ಪಾಪ, ಈ ಗರ್ಭಿಣಿ ಮಹಿಳೆಯ ಕಥೆ ಕೇಳಿದರೆ, ಕಣ್ಣೀರು ಬರುತ್ತೆ...

By: Arshad
Subscribe to Boldsky

ಜೀವವೊಂದು ಗರ್ಭದಲ್ಲಿ ತಳೆಯುತ್ತಿದೆ ಎಂದು ಗೊತ್ತಾದ ಕ್ಷಣದಿಂದಲೇ ತಾಯಿಯಾಗುವವಳು ತನ್ನ ಆರೋಗ್ಯದ ಬಗ್ಗೆ ಅತಿ ಹೆಚ್ಚಿನ ಕಾಳಜಿ ವಹಿಸುತ್ತಾಳೆ. ಮೂರು ತ್ರೈಮಾಸಿಕದ ಅವಧಿಯಲ್ಲಿ ಹಲವಾರು ಹಂತಗಳನ್ನು ದಾಟುವ ಮೂಲಕ ಗರ್ಭಿಣಿಯ ದೇಹ ಹಲವಾರು ಬದಲಾವಣೆಗಳನ್ನೂ ಪಡೆಯುತ್ತದೆ.  ಗರ್ಭಾವಸ್ಥೆಯಲ್ಲಿ ಮಹಿಳೆ ಮಾನಸಿಕವಾಗಿಯೂ ಕೆಲವಾರು ಒತ್ತಡಗಳನ್ನು ಎದುರಿಸಬೇಕಾಗುತ್ತದೆ ಹಾಗೂ ಇವು ಕೆಲವಾರು ದೈಹಿಕ ಕ್ಲಿಷ್ಟತೆಗೂ ಕಾರಣವಾಗಬಹುದು.

ಇದೇ ಕಾರಣಕ್ಕೆ ಗರ್ಭಿಣಿಯ ಮನಸನ್ನು ನೋಯಿಸಬಾರದು ಎಂದು ಹಿರಿಯರು ಸದಾ ಹೇಳುತ್ತಾರೆ. ಅದರಲ್ಲೂ ಗರ್ಭಾವಸ್ಥೆಯ ಕಡೆಯ ತಿಂಗಳುಗಳು ಅತಿ ಹೆಚ್ಚು ಕಾಳಜಿಯ ಅಗತ್ಯವಿರುವ ದಿನಗಳಾಗಿದ್ದು ಯಾವುದೇ ಒತ್ತಡಕ್ಕೆ ಒಳಗಾಗದಿರುವುದು ಅಗತ್ಯವಾಗಿದ್ದು ಈ ಮೂಲಕ ಮಗು ಒದೆಯುವ ಅನುಭವವನ್ನು ಸ್ಪಷ್ಟವಾಗಿ ಅನುಭವಿಸಬಹುದು.

ಮಗು ಕಾಲನ್ನು ಒದೆಯುವುದು ಅತ್ಯಂತ ಸುಖಕರ ಅನುಭೂತಿಯಾಗಿದ್ದರೂ ಕೆಲವೊಮ್ಮೆ ಈ ಒತ್ತಡ ಹೆಚ್ಚಾದರೆ ಗರ್ಭಕೋಶ ಒಳಗಿನಿಂದ ಹೆಚ್ಚಿನ ಒತ್ತಡ ಮೂಡುವ ಮೂಲಕ ತಾಯಿ ಹಾಗೂ ಮಗುವಿನ ಆರೋಗ್ಯಕ್ಕೆ ಮಾರಕವಾಗಬಹುದು. ಚೀನಾದಲ್ಲಿ ಓರ್ವ ಗರ್ಭವತಿಯ ಹೊಟ್ಟೆಯೊಳಗಿನ ಮಗು ಒದ್ದ ಒತ್ತಡ ಇಷ್ಟು ಹೆಚ್ಚಾಗಿತ್ತೆಂದರೆ ಇದು ತಾಯಿಯ ಗರ್ಭವನ್ನು ತೂರಿ ಹೊರಬಂದಿತ್ತಂತೆ. ಬನ್ನಿ, ಈ ಬಗ್ಗೆ ಹೆಚ್ಚಿನ ಮಾಹಿತಿಯನ್ನು ನೋಡೋಣ...

ಇದು ಸಂಭವಿಸಿದ್ದು ಚೀನಾದಲ್ಲಿ:

ಇದು ಸಂಭವಿಸಿದ್ದು ಚೀನಾದಲ್ಲಿ:

ಅತ್ಯಪರೂಪದಲ್ಲಿ ಅತ್ಯಪರೂಪವಾದ ಈ ಘಟನೆ ಚೀನಾದ ಒಂದು ಪ್ರಾಂತದಲ್ಲಿ ಸಂಭವಿಸಿದೆ. ಇಲ್ಲಿನ ನಿವಾಸಿ ಶ್ರೀಮತಿ ಝಾಂಗ್ ಎಂಬ ಮಹಿಳೆ ತನಗೆ ಅತಿ ಹೆಚ್ಚು ಹೊಟ್ಟೆ ನೋವಾಗುತ್ತಿದೆ ಎಂದು ಹೇಳಿದ್ದರಿಂದ ಆಸ್ಪತ್ರೆಗೆ ಸೇರಿಸಲಾಗಿತ್ತು. ಆ ಸಮಯದಲ್ಲಿ ಆಕೆ ಮೂವತ್ತೈದು ವಾರಗಳ ಗರ್ಭಿಣಿಯಾಗಿದ್ದರು. ಆಕೆಯನ್ನು ಆಸ್ಪತ್ರೆಗೆ ಸೇರಿಸಿದ ಮನೆಯ ಸದಸ್ಯರಿಗೆ ಈಕೆಯ ಹೊಟ್ಟೆನೋವು ಗರ್ಭಾವಸ್ಥೆಯಲ್ಲಿ ಸರ್ವೇಸಾಮಾನ್ಯವಾಗಿ ಎದುರಾಗುವ ಹೊಟ್ಟೆನೋವು ಎಂದೇ ಅನ್ನಿಸಿತ್ತು.

ಗರ್ಭಕೋಶದ ಗೋಡೆಯೇ ಸೀಳಿತ್ತು

ಗರ್ಭಕೋಶದ ಗೋಡೆಯೇ ಸೀಳಿತ್ತು

ಹೊಟ್ಟೆನೋವಿಗೆ ಕಾರಣ ಕಂಡುಕೊಂಡ ವೈದ್ಯರಿಗೆ ಆಘಾತ ಕಾದಿತ್ತು. ಗರ್ಭದಲ್ಲಿನ ಮಗು ಒದ್ದ ರಭಸ ಹೆಚ್ಚಾಗಿದ್ದು ಇದು ಗರ್ಭಾಶಯದ ಗೋಡೆಯನ್ನೇ ಸೀಳಿತ್ತು. ಮಗುವಿನ ಕಾಲು ಗರ್ಭಾಶಯದಿಂದ ಹೊರಚಾಚಿದ್ದು ಇದನ್ನು ಕಂಡ ವೈದ್ಯರಿಗೆ ತಮ್ಮ ಜೀವಮಾನದಲ್ಲಿಯೇ ಎಂದೂ ಕಾಣದ, ಕೇಳದ ವಿದ್ಯಮಾನ ಸಾಕ್ಷಾತ್ಕಾರವಾಗಿತ್ತು.

ಇದು ಒಂದು ಆಕಸ್ಮಿಕವಾಗಿತ್ತು

ಇದು ಒಂದು ಆಕಸ್ಮಿಕವಾಗಿತ್ತು

ಗರ್ಭಾಶಯದ ಘಾಸಿಯನ್ನು ಅವಲೋಕಿಸಿದ ವೈದ್ಯರು ಗರ್ಭಾಶಯದ ಗೋಡೆಯಲ್ಲಿ ಸುಮಾರು ಏಳು ಸೆಂಟಿಮೀಟರ್ ನಷ್ಟು ಉದ್ದದ ಗಾಯದ ಗುರುತು ಕಂಡು ಬಂದಿತ್ತು. ಈ ಗಾಯ ಗರ್ಭಾಶಯದ ಕೆಳಭಾಗದಲ್ಲಿದ್ದು ಈಕೆ ಗರ್ಭ ಧರಿಸುವ ಸುಮಾರು ಆರು ತಿಂಗಳ ಮುಂಚೆ ಶಸ್ತ್ರಕ್ರಿಯೆಗೆ ಒಳಗಾಗಿದ್ದ ಗುರುತಾಗಿತ್ತು. ಈ ಗಾಯ ಇತರ ಭಾಗದಷ್ಟು ದೃಢವಾಗಿಲ್ಲದೇ ಇದ್ದ ಕಾರಣ ಮಗುವಿನ ಒದೆತದಿಂದ ಸುಲಭವಾಗಿ ಮತ್ತೊಮ್ಮೆ ಬಿಚ್ಚಿಕೊಳ್ಳಲು ಸಾಧ್ಯವಾಗಿತ್ತು. ಅಕಸ್ಮಾತ್ತಾಗಿ ಸಂಭವಿಸಿದ ಈ ಘಟನೆಯಿಂದ ಗಾಯ ಮತ್ತೊಮ್ಮೆ ಬಿಚ್ಚಿಕೊಂಡು ಮಗುವಿನ ಕಾಲು ಹೊರಚಾಚುವಂತಾಗಿತ್ತು.

ತಕ್ಷಣವೇ ಶಸ್ತ್ರಚಿಕಿತ್ಸೆ ನಡೆಸಲಾಯಿತು

ತಕ್ಷಣವೇ ಶಸ್ತ್ರಚಿಕಿತ್ಸೆ ನಡೆಸಲಾಯಿತು

ಕಾರಣವೇನೇ ಇರಲಿ, ಈ ಘಟನೆ ಅತ್ಯಂತ ಅಪಾಯಕಾರಿಯಾಗಿದ್ದು ತಕ್ಷಣವೇ ಶಸ್ತ್ರಚಿಕಿತ್ಸೆಯ ಮೂಲಕ ಗರ್ಭಾಶಯವನ್ನು ಹೊಲಿದು ಸರಿಪಡಿಸುವುದು ಅನಿವಾರ್ಯವಾಗಿತ್ತು. ಅತ್ಯಂತ ಸೂಕ್ಷ್ಮವಾದ ಈ ಶಸ್ತ್ರಕ್ರಿಯೆ ಹಲವು ತಜ್ಞ ಶಸ್ತ್ರವೈದ್ಯರ ನೆರವಿನಿಂದ ಸುಮಾರು ಹತ್ತು ಘಂಟೆಗಳ ಕಾಲ ನಡೆದು ಕಡೆಗೂ ಶಸ್ತ್ರಚಿಕಿತ್ಸೆ ಯಶಸ್ವಿಯಾಗಿತ್ತು. ಬಳಿಕ ತಾಯಿ ಹಾಗೂ ಮಗು ಸುರಕ್ಷಿತರಾಗಿದ್ದಾರೆ ಎಂದು ವೈದ್ಯರು ಘೋಷಿಸಿದ ಬಳಿಕ ಎಲ್ಲರೂ ನಿಟ್ಟುಸಿರು ಬಿಟ್ಟರು. ಶಸ್ತ್ರಕ್ರಿಯೆ ಇಷ್ಟು ಜಟಿಲವಾಗಲು ಕಾರಣವೇನೆಂದರೆ ಗರ್ಭಾಶಯದೊಳಗೆ ಮಗುವನ್ನು ಆವರಿಸಿರುವ ಆಮ್ನಿಯಾಟಿಕ್ ದ್ರವ ಗರ್ಭಕೋಶದ ಗೋಡೆ ಸೀಳಿದ್ದರಿಂದ ಹೊರಚೆಲ್ಲಿ ಗರ್ಭಿಣಿಯ ರಕ್ತದೊಡನೆ ಬೆರೆತಿತ್ತು.

ಅತ್ಯಪರೂಪದಲ್ಲಿ ಅತ್ಯಪರೂಪ ಪ್ರಕರಣ

ಅತ್ಯಪರೂಪದಲ್ಲಿ ಅತ್ಯಪರೂಪ ಪ್ರಕರಣ

ಈ ಚಿಕಿತ್ಸೆ ನಡೆಸಿದ ವೈದ್ಯರ ತಂಡ ಈ ಪ್ರಕರಣ ಅತ್ಯಪರೂಪದಲ್ಲಿ ಅತ್ಯಪರೂಪ ಎಂದು ಪರಿಗಣಿಸಿತ್ತು. ಈ ಪರಿಸ್ಥಿತಿಗೆ 'rupture pregnancy' ಅಥವಾ ಗರ್ಭಾವಸ್ಥೆಯ ಬಿರುಕು ಎಂದು ಕರೆಯಲಾಗುತ್ತದೆ. ವೈದ್ಯಕೀಯ ಸಮೀಕ್ಷೆಯ ಪ್ರಕಾರ ವಿಶ್ವದಾದ್ಯಂತ ಇದುವರೆಗೆ ಕೇವಲ ಇಪ್ಪತ್ತಾರು ಘಟನೆಗಳು ದಾಖಲಾಗಿವೆ.ಈ ಪರಿಸ್ಥಿತಿಗೆ ಕಾರಣವನ್ನು ಅವಲೋಕಿಸಿದ ವೈದ್ಯರ ತಂಡ ಗರ್ಭವತಿ ಗರ್ಭ ಧರಿಸುವ ಮುನ್ನ ಒಳಗಾಗಿದ್ದ ಶಸ್ತ್ರಕ್ರಿಯೆಯೇ ಇದಕ್ಕೆ ಪ್ರಮುಖ ಕಾರಣ ಎಂದು ಕಂಡುಕೊಂಡಿದ್ದಾರೆ. fibroid ಅಥವಾ ಗರ್ಭಾಶಯದ ಒಳಗಣ ಗಂಟುಗಳ ಅಥವಾ ಚಿಕ್ಕ ಚಿಕ್ಕ ದ್ರಾಕ್ಷಿಗೊಂಚಲಿನಂತಹ ಬೆಳವಣಿಗೆಯನ್ನು ಶಸ್ತ್ರಕ್ರಿಯೆಯ ಮೂಲಕ ನಿವಾರಿಸಿದ ಬಳಿಕ ಈ ಗಾಯಗಳು ಪೂರ್ಣವಾಗಿ ಮಾಗಲು ಕನಿಷ್ಟ ಎರಡು ವರ್ಷಗಳಾದರೂ ಬೇಕು. ಆದರೆ ಇವರು ಕೇವಲ ಆರು ತಿಂಗಳ ಬಳಿಕ ಗರ್ಭ ಧರಿಸಿದ್ದೇ ಈ ತೊಂದರೆಗೆ ಪ್ರಮುಖ ಕಾರಣವಾಗಿದೆ ಎಂದು ತಿಳಿದುಬಂದಿದೆ. ಈ ಬಗ್ಗೆ ನಿಮ್ಮ ಅಭಿಪ್ರಾಯಗಳೇನು ಎಂಬುದನ್ನು ಕೆಳಗಿನ ಕಮೆಂಟ್ಸ್ ಭಾಗದಲ್ಲಿ ಬರೆದು ನಮಗೆ ಖಂಡಿತಾ ತಿಳಿಸಿ.

Images Source: PTI

English summary

Unborn baby kicked mother hard broke womb

When a woman is pregnant, there is so much of care that is given to her right from the initial moment. From the first to the third trimester, there is a lot that goes on in the woman's body. Amidst this, there are times when there are complications that can cause stress and trouble at any point of time in pregnancy. But what happens if the unborn kicks so hard that it tears the uterus of the mother and endangers their lives?
Story first published: Saturday, October 14, 2017, 23:32 [IST]
Subscribe Newsletter