Latest Updates
-
ಮದುವೆಯಾದ ತಕ್ಷಣ ಸ್ವಾತಂತ್ರ್ಯ ಕೊನೆಗೊಳ್ಳುವುದಿಲ್ಲ: ದಾಂಪತ್ಯದಲ್ಲಿ 'ಸಮ್ಮತಿ'ಯ ಮಹತ್ವವೇನು? -
ಕೇರಳದಲ್ಲಿ ಭಾರೀ ಮಳೆ: ಯೆಲ್ಲೋ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆ ಕ್ರಮಗಳು ಅತ್ಯಗತ್ಯ -
ಗಣೇಶ ಹಬ್ಬದ ಪ್ರಸಾದ ತಯಾರಿಸುತ್ತಿದ್ದೀರಾ? ಕಲಬೆರಕೆ ತಡೆಯಲು ಮತ್ತು ಸುರಕ್ಷಿತ ಪ್ರಸಾದಕ್ಕೆ ಇಲ್ಲಿದೆ ಮಹತ್ವದ ಟಿಪ್ಸ್ -
ಐಫೋನ್ 18 ಪ್ರೋ ಮತ್ತು ಡ್ಯುವೋ ಭಾರತದಲ್ಲಿ ಲಾಂಚ್: ಬೆಲೆ, ಆಫರ್ ಮತ್ತು ಪ್ರಿ-ಆರ್ಡರ್ ಮಾಹಿತಿ ಇಲ್ಲಿದೆ! -
ವಿಶ್ವ ಆತ್ಮಹತ್ಯೆ ತಡೆ ದಿನ: ಮಾನಸಿಕ ಆರೋಗ್ಯ ಸುಧಾರಿಸಲು 10 ನಿಮಿಷದ ಸಿಂಪಲ್ ಮಾರ್ನಿಂಗ್ ರೂಟೀನ್ ಮತ್ತು ಹೆಲ್ಪ್ಲೈನ್ ವಿವರಗಳು -
ವಿಚ್ಛೇದನದ ನಂತರವೂ ಜೀವನಾಂಶ ಪಡೆಯಬಹುದೇ? ಮಧ್ಯಪ್ರದೇಶ ಹೈಕೋರ್ಟ್ನಿಂದ ಮಹತ್ವದ ತೀರ್ಪು! -
ದೆಹಲಿ ವಾಯು ಮಾಲಿನ್ಯ: ಮನೆಯಲ್ಲಿ ಶುದ್ಧ ಗಾಳಿ ಪಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ಪ್ಯಾಕ್ ಮಾಡಿದ ಆಹಾರದ ಮೇಲೆ 'ರೆಡ್ ಹೆಕ್ಸಗನ್' ಎಚ್ಚರಿಕೆ: ಇನ್ಮುಂದೆ ತಿನ್ನುವ ಮುನ್ನ ಈ ವಿಷಯ ಗಮನಿಸಿ! -
ಆಪಲ್ 'ಸರ್ಪ್ರೈಸ್ ಆಂಡ್ ಶೈನ್' ಈವೆಂಟ್: ಐಫೋನ್ 18 ಪ್ರೋ ಮತ್ತು ಫೋಲ್ಡಬಲ್ ಆಲ್ಟ್ರಾ ಲಾಂಚ್, ಭಾರತದಲ್ಲಿ ಬೆಲೆ ಎಷ್ಟು? -
ಟಾಟಾ ಮುಂಬೈ ಮ್ಯಾರಥಾನ್ ಡ್ರೀಮ್ ರನ್: ಇಂದೇ ನೋಂದಣಿ ಮುಕ್ತಾಯ, ಓಟಕ್ಕೆ ಸಜ್ಜಾಗಲು 20 ನಿಮಿಷದ ಪ್ಲಾನ್ ಇಲ್ಲಿದೆ!
ಈ ನಾಲ್ಕು ರಾಶಿಯವರು ನಂಬಿಕಸ್ಥರು ಹಾಗೂ ವಿಶ್ವಾಸಾರ್ಹರು
ಸಂಗಾತಿ ಎಂದರೆ ಸದಾ ಕಾಲ ಅಂದರೆ ನಮ್ಮ ಕಷ್ಟ-ಸುಖದಲ್ಲಿ ಯಾವಾಗಲೂ ಜೊತೆಯಾಗಿಯೇ ಇರುವವರು ಎಂದಾಗುತ್ತದೆ. ಸಂಘ ಜೀವಿಯಾದ ಮನುಷ್ಯನಿಗೆ ಅವನನ್ನು ಪ್ರೀತಿಸುವ ಮತ್ತು ಆರೈಕೆ ಮಾಡುವ ಒಬ್ಬ ವ್ಯಕ್ತಿ ಇರಬೇಕು. ಹಾಗಾಗಿಯೇ ವಿವಾಹ ಎನ್ನುವ ಸಂಬಂಧದಡಿಯಲ್ಲಿ ಜೀವನ ಸಂಗಾತಿಯನ್ನು ಪಡೆಯುತ್ತೇವೆ. ವಿವಾಹದ ಮೂಲಕ ನಮ್ಮೆಲ್ಲಾ ಏಳು ಬೀಳುಗಳಿಗೆ ಸರಿಯಾಗಿ ಹೆಗಲು ಕೊಟ್ಟು, ಸದಾ ನಿಮ್ಮೊಂದಿಗೇ ಇರುತ್ತೇನೆ ಎನ್ನುವ ವಚನದ ಮೂಲಕ ಜೀವನ ಬಂಡಿ ಸಾಗಿಸುತ್ತಾರೆ. ಆದರೆ ಕೆಲವರು ಸ್ವಲ್ಪ ಸಮಯದ ನಂತರ ಸಂಬಂಧದಿಂದ ದೂರಾಗಬಹುದು ಅಥವಾ ಒಂದೇ ಸಮಯದಲ್ಲಿ ಗುಪ್ತ ರೀತಿಯಲ್ಲಿ ಇನ್ನೊಂದು ಸಂಬಂಧವನ್ನು ಬೆಳೆಸಿರಬಹುದು. ಕೆಲವರು ಮಾತ್ರ ದೀರ್ಘಾವಧಿಯವರೆಗೆ ತಮ್ಮ ಸಂಬಂಧದಲ್ಲಿ ಬದ್ಧರಾಗಿರುತ್ತಾರೆ.
ಜ್ಯೋತಿಷ್ಯ ಶಾಸ್ತ್ರ ಪ್ರಕಾರ ಸಂಗಾತಿಯಾಗಲು ಹಾಗೂ ಸೂಕ್ತವಾದ ಜವಾಬ್ದಾರಿಯನ್ನು ನಿರ್ವಹಿಸಲು ಅವರವರ ಗ್ರಹಗತಿಗಳ ಪಾಲೂ ಇರುತ್ತವೆ. ಹನ್ನೆರಡು ರಾಶಿಚಕ್ರದವರಲ್ಲಿ ಕೆಲವು ರಾಶಿಚಕ್ರದವರು ಮಾತ್ರ ತಮ್ಮ ಸಂಗಾತಿಗಳಿಗೆ ದೀರ್ಘ ಸಮಯದವರೆಗೂ ಸದಾ ಸಹಕಾರ ಹಾಗೂ ಪ್ರೀತಿ ವಿಶ್ವಾಸದಿಂದ ಕಾಣುತ್ತಾರೆ ಎನ್ನಲಾಗುವುದು. ಹಾಗಾದರೆ ಆ ರಾಶಿಚಕ್ರಗಳು ಯಾವವು? ಎನ್ನುವುದನ್ನು ತಿಳಿಯಲು ಈ ಮುಂದೆ ನೀಡಿರುವ ವಿವರಣೆಯನ್ನು ಅರಿಯಿರಿ...

ವೃಷಭ
ಈ ರಾಶಿಯವರು ಸಂಬಂಧದ ವಿಚಾರದಲ್ಲಿ ಹೆಚ್ಚು ಸ್ಥಿರವಾದ ಮತ್ತು ವಿಶ್ವಾಸಾರ್ಹ ವ್ಯಕ್ತಿಗಳಾಗಿರುತ್ತಾರೆ ಎನ್ನಲಾಗುವುದು. ಇವರು ಎಂತಹದ್ದೇ ಪರಿಸ್ಥಿತಿ ಎದುರಾದರೂ ತಮ್ಮ ಬದ್ಧತೆಯನ್ನು ಮರೆಯುವುದಿಲ್ಲ. ಸಂಗಾತಿಗೆ ಉಂಟಾಗುವ ಅಭದ್ರತೆ ಮತ್ತು ಬದಲಾವಣೆಯನ್ನು ನಿಯಂತ್ರಿಸುತ್ತಾರೆ. ಇವರು ಆದರ್ಶಮಯವಾದ ಜೀವನವನ್ನು ನಡೆಸಲು ಪ್ರಯತ್ನಿಸುತ್ತಾರೆ. ಅಲ್ಲದೆ ಸಂಬಂಧದಲ್ಲಿ ಸಮತೋಲನವನ್ನು ಕಂಡುಕೊಳ್ಳುವವರು. ಇವರು ವಾದ ಮಾಡುವುದರ ಮೂಲಕ ಸಂಬಂಧದಲ್ಲಿ ವಿರಸವನ್ನುಂಟುಮಾಡರು.

ಕರ್ಕ
ಈ ರಾಶಿಚಕ್ರದವರು ಅತ್ಯಂತ ಕಾಳಜಿಯನ್ನು ತೋರುವ ವ್ಯಕ್ತಿಗಳಾಗಿರುತ್ತಾರೆ. ದೀರ್ಘಾವಧಿಯ ವರೆಗೆ ಹೇಗೆ ಸಂಬಂಧವನ್ನು ಉಳಿಸಿಕೊಳ್ಳಬೇಕು ಎನ್ನುವುದನ್ನು ಇವರು ತಿಳಿದಿರುತ್ತಾರೆ. ಇವರು ತಮ್ಮ ಭಾವನೆಯನ್ನು ವ್ಯಕ್ತಪಡಿಸಲು ಯಾವುದೇ ಹೆದರಿಕೆಯನ್ನು ವ್ಯಕ್ತಪಡಿಸುವುದಿಲ್ಲ. ಪ್ರಾಮಾಣಿಕ ವ್ಯಕ್ತಿಯಾಗಿರುವ ಇವರು ತಮ್ಮ ಸಂಗಾತಿಯೊಂದಿಗೆ ಉತ್ತಮ ಪ್ರೀತಿ ವಿಶ್ವಾಸದಿಂದ ವರ್ತಿಸುತ್ತಾರೆ. ಜೊತೆಗೆ ಸಂಬಂಧದಲ್ಲಿ ಸಮತೋಲನ ಇರುವಂತೆ ಕಾಳಜಿ ವಹಿಸುವರು.

ಕನ್ಯಾ
ಈ ರಾಶಿಯವರು ಅತ್ಯಂತ ನಂಬಿಕಸ್ಥ ವ್ಯಕ್ತಿಗಳಾಗಿರುತ್ತಾರೆ. ಇವರು ವಿಚಾರ ಅಥವಾ ವಿಷಯಗಳನ್ನು ಕ್ರಮಬದ್ಧವಾಗಿ ಇಡುತ್ತಾರೆ. ಇವರು ಸಂಬಂಧವನ್ನು ನಿರ್ವಹಿಸುವುದು ಹಾಗೂ ದೀರ್ಘ ಕಾಲದವರೆಗೆ ಹೇಗೆ ನಿಭಾಯಿಸಬೇಕು ಎನ್ನುವುದನ್ನು ತಿಳಿದಿರುತ್ತಾರೆ. ತಮ್ಮ ಸಂಗಾತಿಯೊಂದಿಗೆ ಉತ್ತಮ ಪಾಲುದಾರರಾಗಿ ಸಂಬಂಧವನ್ನು ನಿರ್ವಹಿಸುತ್ತಾರೆ.

ತುಲಾ
ಈ ರಾಶಿಯ ವ್ಯಕ್ತಿಗಳು ನಂಬಿಕೆಗೆ ಅರ್ಹ ವ್ಯಕ್ತಿಗಳಾಗಿರುತ್ತಾರೆ. ಇವರು ವಿಷಯಗಳನ್ನು ಬಹಳ ಕ್ರಮಬದ್ಧವಾದ ವಿಧಾನದಲ್ಲಿ ಸರಿಪಡಿಸುತ್ತಾರೆ. ಸಂಬಂಧದಲ್ಲಿ ಬರುವ ಸಮಸ್ಯೆಗಳನ್ನು ನಿವಾರಿಸಲು ಹಾಗೂ ಸಂಬಂಧವನ್ನು ದೀರ್ಘಾವಧಿಯವರೆಗೆ ಹೇಗೆ ಕಾಪಾಡಿಕೊಳ್ಳಬೇಕು ಎನ್ನುವುದನ್ನು ಇವರು ತಿಳಿದಿದ್ದಾರೆ. ಸಂಬಂಧದಲ್ಲಿ ಹೇಗೆ ನಿಷ್ಠಾವಂತರಾಗಿರಬೇಕು ಎನ್ನುವುದನ್ನು ಇವರು ತಿಳಿದಿರುತ್ತಾರೆ. ಹಾಗಾಗಿ ಇವರು ದೀರ್ಘಾವಧಿಯವರೆಗೂ ಅತ್ಯುತ್ತಮ ಪಾಲುದಾರರಾಗಿರುತ್ತಾರೆ.



Click it and Unblock the Notifications
