ರಾಶಿ ಭವಿಷ್ಯ: ನಿಮ್ಮ ಅಭ್ಯಾಸ ಮತ್ತು ರಾಶಿಗೆ ಅವಿನಾಭಾವ ಸಂಬಂಧವಿದೆ!

Posted By: Hemanth Amin
Subscribe to Boldsky

ಕೆಲವೊಂದು ಅಭ್ಯಾಸಗಳು ನಮಗೆ ಚಟವಾಗಿ ಹೋಗುತ್ತದೆ. ಇದು ಒಳ್ಳೆಯ ಅಭ್ಯಾಸಗಳಾಗಿದ್ದರೆ ಪರವಾಗಿಲ್ಲ, ಅದರಿಂದ ನಮ್ಮ ಜೀವನವೂ ಉತ್ತಮ ರೀತಿಯಲ್ಲಿ ಸಾಗಬಹುದು. ಆದರೆ ಕೆಲವೊಂದು ದುರಾಭ್ಯಾಸಗಳು ಇದ್ದರೆ ಆಗ ಅದರಿಂದ ಹೊರಬರುವುದು ತುಂಬಾ ಕಷ್ಟ.

ನಿಮ್ಮ ಅಭ್ಯಾಸ ಮತ್ತು ರಾಶಿಗೆ ಅವಿನಾಭವ ಸಂಬಂಧವಿದೆಯೆಂದು ನಿಮಗೆ ಯಾವತ್ತಾದರೂ ಅನಿಸಿದೆಯಾ? ಇಲ್ಲ ತಾನೇ? ಆದರೆ ಇದು ಸತ್ಯ. ನಿಮ್ಮ ಅಭ್ಯಾಸ ಮತ್ತು ರಾಶಿಗೆ ಅವಿನಾಭಾವ ಸಂಬಂಧವಿದೆ. ಕೆಲವೊಂದು ಅಭ್ಯಾಸಗಳು ರಾಶಿಯಿಂದಾಗಿ ನಿಮ್ಮಲ್ಲಿ ಕಾಣಿಸಿಕೊಳ್ಳುವುದು. ಅಂತಹ ಅಭ್ಯಾಸಗಳು ಯಾವುದು ಎಂದು ಈ ಲೇಖನದ ಮೂಲಕ ತಿಳಿದುಕೊಳ್ಳುವ...

ಮೇಷ: ಮಾರ್ಚ್ 21- ಎಪ್ರಿಲ್ 19 ಸಾರ್ವಜನಿಕ ಸಂವಹನ

ಮೇಷ: ಮಾರ್ಚ್ 21- ಎಪ್ರಿಲ್ 19 ಸಾರ್ವಜನಿಕ ಸಂವಹನ

ಮಂಗಳ ಈ ರಾಶಿಯ ಅಧಿಪತಿಯಾಗಿದ್ದು, ಆತ ಧೈರ್ಯ ಮತ್ತು ಸ್ಪರ್ಧೆಯ ಪ್ರತೀಕ. ಇವರು ತಮ್ಮ ವ್ಯಕ್ತಿತ್ವವನ್ನು ತೋರಿಸಿಕೊಡಲು ಬಯಸುವರು. ಸಾಮಾಜಿಕ ಜಾಲತಾಣ ಮತ್ತು ರ್ಯಾಲಿಗಳಲ್ಲಿ ಇವರು ತಮ್ಮ ಭಾವನೆಗಳನ್ನು ಹೊರಹಾಕುವರು. ಈ ರಾಶಿಯ ವ್ಯಕ್ತಿಗಳು ತಮ್ಮ ಭಾವನೆ ತೋರ್ಪಡಿಸಲು ಇಷ್ಟಪಡುವರು.

ವೃಷಭ: ಎಪ್ರಿಲ್ 20-ಮೇ20 ಆಹಾರ

ವೃಷಭ: ಎಪ್ರಿಲ್ 20-ಮೇ20 ಆಹಾರ

ಈ ವ್ಯಕ್ತಿಗಳು ವೈಭೋಗದ ಎಲ್ಲಾ ರೀತಿಯ ಅನುಭವವನ್ನು ಪಡೆಯಲು ಬಯಸುವರು. ಇವರು ಹೊಸ ಹೊಸ ಆಹಾರ ಮತ್ತು ಖಾದ್ಯದಲ್ಲಿ ಪ್ರಯೋಗ ಮಾಡಲು ಇಚ್ಛಿಸುವರು. ಇವರು ಯಾವಾಗಲೂ ಹೊಸ ರುಚಿಯನ್ನು ಅನುಭವಿಸಲು ಬಯಸುವರು. ಇವರು ತಿಂಡಿಪೋತರಾಗಿರುವರು.

ಮಿಥುನ ಮೇ 21-ಜೂನ್ 20 ಶಾಪಿಂಗ್

ಮಿಥುನ ಮೇ 21-ಜೂನ್ 20 ಶಾಪಿಂಗ್

ವೇಗ ಗತಿಯ ಬುಧನು ಈ ರಾಶಿಯ ಅಧಿಪತಿ. ಇವರು ತಮ್ಮ ವಸ್ತ್ರಾಭರಗಣಗಳನ್ನು ಬದಲಾಯಿಸುತ್ತಾ ಇರಲು ಬಯಸುವರು. ಇವರಿಗೆ ಇದುವೇ ಸಂವಹನ ದಾರಿಯಾಗಿರುವುದು. ಇದರಿಂದಾಗಿ ಅವರು ಹೊಸ ಹೊಸ ವಸ್ತ್ರಾಭರಣಗಳನ್ನು ಖರೀದಿಸುತ್ತಾ ಇರುವರು.

ಕರ್ಕಾಟಕ: ಜೂನ್ 21-ಜುಲೈ 22 ಕೆಟ್ಟ ಸಂಬಂಧ

ಕರ್ಕಾಟಕ: ಜೂನ್ 21-ಜುಲೈ 22 ಕೆಟ್ಟ ಸಂಬಂಧ

ಇವರು ನಿಷ್ಠ, ಸೂಕ್ಷ್ಮ ಮತ್ತು ಭಾವನಾತ್ಮಕ ವ್ಯಕ್ತಿಯಾಗಿರುವ ಕಾರಣದಿಂದಾಗಿ ಇವರು ಭಾವನಾತ್ಮಕವಾಗಿರುವಂತಹ ಜನರಿಗೆ ಪಾಲುದಾರರಾಗಿರುವರು. ಮನಸ್ಸು ಮುರಿದ ಜನರನ್ನು ಪ್ರೀತಿಸಲು ಪ್ರಯತ್ನಿಸುವುದರಿಂದಾಗಿ ಅವರು ಕೆಟ್ಟ ಸಂಬಂಧದಲ್ಲಿ ಸಿಲುಕುವರು.

ಸಿಂಹ: ಜುಲೈ 23-ಆಗಸ್ಟ್ 23 ಸಾಮಾಜಿಕ ಮಾಧ್ಯಮ

ಸಿಂಹ: ಜುಲೈ 23-ಆಗಸ್ಟ್ 23 ಸಾಮಾಜಿಕ ಮಾಧ್ಯಮ

ಈ ರಾಶಿಯ ಅಧಿಪತಿ ಸೂರ್ಯ ಮತ್ತು ಇವರು ಸಾಮಾಜಿಕ ಜಾಲತಾಣಗಳಲ್ಲಿ ಹೆಚ್ಚು ಅಂಟಿಕೊಂಡಿರುವರು. ಇವರು ತಮ್ಮ ಪ್ರತಿಯೊಂದು ವಿಚಾರಗಳನ್ನು ಸಾಮಾಜಿಕ ಜಾಲತಾಣಗಳಲ್ಲೇ ಮಾಡಲು ಬಯಸುವರು ಮತ್ತು ಅಂಹಕಾರಿ ಸ್ವಭಾವವಾಗಿದ್ದರೂ ಇದರಿಂದಾಗಿಯೇ ಅದು ಅವರಿಗೆ ಚಟವಾಗಿರುವುದು.

 ಕನ್ಯಾ: ಆಗಸ್ಟ್ 24-ಸಪ್ಟೆಂಬರ್ 23 ಕಾಫಿ

ಕನ್ಯಾ: ಆಗಸ್ಟ್ 24-ಸಪ್ಟೆಂಬರ್ 23 ಕಾಫಿ

ಇವರು ಯಾವಾಗಲೂ ತಮ್ಮ ಕೆಲಸದಲ್ಲೇ ವ್ಯಸ್ತರಾಗಿರುವ ಕಾರಣದಿಂದಾಗಿ ಕಾಫಿ ಇವರಿಗೆ ಅಭ್ಯಾಸವಾಗಿರುವುದು. ಇವರು ಕಾಫಿ ಕುಡಿಯುದರಿಂದ ಮಾತ್ರ ತಮ್ಮ ಶಕ್ತಿಯನ್ನು ಹೆಚ್ಚಿಸಿಕೊಳ್ಳಬಹುದು ಎಂದು ಭಾವಿಸಿರುವರು.

ತುಲಾ: ಸಪ್ಟೆಂಬರ್ 24-ಅಕ್ಟೋಬರ್ 23 ಫೋನ್

ತುಲಾ: ಸಪ್ಟೆಂಬರ್ 24-ಅಕ್ಟೋಬರ್ 23 ಫೋನ್

ಈ ರಾಶಿಗೆ ಶುಕ್ರ ಅಧಿಪತಿಯಾಗಿರುವನು. ಶುಕ್ರನನ್ನು ಪ್ರೀತಿ ಮತ್ತು ಸೌಂದರ್ಯದ ದೇವರೆಂದು ಕರೆಯಲಾಗುತ್ತದೆ. ವಾಯು ಚಿಹ್ನೆಯಾಗಿರುವ ಈ ರಾಶಿಯವರು ಮಾತುಗಾರರಾಗುವುದನ್ನು ಪ್ರೀತಿಸುವರು. ಇವರು ತಮ್ಮ ಫೋನ್ ನ್ನು ಇಷ್ಟಪಡುವರು. ಯಾಕೆಂದರೆ ಈ ಮೂಲಕವೇ ಅವರು ತಮ್ಮ ಭಾವನೆಯನ್ನು ಹಂಚಿಕೊಳ್ಳುವರು.

ವೃಶ್ಚಿಕ: ಅಕ್ಟೋಬರ್ 24 ರಿಂದ ನ.22 ರಿಯಾಲಿಟಿ ಶೋ

ವೃಶ್ಚಿಕ: ಅಕ್ಟೋಬರ್ 24 ರಿಂದ ನ.22 ರಿಯಾಲಿಟಿ ಶೋ

ಪ್ಲೂಟೋ ಈ ರಾಶಿಯ ಅಧಿಪತಿಯಾಗಿರುವ ಕಾರಣದಿಂದ ಇವರು ಕೆಲವೊಂದು ಕಾಣದ ವಿಚಾರಗಳ ಬಗ್ಗೆ ತನಿಖೆ ನಡೆಸಲು ಬಯಸುವರು. ಇವರು ವ್ಯಕ್ತಿಗಳ ಇನ್ನೊಂದು ಮುಖವನ್ನು ತನಿಖೆ ಮಾಡುವರು. ಇದರಿಂದಾಗಿ ಇವರು ಯಾವಾಗಲೂ ಟಿವಿಯಲ್ಲಿ ಬರುವ ರಿಯಾಲಿಟಿ ಷೋ ನೋಡುತ್ತಾ ಇರುವರು.

ಧನು: ನ.23ರಿಂದ ಡಿ.22 ಪ್ರಯಾಣ

ಧನು: ನ.23ರಿಂದ ಡಿ.22 ಪ್ರಯಾಣ

ಈ ರಾಶಿಯವರಿಗೆ ಗುರು ಅಧಿಪತಿಯಾಗಿರುವನು. ಪ್ರಯಾಣ ಮಾಡುವುದು ಎಂದರೆ ಉಸಿರಾಡುವುದು ಎಂದು ಇವರು ಭಾವಿಸಿದ್ದಾರೆ. ಪ್ರಯಾಣದಿಂದ ಇವರು ಹೊಸ ಹೊಸ ಸ್ಥಳಗಳಿಗೆ ಭೇಟಿ ನೀಡಿ ತಮ್ಮನ್ನು ತಾವು ಪ್ರೇರಿತರಾಗುವಂತೆ ಮಾಡುವರು.

ಮಕರ: ಡಿ.23ರಿಂದ ಜ.20 ಕೆಲಸ

ಮಕರ: ಡಿ.23ರಿಂದ ಜ.20 ಕೆಲಸ

ಶನಿಯು ಈ ರಾಶಿಗೆ ಅಧಿಪತಿಯಾಗಿರುವನು. ಶನಿ ತುಂಬಾ ಶಿಸ್ತು ಹಾಗೂ ಜವಾಬ್ದಾರಿಯ ಗ್ರಹ. ಇವರು ತಮ್ಮನ್ನು ತಾವು ಕೆಲಸಕ್ಕಾಗಿ ಮೀಸಲಿಡುವರು. ಇವರಿಗೆ ಬಲವಾದ ನೈತಿಕ ನೀತಿ ಮತ್ತು ನೈತಿಕತೆಯಿದೆ. ಇವರು ತಮ್ಮ ಕೆಲಸದಲ್ಲಿ ಪರಿಪೂರ್ಣ ವ್ಯಕ್ತಿಯಾಗಿರುವರು. ಕೆಲವೊಂದು ಸಲ ಇವರು ತಮಗೆ ವಿಶ್ರಾಂತಿ ಬೇಕೆಂದು ಬಯಸುವುದು ಇದೆ.

ಕುಂಭ: ಜ.21ರಿಂದ ಫೆ.18 ಓದುವುದು

ಕುಂಭ: ಜ.21ರಿಂದ ಫೆ.18 ಓದುವುದು

ಈ ರಾಶಿಯ ಅಧಿಪತಿ ಬದಲಾವಣೆಯ ಗ್ರಹ ಯುರೇನಸ್. ಈ ರಾಶಿ ಸಂಪೂರ್ಣವಾಗಿ ತಮ್ಮ ಬುದ್ಧಿಯಿಂದ ಕಾರ್ಯನಿರ್ವಹಿಸುವುದು. ಇವರಿಗೆ ಯಾವಾಗಲೂ ಹೊಸ ಹೊಸ ಮಾಹಿತಿಗಳನ್ನು ಕಲಿಯಲು ಮತ್ತು ಓದುವುದು ತುಂಬಾ ಇಷ್ಟ. ಇವರು ಓದುವುದನ್ನು ಇಷ್ಟಪಡುವರು ಮತ್ತು ಮಾಹಿತಿ ಪಡೆದುಕೊಳ್ಳುತ್ತಿರುವರು.

ಮೀನ: ಫೆ.19-ಮಾ.20 ಓಡುವುದು

ಮೀನ: ಫೆ.19-ಮಾ.20 ಓಡುವುದು

ಈ ರಾಶಿಯನ್ನು ನೆಪ್ಚೂನ್ ಆಳುತ್ತದೆ. ಇದು ಆಳ ನೀರಿನ ಚಿಹ್ನೆಯಾಗಿದೆ ಮತ್ತು ಈ ರಾಶಿಯವರು ತೀವ್ರ ಪರಾನುಭೂತಿ ಹೊಂದಿರುವರು. ಇದೇ ವೇಳೆ ಇವರು ಹೆಚ್ಚು ಸಹಾನೂಭೂತಿ ಕೂಡ ಹೊಂದಿರುವರು. ಇದರಿಂದ ಪರಿಸ್ಥಿತಿಯಿಂದ ಓಡುವುದನ್ನು ಪ್ರೀತಿಸುವರು.

English summary

addictions-defined-as-per-your-zodiac-sign

Most often, addiction is associated to substances and over a period of time, addiction can be attributed to anything that becomes an obsession. Do you know that there are certain things that we are addicted to? These certain addictions can be even based on our zodiac signs. Here, in this article, we are revealing about the addictions that we have. These addictions are based on our zodiac signs. So, find out on what are the things that you are addicted to based on your zodiac sign.