ಈ ನಾಲ್ಕು ರಾಶಿಚಕ್ರದವರು ಸುಳ್ಳು ಹೇಳುವುದರಲ್ಲಿ ಪಂಡಿತರು...

Posted By: Deepu
Subscribe to Boldsky

ಕೆಲವರು ಮಾತನಾಡುವಾಗ ಬಹಳ ಅನುಭವಸ್ಥರು ಎನ್ನಿಸುತ್ತದೆ. ಅವರು ಹೇಳುವ ವಿಚಾರಗಳು ಬಹಳ ವಸ್ತುನಿಷ್ಟವಾಗಿದೆ ಎನಿಸುವುದರಲ್ಲಿ ಯಾವುದೇ ಸಂದೇಹ ಇರುವುದಿಲ್ಲ. ಇನ್ನೂ ಕೆಲವರು ಹೇಳುವ ವಿಚಾರಗಳು ಸತ್ಯದ ತಲೆಯ ಮೇಲೆ ಹೊಡೆದಂತೆ ಇರುತ್ತದೆ. ಕೆಲವು ಅನುಮಾನಗಳು ಹುಟ್ಟಿಸಬಹುದಾದರೂ, ಅಂತಿಮ ನಿರ್ಣಯ ನಿಜವೇ ಆಗಿರಬಹುದು ಎನ್ನಿಸುವಂತೆ ಇರುತ್ತದೆ.

ವ್ಯಕ್ತಿ ಹೇಳುವ ಮಾತುಗಳಲ್ಲಿ ಸುಳ್ಳು ಇದ್ದರೂ ಅದು ನಮ್ಮ ಗಮನಕ್ಕೆ ಬಾರದು. ಆದರೆ ಜ್ಯೋತಿಷ್ಯ ಅಥವಾ ರಾಶಿ ಚಕ್ರ ಎನ್ನುವ ಅಸ್ತ್ರವು ವ್ಯಕ್ತಿಯ ನಿಜ ವಿಚಾರವನ್ನು ತೆರೆದಿಡುತ್ತದೆ. ನಿಜ, ಮೇಲ್ನೋಟಕ್ಕೆ ವ್ಯಕ್ತಿ ಯಾವೆಲ್ಲಾ ಗುಣವನ್ನು ಹೊಂದಿದ್ದಾನೆ? ಆತನ ಸ್ವಭಾವವು ಧನಾತ್ಮಕವಾಗಿದೆಯೇ? ಎನ್ನುವುದು ತಿಳಿದುಕೊಳ್ಳುವುದು ಕಷ್ಟ. ಜಂಟಿ ವ್ಯವಹಾರ ಹಾಗೂ ಜೀವನದ ಸಂಗಾತಿಯ ಆಯ್ಕೆಯಾಗಿ ಆರಿಸಿಕೊಳ್ಳುವಾಗ ಸೂಕ್ತ ವ್ಯಕ್ತಿಯ ಆಯ್ಕೆಯನ್ನು ಮಾಡಿಕೊಳ್ಳಬೇಕಾಗುತ್ತದೆ. ಅದಕ್ಕಾಗಿ ಯಾವ ರಾಶಿ ಚಕ್ರದವರು ಹೆಚ್ಚು ಸುಳ್ಳನ್ನು ಹೇಳುತ್ತಾರೆ ಎನ್ನುವ ವಿಚಾರದ ಬಗ್ಗೆ ಬೋಲ್ಡ್ ಸ್ಕೈ ನಿಮ್ಮ ಮುಂದೆ ತೆರೆದಿಟ್ಟಿದೆ....   

ವೃಷಭ: ಏಪ್ರಿಲ್ 20-ಮೇ 20

ವೃಷಭ: ಏಪ್ರಿಲ್ 20-ಮೇ 20

ಈ ಚಿಹ್ನೆಯ ಜನರು ಸಾಮಾನ್ಯವಾಗಿ ಪ್ರಬಲರಾಗಿರುತ್ತಾರೆ. ಅವರು ಮಾಡುವ ಪ್ರತಿಯೊಂದು ವಿಚಾರದಲ್ಲಿ ನಿರ್ಣಯಿಸುತ್ತಾರೆ. ತಮ್ಮ ಸ್ವಾತಂತ್ರ್ಯವನ್ನು ಎಲ್ಲರ ಮೇಲೆ ಹೇರಲು ಪ್ರಯತ್ನಿಸುತ್ತಾರೆ. ಕೆಲವೊಮ್ಮೆ ಇವರು ಹೇಳುವ ಸುಳ್ಳು ಸತ್ಯದಂತೆ ತೋರುವುದು.

ವೃಷಭ: (ಮುಂದುವರಿದ ಭಾಗ)

ವೃಷಭ: (ಮುಂದುವರಿದ ಭಾಗ)

ಇವರು ಸ್ವಭಾವತಹ ಪ್ರಾಮಾಣಿಕ ವ್ಯಕ್ತಿಗಳಾಗಿರುತ್ತಾರೆ. ಹಾಗಂತ ಸುಳ್ಳು ಹೇಳುವುದರಿಂದ ದೂರ ಉಳಿದಿರುತ್ತಾರೆ ಎಂದರ್ಥವಲ್ಲ. ಇವರು ಸಾಮಾನ್ಯವಾಗಿ ತಮ್ಮ ಗೌಪ್ಯ ವಿಚಾರವನ್ನು ಮುಚ್ಚಿಡಲು ಅಥವಾ ಕೆಲವು ಗುಪ್ತ ಸಂಗತಿಯನ್ನು ಇತರರಿಗೆ ಭಹಿರಂಗ ಪಡಿಸದೆ ಇರಬೇಕು ಎನ್ನುವ ದೃಷ್ಟಿಯಲ್ಲಿ ಸುಳ್ಳನ್ನು ಹೇಳುತ್ತಾರೆ. ಅದು ಸತ್ಯಕ್ಕೆ ಸಮನಾಗಿರುವಂತೆ ಇರುತ್ತದೆ.

ಸಿಂಹ: ಜುಲೈ 23-ಆಗಸ್ಟ್ 23

ಸಿಂಹ: ಜುಲೈ 23-ಆಗಸ್ಟ್ 23

ಈ ರಾಶಿಯು ಅತ್ಯಂತ ಶಕ್ತಿಯುತವಾದ ರಾಶಿಚಕ್ರ ಎನ್ನಲಾಗುವುದು. ಈ ರಾಶಿಯ ವ್ಯಕ್ತಿಗಳು ಅತ್ಯಂತ ಪ್ರಬಲ ವ್ಯಕ್ತಿಗಳಾಗಿರುತ್ತಾರೆ. ಇವರು ಹೆಚ್ಚು ಆತ್ಮವಿಶ್ವಾಸವನ್ನು ಹೊಂದಿರುವ ಸ್ವತಂತ್ರರಾಗಿರಲು ಬಯಸುತ್ತಾರೆ. ಇವರ ಕೆಲವು ಬಯಕೆಗಳಿಗೆ ಸನ್ನಿವೇಶ ಅಥವಾ ವಿಚಾರಗಳು ಅಡ್ಡಿ ಪಡಿಸುತ್ತಿವೆ ಎಂದಾದರೆ ಬಲು ಸುಲಭವಾಗಿ ಸುಳ್ಳು ಹೇಳುತ್ತಾರೆ. ತಮ್ಮ ಕೆಲಸವನ್ನು ಸುಲಭವಾಗಿ ನಿರ್ವಹಿಸಬೇಕಾದ ಸಂದರ್ಭದಲ್ಲಿ ಸುಳ್ಳನ್ನು ಸುಲಭವಾಗಿ ಹೇಳುತ್ತಾರೆ.

 ಸಿಂಹ: (ಮುಂದುವರಿದ ಭಾಗ)

ಸಿಂಹ: (ಮುಂದುವರಿದ ಭಾಗ)

ಈ ರಾಶಿಯವರು ತಮ್ಮನ್ನು ತಾವು ರಕ್ಷಿಸಿಕೊಳ್ಳಬೇಕಾದ ಸಂದರ್ಭದಲ್ಲಿ ಹಾಗೂ ಮೂರ್ಖರಿಂದ ದೂರ ಇರುವ ಸಲುವಾಗಿ ಸುಳ್ಳು ಹೇಳುತ್ತಾರೆ. ಇತರರ ತಪ್ಪನ್ನು ಸಾಭೀತು ಪಡಿಸಲು ಸದಾ ಮುಂದಾಗುವರು. ತಾವು ಏನನ್ನಾದರೂ ಸಾಧಿಸಲು ಸಿದ್ಧರಾಗಿರುತ್ತೇವೆ ಎನ್ನುವುದನ್ನು ತೋರಿಸಿಕೊಡಲು ಸುಳ್ಳಿನ ಮೊರೆಹೋಗುತ್ತಾರೆ.

ಮಿಥುನ: ಮೇ 21 ಜೂನ್ 20

ಮಿಥುನ: ಮೇ 21 ಜೂನ್ 20

ಇವರು ಎರಡು ನಾಲಿಗೆಯ ವ್ಯಕ್ತಿಗಳು ಎಂದು ಹೇಳಬಹುದು. ಇವರ ದ್ವಂದ್ವ ಸ್ವಭಾವವು ಕೆಲವು ತತ್ವಗಳ ಉಲ್ಲಂಘನೆಯನ್ನು ಮಾಡುತ್ತದೆ ಅಥವಾ ಸುಳ್ಳು ಹೇಳುವುದರ ಮೂಲಕ ಕೊನೆಗೊಳ್ಳುತ್ತದೆ. ಇವರು ಕೆಲವು ಸಂದರ್ಭದಲ್ಲಿ ಗೊಂದಲಕ್ಕೆ ಒಳಗಾಗುವ ಸಾಧ್ಯತೆಗಳಿವೆ.

ಮಿಥುನ: (ಮುಂದುವರಿದ ಭಾಗ)

ಮಿಥುನ: (ಮುಂದುವರಿದ ಭಾಗ)

ಇವರು ಉದ್ದೇಶ ಪೂರ್ವಕವಾಗಿ ಸುಳ್ಳು ಹೇಳುವುದಿಲ್ಲ ಎನ್ನಲಾಗುವುದು. ಇವರ ದ್ವಂದ್ವ ಸ್ವಭಾವವು ಇವರಿಂದ ಸುಳ್ಳನ್ನು ಹೇಳಿಸುವಂತೆ ಮಾಡುತ್ತದೆ. ಇವರಲ್ಲಿ ತಾಳ್ಮೆಯ ಸ್ವಭಾವ ರೂಢಿಸಿಕೊಂಡರೆ ಹೇಳುವ ಸುಳ್ಳಿನ ಪ್ರಮಾಣವನ್ನು ಕಡಿಮೆ ಮಾಡಬಹುದು.

ವೃಶ್ಚಿಕ: (ಮುಂದುವರಿದ ಭಾಗ)

ವೃಶ್ಚಿಕ: (ಮುಂದುವರಿದ ಭಾಗ)

ಈ ರಾಶಿಯ ವ್ಯಕ್ತಿಗಳು ಹೆಚ್ಚು ಬಾಷ್ಪಶೀಲರಾಗಿರುತ್ತಾರೆ. ಜೊತೆಗೆ ಅತಿಯಾಗಿ ಸುಳ್ಳು ಹೇಳುವ ವ್ಯಕ್ತಿಗಳಾಗಿರುತ್ತಾರೆ. ಉತ್ತಮ ಕುಶಲಗಾರರಾದ ಇವರು ತಮ್ಮ ನಿಯಂತ್ರಣದಲ್ಲಿಯೇ ಎಲ್ಲವೂ ಇರಬೇಕೆಂದು ಬಯಸುತ್ತಾರೆ. ಇವರು ಸುಳ್ಳುಗಳ ಸರಮಾಲೆಯನ್ನೇ ಸೃಷ್ಟಿಸಿ, ನಿಜ ಎಂದು ಸಾಧಿಸಿ ತೋರಿಸಬಲ್ಲರು. ಅಲ್ಲದೆ ಬಹು ಕಾಲದ ವರೆಗೂ ಅದನ್ನೇ ಸಾಧಿಸುವ ಸಾಮಥ್ರ್ಯವನ್ನು ಹೊಂದಿರುತ್ತಾರೆ.

ವೃಶ್ಚಿಕ: (ಮುಂದುವರಿದ ಭಾಗ)

ವೃಶ್ಚಿಕ: (ಮುಂದುವರಿದ ಭಾಗ)

ಈ ಚಿಹ್ನೆಯ ಜನರು ಹೆಚ್ಚು ವಿಶ್ಲೇಷಣಾತ್ಮಕರಾಗಿರುತ್ತಾರೆ. ಇವರು ಪ್ರತಿಯೊಬ್ಬರ ದೌರ್ಬಲ್ಯವನ್ನು ಬಳಸಿಕೊಂಡು ಸುಳ್ಳನ್ನು ಹೇಳುತ್ತಾರೆ. ಅದರಿಂತ ತಾವು ಕೆಲವು ಕೆಲಸವನ್ನು ಸಾಧಿಸಿಕೊಳ್ಳುವ ಸಾಧ್ಯತೆಗಳಿರುತ್ತವೆ. ಇವರು ಬಹಳ ನಿಖರವಾಗಿ ಸುಳ್ಳು ಹೇಳುವುದರಿಂದ ಇತರರಿಗೆ ಅದು ಸುಳ್ಳೆಂದು ಭಾವಿಸಲು ಕಷ್ಟವಾಗುವುದು.

English summary

4-zodiac-signs-that-are-listed-as-being-the-most-dishonest

There are so many of us who turn to astrology to understand our ownself better. According to astrology, each zodiac sign has a particular set of personality traits.Here, we have the list of the most dishonest zodiac signs. These zodiac signs are being ranked as per their loyalty, when it comes to relationships.If you are wondering whether you or your partner is listed in this list of the most dishonest zodiac signs, then find out.