For Quick Alerts
ALLOW NOTIFICATIONS  
For Daily Alerts

  ಕೇವಲ 5 ಕೆ.ಜಿ ತೂಗುವ 23 ವರ್ಷದ ಬಾಲಕ- ಇದು "ಪಿಂಟ್‌ ಮ್ಯಾನ್‌"ನ ಕಥೆ

  |

  ಪಂಜಾಬ್ ನ ಸಣ್ಣ ಗ್ರಾಮದಲ್ಲಿ ಜನಿಸಿರುವ ಮನ್ ಪ್ರೀತ್ ಸಿಂಗ್ ಗೆ 23 ವರ್ಷವಾದರೂ ಆತನ ತೂಕ ಕೇವಲ 5 ಕೆಜಿ ಮಾತ್ರ. ಸಣ್ಣ ಮಕ್ಕಳಂತೆ ಕಾಣಿಸುವ ಈತನ ಬೆಳವಣಿಗೆ ಕುಂಠಿತವಾಗಿದೆ. ಗ್ರಾಮದ ಜನರು ಮಾತ್ರ ಈತನನ್ನು ತುಂಬಾ ಪ್ರೀತಿ ಹಾಗೂ ಮಮತೆಯಿಂದ ನೋಡಿಕೊಳ್ಳುತ್ತಿದ್ದಾರೆ. ದೇವರ ಅವತಾರವೆಂದು ಭಾವಿಸಿರುವ ಅವರು ಪಿಂಟ್‌ ಮನುಷ್ಯನೆಂದು ಕರೆಯುವರು.

  ಕೇವಲ ಐದು ಕೆಜಿ ಹಾಗೂ 60 ಸೆ.ಮೀ. ಉದ್ದವಿರುವ ಮನ್ ಪ್ರೀತ್ ಸಿಂಗ್ ತನ್ನ ನಗುಮುಖ ಹಾಗೂ ಮುಗ್ಧತೆಯಿಂದಲೇ ಎಲ್ಲರ ಗಮನ ಸೆಳೆಯುತ್ತಾನೆ. ಆದರೆ ಆತ ಕೂಡ ಕೆಲವೊಮ್ಮೆ ದೊಡ್ಡ ಮಟ್ಟದಲ್ಲಿ ತಮಾಷೆ ಮಾಡಿ ಜನರನ್ನು ನಗಿಸುವನು.

  real life story

  ಹೆಚ್ಚಿನ ವಿವರಣೆಗಾಗಿ ಮುಂದಕ್ಕೆ ಓದುತ್ತಾ ಸಾಗಿ.

  ಭಾರತದಲ್ಲಿ ಜನಿಸಿದ

  ಪಂಜಾಬ್ ನ ಮನ್ಸಾದಲ್ಲಿ ಜನಿಸಿರುವ ಈತ ಐದು ಕೆಜಿ ಮತ್ತು 60 ಸೆ.ಮೀ. ಉದ್ದವಿದ್ದಾನೆ. ಆತನಿಗೆ ಹೆಚ್ಚು ನಡೆಯಲು ಸಾಧ್ಯವಾಗುವುದಿಲ್ಲ ಮತ್ತು ಕೆಲವೇ ಕೆಲವು ಶಬ್ಧಗಳನ್ನು ಮಾತನಾಡುವನು. ಆತನ ಬಾಯಿಯಿಂದ ಅಮ್ಮ' ಮತ್ತು ಮಾಮ' ಎನ್ನುವ ಪದಗಳು ಮಾತ್ರ ಬರುವುದು. ನಡೆಯಲು ಸಾಧ್ಯವಾಗದೆ ಇರುವ ಕಾರಣದಿಂದಾಗಿ ಆತನನ್ನು ಪ್ರತಿಯೊಂದು ಕಡೆಗೂ ಎತ್ತಿಕೊಂಡೇ ಹೋಗಲಾಗುತ್ತಿದೆ.

  ಆತನನ್ನು ಪಿಂಟ್ ಮನುಷ್ಯನೆಂದು ಕರೆಯುವರು...

  ಮನ್ ಪ್ರೀತ್ ಹುಟ್ಟುವಾಗ ಸರಿಯಾಗಿಯೇ ಇದ್ದ. ಆದರೆ ಮಾತನಾಡಲು ಹಾಗೂ ನಡೆಯಲು ಆರಂಭಿಸಿದ ಒಂದು ವರ್ಷದ ಬಳಿಕ ಆತನ ಬೆಳವಣಿಗೆ ನಿಂತು ಹೋಗಿದೆ. ಆತ ಈಗ ಸಣ್ಣ ಮಕ್ಕಳಂತೆ ತೊದಲುವನು ಮತ್ತು ಪ್ರತಿಯೊಂದು ಕಡೆಗೂ ಆತನ ಚಿಕ್ಕಪ್ಪ ಹಾಗೂ ಚಿಕ್ಕಮ್ಮ ಕರೆದುಕೊಂಡು ಹೋಗುವರು.

  ಆತನ ಬಗ್ಗೆ ಮತ್ತಷ್ಟು

  ಮನ್ ಪ್ರೀತ್ ನ ಅಂಗೈ ಹಾಗೂ ಪಾದಗಳು ಊದಿಕೊಂಡಿದೆ ಮತ್ತು ಚರ್ಮಗಳು ಜೋತು ಬಿದ್ದಿವೆ. ಆತನಿಗೆ ಕೆಲವೇ ಕೆಲವು ಶಬ್ಧಗಳು ಮಾತನಾಡಲು ಬರುವುದು ಮತ್ತು ಸಂಜ್ಞೆಗಳ ಮೂಲಕವೇ ಆತ ಮಾತನಾಡುವುದು ಎಂದು ಆತನ ಚಿಕ್ಕಪ್ಪ ಹೇಳುತ್ತಾರೆ. ಮನ್ ಪ್ರೀತ್ ನಗಬಲ್ಲ, ಬೊಬ್ಬೆ ಹಾಕಬಲ್ಲ ಮತ್ತು ದುಃಖಿಸಬಲ್ಲ. ಆತನಿಗೆ ಒಂದು ವಾಕ್ಯ ಕೂಡ ಮಾತನಾಡಲು ಆಗುವುದಿಲ್ಲ.

  ಆತನ ಕುಟುಂಬದ ಬಗ್ಗೆ....

  ಮನ್ ಪ್ರೀತ್ ನಿಗೆ ಒಬ್ಬಳು ಸೋದರಿಯಿದ್ದಾಳೆ ಮತ್ತು ಆಕೆಗೆ ಈಗ 17 ವಯಸ್ಸು. ಆತನಿಗೊಬ್ಬ ಸೋದರನಿದ್ದಾನೆ. ಆತನ ಹೆಸರು ಮಂಗಳದೀಪ್. ಇಬ್ಬರು ಕೂಡ ದೈಹಿಕ ಹಾಗೂ ಮಾನಸಿಕವಾಗಿ ಸರಿಯಾದ ಬೆಳವಣಿಗೆಯಲ್ಲಿದ್ದಾರೆ. ಮನ್ ಪ್ರೀತ್ ತನ್ನ ಚಿಕ್ಕಪ್ಪ ಹಾಗೂ ಚಿಕ್ಕಮ್ಮನೊಂದಿಗೆ ವಾಸಿಸುತ್ತಿರುತ್ತಾನೆ. ಇಲ್ಲಿ ಆತ ಹೆಚ್ಚು ಸಂತೋಷವಾಗಿರುವ ಎಂದು ಕುಟುಂಬ ಮೂಲಗಳು ಹೇಳಿವೆ. ಮನ್ ಪ್ರೀತ್ ನನ್ನು ಆತನ ಮನೆಗೆ ಕರೆದುಕೊಂಡು ಹೋಗಿ ಬಿಟ್ಟಿದ್ದರೂ ಆತ ಬೇಸರಗೊಂಡು ಆಹಾರ ಸೇವಿಸಲು ನಿರಾಕರಿಸುತ್ತಾನೆ. ಇದರಿಂದಾಗಿ ಚಿಕ್ಕಪ್ಪ ಮತ್ತು ಚಿಕ್ಕಮ್ಮನೇ ಆತನನ್ನು ನೋಡಿಕೊಳ್ಳುವರು.

  ಜನರು ಆರಾಧಿಸುವರು

  ಮನ್ ಪ್ರೀತ್ ನನ್ನು ಜನರು ದೇವರ ಅವತಾರವೆಂದು ಭಾವಿಸುವ ಕಾರಣದಿಂದಾಗಿ ಮನೆಗೆ ಬಂದು ಆತನನ್ನು ಆರಾಧಿಸುವರು. ಕೆಲವು ಗ್ರಾಮಸ್ಥರು ಆತನ ಮನೆಗೆ ದಿನಾಲೂ ಭೇಟಿ ನೀಡಿ ಆಶೀರ್ವಾದ ಪಡೆದುಕೊಳ್ಳುವರು. ಜನರು ಮನ್ ಪ್ರೀತ್ ಆಶೀರ್ವಾದ ಪಡೆಯುವ ಹಾಗೂ ಆತನ ಮುಂದೆ ತಲೆಬಾಗಿ ನಿಂತಿರುವ ಹಲವಾರು ವೀಡಿಯೋಗಳು ಸಾಮಾಜಿಕ ಜಾಲತಾಣದಲ್ಲಿದೆ.

  ಈ ಪರಿಸ್ಥಿತಿಗೆ ಏನು ಅನ್ನುವರು?

  ವೈದ್ಯರ ಪ್ರಕಾರ ಮನ್ ಪ್ರೀತ್ ಲಾರೊನ್ ಸಿಂಡ್ರೊಮ್ ನಿಂದ ಬಳಲುತ್ತಿದ್ದಾನೆ. ಇದು ತುಂಬಾ ಅಪರೂಪದ ಕಾಯಿಲೆಯಾಗಿದೆ. ದುರಾದೃಷ್ಟದಿಂದ ಇದು ಮನ್ ಪ್ರೀತ್ ನಿಗೆ ಬಂದಿದೆ. ತುಂಬಾ ಬಡ ಕುಟುಂಬದಿಂದ ಬಂದಿರುವ ಆತನ ಕುಟುಂಬದವರು ಪ್ರಾಥಮಿಕ ಪರೀಕ್ಷೆಗೆ ಬೇಕಾಗಿದ್ದ ಸಣ್ಣ ಮೊತ್ತವವನ್ನು ಪಾವತಿಸಲು ಅಸಮರ್ಥರಾಗಿದ್ದರು.

  ಲಾರೊನ್ ಸಿಂಡ್ರೊಮ್ ಎಂದರೇನು?

  ಈ ಪರಿಸ್ಥಿತಿಯಲ್ಲಿ ಬದುಕುವಂತಹ ಜನರು ಹಾರ್ಮೋನುಗಳ ಕೊರತೆಯಿಂದ ಬಳಲುವರು. ಈ ಹಾರ್ಮೋನುಗಳು ಕೋಶಗಳ ಬೆಳವಣಿಗೆ ಉತ್ತೇಜಿಸುವುದು ಮತ್ತು ಇದನ್ನು ಹೊಸ ಕೋಶಗಳನ್ನಾಗಿ ಮಾಡುವುದು.

  ಈ ಪರಿಸ್ಥಿತಿ ಬಗ್ಗೆ ಕುಟುಂಬದವರ ನಿಲುವೇನು?

  ಕುಟುಂಬದವರು ಈ ಪರಿಸ್ಥಿತಿ ಹಾಗೂ ಆತನ ಭವಿಷ್ಯದ ಬಗ್ಗೆ ಚಿಂತಿತರಾಗಿದ್ದಾರೆ. ಹಲವಾರು ಮಂದಿ ವೈದ್ಯರನ್ನು ಭೇಟಿಯಾಗಿದ್ದರೂ ಹಣದ ಕೊರತೆಯಿಂದಾಗಿ ಚಿಕಿತ್ಸೆ ಸಾಧ್ಯವಾಗಿಲ್ಲ.

  ಇಂತಹ ಮತ್ತಷ್ಟು ಲೇಖನಗಳನ್ನು ಓದಲು ನಿಮಗೆ ಆಸಕ್ತಿಯಿದ್ದರೆ ಕಮೆಂಟ್ ಬಾಕ್ಸ್ ನಲ್ಲಿ ಬರೆಯಿರಿ.

  Read more about: health
  English summary

  Mysterious Condition Stopped The Growth Of This 23-year-old Man

  This young man was trapped in a child’s body due to a mysterious condition and seems like he has become the latest sensation on the internet with his innocent smile that is grabbing all the attention in the world!
  Story first published: Thursday, May 10, 2018, 16:00 [IST]
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more