ರಾಶಿಚಕ್ರದ ಪ್ರಕಾರ ನಿಮಗೆಷ್ಟು ಮಕ್ಕಳು ಎಂದು ತಿಳಿಯಿರಿ...

Posted By: Hemanth Amin
Subscribe to Boldsky

ಜೀವನದ ಪ್ರಮುಖ ಘಟ್ಟದಲ್ಲಿ ಮದುವೆ ಕೂಡ ಒಂದು. ಮದುವೆಯಾದ ಬಳಿಕ ಮಕ್ಕಳಾಗಬೇಕೆಂಬ ಮನಸ್ಸು ಇದ್ದೇ ಇರುತ್ತದೆ. ಇಂತಹ ಸಮಯದಲ್ಲಿ ನಿಮಗೆ ಎಷ್ಟು ಮಕ್ಕಳಾಗುತ್ತದೆ ಎನ್ನುವುದನ್ನು ತಿಳಿಯಲು ಅಂಗೈ ಮುಂದೆ ಚಾಚಿದರೆ ಸಾಕು. ಜ್ಯೋತಿಷಿಗಳು ನಿಮ್ಮ ಅಂಗೈಯಲ್ಲಿರುವ ರೇಖೆಗಳನ್ನು ನೋಡಿಕೊಂಡು ಎಷ್ಟು ಮಕ್ಕಳ ಭಾಗ್ಯ ನಿಮಗಿದೆ ಎಂದು ಹೇಳುವರು.

ಆದರೆ ಈ ಲೇಖನದಲ್ಲಿ ನಿಮ್ಮ ರಾಶಿಗೆ ಅನುಗುಣವಾಗಿ ಎಷ್ಟು ಮಕ್ಕಳ ಭಾಗ್ಯವಿದೆ ಎಂದು ಹೇಳುತ್ತಿದ್ದೇವೆ. ತನ್ನ ರಾಶಿಗೆ ಅನುಗುಣವಾಗಿ ಮಹಿಳೆ ಎಷ್ಟು ಮಕ್ಕಳಿಗೆ ತಾಯಿಯಾಗಬಲ್ಲಳು ಎಂದು ಈ ಲೇಖನ ಓದಿದ ಬಳಿಕ ನಿಮಗೆ ತಿಳಿಯುವುದು. ಓದುವುದನ್ನು ಮುಂದುವರಿಸಿ.

ಸೂಚನೆ: ಜ್ಯೋತಿಷ್ಯ ಶಾಸ್ತ್ರದಂತೆ ಈ ಲೇಖನದಲ್ಲಿ ಮಕ್ಕಳ ಸಂಖ್ಯೆ ನೀಡಲಾಗಿದೆ. ಇದು ಭಿನ್ನವಾಗಿರಲೂ ಬಹುದು.

ಮೇಷ

ಮೇಷ

ನಿಮ್ಮ ರಾಶಿಗನುಗುಣವಾಗಿ ನಿಮಗೆ ಹಲವು ಮಕ್ಕಳ ಭಾಗ್ಯವಿದೆ. ಸೂರ್ಯ ಚಿಹ್ನೆಯ ಪ್ರಕಾರ ನಿಮಗೆ ಕನಿಷ್ಠ 3ರಿಂದ ನಾಲ್ಕು ಮಕ್ಕಳಾಗುತ್ತಾರೆ. ನಿಮ್ಮ ಮಾತೃತ್ವದ ಪ್ರೀತಿಯು ಹೆಚ್ಚಾಗಿರುವ ಕಾರಣದಿಂದಾಗಿಯೇ ನೀವು ಪುಟ್ಟ ಕಂದಮ್ಮಗಳನ್ನು ಪಡೆಯುವುದನ್ನು ನಿಲ್ಲಿಸಲು ತಯಾರಿರುವುದಿಲ್ಲ.

ವೃಷಭ

ವೃಷಭ

ವೃಷಭ ರಾಶಿಯ ಮಹಿಳೆಯರಿಗೆ ಎರಡು ಮಕ್ಕಳಾಗುತ್ತಾರೆ ಎನ್ನುತ್ತವೆ ಅವರ ರಾಶಿ ಫಲಗಳು. ನೀವು ತುಂಬಾ ತಾಳ್ಮೆಯವರಾಗಿರುವ ಮತ್ತು ಪೋಷಕಾಂಶದ ಗುಣಗಳು ಅದ್ಭುತವಾಗಿರುವ ಕಾರಣದಿಂದ ಮಕ್ಕಳನ್ನು ಸಲಹಲು ನೀವು ತುಂಬಾ ಇಷ್ಟಪಡುತ್ತೀರಿ.

ಮಿಥುನ

ಮಿಥುನ

ಅವಳಿ ಚಿಹ್ನೆಯ ರಾಶಿಯವರಾಗಿರುವ ಕಾರಣದಿಂದ ಜ್ಯೋತಿಷಿಗಳ ಪ್ರಕಾರ ನಿಮಗೆ ಅವಳಿ ಮಕ್ಕಳಾಗುತ್ತದೆ. ನೀವು ಎರಡು ಮುಖ ಮತ್ತು ಹೆಚ್ಚಿನ ಪ್ರೀತಿ ಬಯಸುವ ಕಾರಣದಿಂದ ಖಂಡಿತವಾಗಿಯೂ ನಿಮಗೆ ಅವಳಿ ಮಕ್ಕಳಾಗಲಿದೆ.

ಕರ್ಕಾಟಕ

ಕರ್ಕಾಟಕ

ಜ್ಯೋತಿಷಿಗಳ ಪ್ರಕಾರ ಈ ರಾಶಿಯ ಮಹಿಳೆಯರಿಗೆ ಎರಡು ಮಕ್ಕಳಾಗುತ್ತದೆ. ಒಂದು ಮಗು ಹುಟ್ಟಿದ ತುಂಬಾ ವರ್ಷದ ಬಳಿಕ ಮತ್ತೊಂದು ಮಗುವಾಗುವುದು. ಇದು ಎಲ್ಲದಕ್ಕೂ ತಾಯಿ ರಾಶಿ ಎಂದು ಪರಿಗಣಿಸಲ್ಪಟ್ಟಿರುವ ಕಾರಣ ಮಾತೃತ್ವಕ್ಕಾಗಿ ಇವರು ಹಂಬಲಿಸುವರು.

ಸಿಂಹ

ಸಿಂಹ

ಈ ರಾಶಿಯಲ್ಲಿ ಜನಿಸಿರುವ ಮಹಿಳೆಯರಿಗೆ ಎರಡರಿಂದ ನಾಲ್ಕು ಮಕ್ಕಳಾಗುವುದು ಎಂದು ಜ್ಯೋತಿಷ್ಯವು ಹೇಳುತ್ತದೆ. ಅವರು ಪರಿಪೂರ್ಣ ಬಹುಮುಖಿಯಾಗಿರುವ ಕಾರಣದಿಂದ ಹೇರಳ ತಾಳ್ಮೆ ಹೊಂದಿರುವರು. ಹಲವಾರು ಮಕ್ಕಳನ್ನು ಸಂಭಾಲಿಸುವುದು ಇವರಿಗೆ ತುಂಬಾ ಸುಲಭ. ಇವರಲ್ಲಿ ನೈಸರ್ಗಿಕವಾಗಿ ಮಾತೃತ್ವದ ಗುಣಗಳು ಬಂದಿರುವುದು. ಇದರಿಂದಾಗಿ ಅವರು ಏಕಾಂಗಿಯಾಗರಲ್ಲ.

ಕನ್ಯಾ

ಕನ್ಯಾ

ಈ ರಾಶಿಯಲ್ಲಿ ಹುಟ್ಟಿದವರ ರಾಶಿಫಲದ ಪ್ರಕಾರ ಇವರಿಗೆ ಒಂದು ಮಗು ಮಾತ್ರ ಆಗುವುದು. ಈ ರಾಶಿಯವರು ತುಂಬಾ ಆತಂಕಕ್ಕೆ ಒಳಗಾಗಿ ಪ್ರತಿಯೊಂದರ ಬಗ್ಗೆ ಅತಿಯಾಗಿ ಯೋಚಿಸಿ, ಒತ್ತಡ ತೆಗೆದುಕೊಳ್ಳುವ ಕಾರಣದಿಂದ ಇವರಿಗೆ ಒಂದು ಮಗುವೇ ಸೂಕ್ತ. ಒಂದು ಮಗುವಿದ್ದರೆ ಸಂಪೂರ್ಣವಾಗಿ ಅವರತ್ತ ಗಮನ ಕೇಂದ್ರೀಕರಿಸಬಹುದು.

ತುಲಾ

ತುಲಾ

ಈ ರಾಶಿಯ ಮಹಿಳೆಯರಿಗೆ ಸಮತೋಲನ ಮತ್ತು ಸಮಾನತೆಯೆಂದರೆ ಇಷ್ಟ. ಈ ವಿಷಯಗಳನ್ನು ಇವರು ಇಷ್ಟಪಡುವ ಕಾರಣದಿಂದಾಗಿ ಅವರು ಹಲವಾರು ಮಕ್ಕಳನ್ನು ಹೆರುವ ಬಗ್ಗೆ ಚಿಂತಿಸುವರು. ಇದು ಎರಡು, ನಾಲ್ಕು ಅಥವಾ ಆರು ಆಗಿರಬಹುದು.

ಧನು

ಧನು

ಈ ರಾಶಿಯವರು ತುಂಬಾ ಸಾಹಸಪ್ರವೃತ್ತಿಯವರಾಗಿರುವ ಕಾರಣದಿಂದಾಗಿ ಇವರಿಗೆ ಒಂದು ಮಗು ಮಾತ್ರ ಇರುವುದು ಎಂದು ಜ್ಯೋತಿಷ್ಯವು ಹೇಳುತ್ತದೆ.

ವೃಶ್ಚಿಕ

ವೃಶ್ಚಿಕ

ಈ ರಾಶಿಯ ಮಹಿಳೆಯರು ಒಂದು ಕ್ರಿಕೆಟ್ ತಂಡವೇ ಮನೆಯಲ್ಲಿ ಇರಬೇಕೆಂದು ಬಯಸುವರು. ತುಂಬಾ ಜನ ಮಕ್ಕಳಿಗೆ ತಾಯಿಯಾಗಲು ಈ ರಾಶಿಯವರು ಸೂಕ್ತವಾಗಿದ್ದಾರೆಂದು ಜ್ಯೋತಿಷ್ಯವು ಹೇಳುತ್ತದೆ. ಇವರು ಸ್ವಲ್ಪ ಮುಂಗೋಪಿಗಳಾದರೂ ತಮ್ಮ ಎಲ್ಲಾ ಮಕ್ಕಳಿಗೆ ಪ್ರೀತಿ ಹಾಗೂ ಆಕರ್ಷಣೆ ಹೊಂದಿರುವರು.

ಮಕರ

ಮಕರ

ಈ ರಾಶಿಯ ಮಹಿಳೆಯರು ಎಲ್ಲಾ ಕಾರ್ಯಗಳನ್ನು ಮಾಡಬಲ್ಲರು. ಜ್ಯೋತಿಷ್ಯದ ಪ್ರಕಾರ ಈ ರಾಶಿಯ ಮಹಿಳೆಯರು ಮೂರು ಮಕ್ಕಳಿಗೆ ಜನ್ಮ ನೀಡಬಹುದು ಮತ್ತು ಇದೇ ವೇಳೆ ಮನೆ ಕೆಲಸವನ್ನು ಕೂಡ ನಿಭಾಯಿಸಬಲ್ಲರು.

ಕುಂಭ

ಕುಂಭ

ಈ ರಾಶಿಯ ಮಹಿಳೆಯರಿಗೆ ಸಾಹಸವೆಂದರೆ ತುಂಬಾ ಇಷ್ಟ. ಇವರಲ್ಲಿ ಮಕ್ಕಳಂತಹ ಶಕ್ತಿಯು ಇರುವುದು ಮತ್ತು ಇದರಿಂದ ಇದನ್ನು ಮಾತೃತ್ವವಾಗಿ ಪರಿವರ್ತಿಸಲು ಕಷ್ಟವಾಗುವುದು. ರಾಶಿ ಚಕ್ರದ ಪ್ರಕಾರ ಈ ಮಹಿಳೆಯರಿಗೆ ಕೇವಲ ಒಂದು ಮಗುವಿರುವುದು.

ಮೀನ

ಮೀನ

ಎಲ್ಲಾ ರಾಶಿಗಳನ್ನು ಹಿಂದಿಕ್ಕಿ ಈ ರಾಶಿಯವರು ಹೆಚ್ಚಿನ ಮಕ್ಕಳನ್ನು ಹೆರಲಿದ್ದಾರೆ. ಈ ರಾಶಿಯ ಮಹಿಳೆಯರು ಐದು ಮಕ್ಕಳನ್ನು ಹೆರಬಹುದು ಮತ್ತು ಹೆಚ್ಚಾದರೂ ತುಂಬಾ ಖುಷಿ ಪಡುವರು. ಇವರು ಭಾವನಾತ್ಮಕವಾಗಿರುವರು. ತಮ್ಮ ಮಕ್ಕಳನ್ನು ಪೋಷಿಸಲು ಮತ್ತು ಮಾರ್ಗದರ್ಶನ ನೀಡಲು ಯಾವತ್ತೂ ಮುಂದಿರುವರು.

English summary

number-of-kids-you-would-have-based-on-your-zodiac-sign

There are many ways in which you can find out about the number of kids that you would have. From finding out the lines on your palms that reveal about the number of kids that you would have to the astrological connection, it can be predicted in the best way. Here, in this article, we reveal to you the number of kids that you would have, which are based on your zodiac sign.
Story first published: Tuesday, February 6, 2018, 7:00 [IST]