Latest Updates
-
ಮದುವೆಯಾದ ತಕ್ಷಣ ಸ್ವಾತಂತ್ರ್ಯ ಕೊನೆಗೊಳ್ಳುವುದಿಲ್ಲ: ದಾಂಪತ್ಯದಲ್ಲಿ 'ಸಮ್ಮತಿ'ಯ ಮಹತ್ವವೇನು? -
ಕೇರಳದಲ್ಲಿ ಭಾರೀ ಮಳೆ: ಯೆಲ್ಲೋ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆ ಕ್ರಮಗಳು ಅತ್ಯಗತ್ಯ -
ಗಣೇಶ ಹಬ್ಬದ ಪ್ರಸಾದ ತಯಾರಿಸುತ್ತಿದ್ದೀರಾ? ಕಲಬೆರಕೆ ತಡೆಯಲು ಮತ್ತು ಸುರಕ್ಷಿತ ಪ್ರಸಾದಕ್ಕೆ ಇಲ್ಲಿದೆ ಮಹತ್ವದ ಟಿಪ್ಸ್ -
ಐಫೋನ್ 18 ಪ್ರೋ ಮತ್ತು ಡ್ಯುವೋ ಭಾರತದಲ್ಲಿ ಲಾಂಚ್: ಬೆಲೆ, ಆಫರ್ ಮತ್ತು ಪ್ರಿ-ಆರ್ಡರ್ ಮಾಹಿತಿ ಇಲ್ಲಿದೆ! -
ವಿಶ್ವ ಆತ್ಮಹತ್ಯೆ ತಡೆ ದಿನ: ಮಾನಸಿಕ ಆರೋಗ್ಯ ಸುಧಾರಿಸಲು 10 ನಿಮಿಷದ ಸಿಂಪಲ್ ಮಾರ್ನಿಂಗ್ ರೂಟೀನ್ ಮತ್ತು ಹೆಲ್ಪ್ಲೈನ್ ವಿವರಗಳು -
ವಿಚ್ಛೇದನದ ನಂತರವೂ ಜೀವನಾಂಶ ಪಡೆಯಬಹುದೇ? ಮಧ್ಯಪ್ರದೇಶ ಹೈಕೋರ್ಟ್ನಿಂದ ಮಹತ್ವದ ತೀರ್ಪು! -
ದೆಹಲಿ ವಾಯು ಮಾಲಿನ್ಯ: ಮನೆಯಲ್ಲಿ ಶುದ್ಧ ಗಾಳಿ ಪಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ಪ್ಯಾಕ್ ಮಾಡಿದ ಆಹಾರದ ಮೇಲೆ 'ರೆಡ್ ಹೆಕ್ಸಗನ್' ಎಚ್ಚರಿಕೆ: ಇನ್ಮುಂದೆ ತಿನ್ನುವ ಮುನ್ನ ಈ ವಿಷಯ ಗಮನಿಸಿ! -
ಆಪಲ್ 'ಸರ್ಪ್ರೈಸ್ ಆಂಡ್ ಶೈನ್' ಈವೆಂಟ್: ಐಫೋನ್ 18 ಪ್ರೋ ಮತ್ತು ಫೋಲ್ಡಬಲ್ ಆಲ್ಟ್ರಾ ಲಾಂಚ್, ಭಾರತದಲ್ಲಿ ಬೆಲೆ ಎಷ್ಟು? -
ಟಾಟಾ ಮುಂಬೈ ಮ್ಯಾರಥಾನ್ ಡ್ರೀಮ್ ರನ್: ಇಂದೇ ನೋಂದಣಿ ಮುಕ್ತಾಯ, ಓಟಕ್ಕೆ ಸಜ್ಜಾಗಲು 20 ನಿಮಿಷದ ಪ್ಲಾನ್ ಇಲ್ಲಿದೆ!
ಗಿನ್ನಿಸ್ ದಾಖಲೆಗೋಸ್ಕರ ಏನೆಲ್ಲಾ ಕಸರತ್ತು ಮಾಡುತ್ತಾರೆ ನೋಡಿ...
ನೀವು ಸ್ವತಃ ಅಥವಾ ಅಂತರ್ಜಾಲದ ಮಾಹಿತಿಯ ಮೂಲಕ ಕಂಡಿರುವ ಅತ್ಯಂತ ವಿಲಕ್ಷಣ ವಿಷಯ ಯಾವುದು? ನೆನಪಾಗಲು ಕೊಂಚ ಕಷ್ಟವಾದರೆ ಗಿನ್ನಿಸ್ ದಾಖಲೆಗಳ ಬಗ್ಗೆ ಕೊಂಚ ಅಂತರ್ಜಾಲದಲ್ಲಿ ಜಾಲಾಡಿದರೂ ಸಾಕು, ಸಾವಿರಾರು ವಿಲಕ್ಷಣ ಮಾಹಿತಿಗಳು ದೊರಕುತ್ತವೆ. ಅಷ್ಟಕ್ಕೂ ಗಿನ್ನಿಸ್ ದಾಖಲೆ ಇರುವುದೇ ಇಂತಹ ಅಸಂಬದ್ಧತೆಗಳನ್ನೇ ದಾಖಲು ಮಾಡಿಕೊಳ್ಳುವುದಕ್ಕಲ್ಲವೇ?
ಆದರೆ ಈ ಪಟ್ಟಿಯಲ್ಲಿ ಪ್ರವೇಶ ಪಡೆಯಲು ಕೇವಲ ಅಸಂಬದ್ಧ ಅಥವಾ ಅಪಾಯಕಾರಿಯಾದ ಅಥವಾ ನಾಲ್ಕಾಣೆಗೂ ಪ್ರಯೋಜನವಿಲ್ಲದ ಪ್ರಯತ್ನಗಳನ್ನು ಮಾಡಿ ಯಶಸ್ವಿಯಾದವರೇ ಅಧಿಕ. ಅಲ್ಲಲ್ಲಿ ನಡುನಡುವೆ ನಿಸರ್ಗದ ವೈಪರೀತ್ಯಗಳೂ ಕಾಣಬರುತ್ತವೆ. ಬನ್ನಿ, ಇಂತಹ ಕೆಲವು ವಿಲಕ್ಷಣ ಸಂಗತಿಗಳನ್ನು ನೋಡೋಣ::
ಇಂದಿನ ಲೇಖನದಲ್ಲಿ ಈ ಪುಸ್ತಕದಲ್ಲಿ ದಾಖಲು ಮಾಡಿಕೊಳ್ಳಲು ಈ ವ್ಯಕ್ತಿಗಳು ನಡೆಸಿದ ಯತ್ನ ಅಥವಾ ಅರ್ಹತೆ ನಿಮ್ಮನ್ನು ಇತರ ವಿಷಯಗಳಿಗಿಂತಲೂ ಹೆಚ್ಚು ಕುತೂಹಲಕಾರಿಯಾಗಿ ಕಾಣಿಸುವುದು ಖಂಡಿತ! ಇವರಲ್ಲಿ ಕೆಲವರು ತಮಗೆ ದೇವರು ನೀಡಿದ ದೈಹಿಕ ವೈಕಲ್ಯವನ್ನೇ ಅರ್ಹತೆಯಾಗಿಸಿದ್ದರೆ ಉಳಿದವರು ಬೇರೆ ಯಾರೂ ಯೋಚಿಸದೇ ಇದ್ದ ಕಾರ್ಯವನ್ನು ಎಸಗಿ ಎಲ್ಲರೂ ಭೇಷ್ ಎನ್ನುತ್ತಾರೆ ಎಂಬ ಭ್ರಮೆಯನ್ನು ಮೂಡಿಸಿಕೊಂಡಿದ್ದಾರೆ. ಇದರಲ್ಲಿ ಪ್ರಮುಖವಾದವುಗಳ ಬಗ್ಗೆ ಅರಿಯೋಣ.

ಅತಿ ದೀರ್ಘವಾದ ಚುಂಬನ!
Images source
ಒಂದು ವ್ಯಾಲೈಂಟೈನ್ ದಿನದಂದು ಒಂದು ಜೋಡಿ ಎಷ್ಟು ಹೊತ್ತು ಚುಂಬಿಸಬಹುದು? ನಿಮ್ಮ ಲೆಕ್ಕ ನಿಮಿಷಗಳಲ್ಲಿದ್ದರೆ ನಿಮ್ಮ ಊಹೆಯನ್ನು ಇನ್ನೂ ವಿಸ್ತರಿಸಿ. ಘಂಟೆಗಲ್ಲ, ಘಂಟೆಗಳಿಗೆ! ಥಾಯ್ಲೆಂಡಿನ 'ಎಕ್ಕಾಚಾಯ್ ಮತ್ತು ಲಕ್ಸಾನಾ ತಿನರಾತ್' ಎಂಬ ಜೋಡಿ ಈ ದಿನ ಚುಂಬಿಸಲು ಪ್ರಾರಂಭಿಸಿ 58 ಗಂಟೆ, 35 ನಿಮಿಷ ಮತ್ತು 58 ಸೆಕೆಂಡ್ಸ್ ಕಾಲ ಸತತವಾಗಿ ಚುಂಬಿಸಿ ಈ ದಾಖಲೆ ಪಡೆದಿದ್ದಾರೆ. ಅಲ್ಲಿಯವರೆಗೆ ಇವರು ಊಟ, ನಿದ್ದೆ, ನಿಸರ್ಗದ ಕರೆ ಇವನ್ನೆಲ್ಲಾ ಹೇಗೆ ನಿಗ್ರಹಿಸಿಕೊಂಡಿದ್ದರು ಎಂಬುದೇ ದೊಡ್ಡ ಪ್ರಶ್ನೆ.

ಸುಪರ್-ಬಾಗುವ ಪಾದ
Images source
ಈ ವ್ಯಕ್ತಿಯ ಹೆಸರು ಮ್ಯಾಕ್ಸ್ವೆಲ್ ಡೇ. ಇವರು ಇಂಗ್ಲೆಂಡಿನವರು. ಇವರ ಪಾದಗಳು ಅತಿಯಾಗಿ ಬಾಗುವ ಗುಣ ಪಡೆದಿದೆ. ಇವರ ಬಲಪಾದ ಯಾರಿಗೂ ಸಾಧ್ಯವಿಲ್ಲದಷ್ಟು ಅಂದರೆ 157ಡಿಗ್ರಿಯವರೆಗೆ ತಿರುಗುತ್ತದೆ, ಅಂದರೆ ಹೆಚ್ಚೂಕಡಿಮೆ ಹಿಮ್ಮುಖವಾಗಿ. ಎಡಪಾದ 143 ಡಿಗ್ರಿಯವರೆಗೆ. ಇದರ ಹೊರತಾಗಿ ಎರಡೂ ಪಾದಗಳನ್ನು ಬಳಸಿ ಇವರು ನಿಂತೇ ಇದ್ದಂತೆ ಯಾರಿಗೂ ಸಾಧ್ಯವಾಗದಷ್ಟು ಹೆಚ್ಚು ಕೋನದಲ್ಲಿ ತಮ್ಮ ದೇಹವನ್ನು ತಿರುಗಿಸಬಲ್ಲರು. ಒಂದು ವೇಳೆ ಹೀಗೆ ಎರಡೂ ಪಾದಗಳನ್ನು ಹಿಮ್ಮುಖ ತಿರುಗಿಸಿ ನಮ್ಮ ಭಾರತದಲ್ಲೇನಾದರೂ ನಿಂತಿದ್ದರೆ ಇವರನ್ನು ಕಂಡವರು ತಕ್ಷಣ ಭೂತ ಎಂದು ತಿಳಿದುಕೊಳ್ಳುವ ಅಪಾಯವಿದೆ!

ಕಣ್ಣಿನಿಂದ ಹಾಲನ್ನು ಚಿಮ್ಮಿಸುವ ಪುರುಷ
Images source
ತುರ್ಕಿ ದೇಶದ ಯಿಲ್ಮಾಜ್ ಎಂಬ ಪುರುಷರೊಬ್ಬರಿಗೆ ನಿಸರ್ಗ ಒಂದು ವಿಲಕ್ಷಣ ಶಕ್ತಿ ನೀಡಿದೆ. ಅದೆಂದರೆ ಕಣ್ಣಿನಿಂದ ಹಾಲನ್ನು ಚಿಮ್ಮಿಸುವುದು. ಅದೂ ಕೊಂಚ ದೂರಕ್ಕಲ್ಲ, ಬರೋಬ್ಬರಿ 279.5 ಸೆ.ಮೀ ದೂರಕ್ಕೆ. ಇದುವರೆಗೆ ಕಣ್ಣಿನಿಂದ ದ್ರವವನ್ನು ಚಿಮ್ಮಿಸುವವರು ಅಲ್ಲಲ್ಲಿ ಕಂಡುಬಂದಿದ್ದರೂ ಇಷ್ಟು ದೂರ ಚಿಮ್ಮಿಸಿದ ದಾಖಲೆ ಮಾತ್ರ ತುರ್ಕಿ ದೇಶ ಪಡೆದಿದೆ. ಈ ಅದ್ಭುತಕ್ಕೇನು ಕಾರಣ ಎಂದು ಪರಿಶೀಲಿಸಿದ ವೈದ್ಯರಿಗೆ ಇವರ ಕಣ್ಣಿನಲ್ಲಿರುವ ಕಣ್ಣೀರಿನ ಗ್ರಂಧಿ ಹಾಗೂ nasolacrimal ಅಥವಾ ಮೂಗು ಮತ್ತು ಕಣ್ಣಿನ ನಡುವಣ ಕೊಳವೆಯನ್ನು ಅತಿ ಹೆಚ್ಚಾಗಿ ಬಳಸಿರುವುದು ಗಮನಕ್ಕೆ ಬಂದಿದೆ.

ಜೀವಂತವಿರುವ ಅತಿ ಎತ್ತರದ ಪುರುಷ ಹಾಗೂ ಅತಿ ಕಿರಿಯ ಮಹಿಳೆ
Images source
ಈ ಜೋಡಿ ನಿಮಗೆ ಹೇಗೆನ್ನಿಸಬಹುದು? ತುರ್ಕಿಯ ಸುಲ್ತಾನ್ ಕೋಸೆನ್ ಎಂಬ ವ್ಯಕ್ತಿ 251 ಸೆ.ಮೀ (8.23 ಅಡಿ) ಎತ್ತರವಿದ್ದರೆ ನಮ್ಮ ಭಾರತದ ಜ್ಯೋತಿ ಆಮ್ಗೆ ಎಂಬ ಮಹಿಳೆ ಕೇವಲ 62.8 ಸೆ. ಮೀ (2.06) ಅಡಿ ಎತ್ತರವಿದ್ದಾಳೆ. ಈ ಅಳತೆಗಳೇ ಇವರಿಗೆ ವಿಶ್ವದ ಅತಿ ಎತ್ತರದ ಹಾಗೂ ಗಿಡ್ಡ ವ್ಯಕ್ತಿಗಳು ಎಂಬ ಪಟ್ಟವನ್ನು ಒದಗಿಸಿವೆ. ಹೋಲಿಕೆಯಲ್ಲಿ ಸುಲ್ತಾಲ್ ಜ್ಯೋತಿಯವರಿಗಿಂತ ನಾಲ್ಕು ಪಟ್ಟು ಹೆಚ್ಚು ಎತ್ತರವಾಗಿದ್ದಾರೆ.

ಅತಿ ಕಿರಿಯ ಸೊಂಟದ ಸುತ್ತಳತೆ ಇರುವ ಮಹಿಳೆ
Images source
ಹಿಂದಿನ ಶತಮಾನದಲ್ಲಿ ಮಹಿಳೆಯರ ಸೊಂಟ ಕಿರಿದಾಗಬೇಕೆಂದೇ ಸೊಂಟವನ್ನು ಅತಿಯಾಗಿಯೇ ಬಿಗಿಯಾಗಿಸುವ ಉಡುಪುಗಳನ್ನು ತೊಡಲಾಗುತ್ತಿತ್ತು. ಆದರೆ ಇದು ಆರೋಗ್ಯಕ್ಕೆ ಮಾರಕ ಎಂದು ಕಂಡುಬಂದ ಬಳಿಕ ಈಗ ಈ ವಿಧಾನವನ್ನು ಅನುಸರಿಸುತ್ತಿಲ್ಲವಾದರೂ ಸಪೂರವಾದ ಸೊಂಟ ಎಲ್ಲರ ಆಕರ್ಷಣೆಯ ಕೇಂದ್ರವಾಗುವುದು ಮಾತ್ರ ಸುಳ್ಳಲ್ಲ. ಅಮೇರಿಕಾದ ಕ್ಯಾಥಿ ಜುಂಗ್ ಎಂಬ ಮಹಿಳೆಗೆ ನಿಸರ್ಗ ಕೇವಲ 38.1 ಸೆ.ಮೀ ಯಷ್ಟು ಕಿರಿದಾದ ಸೊಂಟ ಒದಗಿಸುವ ಮೂಲಕ ವಿಶ್ವದಾಖಲೆಯನ್ನು ಪಡೆಯಲು ನೆರವು ನೀಡಿದೆ. ಇದುವರೆಗೆ ನೀವು ಕಿಮಿ ಕರ್ದಾಶಿಯನ್ ಮಾತ್ರವೇ ಕಿರಿಯ ಸೊಂಟ ಹಿರಿಯ ನಿತಂಬ ಪಡೆದಿರುವ ಮಹಿಳೆ ಎಂದು ತಿಳಿದಿದ್ದರೆ ಕ್ಯಾಥಿಯವರ ಸೊಂಟ ನೋಡಿದ ಬಳಿಕ ನಿಮ್ಮ ಅಭಿಪ್ರಾಯವನ್ನು ಅನಿವಾರ್ಯವಾಗಿ ಬದಲಿಸಿಕೊಳ್ಳಬೇಕಾಗುತ್ತದೆ. ಈ ಮಾಹಿತಿಗಳು ನಿಮಗೆ ಅಚ್ಚರಿ ಮೂಡಿಸಿದ್ದರೆ ಹಾಗೂ ಇನ್ನಷ್ಟು ರೋಚಕ ಮಾಹಿತಿಗಳನ್ನು ಪಡೆಯಲು ಈ ಪುಟವನ್ನು ಆಗಾಗ ಗಮನಿಸುತ್ತಿರಿ. ನಾವು ಇನ್ನಷ್ಟು ರೋಚಕ ಮಾಹಿತಿಗಳ ಬಗ್ಗೆ ಶೀಘ್ರವೇ ಹೆಚ್ಚಿನ ಲೇಖನಗಳನ್ನು ಒದಗಿಸಲಿದ್ದೇವೆ.



Click it and Unblock the Notifications
