For Quick Alerts
ALLOW NOTIFICATIONS  
For Daily Alerts

ನಮ್ಮಲ್ಲಿರುವ ಭೀತಿಯ ಬಗ್ಗೆ ತಿಳಿಯಲು-ಇಲ್ಲಿದೆ ನೋಡಿ ಮನ ಶಾಸ್ತ್ರದ ಪರೀಕ್ಷೆ!

|

ಮನುಷ್ಯನಾದ ಮೇಲೆ ಆತನಿಗೆ ಭೀತಿ ಅನ್ನುವುದು ಇದ್ದೇ ಇರುತ್ತದೆ. ಇಂತಹ ಭೀತಿಯ ಮೇಲೆ ಗೆಲುವು ಸಾಧಿಸಿದರೆ ಆಗ ಆ ವ್ಯಕ್ತಿಯು ತುಂಬಾ ಸಂತೋಷವಾಗಿರುವನು ಎಂದು ಅಮೆರಿಕಾದ ಇತಿಹಾಸತಜ್ಞ ಮತ್ತು ಲೇಖಕ ಜೋಸೆಫ್ ಕ್ಯಾಂಪೆಲ್, ಮನುಷ್ಯರ ಮನಶಾಸ್ತ್ರದ ಮೇಲೆ ನಡೆಸಿರುವ ಅಧ್ಯಯನ ಮತ್ತು ಆತನ ಮನಶಾಸ್ತ್ರದ ಸಿದ್ಧಾಂತವು ಹೇಳುತ್ತದೆ.

ನೀವು ಯಾವತ್ತೂ ಪ್ರವೇಶಿಸಬಾರದೆಂದು ಯೋಚಿಸಿರುವಂತಹ ಕೆಲವೊಂದು ಸ್ಥಳಗಳನ್ನು ಇಲ್ಲಿ ನೀಡಲಾಗಿದೆ. ಇದನ್ನು ಆಯ್ಕೆ ಮಾಡಿಕೊಂಡು ನಿಮ್ಮ ಮನಶಾಸ್ತ್ರದ ಪರೀಕ್ಷೆ ಮಾಡಿಕೊಳ್ಳಿ. ಇದು ನಮ್ಮಲ್ಲಿರುವ ಭೀತಿಯ ಬಗ್ಗೆ ಹೇಳುತ್ತದೆ ಮತ್ತು ಅದು ನಮ್ಮಲ್ಲಿ ಯಾವ ರೀತಿಯ ಕೋಟೆ ಕಟ್ಟಿಕೊಂಡಿದೆ ಎನ್ನುವುದನ್ನು ತೋರಿಸುತ್ತದೆ. ಚಿತ್ರದಲ್ಲಿರುವ ಒಂದು ಸ್ಥಳವನ್ನು ಆಯ್ಕೆ ಮಾಡಿಕೊಳ್ಳಿ ಮತ್ತು ನಿಮ್ಮ ಮನಶಾಸ್ತ್ರದ ಪರೀಕ್ಷೆ ಮಾಡಿಸಿಕೊಳ್ಳಿ...

ಅನಾಥ ಮನೆ

ಅನಾಥ ಮನೆ

ಅನಾಥ ಮನೆಯನ್ನು ನೀವು ಆಯ್ಕೆ ಮಾಡಿಕೊಂಡಿದ್ದರೆ ನೀವೊಬ್ಬ ತುಂಬಾ ಜಾಣ್ಮೆಯ ವ್ಯಕ್ತಿ ಮತ್ತು ವಿಚಾರಗಳನ್ನು ಅದರಂತೆ ನೋಡುವಂತಹ ತುಂಬಾ ವಿಶ್ಲೇಷಾತ್ಮಕ ವ್ಯಕ್ತಿ. ನಿಮಗೆ ಮುಖ್ಯವಾಗಿರುವಂತಹ ವಿಚಾರಗಳಿಗೆ ಹೆಚ್ಚು ಮೌಲ್ಯ ನೀಡುತ್ತೀರಿ. ಖಾಲಿ ಗೋಡೆಗಳ ಸಂಕೇತವೆಂದರೆ ನೀವು ಭಾವನಾತ್ಮಕ ಹಾಗೂ ಆಧ್ಯಾತ್ಮಕವಾಗಿ ತುಂಬಾ ಮೇಲ್ಭಾಗದಲ್ಲಿದ್ದೀರಿ. ಇದನ್ನು ಮುಟ್ಟಲು ಬೇರೆಯವರಿಗೆ ಸಾಧ್ಯವಿಲ್ಲ. ಇನ್ನೊಂದು ಕಡೆಯಲ್ಲಿ ನಿಮಗೆ ತುಂಬಾ ನಿಕಟ ಆದರೆ ನಿಜವಾದ ಗೆಳೆಯರು ಇರುವುದು ತುಂಬಾ ಕಡಿಮೆ. ನೀವು ಜೀವನದಲ್ಲಿ ಪಡೆಯಲು ಬಯಸಿರುವಂತಹ ನಿಧಿಯು ಭಾವನಾತ್ಮಕ ತೃಪ್ತಿಗೆ ಹೊರತು ಭೌತಿಕವಾಗಿಯಲ್ಲ.

ಮಂಜಿನ ಗುಹೆ

ಮಂಜಿನ ಗುಹೆ

ಮಂಜಿನ ಗುಹೆಯನ್ನು ಆಯ್ಕೆ ಮಾಡಿಕೊಂಡಿರುವುದೆಂದರೆ ನೀವು ತುಂಬಾ ದೀರ್ಘ ಕಾಲದಿಂದ ನಿಮ್ಮ ಸುತ್ತಲು ಭಾವನಾಥ್ಮಕ ಸಂತೋಷದ ಹುಡುಕಾಟ ನಡೆಸುತ್ತಿದ್ದೀರಿ. ಪ್ರೀತಿಯಲ್ಲಿ ನೀವು ಹುಡುಕುವಂತಹ ನಿಧಿಯು ರೋಮ್ಯಾಂಟಿಕ್ ಮತ್ತು ನಿಷ್ಕಾಮವಾಗಿದೆ. ವೈಯಕ್ತಿಕವಾಗಿ ನೀವು ತುಂಬಾ ನಿರಾಶೆಯ ಭಾವನೆಯಲ್ಲಿರುವಿರಿ. ಆದರೂ ನೀವು ಏಕಾಂಗಿಯಾಗಿರಲು ಬಯಸುವಿರಿ. ಇದೇ ವೇಳೆ ನೀವು ಒಂದು ಸುಂದರ ಜೀವನ ಬದುಕಲು ಬಯಸುವಿರಿ. ಇನ್ನೊಂದು ಕಡೆಯಲ್ಲಿ ನೀವು ಶ್ರೇಷ್ಠ ಮೌಲ್ಯಗಳಿರುವ ವ್ಯಕ್ತಿಯಾಗಿದ್ದೀರಿ. ನಿಮಗೆ ಸ್ವಾತಂತ್ರ್ಯವನ್ನು ಪ್ರಶಂಸಿಸುವ ವ್ಯಕ್ತಿಯಾಗಿರುವಿರಿ.

ಸರಪಳಿ ಕಟ್ಟಿರುವ ಬಾಗಿಲು

ಸರಪಳಿ ಕಟ್ಟಿರುವ ಬಾಗಿಲು

ಇದನ್ನು ಆಯ್ಕೆ ಮಾಡಿಕೊಂಡಿದ್ದರೆ ನೀವು ತುಂಬಾ ಉತ್ಪಾದಕತ್ವ ಹೊಂದಿರುವ ಮತ್ತು ನೀವು ಹಾಕಿಕೊಂಡಿರುವ ಕಠಿಣ ಗುರಿಯನ್ನು ತಲುಪಲು ಬಯಸುವಿರಿ. ನೀವು ತುಂಬಾ ಕ್ರಿಯಾತ್ಮಕ ಮತ್ತು ಯಾವಾಗಲೂ ಸಮಸ್ಯೆಗಳನ್ನು ಬಗೆಹರಿಸಲು ಬಯಸುವಿರಿ. ನೀವೊಬ್ಬ ಒಳ್ಳೆಯ ನಾಯಕ ಮತ್ತು ಶ್ರೇಷ್ಠವಾಗಿರುವುದನ್ನು ನೀಡುವಿರಿ. ಇನ್ನೊಂದು ಕಡೆಯಲ್ಲಿ ನೀವು ಕೆಲಸಕ್ಕೆ ನಿಮ್ಮನ್ನು ಹೆಚ್ಚು ತೊಡಗಿಸಿಕೊಳ್ಳಲ್ಲ. ಇದರಿಂದ ನೀವು ವಿಶ್ರಾಂತಿ ಪಡೆದುಕೊಂಡು ಜೀವನದ ಸಣ್ಣ ವಿಷಯಗಳನ್ನು ಆನಂದಿಸುವಿರಿ.

ಗಾಢ ಗುಹೆ

ಗಾಢ ಗುಹೆ

ನೀವು ಗಾಢ ಕಪ್ಪು ಗುಹೆ ಆಯ್ಕೆ ಮಾಡಿಕೊಂಡಿದ್ದರೆ, ನಿಮ್ಮ ಭಾವನೆಗಳನ್ನು ಪರೀಕ್ಷಿಸಿಕೊಳ್ಳಬೇಕೆಂದು ಅರ್ಥವಿದೆ. ವ್ಯಕ್ತಿಗತವಾಗಿ ನೀವು ತುಂಬಾ ಜಾಣ ಮತ್ತು ಭಾವನಾತ್ಮಕವಾಗಿರುವಿರಿ. ಗಾಢ ಗುಹೆಯ ಅರ್ಥವೆಂದರೆ ನಿಮ್ಮ ಮನಸ್ಸು ಶುದ್ಧವಾಗಬೇಕು, ಇದರಿಂದ ನಿಮ್ಮ ಆಲೋಚನೆಗಳನ್ನು ಸರಿಯಾಗಿ ನೋಡಲು ಮತ್ತು ಅರ್ಥ ಮಾಡಿಕೊಳ್ಳಲು ಸಾಧ್ಯವಾಗುವುದು. ಇನ್ನೊಂದು ಬದಿಯಲ್ಲಿ ನೀವು ಸಮಸ್ಯೆಗಳ ಬಗ್ಗೆ ಚಿಂತೆ ಮಾಡುವುದನ್ನು ಬಿಡಬೇಕು ಮತ್ತು ಪರಿಹಾರ ಕಂಡುಕೊಳ್ಳಬೇಕು. ಗುಹೆಯ ಅಂತ್ಯದಲ್ಲಿ ಎಲ್ಲವೂ ಸ್ಪಷ್ಟವಾಗುವುದು ಎನ್ನುವುದನ್ನು ನೀವು ನೆನಪಿಟ್ಟುಕೊಳ್ಳಿ.

ಮರದ ಮನೆ

ಮರದ ಮನೆ

ಈ ಜಾಗಕ್ಕೆ ಭೇಟಿನೀಡಬಾರದೆಂದು ನೀವು ಯೋಚಿಸಿದ್ದರೆ ಆಗ ನೀವೊಬ್ಬ ಉದಾರ ವ್ಯಕ್ತಿ ಮತ್ತು ಯಾವಾಗಲೂ ಇತರರಿಗೆ ನೆರವಾಗುತ್ತೀರಿ. ವೈಯಕ್ತಿಕವಾಗಿ ನೀವು ತುಂಬಾ ನಿಷ್ಠ ಮತ್ತು ಪ್ರಾಮಾಣಿಕನಾಗಿರುವಿರಿ. ಆದರೆ ಇದನ್ನು ಪ್ರತಿಯೊಬ್ಬರು ಪ್ರಶಂಸೆ ಮಾಡಲ್ಲ. ಮರದ ಮನೆಯ ಬಗ್ಗೆ ನಿಮಗೆ ಭೀತಿಯಿದ್ದರೆ ನಿಮ್ಮ ಗುರಿಯು ಸಂಪತ್ತಿನ ಕಡೆಗಿದೆ ಎಂದರ್ಥ. ನೀವು ಇದನ್ನು ಪಡೆಯಲು ತುಂಬಾ ಕಠಿಣ ಶ್ರಮ ಪಡಬೇಕು.

ಮೆಟ್ಟಿಲುಗಳು

ಮೆಟ್ಟಿಲುಗಳು

ಈ ಚಿತ್ರವನ್ನು ನೀವು ಆಯ್ಕೆ ಮಾಡಿಕೊಂಡಿದ್ದರೆ ಆಗ ನಿಮಗೆ ಸಮಾಧಿಯಾಗುವ ಭೀತಿಯಿರುವುದು. ನಿಮಗೆ ಯಾವಾಗಲೂ ಸಾವಿನ ಭಯ ಕಾಡುತ್ತಾ ಇರುತ್ತದೆ ಮತ್ತು ನಿಮ್ಮ ದಾರಿಯಲ್ಲಿ ಏನು ಬರುತ್ತದೆ ಎನ್ನುವುದು ತಿಳಿದಿರುವುದಿಲ್ಲ. ನೀವು ಒಳ್ಳೆಯ ಆರೋಗ್ಯದ ನಿಧಿ ಬಯಸುತ್ತೀರಿ. ಇನ್ನೊಂದು ಬದಿಯಲ್ಲಿ ನೀವು ಅತಿಯಾಗಿ ಯೋಚಿಸುತ್ತೀರಿ. ಆದರೆ ನಿಮ್ಮ ಜೀವನ ಸಾಗುತ್ತಿರುವ ಬಗ್ಗೆ ಸಂತೋಷಪಡುತ್ತೀರಿ.

ಇನ್ನಷ್ಟು ಕುತೂಹಲ ಹಾಗೂ ಸತ್ಯ ವಿಷಯಗಳಿಗೆ ಲೇಖನಗಳನ್ನು ಓದುತ್ತಾ ಇರಿ.

English summary

Psychological Test: Which Place Are You Scared To Enter

An American historian and writer named Joseph Campbell had researched human psychology and in his psychological theory, he coined the fact that if a person wishes to conquer on his fears, then he should be happy. Here is a psychological test in which all that you need to do is pick a place which you think you would never enter to! This reveals about the fears that we have within us and how we create barriers around us and let our fears breed in. So, pick a place from the above picture and find out about its psychological facts.
Story first published: Wednesday, March 7, 2018, 18:27 [IST]
X
Desktop Bottom Promotion