Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ನಿಮ್ಮ ಜೀವನದ ಎಲ್ಲಾ ಸೀಕ್ರೆಟ್ಸ್ ಬಿಚ್ಚಿಡುವ ಅಂಗೈಯಲ್ಲಿರುವ ಅದೃಷ್ಟದ ಚಿಹ್ನೆಗಳು!
ಅಂಗೈನೋಡಿಕೊಂಡು ಜಾತಕ ಹೇಳುವಂತವರಿಗೆ ಅದರಲ್ಲಿರುವಂತಹ ಪ್ರತಿಯೊಂದು ಗೆರೆಗಳನ್ನು ತಿಳಿದುಕೊಳ್ಳುವುದು ಅತೀ ಅಗತ್ಯವಾಗಿರುವುದು. ಅಂಗೈಯಲ್ಲಿರುವಂತಹ ಪ್ರತಿಯೊಂದು ಗೆರೆಗೆ ಕೂಡ ಅದರದ್ದೇ ಆಗಿರುವಂತಹ ಪ್ರಾಮುಖ್ಯತೆಯು ಇದೆ. ವ್ಯಕ್ತಿಯೊಬ್ಬನ ಅಂಗೈಯನ್ನು ನೋಡಿದರೆ ಕೆಲವೊಂದು ಅದೃಷ್ಟದ ಚಿಹ್ನೆಗಳು ಕಂಡುಬರುವುದು.
ಈ ಲೇಖನದಲ್ಲಿ ವ್ಯಕ್ತಿಯ ಅಂಗೈಯಲ್ಲಿ ಇರುವಂತಹ ಐದು ಅದೃಷ್ಟದ ಚಿಹ್ನೆಗಳ ಬಗ್ಗೆ ತಿಳಿಸಿಕೊಡಲಿದ್ದೇವೆ. ಇದನ್ನು ನೀವು ತಿಳಿಯಿರಿ. ಮೀನು, ಧ್ವಜ, ಸ್ವಸ್ತಿಕ, ಕಮಲ ಮತ್ತು ಮಂದಿರದ ಸಂಕೇತಗಳು ಅಂಗೈಯ ಮೇಲಿದ್ದರೆ ಇದನ್ನು ತುಂಬಾ ಅದೃಷ್ಟವೆಂದು ನಂಬಲಾಗುತ್ತದೆ. ಈ ಐದು ಚಿಹ್ನೆಗಳ ಬಗ್ಗೆ ನೀವು ಮತ್ತಷ್ಟು ತಿಳಿಯಿರಿ....

ಮೀನಿನ ಚಿಹ್ನೆ
ಮೀನಿನ ಗೆರೆಯನ್ನು ಸಂತೋಷದ ಗೆರೆಯೆಂದೂ ಕರೆಯಲಾಗುವುದು. ಇದು ಅಂಗೈಯ ಮೇಲಿರುವುದು ತುಂಬಾ ಅಪರೂಪ. ಇದು ಯಾವುದೇ ವ್ಯಕ್ತಿಯ ಕೈಯಲ್ಲಿದ್ದರೆ ಆಗ ಸಂತೋಷ ಅಥವಾ ಯಶಸ್ಸು ಆತನ ಮುಂದಿದೆ ಎಂದು ಹೇಳಬಹುದು. ಮೀನಿನ ಚಿಹ್ನೆಯು ವಿದೇಶಿ ಪ್ರಯಾಣ, ಗಣತೆ ಮತ್ತು ಹೆಚ್ಚಿನ ಸಂಪತ್ತು ನೀಡುವುದು. ಈ ವ್ಯಕ್ತಿಯು ಶಾಂತಿಪ್ರಿಯ ಮನಸ್ಸಿನವರಾಗಿರುವರು ಮತ್ತು ಸಮಾಜಸೇವೆಗಳಲ್ಲಿ ತೊಡಗಿಕೊಳ್ಳುವರು.

ಧ್ವಜದ ಚಿಹ್ನೆ
ಶನಿಯ ಶಿಖರದಲ್ಲಿ ಧ್ವಜದ ಚಿಹ್ನೆಯು ಕಂಡುಬಂದರೆ ಇದು ತುಂಬಾ ಅದೃಷ್ಟವೆನ್ನಲಾಗುತ್ತದೆ. ಈ ಭಾಗದಲ್ಲಿ ಧ್ವಜದ ಚಿಹ್ನೆಯಿದ್ದರೆ, ಆ ವ್ಯಕ್ತಿಯು ತುಂಬಾ ಜನಪ್ರಿಯ ವ್ಯಕ್ತಿಯಾಗುವರು. ಕಲೆಯಲ್ಲಿ ಇವರಿಗೆ ಪ್ರಸಿದ್ಧಿಯು ಬರುವುದು ಅಥವಾ ಅಂತಾರಾಷ್ಟ್ರೀಯ ಮಟ್ಟದಲ್ಲಿ ಇವರು ಜನಪ್ರಿಯತೆ ಪಡೆದುಕೊಳ್ಳುವರು. ಈ ವ್ಯಕ್ತಿಗಳಿಗೆ ಜೀವನದ ಕೊನೆಯ ಘಟ್ಟದಲ್ಲೂ ಯಶಸ್ಸು ಸಿಗುವುದು.

ಸ್ವಸ್ತಿಕ ಚಿಹ್ನೆ
ಅಂಗೈಯ ಮೇಲೆ ಸ್ವಸ್ತಿಕದ ಚಿಹ್ನೆ ಹೊಂದಿರುವಂತಹ ವ್ಯಕ್ತಿಗಳು ತುಂಬಾ ಅದೃಷ್ಟಶಾಲಿಗಳು ಎಂದು ಪರಿಗಣಿಸಲಾಗುತ್ತದೆ. ಇವರು ಕಠಿಣ ಪರಿಶ್ರಮ ಮತ್ತು ಬದ್ಧತೆಯು ಅವರಿಗೆ ಜೀವನದಲ್ಲಿ ಹೆಚ್ಚಿನ ಯಶಸ್ಸು ತಂದುಕೊಡುವುದು. ವಿಧಿಗೆರೆಯ ಮೇಲೆ ಈ ಚಿಹ್ನೆಯಿದ್ದರೆ ಆ ವ್ಯಕ್ತಿಯು ತುಂಬಾ ಪ್ರತಿಭಾವಂತ ಎನ್ನಲಾಗುತ್ತದೆ.
Most Read:ಮದುವೆಯಲ್ಲಿ ದಂಪತಿಗಳಿಗೆ 5 ಲೀಟರ್ ಪೆಟ್ರೋಲ್ ಉಡುಗೊರೆ ಮಾಡಿದ ಗೆಳೆಯರು!!
ಕಮಲದ ಚಿಹ್ನೆ
ಕಮಲದ ಚಿಹ್ನೆಯು ಲಕ್ಷ್ಮೀ ದೇವಿಗೆ ಸಂಬಂಧಿಸಿದ್ದಾಗಿ ಇದರಿಂದ ಇದನ್ನು ಸಂಪತ್ತು ಮತ್ತು ಅದೃಷ್ಟವೆಂದು ಪರಿಗಣಿಸಲಾಗುವುದು. ಅಂಗೈ ಮೇಲೆ ಈ ಚಿಹ್ನೆ ಇರುವಂತಹ ವ್ಯಕ್ತಿಗಳು ತುಂಬಾ ಶುದ್ಧ ಮತ್ತು ಐಷಾರಾಮಿ ಜೀವನ ಹೊಂದಿರುವರು. ಈ ವ್ಯಕ್ತಿಗಳು ತುಂಬಾ ಜ್ಞಾನ ಸಂಪಾದಿಸಿರುವರು ಅಥವಾ ಆಧ್ಯಾತ್ಮಿಕ ಗುರುಗಳಾಗಿರುವರು.

ಹಸ್ತಸಾಮುದ್ರಿಕ ಶಾಸ್ತ್ರದ ಪ್ರಕಾರ ಅಂಗೈಯಲ್ಲಿ ವಿ ಗೆರೆ ಇದ್ದರೆ
ಹಸ್ತಸಾಮುದ್ರಿಕ ಶಾಸ್ತ್ರದ ಪ್ರಕಾರ ಹೃದಯ ರೇಖೆಯು ನಿಮ್ಮ ಸಂಬಂಧ ಮತ್ತು ಭಾವನೆಗಳನ್ನು ತಿಳಿಯಲು ನೆರವಾಗುವುದು. ಇದು ವ್ಯಕ್ತಿಯ ಪರಿಚಯವೇ ಇಲ್ಲದಿದ್ದರೂ ಆತನ ಬಗ್ಗೆ ತುಂಬಾ ತಿಳಿಯಲು ಇದು ನೆರವಾಗುವುದು. ಹೃದಯ ಗೆರೆಯ ಪ್ರಮುಖ ಕಾರಣವೆಂದರೆ ಇದು ನಿಮ್ಮ ಹಿಂದಿನ ಸಂಬಂಧದ ಬಗ್ಗೆಯೂ ಹೇಳುತ್ತದೆ. ವ್ಯಕ್ತಿಯ ಬಗ್ಗೆ ಹೇಳುವ ಪ್ರಮುಖ ನಾಲ್ಕು ರೇಖೆಗಳಲ್ಲಿ ಹೃದಯ ರೇಖೆಯು ಒಂದಾಗಿದೆ ಎಂದು ಹಸ್ತಸಾಮುದ್ರಿಕ ಶಾಸ್ತ್ರಜ್ಞರು ಹೇಳುತ್ತಾರೆ. ಹೃದಯ ರೇಖೆಯಲ್ಲಿ ವಿ ಗೆರೆಯು ತನ್ನದೇ ಆದ ಪ್ರಾಮುಖ್ಯತೆ ಪಡೆದಿದೆ. ಅಂಗೈಯ ಮೇಲೆ ವಿ ಅಕ್ಷರವಿದ್ದರೆ ಆಗ ನೀವು ತುಂಬಾ ಅದೃಷ್ಟ ಯಶಸ್ವಿ ವ್ಯಕ್ತಿಗಳು ಎಂದು ಹೇಳಲಾಗುತ್ತದೆ. ನಿಮ್ಮ ಜೀವನದಲ್ಲಿ ಸಾಕಷ್ಟು ಹಣವು ನಿಮಗೆ ಸಿಗಲಿದೆ. ಇನ್ನೊಂದು ಬದಿಯಲ್ಲಿ ನಿಮಗೆ ಒಳ್ಳೆಯ ಅದೃಷ್ಟ ಮತ್ತು ಜೀವನದಲ್ಲಿ ತುಂಬಾ ಒಳ್ಳೆಯ ವ್ಯಕ್ತಿಗಳು ಸಿಗುವರು. ನೀವು ತುಂಬಾ ನಂಬಿಕಸ್ಥ ಸ್ನೇಹಿತರನ್ನು ಪಡೆಯುವುದು ಮಾತ್ರವಲ್ಲದೆ, ನೀವು ಕೂಡ ಅವರಿಗೆ ತುಂಬಾ ಪ್ರೋತ್ಸಾಹ ನೀಡಲಿರುವಿರಿ. ಇನ್ನೊಂದೆಡೆಯಲ್ಲಿ ಸಮಾಜದಲ್ಲಿ ನಿಮಗೆ ಒಳ್ಳೆಯ ಹೆಸರು ಬರಲಿದೆ. 35ರ ಹರೆಯ ದಾಟಿದ ಬಳಿಕ ನಿಮ್ಮ ಜೀವನವು ಸಂಪೂರ್ಣವಾಗಿ ಯೂ ಟರ್ನ್ ತೆಗೆದುಕೊಳ್ಳಲಿದೆ.

ಮಂದಿರದ ಚಿಹ್ನೆ
ಮಂದಿರ ಚಿಹ್ನೆಯು ಸನ್ಯಾಸಿಗಳು, ಗುರುಗಳು, ಶ್ರೇಷ್ಠ ಸುಧಾರಕರು ಮತ್ತು ಜ್ಞಾನಿಗಳ ಅಂಗೈಯಲ್ಲಿ ಕಂಡುಬರುವುದು. ಗುರುವಿನ ಬೆಟ್ಟದಲ್ಲಿ ಈ ಚಿಹ್ನೆಯು ಕಂಡುಬರುವುದು ಮತ್ತು ಇದು ತುಂಬಾ ಅಪರೂಪದ ಚಿಹ್ನೆಯಾಗಿದೆ. ಈ ಚಿಹ್ನೆಯಿರುವಂತಹ ವ್ಯಕ್ತಿಗಳು ಸಮಾಜದಲ್ಲಿ ದೊಡ್ಡ ಸ್ಥಾನಮಾನ ಹೊಂದಿರುವರು.



Click it and Unblock the Notifications
