For Quick Alerts
ALLOW NOTIFICATIONS  
For Daily Alerts

ಜ್ಯೋತಿಷ್ಯಾಸ್ತ್ರ: ಕನಸಿನಲ್ಲಿ ಹಾವು-ಮುಂಗುಸಿ ಕಂಡುಬಂದರೆ...

By Arshad
|

ಕನಸುಗಳು ಎಲ್ಲರನ್ನೂ ಸದಾ ಬೆರಗುಗೊಳಿಸುತ್ತವೆ. ರಾತ್ರಿಯಲ್ಲಿ ನಾವೆಲ್ಲರೂ ತಪ್ಪದೇ ಕನಸುಗಳನ್ನು ಕಾಣುತ್ತೇವೆ. ಆದರೆ ಇವುಗಳಲ್ಲಿ ಹೆಚ್ಚಿನವು ಮರುದಿನ ಎದ್ದ ಬಳಿಕ ನೆನಪಿರುವುದಿಲ್ಲ. ಕೆಲವರಂತೂ ಕುಳಿತಲ್ಲೇ ಮನಸ್ಸಿನಲ್ಲಿ ಮಂಡಿಗೆ ಮೆಲ್ಲುವುದನ್ನು ಹಗಲುಗನಸು ಎನ್ನುತ್ತೇವೆ. ಆದರೆ ರಾತ್ರಿಯ ಗಾಢನಿದ್ದೆಯಲ್ಲಿ ಆವರಿಸುವ ಕನಸುಗಳು ವರ್ಣರಂಜಿತ, ಸ್ಪಷ್ಟ ದೃಶ್ಯ, ಶ್ರವಣ ಮಾಹಿತಿಗಳ ರೂಪದಲ್ಲಿ ಮರುದಿನ ಇನೊಬ್ಬರಿಗೆ ವಿವರಿಸುವಷ್ಟು ಸ್ಪಷ್ಟವಾಗಿ ನೆನಪಿರುತ್ತವೆ. ಈ ಕನಸುಗಳು ಮಾನವರ ಸೃಷ್ಟಿಯ ಕಾಲದಿಂದಲೂ ಒಂದು ವಿಸ್ಮಯವಾಗಿ ಕಾಡುತ್ತಿವೆ. ಜಗತ್ತು ಕಂಡ ಅತ್ಯುತ್ತಮ ಮನೋವಿಜ್ಞಾನಿ ಸಿಗ್ಮಂಡ್ ಪ್ರಾಯ್ಡ್ ರವರು ಕನಸುಗಳ ಬಗ್ಗೆ ಅತ್ಯಂತ ಆಳವಾದ ಅಧ್ಯಯನ ನಡೆಸಿದ್ದರು. ಅವರ ಪ್ರಕಾರ ನಮ್ಮ ಕನಸುಗಳು ನಮ್ಮ ಸುಪ್ತ ಪ್ರಜ್ಞೆಯಲ್ಲಿ ಅಥವಾ ಒಳಮನಸ್ಸಿನಲ್ಲಿ ದಾಖಲಾಗಿರುವ ಇಚ್ಛೆಗಳ ದೃಶ್ಯರೂಪಗಳಾಗಿವೆ.

ಸಾಮಾನ್ಯವಾಗಿ ನಮಗೆ ಸಿಗದ ಅಥವಾ ಸಿದ್ದಿಸಲು ಸಾಧ್ಯವಾಗದ ಕೆಲವು ಬಯಕೆಗಳು ಸುಪ್ತಾವಸ್ಥೆಯಲ್ಲಿ ಉಳಿದುಕೊಂಡು ಕನಸಿನಲ್ಲಿ ಇದನ್ನು ಪಡೆದಂತೆ ಅಥವಾ ಸಾಧಿಸಿದ ಸಾರ್ಥಕ ಭಾವನೆ ಪಡೆಯುವುದೇ ಕನಸಿನ ಉದ್ದೇಶ ಎಂದು ಅವರು ತಿಳಿಸುತ್ತಾರೆ. ಈ ಅಪ್ರಕಟಿತ ಬಯಕೆಗಳು ನಮ್ಮ ಕನಸುಗಳ ಮೂಲಕ ಪ್ರಕಟಗೊಳ್ಳುತ್ತವೆ. ನಮ್ಮ ಕನಸಿನಲ್ಲಿ ಕಾಣಿಸಿಕೊಳ್ಳುವ ದೃಶ್ಯಗಳು ಈ ಬಯಕೆಗಳನ್ನು ಬಿಂಬಿಸುವ ಜೀವಂತ ಅಥವಾ ಜೀವವಿಲ್ಲದ ವಸ್ತುಗಳೂ ಆಗಿರಬಹುದು.

ಭಾರತೀಯ ಜ್ಯೋತಿಷ್ಯಾಸ್ತ್ರಜ್ಞರ ಪ್ರಕಾರ ನಮ್ಮ ಕನಸುಗಳು ಭವಿಷ್ಯದಲ್ಲಿ ಎದುರಾಗುವ ಸನ್ನಿವೇಶಗಳ ಮುನ್ಸೂಚನೆಯಾಗಿದೆ. ಕನಸಿನಲ್ಲಿ ಕಾಣುವ ವಿವಿಧ ದೃಶ್ಯಗಳು, ಇವು ಜೀವಂತ ಇರಬಹುದು ಅಥವಾ ಜೀವವಿಲ್ಲದ ವಸ್ತುಗಳಾಗಿರಬಹುದು. ಈ ದೃಶ್ಯಗಳು ಭವಿಷ್ಯದಲ್ಲಿ ಎದುರಾಗುವ ಒಳ್ಳೆಯ ಅಥವಾ ಕೆಟ್ಟ ವಿಷಯದ ಮುನ್ಸೂಚನೆಯಾಗಿರಬಹುದು. ಈ ವಸ್ತುಗಳನ್ನು ಕನಸಿನಲ್ಲಿ ಕಂಡಾಗ ಇದು ಏನನ್ನು ಪ್ರತಿಬಿಂಬಿಸುತ್ತದೆ ಎಂಬುದನ್ನು ಅರಿತುಕೊಳ್ಳುವುದು ಕುತೂಹಲ ಕೆರಳಿಸುತ್ತದೆ. ಬನ್ನಿ, ಕನಸಿನಲ್ಲಿ ಸಾಮಾನ್ಯವಾಗಿ ಕಾಣಿಸುವ ವಸ್ತುಗಳು ಅಥವಾ ಜೀವಿಗಳ ಬಗ್ಗೆ ಜ್ಯೋತಿಶ್ಯಾಸ್ತ್ರ ಏನು ವಿವರಿಸುತ್ತದೆ ಎಂಬುದನ್ನು ನೋಡೋಣ....

ಮುಂಗುಸಿ

ಮುಂಗುಸಿ

ಹಿಂದೂ ಜ್ಯೋತಿಶ್ಯಾಸ್ತ್ರದ ಪ್ರಕಾರ ಒಂದು ವೇಳೆ ವ್ಯಕ್ತಿ ತನ್ನ ಕನಸಿನಲ್ಲಿ ಮುಂಗಿಸಿಯನ್ನು ಕಂಡರೆ ಇದೊಂದು ಶುಭಶಕುನವಾಗಿದೆ. ಈ ಕನಸು ಕಂಡವರಿಗೆ ಶೀಘ್ರವೇ ಹೆಚ್ಚಿನ ಸಂಪತ್ತು ಲಭಿಸಲಿದೆ ಎಂದು ನಂಬಲಾಗಿದೆ. ಅಲ್ಲದೇ ಮುಂಗುಸಿಯನ್ನು ಕನಸಿನಲ್ಲಿ ಕಂಡವರಿಗೆ ಇದುವರೆಗೆ ಪರಿಹರಿಸಲಾಗದ ಸಮಸ್ಯೆಗಳು ಶೀಘ್ರವೇ ಪರಿಹಾರ ಕಂಡುಕೊಳ್ಳುತ್ತವೆ ಹಾಗೂ ಜೀವನ ಸುಖಕರವಾಗುತ್ತದೆ ಎಂದು ನಂಬಲಾಗಿದೆ.

ಭೂತ

ಭೂತ

ನಮ್ಮಲ್ಲಿ ಹೆಚ್ಚಿನವರಿಗೆ ಕನಸಿನಲ್ಲಿ ಭೂತ ಕಾಣಿಸಿಕೊಳ್ಳುತ್ತದೆ. ಒಂದು ವೇಳೆ ತಮ್ಮ ಗತಿಸಿದ ತಂದೆ ತಾಯಿಗಳು ಕನಸಿನಲ್ಲಿ ಕಾಣಿಸಿಕೊಂಡರೆ ಕನಸು ಕಂಡ ವ್ಯಕ್ತಿ ಶೀಘ್ರವೇ ಹೊಸ ಸಂಬಂಧಕ್ಕೆ ಒಳಗಾಗುತ್ತಾನೆ/ಳೆ ಎಂದು ಜ್ಯೋತಿಶ್ಯಾಸ್ತ್ರ ತಿಳಿಸುತ್ತದೆ. ಒಂದು ವೇಳೆ ಕನಸಿನಲ್ಲಿ ತನ್ನ ಗತಿಸಿದ ಸ್ನೇಹಿತ/ಸ್ನೇಹಿತೆಯನ್ನು ಕಂಡರೆ ಆತ/ಆಕೆ ತನಗೆ ಇಷ್ಟವಿಲ್ಲದ ವ್ಯಕ್ತಿಯೊಂದಿಗೆ ದೀರ್ಘ ಪ್ರವಾಸಕ್ಕೆ ಶೀಘ್ರವೇ ಹೋಗಲಿದ್ದಾರೆ ಎಂದು ತಿಳಿದುಕೊಳ್ಳಬಹುದು.

ಮೀನು

ಮೀನು

ಒಂದು ವೇಳೆ ಕನಸಿನಲ್ಲಿ ಮೀನನ್ನು ಕಂಡರೆ ಈ ವ್ಯಕ್ತಿ ಭವಿಷ್ಯದಲ್ಲಿ ನಡೆಸುವ ಯಾವುದೇ ವ್ಯವಹಾರ ಯಶಸ್ವಿಯಾಗಲಿದೆ ಎಂದು ತಿಳಿಯಬಹುದು. ಆದರೆ, ಒಂದು ವೇಳೆ ಈ ಮೀನು ಆಕ್ರಮಣಶೀಲ ಪ್ರವೃತ್ತಿ ಹೊಂದಿದ್ದರೆ ಇದು ಆತನ/ಆಕೆಯಲ್ಲಿ ಅಡಕವಾಗಿರುವ ಋಣಾತ್ಮಕ ಶಕ್ತಿಗಳನ್ನು ಬಿಂಬಿಸುತ್ತದೆ.

ಮದ್ಯ

ಮದ್ಯ

ಒಂದು ವೇಳೆ ವ್ಯಕ್ತಿ ತನ್ನ ಕನಸಿನಲ್ಲಿ ಮದ್ಯವನ್ನು ಕಂಡರೆ ಇದರ ಅರ್ಥ ಆತ/ಆಕೆ ದೃಢಸಂಕಲ್ಪದ ವ್ಯಕ್ತಿಯಾಗಿದ್ದಾರೆ ಎಂದು ತಿಳಿದುಕೊಳ್ಳಬಹುದು. ಅಲ್ಲದೇ ಈ ವ್ಯಕ್ತಿ ಮಹತ್ವಾಕಾಂಕ್ಷಿ ಹಾಗೂ ತಮ್ಮ ಗುರಿಯನ್ನು ಸಾಧಿಸಲು ಯಾವುದೇ ಬಗೆಯ ಕಷ್ಟಗಳನ್ನು ಎದುರಿಸಲು ಸಿದ್ದರಾಗಿರುತ್ತಾರೆ ಎಂದು ಅರ್ಥವಾಗಿದೆ.

ನೀರು

ನೀರು

ಕನಸಿನಲ್ಲಿ ನೀರನ್ನು ಕಂಡರೆ ಇದರ ಅರ್ಥ ವಿವಿಧ ರೂಪಗಳನ್ನು ಪಡೆಯುತ್ತದೆ. ಹೆಚ್ಚಿನ ಸಂದರ್ಭಗಳಲ್ಲಿ ಈ ಕನಸುಗಳನ್ನು ಕಾಣುವ ವ್ಯಕ್ತಿಗಳು ಹೆಚ್ಚು ತೊಂದರೆಯಲ್ಲಿ ಸಿಲುಕಿರುವುದನ್ನು ಇದು ಬಿಂಬಿಸುತ್ತದೆ. ಒಂದು ವೇಳೆ ಈ ನೀರು ಕೆಸರಿನಂತಿದ್ದರೆ ಈ ವ್ಯಕ್ತಿ ಹಲವು ಬಗೆಯ ಋಣಾತ್ಮಕ ಶಕ್ತಿಗಳಿಂದ ಸುತ್ತುವರೆದಿರುತ್ತಾನೆ.

ಹಾವು

ಹಾವು

ಕನಸಿನಲ್ಲಿ ಕ೦ಡುಬರುವ ಸರ್ಪವು ವ್ಯಕ್ತಿಯ ಅತ್ಯ೦ತ ಪ್ರಬಲವಾದ ಲೈ೦ಗಿಕ ವಾ೦ಛೆಯನ್ನು ಪ್ರತಿನಿಧಿಸುತ್ತದೆ. ವ್ಯಕ್ತಿಯೋರ್ವನು/ಳು ತನ್ನ ಕನಸಿನಲ್ಲಿ ಕಪ್ಪು ಬಣ್ಣದ ಹಾವನ್ನು ಕ೦ಡನು/ಳು ಎ೦ದಾದಲ್ಲಿ, ಅದರ ಭಾವಾರ್ಥವೇನೆ೦ದರೆ, ಆತನು/ಆಕೆಯು ತನ್ನ ಸ೦ಗಾತಿಯೊಡನೆ ಕೆಲವೊ೦ದು ಅತ್ಯ೦ತ ಸನಿಹದ ಅಥವಾ ಆತ್ಮೀಯ ಕ್ಷಣಗಳನ್ನು ಕಳೆಯುವುದಕ್ಕಾಗಿ ಹಾತೊರೆಯುತ್ತಿರುವನು/ಳು ಎ೦ದಾಗಿರುತ್ತದೆ.

ಅಚ್ಚರಿ ಜಗತ್ತು: ಕನಸಿನಲ್ಲಿ ಹಾವು ಕಾಣಿಸಿಕೊಂಡರೆ ಏನರ್ಥ ಗೊತ್ತೇ?

ಯುವತಿ

ಯುವತಿ

ಒಂದು ವೇಳೆ ಕನಸಿನಲ್ಲಿ ಯುವತಿಯೋರ್ವಳನ್ನು ಕಂಡರೆ ಇದು ಆತನ/ಆಕೆಯ ಬಗ್ಗೆ ಏನೋ ಒಳ್ಳೆಯದಾಗುತ್ತದೆ ಎಂದು ತಿಳಿದುಕೊಳ್ಳಬಹುದು. ಭವಿಷ್ಯದಲ್ಲಿ ಕೈಗೊಳ್ಳುವ ಯಾವುದೇ ಉದ್ಯಮದಲ್ಲಿ ಒಳ್ಳೆಯದಾಗುತ್ತದೆ ಎಂಬುದು ಈ ಕನಸಿನ ಮುನ್ಸೂಚನೆಯಾಗಿದೆ.

ಮಹಿಳೆಯ ಕನಸು ಬಿದ್ದರೆ-ಕನಸಲ್ಲಿ ಅರೆರೆರೇ! ಭವಿಷ್ಯ ಅಯ್ಯಯ್ಯಯ್ಯೋ..!

English summary

Interpreting Your Dreams as per the Astrology!

According to Indian astrological beliefs, our dreams are a reflection of our future. The various objects, living or non living, that we see in dreams signify something good or bad happening to us in the future. It is extremely interesting to find out what the different objects in our dream actually mean. Let us have a look:
Story first published: Monday, February 26, 2018, 17:05 [IST]
X
Desktop Bottom Promotion