ಈ ವರ್ಷ ದೊಡ್ಡ ಮಟ್ಟದ ಬದಲಾವಣೆ ಕಾಣಲಿರುವ ರಾಶಿಗಳು

Posted By: Deepu
Subscribe to Boldsky

ಪ್ರತಿವರ್ಷ ಕೂಡ ನೀವು ಜೀವನ ಬದಲಾಗಬೇಕೆಂದು ಬಯಸುತ್ತೀರಿ. ಆದರೆ ಅದು ಸಾಧ್ಯವಾಗುವುದಿಲ್ಲ. ಯಾಕೆಂದರೆ ನಿಮ್ಮ ಪ್ರಯತ್ನಕ್ಕೆ ನಿಮ್ಮ ಜಾತಕ ಫಲ ಯಾನೆ ರಾಶಿಯ ಬೆಂಬಲ ಸಿಗದೆ ಇರಬಹುದು. ಆದರೆ ಈ ವರ್ಷ ಕೆಲವು ರಾಶಿಯವರ ಜೀವನವೇ ಬದಲಾಗಲಿದೆ. ಇದಕ್ಕೆ ಆ ರಾಶಿಯವರು ತಯಾರಾಗಿ ನಿಲ್ಲಬೇಕು.

ಐದು ರಾಶಿಯವರು ದೊಡ್ಡ ಮಟ್ಟದ ಬದಲಾವಣೆ ಕಂಡುಕೊಳ್ಳುವರು. 2018ರಲ್ಲಿ ಅವರ ಜೀವನದಲ್ಲಿ ಬದಲಾವಣೆಗಳು ಕಂಡುಬರುವುದು. ಆ ಅದೃಷ್ಟವಂತ ಐದು ರಾಶಿಗಳು ಯಾವುದು ಎಂದು ನೀವು ಕಂಡುಕೊಳ್ಳಿ....

ವೃಷಭ: ಎಪ್ರಿಲ್ 20-ಮೇ 20

ವೃಷಭ: ಎಪ್ರಿಲ್ 20-ಮೇ 20

ಈ ರಾಶಿಯವರು ತಮ್ಮ ಸುತ್ತಲು ಆಗುವಂತಹ ಬದಲಾವಣೆಗಳನ್ನು ಇಷ್ಟಪಡದೇ ಇರಬಹುದು. ಆದರೆ ಇದಕ್ಕೆ ಅವರು ಹೊಂದಿಕೊಳ್ಳಬೇಕು ಹಾಗೂ ಅದನ್ನು ಸ್ವೀಕರಿಸಬೇಕು. ಈ ವರ್ಷವು ಅವರಿಗೆ ದೊಡ್ಡ ಮಟ್ಟದ ಬದಲಾವಣೆ ಉಂಟು ಮಾಡಲಿದೆ ಮತ್ತು ತಮ್ಮ ದೈನಂದಿನ ಚಟುವಟಿಕೆಗಳ ಬಗ್ಗೆ ಮರು ಚಿಂತಿಸಬೇಕು. ಬದಲಾಣೆಗೆ ಹೊಂದಿಕೊಂಡು ಮರುಚಿಂತನೆ ಮಾಡುವವರಿಗೆ ಇದು ವೈಯಕ್ತಿಕವಾಗಿ ಒಳ್ಳೆಯ ಬಲ, ಆತ್ಮವಿಶ್ವಾಸ ಮತ್ತು ಫಲಿತಾಂಶ ತರಲಿದೆ.

ಸಿಂಹ: ಜುಲೈ 23- ಆಗಸ್ಟ್ 23

ಸಿಂಹ: ಜುಲೈ 23- ಆಗಸ್ಟ್ 23

ಈ ರಾಶಿಯವರಲ್ಲಿ ಈ ವರ್ಷ ಕೆಲವೊಂದು ತಾತ್ವಿಕ ಬದಲಾವಣೆಗಳ ಅನುಭವವಾಗಲಿದೆ. ಬದಲಾವಣಿಗಳಿಗೆ ಅವರು ಹೆದರುವುದಿಲ್ಲವಾದರೂ ಅವರು ಸಂಪೂರ್ಣವಾಗಿ ಹಿತಕರವಾಗಿರಲ್ಲ. ಆದರೆ ವರ್ಷದ ಅಂತ್ಯದಲ್ಲಿ ಅವರು ಹಲವು ಸಮಯದಿಂದ ಬಯಸುತ್ತಾ ಇರುವಂತಹ ಯಶಸ್ಸು ಪಡೆದುಕೊಳ್ಳಲು ಸುತ್ತಲಿನ ಸಮಾಜವನ್ನು ಭಿನ್ನ ದೃಷ್ಟಿಕೋನದಿಂದ ನೋಡಬೇಕು.

ಕನ್ಯಾ: ಆಗಸ್ಟ್ 24-ಸಪ್ಟೆಂಬರ್ 23

ಕನ್ಯಾ: ಆಗಸ್ಟ್ 24-ಸಪ್ಟೆಂಬರ್ 23

ಈ ವರ್ಷ ಕನ್ಯಾ ರಾಶಿಯವರು ವೈಯಕ್ತಿಕವಾಗಿ ಮಹತ್ವದ ಬದಲಾವಣೆ ಕಾಣಲಿದ್ದಾರೆ. ಇದು ಅವರಿಗೆ ಒಳ್ಳೆಯದನ್ನು ಉಂಟು ಮಾಡಲಿದೆ. ಅವರು ತುಂಬಾ ಸೂಕ್ಷ್ಮತೆಯಿಂದ ನಿರ್ವಹಿಸಲು ತಮ್ಮ ಪ್ರವೃತ್ತಿಯನ್ನು ಅಳವಡಿಸುವರು. ಅಸುರಕ್ಷಿತ ಭಾವವು ಅವರಿಂದ ದೂರವಾಗುವುದು.

ಮಕರ: ಡಿಸೆಂಬರ್ 23-ಜನವರಿ 20

ಮಕರ: ಡಿಸೆಂಬರ್ 23-ಜನವರಿ 20

ಈ ವರ್ಷ ಆಗುವಂತಹ ಬದಲಾವಣೆಗಳಿಂದ ಅವರು ನಾಚಿಕೆ ಪಟ್ಟುಕೊಳ್ಳವ ಸಂಭವವೇ ಇಲ್ಲ. ಬದಲಾವಣೆಗಳನ್ನು ಅವರು ಒಪ್ಪಿಕೊಳ್ಳುವರು. ಈ ರಾಶಿಯವರ ವೈಯಕ್ತಿಕ ಹಾಗೂ ವೃತ್ತಿ ಬದುಕಿನಲ್ಲಿ ಬದಲಾವಣೆ ಕಂಡುಬರಲಿದೆ. ಇದರ ಪರಿಣಾಮ ಅವರ ಆರಾಮ ವಲಯದ ವಿಸ್ತಾರವಾಗುವುದು.

ಮೀನ: ಫೆಬ್ರವರಿ 19-ಮಾರ್ಚ್ 20

ಮೀನ: ಫೆಬ್ರವರಿ 19-ಮಾರ್ಚ್ 20

ಈ ರಾಶಿಯವರಲ್ಲಿ 2018ರಲ್ಲಿ ತುಂಬಾ ಮಹತ್ವದ ಬದಲಾವಣೆಯು ಕಂಡುಬರಲಿದೆ. ಇವರು ತಮ್ಮ ಆದರ್ಶಪ್ರಾಯ ಪ್ರವೃತ್ತಿಗೆ ನೆಚ್ಚಿಕೊಳ್ಳುವರು ಮತ್ತು ಇದು ಅವರಿಗೆ ಸತ್ಯವೆಂದು ತಿಳಿದುಬರುವುದು. ಇವರು ತಮ್ಮ ಭೀತಿ ಹೋಗಲಾಡಿಸುವರು ಮತ್ತು ನಿರ್ಧಾರ ತೆಗೆದುಕೊಳ್ಳುವಾಗ ಇರುವ ಭೀತಿ ದೂರ ಮಾಡುವರು. ಇವರು ಒಳ್ಳೆಯ ಆತ್ಮವಿಶ್ವಾಸ ಪಡೆಯುವರು. ಇದು ಅವರಿಗೆ ಒಳ್ಳೆಯ ಫಲಿತಾಂಶ ನೀಡುವುದು.

English summary

how-these-zodiac-signs-will-undergo-changes-in-2018

Can you imagine that your life could be changing for the good? There are chances that your fate can change this year, as our astrologers have predicted that 5 zodiac signs would experience major changes for this year! The individuals of these 5 zodiac signs are said to experience life-changing events happen to them in 2018. So, find out on which are the 5 lucky zodiac signs and how their life would change in the year, 2018. Also, check if your zodiac sign is listed here.