ನಿಮ್ಮ ರಾಶಿಗೆ ಅಧಿಪತಿಯಾಗಿರುವ ಚಕ್ರ ಯಾವುದು?

Posted By: Lekhaka
Subscribe to Boldsky

ರಾಶಿಗಳನ್ನು ನೋಡಿಕೊಂಡು ಅವರ ಗುಣಸ್ವಭಾವ ಹೇಗೆ ಇರುವುದು ಎಂದು ತಿಳಿದುಕೊಳ್ಳಬಹುದು. ವ್ಯಕ್ತಿಯೊಬ್ಬನ್ನು ಅರ್ಥ ಮಾಡಿಕೊಳ್ಳಲು ರಾಶಿಗಳು ತುಂಬಾ ಮಹತ್ವ ಪಡೆದುಕೊಳ್ಳುತ್ತವೆ. ರಾಶಿಗಳ ಬಗ್ಗೆ ಕೆಲವರು ಬಹಳಷ್ಟು ತಿಳಿದುಕೊಂಡಿರುವರು. ಇದು ತುಂಬಾ ಆಸಕ್ತಿಯ ವಿಷಯ ಕೂಡ. ಯಾವ ರಾಶಿಯವರು ಹೇಗೆ ಇರುತ್ತಾರೆ ಮತ್ತು ಅವರ ನಡವಳಿಕೆ ಹೇಗೆ ಇರುತ್ತದೆ ಎನ್ನುವುದರ ಬಗ್ಗೆ ಈಗಾಗಲೇ ಬೋಲ್ಡ್ ಸ್ಕೈ ನಿಮಗೆ ತಿಳಿಸಿಕೊಟ್ಟಿದೆ.

ಯಾವ್ಯಾವ ರಾಶಿಯವರಿಗೆ ಯಾವ ಬಗೆಯ ದೌರ್ಬಲ್ಯವಿದೆ ನೋಡಿ!!

ಆದರೆ ಈ ಲೇಖನದಲ್ಲಿ ಹೇಳಲು ಹೊರಟಿರುವುದು ರಾಶಿಗಳಿಗೆ ಸಂಬಂಧಿಸಿದ ಚಕ್ರದ ಬಗ್ಗೆ. ಚಕ್ರ ಸಂಸ್ಕೃತ ಪದ. ಇದರರ್ಥ ಶಕ್ತಿಯ ಚಕ್ರವೆಂದು. ಚಕ್ರವು ನಮ್ಮ ದೇಹದ ಆರೋಗ್ಯ, ಶಕ್ತಿ ಮತ್ತು ಇತರ ಕೆಲವೊಂದು ವಿಚಾರಗಳಲ್ಲಿ ಪ್ರಮುಖ ಪಾತ್ರ ನಿರ್ವಹಿಸುತ್ತದೆ ಎಂದು ಹೇಳಲಾಗಿದೆ. ಚಕ್ರವು ನಿಮ್ಮ ಬುದ್ಧಿ, ಮನಸ್ಸು ಮತ್ತು ಆತ್ಮವನ್ನು ಶಕ್ತಿಯುತವಾಗಿಸಲು ನೆರವಾಗಲಿದೆ. ಇದರಿಂದ ಚಕ್ರದ ಬಗ್ಗೆ ತಿಳಿದುಕೊಳ್ಳುವುದು ಅತೀ ಅಗತ್ಯ. ನಿಮ್ಮ ರಾಶಿಯ ಚಕ್ರ ಯಾವುದೆಂದು ನೀವು ತಿಳಿಯಿರಿ.

ಮೇಷ: ಮೂರನೇ ಚಕ್ರ

ಮೇಷ: ಮೂರನೇ ಚಕ್ರ

ಜೋತಿಷ್ಯ ಶಾಸ್ತ್ರದ ಪ್ರಕಾರ ಸೌರ ಹಣೆಯ ಚಕ್ರವು ಸೂರ್ಯ ಚಿಹ್ನೆಯಾಗಿರುವ ಮೇಷ ರಾಶಿಗೆ ಪ್ರಧಾನ ಶಕ್ತಿ ಕೇಂದ್ರವೆಂದು ಪರಿಗಣಿಸಲ್ಪಟ್ಟಿದೆ. ಇದು ವ್ಯಕ್ತಿ ಹೊಕ್ಕಳ ಮೇಲ್ಬಾಗದಲ್ಲಿ ಇದೆ. ಇದು ಸಾಕ್ಷಾತ್ಕಾರ ಮತ್ತು ದೃಢಭಾವನೆಗೆ ನಿಕಟ ಸಂಪರ್ಕ ಹೊಂದಿದೆ.

ವೃಷಭ: ನಾಲ್ಕನೇ ಚಕ್ರ

ವೃಷಭ: ನಾಲ್ಕನೇ ಚಕ್ರ

ಈ ರಾಶಿಯವರಿಗೆ ನಾಲ್ಕನೇ ಚಕ್ರವು ತುಂಬಾ ಪರಿಣಾಮಕಾರಿಯಾಗಿದೆ. ಈ ಚಕ್ರವನ್ನು ಹೃದಯ ಚಕ್ರವೆಂದು ಕರೆಯಲಾಗುತ್ತದೆ. ಯಾಕೆಂದರೆ ಗೂಳಿ ಮತ್ತು ಹೃದಯವು ಶುಕ್ತ ಆಜ್ಞೆಯಂತೆ ಇರುವುದು. ಈ ಚಕ್ರವು ಸಹವರ್ತಿ ಜೀವಿಗಳೊಂದಿಗೆ ಸಹಾನುಭೂತಿ ಸಾಧಿಸುವ ಸಾಮರ್ಥ್ಯವನ್ನು ಹೊಂದಿದೆ. ಯಾಕೆಂದರೆ ಈ ಚಕ್ರವು ಪ್ರೀತಿ ಮತ್ತು ಸಹಾನುಭೂತಿ ನಿರ್ಮಿಸಲು ನೆರವಾಗುವುದು.

ಮಿಥುನ: ಐದನೇ ಚಕ್ರ

ಮಿಥುನ: ಐದನೇ ಚಕ್ರ

ಮಿಥುನವು ಬುಧನ ಆಡಳಿತದಲ್ಲಿ ಜನ್ಮ ಪಡೆದುಕೊಂಡಿದೆ ಮತ್ತು ಇದು ಹೆಚ್ಚಿನ ಶಕ್ತಿಯನ್ನು ಪಡೆದುಕೊಂಡಿದೆ. ಈ ವ್ಯಕ್ತಿಯು ಹೆಚ್ಚಿನ ಜನರ ವಿಶ್ವಾಸ ಪಡೆಯಬಹುದು. ತನ್ನ ಆಲೋಚನೆ ಹಾಗೂ ಅಭಿಪ್ರಾಯದಿಂದ ಈ ರಾಶಿಯವರು ಹೆಚ್ಚಿನ ಜನರನ್ನು ಆಕರ್ಷಿಸುತ್ತಾರೆ.

ಕರ್ಕಾಟಕ: ಆರನೇ ಚಕ್ರ

ಕರ್ಕಾಟಕ: ಆರನೇ ಚಕ್ರ

ಕರ್ಕಾಟಕ ರಾಶಿಯವರು ಆರನೇ ಚಕ್ರದಿಂದ ಪ್ರಭಾವಿತರಾಗಿರುವರು ಮತ್ತು ಮೂರನೇ ಕಣ್ಣಿನ ಚಕ್ರವು ವ್ಯಕ್ತಿಯ ಆತ್ಮದ ಅತೀಂದ್ರಿಯ ಕೇಂದ್ರವಾಗಿದೆ. ಚಂದ್ರನು ಈ ರಾಶಿಯ ಅಧಿಪತಿಯಾಗಿರುವ ಕಾರಣ ಈ ರಾಶಿಚಕ್ರವು ಮುಂದೆ ಬರುವಂತಹ ಕಷ್ಟದ ಪರಿಸ್ಥಿತಿಯನ್ನು ಬೇಗನೆ ಗ್ರಹಿಸಬಲ್ಲದು.

ಸಿಂಹ: ಏಳನೇ ಚಕ್ರ

ಸಿಂಹ: ಏಳನೇ ಚಕ್ರ

ಸಿಂಹವು ಏಳನೇ ಚಕ್ರಕ್ಕೆ ಸಂಬಂಧಿಸಿದೆ. ಇದನ್ನು ಕಿರೀಟ ಚಕ್ರವೆಂದು ಕರೆಯಲಾಗುತ್ತದೆ. ಇದು ಸೂರ್ಯನ ಶಕ್ತಿಯಿಂದ ಹೆಚ್ಚು ಪ್ರಭಾವಿತವಾಗಿದೆ. ತಲೆಯ ಮೇಲ್ಭಾಗದ ಜಾಗವನ್ನು ಈ ಶಕ್ತಿಚಕ್ರದ ಕೇಂದ್ರವೆಂದು ಪರಿಗಣಿಸಲಾಗಿದೆ. ಇದರಿಂದ ಯಾವುದೇ ರೀತಿಯ ಸಮಸ್ಯೆಗಳಿಗೆ ತುಂಬಾ ಪರಿಣಾಮಕಾರಿಯಾಗಿ ಮತ್ತು ಸುಲಭವಾಗಿ ಪರಿಹಾರ ಕಂಡುಕೊಳ್ಳಲು ಸಾಧ್ಯವಾಗುವುದು.

ಕನ್ಯಾ: ಐದನೇ ಚಕ್ರ

ಕನ್ಯಾ: ಐದನೇ ಚಕ್ರ

ಈ ರಾಶಿಯನ್ನು ಐದನೇ ಚಕ್ರವು ನಿರ್ವಹಿಸುತ್ತದೆ. ಇದನ್ನು ಗಂಟಲಿನ ಚಕ್ರವೆಂದು ಕರೆಯಲಾಗುವುದು. ಗಂಟಲಿನ ಚಕ್ರವು ಮೊದಲ ಸ್ಥಿತಿಯಲ್ಲಿದ್ದಾಗ ಕನ್ಯಾರಾಶಿಯಲ್ಲಿ ಜನಿಸಿದವರು ತುಂಬಾ ಉತ್ತಮ ಭಾವನೆಯಲ್ಲಿರುವರು. ಇವರು ಹೆಚ್ಚಾಗಿ ಸಾರ್ವಜನಿಕ ಭಾಷಣ ಮತ್ತು ಕೆಲಸಗಳಲ್ಲಿ ತೊಡಗಿಕೊಳ್ಳುವರು. ಯಾಕೆಂದರೆ ಇವರ ಶಕ್ತಿ ಅಡಗಿರುವುದು ಇದರಲ್ಲಿಯೇ.

ಮಿಥುನ, ವೃಶ್ಚಿಕ, ಕುಂಭ- ಈ ಮೂರು 'ಜನ್ಮರಾಶಿ'ಯವರು ಬಹಳ ಬುದ್ಧಿವಂತರಂತೆ!

ತುಲಾ: ನಾಲ್ಕನೇ ಚಕ್ರ

ತುಲಾ: ನಾಲ್ಕನೇ ಚಕ್ರ

ತುಲಾ ರಾಶಿಯವರಿಗೆ ಶುಕ್ತನು ಅಧಿಪತಿಯಾಗಿರುವನು. ನಾಲ್ಕನೇ ಚಕ್ರವು ಈ ರಾಶಿಯವರ ಮೇಲೆ ಪ್ರಾಬಲ್ಯ ಹೊಂದಿರುವುದು. ಇದರಿಂದಾಗಿ ಈ ರಾಶಿಯವರು ಯಾವುದೇ ಒಪ್ಪಂದವಿಲ್ಲದೆ ತುಂಬಾ ಪ್ರಬಲ ಸಂಬಂಧ ಅಥವಾ ಪ್ರೀತಿಯಲ್ಲಿ ತೊಡಗಿಕೊಳ್ಳುವರು. ಇದರಿಂದಾಗಿ ಅವರು ತುಂಬಾ ಕ್ರಿಯಾತ್ಮಕ ಯೋಜನೆಗಳಲ್ಲಿ ಭಾಗಿಯಾಗುವರು.

ವೃಶ್ಚಿಕ: ಮೂರನೇ ಚಕ್ರ

ವೃಶ್ಚಿಕ: ಮೂರನೇ ಚಕ್ರ

ವೃಶ್ಚಿಕ ರಾಶಿಯಲ್ಲಿ ಮೂರನೇ ಚಕ್ರವು ಅಧಿಪತ್ಯ ಹೊಂದಿದೆ. ಈ ಚಕ್ರವನ್ನು ಸೂರ್ಯನ ಹಣೆಯ ಚಕ್ರವೆಂದು ಕರೆಯಲಾಗುವುದು. ಈ ಚಕ್ರವು ಹೊಕ್ಕಳಿನ ಮೇಲಿನ ಭಾಗದಲ್ಲಿದೆ. ಮಂಗಳನು ಇದರ ಅಧಿಪತಿಯಾಗಿರುವನು. ಬೇರೆ ರಾಶಿಯವರಿಗೆ ಹೋಲಿಸಿದರೆ ಈ ರಾಶಿಯವರಲ್ಲಿ ಲೈಂಗಿಕ ಉದ್ವೇಗವು ಸ್ವಲ್ಪ ಹೆಚ್ಚಾಗಿರುವುದು.

ಧನು: ಎರಡನೇ ಚಕ್ರ

ಧನು: ಎರಡನೇ ಚಕ್ರ

ಈ ರಾಶಿಯವರಿಗೆ ಎರಡನೇ ಚಕ್ರವು ಅಧಿಪತಿಯಾಗಿದೆ. ಈ ಚಕ್ರವನ್ನು ತ್ರಿಕಾಸ್ತಿಯ ಚಕ್ರವೆಂದು ಕರೆಯಲಾಗುತ್ತದೆ. ಈ ಚಕ್ರವು ನಾಭಿಯ ಬಲಭಾಗದಲ್ಲಿದೆ ಮತ್ತು ಇದು ಗುರುವಿನ ಕೈಯೊಳಗಿದೆ. ಆಶಾವಾದವು ನಿಮ್ಮ ಜೀವನವನ್ನು ತುಂಬುವುದು. ಲೈಂಗಿಕ ಪ್ರಚೋದನೆ ಮತ್ತು ಗರ್ಭಾವಸ್ಥೆಯು ಈ ಚಕ್ರವನ್ನು ರೂಪಿಸುವುದು.

ಮಕರ: ಮೊದಲ ಚಕ್ರ

ಮಕರ: ಮೊದಲ ಚಕ್ರ

ಬರಿಗಣ್ಣಿನಿಂದ ಕಾಣುವಂತಹ ಗ್ರಹವು ಇದಾಗಿದೆ. ಮೊದಲ ಚಕ್ರವನ್ನು ಮೂಲಚಕ್ರವೆಂದು ಕರೆಯಲಾಗುತ್ತದೆ. ಇದು ತುಂಬಾ ಪರಿಣಾಮಕಾರಿ. ಯಾಕೆಂದರೆ ಇದು ಶಕ್ತಿಯ ಕೇಂದ್ರವಾಗಿದೆ. ಶ್ರೇಣಿ ವ್ಯವಸ್ಥೆಯಲ್ಲಿ ಸ್ಥಿರವಾಗಿರಲು ಮತ್ತು ಸ್ಥಿರವಾಗಿ ನಿಮ್ಮ ಸಾಧನೆ ಮಾಡಲು ನೆರವಾಗುವುದು.

ಕುಂಭ: ಮೊದಲ ಚಕ್ರ

ಕುಂಭ: ಮೊದಲ ಚಕ್ರ

ಕುಂಭ ರಾಶಿಯಲ್ಲಿ ಹುಟ್ಟಿದವರಿಗೆ ಮೊದಲ ಚಕ್ರವು ತುಂಬಾ ಪರಿಣಾಮಕಾರಿ ಚಕ್ರವಾಗಿದೆ. ಇದು ಪರಿಸ್ಥಿತಿಯನ್ನು ಅರ್ಥಮಾಡಿಕೊಳ್ಳಲು ತುಂಬಾ ನೆರವಾಗುವುದು. ಇದರಿಂದ ಅಸಾಮಾನ್ಯ ವೈಯಕ್ತಿಕ ಲಾಭವು ಈ ರಾಶಿಯವರಿಗೆ ಸಿಗುವುದು. ನೀವು ನೆಲಕಚ್ಚಿದ್ದೀರಿ ಎಂದು ಇತರರು ಭಾವಿಸಿದ ಸಂದರ್ಭದಲ್ಲಿ ನೀವು ತುಂಬಾ ಶಕ್ತಿಯುತವಾಗಿರುವಿರಿ.

ಮೀನ: ಎರಡನೇ ಚಕ್ರ

ಮೀನ: ಎರಡನೇ ಚಕ್ರ

ಎರಡನೇ ಚಕ್ರವನ್ನು ತ್ರಿಕಾಸ್ತಿಯ ಚಕ್ರವೆಂದು ಕರೆಯಲಾಗುತ್ತದೆ. ಇದು ನಾಭಿಯಲ್ಲಿ ಕೇಂದ್ರಿತವಾಗಿದೆ. ಇದು ಮೀನ ರಾಶಿಯವರ ಮೇಲೆ ತುಂಬಾ ಪರಿಣಾಮ ಬೀರುವುದು. ಇದು ನಿಮಗೆ ಅಪಾರ ಆಶಾವಾದ ಒದಗಿಸುವುದು.

ಮಹಿಳೆಯರು ಸುಲಭವಾಗಿ ಈ 4 ರಾಶಿ ಚಕ್ರದವರಿಗೆ ಆಕರ್ಷಿಸಲ್ಪಡುತ್ತಾರೆ

English summary

What’s Your Power Chakra According To Your Zodiac Sign?

The Chakra is a Sanskrit word, which means the "wheel of energy." It is believed that the chakra is aligned with the aura of the body, for better health, strength, and vitality it possesses. Check yours based on your zodiac sign.
Story first published: Thursday, November 9, 2017, 17:30 [IST]
Subscribe Newsletter