಳಲು ಕಷ್ಟವಾಗುವುದು. ಅಲ್ಲದೆ ಇತರರ ಬಗ್ಗೆ ವಿಪರೀತವಾಗಿ ಟೀಕಿಸುತ್ತಾರೆ.

  ತುಲಾ

  ತುಲಾ

  ಈ ವ್ಯಕ್ತಿಗಳು ಅತ್ಯಂತ ಗೌರವ ಹಾಗೂ ದಯೆಯ ಸ್ವಭಾವದಿಂದ ಕೂಡಿರುತ್ತಾರೆ. ಜೀವನದಲ್ಲಿ ಶಾಂತಿಯನ್ನು ಕಾಪಾಡಿಕೊಳ್ಳುವ ಜಾಣ್ಮೆಯನ್ನು ಹೊಂದಿದ್ದಾರೆ. ಇವರಲ್ಲಿ ನೈಸರ್ಗಿಕವಾಗಿಯೇ ಮಾನವೀಯತೆಯನ್ನು ಹೊಂದಿರುತ್ತಾರೆ. ಜೀವನದಲ್ಲಿ ಸಮತೋಲನವನ್ನು ಕಾಪಾಡಿಕೊಳ್ಳಲು ಅತ್ಯುತ್ತಮ ರೀತಿಯಲ್ಲಿ ಕೆಲಸ ನಿರ್ವಹಿಸುತ್ತಾರೆ.

  ತುಲಾ ರಾಶಿಯವರ ಇನ್ನೊಂದು ಮುಖ

  ತುಲಾ ರಾಶಿಯವರ ಇನ್ನೊಂದು ಮುಖ

  ಇವರ ಇನ್ನೊಂದು ಮುಖದ ಬಗ್ಗೆ ಹೇಳಬೇಕೆಂದರೆ ಎಂತಹ ಸಮಯದಲ್ಲಾದರೂ ಸಂಘರ್ಷವನ್ನು ತಪ್ಪಿಸಲು ನೋಡುತ್ತಾರೆ. ಜೀವನದಲ್ಲಿ ಬೇಕಾದ ಕೆಲವು ಅವಶ್ಯಕತೆಗಳನ್ನು ನಿರ್ಲಕ್ಷಿಸುವರು. ನಿರ್ಲಕ್ಷದ ಸ್ವಭಾವ ಅನೇಕ ಹಾನಿಯನ್ನುಂಟುಮಾಡುವುದು. ಈ ಸ್ವಭಾವ ಇವರ ಆಪ್ತರಿಗೆ ಕಷ್ಟವನ್ನು ತಂದುಕೊಡುವುದು.

   ವೃಶ್ಚಿಕ

  ವೃಶ್ಚಿಕ

  ಈ ರಾಶಿಯವರಲ್ಲಿ ತ್ವರಿತವಾದ ಮತ್ತು ಚುರುಕಾದ ಬುದ್ಧಿ ಶಕ್ತಿಯಿರುತ್ತದೆ. ಹಾಸ್ಯದ ಸ್ವಭಾವವನ್ನೂ ಹೊಂದಿರುವ ಇವರು ಭಾವನಾತ್ಮಕವಾಗಿಯೂ ಇರುತ್ತಾರೆ. ತಮ್ಮ ಭಾವನೆಗಳನ್ನು ಬಳಸಿಕೊಂಡು ಯಾವುದೇ ಲಾಭವನ್ನು ಪಡೆಯುವುದಿಲ್ಲ. ಭಾವೋದ್ರಿಕ್ತ, ಸಂಘಟಿತ ಮತ್ತು ಸ್ವತಂತ್ರ ಪ್ರಿಯರು ಎನ್ನಬಹುದು.

  ವೃಶ್ಚಿಕ ರಾಶಿಯವರ ಇನ್ನೊಂದು ಮುಖ

  ವೃಶ್ಚಿಕ ರಾಶಿಯವರ ಇನ್ನೊಂದು ಮುಖ

  ಇವರ ಇನ್ನೊಂದು ಮುಖದ ಬಗ್ಗೆ ಹೇಳಬೇಕೆಂದರೆ ಇವರಲ್ಲಿ ಪ್ರತಿಕಾರದ ಗುಣ ಅಧಿಕವಾಗಿರುತ್ತದೆ. ಸನ್ನಿವೇಶವನ್ನು ದುರ್ಬಳಕೆ ಮಾಡಿಕೊಳ್ಳುವುದನ್ನು ಇವರು ತಿಳಿದಿರುತ್ತಾರೆ. ದ್ರೋಹ ಹಾಗೂ ಸವಾಲುಗಳನ್ನು ಹೊಂದಿರುವವರನ್ನು ಇವರು ದ್ವೇಷಿಸುತ್ತಾರೆ. ಇಷ್ಟವಾಗದ ವಿಚಾರದಲ್ಲಿ ಪ್ರತಿಕಾರ ತೀರಿಸಿಕೊಳ್ಳಲು ಮುಂದಾಗುವರು.

  ಧನು

  ಧನು

  ತಾವು ಜನರನ್ನು ಸೆಳೆಯಬಲ್ಲೆವು ಎನ್ನುವ ಭಾವನೆ ಇವರಲ್ಲಿರುತ್ತದೆ. ಆದರೆ ಇದು ದೀಪದ ಕಡೆಗೆ ಬರುವ ಚಿಟ್ಟೆಯಂತೆ. ಇವರು ತುಂಬಾ ಆಶಾವಾದಿ, ಸಾಹಸ, ವಿನೋಧ ಹಾಗೂ ಸ್ಪೂರ್ತಿದಾಯಕವಾಗಿರುವರು.

  ಇನ್ನೊಂದು ಮುಖ

  ಇನ್ನೊಂದು ಮುಖ

  ಕೆಲಸದ ಕಡೆ ಗಮನ ಕೇಂದ್ರೀಕರಿಸಲು ಇವರಿಗೆ ತುಂಬಾ ಕಷ್ಟವಾಗುವುದು. ಇವರು ತುಂಬಾ ತೀವ್ರತೆಯ ಸ್ವಭಾವ ಹೊಂದಿರುವರು. ಯಾವುದೇ ಗುರಿ ಇಲ್ಲದೆ ಇರುವ ಕಾರಣದಿಂದಾಗಿ ತುಂಬಾ ಪ್ರಕ್ಷುಬ್ದ ಮತ್ತು ಬೇಸರ ಹೊಂದುವರು.

  ಮಕರ

  ಮಕರ

  ಈ ರಾಶಿಯವರು ತುಂಬಾ ಕಠಿಣ ಕೆಲಸಗಾರರಾಗಿರುವರು. ಇವರಿಗೆ ಸಂಪತ್ತು ಹಾಗೂ ಯಶಸ್ಸು ಲಭಿಸಿರುವುದು. ಇವರು ಅತ್ಯುತ್ತಮ ಕೆಲಸ ಮಾಡಲು ಒಳ್ಳೆಯ ಶಕ್ತಿ ಹೊಂದಿರುವರು. ಇವರು ತುಂಬಾ ಸ್ಫೂರ್ತಿ, ಬುದ್ಧಿವಂತ ಮತ್ತು ತಾರ್ಕಿಕವಾಗಿರುವರು. ಇವರಿಗೆ ಕೆಲಸವು ಜೀವನದ ಮುಖ್ಯ ಸಂಗತಿಯಾಗಿದೆ.

  ಇನ್ನೊಂದು ಮುಖ

  ಇನ್ನೊಂದು ಮುಖ

  ಇವರು ಮೊಂಡುತನ, ರಾಜಿಯಾಗ ಮತ್ತು ಅಸಹನೆ ಹೊಂದಿರುವರು. ಇತರರ ಆಲೋಚನೆಗಳ ಬಗ್ಗೆ ಕಠಿಣ ಸಮಯ ಕಳೆಯುವರು. ಇವರು ಕೆಟ್ಟ ಮನೋಭಾವ ಹೊಂದಿರುವರು ಮತ್ತು ಬೇಗನೆ ಸಿಟ್ಟಾಗುವರು.

  ಕುಂಭ

  ಕುಂಭ

  ರಾಶಿಗಳಲ್ಲಿ ಇವರು ತುಂಬಾ ಆಸಕ್ತಿಯ ಜನರಾಗಿದ್ದಾರೆ. ಇವರು ಪ್ರಯಾಣ ಮಾಡಲು, ಹೊಸ ಜನರನ್ನು ಭೇಟಿಯಾಗಲು ಮತ್ತು ಬುದ್ದಿಗೆ ಸವಾಲಾಗುವ ಕೆಲಸ ಇಷ್ಟಪಡುವರು. ಇವರು ವೈವಿಧ್ಯಮ ಆಸಕ್ತಿ ಹೊಂದಿರುವ ಕಾರಣದಿಂದಾಗಿ ಒಂದು ವಿಷಯದ ಬಗ್ಗೆ ಗಂಟೆಗಟ್ಟಲೆ ಮಾತನಾಡಬಲ್ಲರು. ಇವರು ಮಹಾನ್ ನಾಯಕರಾಗುವರು.

  ಇನ್ನೊಂದು ಮುಖ

  ಇನ್ನೊಂದು ಮುಖ

  ಇವರು ಕೆಲವೊಮ್ಮೆ ಏಕಾಂಗಿಯಾಗಿ ಮತ್ತು ಭಾವನಾತ್ಮಕವಾಗಿರಲು ಬಯಸುವರು. ಇವರು ವಿಷಯಗಳನ್ನು ಪ್ರಾಯೋಗಿಕವಾಗಿ ನೋಡುವರು. ಇದು ಕೆಟ್ಟ ವಿಷಯವಲ್ಲ. ತಮ್ಮ ಭಾವನೆಗಳನ್ನು ನಿಯಂತ್ರಿಸಲು ಕಲಿಯದೇ ಇದ್ದರೆ ಅವರ ಸಂಬಂಧಗಳಿಗೆ ಕಷ್ಟವಾಗಬಹುದು.

  ಮೀನ

  ಮೀನ

  ಇವರು ತುಂಬಾ ಭಾವನಾತ್ಮಕ, ಸೂಕ್ಷ್ಮ ಮತ್ತು ಆರೈಕೆ ಮಾಡುವ ವ್ಯಕ್ತಿಗಳಾಗಿರುವರು. ಇವರು ತುಂಬಾ ಸಹಾನೂಭೂತಿ ಹೊಂದಿರುವರು. ಒಳ್ಳೆಯ ಸ್ನೇಹಿತರು ಮತ್ತು ಜೊತೆಗಾರರನ್ನು ಹೊಂದಿರುವರು. ಪ್ರೀತಿಪಾತ್ರರಿಗೆ ನಿಷ್ಠರಾಗಿರುವ ಇವರು ಅವರಿಗಾಗಿ ಏನೂ ಬೇಕಾದರೂ ಮಾಡಬಲ್ಲರು.

  ಇನ್ನೊಂದು ಮುಖ

  ಇನ್ನೊಂದು ಮುಖ

  ಇವರು ವಾಸ್ತವದಲ್ಲಿ ವ್ಯವಹರಿಸುವಾಗ ತುಂಬಾ ಕಠಿಣ ಸಮಯ ಎದುರಿಸುವರು ಮತ್ತು ಇದರಿಂದ ತಪ್ಪಿಸಲು ಪ್ರಯತ್ನಿಸುವರು. ಒಂಟಿಯಾಗಿರಲು ಮತ್ತು ತಮ್ಮದೇ ಆದ ಸಮಯ ಕಳೆಯಲು ಬಯಸುವರು.

  English summary

  The Two Faces Of Each Zodiac Sign

  Each zodiac sign has a flip side to it and the details about the flip side of each zodiac sign is surprising to know, as this is totally opposite of the typical characteristic traits of the zodiac signs.We are here to enlighten you about the flip side of each zodiac sign and how it is contradictory of the particular zodiac... Check out to know more on this.
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more