ಈ ವರ್ಷ 'ನಾಲ್ಕು ರಾಶಿಯವರು' ವರ್ಷ ಪೂರ್ತಿ ಸಂತೋಷವಾಗಿರುತ್ತಾರೆ

Posted By: Deepu
Subscribe to Boldsky

ಜೀವನದಲ್ಲಿ ಸದಾ ಸಂತೋಷ ತುಂಬಿರಲಿ ಎಂದು ಎಲ್ಲರೂ ಬಯಸುತ್ತಾರೆ. ಆದರೆ ಅಂದುಕೊಂಡಂತೆ ಯಾರ ಜೀವನವೂ ಇರುವುದಿಲ್ಲ. ಕಷ್ಟ ನೋವು ಎನ್ನುವುದನ್ನು ಅನುಭವಿಸಲೇ ಬೇಕಾಗುತ್ತದೆ. ವ್ಯಕ್ತಿಯ ಜೀವನದಲ್ಲಿ ನೋವು ಎನ್ನುವುದು ಜೀವನದ ಪಾಠವನ್ನು ಕಲಿಸುತ್ತದೆ. ಹಾಗೆಯೇ ಸಂತೋಷ ಎನ್ನುವುದು ಜೀವನದ ಭರವಸೆಯನ್ನು ಹೆಚ್ಚಿಸುತ್ತದೆ. ಬದುಕಿಗೆ ನೋವು ನಲಿವು ಎನ್ನುವುದು ಸಮ ಪ್ರಮಾಣದಲ್ಲಿ ದೊರೆತರೆ ವ್ಯಕ್ತಿ ಸಂತೃಪ್ತ ಜೀವನವನ್ನು ಅನುಭವಿಸುತ್ತಾನೆ ಎನ್ನಲಾಗುವುದು. ಬದುಕಲ್ಲಿ ಅನುಭವಿಸುವ ಪ್ರತಿಯೊಂದು ಸನ್ನಿವೇಶ ಹಾಗೂ ಅನುಭವಗಳು ನಮ್ಮ ರಾಶಿಚಕ್ರಗಳಿಗೆ ಅನುಗುಣವಾಗಿ ಇರುತ್ತವೆ ಎನ್ನಲಾಗುವುದು.

ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಈ ವರ್ಷ ಗ್ರಹಗತಿಗಳ ಸಂಚಾರ ಹೆಚ್ಚು ಹಿತಕರ ಪರಿಣಾಮವನ್ನು ಉಂಟುಮಾಡುತ್ತೆ ಎಂದು ಹೇಳಲಾಗುತ್ತದೆ. ಗ್ರಹಗಳು ತಮ್ಮ ಮನೆಯನ್ನು ಬದಲಾಯಿಸಿ ಇನ್ನೊಂದು ಮನೆಯ ಪ್ರವೇಶ ಪಡೆಯುವುದರಿಂದ ವ್ಯಕ್ತಿಯ ಅದೃಷ್ಟ ಹಾಗೂ ಜೀವನದಲ್ಲಿ ಮಹತ್ತರವಾದ ಬದಲಾವಣೆಯನ್ನು ತರುತ್ತದೆ ಎನ್ನಲಾಗುವುದು. ಅಂತೆಯೇ ಈ ವರ್ಷದ ಗ್ರಹಗತಿಗಳ ಬದಲಾವಣೆ ಅಥವಾ ಸಂಚಾರದ ಪ್ರತಿಫಲವಾಗಿ ಕೆಲವು ರಾಶಿಚಕ್ರಗಳು ಹೆಚ್ಚು ಸಂತೋಷದ ಕ್ಷಣಗಳನ್ನು ಅನುಭವಿಸಲಿದ್ದಾರೆ ಎಂದು ಹೇಳಲಾಗುತ್ತದೆ. ಹಾಗಾದರೆ ಆ ರಾಶಿಚಕ್ರಗಳು ಯಾವವು? ಅವರ ಸಂತೋಷ ಹೇಗೆ ಒದಗಿ ಬರುವುದು ಎನ್ನುವುದನ್ನು ತಿಳಿಯಲು ಈ ಮುಂದೆ ನೀಡಿರುವ ವಿವರಣೆಯನ್ನು ಪರಿಶೀಲಿಸಿ....

ಮಿಥುನ

ಮಿಥುನ

ಈ ರಾಶಿಯವರಿಗೆ ಈ ವರ್ಷ ತಮ್ಮ ಸ್ವಾತಂತ್ರ್ಯವನ್ನು ಆನಂದಿಸುವ ಸಮಯ ಎಂದು ಹೇಳಲಾಗುತ್ತದೆ. ಇವರು ಈ ವರ್ಷ ಸಾಧ್ಯವಾದಷ್ಟು ವಿಶ್ರಾಂತಿಯನ್ನು ಪಡೆದುಕೊಳ್ಳಬಹುದು.

ಮಿಥುನ

ಮಿಥುನ

ವರ್ಷದುದ್ದಕ್ಕೂ ಹೆಚ್ಚು ಸ್ವಾತಂತ್ರ್ಯವನ್ನು ಅನುಭವಿಸುವುದರಿಂದ ಅವರ ವೈಯಕ್ತಿಕ ಕೆಲಸ ಅಥವಾ ವಿಚಾರಗಳಿಗೆ ಹೆಚ್ಚು ಒತ್ತನ್ನು ನೀಡಲು ಅವಕಾಶವಿರುತ್ತದೆ. ಈ ಹಿಂದೆ ಅನುಭವಿಸದಂತಹ ಹಾಗೂ ಊಹಿಸಿರದಂತಹ ಅದೃಷ್ಟ ಹಾಗೂ ಸಂತಸ ದೊರೆಯುವುದು.

ಸಿಂಹ

ಸಿಂಹ

ಈ ರಾಶಿಯವರು ಈ ವರ್ಷ ತಮ್ಮದೇ ಆದ ನಂಬಿಕೆಯೊಂದಿಗೆ ಒಳಿತನ್ನು ಹೊಂದುವರು. ಇವರು ತಮ್ಮ ಅಹಂಕಾರವನ್ನು ಪರಿಶೀಲಿಸಿಕೊಂಡರೆ ಅಥವಾ ಹಿಡಿತದಲ್ಲಿಟ್ಟುಕೊಂಡರೆ ಕಾಡಿನ ರಾಜ ಎನ್ನುವಂತೆ ಬದುಕಬಹುದು. ಇವರು ತಮ್ಮದೇ ಆದ ಗುರಿಯೊಂದಿಗೆ ಕೆಲಸವನ್ನು ನಿರ್ವಹಿಸುತ್ತಾರೆ.

ಸಿಂಹ

ಸಿಂಹ

ಇದು ಹಿಂದೆಂದೂ ಕಾಣದಂತಹ ಜಯವನ್ನು ಪಡೆದುಕೊಳ್ಳುವರು. ಇವರು ತಮ್ಮ ಸಾಧನೆ ಹಾಗೂ ಕೆಲಸದ ನಡುವೆ ಭವಿಷ್ಯದ ವಿಚಾರವಾಗಿಯೂ ಹೆಚ್ಚಿನ ಗಮನ ನೀಡಬೇಕಾಗುವುದು.

ತುಲಾ

ತುಲಾ

ಈ ವರ್ಷ ಈ ರಾಶಿಯವರು ಜೀವನದಲ್ಲಿ ಶಾಂತಿಯನ್ನು ಪಡೆದುಕೊಳ್ಳುತ್ತಾರೆ. ಇದು ಅವರಿಗೆ ಹೆಚ್ಚಿನ ಸಂತೋಷವನ್ನು ನೀಡುವುದು. ಹಿಂದಿನ ವರ್ಷದಲ್ಲಿ ಹೆಚ್ಚು ಅಸ್ತವ್ಯಸ್ತವಾದ ಪರಿಸ್ಥಿತಿಗಳನ್ನು ಹೊಂದಿದ್ದರು. ಆದರೆ ಈ ವರ್ಷ ಮಾತ್ರ ಇವರಿಗೆ ಹೆಚ್ಚಿನ ಸಂತೋಷ ಲಭ್ಯವಾಗುವುದು.

ತುಲಾ

ತುಲಾ

ಇವರು ಈ ಹಿಂದೆ ಅನುಭವಿಸಿದ ಕಷ್ಟದ ಸ್ಥಿತಗಳಿಂದ ಕಲಿತ ಮಾಡವನ್ನು ನೆನಪಿಸಿಕೊಳ್ಳುವರು. ಈ ಹಿಂದೆ ಮಾಡಿದ ತಪ್ಪುಗಳನ್ನು ಮುಂದುವರಿಸಬಾರದು ಎನ್ನುವುದನ್ನು ಇವರು ಅರಿಯಬೇಕು. ಆಗ ಕಷ್ಟದ ಸ್ಥಿತಿಯು ಶಮನಗೊಳ್ಳುವುದು.

ಧನು

ಧನು

ಈ ರಾಶಿಯವರಿಗೆ ಈ ವರ್ಷ ಹೊಸ ಅನುಭವವನ್ನು ನೀಡಲಿದೆ. ಉತ್ತಮ ಅವಕಾಶಗಳು ಹಾಗೂ ಸ್ಥಿತಿಗತಿಗಳು ವೈಯಕ್ತಿಕ ಏಳಿಗೆಗೆ ಸಹಾಯ ಮಾಡುವುದು. ಮುಂಬರುವ ತಿಂಗಳಲ್ಲಿ ದೊಡ್ಡ ಚಲನೆಯನ್ನು ಕಾಣಲಿದ್ದಾರೆ. ಹಿಂದಿನ ವರ್ಷದಲ್ಲಿ ಕಂಡ ಸ್ಥಿತಿ ಹಾಗೂ ಅನುಭವಗಳನ್ನು ಅವರು ನೆನಪಿಸಿಕೊಳ್ಳುವರು.

ಧನು

ಧನು

ಅಲ್ಲದೆ ಜೀವನದ ಬಗ್ಗೆ ಹೆಚ್ಚು ಆಶಾವಾದಿಗಳಾಗಿರುತ್ತಾರೆ. ಇದು ಇವರನ್ನು ದೀರ್ಘ ಕೆಲಸ ಹಾಗೂ ಉತ್ತಮ ಗುರಿ ಸಾಧನೆಗೆ ಸಹಾಯ ಮಾಡುವುದು. ಹಾಗಾಗಿ ವರ್ಷ ಪೂರ್ತಿ ಸಂತೋಷವನ್ನು ಅನುಭವಿಸುವರು ಎಂದು ಹೇಳಲಾಗುವುದು.

English summary

Meet The Happiest Zodiac Signs Of The Year

What do you think is the best thing that can happen to you this year? Find out if your zodiac sign is present in the list of the most happiest zodiac signs, which is something that can instantly bring a smile on your face if you belong to the mentioned zodiac sign.Here, we bring to you the list of the most happiest zodiac signs of the year. These are the zodiac signs, the individuals of which would almost have an honeymoon period all throughout the year.