ನೀವು ಗುರುವಾರ ಹುಟ್ಟಿದವರಾ? ಹಾಗಾದರೆ ವ್ಯಕ್ತಿತ್ವ ಹೀಗೇ ಇರುವುದು...

Posted By: Deepu
Subscribe to Boldsky

ನಿರಂತರವಾಗಿ ಅದೃಷ್ಟವನ್ನು ಪಡೆದುಕೊಳ್ಳುತ್ತಿದ್ದರೆ ಅಥವಾ ನಿರಂತರವಾದ ಕಷ್ಟವನ್ನು ಅನುಭವಿಸುತ್ತಿದ್ದರೆ ಆಹಾ! ಎಂತಹ ದಿನದಲ್ಲಿ ಹುಟ್ಟಿದ್ದೀಯಾ? ಎನ್ನುವ ಪ್ರಶ್ನೆಯನ್ನು ಕೇಳುತ್ತಾರೆ. ಅದೃಷ್ಟವಾಗಿದ್ದರೆ ಖುಷಿಯಲ್ಲಿ ಕೇಳುತ್ತಾರೆ. ಕಷ್ಟವನ್ನು ಅನುಭವಿಸುತ್ತಿದ್ದರೆ ಅದೇ ಪ್ರಶ್ನೆಯನ್ನು ದುಃಖದಲ್ಲಿ ಕೇಳುತ್ತಾರೆ ಅಷ್ಟೆ. ವ್ಯಕ್ತಿಯ ವ್ಯಕ್ತಿತ್ವ ಅದೃಷ್ಟ, ಮಾನಸಿಕ ಸ್ಥಿತಿ ಎಲ್ಲವೂ ಗ್ರಹಗತಿಗಳು ಹಾಗೂ ರಾಶಿಚಕ್ರದ ಪ್ರಭಾವದಿಂದ ಉಂಟಾಗುತ್ತದೆ ಎಂದು ಜ್ಯೋತಿಷ್ಯ ಶಾಸ್ತ್ರ ಹೇಳುತ್ತದೆ. ನಮ್ಮ ವೈವಾಹಿಕ ಜೀವನ, ವಿದ್ಯಾಭ್ಯಾಸ, ಸಾಮಾಜಿಕ ಬದುಕು, ಬಂಧುಗಳ ಬಳಗ ಹೀಗೆ ಅನೇಕ ವಿಚಾರಗಳು ನಾವು ಯಾವ ವಾರ ಹುಟ್ಟಿದ್ದೇವೆ? ಎನ್ನುವುದರ ಮೇಲೂ ನಿರ್ಧಾರವಾಗುತ್ತದೆ. ವಾರದ ಏಳು ದಿನಗಳಲ್ಲಿ ಪ್ರತಿಯೊಂದು ವಾರವು

ಒಂದೊಂದು ವಿಶೇಷವನ್ನು ಪಡೆದುಕೊಂಡಿರುತ್ತದೆ. ಅಂತಹ ವಿಶೇಷವಾದ ವಾರದಲ್ಲಿ ನೀವು ಯಾವ ವಿಶೇಷವಾದ ದಿನದಲ್ಲಿ ಜನಿಸಿದ್ದೀರಿ? ಎನ್ನುವುದರ ಆಧಾರದ ಮೇಲೆ ಜೀವನದ ಕೆಲವು ಪ್ರತಿಫಲವನ್ನು ಅನುಭವಿಸುವಿರಿ. ನೀವು ಗುರುವಾರ ಜನಿಸಿದ್ದೀರಿ ಅಥವಾ ನಿಮ್ಮವರು ಗುರುವಾರ ಹುಟ್ಟಿದವರು ಎಂದಾದರೆ ಈ ಮುಂದೆ ನೀಡಿರುವ ವಿಶೇಷ ವಿವರಣೆಯನ್ನು ಪರಿಶೀಲಿಸಿ....

ಗುರುವಾರ ಜನಿಸಿದವರ ವ್ಯಕ್ತಿತ್ವ

ಗುರುವಾರ ಜನಿಸಿದವರ ವ್ಯಕ್ತಿತ್ವ

ಗುರುವಾರ ಹುಟ್ಟಿದ ವ್ಯಕ್ತಿಗಳು ಗುರುಗ್ರಹದ ಆಳ್ವಿಕೆಗೆ ಒಳಗಾಗಿರುತ್ತಾರೆ. ಹಾಗಾಗಿ ಈ ವಾರ ಹುಟ್ಟಿದ ವ್ಯಕ್ತಿಗಳು ಕೆಲವು ವಿಚಾರದಲ್ಲಿ ಅತ್ಯಂತ ಅದೃಷ್ಟ ಶಾಲಿಗಳಾಗಿರುತ್ತಾರೆ. ಇವರು ಜೀವನದಲ್ಲಿ ವಿಸ್ತಾರವಾದ ಸಂಪತ್ತನ್ನು ಅನುಭವಿಸುತ್ತಾರೆ. ಎಲ್ಲಾ ಅದೃಷ್ಟಗಳು ಬಹಳ ದೊಡ್ಡದಾಗಿರುತ್ತವೆ. ಇವರು ಹಾಗೊಮ್ಮೆ ಖಿನ್ನತೆಗೆ ಒಳಗಾಗಿದ್ದರೂ ಬಹುಬೇಗ ಚೇತರಿಕೆಯನ್ನು ಕಂಡು ಜೀವನದಲ್ಲಿ ಆಶಾವಾದಿಗಳಾಗಿ ಬದುಕುತ್ತಾರೆ. ಹಾಗಾಗಿಯೇ ಇವರು ಅತ್ಯುತ್ತಮ ರೀತಿಯಲ್ಲಿ ಜೀವನದ ಏಳುಬೀಳುಗಳನ್ನು ಅನುಭವಿಸುತ್ತಾರೆ.

ವ್ಯಕ್ತಿತ್ವವನ್ನು ಹೀಗೆ ವ್ಯಾಖ್ಯಾನಿಸಬಹುದು

ವ್ಯಕ್ತಿತ್ವವನ್ನು ಹೀಗೆ ವ್ಯಾಖ್ಯಾನಿಸಬಹುದು

ಇವರು ಹುಟ್ಟಿನಿಂದಲೇ ಶಿಕ್ಷಕರ ಪ್ರವೃತ್ತಿಯನ್ನು ಹೊಂದಿರುತ್ತಾರೆ. ಉತ್ತಮ ಸಲಹೆಗಾರರು ಹಾಗೂ ಮಾರ್ಗದರ್ಶಕ ರಾಗುವರು. ಇವರ ಮಾರ್ಗದರ್ಶನ ಹಾಗೂ ಸಲಹೆಯನ್ನು ಸುತ್ತಲಿನ ಜನರು ಪಡೆದುಕೊಳ್ಳುತ್ತಾರೆ. ಇವರ ಅದೃಷ್ಟ ಸಂಖ್ಯೆ 3 ಎಂದು ಹೇಳಲಾಗುವುದು.

ವೃತ್ತಿ ಜೀವನದ ಮುಂಭಾಗದಲ್ಲಿ...

ವೃತ್ತಿ ಜೀವನದ ಮುಂಭಾಗದಲ್ಲಿ...

ನಾಯಕತ್ವ ಗುಣವನ್ನು ಹೊಂದಿದ ಇವರು ಉತ್ತಮ ಸ್ಥಾನವನ್ನು ಪಡೆದು ಕೊಳ್ಳುವರು. ತಮ್ಮ ವರ್ಚಸ್ಸು ಹಾಗೂ ವ್ಯಕ್ತಿತ್ವದಿಂದಲೇ ಇತರರು ಇವರ ಹಿಂಬಾಲಕರಾಗುತ್ತಾರೆ. ಉನ್ನತ ಮಟ್ಟದ ಕಾರ್ಯನಿರ್ವಾಹಕ ಪಾತ್ರವನ್ನು ಒಳಗೊಂಡಿರುವ ಜವಾಬ್ದಾರಿಯನ್ನು ನಿರ್ವಹಿಸುತ್ತಾರೆ. ವೃತ್ತಿ ಜೀವನವು ಇವರಿಗೆ ಸಾಕಷ್ಟು ಅನುಕೂಲವನ್ನು ತಂದುಕೊಡುತ್ತದೆ. ಉದ್ಯೋಗ ಅಥವಾ ವ್ಯವಹಾರದಲ್ಲಿ ಇವರು ಉನ್ನತ ಮಹತ್ವಾಕಾಂಕ್ಷೆಯಿಂದ ಹಾರಾಡುತ್ತಾ, ಜಯ ಸಾಧಿಸುತ್ತಾರೆ.

ವೃತ್ತಿ ಜೀವನದ ಮುಂಭಾಗದಲ್ಲಿ... (ಮುಂದುವರಿದ ಭಾಗ)

ವೃತ್ತಿ ಜೀವನದ ಮುಂಭಾಗದಲ್ಲಿ... (ಮುಂದುವರಿದ ಭಾಗ)

ಇವರು ಒಂದೇ ಬಗೆಯ ಕೆಲಸವನ್ನು ನಿರ್ವಹಿಸುತ್ತಾ ಸಾಗಿದರೆ ಬಹುಬೇಗ ಬೇಸರಕ್ಕೆ ಒಳಗಾಗುತ್ತಾರೆ. ಇವರಿಗೆ ವಿವಿಧ ಪ್ರಮಾಣದ ಮತ್ತು ಹೊಸ ಬಗೆಯ ಬದಲಾವಣೆಯನ್ನು ಇವರು ಬಯಸುತ್ತಾರೆ. ಇವರು ಬಹಳಷ್ಟು ಜವಾಬ್ದಾರಿಯನ್ನು ಹೊಂದಿದ್ದರೂ ಸಹ, ಇನ್ನಷ್ಟು ಪ್ರಗತಿ ಹೊಂದಲು ಬಯಸುತ್ತಾರೆ. ಇವರು ದಿನನಿತ್ಯದ ಪುನರಾವರ್ತಿತ ಕೆಲಸ ಮತ್ತು ಏಕತಾನತೆಗೆ ಅಂಟಿಕೊಳ್ಳುವುದಿಲ್ಲ.

 ಇವರ ಪ್ರೀತಿ ಜೀವನ

ಇವರ ಪ್ರೀತಿ ಜೀವನ

ಇವರು ಇತರರ ಮನಸ್ಸಿನಲ್ಲಿ ಏನಿದೆ ಎನ್ನುವುದರ ಬಗ್ಗೆ ಚಿಂತಿಸದೆ ಅಥವಾ ಯೋಚಿಸದೆಯೇ ನೇರವಾಗಿ ತಮ್ಮ ಮನಸ್ಸಿನಲ್ಲಿ ಏನಿದೆ ಎನ್ನುವುದನ್ನು ಹಾಗೂ ತಮ್ಮ ಭಾವನೆಯನ್ನು ವ್ಯಕ್ತಪಡಿಸುತ್ತಾರೆ. ಇವರ ಮೊಂಡು ವಿಧಾನದಿಂದ ಮೃದುವಾದ ಪ್ರೇಮ ಜೀವನವು ಕಷ್ಟದ ಸನ್ನಿವೇಶವನ್ನು ಎದುರಿಸುವ ಸಾಧ್ಯತೆಗಳಿರುತ್ತವೆ. ಇವರು ತಮ್ಮ ಪ್ರೀತಿಯಲ್ಲಿ ಆಳವಾಗಿ ಇರುತ್ತಾರೆ.

ಇವರ ಪ್ರೀತಿ ಜೀವನ (ಮುಂದುವರಿದ ಭಾಗ)

ಇವರ ಪ್ರೀತಿ ಜೀವನ (ಮುಂದುವರಿದ ಭಾಗ)

ಇವರು ತಮ್ಮ ಪ್ರೀತಿಪಾತ್ರರನ್ನು ಮೆಚ್ಚಿಸಲು ಎಂತಹ ಕೆಲಸವನ್ನಾದರೂ ಮಾಡಲು ಮುಂದಾಗುವರು. ಇವರು ಸಾಮಾನ್ಯವಾಗಿ ಬಹು ಬೇಗ ಬೇಸರಕ್ಕೆ ಒಳಗಾಗುತ್ತಾರೆ. ಹಾಗಾಗಿ ಸಾಹಸ ಪ್ರವೃತ್ತಿಯವರನ್ನು ಹೆಚ್ಚು ಇಷ್ಟಪಡುತ್ತಾರೆ.

ವಿವಾಹದ ಜೀವನದ ಕುರಿತು

ವಿವಾಹದ ಜೀವನದ ಕುರಿತು

ಇವರು ತಮ್ಮ ಕೋಪ ಮತ್ತು ಹತಾಷೆಯ ಭಾವವನ್ನು ನಿಯಂತ್ರಣದಲ್ಲಿ ಇಟ್ಟುಕೊಂಡರೆ ವೈವಾಹಿಕ ಜೀವನದಲ್ಲಿ ತೃಪ್ತಿಯನ್ನು ಕಾಣುತ್ತಾರೆ. ಇವರು ಅನಗತ್ಯ ವಾದಗಳು ಮತ್ತು ವಿವಾದವನ್ನು ಅನುಭವಿಸುತ್ತಿದ್ದರೂ ತಮ್ಮ ಸಂಗಾತಿಯ ಭಾವನೆಗೆ ಯಾವುದೇ ರೀತಿಯ ಹಾನಿಯುಂಟಾಗದಂತೆ ನೋಡಿಕೊಳ್ಳುತ್ತಾರೆ.

ವಿವಾಹದ ಜೀವನದ ಕುರಿತು (ಮುಂದುವರಿದ ಭಾಗ)

ವಿವಾಹದ ಜೀವನದ ಕುರಿತು (ಮುಂದುವರಿದ ಭಾಗ)

ತಮ್ಮ ಕುಟುಂಬದ ಜವಾಬ್ದಾರಿಯನ್ನು ಉತ್ತಮವಾಗಿ ನಿರ್ವಹಿಸುವ ಇವರು ಹೆಚ್ಚಾಗಿ ನಿಸರ್ಗದೊಡನೆ ಇರಲು ಇಷ್ಟಪಡುತ್ತಾರೆ. ಹಾಗಾಗಿಯೇ ತಮ್ಮ ಕುಟುಂಬದವರನ್ನು ಹೊರಗಡೆಯ ಪ್ರಪಂಚಕ್ಕೆ ಕರೆದೊಯ್ಯುತ್ತಿರುತ್ತಾರೆ. ಹಣಕಾಸಿನ ಸ್ಥಿರತೆಗಾಗಿ ಇವರು ಕೆಲಸವನ್ನು ಮಾಡಬೇಕಾಗುವುದು. ಉತ್ತಮ ಗುರಿ ಸಾಧನೆಯನ್ನು ಮಾಡುತ್ತಾರೆ. ಜೊತೆಗೆ ಯಶಸ್ವಿ ವಿವಾಹವನ್ನು ಹೊಂದುತ್ತಾರೆ. ಒಟ್ಟಾರೆಯಾಗಿ ಹೇಳುವುದಾದರೆ ಗುರುವಾರ ಜನಿಸಿದ ವ್ಯಕ್ತಿಗಳು ಉದಾರ ಜನರಾಗಿದ್ದು, ತಮ್ಮ ಅತ್ಯುತ್ತಮ ಸೇವೆ ನೀಡಲು ಸಿದ್ಧರಾಗಿರುತ್ತಾರೆ.

 

English summary

Personality Of People Born On Thursday

Do you know that the day we are born has many auspicious things related to it? From the time of birth, to the date and even the day! All of these things have their own significances. Today, here at Boldsky, we are sharing the luck factors of the individuals who are born on a Thursday.