Latest Updates
-
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು -
ಉದ್ದಿನ ಬೇಳೆ ಇದ್ರೆ ಸಾಕು! ಈ 4 ಹೊಸ ಬಗೆಯ ತಿಂಡಿ ಮಾಡಿ ನೋಡಿ.. ಎಲ್ಲರೂ ಇಷ್ಟಪಟ್ಟು ತಿಂತಾರೆ -
ಹಳೇ ಅನ್ನ ಎಸೆಯಬೇಡಿ! 10 ನಿಮಿಷದಲ್ಲಿ ಮಾಡಿ ಈ ಸ್ವಾದಿಷ್ಟ ದೋಸೆ.. ಉಳಿದ ಅನ್ನದ ಮ್ಯಾಜಿಕ್ ರೆಸಿಪಿ -
March 20 Horoscope: ಸ್ನೇಹ ಸಂಬಂಧಗಳಲ್ಲಿ ಶುಭಫಲ! -
ಅವಿವಾಹಿತರಿಗೆ ಇಂದು ಬಹಳ ಶುಭ ದಿನ! ಲವ್ಗೆ ಕುಟುಂಬದ ಬೆಂಬಲ -
ಜೀವನದಲ್ಲಿ ನೆಮ್ಮದಿ ಬೇಕಾ..? ಈ 5 ಕೆಲಸಗಳನ್ನು ಮಾಡುವಾಗ ಅತಿ ಹೆಚ್ಚು ತಾಳ್ಮೆ ಇರಲಿ! ಸಕ್ಸಸ್ ಮಂತ್ರ ಇಲ್ಲಿದೆ -
ಹೊರಗಿನ ಜ್ಯೂಸ್ ಬಿಡಿ..!! ಬಿಸಿಲಿಗೆ ಕಿಕ್ ಕೊಡೋ ಸ್ಪೆಷಲ್ ಶರಬತ್ತುಗಳಿವು! ಮನೆಯಲ್ಲಿ ಸಿಂಪಲ್ ಆಗಿ ಮಾಡಿ -
Dum Idli: ಇದು ಬ್ರೇಕ್ ಫಾಸ್ಟ್ನ ರಾಜ! ಉಳಿದ ಇಡ್ಲಿಗಳಿಂದ ಸ್ಪೈಸಿ ದಮ್ ಇಡ್ಲಿ.. ಹೋಟೆಲ್ ಶೈಲಿಯಲ್ಲಿ ಮಾಡೋದು ಹೇಗೆ?
ಯಾವ್ಯಾವ ರಾಶಿಚಕ್ರದವರು ಹೇಗೆ ರಹಸ್ಯವನ್ನು ಕಾಪಾಡಿಕೊಳ್ಳುತ್ತಾರೆ ನೋಡಿ...
ಒಳ್ಳೆಯದ್ದು ಹಾಗೂ ಕೆಟ್ಟದ್ದು ಎನ್ನುವುದು ಒಂದೇ ನಾಣ್ಯದ ಎರಡು ಮುಖಗಳು. ಮನುಷ್ಯನಲ್ಲಿ ಕೆಟ್ಟ ಗುಣ ಹಾಗೂ ಒಳ್ಳೆಯ ಗುಣ ಇರುವುದು ಸಾಮಾನ್ಯ. ವ್ಯಕ್ತಿಗಳ ನಡುವೆ ಅವುಗಳ ಪ್ರಮಾಣ ವ್ಯತ್ಯಾಸ ಹೊಂದುವುದನ್ನು ಕಾಣಬಹುದು. ಹಾಗೆಯೇ ಪ್ರತಿಯೊಬ್ಬರು ಕೆಲವು ವಿಚಾರಗಳನ್ನು ತಮ್ಮಲ್ಲಿಯೇ ರಹಸ್ಯವಾಗಿಯೇ ಇಟ್ಟುಕೊಳ್ಳುತ್ತಾರೆ. ವೈಯಕ್ತಿಕವಾಗಿ ಅನುಭವಿಸಿದ ನೋವು ಹಾಗೂ ವಿಷಯಗಳು ಬಹಳ ಆಳವಾದ ಪ್ರಭಾವ ಬೀರುತ್ತವೆ. ಅವುಗಳನ್ನು ತೋರಿಸಿಕೊಳ್ಳಲು ಅಥವಾ ಹಂಚಿಕೊಳ್ಳಲು ಇಷ್ಟವಾಗದೆ ಇರಬಹುದು. ಈ ಹಿನ್ನೆಲೆಯಲ್ಲಿಯೇ ವ್ಯಕ್ತಿ ವಿಷಯಗಳನ್ನು ಗೌಪ್ಯವಾಗಿ ಇಡಲು ಬಯಸುತ್ತಾನೆ.

ಮಾನಸಿಕ ಚಿಂತನೆಗಳು ಹಾಗೂ ನಾವು ಆಡುವ ಮಾತುಗಳ ಭಿನ್ನತೆಗಳೆಲ್ಲವೂ ನಮ್ಮ ಗ್ರಹಗತಿ ಹಾಗೂ ನಕ್ಷತ್ರಗಳಿಗೆ ಅನುಗುಣವಾಗಿ ಇರುತ್ತವೆ. ಹಾಗೆಯೇ ವ್ಯಕ್ತಿ ತನ್ನ ಗೌಪ್ಯ ವಿಚಾರಗಳನ್ನು ಬಹಳ ರಹಸ್ಯವಾಗಿ ತನ್ನಲ್ಲಿಯೇ ಇಟ್ಟುಕೊಳ್ಳುತ್ತಾನೆ ಎನ್ನಲಾಗುವುದು. ಹಾಗಾದರೆ ನೀವು ಅಥವಾ ನಿಮ್ಮವರು ಯಾವ ರೀತಿಯಲ್ಲಿ ರಹಸ್ಯಗಳನ್ನು ಇಟ್ಟುಕೊಳ್ಳುತ್ತಾರೆ ಎನ್ನುವುದನ್ನು ತಿಳಿಯಲು ಮುಂದಿರುವ ವಿವರಣೆಯನ್ನು ಪರಿಶೀಲಿಸಿ.

ಮೇಷ
ಮೇಷ ರಾಶಿಯವರು ಯಾವುದೇ ವಿಚಾರದ ಕುರಿತು ಮಾತನಾಡುವಾಗ ಎರಡು ಬಾರಿ ಯೋಚಿಸುವುದಿಲ್ಲ. ಹಾಗಂತ ಯಾವುದೇ ಸಂಗತಿಗಳನ್ನು ಗೌಪ್ಯವಾಗಿಟ್ಟುಕೊಳ್ಳುವುದಿಲ್ಲ ಎಂದರ್ಥವಲ್ಲ. ಹಂಚಿಕೊಳ್ಳಲಾಗದ ವಿಷಯಗಳನ್ನು ಮನಸ್ಸಿನಲ್ಲಿ ಇಟ್ಟುಕೊಂಡರೆ ಮನಸ್ಸು ಭಾರವಾಗಿರುತ್ತದೆ. ಕೆಲವೊಮ್ಮೆ ಇವರು ಮನಸ್ಸಿನ ಆಳದ ಮಾತುಗಳನ್ನು ಅಪ್ಪಿ ತಪ್ಪಿ ಹೇಳಬಹುದು. ಹಾಗಾಗಿ ಬೆಕ್ಕನ್ನು ಚೀಲದಲ್ಲಿ ಹಿಡಿದಿಟ್ಟಂತೆ ರಹಸ್ಯವನ್ನು ಮನಸ್ಸಿನಲ್ಲಿ ಇಟ್ಟುಕೊಳ್ಳುತ್ತಾರೆ. ಆದರೆ ಕೆಲವು ನಿಶ್ಚಿತ ವಿಚಾರಗಳನ್ನು ಬಹಳ ರಹಸ್ಯವಾಗಿ ಕಾಪಾಡಿಕೊಳ್ಳುವರು.

ವೃಷಭ
ಇವರು ಬಹಳ ಪ್ರಾಮಾಣಿಕ ವ್ಯಕ್ತಿಗಳಾಗಿರುತ್ತಾರೆ. ಆದರೆ ರಹಸ್ಯಗಳನ್ನು ಇಟ್ಟಿಕೊಳ್ಳಲು ಸಾಕಷ್ಟು ಹಿಂಸೆಯನ್ನು ಅನುಭವಿಸುವರು. ವಿಶ್ವಾಸದಲ್ಲಿ ಇರುವವರಂತೆ ವರ್ತಿಸಿ ಕೇಳಿದರೂ ವಿಚಾರಗಳ ಕುರಿತು ಬಾಯಿ ಬಿಡುವುದಿಲ್ಲ. ಇವರು ಇತರರು ಹೇಳಿರುವ ವಿಚಾರಗಳನ್ನು ಸಹ ಗೌಪ್ಯವಾಗಿಯೇ ಇಡುತ್ತಾರೆ. ಇತರರ ಭಾವನೆ ಹಾಗೂ ಗೌಪ್ಯತೆಯನ್ನು ಬಹಳ ಗೌರವದಿಂದ ಕಾಣುವರು.

ಮಿಥುನ
ಇವರ ಬಳಿ ಇತರರ ರಹಸ್ಯವನ್ನು ಕಾಯ್ದುಕೊಳ್ಳಲು ಕಷ್ಟವಾಗಬಹುದು. ಇವರು ರಸಭರಿತವಾದ ಗಾಸಿಪ್‍ಗಳಲ್ಲಿ ಪಾಲ್ಗೊಳ್ಳುವುದರಿಂದ ಇತರರ ರಹಸ್ಯವನ್ನು ಕಾಪಾಡಿಕೊಳ್ಳುವುದು ಕಷ್ಟಕರವಾಗಿರುತ್ತದೆ. ತಮ್ಮ ಜೀವನದ ರಹಸ್ಯಗಳನ್ನು ಬಹಳ ಗೌಪ್ಯವಾಗಿ ಇರಿಸಿಕೊಳ್ಳುತ್ತಾರೆ ಎನ್ನಲಾಗುವುದು.

ಕರ್ಕ
ಇವರು ಯಾವುದೇ ಗಂಭೀರ ಅಥವಾ ರಹಸ್ಯ ವಿಚಾರಗಳನ್ನು ಅಷ್ಟು ಸುಲಭವಾಗಿ ಇತರರ ಮುಂದೆ ಹೇಳುವುದಿಲ್ಲ. ಇವರಿಗೆ ರಹಸ್ಯವನ್ನು ಕಾಪಾಡಿಕೊಳ್ಳುವುದು ಒಂದು ಹುಣ್ಣಿನಂತೆ ಅನುಭವ ಆಗುವುದು. ಪರಿಸ್ಥಿತಿಗೆ ಅನುಗುಣವಾಗಿ ತಮ್ಮ ವರ್ತನೆಯನ್ನು ತೋರುವ ವ್ಯಕ್ತಿಗಳು ಇವರಾಗಿರುತ್ತಾರೆ. ಹಾಗಾಗಿ ಇವರು ಪರಿಸ್ಥಿತಿಯ ಬಗ್ಗೆ ನಿಜವಾದ ಭಾವನೆಗಳನ್ನು ಮರೆಮಾಚುವಲ್ಲಿ ಕೊನೆಗೊಳ್ಳಬಹುದು. ಗರ್ಭದಲ್ಲಿ ತಾಯಿ ಮಗುವನ್ನು ಹೊಂದುವಂತೆ ರಹಸ್ಯವನ್ನು ಕಾಪಾಡಿಕೊಳ್ಳುವರು.

ಸಿಂಹ
ರಹಸ್ಯವನ್ನು ಕಾಪಾಡಿಕೊಳ್ಳುವುದರಲ್ಲಿ ಇವರು ಅತ್ಯುತ್ತಮ ಪ್ರವೃತ್ತಿಯನ್ನು ಹೊಂದಿರುತ್ತಾರೆ ಎನ್ನಲಾಗುವುದು. ರಹಸ್ಯದ ವಿಚಾರವು ಎಷ್ಟೇ ಗಂಭೀರ ಅಥವಾ ದೊಡ್ಡದಾಗಿದ್ದರೂ ಅದನ್ನು ಉತ್ತಮ ರೀತಿಯಲ್ಲಿಯೇ ರಕ್ಷಿಸಿಟ್ಟುಕೊಳ್ಳುವರು. ಇವರು ಇತರರ ನಂಬಿಕೆ ಹಾಗೂ ವಿಶ್ವಾಶವನ್ನು ಕಾಪಾಡಿಕೊಳ್ಳಲು ಒಲವನ್ನು ಹೊಂದಿರುತ್ತಾರೆ. ಹಾಗಾಗಿ ರಹಸ್ಯಗಳನ್ನು ಸಹ ಉತ್ತಮವಾಗಿ ನಿರ್ವಹಿಸುವರು.

ಕನ್ಯಾ
ನಮ್ರತೆಯ ಸ್ವಭಾವವು ಇವರ ಗೌಪ್ಯ ವಿಚಾರವನ್ನು ಕಾಯ್ದುಕೊಳ್ಳಲು ಸಹಾಯ ಮಾಡುವುದು. ಅಕ್ರಮ ಚಟುವಟಿಕೆಗಳಿಗೆ ಸಂಬಂಧಿಸಿದಂತೆ ಯಾವುದೇ ರಹಸ್ಯಗಳನ್ನು ಇಟ್ಟುಕೊಳ್ಳಲು ಒಪ್ಪಿಕೊಳ್ಳುವುದಿಲ್ಲ. ಆದರೆ ಅದು ಒಂದು ವೈಯಕ್ತಿಕ ವಿಚಾರವಾಗಿದ್ದರೆ, ತಾಯಿ ಮಗುವನ್ನು ರಕ್ಷಿಸುವಂತೆ ರಹಸ್ಯವನ್ನು ಹುಳಿಸಿಕೊಳ್ಳುವರು.

ತುಲಾ
ಇವರು ತೆರೆದ ಮನಸ್ಸಿನ ವ್ಯಕ್ತಿಗಳು ಎನ್ನಬಹುದು. ಎಲ್ಲಾ ಸಂಗತಿಗಳಲ್ಲೂ ಸಮಾನತೆ ಹಾಗೂ ಹಂಚಿಕೆಯನ್ನು ಬಯಸುವರು. ಇವರು ತಮ್ಮ ಸ್ನೇಹಿತರ ರಹಸ್ಯಗಳನ್ನು ಗೌರವಿಸುತ್ತಾರೆ. ವೃತ್ತಿಪರ ರಹಸ್ಯಗಳನ್ನು ಕಾಯ್ದುಕೊಳ್ಳಲು ಅಸಂಭವರಾಗಿರುತ್ತಾರೆ. ಇವರು ತಮ್ಮ ಸಂಗಾತಿಯನ್ನು ಬಹಳ ಇಷ್ಟಪಡುವರು. ಹಾಗೆಯೇ ಇವರ ವಿಶ್ವಾಸವು ಅವರ ಮೇಲೆ ಅವಲಂಬಿತವಾಗಿರುತ್ತದೆ.

ವೃಶ್ಚಿಕ
ಇವರು ಸಾಮಾನ್ಯವಾಗಿಯೇ ಮೌನವಾದ ಪ್ರವೃತ್ತಿಯನ್ನು ಹೊಂದಿರುತ್ತಾರೆ. ಇವರಿಗೆ ಇತರರ ರಹಸ್ಯಗಳನ್ನು ಇರಿಸಿಕೊಳ್ಳಲು ಇಷ್ಟಪಡುವುದಿಲ್ಲ. ನೈತಿಕತೆಯನ್ನು ಉಲ್ಲಂಘಿಸಿದರೆ ಇವರು ಇಷ್ಟಪಡುವುದಿಲ್ಲ. ಸುತ್ತಲಿನ ವ್ಯಕ್ತಿಗೆ ಇವರು ತೆರೆದ ಮನಸ್ಸಿನ ವ್ಯಕ್ತಿಗಳಂತೆ ಕಂಡುಬರುತ್ತಾರೆ. ಇವರು ಇತರರ ಜೊತೆಗೆ ವಿಷಯಗಳನ್ನು ಅಧಿಕವಾಗಿ ರಹಸ್ಯವಾಗಿಟ್ಟುಕೊಳ್ಳುವುದಿಲ್ಲ ಎಂದು ಹೇಳಲಾಗುವುದು.

ಧನು
ಇವರು ತಮ್ಮ ರಹಸ್ಯಗಳನ್ನು ಅತ್ಯುತ್ತಮ ರೀತಿಯಲ್ಲಿ ಮರೆಮಾಚಿಟ್ಟುಕೊಳ್ಳಬಲ್ಲರು. ಅದೇ ಇತರರ ವಿಚಾರಗಳಾಗಿದ್ದರೆ ಅದನ್ನು ಉತ್ತಮ ಕಥೆಯಂತೆ ಹೇಳುವರು. ಸ್ನೇಹಿತರೊಂದಿಗೆ ವಿಚಾರಗಳನ್ನು ಹಂಚಿಕೊಂಡಾಗ ಅದನ್ನು ಗೌಪ್ಯವಾಗಿರಿಸಿಕೊಳ್ಳುವಂತೆ ಒತ್ತಿ ಹೇಳಬೇಕಾಗುತ್ತದೆ. ವಿಷಯವು ಇವರಿಗೆ ತಿಳಿಯದೆ ಇದ್ದರೆ ಇವರು ಉತ್ತಮವಾಗಿರುತ್ತಾರೆ ಎನ್ನಬಹುದು.

ಮಕರ
ಇವರು ನೈಸರ್ಗಿಕವಾಗಿ ರಹಸ್ಯಗಳನ್ನು ಉಳಿಸಿಕೊಳ್ಳುವುದಿಲ್ಲ. ತಾವು ಜನಪ್ರಿಯರಾಗಲು ಇತರರ ರಹಸ್ಯವನ್ನು ಇತರರಲ್ಲಿ ಹಂಚಿಕೊಳ್ಳುವ ಪ್ರವೃತ್ತಿಯನ್ನು ಹೊಂದಿರುತ್ತಾರೆ. ಇವರು ಪ್ರೌಢಾವಸ್ಥೆಯಲ್ಲಿ ಬರುವಾಗ ವಿಶ್ವಾಸವನ್ನು ಉಳಿಸಿಕೊಳ್ಳಲು ಇತರರನ್ನು ಅವಲಂಬಿಸಿಕೊಳ್ಳುತ್ತಾರೆ. ಇವರು ವ್ಯವಹಾರದ ವಿಚಾರಗಳು ಬಂದಾಗ ತಮ್ಮ ತುಟಿಯನ್ನು ಮುಚ್ಚಿಕೊಳ್ಳುತ್ತಾರೆ.

ಕುಂಭ
ಇವರ ನೈಸರ್ಗಿಕ ಭಾವನಾತ್ಮಕ ವಿಚಾರವನ್ನು ಬಹಳ ರಹಸ್ಯವಾಗಿ ತಡೆದಿಟ್ಟುಕೊಳ್ಳುವರು. ಅಲ್ಲದೆ ಪ್ರವೃತ್ತಿಯ ಇತರ ಖಾಸಗಿ ವಿಷಯಗಳನ್ನು ಸರಳವಾಗಿಯೇ ಹಿಡಿದಿಟ್ಟುಕೊಳ್ಳುವರು. ಪರಿಸ್ಥಿತಿಯನ್ನು ಸರಿಯಾಗಿ ನಿರ್ವಹಿಸುವರು. ಶಾಂತತೆಯನ್ನು ಬಯಸುವ ಇವರು ಸಾಕಷ್ಟು ವಿಚಾರಗಳನ್ನು ಗೌಪ್ಯವಾಗಿಡುತ್ತಾರೆ ಎನ್ನಲಾಗುವುದು.

ಮೀನ
ಇವರು ರಹಸ್ಯಗಳನ್ನು ಬಹಳ ಸುಂದರವಾಗಿ ನಿರ್ವಹಿಸುವರು. ಇವರು ಜೀವನದ ಸಮಸ್ತ ವಿಷಯಗಳನ್ನಾದರೂ ಮರೆಮಾಚಿ ಇಡಬಲ್ಲರು. ವಿವೇಚನಾಶೀಲರು ಹಾಗೂ ವಿಶಿಷ್ಟ ವ್ಯಕ್ತಿತ್ವವನ್ನು ಹೊಂದಿರುವ ಇವರು ವಿಷಯಗಳನ್ನು ಬಹಳ ಸುಂದರವಾಗಿ ನಿಭಾಯಿಸುವರು. ತಮ್ಮ ಅನುಕೂಲಕ್ಕೆ ತಕ್ಕಂತೆ ರಹಸ್ಯಗಳನ್ನು ಗೌಪ್ಯವಾಗಿ ಇಟ್ಟುಕೊಳ್ಳುವವರು ಎಂದು ಹೇಳಲಾಗುವುದು.



Click it and Unblock the Notifications











