ಶುಕ್ರವಾರದ ದಿನ ಭವಿಷ್ಯ

Posted By: Divya Pandith
Subscribe to Boldsky

ನಮ್ಮ ಮನಸ್ಸು ದುರ್ಬಲ ಅಥವಾ ಬೇಸರದಲ್ಲಿರುವಾಗ ಸನ್ನಿವೇಶಗಳೇ ಸಮಸ್ಯೆಗಳಾಗಿ ಪರಿವರ್ತನೆಯಾಗುತ್ತದೆ. ಅದೇ ಮನಸ್ಸು ಸಮತೋಲನದಲ್ಲಿದ್ದಾಗ ಸನ್ನಿವೇಶಗಳು ಸವಾಲಾಗಿ ಕಾಣುತ್ತದೆ. ಅದೇ ಮನಸ್ಸು ಪ್ರಬಲವಾಗಿದ್ದಾಗ ಸನ್ನಿವೇಶಗಳು ಅವಕಾಶಗಳಾಗಿ ಬದಲಾಗುತ್ತವೆ. ನಿಜ, ನಮ್ಮ ಮನಸ್ಸು ಯಾವ ಸ್ಥಿತಿಯಲ್ಲಿದೆ ಎನ್ನುವುದರ ಆಧಾರದ ಮೇಲೆಯೇ ನಮ್ಮ ಸುತ್ತಲಿನ ಪರಿಸರ ಹಾಗೂ ಸನ್ನಿವೇಶಗಳನ್ನು ನಾವು ಸ್ವೀಕರಿಸುತ್ತೇವೆ.

ಗೊಂದಲಮಯವಾದ ಮನಸ್ಸಿನಲ್ಲಿ ಎಲ್ಲಾ ವಿಚಾರವನ್ನು ಸ್ವೀಕರಿಸುವ ಬದಲು, ಮನಸ್ಸನ್ನು ಸದಾ ಶಾಂತ ಹಾಗೂ ಸಂತೋಷ ದಲ್ಲಿರಿಸಿಕೊಂಡು, ಸನ್ನಿವೇಶಗಳನ್ನು ಸ್ವೀಕರಿಸಿದರೆ ಬದುಕು ಸರಳ ಹಾಗೂ ಸುಖಮಯವಾಗಿ ಕೂಡಿರುತ್ತದೆ. ಆಗಲೇ ನಾವು ಸುಂದರವಾದ ಜೀವನದ ಅನುಭವ ಪಡೆಯಬಹುದು. ಶುಕ್ರವಾರವಾದ ಈ ಶುಭ ದಿನ ನಿಮ್ಮ ಬದುಕಿನಲ್ಲಿ ಯಾವೆಲ್ಲಾ ಬದಲಾವಣೆಗಳು ಉಂಟಾಗುತ್ತವೆ ಎನ್ನುವುದನ್ನು ತಿಳಿದುಕೊಳ್ಳುವ ಕುತೂಹಲವಿದ್ದರೆ ಈ ಮುಂದಿರುವ ವಿವರಣೆಯನ್ನು ಪರಿಶೀಲಿಸಿ. 

ಮೇಷ: 28 ಮಾರ್ಚ್ -20 ಏಪ್ರಿಲ್

ಮೇಷ: 28 ಮಾರ್ಚ್ -20 ಏಪ್ರಿಲ್

ಇಂದು ಒಂದಿಷ್ಟು ಇರಿಸುಮುರುಸನ್ನು ಎದುರಿಸಬೇಕಾಗುವ ಲಕ್ಷಣವಿದೆ. ವೈಜ್ಞಾನಿಕ ಕ್ಷೇತ್ರದಲ್ಲಿ ಅಡೆತಡೆಗಳು ಉಂಟಾಗುವ ಸಾಧ್ಯತೆಗಳಿವೆ. ಸಣ್ಣ ಪುಟ್ಟ ಹಣ್ಣುಗಳ ವ್ಯಾಪಾರ ಅಥವಾ ಚಿಲ್ಲರೆ ವ್ಯಾಪಾರಿಗಳಿಗೆ ಅಧಿಕ ಲಾಭ ಉಂಟಾಗುವುದು. ಆರ್ಥಿಕ ಸ್ಥಿತಿಯಲ್ಲಿ ಉತ್ತಮ ಸ್ಥಾನವನ್ನು ಪಡೆದುಕೊಳ್ಳುವಿರಿ. ಮನೆಯಲ್ಲಿ ನೆಮ್ಮದಿಯ ವಾತಾವರಣ ಕಾಣುವಿರಿ. ಸುಂದರವಾದ ಜೀವನದ ಅನುಭವ ಪಡೆಯುವಿರಿ. ದಿನದಿಂದ ದಿನಕ್ಕೆ ನಿಮ್ಮ ಜನಪ್ರಿಯತೆ ಹೆಚ್ಚಾಗುವುದು. ಸಮಸ್ಯೆಗಳ ನಿವಾರಣೆ ಹಾಗೂ ಉತ್ತಮ ಬದುಕಿಗಾಗಿ ಗಣೇಶನ ಆರಾಧನೆ ಮಾಡಿ.

ವೃಷಭ: ಏಪ್ರಿಲ್ 28-ಮೇ 20

ವೃಷಭ: ಏಪ್ರಿಲ್ 28-ಮೇ 20

ಸಮಾಧಾನದ ಬದುಕನ್ನು ಪೂರ್ತಿ ಪ್ರಮಾಣದಲ್ಲಿ ಕಾಣಲು ಸಾಧ್ಯವಿಲ್ಲ. ಆರೋಗ್ಯದ ವಿಚಾರದಲ್ಲಿ ಹೆಚ್ಚಿನ ಕಾಳಜಿ ವಹಿಸಿ. ಇಲ್ಲ ಸಲ್ಲದ ಆರೋಪಗಳು ನಿಮ್ಮ ಬೆನ್ನೇರುವುದು. ಪೋಲೀಸ್ ಹಾಗೂ ಸರಕಾರಿ ನೌಕರರಿಗೆ ಮೇಲಾಧಿಕಾರಿಗಳಿಂದ ಕಿರುಕುಳ ಉಂಟಾಗುವುದು. ಕಲಾವಿದರಿಗೆ ಕೆಲವು ಅವಕಾಶಗಳು ಕೈ ತಪ್ಪುವ ಸಾಧ್ಯತೆಗಳಿವೆ. ಸಮಸ್ಯೆಗಳ ನಿವಾರಣೆ ಹಾಗೂ ಸಮೃದ್ಧ ಬದುಕಿಗಾಗಿ ಗಣೇಶನ ಆರಾಧನೆ ಹಾಗೂ ದೇವಿಯ ಉಪಾಸನೆಯನ್ನು ಮಾಡಿ.

ಮಿಥುನ: ಮೇ 22 ಜೂನ್ 20

ಮಿಥುನ: ಮೇ 22 ಜೂನ್ 20

ಇಂದು ನಿಮಗೆ ಉತ್ತಮವಾದ ದಿನ. ಮನೆಯಲ್ಲಿ ನೆಮ್ಮದಿಯ ವಾತಾವರಣ ಕಾಣುವಿರಿ. ಮನಸ್ಸಿಗೆ ಸಂತೋಷ ಉಂಟಾಗುವುದು. ಚಿಕ್ಕ ಪುಟ್ಟ ವ್ಯಾಪಾರದಲ್ಲೂ ಲಾಭ ಗಳಿಸುವಿರಿ. ಪ್ರಗತಿಯುತವಾದ ಬದುಕಿಗೆ ನೀವು ನಾಂದಿಯಾಗುವಿರಿ. ಆಮದು ಮತ್ತು ರಫ್ತು ಉದ್ಯಮದಲ್ಲೂ ಅಧಿಕ ಪ್ರಮಾಣದ ಲಾಭ ಗಳಿಸುವಿರಿ. ಸುಖಮಯವಾದ ಜೀವನವನ್ನು ನೀವು ಕಾಣುವಿರಿ. ಸ್ತ್ರೀಯರು ದೃಢತೆಯನ್ನು ಪಡೆದುಕೊಳ್ಳುವರು. ಬದುಕಿನ ಸಮಸ್ಯೆ ನಿವಾರಣೆ ಹಾಗೂ ಪ್ರಗತಿಗಾಗಿ ದೇವಿಯ ಆರಾಧನೆ ಮಾಡಿ.

ಕರ್ಕ: ಜೂನ್ 22-ಜುಲೈ 22

ಕರ್ಕ: ಜೂನ್ 22-ಜುಲೈ 22

ಬಂಧುಗಳ ಆಗಮನ ಹಾಗೂ ಸಮಾಧಾನಕರ ಬದುಕನ್ನು ಪೂರ್ಣವಾಗಿ ಅನುಭವಿಸುವಿರಿ. ಅತಿಯಾದ ಸಿಹಿ ಭೋಜನ ಹಾಗೂ ಹಿರಿಯರು ಮಾಂಸಹಾರವನ್ನು ಸೇವಿಸದಿರಿ. ಹಿರಿಯರ ಮಾತನ್ನು ಧಿಕ್ಕರಿಸುವುದು ಮತ್ತು ಮಕ್ಕಳ ಮಾತನ್ನು ನಿರ್ಲಕ್ಷಿಸುವ ಗೋಜಿಗೆ ಹೋಗದಿರಿ. ಸಮಸ್ಯೆಗಳ ನಿವಾರಣೆ ಹಾಗೂ ಉತ್ತಮ ಬದುಕಿಗಾಗಿ ಗಣೇಶನ ಆರಾಧನೆ ಮಾಡಿ.

ಸಿಂಹ: ಜುಲೈ 23-ಆಗಸ್ಟ್ 23

ಸಿಂಹ: ಜುಲೈ 23-ಆಗಸ್ಟ್ 23

ನಿಮಗೆ ಶನಿಯ ಪ್ರಭಾವ ಮುಂದುವರಿದಿದೆ. ತಾಂತ್ರಿಕ ವಲಯದ ಕುಸಿತ ನಿಮ್ಮನ್ನು ಕಂಗೆಡಿಸುವುದು. ಬಂಧುಮಿತ್ರರಲ್ಲೂ ಸ್ವಲ್ಪ ಪ್ರಮಾಣದ ಕಿರಿಕಿರಿಯ ವಾತಾವರಣ ಸೃಷ್ಟಿಯಾಗುವುದು. ಒಂದಿಷ್ಟು ಮಟ್ಟದ ಅಸಮಧಾನದ ಹೊಗೆ ನಿಮ್ಮ ಮನಸ್ಸನ್ನು ಹಾಳುಮಾಡುವುದು. ಆದಷ್ಟು ಶಾಂತತೆಯಿಂದ ಇದ್ದರೆ ಜೀವನ ಸುಗಮವಾಗಿರುವುದು. ತಂದೆ ಮಕ್ಕಳ ನಡುವೆ ತೀವ್ರವಾದ ಭಿನ್ನಾಭಿಪ್ರಾಯಗಳು ಉಂಟಾಗುವುದು. ಸಮಸ್ಯೆಗಳ ನಿವಾರಣೆ ಹಾಗೂ ಪ್ರಗತಿಪರ ಬದುಕಿಗಾಗಿ ಶಿವನ ಆರಾಧನೆ ಮಾಡಿ.

ಕನ್ಯಾ: ಆಗಸ್ಟ್ 24-ಸೆಪ್ಟಂಬರ್ 23

ಕನ್ಯಾ: ಆಗಸ್ಟ್ 24-ಸೆಪ್ಟಂಬರ್ 23

ಮನೆಯಲ್ಲಿ ಶಾಂತಿ, ಮನಸ್ಸಿಗೆ ನೆಮ್ಮದಿ ದೊರೆಯುವುದು. ಅನಿರೀಕ್ಷಿತ ಸೋಲು ದೂರಾಗುವುದು. ಎಲ್ಲಾ ಬಗೆಯ ಪ್ರಗತಿ ಹಾಗೂ ಜನಪ್ರಿಯತೆ ಹೊಂದುವ ಮನಸ್ಸು ನಿಮ್ಮನ್ನು ಕಾಡುವುದು. ಅದಕ್ಕಾಗಿ ಸೂಕ್ತ ತಯಾರಿ ನೀವುಮಾಡಬೇಕು. ಆಗ ಕನಸು ನನಸಾಗುವುದು. ಸಮಸ್ಯೆಗಳ ನಿವಾರಣೆ ಹಾಗೂ ಉತ್ತಮ ಬದುಕಿಗಾಗಿ ಶಿವ ಮತ್ತು ಶಕ್ತಿಯ ಆರಾಧನೆ ಮಾಡಿ.

ತುಲಾ: ಸೆಪ್ಟಂಬರ್ 24-ಅಕ್ಟೋಬರ್ 23

ತುಲಾ: ಸೆಪ್ಟಂಬರ್ 24-ಅಕ್ಟೋಬರ್ 23

ಇಂದು ನಿಮಗೆ ಅದೃಷ್ಟಕರವಾದ ದಿನ. ಮಾಡುತ್ತಿರುವ ಕೆಲಸದಲ್ಲಿ ಜಯ ಹಾಗೂ ಉತ್ತಮ ಲಾಭ ಉಂಟಾಗುವುದು. ಹದಗೆಟ್ಟ ಆರೋಗ್ಯವೂ ಸುಧಾರಣೆ ಕಾಣುವುದು. ಸುಖಮಯವಾದ ಜೀವನವನ್ನು ನೀವು ನಡೆಸುವಿರಿ. ಯಾವುದೇ ಭಯಕ್ಕೆ ಒಳಗಾಗದಿರಿ. ಅನಿರೀಕ್ಷಿತ ಸೋಲು ದೂರಾಗುವುದು. ಹೂಡಿಕೆ ಹಣದಲ್ಲಿ ಲಾಭ ಪಡೆದುಕೊಳ್ಳುವಿರಿ. ಬ್ಯಾಂಕ್ ಉದ್ಯಮದಲ್ಲೂ ಲಾಭ ಕಾಣುವಿರಿ. ಸಮಸ್ಯೆಗಳ ನಿವಾರಣೆ ಹಾಗೂ ಪ್ರಗತಿಯುತವಾದ ಬದುಕಿಗೆ ದೇವಿ ಮತ್ತು ಲಕ್ಷ್ಮಿಯ ಆರಾಧನೆ ಮಾಡಿ.

ವೃಶ್ಚಿಕ: 24 ಅಕ್ಟೋಬರ್ -22 ನವೆಂಬರ್

ವೃಶ್ಚಿಕ: 24 ಅಕ್ಟೋಬರ್ -22 ನವೆಂಬರ್

ನಿಮ್ಮ ಆಂತರಿಕ ವಿಚಾರವನ್ನು ಯಾರೊಂದಿಗೂ ಹಂಚಿಕೊಳ್ಳದಿರಿ. ಆರ್ಥಿಕ ಸ್ಥಿತಿಯಲ್ಲಿ ಅಸಮಧಾನ ಉಂಟಾಗುವುದು. ನಿಮ್ಮ ಜನಪ್ರಿಯತೆಗೆ ಅಡೆತಡೆ ಉಂಟಾಗುವುದು. ರಾಜಕೀಯದಲ್ಲೂ ಹಿನ್ನಡೆ ಕಾಣುವಿರಿ. ಕೈಕಾರಿಕೋದ್ಯಮದಲ್ಲೂ ನಷ್ಟವನ್ನು ಅನುಭವಿಸಬೇಕಾಗುವುದು. ಸಮಸ್ಯೆಗಳ ನಿವಾರಣೆ ಹಾಗೂ ಉತ್ತಮ ಬದುಕಿಗಾಗಿ ಗಣೇಶನ ಆರಾಧನೆ ಮಾಡಿ.

ಧನು: 23 ನವೆಂಬರ್ -22 ಡಿಸೆಂಬರ್

ಧನು: 23 ನವೆಂಬರ್ -22 ಡಿಸೆಂಬರ್

ಶನಿಯ ಪ್ರಭಾವ ಇರುವುದರಿಂದ ಆರೋಗ್ಯ ಹದಗೆಡುವುದು. ವಿಪರೀತವಾದ ಆರ್ಥಿಕ ಕುಸಿತವನ್ನು ಕಾಣುವಿರಿ. ಮಾಡುತ್ತಿರುವ ಉದ್ಯಮದಲ್ಲಿ ಒಂದಿಷ್ಟು ಮಟ್ಟದ ಅಡೆತಡೆಗಳು ನಿಮ್ಮನ್ನು ಬಾಧಿಸುವುದು. ಹಿತಶತ್ರುಗಳ ಕಾಡ. ರಾಜಕೀಯ ಕ್ಷೇತ್ರದಲ್ಲಿ ಮೇಲಾಧಿಕಾರಿ ಅಥವಾ ನಾಯಕರುಗಳಿಂದ ಕಿರುಕುಳ ಉಂಟಾಗುವುದು. ಹಲವಾರು ಸಮಸ್ಯೆಗಳು ನಿಮ್ಮನ್ನು ಕಾಡುವುದು. ಸಮಸ್ಯೆಗಳ ನಿವಾರಣೆ ಹಾಗೂ ಉತ್ತಮ ಬದುಕಿಗಾಗಿ ಶಿವ ಮತ್ತು ದೇವಿಯ ಆರಾಧನೆ ಮಾಡಿ.

ಮಕರ: ಡಿಸೆಂಬರ್ 23-ಜನವರಿ 20

ಮಕರ: ಡಿಸೆಂಬರ್ 23-ಜನವರಿ 20

ಹೆಚ್ಚು ಕಾಳಜಿಯಿಂದ ಇರಿ. ಯಾರಿಗೂ ಹಣ ನೀಡುವುದು, ಪಡೆಯುವುದು ಅಥವಾ ಜಾಮೀನು ನೀಡುವ ಕೆಲಸಕ್ಕೆ ಮುಂದಾಗದಿರಿ. ಮೂರನೇ ವ್ಯಕ್ತಿಯ ವಿಚಾರಕ್ಕೆ ಮಧ್ಯಸ್ತಿಕೆ ವಹಿಸದಿರಿ. ಸಮಸ್ಯೆಗಳ ನಿವಾರಣೆ ಹಾಗೂ ಪ್ರಗತಿಯ ಬದುಕಿಗಾಗಿ ದೇವಿಯ ಉಪಾಸನೆ ಮಾಡಿ.

ಕುಂಬ: 21 ಜನವರಿ -19 ಫೆಬ್ರುವರಿ

ಕುಂಬ: 21 ಜನವರಿ -19 ಫೆಬ್ರುವರಿ

ಮನೆಯಲ್ಲಿ ನೆಮ್ಮದಿ. ಮನಸ್ಸಿಗೆ ಸಂತೋಷ ದೊರೆಯುವುದು. ಸರಕಾರಿ ಕೆಲಸದಲ್ಲಿರುವವರಿಗೆ ನೆಮ್ಮದಿ ದೊರೆಯುವುದು. ಅನಿರೀಕ್ಷಿತ ಸೋಲು ದೂರಾಗುವುದು. ಸ್ತ್ರೀಯರು ಮಾಡುತ್ತಿರುವ ಉದ್ಯೋಗದಲ್ಲಿ ಪ್ರಗತಿ ಕಾಣುವಿರಿ. ಸುಂದರ ಬದುಕು ನಿಮ್ಮದಾಗುವುದು. ಗೃಹ ಕೈಗಾರಿಕೆಯಿಂದ ಲಾಭ ಉಂಟಾಗುವುದು. ಸಮಸ್ಯೆಗಳ ನಿವಾರಣೆ ಹಾಗೂ ಸಮೃದ್ಧ ಬದುಕಿಗಾಗಿ ಗಣೇಶ ಮತ್ತು ದೇವಿಯ ಆರಾಧನೆ ಮಾಡಿ.

ಮೀನ: 20 ಫೆಬ್ರವರಿ -20 ಮಾರ್ಚ್

ಮೀನ: 20 ಫೆಬ್ರವರಿ -20 ಮಾರ್ಚ್

ಸುಖಮಯವಾದ ಜೀವನ. ನೆಮ್ಮದಿಯನ್ನು ಪಡೆದುಕೊಳ್ಳುವಿರಿ. ಅನಿರೀಕ್ಷಿತ ಸೋಲು ದೂರಾಗುವುದು. ನಿಮ್ಮ ಜನಪ್ರಿಯತೆ ಹೆಚ್ಚುವುದು. ಹೊಸ ಉದ್ಯಮ ಹಾಗೂ ವ್ಯಾಪಾರದಲ್ಲಿ ಲಾಭ ಗಳಿಸುವಿರಿ. ಚಿತ್ರೋದ್ಯಮ ಕ್ಷೇತ್ರದಲ್ಲಿ ಇರುವವರಿಗೆ ಲಾಭ ಉಂಟಾಗುವುದು. ಸಮಸ್ಯೆಗಳ ನಿವಾರಣೆ ಹಾಗೂ ಉತ್ತಮ ಬದುಕಿಗಾಗಿ ಗಣೇಶ ಮತ್ತು ದೇವಿಯ ಆರಾಧನೆ ಮಾಡಿ.

English summary

your-daily-horoscope-29-december-2017

Know what astrology and the planets have in store for you today. Choose your zodiac sign and read the details..
Story first published: Friday, December 29, 2017, 7:01 [IST]