ದೇಹದಲ್ಲಾಗುವ ತುರಿಕೆಗಳು ಜೀವನದ ಭವಿಷ್ಯವನ್ನು ಹೇಳುವುದು!

Posted By: Divya pandit Pandit
Subscribe to Boldsky

ಪುರಾತನ ಕಾಲದಿಂದಲೂ ನಮ್ಮ ಶಾಸ್ತ್ರ ಹಾಗೂ ಜ್ಯೋತಿಷ್ಯ ವಿಚಾರದಲ್ಲಿ ನಂಬಿಕೆಯನ್ನು ಹೊಂದಿದ್ದೇವೆ. ಏಕೆಂದರೆ ಅವು ನಮ್ಮ ಭವಿಷ್ಯದ ಆಗುಹೋಗುಗಳನ್ನು ನಿರ್ಧರಿಸುತ್ತವೆ ಎಂದು ಹೇಳಲಾಗುತ್ತದೆ. ಪುರಾಣದ ಕಾಲದಲ್ಲಿ ಅದೆಷ್ಟೋ ವಿಚಾರಗಳನ್ನು ಕೆಲವು ವಸ್ತುನಿಷ್ಠ ಸಂಕೇತಗಳಿಂದಲೇ ನಿರ್ಧರಿಸುತ್ತಿದ್ದರು ಎನ್ನಲಾಗುವುದು. ಇಂತಹ ಭವಿಷ್ಯಗಳನ್ನು ಕೇವಲ ವಸ್ತು ಅಥವಾ ಸನ್ನಿವೇಶಗಳಿಂದಷ್ಟೇ ನಿರ್ಧರಿಸುವುದಿಲ್ಲ. ನಮ್ಮ ಶರೀರದಲ್ಲಾಗುವ ಕೆಲವು ಬದಲಾವಣೆ, ತುರಿಕೆ ಹಾಗೂ ಸೆಳೆತಗಳ ಆಧಾರದ ಮೇಲೆಯೂ ಹೇಳಲಾಗುತ್ತದೆ ಎನ್ನಲಾಗುವುದು.

ಹೌದು, ಸಮುದ್ರ ಶಾಸ್ತ್ರದ ಪ್ರಕಾರ ಕಣ್ಣುಗಳು ಹಾರುವುದು, ನಿರ್ದಿಷ್ಟ ಜಾಗದಲ್ಲಿ ತುರಿಕೆ ಕಾಣಿಸಿಕೊಳ್ಳುವುದು, ಕಜ್ಜಿಗಳು ಉಂಟಾಗುವುದು ಹೀಗೆ ಅನೇಕ ಬಗೆಯ ವಿಚಾರಗಳಿಂದ ಜೀವನದಲ್ಲಿ ನಡೆಯುವ ಗೌಪ್ಯ ಸಂದೇಶಗಳನ್ನು ತಿಳಿದುಕೊಳ್ಳಬಹುದಾಗಿದೆ. ಈ ವಿಚಾರ ಒಂದಿಷ್ಟು ಕುತೂಹಲ ಎನಿಸುವುದು ಸಹಜ. ಆದರೆ ಇದು ಸತ್ಯಕ್ಕೆ ಹತ್ತಿರವಾದದ್ದು ಎಂದು ಹೇಳಲಾಗುವುದು. ನಿಮಗೂ ನಿಮ್ಮ ದೇಹದಲ್ಲಿ ಉಂಟಾಗುವ ತುರಿಕೆ ಮತ್ತು ಸೆಳೆತಗಳ ಹಿಂದೆ ಯಾವ ಸಂದೇಶವಿದೆ ಎನ್ನುವುದನ್ನು ತಿಳಿದುಕೊಳ್ಳುವ ಕುತೂಹಲವಿದ್ದರೆ ಈ ಮುಂದೆ ನೀಡಿರುವ ವಿವರಣೆಯನ್ನು ಪರಿಶೀಲಿಸಿ....  

ದೇಹದ ಎಡಭಾಗ

ದೇಹದ ಎಡಭಾಗ

ವ್ಯಕ್ತಿಯ ದೇಹದ ಎಡ ಭಾಗದಲ್ಲಿ ನಿರಂತರವಾಗಿ ತುರಿಕೆ ಕಾಣಿಸಿಕೊಂಡರೆ ಕೆಟ್ಟ ಸುದ್ದಿಯು ನಿಮ್ಮ ಮಾರ್ಗದಲ್ಲಿ ಬರುತ್ತಿದೆ ಎನ್ನುವುದನ್ನು ಶಾಸ್ತ್ರ ಹೇಳುತ್ತದೆ. ಅದು ಕುಟುಂಬ ಸದಸ್ಯರ ಹಠಾತ್ ಸಾವಿನಿಂದ ನೋವುಂಟಾಗುವುದು ಅಥವಾ ಕೆಲಸವನ್ನು ಕಳೆದುಕೊಳ್ಳುವ ಸಂಗತಿಯಾಗಿರಬಹುದು.

ದೇಹದ ಬಲಭಾಗ

ದೇಹದ ಬಲಭಾಗ

ವ್ಯಕ್ತಿಯ ದೇಹದ ಬಲಭಾಗದಲ್ಲಿ ನಿರಂತರವಾಗಿ ತುರಿಕೆ ಕಾಣಿಸಿಕೊಂಡರೆ ವ್ಯಕ್ತಿ ವೈಯಕ್ತಿಕವಾಗಿ ಒಂದಿಷ್ಟು ಒಳ್ಳೆಯ ಸುದ್ದಿಯನ್ನು ಹೊಂದುವನು. ಇದು ಮಹಿಳೆಯರ ವಿಚಾರದಲ್ಲಿ ಸರಿ ವಿರುದ್ಧವಾದ ಸಂದೇಶವಾಗಿರುತ್ತದೆ ಎಂದು ಶಾಸ್ತ್ರ ಹೇಳುತ್ತದೆ. ಮಹಿಳೆಯರಿಗೆ ಎಡ ಭಾಗದ ತುರಿಕೆಯು ಶುಭ ಸುದ್ದಿಯನ್ನು ನೀಡುವುದು.

ಹಣೆ

ಹಣೆ

ವ್ಯಕ್ತಿಯ ಹಣೆಯಲ್ಲಿ ಉಂಟಾಗುವ ತುರಿಕೆಯು ಶೀಘ್ರದಲ್ಲಿಯೇ ಅತ್ಯಂತ ಸಂತೋಷವನ್ನು ಅನುಭವಿಸಲಿದ್ದೀರಿ ಎಂದು ಹೇಳುತ್ತದೆ. ಇನ್ನೊಂದೆಡೆ ವ್ಯಕ್ತಿ ವೈಯಕ್ತಿಕವಾಗಿ ಹಣಕಾಸಿನ ಲಾಭವನ್ನು ಅಥವಾ ಪ್ರಯೋಜನವನ್ನು ಪಡೆದುಕೊಳ್ಳುತ್ತಾನೆ ಎನ್ನಲಾಗುವುದು.

ಕಣ್ಣಿನ ಸೆಳೆತ

ಕಣ್ಣಿನ ಸೆಳೆತ

ವ್ಯಕ್ತಿಯ ಎಡಗಣ್ಣು/ ಎಡ ಕಣ್ಣು ಸೆಳೆತದಿಂದ ಕೂಡಿದ್ದರೆ ಶೀಘ್ರದಲ್ಲಿಯೇ ಸುವಾರ್ತೆಯನ್ನು ಸ್ವೀಕರಿಸುತ್ತೀರಿ ಎಂದರ್ಥ. ಬಲ ಕಣ್ಣು ಸೆಳೆಯುತ್ತಿದ್ದರೆ ಕೂಡಿದ್ದರೆ ಮುಂದಿನ ದಿನಗಳಲ್ಲಿ ನಿಮ್ಮ ಎಲ್ಲಾ ಕನಸುಗಳು ನಿಜವಾಗುತ್ತದೆ ಎಂದು ಶಾಸ್ತ್ರ ಹೇಳುತ್ತದೆ.

ತೀವ್ರವಾದ ಕಣ್ಣಿನ ಸೆಳೆತ

ತೀವ್ರವಾದ ಕಣ್ಣಿನ ಸೆಳೆತ

ನಿಮ್ಮ ಬಲ ಕಣ್ಣು ಅಥವಾ ಎಡ ಕಣ್ಣು ತೀವ್ರವಾದ ಸೆಳೆತ ಅಥವಾ ತುರಿಕೆಯಿಂದ ಕೂಡಿದ್ದರೆ ಅದು ದೀರ್ಘಕಾಲದ ಅನಾರೋಗ್ಯವನ್ನು ಸೂಚಿಸುತ್ತದೆ. ಅಂತಹ ಸಮಯದಲ್ಲಿ ತಕ್ಷಣ ವೈದ್ಯರಲ್ಲಿ ತೋರಿಸಿಕೊಳ್ಳುವುದು ಸೂಕ್ತ.

ಕೆನ್ನೆ ಸೆಳೆತ

ಕೆನ್ನೆ ಸೆಳೆತ

ನಿಮ್ಮ ಎರಡು ಕೆನ್ನೆಗಳು ಒಂದೇ ಸಮಯದಲ್ಲಿ ಸೆಳೆತದಿಂದ ಕೂಡಿದ್ದರೆ, ನೀವು ಶೀಘ್ರದಲ್ಲಿಯೇ ಬಹಳಷ್ಟು ಹಣವನ್ನು ಗಳಿಸುವಿರಿ ಎನ್ನುವ ಸಂದೇಶವನ್ನು ನೀಡುತ್ತದೆ. ಇದೊಂದು ಅಪರೂಪದ ಬದಲಾವಣೆಯಾಗಿರುತ್ತದೆ. ಇದು ಸಂಭವಿಸಿದರೆ ನೀವು ಒಳ್ಳೆಯ ಮಾರ್ಗದಲ್ಲಿ ಬರುತ್ತಿದ್ದೀರಿ ಎಂದು ಅರ್ಥ ನೀಡುವುದು.

ತುಟಿಯ ಸೆಳೆತ

ತುಟಿಯ ಸೆಳೆತ

ನೀವು ತುಟಿಗಳ ಸೆಳೆತವನ್ನು ಅನುಭವಿಸುತ್ತಿದ್ದರೆ, ನಿಮ್ಮ ಜೀವನದಲ್ಲಿ ಹೊಸ ಸ್ನೇಹಿತರ ಪರಿಚಯವಾಗುವುದು ಅಥವಾ ದೀರ್ಘ ಕಾಲದಿಂದ ನಿಮ್ಮೊಂದಿಗೆ ಸಂಪರ್ಕ ಕಳೆದುಕೊಂಡ ವ್ಯಕ್ತಿಗಳನ್ನು ನೀವು ಮತ್ತೆ ಸಂಪರ್ಕ ಹೊಂದಬಹುದು.

ಭುಜದ ಸೆಳೆತ

ಭುಜದ ಸೆಳೆತ

ಭುಜದ ಸೆಳೆತ ಅನುಭವಿಸಿದರೆ ಶೀಘ್ರದಲ್ಲಿಯೇ ಹಣಕಾಸಿನ ವಿಚಾರದಲ್ಲಿ ಸ್ವಾತಂತ್ರ್ಯವನ್ನು ಪಡೆದುಕೊಳ್ಳುವಿರಿ ಎಂದರ್ಥ. ನೀವು ಹೊಸ ಕೆಲಸವನ್ನು ಪಡೆದುಕೊಳ್ಳಬಹುದು ಅಥವಾ ಮುಂದಿನ ದಿನಗಳಲ್ಲಿ ಬಡ್ತಿ ಪಡೆಯಬಹುದು ಎಂದು ಶಾಸ್ತ್ರ ಹೇಳುತ್ತದೆ.

ಅಂಗೈ ಸೆಳೆತ

ಅಂಗೈ ಸೆಳೆತ

ನಿಮ್ಮ ಅಂಗೈ ಸೆಳೆತದಿಂದ ಕೂಡಿದ್ದರೆ ನೀವು ಶೀಘ್ರದಲ್ಲಿಯೇ ದೊಡ್ಡ ಸಮಸ್ಯೆಗಳಿಂದ ಸುತ್ತುವರಿಯುವಿರಿ ಎಂದರ್ಥ. ಮುಂಬರುವ ಅಡಚಣೆಗಳ ಬಗ್ಗೆ ಯಾರಾದರೂ ತಿಳಿದುಕೊಳ್ಳಬೇಕು. ಏಕೆಂದರೆ ವ್ಯಕ್ತಿಗಳಿಯೀ ಹಿಂದೆ ಅನುಭವಿಸಿದಂತಹ ಕಠಿಣ ಸಮಯ ಎದುರಾಗುವುದು ಎಂದು ಊಹಿಸಲಾಗುತ್ತದೆ.

ಬೆರಳುಗಳ ಸೆಳೆತ

ಬೆರಳುಗಳ ಸೆಳೆತ

ನಿಮ್ಮ ಬೆರಳುಗಳು ಸೆಳೆತದಿಂದ ಕೂಡಿದ್ದರೆ ನೀವು ಹಳೆಯ ಸ್ನೇಹಿತರನ್ನು ಭೇಟಿಯಾಗುವಿರಿ. ಇಲ್ಲವೇ ಹಳೆಯ ಪ್ರೇಮಿಯನ್ನು ಕಾಣುತ್ತೀರಿ ಎಂದರ್ಥ. ಈ ಅವಕಾಶವು ನಿಮ್ಮ ಸಂಪರ್ಕವನ್ನು ಪುನಃ ಜೋಡಿಸುವುದು. ಇದು ಎಂದಿಗೂ ಶಾಶ್ವತವಾಗಿರುವುದು ಎಂದು ಶಾಸ್ತ್ರ ಹೇಳುತ್ತದೆ.

English summary

hat Does Itching In Different Parts Of The Body Reveal

Most of the times when our eyes twitch, we do have someone around who'd say that it is good luck or bad luck. The predictions vary from eye to eye! But do you know that the twitching can predict something important? Well, according to Samudra Shastra, the predictions of body twitching/itching can actually reveal to us a hidden message of the oncoming events in our life. Wondering how? Well, check on the details of how an itch/twitch in a certain body part can reveal about our own future events! Find out how.