ರಾಶಿ ಭವಿಷ್ಯ: ರಾಶಿ ಚಕ್ರದ ಪ್ರಕಾರ ಕಿರಿಕಿರಿಯ ವ್ಯಕ್ತಿತ್ವಗಳು!

Posted By: Deepu
Subscribe to Boldsky

ಜ್ಯೋತಿಷ್ಯ ಎನ್ನುವುದು ಒಂದು ಪವಿತ್ರ ಚಿಂತನೆ. ಮನುಷ್ಯನ ಜೀವನದಲ್ಲಿ ಆಗು-ಹೋಗುಗಳನ್ನು ಸುಲಭವಾಗಿ ತಿಳಿಸಿಕೊಡುತ್ತದೆ. ಖಗೋಳದಲ್ಲಿ ಉಂಟಾಗುವ ಬದಲಾವಣೆಯು ಜೀವನದಲ್ಲಿ ಹೇಗೆ ಪ್ರಭಾವ ಬೀರುತ್ತದೆ ಎನ್ನುವುದನ್ನು ಜ್ಯೋತಿಷ್ಯ ಶಾಸ್ತ್ರ ಕನ್ನಡಿ ಹಿಡಿಯುತ್ತದೆ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ವ್ಯಕ್ತಿಗಳು ಒಂದು ಗೊಂಬೆಯಂತೆ ಅವನ್ನು ಆಡಿಸುವುದು ಹಾಗೂ ವರ್ತಿಸುವಂತೆ ಮಾಡುವುದು ಕಲ್ಪನೆಗೂ ಮೀರಿದ ವಿಶೇಷ ಶಕ್ತಿ ಹಾಗೂ ಗ್ರಹಗತಿಗಳು.

ಇವುಗಳ ಪ್ರಕಾರ ಪ್ರತಿಯೊಬ್ಬ ವ್ಯಕ್ತಿಯಲ್ಲೂ ಒಳ್ಳೆಯ ಮತ್ತು ಕೆಟ್ಟಗುಣಗಳು ಸಾಮಾನ್ಯವಾಗಿ ಇರುತ್ತವೆ. ಒಳ್ಳೆಯ ವಿಚಾರಗಳಿಂದ ವ್ಯಕ್ತಿ ಹೆಸರು ಹಾಗೂ ಪ್ರಸಿದ್ಧಿ ಪಡೆಯುತ್ತಾನೆ. ಜೊತೆಗೆ ಅನೇಕ ಜನರ ಮೆಚ್ಚುಗೆ ಮತ್ತು ಪ್ರೀತಿಗೆ ಒಳಗಾಗುತ್ತಾನೆ. ಅದೇ ಅವನಲ್ಲಿ ಇರುವ ಕೆಟ್ಟಗುಣಗಳು ಆತನನ್ನು ಇತರರು ದ್ವೇಷಿಸುವಂತೆ ಮಾಡುತ್ತದೆ. ಹಾಗಾಗಿ ತಮ್ಮಲ್ಲಿರುವ ಕೆಟ್ಟಗುಣಗಳನ್ನು ಮರೆ ಮಾಚುವುದರ ಮೂಲಕ ಉತ್ತಮ ಸ್ವಭಾವ ಹಾಗೂ ಗುಣಗಳನ್ನು ಸಮಾಜದ ಮುಂದೆ ತೋರಿಸಲು ಇಚ್ಛಿಸುತ್ತಾರೆ.

ಒಬ್ಬ ವ್ಯಕ್ತಿಯ ಜೊತೆ ಉತ್ತಮ ಸಂಬಂಧ ಅಥವಾ ಸ್ನೇಹವನ್ನು ಹೊಂದಲು ಬಯಸುತ್ತೇವೆ ಎಂದಾದರೆ ಅವರಲ್ಲಿ ಒಳ್ಳೆಯ ಗುಣಗಳು ಹೆಚ್ಚಾಗಿ ಇರಬೇಕು. ಕಿರಿಕಿರಿಯ ಸ್ವಭಾವ ಅಥವಾ ಕೆಟ್ಟ ಗುಣಗಳು ಕಡಿಮೆ ಇರಬೇಕು. ಇಲ್ಲವಾದರೆ ಸಂಬಂಧ ಅಷ್ಟು ಸುಂದರವಾಗಿ ಮುಂದುವರಿಯಲು ಸಾಧ್ಯವಿಲ್ಲ. ಹಾಗಾದರೆ ಯಾವ ರಾಶಿಚಕ್ರದವರು ಏನೆಲ್ಲಾ ಕಿರಿಕಿರಿ ಸ್ವಭಾವವನ್ನು ಹೊಂದಿರುತ್ತಾರೆ? ಎನ್ನುವುದನ್ನು ತಿಳಿಯಲು ಮುಂದಿರುವ ವಿವರಣೆಯನ್ನು ಪರಿಶೀಲಿಸಿ.... 

ಮೇಷ: (ಮಾರ್ಚ್21-ಏಪ್ರಿಲ್19)

ಮೇಷ: (ಮಾರ್ಚ್21-ಏಪ್ರಿಲ್19)

ಇವರಲ್ಲಿಇರುವ ಗಡಿಬಿಡಿಯ ಸ್ವಭಾವ ಸಣ್ಣ ಮಕ್ಕಳ ಬುದ್ಧಿಯಂತೆ ಇರುತ್ತದೆ. ಅತಿಯಾದ ಸಿಟ್ಟಿನ ಪ್ರವೃತ್ತಿ ಹೊಂದಿದ್ದರೆ ಇವರು ಅಷ್ಟು ಜೀವನದಲ್ಲಿ ಬೇಗ ಪ್ರಗತಿಯನ್ನು ಹೊಂದಲು ಸಾಧ್ಯವಾಗುವುದಿಲ್ಲ. ಇವರು ಇತರರಿಗೆ ಹೆಚ್ಚು ಪ್ರಾಬಲ್ಯ ನೀಡಲು ಇಷ್ಟಪಡುತ್ತಾರೆ. ಇವರಲ್ಲಿ ಆಕ್ರಮಣಶೀಲ ಗುಣವು ಹೆಚ್ಚಾಗಿ ಇರುತ್ತದೆ. ಈ ರೀತಿಯ ಸ್ವಭಾವದ ಜನರನ್ನು ಅರ್ಥೈಸಿಕೊಳ್ಳುವುದು ಕಷ್ಟವಾಗುವುದು. ಜೊತೆಗೆ ಇವರು ಸುತ್ತಲಿನ ಜನರನ್ನು ಗಾಯಗೊಳಿಸಬಹುದು.

ವೃಷಭ: 21 ಏಪ್ರಿಲ್ -21 ಮೇ

ವೃಷಭ: 21 ಏಪ್ರಿಲ್ -21 ಮೇ

ಇವರು ಸಾಮಾನ್ಯವಾಗಿ ಸೋಮಾರಿ ಸ್ವಭಾವವನ್ನು ಹೊಂದಿರುತ್ತಾರೆ. ಇವರ ಈ ಕೆಟ್ಟ ಗುಣಗಳಿಂದ ಮನೆಯಲ್ಲಿ ಒಟ್ಟಿಗೆ ಇರುವಾಗ ಸಾಕಷ್ಟು ಕಿರಿಕಿರಿ ಉಂಟಾಗಬಹುದು. ಇವರು ತಮ್ಮ ಕೆಲಸದಲ್ಲಿ ಅಥವಾ ಆಹಾರ ಸೇವನೆಯ ವಿಷಯದಲ್ಲಿ ಹಂಚಿಕೆಯನ್ನು ಬಯಸುವುದಿಲ್ಲ.

ಮಿಥುನ: ಮೇ 21 ಜೂನ್ 20

ಮಿಥುನ: ಮೇ 21 ಜೂನ್ 20

ಇವರು ಸ್ವಯಂ ಜಾಗೃತಿಯನ್ನು ಹೊಂದಿರುವುದಿಲ್ಲ. ಇವರು ಹೆಚ್ಚು ನಿರೀಕ್ಷಿತ ವ್ಯಕ್ತಿತ್ವವನ್ನು ಹೊಂದಿರುತ್ತಾರೆ. ಪದೇ ಪದೇ ತಮ್ಮ ಭಾವನೆಯನ್ನು ಬದಲಿಸುವ ಈ ವ್ಯಕ್ತಿಗಳೊಂದಿಗೆ ಇರುವುದು ಅಷ್ಟು ಸುಲಭವಲ್ಲ. ಇವರು ಜೀವನದಲ್ಲಿ ನಿರ್ದಿಷ್ಟ ಗುರಿ ಹಾಗೂ ಮಹತ್ವಕಾಂಕ್ಷೆಯನ್ನು ಹೊಂದಿರುವುದಿಲ್ಲ.

ಕರ್ಕ: ಜೂನ್ 21-ಜುಲೈ 22

ಕರ್ಕ: ಜೂನ್ 21-ಜುಲೈ 22

ಇವರು ಹೆಚ್ಚು ಅಸುರಕ್ಷಿತ ಭಾವವನ್ನು ಹೊಂದಿರುತ್ತಾರೆ. ಇವರಿಗೆ ಚಿಕ್ಕ ಪುಟ್ಟ ವಿಚಾರಕ್ಕೂ ಭರವಸೆ ನೀಡುತ್ತಿರಬೇಕಾಗುತ್ತದೆ. ಇವರು ಒಮ್ಮೆ ವಿರೋಧ ಭಾವನೆಯನ್ನು ಹೊಂದಿದ್ದರೆ ಅದನ್ನೇ ಮನಸ್ಸಿನಲ್ಲಿ ಇಟ್ಟುಕೊಂಡಿರುತ್ತಾರೆ. ಇವರು ಕೆಟ್ಟ ಜನರಲ್ಲ. ಆದರೆ ಹೆಚು ಸೂಕ್ಷ್ಮ, ಮೂಡಿ ಮತ್ತು ಸಂಶಯಗ್ರಸ್ತ ಮನೋಭಾವದಿಂದ ಕೂಡಿರುತ್ತಾರೆ.

ಸಿಂಹ: ಜುಲೈ 23-ಆಗಸ್ಟ್ 23

ಸಿಂಹ: ಜುಲೈ 23-ಆಗಸ್ಟ್ 23

ಇವರು ಆಡಳಿತ ಅಥವಾ ಅಧಿಕಾರ ಪ್ರಿಯರಾಗಿರುತ್ತಾರೆ. ಇವರು ಅತಿಯಾದ ಅಹಂಕಾರವನ್ನು ತೋರಿಸುತ್ತಾರೆ. ಅದು ಅವರ ಸುತ್ತಲಿನ ವ್ಯಕ್ತಿಗಳಿಗೆ ಹಾನಿಯನ್ನುಂಟುಮಾಡಬಹುದು. ಇವರು ಆಗಾಗ ಕಿರಿಕಿರಿಯನ್ನು ಉಂಟುಮಾಡುತ್ತಿರುತ್ತಾರೆ. ಎಲ್ಲಾ ಸಮಯದಲ್ಲೂ ತಾವೇ ಕೇಂದ್ರಬಿಂದುವಾಗಿ ಕಾಣಿಸಿಕೊಳ್ಳಲು ಇಷ್ಟಪಡುತ್ತಾರೆ.

ಕನ್ಯಾ: ಆಗಸ್ಟ್ 24-ಸೆಪ್ಟಂಬರ್ 23

ಕನ್ಯಾ: ಆಗಸ್ಟ್ 24-ಸೆಪ್ಟಂಬರ್ 23

ಇವರು ಸದಾ ಪರಿಪೂರ್ಣತೆಯಿಂದ ಇರಬೇಕು ಎನ್ನುವುದನ್ನು ಬಯಸುತ್ತಾರೆ. ಅದನ್ನು ಇತರರು ನಿರಾಕರಿಸಿದಾಗ ಸಿಟ್ಟಾಗುತ್ತಾರೆ. ಇವರು ಬಹಳ ಸ್ಥಿರತೆಯನ್ನು ಹೊಂದಿರುತ್ತಾರೆ. ಇವರು ಸಂದರ್ಭಕ್ಕೆ ತಕ್ಕಂತೆ ಹೊಂದಿಕೊಂಡು ಹೋಗುವ ಗುಣವನ್ನು ಹೊಂದಿರುವುದಿಲ್ಲ. ಇವರೊಂದಿಗೆ ಜೀವಿಸುವುದು ಒಂದು ಸವಾಲಿನ ಕೆಲಸ ಎನ್ನಬಹುದು.

ತುಲಾ: ಸೆಪ್ಟಂಬರ್ 24-ಅಕ್ಟೋಬರ್ 23

ತುಲಾ: ಸೆಪ್ಟಂಬರ್ 24-ಅಕ್ಟೋಬರ್ 23

ಇವರು ಪ್ರಚೋದಕ ಸ್ವಭಾವದವರು ಎನ್ನಬಹುದು. ಇತರರನ್ನು ಮೆಚ್ಚಿಸಲು ಬಹು ಸಾಹಸ ಮಾಡುತ್ತಾರೆ. ಇವರ ಮನಸ್ಸಿನಲ್ಲಿ ಏನಿದೆ ಎನ್ನುವುದು ತಿಳಿಯಲು ಕಷ್ಟ. ಜೊತೆಗೆ ಇವರೊಂದಿಗೆ ಹೊಂದಾಣಿಕೆಯ ಜೀವನ ನಡೆಸುವುದು ಕಷ್ಟ ಎನ್ನಬಹುದು.

ವೃಶ್ಚಿಕ: 24 ಅಕ್ಟೋಬರ್ -22 ನವೆಂಬರ್

ವೃಶ್ಚಿಕ: 24 ಅಕ್ಟೋಬರ್ -22 ನವೆಂಬರ್

ಇವರು ಹೆಚ್ಚು ಬೇಡಿಕೆಯಲ್ಲಿರುವ ವ್ಯಕ್ತಿಗಳಾಗಿರುತ್ತಾರೆ. ಇವರು ತಮಗೆ ಬೇಕಾದದ್ದನ್ನು ಪಡೆಯಲು ಇತರರಿಗೆ ಕುಶಲ ರೀತಿಯ ವರ್ತನೆಯನ್ನು ತೋರುತ್ತಾರೆ. ಇವರು ಸನ್ನಿವೇಶವನ್ನು ನಿಯಂತ್ರಣದಲ್ಲಿಟ್ಟುಕೊಳ್ಳುವ ಪ್ರವೃತ್ತಿ ಹೊಂದಿರುತ್ತಾರೆ. ಇವರು ತಮಗೆ ಬೇಕಾದ ಹಾಗೆ ಮಾಡಲು ಎಂತಹ ಕೆಲಸವನ್ನಾದರೂ ಮಾಡುತ್ತಾರೆ.

ಧನು: 23 ನವೆಂಬರ್ -22 ಡಿಸೆಂಬರ್

ಧನು: 23 ನವೆಂಬರ್ -22 ಡಿಸೆಂಬರ್

ಈ ರಾಶಿಯವರು ಸಾಕಷ್ಟು ನಟನೆಯನ್ನು ಮಾಡುತ್ತಾರೆ. ಕೆಲವೊಮ್ಮೆ ಸಮಯಕ್ಕೆ ತಕ್ಕಂತೆ ಬದಲಾವಣೆಯನ್ನು ತೋರುತ್ತಾರೆ. ಇವರ ಈ ವರ್ತನೆ ಜನರಿಗೆ ಇಷ್ಟವಾಗದೆ ಇರುವುದು.

ಮಕರ: ಡಿಸೆಂಬರ್ 23-ಜನವರಿ 20

ಮಕರ: ಡಿಸೆಂಬರ್ 23-ಜನವರಿ 20

ಇವರು ಹೆಚ್ಚಾಗಿ ಯಾರೊಂದಿಗೂ ಬೆರೆಯರು. ನಿರ್ದಯರಾಗಿರುತ್ತಾರೆ. ಚಿಕ್ಕ ಪುಟ್ಟ ವಿಚಾರಗಳಿಗೆ ಅಥವಾ ತಮ್ಮ ಸಂತೋಷಕ್ಕಾಗಿ ಇತರರಿಗೆ ನೋವುಂಟು ಮಾಡಬಹುದು. ಇವರಿಗೆ ಇತರರ ಭಾವನೆಯ ಬಗ್ಗೆ ಅಷ್ಟಾಗಿ ಕಾಳಜಿ ಇರುವುದಿಲ್ಲ. ಇವರು ತಮ್ಮ ಉಪಸ್ಥಿತಿಯಲ್ಲಿ ಬಹಳ ಎಚ್ಚರಿಕೆಯಿಂದ ಇರುತ್ತಾರೆ.

ಕುಂಭ: ಜನವರಿ 20-ಫೆಬ್ರವರಿ 18

ಕುಂಭ: ಜನವರಿ 20-ಫೆಬ್ರವರಿ 18

ಇವರು ಕೆಲವು ವಿಚಾರಗಳಿಗೆ ಸಂಭಾವಿತರಾಗಿ ವರ್ತಿಸುವುದಿಲ್ಲ. ಇವರು ಸಾಕಷ್ಟು ವಿಲಕ್ಷಣ ಮನೋಭಾವವನ್ನು ಹೊಂದಿರುತ್ತಾರೆ. ಇವರೊಂದಿಗೆ ಸಮಯ ಕಳೆಯುವುದು ಅಥವಾ ಜೀವಿಸುವುದು ಎಂದರೆ ತುಸು ಕಷ್ಟದ ವಿಚಾರವಾಗಿರುತ್ತದೆ.

ಮೀನ: 20 ಫೆಬ್ರವರಿ -20 ಮಾರ್ಚ್

ಮೀನ: 20 ಫೆಬ್ರವರಿ -20 ಮಾರ್ಚ್

ಇವರು ಸದಾ ಇತರರನ್ನು ಕಾಯಿಸುವ ಸ್ವಭಾವನ್ನು ಹೊಂದಿರುತ್ತಾರೆ. ಸದಾ ಕನಸು ಕಾಣುತ್ತಾ ಜೀವಿಸುತ್ತಾರೆ. ಕೆಲವು ವಿಚಾರಗಳಿಗೆ ಕಿರಿಕಿರಿಯನ್ನುಂಟುಮಾಡುತ್ತಾರೆ. ಇವರೊಂದಿಗೆ ಬದುಕಲು ಸ್ವಲ್ಪ ಕಷ್ಟ ಎಂದೇ ಹೇಳಬಹುದು.

English summary

Most Annoying Personality Trait Based On Your Zodiac

One of the oldest fields of study, astrology has been in existence for thousands of years now. In fact, it is interesting to note that the beliefs and practices which have been there for hundreds of years seem to hold value even today. As this is an advancing branch of study, things that did not hold much value back then are slowly and steadily coming within the realms of astrology.
Story first published: Tuesday, February 6, 2018, 23:32 [IST]