ನಿಮ್ಮ ಕಿವಿಯ ಆಕಾರ ವ್ಯಕ್ತಿತ್ವದ ಬಗ್ಗೆ ಬಹಳಷ್ಟನ್ನು ಹೇಳುತ್ತವೆ!

Posted By: Arshad
Subscribe to Boldsky

ನಮ್ಮ ದೇಹದ ಆಕಾರ, ಗಾತ್ರ ನಮ್ಮ ವ್ಯಕ್ತಿತ್ವದ ಬಗ್ಗೆ ಬಹಳಷ್ಟನ್ನು ಹೇಳುತ್ತವೆ. ಪ್ರತಿ ಅಂಗವೂ ಒಂದು ಗುಣವನ್ನು ವ್ಯಕ್ತಪಡಿಸುತ್ತದೆ. ಅಂತೆಯೇ ನಮ್ಮ ಕಿವಿಗಳ ಆಕಾರವೂ ನಮ್ಮ ವ್ಯಕ್ತಿತ್ವದ ಬಗ್ಗೆ ಹಲವಾರು ಅಂಶಗಳನ್ನು ಪ್ರಕಟಿಸಬಹುದು. ಕಿವಿಗಳು ಒಬ್ಬರದ್ದಿದ್ದಂತೆ ಇನ್ನೊಬ್ಬರದ್ದಿರುವುದಿಲ್ಲ.

ಓರ್ವ ವ್ಯಕ್ತಿಯ ಕಿವಿಗಳನ್ನು ಕೊಂಚ ಸೂಕ್ಷ್ಮವಾಗಿ ಗಮನಿಸುವ ಮೂಲಕ ಈ ವ್ಯಕ್ತಿ ಅಂತರ್ಮುಖಿಯೋ, ಬಹಿರ್ಮುಖಿಯೋ ಎಂದು ಅರಿತುಕೊಳ್ಳಬಹುದು. ಈ ಕೆಳಗೆ ವಿವರಿಸಿದ ಬಗೆಗಳಲ್ಲಿ ನಿಮ್ಮ ಕಿವಿ  ಯಾವ ಬಗೆಯದ್ದು ನೋಡಿ!  

ಅಂಟಿಸಿರುವಂತಹ ಹೊರಗಿವಿ

ಅಂಟಿಸಿರುವಂತಹ ಹೊರಗಿವಿ

ಸಾಮಾನ್ಯವಾಗಿ ಹೆಚ್ಚಿನ ಜನರು ಈ ಬಗೆಯ ಕಿವಿಯನ್ನು ಹೊಂದಿರುತ್ತಾರೆ.ಈ ಕಿವಿಗಳಿಂದ ವ್ಯಕ್ತಿತ್ವವನ್ನು ಅಳೆಯಲು ಕೊಂಚ ಹೆಚ್ಚೇ ಶ್ರಮಿಸಬೇಕಾಗುತ್ತದೆ. ಏಕೆಂದರೆ ಇವರ ಗುಣಲಕ್ಷಣಗಳು ವ್ಯಕ್ತಿಯಿಂದ ವ್ಯಕ್ತಿಗೆ ಅಪಾರವಾಗಿ ಬದಲಾಗುತ್ತದೆ. ಸಾಮಾನ್ಯವಾಗಿ ಈ ವ್ಯಕ್ತಿಗಳು ದಯಾಪರರೂ, ಇತರರನ್ನು ಆತ್ಮೀಯವಾಗಿ ಸ್ವಾಗತಿಸುವವರೂ ಹಾಗೂ ಸಹೃದಯಿಗಳೂ ಆಗಿರುತ್ತಾರೆ. ಇತರರ ಬಗ್ಗೆ ಸಹಾನುಭೂತಿಯುಳ್ಳವರು ಹಾಗೂ ಇತರರಲ್ಲಿ ಏನು ನಡೆಯುತ್ತಿದೆ ಎಂದು ಗಮನಿಸುವವರೂ ಆಗಿದ್ದಾರೆ. ಇನ್ನೊಂದು ಮಗ್ಗುಲಲ್ಲಿ ಈ ವ್ಯಕ್ತಿಗಳು ಅತಿ ಹೆಚ್ಚೇ ಅಂತರ್ಮುಖಿಗಳೂ ತಮ್ಮ ಜೀವನದ ಬಗ್ಗೆ ಕೆಲವು ವಿಷಯಗಳ ಬಗ್ಗೆ ಮಾತ್ರವೇ ಪ್ರಾಮುಖ್ಯತೆ ನೀಡುವ ವ್ಯಕ್ತಿಗಳಾಗಿದ್ದಾರೆ. ಕೆಲವೊಮ್ಮೆ ಇವರು ಹಠಾತ್ತಾಗಿ ಪ್ರತಿಕ್ರಿಯಿಸುವ ಹಾಗೂ ಬೇರೆಲ್ಲದ್ದಿಂತಲೂ ತಮ್ಮ ಹುಟ್ಟುಗುಣಕ್ಕೇ ಜೋತುಬೀಳುವವರಾಗಿರುತ್ತಾರೆ. ಕೆಲವೊಮ್ಮೆ ಇತರರ ಬಗ್ಗೆ ಇವರು ಹಠಮಾರಿತನ ತೋರುತ್ತಾರೆ. ಆದರೆ ಹೆಚ್ಚಿನ ಸಮಯದಲ್ಲಿ ಇವರಿಗೆ ತಮ್ಮ ಅಭಿಪ್ರಾಯವೇ ಮುಖ್ಯವಾಗಿದ್ದು ಇತರರ ಅಭಿಪ್ರಾಯಗಳನ್ನು ಕಡೆಗಣಿಸುವವರೂ ಆಗಿರುತ್ತಾರೆ.

ಅಗಲವಾದ ಹೊರಗಿವಿ

ಅಗಲವಾದ ಹೊರಗಿವಿ

ಈ ವ್ಯಕ್ತಿಗಳು ಆರಾಮಜೀವಿಗಳಾಗಿದ್ದು ಪರಿಸರದಲ್ಲಿ ಯಾವುದೇ ದುಮ್ಮಾನವಿಲ್ಲದೇ ಜೀವಿಸಲು ಇಚ್ಛಿಸುತ್ತಾರೆ. ಯಾವುದೇ ವಿಷಯವನ್ನು ಇವರು ಸುಲಭವಾಗಿ ಹಾಗೂ ಅತಿ ಹೆಚ್ಚಿನ ಪ್ರಾಮುಖ್ಯತೆಯಿಂದ ನಿರ್ವಹಿಸುವವರಾಗಿರುತ್ತಾರೆ. ಇವರು ತಮ್ಮನ್ನೇ ಅತಿಮುಖ್ಯರಾಗಿ ಪರಿಗಣಿಸಲ್ಪಡಲು ಇಚ್ಛಿಸುವುದಿಲ್ಲ. ಇದರ ಹೊರತಾಗಿ ಇವರು ಸದಾ ತಣ್ಣಗೇ ಇರುತ್ತಾರೆ ಹಾಗೂ ತಮ್ಮ ಬಗ್ಗೆ ಹೇಳಿಕೊಳ್ಳಲು ಇಚ್ಛಿಸುವುದಿಲ್ಲ. ಇವರೊಂದಿಗೆ ಸಮಯ ಕಳೆಯುವುದು ಇತರರಿಗೂ ಇಷ್ಟವಾಗಿರುತ್ತದೆ. ಇವರು ದಯಾಪರರಾಗಿದ್ದು ಇತರರೊಂದಿಗೆ ನಗುವನ್ನು ಹಂಚಿಕೊಳ್ಳುವವರಾಗಿರುತ್ತಾರೆ. ಇನ್ನೊಂದು ಬದಿಯಿಂದ ಇವರು ಚುಚ್ಚುಮಾತುಗಳಿಂದ ಇನ್ನೊಬ್ಬರಿಗೆ ನೋವು ನೀಡುವ ವ್ಯಕ್ತಿಗಳಾಗಿರುತ್ತಾರೆ. ಇತರರಲ್ಲಿ ಸಾಮಾನ್ಯವಾಗಿ ಕಾಣಬರದ ಈ ಗುಣದಿಂದಾಗಿ ಇವರ ಗುಣವನ್ನು ಕಂಡವರು ಕೊಂಚ ದೂರಾಗುತ್ತಾರೆ.

ಕಿರಿದಾದ ಹೊರಗಿವಿ

ಕಿರಿದಾದ ಹೊರಗಿವಿ

ಈ ವ್ಯಕ್ತಿಗಳು ಸಾಮಾನ್ಯವಾಗಿ ಬಿಗುಮಾನದ ವ್ಯಕ್ತಿಗಳಾಗಿದ್ದು ಇವರು ತಮ್ಮ ಭಾವನೆಗಳನ್ನು ವ್ಯಕ್ತಪಡಿಸಲು ಹಿಂಜರಿಯುವವರಾಗಿರುತ್ತಾರೆ. ಇವರು ಸಾಮಾನ್ಯವಾಗಿ ಮೌನವಾಗಿರುತ್ತಾರೆ ಹಾಗೂ ನಿಗದಿತ ಚಟುವಟಿಕೆ ಯುಳ್ಳವರಾಗಿರುತ್ತಾರೆ. ಇವರನ್ನು ಹಿಂಸಾತ್ಮಕ ಅಥವಾ ಸ್ವೀಕರಿಸಲು ಸಾಧ್ಯವಾಗದ ಸನ್ನಿವೇಶದಲ್ಲಿ ಅತಿ ಕಡಿಮೆ ಕಾಣಲಾಗುತ್ತದೆ. ಇವರು ಗುಸುಗುಸು ಸುದ್ದಿ ಅಥವಾ ಬೆನ್ನ ಹಿಂದೆ ನಡಿಯುವ ಮಾತುಗಳಿಗೆ ಮನ್ನಣೆ ನೀಡುವುದಿಲ್ಲ. ಇನ್ನೊಂದು ಮಗ್ಗುಲಲ್ಲಿ ಈ ವ್ಯಕ್ತಿಗಳು ಮಾತು ಕಡಿಮೆ ಕೆಲಸ ಹೆಚ್ಚು ಎಂಬ ತತ್ವಕ್ಕೆ ಹೆಚ್ಚು ಮನ್ನಣೆ ನೀಡುವ ಕಾರಣ ಇವರ ಅಭಿಪ್ರಾಯಗಳಿಗಿಂತ ಇವರ ಕಾರ್ಯಸಾಧನೆಗಳೇ ಇತರರಿಗೆ ಸ್ಪಷ್ಟವಾಗಿ ತಲುಪುತ್ತವೆ.

ಚೂಪಾದ ಹೊರಗಿವಿ

ಚೂಪಾದ ಹೊರಗಿವಿ

ಈ ವ್ಯಕ್ತಿಗಳು ವಿನೋದಸ್ವಭಾವ ಹಾಗೂ ಚುರುಕಾದ ಮೆದುಳನ್ನು ಹೊಂದಿರುತ್ತಾರೆ. ತಮ್ಮ ಸುತ್ತ ಮುತ್ತ ಏನು ನಡೆಯುತ್ತಿದೆ ಎಂಬುದರ ಬಗ್ಗೆ ಇವರು ಸದಾ ಎಚ್ಚರಾಗಿದ್ದು ಗಮನಿಸುತ್ತಿರುತ್ತಾರೆ. ಅಲ್ಲದೇ ಯಾವುದೇ ವಿಷಯವನ್ನು ಕೂಲಂಕಶವಾಗಿ ಗಮನಿಸುವ ಗುಣ ಹೊಂದಿರುತ್ತಾರೆ. ಚಿಕ್ಕ ಚಿಕ್ಕ ವಿಷಯಗಳನ್ನೂ ಗಮನಿಸುವುದು ಇವರ ಸ್ವಭಾವವಾಗಿದ್ದು ಇದೇ ಇವರನ್ನು ಪರಿಪೂರ್ಣವಾದಿ ಗಳನ್ನಾಗಿಸುತ್ತದೆ.ಇವರಿಗೆ ಯಾವುದೇ ಕೆಲಸ ಪೂರ್ಣಗೊಳ್ಳಲು ಸುಲಭದ ಅಡ್ಡದಾರಿ ಬೇಕಾಗಿಲ್ಲ. ಇವರು ಮಾಡುವ ಎಲ್ಲಾ ಕೆಲಸಗಳೂ ಅಚ್ಚುಕಟ್ಟಾಗಿರಬೇಕು ಹಾಗೂ ಸಮರ್ಪಕವಾಗಿರಬೇಕು ಎಂಬ ನಿಟ್ಟಿನಲ್ಲಿ ಕಾರ್ಯನಿರ್ವಹಿಸುತ್ತಾರೆ.

ದುಂಡನೆಯ ಹೊರಗಿವಿ

ದುಂಡನೆಯ ಹೊರಗಿವಿ

ಈ ವ್ಯಕ್ತಿಗಳು ಅಪಾರವಾದ ನಿಷ್ಠಾವಂತರೂ ದಯಾಪರರೂ ಆಗಿರುತ್ತಾರೆ. ನಿಷ್ಠೆ ಇವರಿಗೆ ರಕ್ತಗತ ಗುಣವಾಗಿರುತ್ತದೆ. ಇವರ ನಂಬಿಕಸ್ತ ಗುಣವೇ ಇವರ ಬಗ್ಗೆ ಅಪಾರ ಗೌರವ ತಳೆಯಲು ಕಾರಣವಾಗಿರುತ್ತದೆ. ಇತರರಿಗೆ ನೆರವು ನೀಡುವಲ್ಲಿ ಇವರು ತಮ್ಮ ಸ್ವಂತದ ಕೆಲಸಗಳನ್ನೂ ಕಡೆಗಣಿಸುವವರಾಗಿರುತ್ತಾರೆ. ಈ ಗುಣದಿಂದಾಗಿಯೇ ಇವರನ್ನು ಇತರರು ವಿಶೇಷ ವ್ಯಕ್ತಿಯಾಗಿ ಗುರುತಿಸುತ್ತಾರೆ. ಇವರಿಗೆ ನಂಬಿಗಸ್ತನಾಗಲು ಏನೇನು ಮಾಡಬೇಕು ಅಥವಾ ಮಾಡಬಾರದು ಎಂದು ಸ್ಪಷ್ಟ ಅರಿವು ಇರುತ್ತದೆ. ಇವರಿಗೆ ಯಾರಾದರೂ ದ್ರೋಹ ಬಗೆದರೆ ಸಹಿಸದವರಾಗಿರುತ್ತಾರೆ.

ಚೌಕಾಕಾರದ ಹೊರಗಿವಿ

ಚೌಕಾಕಾರದ ಹೊರಗಿವಿ

ಈ ವ್ಯಕ್ತಿಗಳು ಜಗತ್ತಿನ ನಿರ್ಮಾತೃದಾರರಾಗಿದ್ದಾರೆ. ಈ ಬಗೆಯ ಆಕಾರ ಅತ್ಯಂತ ಅಪರೂಪವಾಗಿದ್ದು ಈ ವ್ಯಕ್ತಿಗಳು ಚಿಂತಕರೂ ಹಾಗೂ ದೂರದೃಷ್ಟಿಯುಳ್ಳ ವ್ಯಕ್ತಿಗಳೂ ಆಗಿದ್ದಾರೆ. ಇವರ ದೃಷ್ಟಿಯಲ್ಲಿ ದೊಡ್ಡ ಸಾಧನೆಗಳೇ ಪ್ರಾಮುಖ್ಯತೆ ಪಡೆಯುತ್ತವೆ ಹಾಗೂ ಚಿಕ್ಕ ಪುಟ್ಟ ಅಡ್ಡಿ ಆತಂಕಗಳಿಗೆ ಇವರು ಹೆಚ್ಚು ತಲೆಕೆಡಿಸಿಕೊಳ್ಳುವುದಿಲ್ಲ. ಇವರು ದಯಾಪರರೂ ತಮ್ಮ ಜಗತ್ತನ್ನು ತಮಗೆ ಬೇಕಾದಂತೆ ನಿರ್ಮಿಸಿಕೊಳ್ಳುವವರೂ ಆಗಿರುತ್ತಾರೆ. ಈ ಜಗತ್ತಿನಲ್ಲಿ ಇತರರು ಪ್ರವೇಶಿಸುವುದನ್ನು ಇವರು ಸಹಿಸುವುದಿಲ್ಲ. ಇವರ ಆತ್ಮೀಯವರ್ಗದ ಜನರು ಇವರಿಗೆ ಅತಿ ಮುಖ್ಯರಾಗಿದ್ದು ಅವರಿಗಾಗಿ ಮಾತ್ರವೇ ಸಮಯವನ್ನು ಮೀಸಲಿಡಲು ಇಚ್ಛಿಸುತ್ತಾರೆ.

ಹೊರಗಿಣುಕುವ ಹೊರಗಿವಿ

ಹೊರಗಿಣುಕುವ ಹೊರಗಿವಿ

ಈ ವ್ಯಕ್ತಿಗಳು ಗುಂಪಿನಿಂದ ಹೊರಗೆ ಇದ್ದು ತಮ್ಮತನವನ್ನು ಪ್ರಕಟಿಸುವ ವ್ಯಕ್ತಿಗಳಾಗಿದ್ದಾರೆ. ಇವರು ಕೊಂಚ ವಿಚಿತ್ರ, ವಿಭಿನ್ನ ಹಾಗೂ ಕೆಲವೊಮ್ಮೆ ಅರ್ಥವಾಗದ ಗುಣವನ್ನು ಪ್ರಕಟಿಸುತ್ತಾರೆ. ಇತರರು ಮಾಡಲು ಹಿಂಜರಿಯುವ ಅಥವಾ ಹೀಗೆ ಮಾಡಬಹುದು ಎಂದು ಯಾರೂ ಊಹಿಸದೇ ಇರುವ ಕೆಲಸಗಳನ್ನು ಇವರು ಕೈಗೊಳ್ಳುವ ಕಾರಣ ದೂರದಿಂದಲೇ ಇವರನ್ನು ಗಮನಿಸಬಹುದಾಗಿದೆ. ಇವರು ಗಮನಿಸುವ ವಿಷಯಗಳು ಅನನ್ಯವಾಗಿದ್ದು ಇದನ್ನು ಇತರರಿಗೆ ವಿವರಿಸಲು ಸಾಕಷ್ಟು ಕಷ್ಟಪಡಬೇಕಾಗುತ್ತದೆ. ಇನ್ನೊಂದು ಮಗ್ಗುಲಲ್ಲಿ ಇವರೊಂದಿಗೆ ಸಂವಹಿಸುವುದು ಸುಲಭವಾಗಿರುವುದಿಲ್ಲ. ಏಕೆಂದರೆ ಇವರ ಯೋಚನಾ ಲಹರಿ ಬೇರೆಯೇ ತೆರನದ್ದಾಗಿದ್ದು ಎಲ್ಲರೂ ಇದನ್ನು ಸುಲಭವಾಗಿ ಅರ್ಥ ಮಾಡಿ ಕೊಳ್ಳಲಾರರು.ನಿಮ್ಮ ಕಿವಿಯ ಆಕಾರ ಯಾವುದು? ಒಂದು ವೇಳೆ ಈ ಮಾಹಿತಿ ನಿಮಗೆ ಉಪಯುಕ್ತವೆಂದು ಕಂಡುಬಂದರೆ ನಿಮ್ಮ ಸ್ನೇಹಿತರು ಮತ್ತು ಆಪ್ತರೊಂದಿಗೆ ಇದರ ಕೊಂಡಿಯನ್ನು ಹಂಚಿಕೊಳ್ಳುವ ಮೂಲಕ ಹೆಚ್ಚು ಜನರಿಗೆ ಪ್ರಯೋಜನವಾಗಲು ನೆರವಾಗಿ. ನಿಮ್ಮ ಅನಿಸಿಕೆಗಳು ನಮಗೆ ಅಮೂಲ್ಯವಾಗಿದ್ದು ನಮ್ಮೊಂದಿಗೆ ದಯವಿಟ್ಟು ಹಂಚಿಕೊಳ್ಳಿ.

English summary

how-the-shape-of-your-ear-reveals-about-your-personality

Our body plays a big role in determining the kind of personality we have. Each aspect of our body provides a glimpse into our personality and the shape of our ears can also reveal a lot about our personality. Each individual has a different type of personality. So, check out on the shape of your ear and find out on what type of person you are, based on the same.