ಸೋಮವಾರದ ದಿನ ಭವಿಷ್ಯ

Posted By: Divya Pandith
Subscribe to Boldsky
ದಿನ ಭವಿಷ್ಯ - Kannada Astrology 01-01-2018 - Your Day Today - Oneindia Kannada

ಜೀವನ ಎನ್ನುವುದು ಒಂದು ರಸ್ತೆ ಇದ್ದಂತೆ. ನಿರಾಸೆ ಎನ್ನುವುದು ರಸ್ತೆಯ ಉಬ್ಬು ತಗ್ಗುಗಳು. ನಾವು ಸಾಗುವ ದಾರಿಯಲ್ಲಿ ಉಬ್ಬು ತಗ್ಗುಗಳು ಬಂತೆಂದು ಮಾನಸಿಕವಾಗಿ ಕಿರಿಕಿರಿಗೆ ಒಳಗಾಗಿ ನಮ್ಮ ಸಂಚಾರವನ್ನು ನಿಲ್ಲಿಸಬಾರದು. ಎಂತಹದ್ದೇ ಉಬ್ಬು ತಗ್ಗುಗಳು ಎದುರಾದರೂ ನಿಧಾನವಾಗಿ ಅಥವಾ ಕಾಳಜಿಯಿಂದ ಅದನ್ನು ದಾಟಿ ಮುಂದೆ ಸಾಗಬೇಕು. ಆಗ ನಮ್ಮ ಸಂಚಾರ ಸುಗಮವಾಗುತ್ತದೆ. ನಮ್ಮ ಜೀವನದ್ದಲ್ಲೂ ಹಾಗೆಯೇ. ಯಾವುದಾದರೂ ಕಷ್ಟ, ಅಡೆತಡೆ ಅಥವಾ ಮೂರ್ಖರ ಚುಚ್ಚು ಮಾತುಗಳಿಗೆ ಕಿವಿಕೊಡುವುದು ಅಥವಾ ಅತಿಯಾದ ಚಿಂತೆಗೆ ಒಳಗಾಗಿ ಬೇಸರಗೊಳ್ಳುವ ಗೋಜಿಗೆ ಹೋಗಬಾರದು. ಸತ್ಯದ ದಾರಿಯಲ್ಲಿ, ಸಮತೋಲನದ ಮನಃಸ್ಥಿತಿಯಲ್ಲಿ ಮುಂದೆ ಸಾಗಬೇಕು.

ಆಗ ನಮ್ಮ ಜೀವನ ಸುಖ ಹಾಗೂ ಸಂತೋಷದಿಂದ ಕೂಡಿರುತ್ತದೆ. ಅಲ್ಲದೆ ಇತರ ವ್ಯಕ್ತಿಗಳಿಗೂ ನಾವು ಮಾದರಿಯಾಗುತ್ತೇವೆ. ಸೋಮವಾರವಾದ ಇಂದು ಸಾಮಾನ್ಯವಾಗಿ 2018ರ ಮೊದಲ ದಿನ. ಬದುಕಿನಲ್ಲಿ ಸುಂದರ ಕನಸು ಹಾಗೂ ಆತ್ಮವಿಶ್ವಾಸವನ್ನು ತುಂಬಿಕೊಂಡು ಕೆಲಸವನ್ನು ಆರಂಭಿಸಿ. ನಿಮ್ಮ ಈ ಸುಂದರ ಬದುಕಿಗೆ ಗ್ರಹಗತಿಗಳ ಸಹಕಾರ ಎಷ್ಟರ ಮಟ್ಟಿಗೆ ಇದೆ ಎನ್ನುವುದನ್ನು ನೀವು ತಿಳಿದು ಕೊಳ್ಳಬೇಕೆಂದುಕೊಂಡಿದ್ದರೆ, ಬೋಲ್ಡ್ ಸ್ಕೈ ನಿಮಗಾಗಿ ನೀಡಿರುವ ಈ ಮುಂದಿನ ರಾಶಿ ಭವಿಷ್ಯವನ್ನು ಪರಿಶೀಲಿಸಿ....

ಮೇಷ: 31 ಮಾರ್ಚ್ -20 ಏಪ್ರಿಲ್

ಮೇಷ: 31 ಮಾರ್ಚ್ -20 ಏಪ್ರಿಲ್

ಸುಗಮವಾದ ವ್ಯವಸ್ಥೆಯನ್ನು ಪಡೆದುಕೊಳ್ಳುವಿರಿ. ಮನೆಯಲ್ಲೂ ನೆಮ್ಮದಿಯನ್ನು ನೀವು ಕಾಣುವಿರಿ. ನಿಮ್ಮ ನಿರ್ದಿಷ್ಟ ಗುರಿ ತಲುಪಲು ಭಗವಂತನ ಆಶೀರ್ವಾದ ದೊರೆಯುವುದು. ಶಿವನ ಉಪಾಸನೆ ಬಹಳ ಪ್ರಮುಖವಾದದ್ದು. ಯಾವುದೇ ಕಾರಣಕ್ಕೂ ಸಾಲವನ್ನು ಪಡೆಯುವುದು ಅಥವಾ ಕೊಡುವ ಕೆಲಸಕ್ಕೆ ಮುಂದಾಗದಿರಿ. ಮೂರನೆ ವ್ಯಕ್ತಿಯ ವಿಚಾರದಲ್ಲಿ ನೀವು ಮೂಗು ತೂರಿಸದಿರಿ. ಮಕ್ಕಳಿಂದ ಶುಭ ವಾರ್ತೆಯನ್ನು ಕೇಳುವ ಲಕ್ಷಣವಿದೆ. ನೀವು ಕೆಲಸ ಮಾಡುವ ಕ್ಷೇತ್ರದಲ್ಲಿ ವಿಶೇಷವಾದ ಆದರ, ಸತ್ಕಾರ ಹಾಗೂ ಮನ್ನಣೆ ದೊರೆಯುವ ಸಾಧ್ಯತೆಗಳಿವೆ. ಸಮಸ್ಯೆಗಳ ನಿವಾರಣೆ ಹಾಗೂ ಪ್ರಗತಿಪರ ಬದುಕಿಗಾಗಿ ಶಿವನ ಆರಾಧನೆ ಮಾಡಿ.

ವೃಷಭ: ಏಪ್ರಿಲ್-31-ಮೇ 20

ವೃಷಭ: ಏಪ್ರಿಲ್-31-ಮೇ 20

ಸಮಾಧಾನದ ಬದುಕು ಪೂರ್ಣ ಪ್ರಮಾಣದಲ್ಲಿ ಲಭ್ಯವಾಗದು. ನೀವು ಕೈಗೊಂಡ ಕಾರ್ಯದಲ್ಲಿ ಅಡೆತಡೆ ಉಂಟಾಗುವುದು. ನಿಶ್ಚಯಿಸಿಕೊಂಡ ನಿರ್ದಿಷ್ಟ ಗುರಿಯನ್ನು ಲತುಪಲು ಬಗವಂತನ ಆಶೀರ್ವಾದವೂ ಅಲಭ್ಯವಾಗುವುದು. ಅನೇಕ ದಿನಗಳಿಮದ ತೀರ್ಮಾನಿಸಿಕೊಂಡ ವಿಚಾರದ ಕುರಿತು ಎಡಬಿಡದೆ ಪ್ರಯತ್ನ ಮಾಡಿದರೆ, ಮಧ್ಯಾಹ್ನದ ನಂತರದ ಸಮಯದಲ್ಲಿ ಜಯವನ್ನು ಗಳಿಸುವ ಸಾಧ್ಯತೆಗಳಿವೆ. ವಿದ್ಯಾರ್ಥಿಗಳಿಗೂ ಅಡೆತಡೆ. ಉನ್ನತ ವ್ಯಾಸಂಗದ ಕನಸು ಭಗ್ನವಾಗುವ ಸಾಧ್ಯತೆಗಳಿವೆ. ಸ್ತ್ರೀಯರನ್ನು ಒಳಗೊಂಡಂತೆ ಸಮಸ್ಯೆಗಳ ನಿವಾರಣೆ ಹಾಗೂ ಸಂತೋಷಕರ ಜೀವನಕ್ಕೆ ಶಿವನ ಆರಾಧನೆ ಮಾಡಿ. ಶಿವನ ಶ್ಲೋಕವನ್ನು ಜಪಿಸುತ್ತಾ ಬಿಲ್ವಾರ್ಚನೆ ಮಾಡಿದರೆ ಜೀವನದಲ್ಲಿ ಸುಖ ಪ್ರಾಪ್ತಿಯಾಗುವುದು.

ಮಿಥುನ: ಮೇ 31 ಜೂನ್ 20

ಮಿಥುನ: ಮೇ 31 ಜೂನ್ 20

ಇಂದು ನಿಮಗೆ ಶುಭ ದಿನ. ಮನಸ್ಸಿಗೆ ಸಮಾಧಾನ ಹಾಗೂ ಮನೆಯಲ್ಲಿ ನೆಮ್ಮದಿಯ ವಾತಾವರಣವನ್ನು ಕಾಣುವಿರಿ. ಕೆಲವು ಚಿಚಾರದಲ್ಲಿ ನೀವು ನಿರ್ದಿಷ್ಟ ಗುರಿಯನ್ನು ತಲುಪುವಿರಿ. ಖಾಸಗಿ ಮತ್ತು ಸರ್ಕಾರಿ ಉದ್ಯಮದಲ್ಲಿರುವವರಿಗೆ ಲಾಭ ದೊರೆಯುವುದು. ಟೇಲರಿಂಗ್ ಕೆಲಸ ನಿರ್ವಹಿಸುತ್ತಿರುವವರಿಗೂ ಉತ್ತಮ ಲಾಭ ಉಂಟಾಗುವುದು. ಬಟ್ಟೆ ವ್ಯಾಪಾರಿಗಳಿಗೆ ಸುಗಮವಾದಂತಹ ದಿನವಾಗುವುದು. ನಿರ್ದಿಷ್ಟ ಗುರಿ ತಲುಪಲು ಭಗವಂತನ ಕೃಪೆ ದೊರೆಯುವುದು. ಸಮಸ್ಯೆಗಳ ನಿವಾರಣೆ ಹಾಗೂ ಉತ್ತಮ ಬದುಕಿಗಾಗಿ ಶಿವನ ಆರಾಧನೆ ಮಾಡಿ.

ಕರ್ಕ: ಜೂನ್ 31-ಜುಲೈ 22

ಕರ್ಕ: ಜೂನ್ 31-ಜುಲೈ 22

ಇಂದು ನೀವು ಸಮಾಧಾನದ ಬದುಕನ್ನು ಕಣುವಿರಿ. ಮನೆಯಲ್ಲಿ ನೆಮ್ಮದಿ ಸಿಗುವುದು. ಮಾಡುತ್ತಿರುವ ಉದ್ಯೋಗದಲ್ಲಿ ನೆಮ್ಮದಿ ಹಾಗೂ ಸಮಾಧಾನವನ್ನು ಪಡೆದುಕೊಳ್ಳುವಿರಿ. ಅನೇಕದಿನಗಳಿಂದ ಅಂದು ಕೊಂಡ ಕೆಲಸವು ದೇವರ ಅನುಗ್ರಹದಿಂದ ಸುಗಮವಾಗಿ ಸಾಗುವುದು. ಅನೇಕ ದಿನಗಳಿಂದ ಮನೆಯಲ್ಲಿ ನಿರ್ಧರಿಸಿದ ಹಾಗೆ ಆಸ್ತಿಯನ್ನು ಖರೀದಿಸಬಹುದು. ಅಲ್ಲದೆ ಆಸ್ತಿ ಖರೀದಿಯೊಂದಿಗೆ ಲಾಭ ಉಂಟಾಗುವ ಸಾಧ್ಯತೆಗಳಿವೆ. ಯಾವುದೇ ಚಿಂತೆಗೆ ಒಳಗಾಗುವ ಅಗತ್ಯವಿಲ್ಲ. ಉನ್ನತ ವ್ಯಾಸಂಗಕ್ಕೆ ಅನುಕೂಲವಾಗುವುದು. ಇಂದು ಎಲ್ಲರಿಗೂ ಶುಭ ಉಂಟಾಗುವುದು. ಸಮಸ್ಯೆಗಳ ನಿವಾರಣೆ ಹಾಗೂ ಇನ್ನಷ್ಟು ಸಮೃದ್ಧಿಗಾಗಿ ಶಿವನ ಆರಾಧನೆ ಮಾಡಿ.

ಸಿಂಹ: ಜುಲೈ 31-ಆಗಸ್ಟ್ 23

ಸಿಂಹ: ಜುಲೈ 31-ಆಗಸ್ಟ್ 23

ಅನೇಕ ಬಗೆಯ ಮಾನಸಿಕ ಕಿರಿಕಿರಿಯನ್ನು ಎದುರಿಸುವಿರಿ. ಅನೇಕ ದಿನಗಳಿಂದ ತೀರ್ಮಾನಿಸಿದ ಕೆಲಸ ಕಾರ್ಯಗಳಲ್ಲಿ ಉಂಟಾಗುವ ಅಡೆತಡೆಗಳು ಒಂದಿಷ್ಟು ಮಟ್ಟದ ಅಸಮಧಾನವನ್ನುಂಟು ಮಾಡುವುದು. ವಿಪರೀತವಾದ ಆರೋಗ್ಯ ಸಮಸ್ಯೆಯು ನಿಮ್ಮನ್ನು ಹೈರಾಣ ಗೊಳಿಸುವ ಸಾಧ್ಯತೆಗಳಿವೆ. ಆಸ್ಪತ್ರೆಗೆ ಹೋಗಲೇ ಬೇಕಾದಂತಹ ಪರಿಸ್ಥಿತಿಯನ್ನು ಉಂಟುಮಾಡುವುದು. ಮಧುಮೇಹ ಮತ್ತು ಬಿಪಿ ನಿಮ್ಮನ್ನು ಬಾಧಿಸಬಹುದು. ಆದಷ್ಟು ಕಾಳಜಿಯಿಂದ ಇರುವುದು ಉತ್ತಮ. ಕಳ್ಳರ ಭಯ ಇರುವುದರಿಂದ ಸ್ತ್ರೀಯರು ಜನನಿಬಿಡ ಪ್ರದೇಶಗಳಿಗೆ ಹೋಗದಿರುವುದು ಉತ್ತಮ. ಚಿತ್ರೋದ್ಯಮದಲ್ಲಿ ಪ್ರಗತಿಯನ್ನು ಕಾಣುವಿರಿ. ಪ್ರಗತಿಪರ ಬದುಕು ಹಾಗೂ ಸಮಸ್ಯೆಗಳ ನಿವಾರಣೆಗಾಗಿ ಶಿವನ ಆರಾಧನೆ ಮಾಡಿ.

ಕನ್ಯಾ: ಆಗಸ್ಟ್ 31-ಸೆಪ್ಟಂಬರ್ 23

ಕನ್ಯಾ: ಆಗಸ್ಟ್ 31-ಸೆಪ್ಟಂಬರ್ 23

ಇಂದು ಸಮಾಧಾನದ ಬದುಕನ್ನು ಕಾಣುವಿರಿ. ಮನೆಯಲ್ಲಿಯೂ ಸಮಾಧಾನವನ್ನೇ ಪಡೆದುಕೊಳ್ಳುವ ಲಕ್ಷಣವಿದೆ. ಮಕ್ಕಳಿಂದ ಶುಭ ವಾರ್ತೆಯನ್ನು ಕೇಳುವಿರಿ. ನಿರ್ದಿಷ್ಟ ಗುರಿಯನ್ನು ತಲುಪಲು ಗುರಿಯು ಪ್ರಮುಖ ಪಾತ್ರವನ್ನು ವಹಿಸುತ್ತದೆ. ಉತ್ತಮ ಗುರಿಯನ್ನು ನೀವು ಹೊಂದಿದ್ದರೆ ಗುರುವಿನ ಆಶೀರ್ವಾದ ದೊರೆಯುವುದು. ಗುರುವಿನ ಆರಾಧನೆಯನ್ನು ಮಾಡಿ. ಸಹಪಾಠಿಗಳ ನಡುವೆ ಕಲಹ ಉಂಟಾಗುವ ಸಾಧ್ಯತೆಗಳಿವೆ. ಆರ್ಥಿಕ ವಲಯದಲ್ಲಿ ಏರು ಪೇರು ಉಂಟಾಗುವುದು. ಧಾರ್ಮಿಕ ಚಿಂತಕರಿಗೆ ಒಂದಿಷ್ಟು ಅಪಮಾನ ಉಂಟಾಗುವ ಸಾಧ್ಯತೆಗಳಿವೆ. ಸಮಸ್ಯೆಗಳ ನಿವಾರಣೆ ಹಾಗೂ ಉತ್ತಮ ಬದುಕಿಗಾಗಿ ಶಿವನ ಆರಾಧನೆ ಮಾಡಿ.

ತುಲಾ: ಸೆಪ್ಟಂಬರ್ 31-ಅಕ್ಟೋಬರ್ 23

ತುಲಾ: ಸೆಪ್ಟಂಬರ್ 31-ಅಕ್ಟೋಬರ್ 23

ಸಮಾಧಾನದ ಬದುಕಿಗೆ ನಾಂದಿಯಾಗುವುದು. ನಿಮ್ಮ ನಿರ್ದಿಷ್ಟ ಗುರಿಯನ್ನು ತಲುಪುವಿರಿ. ಅನೇಕ ದಿನಗಳಿಂದ ತೀರ್ಮಾನಿಸಿದ ಕೆಲಸ ಕಾರ್ಯಗಳಲ್ಲಿ ಅನುಕೂಲ ಹಾಗೂ ಲಾಭವನ್ನೇ ಪಡೆದುಕೊಳ್ಳುವಿರಿ. ಸಣ್ಣ ಪುಟ್ಟ ದಿನಗೂಲಿ ಮಾಡುವವರು ಸಹ ನೆಮ್ಮದಿಯನ್ನು ಪಡೆದುಕೊಳ್ಳುವ ಸಧ್ಯತೆಗಳಿವೆ. ನಿಮಗಿಂದು ಶುಭ ದಿನವಾದ್ದರಿಂದ ಸಂಜೆಯೊಳಗೆ ಉತ್ತಮವಾದ ಸುದ್ದಿಯನ್ನೇ ಕೇಳುವಿರಿ. ಸಮಸ್ಯೆಗಳ ನಿವಾರಣೆ ಹಾಗೂ ಸಮೃದ್ಧ ಬದುಕಿಗಾಗಿ ಶಿವನ ಆರಾಧನೆ ಮಾಡಿ.

ವೃಶ್ಚಿಕ: 31 ಅಕ್ಟೋಬರ್ -22 ನವೆಂಬರ್

ವೃಶ್ಚಿಕ: 31 ಅಕ್ಟೋಬರ್ -22 ನವೆಂಬರ್

ಇಂದು ನೀವು ಮಾನಸಿಕ ಕಿರಿಕಿರಿಯನ್ನು ಎದುರಿಸಬೇಕಾದ ಲಕ್ಷಣಗಳಿವೆ. ದಿನ ದಿಂದ ದಿನಕ್ಕೆ ಹೆಚ್ಚುತ್ತಿರುವ ಕೀರ್ತಿಯು ಇದೀಗ ಕ್ಷೀಣತೆಯನ್ನು ಅನುಭವಿಸುವ ಸಾಧ್ಯತೆಗಳಿವೆ. ಹಿತ ಶತ್ರುಗಳು ನಿಮ್ಮ ಬೆನ್ನ ಹಿಂದೆಯೇ ಇರುತ್ತಾರೆ ಎನ್ನುವುದನ್ನು ಮರೆಯದಿರಿ. ಉದ್ಯಮದಲ್ಲಿ ಯಶಸ್ಸನ್ನು ಸಾಧಿüಸುವಿರಿ. ಕಲಾವಿದರಿಗೆ ಹೊಸ ಹೊಸ ಅವಕಾಶಗಳು ಲಭ್ಯವಾಗುವುದು. ಕೆಲವು ರೀತಿಯ ಸಮಾಧಾನ ಹಾಗೂ ಕೆಲವು ವಿಚಾರದಲ್ಲಿ ಅಸಮಧಾನ ಮುಂದುವರಿಯುವುದು. ಸಮಸ್ಯೆಗಳ ನಿವಾರಣೆ ಹಾಗೂ ಸಮೃದ್ಧ ಬದುಕಿಗಾಗಿ ಶಿವನ ಆರಾಧನೆ ಮಾಡಿ.

ಧನು: 31 ನವೆಂಬರ್ -22 ಡಿಸೆಂಬರ್

ಧನು: 31 ನವೆಂಬರ್ -22 ಡಿಸೆಂಬರ್

ಜನ್ಮ ರಾಶಿಯ ಶನಿಯ ಪ್ರಭಾವ ಇರುವುದರಿಂದ ಮಾನಸಿಕ ಕಿರಿಕಿರಿ ಮುಂದುವರಿಯುವುದು. ಆರ್ಥಿಕವಾಗಿರುವ ಏರು ಪೇರು ನಿಮ್ಮನ್ನು ಹೈರಾಣ ಗೊಳಿಸುವುದು. ನಿಮ್ಮ ಹಿತ ಶತ್ರುಗಳಿಂದ ತೊಂದರೆ ಉಂಟಾಗುವುದು. ಅಲ್ಲದೆ ಮೇಲಾಧಿಕಾರಿಗಳೂ ಸಹ ಕಿರಿಕಿರಿ ಉಂಟುಮಾಡುವ ಸಾಧ್ಯತೆಗಳಿವೆ. ರಾಜಕೀಯ ಕ್ಷೇತ್ರದಲ್ಲಿರುವವರಿಗೆ ಹಿನ್ನೆಡೆ ಉಂಟಾಗುವುದು. ಸರ್ಕಾರಿ ಕೆಲಸದಲ್ಲಿ ಇರುವ ಸಚಿವರಿಗೂ ಸಹ ಕೆಲವು ಅವಮಾನ ಅಪವಾದಗಳು ಬೆನ್ನೇರುವ ಸಾಧ್ಯತೆಗಳಿವೆ. ಸಮಸ್ಯೆಗಳ ನಿವಾರಣೆ ಹಾಗೂ ಪ್ರಗತಿಪರ ಬದುಕಿಗಾಗಿ ಶಿವನ ಆರಾಧನೆ ಮಾಡಿ.

ಮಕರ: ಡಿಸೆಂಬರ್ 31-ಜನವರಿ 20

ಮಕರ: ಡಿಸೆಂಬರ್ 31-ಜನವರಿ 20

ಸುಂದರವಾದ ಬದುಕಿಗೆ ಕೆಲವು ಅಡೆತಡೆಗಳು ಉಂಟಾಗಬಹುದು. ವಿಪರೀತವಾದ ಆಯಾಸದಿಂದ ಹಾಗೂ ಇಲ್ಲ ಸಲ್ಲದ ಆರೋಪಗಳು ನಿಮ್ಮ ಮನಸ್ಸನ್ನು ಘಾಸಿಗೊಳಿಸುವ ಸಾಧ್ಯತೆಗಳಿವೆ. ಪತ್ರಿಕೋದ್ಯಮದಲ್ಲಿ ಇರುವವರಿಗೆ ಉತ್ತಮ ಹಾಗೂ ಅನುಕೂಲಕರವಾದ ದಿನ. ವೈಜ್ಞಾನಿಕ ಕ್ಷೇತ್ರದಲ್ಲಿ ಸಾಮಾನ್ಯವಾದ ಮುನ್ನಡೆ ಕಾಣುವಿರಿ. ಸಮಸ್ಯೆಗಳ ನಿವಾರಣೆ ಹಾಗೂ ಉತ್ತಮ ಬದುಕಿಗಾಗಿ ಶಿವನ ಆರಾದನೆ ಮಾಡಿ.

ಕುಂಬ: 31 ಜನವರಿ -19 ಫೆಬ್ರುವರಿ

ಕುಂಬ: 31 ಜನವರಿ -19 ಫೆಬ್ರುವರಿ

ಸಮಾಧಾನಕರವಾದ ಬದುಕನ್ನು ಕಾಣುವಿರಿ. ಮನೆಯಲ್ಲೂ ನೆಮ್ಮದಿಯ ವಾತಾವರಣ ನೆಲೆಸುವುದು. ಅನಿರೀಕ್ಷಿತ ಮಟ್ಟದ ಸೋಲು ಸಹ ದೂರಾಗುವುದು. ಪತ್ರಿಕಾ ವಲಯದಲ್ಲಿ ಲಾಭಾಂಶವನ್ನು ಪಡೆದುಕೊಳ್ಳುವಿರಿ. ಕೆಲವರಿಗೆ ಹೊಸ ಅವಕಾಶಗಳು ಲಭಿಸುವುದು. ನಿಮ್ಮ ಮಾನಸಿಕ ನೋವುಗಳು ದೂರವಾಗುವದು. ಆದಷ್ಟು ಬಿಳಿ ಬಣ್ಣದ ಬಟ್ಟೆಯನ್ನು ಧರಿಸಿ. ಪ್ರಗತಿಪರ ಬದುಕು ಮತ್ತು ಸಮಸ್ಯೆಗಳ ನಿವಾರಣೆಗೆ ಶಿವನ ಆರಾಧನೆ ಮಾಡಿ.

ಮೀನ: 31 ಫೆಬ್ರವರಿ -20 ಮಾರ್ಚ್

ಮೀನ: 31 ಫೆಬ್ರವರಿ -20 ಮಾರ್ಚ್

ಸುಂದರವಾದ ಜೀವನಕ್ಕೆ ನಾಂದಿಯಾಗುವುದು. ಮನೆಯಲ್ಲೂ ನೆಮ್ಮದಿಯನ್ನು ಪಡೆದುಕೊಳ್ಳುವಿರಿ. ನಿರ್ದಿಷ್ಟ ಗುರಿಯನ್ನು ತಲುಪಲು ಗುರುವಿನ ಅನುಗ್ರಹ ಪಡೆದುಕೊಳ್ಳುವಿರಿ. ಕೃಷಿ ಕ್ಷೇತ್ರದಲ್ಲಿ ಕೆಲಸ ಮಾಡುವವರಿಗೆ ಲಾಭ ಹಾಗೂ ನೆಮ್ಮದಿ ದೊರೆಯುವುದು. ಅನೇಕ ದಿನಗಳಿಂದ ತೀರ್ಮಾನಿಸಿದ ತೀರ್ಮಾನಗಳಿಂದ ಲಾಭವನ್ನು ಪಡೆದುಕೊಳ್ಳುವಿರಿ. ಅನೇಕರು ಹೊಸ ಆಸ್ತಿಯನ್ನು ಖರೀದಿಸುವ ಸಾಧ್ಯತೆಗಳಿವೆ. ಸಮಸ್ಯೆಗಳ ನಿವಾರಣೆ ಹಾಗೂ ಪ್ರಗತಿಪರ ಬದುಕಿಗಾಗಿ ಶಿವನ ಆರಾಧನೆ ಮಾಡಿ.

English summary

your-daily-horoscope-1-January-2018

Know what astrology and the planets have in store for you today. Choose your zodiac sign and read the details..
Story first published: Monday, January 1, 2018, 7:02 [IST]