ಕರ್ಕ, ವೃಶ್ಚಿಕ, ಮೀನ ಈ 3 ರಾಶಿಯವರಿಗೆ ಮಾರ್ಚ್ ತಿಂಗಳಲ್ಲಿ ಅದೃಷ್ಟವೋ ಅದೃಷ್ಟ!

Posted By: Deepu
Subscribe to Boldsky

ಮನುಷ್ಯನ ಜೀವನ ನಿಂತಿರುವುದೇ ಪ್ರೀತಿಯ ಮೇಲೆ. ಜೀವನದಲ್ಲಿ ಪ್ರೀತಿಯೇ ಇಲ್ಲವೆಂದಾದರೆ ಜೀವನ ಶೂನ್ಯವಾಗುವುದು. ಪ್ರೀತಿ ಎನ್ನುವ ಪದ ಕೇಳಿದ ತಕ್ಷಣ ಪ್ರತಿಯೊಬ್ಬರಿಗೂ ಮಾನಸಿಕವಾಗಿ ಅದೇನೋ ಒಂದು ಬಗೆಯ ಖುಷಿ ಹಾಗೂ ಸಮಾಧಾನ ಉಂಟಾಗುವುದರಲ್ಲಿ ಸಂದೇಹವಿಲ್ಲ. ನಮ್ಮ ಜೀವನದಲ್ಲಿ ಅತ್ಯುತ್ತಮ ಪ್ರೀತಿಯನ್ನು ಹೊಂದಲು ಸಹ ನಾವು ಪುಣ್ಯ ಮಾಡಿರಬೇಕು ಅಥವಾ ಅದೃಷ್ಟ ಇರಬೇಕು ಎನ್ನುವ ಮಾತನ್ನು ಸಾಮಾನ್ಯವಾಗಿ ಕೇಳುತ್ತೇವೆ. ಹಣವಂತನಾಗದಿದ್ದರೂ ಪ್ರೀತಿಯಲ್ಲಿ ಅದೃಷ್ಟವಂತನಾಗಿದ್ದಾನೆ ಎಂದರೆ ಆತ ಜೀವನದಲ್ಲಿ ನೆಮ್ಮದಿಯಿಂದ ಇದ್ದಾನೆ ಎನ್ನುವುದು ಅರ್ಥವಾಗುತ್ತದೆ.

ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಹನ್ನೆರಡು ರಾಶಿಚಕ್ರದವರಲ್ಲಿ ಮೂರು ರಾಶಿ ಚಕ್ರದವರು ಮಾರ್ಚ್ ತಿಂಗಳಲ್ಲಿ ಬಹಳ ಅದೃಷ್ಟವನ್ನು ಹೊಂದಿದ್ದಾರೆ. ಅದರಲ್ಲೂ ಈ ಮೂರು ರಾಶಿಚಕ್ರದವರಿಗೆ ಪ್ರೀತಿ ವಿಚಾರವಾಗಿ ಅತ್ಯಂತ ಸಂತೋಷ ಹಾಗೂ ಖುಷಿ ಲಭಿಸುವುದು ಎಂದು ಹೇಳಲಾಗುವುದು. ಹಾಗಾದರೆ ಆ ರಾಶಿಚಕ್ರಗಳು ಯಾವವು? ಅವರು ಪ್ರೀತಿಯ ವಿಚಾರದಲ್ಲಿ ಯಾವ ಬಗೆಯ ಅದೃಷ್ಟ ಹೊಂದಿದ್ದಾರೆ ಎನ್ನುವುದನ್ನು ತಿಳಿಯಲು ಈ ಮುಂದಿರುವ ವಿವರಣೆಯನ್ನು ಓದಿ...

ಕರ್ಕ

ಕರ್ಕ

ಈ ರಾಶಿಯವರು ಮಾರ್ಚ್ ತಿಂಗಳಲ್ಲಿ ಪ್ರಯಾಣ ಮಾಡುವ ಯೋಜನೆಯನ್ನು ಹೊಂದಿರಬಹುದು. ಬೌದ್ಧಿಕ ಅವಕಾಶಗಳು ಈ ರಾಶಿಯವರಿಗೆ ಅದೃಷ್ಟವನ್ನು ತಂದುಕೊಡಲಿದೆ. ಸಂಗಾತಿ ಅಥವಾ ನಿಮ್ಮ ಪಾಲುದಾರರು ನೀವು ಕೈಗೊಳ್ಳುವ ಕೆಲಸ ಹಾಗೂ ನಿರ್ಧಾರಗಳಿಗೆ ಬೆಂಬಲ ಮತ್ತು ಸಹಾಯವನ್ನು ಮಾಡುವರು. ಪ್ರೇಮಿಗಳ ದಿನ ಮುಗಿದಿದ್ದರೂ ಈ ರಾಶಿಯವರು ಪ್ರೀತಿಯ ಗಾಳಿಯಲ್ಲಿ ತೇಲುತ್ತಿರುತ್ತಾರೆ ಎಂದು ಹೇಳಬಹುದಾಗಿದೆ.

ಕರ್ಕ: ಮುಂದುವರಿದ ಭಾಗ

ಕರ್ಕ: ಮುಂದುವರಿದ ಭಾಗ

ಅಸಾಧಾರಣ ಉಡುಗೆ ಹಾಗೂ ಆಕರ್ಷಕ ಸ್ವಭಾವದಿಂದ ವಿರುದ್ಧ ಲಿಂಗದವರನ್ನು ಆಕರ್ಷಿಸುವಿರಿ. ಸಾಮಾಜಿಕ ಕ್ಷೇತ್ರದಲ್ಲಿ ನಿಮ್ಮ ಮಿತಿಗೆ ಕಡಿವಾಣವನ್ನು ಹಾಕಿಕೊಳ್ಳದಿರಿ. ಸಾಮಾಜಿಕ ವಲಯದಲ್ಲಿ ಬೆರೆಯುವುದರಿಂದ ನೀವು ನಿಮ್ಮ ಮನಸ್ಸನ್ನು ಮುಕ್ತವಾಗಿಸಿಕೊಳ್ಳಬಹುದು. ಅಲ್ಲದೆ ನಿಮ್ಮ ಜೀವನದಲ್ಲಿ ಪ್ರೀತಿ ಹೇಗೆ ಪ್ರವೇಶಿಸುತ್ತದೆ ಎನ್ನುವುದನ್ನು ಸಹ ಕಾಣಬಹುದು.

ವೃಶ್ಚಿಕ

ವೃಶ್ಚಿಕ

ಗುರು ಗ್ರಹವು ಅತ್ಯಂತ ದೊಡ್ಡ ಮತ್ತು ಅದೃಷ್ಟವನ್ನು ತಂದುಕೊಡುವ ಗ್ರಹ ಎಂದು ಹೇಳಲಾಗುವುದು. ಈ ಗ್ರಹವು ಈ ತಿಂಗಳ ಪೂರ್ತಿ ವೃಶ್ಚಿಕ ರಾಶಿಯಲ್ಲಿ ಪ್ರಯಾಣ ಬೆಳೆಸುವುದು. ಇದರ ಪರಿಣಾಮವಾಗಿ ಈ ಚಿಹ್ನೆಯವರು ಸಾಕಷ್ಟು ಪ್ರಣಯ ಹಾಗೂ ಆಧ್ಯಾತ್ಮಿಕ ವಿಚಾರದಲ್ಲಿ ತಮ್ಮನ್ನು ತಾವು ತೆರೆದುಕೊಳ್ಳುತ್ತಾರೆ. ಮಾನಸಿಕವಾಗಿ ನೆಮ್ಮದಿಯನ್ನು ಕಂಡುಕೊಳ್ಳುವ ಇವರು ಮಾಜಿ ಪ್ರೇಮಿಗಳನ್ನು ಅಥವಾ ಸ್ನೇಹಿತರ ಮೂಲಕ ಹೊಸ ವ್ಯಕ್ತಿಗಳನ್ನು ಭೇಟಿನೀಡುವ ಸಾಧ್ಯತೆಗಳಿವೆ.

ವೃಶ್ಚಿಕ: ಮುಂದುವರಿದ ಭಾಗ

ವೃಶ್ಚಿಕ: ಮುಂದುವರಿದ ಭಾಗ

ಬುಧ ಗ್ರಹವು ಮಾರ್ಚ್ 22ರಿಂದ ಮರು ಜೋಡಣೆ ಹೊಂದುವುದರಿಂದ ಹಿಂದಿನಂತೆಯೇ ಅದ್ಭುತವನ್ನು ಕಾಣಬಹುದು. ಪುನಃ ಅದೇ ತಪ್ಪನ್ನು ಮಾಡಲು ಯಾವುದೇ ಹಿಂಜರಿಕೆಯನ್ನು ತೋರರು. ಹಾಗಾಗಿ ಸೂಕ್ತ ರೀತಿಯಲ್ಲಿ ಸರಿಪಡಿಸಲು ಚಿಂತಿಸಬಹುದು ಇವರು.

ಮೀನ

ಮೀನ

ಈ ರಾಶಿಯ ವ್ಯಕ್ತಿಗಳತಮ್ಮ ಹಿಂದಿನ ರೀತಿಯಲ್ಲಿಯೇ ಜೀವನವನ್ನು ಚಿತ್ರಿಸಬಹುದು. ಅಲ್ಲದೆ ತಮ್ಮ ಸಂಗಾತಿಯ ಸಂಪರ್ಕವನ್ನು ಕಲ್ಪಿಸಿಕೊಳ್ಳಲು ಬಲವಾದ ಶಕ್ತಿಯನ್ನು ಹೊಂದಿರುವರು. ಇದು ಸ್ಪಷ್ಟವಾದ ವಾಸ್ತವಿಕ ವಿಚಾರವಾದ್ದರಿಂದ ಪ್ರಣಯದ ಕಲ್ಪನೆಯನ್ನು ಅನುಭವಿಸಲು ಇವರಿಗೆ ಸಹಾಯವಾಗುವುದು.

ಮೀನ: ಮುಂದುವರಿದ ಭಾಗ

ಮೀನ: ಮುಂದುವರಿದ ಭಾಗ

ಈ ರಾಶಿಚಕ್ರದವರಲ್ಲಿ ಗುರು ಮತ್ತು ಶನಿಯ ಪ್ರಭಾವದಿಂದ ಸಂವಹನಕ್ಕೆ ಒತ್ತು ನೀಡಲಾಗುತ್ತದೆ. ಇದರಿಂದ ಪ್ರೀತಿಯ ಬಂಧ ಹೆಚ್ಚುವುದು. ಇವರು ಕೆಲವೊಮ್ಮೆ ನಿಗೂಢತೆಯನ್ನು ಕಾಪಾಡಿಕೊಳ್ಳುವರು. ಆದರೆ ಈಗ ವ್ಯಕ್ತಿ ಪ್ರಾಮಾಣಿಕ ಸಂಬಂಧವನ್ನು ಬೆಳೆಸಿಕೊಳ್ಳುವರು.

English summary

3 Zodiacs That Will Be Lucky In Love During March

Though a quarter of the March month is over, we are here to enlighten you on the love front for a few zodiac signs. These zodiac signs are said to get lucky during this month. Check out on the details of the zodiac signs that can be really lucky in terms of love for the month of March.