ಈಕೆ ಬರೋಬ್ಬರಿ 50 ಪ್ಲಾಸ್ಟಿಕ್ ಸರ್ಜರಿ ಮಾಡಿಸಿಕೊಂಡಳು! ಯಾಕೆ ಗೊತ್ತೇ?

Posted By: Lekhaka
Subscribe to Boldsky

ಸಾಮಾಜಿಕ ಜಾಲತಾಣವೆನ್ನುವುದೇ ಹಾಗೆ. ಅಲ್ಲಿ ಏನಾದರೂ ಅಸಾಮಾನ್ಯ ಅಥವಾ ಸ್ವಲ್ಪ ವಿಚಿತ್ರವಾಗಿದೆ ಎಂದು ಅನಿಸಿದರೂ ಅದು ಕಾಡ್ಗಿಚ್ಚಿನಂತೆ ಹಬ್ಬುವುದು. ಕೆಲವರು ಇದರ ಪೂರ್ವಾಪರವನ್ನು ತಿಳಿಯದೆ ಶೇರ್ ಮಾಡಿಕೊಳ್ಳುತ್ತಾರೆ. ಜನರಿಗೂ ಕೂಡ ಇಂತಹ ಸುದ್ದಿಗಳೆಂದರೆ ಇಷ್ಟ. ಅದು ಸತ್ಯ ಅಥವಾ ಸುಳ್ಳಿನ ಕಂತೆಯಾಗಿರಲಿ! ಒಂದು ಕ್ಷಣಕ್ಕೆ ಅವರಿಗೆ ಆ ಸುದ್ದಿ ತುಂಬಾ ಮಹತ್ವದ್ದಾಗಿರುವುದು. ಮರುಕ್ಷಣ ಎಲ್ಲವನ್ನೂ ಮರೆತು ಮತ್ತೊಂದು ಇದೇ ರೀತಿಯ ಸುದ್ದಿ ಇದೆಯಾ ಎಂದು ಹುಡುಕಾಟ ನಡೆಸುವರು.

ಇತ್ತೀಚೆಗೆ ಹಾಲಿವುಡ್ ನಟಿ ಆ್ಯಂಜಲಿನಾ ಜೊಲಿಯಂತೆ ಕಾಣಿಸಿಕೊಳ್ಳಲು ಯುವತಿಯೊಬ್ಬಳು 50 ಸಲ ಪ್ಲಾಸ್ಟಿಕ್ ಸರ್ಜರಿ ಮಾಡಿಸಿ ಕೊಂಡಿದ್ದಾಳೆ ಎನ್ನುವ ಸುದ್ದಿ ಭಾರೀ ವೈರಲ್ ಆಯಿತು. ಆದರೆ ಇದು ಶುದ್ಧ ಸುಳ್ಳು ಎನ್ನುವುದು ಮತ್ತೆ ತಿಳಿದುಬಂತು. ಸುಳ್ಳು ಸುದ್ದಿ ಮತ್ತು ಈ ಸುದ್ದಿಗೆ ಕಾರಣಳಾದ ಇರಾನ್ ಸಹಾರ ತಾಬರ್ ಎನ್ನುವ ಮಹಿಳೆಯ ಬಗ್ಗೆ ಬೋಲ್ಡ್ ಸ್ಕೈ ನಿಮ್ಮ ಮುಂದೆ ಸಂಪೂರ್ಣ ಮಾಹಿತಿಯನ್ನು ತೆರೆದಿಡಲಿದೆ. ಇದನ್ನು ಓದುತ್ತಾ ಸಾಗಿ.... 

ಆಕೆ ಜಗತ್ತಿನಲ್ಲೇ ಪ್ರಸಿದ್ಧಳಾದಳು

ಆಕೆ ಜಗತ್ತಿನಲ್ಲೇ ಪ್ರಸಿದ್ಧಳಾದಳು

ಸಹಾರ ತಾಬರ್ ಎನ್ನುವ ಇರಾನ್ ನ ಮಹಿಳೆ ತಾನು ಆ್ಯಂಜಲೀನಾ ಜೊಲಿಯಂತೆ ಕಾಣಿಸಿಕೊಳ್ಳಲು ಸುಮಾರು 50 ಪ್ಲಾಸ್ಟಿಕ್ ಸರ್ಜರಿ ಮಾಡಿಕೊಂಡಿರುವುದಾಗಿ ಹೇಳಿದ ಬಳಿಕ ಇಂಟರ್ನೆಟ್ ನಲ್ಲಿ ಆಕೆ ವೈರಲ್ ಆದಳು. ತೊಂಬ್ ರೈಡರ್ ನ ನಟಿಯ ಬಹುದೊಡ್ಡ ಅಭಿಮಾನಿ ನಾನು ಮತ್ತು ಆಕೆಯಂತೆ ಆಗಲು ತಾನು ಏನು ಬೇಕಾದರೂ ಮಾಡಬಲ್ಲೆ ಎಂದು ಬರೆದುಕೊಂಡಿದ್ದಳು.

ಆಕೆ ತನ್ನ ತೂಕ ಕಾಯ್ದುಕೊಂಡಿದ್ದಳು

ಆಕೆ ತನ್ನ ತೂಕ ಕಾಯ್ದುಕೊಂಡಿದ್ದಳು

ಸಾಮಾಜಿಕ ಜಾಲತಾಣಗಳನ್ನು ನಂಬುವುದಾದರೆ ಆಕೆ ಡಯಟಿಂಗ್ ಮಾಡಿ ತನ್ನ ತೂಕವನ್ನು 40 ಕೆಜಿಗೆ ಇಳಿಸಿದ್ದಳು. 4.8 ಅಡಿ ಎತ್ತರದ ಆಕೆಗೆ ಇದು ತುಂಬಾ ಅಪಾಯಕಾರಿ ಎಂದು ವೈದ್ಯರು ಹೇಳಿದ್ದರು.

ಆಕೆಯ ಇನ್ ಸ್ಟಾಗ್ರಾಮ್ ಜೀವನ

ಆಕೆಯ ಇನ್ ಸ್ಟಾಗ್ರಾಮ್ ಜೀವನ

ಆಕೆಯ ಇನ್ ಸ್ಟಾ ಗ್ರಾಮ್ ಖಾತೆಯಲ್ಲಿ ಸುಮಾರು 3,08,000 ಮಂದಿ ಫಾಲೋವರ್ಸ್ ಗಳಿದ್ದಾರೆ. ಕೆಲವರು ಆಕೆಯ ಫೋಟೋ ನೋಡಿ ತುಂಬಾ ನೋವಾಗುವಂತಹ ಕಮೆಂಟ್ ಗಳನ್ನು ಹಾಕಿದ್ದಾರೆ. ಆದರೆ ಇದರಿಂದ ಆಕೆಯ ಸ್ಪೂರ್ತಿ ಮಾತ್ರ ಕುಂದಿಲ್ಲ ಮತ್ತು ಹೊಸ ಫೋಟೊಗಳನ್ನು ಹಾಕುತ್ತಿದ್ದಾಳೆ.

ಸತ್ಯವೇನೆಂದರೆ...

ಸತ್ಯವೇನೆಂದರೆ...

ಸಹಾರ ಫೋಟೊವನ್ನು ನೋಡಿದಂತಹ ಕೆಲವೊಂದು ಮಾಧ್ಯಮಗಳು ಆಕೆಯೊಂದಿಗೆ ಸಂದರ್ಶನಕ್ಕಾಗಿ ಕೇಳಿಕೊಂಡರು. ಆದರೆ ಆಕೆಯನ್ನು ನೋಡಿದ ಮಾಧ್ಯಮದವರಿಗೆ ಮಾತ್ರ ಜೀವಮಾನದ ಅತೀದೊಡ್ಡ ಆಘಾತ ಎದುರಾಗಿತ್ತು. ಇನ್ ಸ್ಟಾ ಗ್ರಾಮ್ ನಲ್ಲಿ ನೋಡಿದ ಮಹಿಳೆ ಮತ್ತು ಸಂದರ್ಶನಕ್ಕೆ ಬಂದ ಮಹಿಳೆ ಸಂಪೂರ್ಣ ಭಿನ್ನವಾಗಿದ್ದರು.

ಆಕೆ ಮಾಧ್ಯಮಗಳ ಮುಂದೆ ಸತ್ಯ ಹೊರಹಾಕಿದಳು

ಆಕೆ ಮಾಧ್ಯಮಗಳ ಮುಂದೆ ಸತ್ಯ ಹೊರಹಾಕಿದಳು

ಖಚಿತವಾಗಿಯೂ ಇದೊಂದು ಫೋಟೊಶಾಪ್ ಮತ್ತು ಮೇಕಪ್ ಮಾಡಲ್ಪಟ್ಟಿರುವಂತಹ ಫೋಟೊ. ಪ್ರತೀ ಸಲ ನಾನು ಫೋಟೊ ಹಾಕುವಾಗ ತುಂಬಾ ತಮಾಷೆಯಾಗಿ ಕಾಣುವಂತೆ ಮುಖಕ್ಕೆ ಮೇಕಪ್ ಮಾಡುತ್ತೇನೆ. ಇದು ನಿಮ್ಮನ್ನು ಅಭಿವ್ಯಕ್ತಿ ಪಡಿಸುವಂತಹ ವಿಧಾನ, ಒಂದು ರೀತಿಯ ಕಲೆ. ಇದು ನನ್ನ ನಿಜವಾದ ಮುಖವಲ್ಲವೆಂದು ಅಭಿಮಾನಿಗಳಿಗೆ ತಿಳಿದಿದೆ.

 ಸುಳ್ಳು ಸರ್ಜರಿ ಬಗ್ಗೆ ಆಕೆ ಹೇಳಿರುವುದು.....

ಸುಳ್ಳು ಸರ್ಜರಿ ಬಗ್ಗೆ ಆಕೆ ಹೇಳಿರುವುದು.....

ಯಾವತ್ತೂ 50 ಸರ್ಜರಿ ಮಾಡಿಸಿಕೊಂಡಿಲ್ಲವೆಂದು ಹೇಳಿರುವ ಆಕೆ ಕೆಲವು ಸರ್ಜರಿ ಮಾಡಿಸಿರುವುದು ನಿಜ ಎಂದಿದ್ದಾಳೆ. ಮೂಗು, ಬಾಯಿ ಮತ್ತು ತುಟಿಗಳ ಸರ್ಜರಿ ಮಾಡಿಕೊಂಡಿರುವುದು ನಿಜ. ಇದರಲ್ಲಿ ತಪ್ಪೇನಿಲ್ಲ ಮತ್ತು ಪ್ರತಿಯೊಬ್ಬರು ಇಂತಹ ಶಸ್ತ್ರಚಿಕಿತ್ಸೆ ಮಾಡಿಕೊಳ್ಳುವರು ಎನ್ನುತ್ತಾಳೆ.

ಆಕೆಯ ವಿಶೇಷ ಪ್ರತಿಭೆ ಬಗ್ಗೆ ನೀವು ಇನ್ ಸ್ಟಾ ಗ್ರಾಮ್ ನಲ್ಲಿ ನೋಡಬಹುದು.

ಮುಂದಿನ ಸಲ ನೀವು ಇಂತಹ ಸುದ್ದಿಯನ್ನು ಓದಿದಾಗ ಅದು ಸತ್ಯವೋ ಅಥವಾ ಸುಳ್ಳೋ ಎನ್ನುವುದನ್ನು ಮೊದಲು ಪರೀಕ್ಷಿಸಿಕೊಳ್ಳಿ.

English summary

What! Did She REALLY Undergo 50 Surgeries To Look This Way?

Teenager Sahar Tabar, from Iran, is reported to be an Angelina Jolie super fan. Pictures show Sahar with razor-sharp cheekbones and an exaggerated pout, but it was revealed that this scary look was nothing but just makeup!