ಪ್ರತಿಯೊಂದು ರಾಶಿಚಕ್ರದವರಲ್ಲೂ ಇರುವ 5 ಸಂಬಂಧಗಳ ಸಮಸ್ಯೆಗಳು

By Deepu
Subscribe to Boldsky

ಸಂಬಂಧ ಎನ್ನುವುದು ಬಹಳ ಪ್ರಮುಖವಾದದ್ದು. ಎಲ್ಲೋ ಹುಟ್ಟಿ, ಎಲ್ಲೋ ಬೆಳೆದು, ವಿವಾಹ ಎನ್ನುವ ಬಂಧನದಲ್ಲಿ ಬೆಸೆದು ಹೊಸ ಸಂಬಂಧಗಳನ್ನು ಬೆಳೆಸಿಕೊಂಡು ಜೀವನ ಸಾಗಿಸುವುದು ಎಂದರೆ ಅದೇನೋ ಒಂದು ಬಗೆಯ ಸಂತೋಷ ಸಂಭ್ರಮ. ಆದರೆ ಈ ಹೊಸ ಸಂಬಂಧಗಳಲ್ಲಿ ಹೊಂದಾಣಿಕೆಯನ್ನು ಮಾಡಿಕೊಳ್ಳುವಾಗ ಅನೇಕ ಸಮಸ್ಯೆಗಳು ತಲೆದೂರಬಹುದು. ಅವೆಲ್ಲವನ್ನು ಸಹಿಸಿಕೊಂಡು ಜೀವನ ನಡೆಸಿದಾಗ ಸಂಬಂಧ ಒಂದು ಪವಿತ್ರ ಅರ್ಥ ಪಡೆದುಕೊಳ್ಳುವುದು. ಅರಿತು ಬೆರೆತು ಬಾಳುವ ಆ ಸಂಬಂಧ ಶಾಶ್ವತವಾಗಿ ಉಳಿದುಕೊಳ್ಳುವುದು.

ನಿತ್ಯದ ಬದುಕನ್ನು ಸಾಗಿಸುವಾಗ ಪ್ರತಿಯೊಬ್ಬರೂ ತಪ್ಪನ್ನು ಮಾಡುತ್ತಾರೆ. ಅದು ಸಂಬಂಧಗಳಲ್ಲೂ ಆಗಿರಬಹುದು. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಪ್ರತಿಯೊಬ್ಬ ವ್ಯಕ್ತಿಯು ತನ್ನ ರಾಶಿಚಕ್ರಕ್ಕೆ ಅನುಗುಣವಾಗಿ ಅನೇಕ ತಪ್ಪುಗಳನ್ನು ಮಾಡುತ್ತಾನೆ. ಹೌದು, ಎಲ್ಲಾ ರಾಶಿಚಕ್ರದವರು ತಮ್ಮ ಸಂಬಂಧಗಳಲ್ಲಿ ಎದುರಿಸಬೇಕಾದ 5 ಸಮಸ್ಯೆಗಳನ್ನು ಅಥವಾ ತಪ್ಪುಗಳನ್ನು ಬೋಲ್ಡ್ ಸ್ಕೈ ಈ ಲೇಖನದಲ್ಲಿ ವಿವರಿಸಿದೆ. ನಿಮಗೂ ನಿಮ್ಮ ಸಂಬಂಧಗಳಲ್ಲಿ ಯಾವೆಲ್ಲಾ ತಪ್ಪುಗಳು ಉಂಟಾಗುತ್ತದೆ ಎನ್ನುವುದನ್ನು ಅರಿಯಲು ಮುಂದಿರುವ ವಿವರಣೆಯನ್ನು ತಿಳಿಯಿರಿ...

ಮೇಷ: 28 ಮಾರ್ಚ್ -20 ಏಪ್ರಿಲ್

ಮೇಷ: 28 ಮಾರ್ಚ್ -20 ಏಪ್ರಿಲ್

1. ಈ ರಾಶಿಯವರು ಸದಾ ತಮ್ಮ ಒಂದು ಕಣ್ಣನ್ನು ಭವಿಷ್ಯದ ಆಗು ಹೋಗುಗಳ ಮೇಲೆ ಕೇಂದ್ರೀಕರಿಸುತ್ತಾರೆ. ಇದರ ಪರಿಣಾಮವಾಗಿ ಸಂಬಂಧದಲ್ಲಿ ಕೆಲವು ಸಮಸ್ಯೆಗಳು ಕಾಣಿಸಿಕೊಳ್ಳುವ ಸಾಧ್ಯತೆಗಳಿವೆ.

2. ಯಾವುದೇ ವಿಚಾರಕ್ಕೆ ಸಂಬಂಧಿಸಿದಂತೆ ಇವರಿಗೆ ಇಲ್ಲ ಎನ್ನುವ ಉತ್ತರ ಕೊಡಲು ಸಾಧ್ಯವಾಗುವುದಿಲ್ಲ.

3. ಅದೆಷ್ಟೇ ಕಷ್ಟ ಅಥವಾ ಬೇಸರದ ಸಂಗತಿಯಾಗಿದ್ದರೂ ಇವರು ದೀರ್ಘಾವಧಿಯವರೆಗೆ ಸಂಬಂಧದಲ್ಲಿ ಇರಲು ಬಯಸುತ್ತಾರೆ. ಯಾವುದೇ ಕಾರಣಕ್ಕೂ ಹೊರ ಹೋಗಲು ಬಯಸುವುದಿಲ್ಲ. ಹಾಗೊಮ್ಮೆ ಮಾಡಿದರೆ ಅವರು ತಮಗೆ ತಾವೇ ಗಾಯಪಡಿಸಿಕೊಳ್ಳುತ್ತಾರೆ.

4. ಇವರ ಸಂಗಾತಿಯಾದವರು ಇವರು ಏನು ಹೇಳುತ್ತಾರೋ ಅದನ್ನು ಹಿಂಬಾಲಿಸದಿದ್ದರೆ ನಿರಾಸೆಗೆ ಒಳಗಾಗುತ್ತಾರೆ. ಯಾವಾಗಲೂ ಇವರ ನಿರೀಕ್ಷೆಗಳು ವಾಸ್ತವಕ್ಕೆ ದೂರವಾಗಿರುತ್ತದೆ.

5. ಪ್ರೀತಿ ಶಾಶ್ವತವಾಗಿ ಉಳಿಯುವುದಿಲ್ಲ ಎನ್ನುವುದನ್ನು ಇವರು ಅರಿಯುವುದಿಲ್ಲ. ಸಂಬಂಧದಿಂದ ಹೊರಬರುವುದು ಇವರಿಗೆ ಕಷ್ಟವಾಗಿರುತ್ತದೆ.

ವೃಷಭ: 21 ಏಪ್ರಿಲ್ -21 ಮೇ

ವೃಷಭ: 21 ಏಪ್ರಿಲ್ -21 ಮೇ

1. ಇವರು ಹೆಚ್ಚಾಗಿ ಹಾಸಿಗೆಯಲ್ಲಿರುವುದನ್ನು ಬಯಸುತ್ತಾರೆ.

2. ರಾಜಿ ಮಾಡಿಕೊಳ್ಳುವುದನ್ನು ದ್ವೇಷಿಸುವರು.

3. ಇವರ ಸಂಗಾತಿಯ ಅಭಿಪ್ರಾಯವನ್ನು ನಿರ್ಣಯಿಸುತ್ತಾರೆ. ಆದರೆ ಯಾವುದೇ ವಿಚಾರಕ್ಕೂ ಬಲವಂತವಾದ ಒತ್ತಡವನ್ನು ಹೇರುವುದಿಲ್ಲ.

4. ಇವರು ಸದಾ ಸ್ಥಿರವಾಗಿ ನೆಲೆಸಲು ಬಯಸುತ್ತಾರೆ. ಇವರಿಗೆ ಅನುಗುಣವಾಗಿ ಸಂಗಾತಿಯಾದವರು ಹೊಂದಿಕೊಳ್ಳದಿದ್ದರೆ ಘರ್ಷಣೆ ಸಂಭವಿಸುವುದು.

5. ಇವರು ಕೆಲವೊಮ್ಮೆ ಪ್ರತಿಕಾರದ ರೀತಿಯಲ್ಲಿ ವರ್ತಿಸುತ್ತಾರೆ. ಸಂಬಂಧವನ್ನು ಉಳಿಸಿಕೊಳ್ಳಲು ಯೋಚಿಸುತ್ತಾರೆ.

ಮಿಥುನ:ಮೇ 21-ಜೂನ್ 20

ಮಿಥುನ:ಮೇ 21-ಜೂನ್ 20

1. ಇವರು ತಮ್ಮ ಪ್ರೀತಿಯನ್ನು ಅಪರೂಪದ ಮಾರ್ಗದಲ್ಲಿ ತೋರಿಸುತ್ತಾರೆ. ಇವರು ತಮ್ಮ ಪ್ರೀತಿಪಾತ್ರರೊಂದಿಗೆ ಜಗಳವಾಡಲು ಇಷ್ಟಪಡುತ್ತಾರೆ. ಏಕೆಂದರೆ ಇವರ ಪ್ರಕಾರ ಪ್ರೀತಿಯನ್ನು ತೋರಿಸುವ ಆರೋಗ್ಯಕರವಾದ ಮಾರ್ಗ ಇದು ಎಂದು ನಂಬುತ್ತಾರೆ.

2. ಇವರು ತಮ್ಮನ್ನು ತಾವು ಹೆಚ್ಚು ಪ್ರೀತಿಸುತ್ತಾರೆ. ಇದರಿಂದ ಸಂಗಾತಿಯೊಂದಿಗೆ ಜಗಳ ಉಂಟಾಗುವ ಸಾಧ್ಯತೆಗಳಿರುತ್ತವೆ.

3. ಇವರು ತಮ್ಮ ಸಂಗಾತಿಯ ಅಗತ್ಯತೆ ಮತ್ತು ಆಸೆಗಳನ್ನು ಕಡೆಗಣಿಸಬೇಕಾದಾಗ ತಮ್ಮನ್ನು ತಾವು ಹಿಡಿದಿಟ್ಟುಕೊಳ್ಳುತ್ತಾರೆ.

4. ಇವರು ಜೀವನದಲ್ಲಿ ಹೆಚ್ಚು ಉತ್ಸಾಹದಲ್ಲಿ ಇರಲು ಬಯಸುತ್ತಾರೆ. ಆ ಖುಷಿ ಕಾಲ್ಬೆರಳಿನ ತುದಿಯಲ್ಲಿದ್ದರೂ ಸರಿ. ಅದನ್ನು ಅವರು ಪರಿಗಣಿಸುತ್ತಾರೆ. ಅಂತಹ ಸಂದರ್ಭದಲ್ಲಿ ಸಂಗಾತಿ ವಿಶ್ರಾಂತಿ ಪಡೆಯುವ ಮನಸ್ಥಿತಿಯನ್ನು ಹೊಂದಿದ್ದರೆ ಅದು ಅವರ ಸಿಟ್ಟಿಗೆ ಕಾರಣವಾಗುತ್ತದೆ.

ಕರ್ಕ: ಜೂನ್ 21-ಜುಲೈ 22

ಕರ್ಕ: ಜೂನ್ 21-ಜುಲೈ 22

1. ಇವರು ಕುಟುಂಬವನ್ನು ಪ್ರೀತಿಸುತ್ತಾರೆ. ಅದರಂತೆಯೇ ಪಾಲುದಾರರೂ ಹೇಗೇ ಇರಬೇಕೆಂದು ಬಯಸುವರು.

2. ಇವರು ತಮ್ಮ ಸಂಗಾತಿಯ ಬಗ್ಗೆ ಅಸುರಕ್ಷಿತ ಭಾವವನ್ನು ಹೊಂದಿರುತ್ತಾರೆ. ಏಕೆಂದರೆ ಸಂಗಾತಿ ಬಾಗಿಲಿನ ಹೊರಗೆ ಒಂದು ಪಾದವನ್ನು ಹೊರಗಿಡಲು ಯೋಚಿಸುತ್ತಾರೆ.

3. ಇವರು ಪ್ರೀತಿಸುತ್ತಿರುವುದು ಮತ್ತು ನೋಡಿಕೊಳ್ಳುವುದು ನಿರಂತರ ಭರವಸೆಯನ್ನು ಸೃಷ್ಟಿಸುತ್ತದೆ. ಇವರು ನಿರೀಕ್ಷಿಸಿದ ವಿಚಾರಗಳು ಸಂಗಾತಿಯಿಂದ ನೆರವೇರದೆ ಇದ್ದಾಗ ಸಿಟ್ಟಿಗೆ ಒಳಗಾಗುತ್ತಾರೆ.

4. ಇವರು ಅತಿಯಾದ ಪ್ರೀತಿ ತೋರುವುದು ಸಂಗಾತಿಗೆ ಉಸಿರುಗಟ್ಟಿದಂತಾಗುವುದು ಎಂದು ಭಾವಿಸುತ್ತಾರೆ.

5. ಇವರಿಗೆ ಕೆಲವು ಸಂದರ್ಭದಲ್ಲಿ ಸಂಬಂಧದಲ್ಲಿ ಉಳಿಯುವುದಾ ಅಥವಾ ಒಂಟಿಯಾಗಿ ಬಾಳುವುದು ಸರಿಯಾ ಎನ್ನುವುದನ್ನು ನಿರ್ಧರಿಸಲು ಕಷ್ಟವಾಗುವುದು.

ಸಿಂಹ: ಜುಲೈ 23-ಆಗಸ್ಟ್ 23

ಸಿಂಹ: ಜುಲೈ 23-ಆಗಸ್ಟ್ 23

1. ಈ ರಾಶಿಯವರು ಬೇರೆಯವರು ತಮ್ಮ ಸಂಬಂಧಗಳ ಬಗ್ಗೆ ಏನು ತಿಳಿದುಕೊಂಡಿದ್ದಾರೆ ಎನ್ನುವುದನ್ನು ಅರಿಯಲು ಒತ್ತಡಕ್ಕೆ ಒಳಗಾಗುತ್ತಾರೆ.

2. ಇವರು ಸಂಬಂಧದ ವಿಚಾರದಲ್ಲಿ ಆರ್ಥಿಕ ಸ್ಥಿರತೆ ಮತ್ತು ಭದ್ರತೆಯ ಕುರಿತು ಹೆದರುತ್ತಾರೆ.

3. ಇವರು ತಮ್ಮ ಸಂಗಾತಿಯ ನಿಷ್ಠೆಯ ಬಗ್ಗೆ ಹೆಚ್ಚು ರಹಸ್ಯವಾಗಿ ಹೆದರುತ್ತಾರೆ ಮತ್ತು ಅಸುರಕ್ಷಿತರಾಗಿರುತ್ತಾರೆ.

4. ಇವರು ತಮ್ಮ ಪಾಲುದಾರರ ಬಗ್ಗೆ ಅತಿಯಾದ ಗಮನ ನೀಡುತ್ತಾರೆ. ಜೊತೆಗೆ ಅವರು ಸಂಬಂಧದ ಬಗ್ಗೆ ಹಾಗೆಯೇ ಇರಬೇಕು ಎಂದು ಬಯಸುತ್ತಾರೆ. ಇದು ಸಂಬಂಧದಲ್ಲಿ ಬಿರುಕು ಉಂಟಾಗುವ ಸಾಧ್ಯತೆಗಳಿವೆ.

5. ಇವರು ಕೆಲವು ಸಂದರ್ಭದಲ್ಲಿ ಸಂಗಾತಿಗೆ ಹೊಡೆಯಲು ಸಹ ಮುಂದಾಗುತ್ತಾರೆ. ಇದರಿಂದ ಸಂಬಂಧದಲ್ಲಿ ಅಸಮಧಾನ ಉಂಟಾಗುವುದು.

ಕನ್ಯಾ: ಆಗಸ್ಟ್ 24-ಸಪ್ಟೆಂಬರ್ 23 ಕಾಫಿ

ಕನ್ಯಾ: ಆಗಸ್ಟ್ 24-ಸಪ್ಟೆಂಬರ್ 23 ಕಾಫಿ

1. ಇವರು ಮಾತನಾಡುವ ಬದಲು ಅತಿಯಾಗಿ ಯೋಚಿಸುತ್ತಾರೆ. ಇದು ಇವರ ಸಂಬಂಧವನ್ನು ಹಾಳುಮಾಡುವುದು.

2. ಇವರು ಸಂಬಂಧದಲ್ಲಿ ಅನೇಕ ವಿಚಾರಗಳಿಗೆ ರಾಜಿಮಾಡಿಕೊಳ್ಳುತ್ತಾರೆ. ಇದು ಸಂಗಾತಿಯ ಕೋಪಕ್ಕೆ ಕಾರಣವಾಗುವುದು.

3. ಇವರು ಅತ್ಯಂತ ಸಾಂಪ್ರದಾಯಿಕತೆಯನ್ನು ಸಂಬಂಧದಲ್ಲಿ ಕಾಣಲು ಬಯಸುತ್ತಾರೆ. ಇದರಿಂದ ಇಬ್ಬರಲ್ಲಿ ಒಬ್ಬರು ಸಂಬಂಧದಿಂದ ಹೊರ ಹೋಗಲು ಪ್ರೇರೇಪಿಸುವುದು.

4. ದಿನದಲ್ಲಿ 24 ಗಂಟೆಯೂ ಸಂಗಾತಿಯ ಗಮನವನ್ನು ಬಯಸುತ್ತಾರೆ. ಇದು ಪಾಲುದಾರರ ಕೋಪಕ್ಕೆ ಅಥವಾ ಅಸಮಧಾನಕ್ಕೆ ಕಾರಣವಾಗುವುದು.

5. ಎಲ್ಲಾ ವಿಚಾರದಲ್ಲೂ ಅತಿಯಾಗಿ ಮಾತನಾಡುತ್ತಾರೆ. ಇದರಿಂದ ಅನಗತ್ಯ ಘರ್ಷಣೆಗಳು ಉಂಟಾಗುವುದು.

ತುಲಾ: ಸೆಪ್ಟಂಬರ್ 24-ಅಕ್ಟೋಬರ್ 23

ತುಲಾ: ಸೆಪ್ಟಂಬರ್ 24-ಅಕ್ಟೋಬರ್ 23

1. ಇವರು ತಮ್ಮ ಸುತ್ತಲಿನ ಜನರು ಯಾರು ಸಕಾರಾತ್ಮಕವಾಗಿ ವರ್ತಿಸುವುದಿಲ್ಲ ಎಂದು ಭಾವಿಸುತ್ತಾರೆ. ಜೊತೆಗೆ ಇನ್ನೂ ಕೆಲವರು ವಿಷಕಾರಿಯಾಗಿ ಇರುತ್ತಾರೆ ಎಂದು ಯೋಚಿಸುತ್ತಾರೆ.

2. ಇವರು ವೈಯಕ್ತಿಕವಾಗಿ ಪಾಲುದಾರರನ್ನು ಹೆಚ್ಚು ಬಯಸುತ್ತಾರೆ.

3. ಇವರು ಸಾಮಾನ್ಯವಾಗಿ ಎಲ್ಲವೂ ಸಮತೋಲನದಲ್ಲಿ ಇರಬೇಕು ಎಂದು ಬಯಸುತ್ತಾರೆ. ಆದರೆ ಕೆಲವು ಸಮಯದಲ್ಲಿ ರಾಜಿ ಮಾಡಿಕೊಳ್ಳುವ ಮೂಲಕ ಅನಗತ್ಯ ಘರ್ಷಣೆಗಳನ್ನು ತಡೆಯುವರು.

4. ಕೆಲವು ಸಂದರ್ಭದಲ್ಲಿ ಇವರು ನಿಜ ಹೇಳಿ ನೋಯಿಸುವ ಬದಲು ಸುಳ್ಳು ಹೇಳುವುದರ ಮೂಲಕ ಸಮಾಧಾನ ಮಾಡುತ್ತಾರೆ.

5. ಇವರ ನಿರ್ಣಾಯಕ ಸ್ವಭಾವದಿಂದ ಸಂಬಂಧವು ಕೊನೆಗೊಳ್ಳುವ ಸಾಧ್ಯತೆಗಳಿರುತ್ತವೆ.

ವೃಶ್ಚಿಕ: 24 ಅಕ್ಟೋಬರ್ -22 ನವೆಂಬರ್

ವೃಶ್ಚಿಕ: 24 ಅಕ್ಟೋಬರ್ -22 ನವೆಂಬರ್

1. ಈ ರಾಶಿವರು ಸುಳ್ಳು ಹಾಗೂ ಮೋಸ ಮಾಡುವವರಿಗೆ ಆಧ್ಯತೆ ನೀಡರು.

2. ಇವರು ಎಲ್ಲಾ ವಿಚಾರವನ್ನೂ ಸಹ ವೈಯಕ್ತಿಕವಾಗಿ ತೆಗೆದುಕೊಳ್ಳಲು ಬಯಸುತ್ತಾರೆ.

3. ಇವರು ತಮ್ಮ ಭಾವನೆಗಳ ಕುರಿತು ಚರ್ಚೆ ಮಾಡುವುದನ್ನು ದ್ವೇಷಿಸುತ್ತಾರೆ. ಏಕೆಂದರೆ ಅದು ಅವರಿಗೆ ಅನಾನುಕೂಲವಾಗಿರುತ್ತದೆ ಎಂದು ಬಯಸುವರು. ಅಲ್ಲದೆ ಚರ್ಚೆಯಿಂದ ದೂರ ಸರಿಯುವರು.

4. ಇವರು ದೀರ್ಘಕಾಲದವರೆಗೂ ಪಾಲುದಾರರ ಹಿಂಸೆಯನ್ನು ಹಿಡಿದಿಟ್ಟುಕೊಳ್ಳಬಲ್ಲರು.

5. ಇವರ ಸಂಬಂಧ ಅತ್ಯಂತ ಉತ್ಸಾಹದಲ್ಲಿ ಪ್ರಾರಂಭವಾಗುವುದು. ನಂತರ ಏಕತಾನತೆಯಲ್ಲಿ ಅಂತ್ಯ ಕಾಣುವುದು.

ಧನು: 23 ನವೆಂಬರ್ -22 ಡಿಸೆಂಬರ್

ಧನು: 23 ನವೆಂಬರ್ -22 ಡಿಸೆಂಬರ್

1. ಈ ರಾಶಿಯವರ ಸಾಹಸ ವರ್ತನೆಗಳು ಎಲ್ಲರೂ ಆಧ್ಯತೆ ನೀಡುವಂತಹ ವಿಚಾರವಾಗಿರುವುದಿಲ್ಲ.

2. ಸಂಬಂಧದಲ್ಲಿ ಸಾಕಷ್ಟು ಬೇಡಿಕೆ ಇರುವುದರಿಂದ ಪ್ರಣಯವನ್ನು ನಿರ್ವಹಿಸುವ ಮಾರ್ಗವು ತುಂಬಾ ಒತ್ತಡದಿಂದ ಕೂಡಿರುತ್ತದೆ.

3. ಇವರ ಪಾಲುದಾರರ ಭೌತಿಕ ನೋಟವು ಜೀವನದಲ್ಲಿ ಅಪಾರ ಪ್ರಾಮುಖ್ಯತೆಯನ್ನು ಪಡೆದಿರುತ್ತದೆ.

4. ಇವರು ಸಮನ್ವಯವನ್ನು ತೋರುವುದಕ್ಕಿಂತ ಜಗಳ ಮಾಡಲು ಮುಂದಾಗುತ್ತಾರೆ. ಇದರಿಂದ ಎಲ್ಲವನ್ನೂ ಕಳೆದುಕೊಳ್ಳುತ್ತಾರೆ.

5. ಇವರು ಹೆಚ್ಚಿನ ಸ್ವಾತಂತ್ರ್ಯ ಹಾಗೂ ಮುಕ್ತವಾದ ಸಂಬಂಧವನ್ನು ಬಯಸುತ್ತಾರೆ.

ಮಕರ: ಡಿಸೆಂಬರ್ 23-ಜನವರಿ 20

ಮಕರ: ಡಿಸೆಂಬರ್ 23-ಜನವರಿ 20

1. ಈ ರಾಶಿಯವರು ದೀರ್ಘಾವಧಿಯ ಸಂಬಂಧ ಹೊಂದಿರುವಾಗ ಸಂಬಂಧವನ್ನು ಲಘುವಾಗಿ ತೆಗೆದುಕೊಳ್ಳಲು ಪ್ರಯತ್ನಿಸುತ್ತಾರೆ.

2. ಇವರು ಆರೋಗ್ಯಕರವಾದ ಸಂಬಂಧಗಳಿಗೆ ಮನ್ನಿಸುತ್ತಾರೆ.

3. ಇವರು ಯಾವುದೇ ಬಗೆಯ ಪಂದ್ಯಗಳನ್ನು ಇಷ್ಟಪಡುವುದಿಲ್ಲ. ಪಾಲುದಾರರನ್ನು ದೂಷಿಸುತ್ತಾರೆ. ಸಮಸ್ಯೆಗಳನ್ನು ಬಗೆಹರಿಸದೆ ಹೊರ ಹೋಗುತ್ತಾರೆ.

4. ಇತರರನ್ನು ಸಂತೋಷಗೊಳಿಸಲು ಏನು ಬೇಕಾದರೂ ಮಾಡುತ್ತಾರೆ.

5. ಇವರಿಗೆ ಇವರ ಪಾಲುದಾರರನ್ನು ಸಂತೋಷವಾಗಿಡುವುದು ಅತ್ಯಂತ ಮಹತ್ವದ ವಿಚಾರವಾಗಿರುತ್ತದೆ.

ಕುಂಭ: ಜನವರಿ 20-ಫೆಬ್ರವರಿ 18

ಕುಂಭ: ಜನವರಿ 20-ಫೆಬ್ರವರಿ 18

1. ಬದ್ಧತೆಯ ಜೀವನದಲ್ಲಿ ಅವಕಾಶಗಳನ್ನು ಕಳೆದುಕೊಳ್ಳುತ್ತೇವೆ ಎಂದು ಭಾವಿಸುತ್ತಾರೆ. ಹಾಗಾಗಿ ಇವರು ಬದ್ಧತೆಯ ಬಗ್ಗೆ ಚರ್ಚೆಯನ್ನು ತಪ್ಪಿಸುತ್ತಾರೆ.

2. ಇವರು ಸದಾ ತಪ್ಪು ಗ್ರಹಿಕೆಗೆ ಒಳಗಾಗುತ್ತಿದ್ದೇನೆ ಎಂದುಕೊಳ್ಳುತ್ತಾರೆ.

3. ಇವರು ಸುಲಭವಾಗಿ ಬೇಸರಕ್ಕೆ ಒಳಗಾಗುತ್ತಾರೆ.

4. ಇವರು ವೈಯಕ್ತಿಕವಾಗಿ ಹೆಚ್ಚು ಸ್ಥಳವನ್ನು ಬಯಸುತ್ತಾರೆ. ಇದರಿಂದ ಇವರ ಪಾಲುದಾರರು ದೂರಹೋಗಬಹುದು.

5. ಇವರ ಪಾಲುದಾರರ ವೈಯಕ್ತಿಕ ಗುರಿ ಹಾಗೂ ಆದರ್ಶಗಳಿಂದ ಪ್ರಯಾಸಕ್ಕೆ ಒಳಗಾಗುತ್ತಾರೆ.

ಮೀನ: 20 ಫೆಬ್ರವರಿ -20 ಮಾರ್ಚ್

ಮೀನ: 20 ಫೆಬ್ರವರಿ -20 ಮಾರ್ಚ್

1. ಇವರು ತಮ್ಮ ಕಲ್ಪನಾ ಲೋಕದಲ್ಲಿಯೇ ಭಾವನೆಯನ್ನು ವ್ಯಕ್ತಪಡಿಸುತ್ತಾರೆ. ಇದರ ಪರಿಣಾಮವಾಗಿ ಇವರ ಸಂಗಾತಿ ಇವರನ್ನು ತಪ್ಪಾಗಿ ಗ್ರಹಿಸುತ್ತಾರೆ.

2. ತಮ್ಮ ಬಗ್ಗೆ ಹೆಚ್ಚು ಆತ್ಮೀಯವಾಗಿ ತೆರೆದುಕೊಳ್ಳದ ವ್ಯಕ್ತಿಗಳನ್ನು ದೂರ ಇಡುತ್ತಾರೆ.

3. ನಾಚಿಕೆ ಸ್ವಭಾವವನ್ನು ಹೊಂದಿರುವ ಇವರು ಪಾಲುದಾರರಿಗೆ ಗೊಂದಲವಾಗುವಂತಹ ವರ್ತನೆಯನ್ನು ತೋರುತ್ತಾರೆ.

4. ಇವರು ಸಂಬಂಧದಲ್ಲಿ ಹೆಚ್ಚು ಕಾಳಜಿಯನ್ನು ತೋರುತ್ತಾರೆ.

5. ಇವರು ಕೆಲವೊಮ್ಮೆ ತನಗಾಗಿ ವಿಶೇಷ ಸಮಯವನ್ನು ಮೀಸಲಾಗಿಟ್ಟುಕೊಳ್ಳುವುದರಿಂದ ಸಂಗಾತಿಗೆ ಕಿರಿಕಿರಿ ಉಂಟಾಗುವುದು.

For Quick Alerts
ALLOW NOTIFICATIONS
For Daily Alerts

    English summary

    Relationship Problems For Each Zodiac Sign

    There are times when we cannot take our partner's tantrums or when we do not understand as to why we're feeling so agitated. These answers can be related to your zodiac sign and we're throwing light on some of the common problems that people face in a relationship! These problems are often related to zodiac signs and understanding them makes the relationship from not going kaput. Here, we have listed the most common relationship problems that each zodiac sign can face, based on expert analysis. Find out more...
    We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more