For Quick Alerts
ALLOW NOTIFICATIONS  
For Daily Alerts

ಆಕೆಯ ದೇಹದಿಂದ ಬೆವರುವಾಗ ರಕ್ತ ಬರುವುದು!

By Deepu
|

ಮಾನವದೇಹವನ್ನು ಪ್ರತಿದಿನ ಅಭ್ಯಸಿಸುವ ವೈದ್ಯರಿಗೂ ಎಲ್ಲಾ ತಿಳಿದಿದೆ ಎಂದು ಹೇಳಲಾಗದು. ಏಕೆಂದರೆ ನಮ್ಮ ದೇಹವೊಂದು ವಿಸ್ಮಯಗಳ ಆಗರವಾಗಿದ್ದು ಪ್ರತಿದಿನವೂ ವೈದ್ಯಲೋಕರಿಂದ ಹೊಸ ಹೊಸ ವಿಷಯಗಳು ಹೊರಬರುತ್ತಲೇ ಇರುತ್ತವೆ. ಪ್ರತಿ ಅಂಗಕ್ಕೂ ತನ್ನದೇ ಆದ ಸಾಮರ್ಥ್ಯವಿದ್ದು ಇದರಲ್ಲಿ ಕೆಲವು ಮಾತ್ರ ನಮಗೆ ಇದುವರೆಗೆ ತಿಳಿದಿದೆ. ಇದರ ಇತರ ಸಾಮರ್ಥ್ಯಗಳ ಬಗ್ಗೆ ಅರಿವಾಗುತ್ತಾ ಹೋದಂತೆ ಅಚ್ಚರಿ ಮೂಡುತ್ತಲೇ ಹೋಗುತ್ತದೆ. ಉದಾಹರಣೆಗೆ ಯಕೃತ್, ನಮ್ಮ ದೇಹದ ಅಂಗಗಳಲ್ಲಿ ಕತ್ತರಿಸಿದರೆ ಬೆಳೆಯುವ ಸಾಮರ್ಥ್ಯ ಹೊಂದಿರುವ ಅಂಗವೆಂದರೆ ಇದೊಂದೇ.

ಸಾಮಾನ್ಯ ಜನರು ಒಟ್ಟಾರೆ ಆರೋಗ್ಯವನ್ನು ಮಾತ್ರ ಪರಿಗಣಿಸುತ್ತಾರೆ. ಯಾವುದಾದರೊಂದು ಅಂಗದಲ್ಲಿ ನೋವಾದರೆ ಮಾತ್ರ "ಈ ನೋವನ್ನು ಬಿಟ್ಟು ಬೇರೆ ಯಾವುದನ್ನೂ ಬೇಕಾದರೂ ಸಹಿಸಬಲ್ಲೆ" ಎಂಬ ಮಾತನಾಡುತ್ತಾರೆ. ಆದರೆ ಪ್ರತಿ ಅಂಗದ ಬಗ್ಗೆ ಸೂಕ್ಷ್ಮವಾಗಿ ಅವಲೋಕಿಸಿದಾಗ ಇವು ಎಷ್ಟು ಜಟಿಲವಾಗಿ ಒಂದಕ್ಕೊಂದು ಬೆಸೆದುಕೊಂಡಿವೆ ಮತ್ತು ಅವಲಂಬಿತವಾಗಿವೆ ಎಂದು ಅಚ್ಚರಿಗೊಳಗಾಗುತ್ತೇವೆ.

ಹೌದು, ನಿಸರ್ಗದ ಸೃಷ್ಟಿಯಲ್ಲಿ ಅತಿ ಕ್ಲಿಷ್ಟಕರ, ಸಂಕೀರ್ಣವಾದ ಸೃಷ್ಟಿ ಎಂದರೆ ಮಾನವ ದೇಹ. ಇದರ ಅತ್ಯಂತ ದೊಡ್ಡ ಪವಾಡವೆಂದರೆ ಗುಣಪಡಿಸಿಕೊಳ್ಳುವ ಶಕ್ತಿ. ಮಾನವನಿರ್ಮಿತ ವಸ್ತುಗಳಲ್ಲಿ ಯಾವುದೇ ತೊಂದರೆಯಾದರೆ ಸೂಚನೆ ನೀಡುವಂತೆ ಅಥವಾ ಸ್ಥಗಿತಗೊಳ್ಳುವಂತೆ ನಿರ್ಮಿಸಿರಲಾಗಿರುತ್ತದೆ. ಸಾಮಾನ್ಯವಾಗಿ ನಮಗೆಲ್ಲಾ ಗೊತ್ತಿರುವ ಹಾಗೆ ದೇಹವು ತುಂಬಾ ಕಠಿಣ ಕೆಲಸ ಮಾಡಿದಾಗ ಅಥವಾ ಬಿಸಿಲಿಗೆ ಹೋದಾಗ ಸಹಜವಾಗಿ ದೇಹದಿಂದ ಬೆವರು ಬರುವುದು.

ಅದೇ ಬೆವರಿನ ಬದಲಿಗೆ ರಕ್ತ ಬಂದರೆ ಅದನ್ನು ಊಹಿಸಲು ತುಂಬಾ ಕಷ್ಟವಾಗುತ್ತದೆ. ಆದರೆ ಇಂತಹ ವೈದ್ಯಕೀಯ ಸ್ಥಿತಿಯಲ್ಲೂ ಕೆಲವೊಂದು ಜನರು ಇದ್ದಾರೆ. ಇವರಿಗೆ ಬೆವರುವಾಗ ಮೈಯಿಂದ ರಕ್ತ ಬರುತ್ತದೆ. ಇದು ತುಂಬಾ ವಿಚಿತ್ರ ಹಾಗೂ ಭಯಾನಕವೆಂದು ನಿಮಗೆ ಅನಿಸಬಹುದು. ಆದರೆ ಇದು ನಿಜ. ಇತ್ತೀಚೆಗೆ ಮಹಿಳೆಯೊಬ್ಬರ ದೇಹದಿಂದ ಬೆವರು ಬರುವ ಬದಲು ರಕ್ತ ಬರುತ್ತಿದೆಯೆಂತೆ. ಈ ಪರಿಸ್ಥಿತಿಯಿಂದಾಗಿ ಮಹಿಳೆಯು ಸಾಮಾಜಿಕವಾಗಿ ಬೆರೆಯಲು ಹಿಂಜರಿಯುತ್ತಿದ್ದಾಳೆ ಮತ್ತು ಏಕಾಂಗಿಯಾಗಿಯೇ ಇರಲು ಬಯಸುತ್ತಿದ್ದಾಳೆ. ಈ ವಿಚಿತ್ರ ಪರಿಸ್ಥಿತಿ ಇರುವ ಮಹಿಳೆ ಬಗ್ಗೆ ತಿಳಿದುಕೊಳ್ಳಿ....

ಮೂರು ವರ್ಷದಿಂದ ಇಂತಹ ಪರಿಸ್ಥಿತಿ!

ಮೂರು ವರ್ಷದಿಂದ ಇಂತಹ ಪರಿಸ್ಥಿತಿ!

21 ವರ್ಷದ ಮಹಿಳೆಯ ಮುಖ ಮತ್ತು ಅಂಗೈಯಿಂದ ಬೆವರಿಗೆ ಬದಲು ರಕ್ತ ಬರುವ ಕಾರಣ ಆಕೆಯನ್ನು ಇಲ್ಲಿನ ಆಸ್ಪತ್ರೆಗೆ ದಾಖಲಿಸಲಾಗಿದೆ. ಮಹಿಳೆಯ ಈ ಪರಿಸ್ಥಿತಿ ನೋಡಿ ವೈದ್ಯರು ಕೂಡ ತುಂಬಾ ಗೊಂದಲಕ್ಕೆ ಒಳಗಾದರು. ವೈದ್ಯರು ಆಕೆಯ ಚರ್ಮದಲ್ಲಿ ಯಾವುದೇ ಸಮಸ್ಯೆಯಿದೆಯಾ ಎಂದು ಪರೀಕ್ಷಿಸಿದರು.

ಆಕೆಯ ಸ್ಥಿತಿ

ಆಕೆಯ ಸ್ಥಿತಿ

ಈ ಮಹಿಳೆಯ ಪರಿಸ್ಥಿತಿಯನ್ನು ವೈದ್ಯಕೀಯ ಭಾಷೆಯಲ್ಲಿ `ಹೆಮಾಟೊಹಿಡ್ರೊಸಿಸ್' ಎಂದು ಕರೆಯಲಾಗುತ್ತದೆ. ಕೋಟಿಗೊಬ್ಬರಿಗೆ ಇಂತಹ ಅಪರೂಪದ ಕಾಯಿಲೆ ಬರುವುದು. ಆಕೆಗೆ ಈಗ ಬೀಟಾ ಬ್ಲಾಕರ್ ಔಷಧಿಗಳನ್ನು ನೀಡಲಾಗುತ್ತಿದೆ. ಇದರಿಂದ ಆಕೆಯ ಸ್ಥಿತಿ ಸುಧಾರಿಸುತ್ತಿದೆ. ಆದರೆ ಇನ್ನೊಂದು ಕಡೆಯಲ್ಲಿ ಇದಕ್ಕೆ ಸಂಪೂರ್ಣ ಗುಣಪಡಿಸುವ ಚಿಕಿತ್ಸೆ ಎನ್ನುವುದು ಇಲ್ಲ.

ವೈದ್ಯರು ಹೇಳುವಂತೆ…..

ವೈದ್ಯರು ಹೇಳುವಂತೆ…..

ರಕ್ತಸ್ರಾವವಾಗುವುದಕ್ಕೆ ಯಾವುದೇ ಒಂದು ನಿರ್ದಿಷ್ಟ ಕಾರಣ ಬೇಕೆಂದಿಲ್ಲ. ಯಾಕೆಂದರೆ ಆಕೆ ಮಲಗಿರುವಾಗ ಅಥವಾ ಯಾವುದೇ ದೈಹಿಕ ಚಟುವಟಿಕೆಯಲ್ಲಿ ತೊಡಗಿಕೊಂಡಿರುವಾಗ ರಕ್ತ ಬರಬಹುದು. ಆಕೆ ತುಂಬಾ ಒತ್ತಡಕ್ಕೆ ಒಳಗಾದಾಗ ರಕ್ತ ಬರುತ್ತದೆ ಎಂದು ಹೇಳಿದ್ದಾಳೆಂದು ವೈದ್ಯರು ವಿವರಿಸಿದ್ದಾರೆ.

ಇದು ಸುಳ್ಳುವದಂತಿಯಲ್ಲ

ಇದು ಸುಳ್ಳುವದಂತಿಯಲ್ಲ

ಆಕೆ ತನ್ನ ಪರಿಸ್ಥಿತಿ ಬಗ್ಗೆ ಸುಳ್ಳು ಹೇಳುತ್ತಿರಲು ಸಾಧ್ಯವಿಲ್ಲ. ಯಾಕೆಂದರೆ ಒಂದು ಕೋಟಿ ಜನರಲ್ಲಿ ಒಬ್ಬರಿಗೆ ಇಂತಹ ಪರಿಸ್ಥಿತಿ ಬರಬಹುದು. ಆಕೆಯ ರಕ್ತದ ಕಣಗಳು ಮತ್ತು ರಕ್ತ ಹೆಪ್ಪುಗಟ್ಟುವುದು ಸರಿಯಾಗಿಯೇ ಇದೆ ಎಂದು ಪರೀಕ್ಷೆಗಳಿಂದ ತಿಳಿದುಬಂದಿದೆ. ಚರ್ಮದಲ್ಲಿ ಕೂಡ ಯಾವುದೇ ಅಸಾಮಾನ್ಯವೆನ್ನುವ ಸ್ಥಿತಿ ಕಂಡುಬಂದಿಲ್ಲ. ರಕ್ತ ಹೆಪ್ಪುಗಟ್ಟುವ ಅಥವಾ ಬೇರೆ ಯಾವುದೇ ಸಮಸ್ಯೆಯಿಂದ ಆಕೆ ಬಳಲುತ್ತಿಲ್ಲ. ಇದೇ ರೀತಿ ಇನ್ನೊಬ್ಬಳು ಮಹಿಳೆ ಕೂಡ ಸಮಸ್ಯೆ ಎದುರಿಸಿರುವುದನ್ನು ಕೇಳಿದ್ದೇವೆ. ಇದು ತುಂಬಾ ವಿಚಿತ್ರವಲ್ಲವೇ? ಈ ಪರಿಸ್ಥಿತಿ ಬಗ್ಗೆ ನಿಮ್ಮ ಅಭಿಪ್ರಾಯವೇನು? ನಿಮ್ಮ ಅನಿಸಿಕೆಗಳನ್ನು ಕೆಮೆಂಟ್ ಬಾಕ್ಸ್ ಗೆ ಹಾಕಲು ಮರೆಯದಿರಿ.

English summary

woman-who-sweats-blood-suffers-from-a-rare-condition

Can you imagine that you start sweating blood instead of just sweat? Sounds scary, right? Well, there is a condition that is existent and people actually sweat blood in real! Though this sounds weird and bizarre, a recent case of where a woman complained of sweating blood instead of just sweat has been reported. Check out this bizarre incident and how the unnamed woman has been left isolated, as she is too embarrassed to socialize with people around her.
X
Desktop Bottom Promotion