Latest Updates
-
ಅಸ್ಸಾಂನಲ್ಲಿ ಲಿವ್-ಇನ್ ಸಂಬಂಧದಲ್ಲಿದ್ದೀರಾ? ಹೊಸ ಕಾನೂನಿನ ಪ್ರಕಾರ ನೋಂದಣಿ ಮಾಡದಿದ್ದರೆ ಜೈಲು ಶಿಕ್ಷೆ ಕಟ್ಟಿಟ್ಟ ಬುತ್ತಿ! -
ಬಿಸಿಲಿಗೆ ಗಿಡಗಳು ಬಾಡುತ್ತಿವೆಯೇ? ಈ ಮ್ಯಾಜಿಕ್ ಟಿಪ್ಸ್ ಬಳಸಿ ನಿಮ್ಮ ಬಾಲ್ಕನಿ ಗಾರ್ಡನ್ ಅನ್ನು ಹಸಿರಾಗಿಡಿ! -
ಬಿಸಿಲ ಝಳಕ್ಕೆ ಸುಸ್ತಾಗಿದ್ದೀರಾ? ಹೀಟ್ಸ್ಟ್ರೋಕ್ನಿಂದ ಪಾರಾಗಲು ಈ ತಂಪು ಪದಾರ್ಥಗಳು ನಿಮ್ಮ ಆಹಾರದಲ್ಲಿರಲಿ, ಇಂದೇ ಟ್ರೈ ಮಾಡಿ! -
ಬಕ್ರೀದ್ 2026: ಈ ಬಾರಿಯ ಹಬ್ಬದ ಸಂಭ್ರಮದಲ್ಲಿ ಮಿಂಚಲು ನೀವು ಮಿಸ್ ಮಾಡಲೇಬಾರದ ಫ್ಯಾಷನ್ ಟ್ರೆಂಡ್ಸ್ ಮತ್ತು ಸ್ಟೈಲಿಂಗ್ ಟಿಪ್ಸ್! -
ಬಿಸಿಲ ಬೇಗೆಯಲ್ಲಿ ವರ್ಕೌಟ್ ಮಾಡ್ತಿದ್ದೀರಾ? ಈ ತಪ್ಪುಗಳನ್ನು ಮಾಡಿದರೆ ನಿಮ್ಮ ಆರೋಗ್ಯಕ್ಕೆ ಕಾದಿದೆ ದೊಡ್ಡ ಅಪಾಯ! -
ಬಿಸಿಲಿನ ಬೇಗೆಗೆ ದಂಪತಿಗಳ ನಡುವೆ ಜಗಳವೇ? ಈ ಸಣ್ಣ ಬದಲಾವಣೆಗಳು ನಿಮ್ಮ ಸಂಬಂಧವನ್ನು ಬಿರುಕಿನಿಂದ ಕಾಪಾಡುತ್ತವೆ! -
ಉತ್ತರ ಭಾರತದಲ್ಲಿ ಸುಡುವ ಬಿಸಿಲು: ಮನೆಯನ್ನು ತಂಪಾಗಿಡಲು ಮತ್ತು ಗಿಡಗಳನ್ನು ಬಚಾವ್ ಮಾಡಲು ಈ ಟಿಪ್ಸ್ ಫಾಲೋ ಮಾಡಿ! -
ಬಿಸಿಲ ಬೇಗೆಯಿಂದ ಸುಸ್ತಾಗಿದ್ದೀರಾ? ದೇಹವನ್ನು ತಂಪಾಗಿಡಲು ಈ ಆಹಾರಗಳೇ ನಿಮಗೆ ರಾಮಬಾಣ! -
ಬಿಸಿಲ ಝಳಕ್ಕೆ ಸುಸ್ತಾಗಿದ್ದೀರಾ? ಈ ಸಿಂಪಲ್ ಟಿಪ್ಸ್ ಪಾಲಿಸಿದ್ರೆ ಬೇಸಿಗೆಯಲ್ಲೂ ನೀವು ಕೂಲ್ ಆಗಿರಬಹುದು! -
ಬಿಸಿಲ ಬೇಗೆಯಲ್ಲಿ ವ್ಯಾಯಾಮ ಮಾಡ್ತಿದ್ದೀರಾ? ನಿಮ್ಮ ಹೃದಯದ ಆರೋಗ್ಯಕ್ಕೆ ಕಾದಿದೆ ದೊಡ್ಡ ಅಪಾಯ, ಎಚ್ಚರ!
ಕಳೆದ ಆರು ವರ್ಷದಿಂದ ಈತ ತನ್ನದೇ ಮೂತ್ರ ಕುಡಿಯುತ್ತಿದ್ದನಂತೆ!!
ಬೆಳಿಗ್ಗೆ ಎದ್ದ ತಕ್ಷಣ ಮೊದಲು ವಾಶ್ ರೂಮ್‍ಗೆ ಹೋಗಿ, ನೈಸರ್ಗಿಕ ಕ್ರಿಯೆಯನ್ನು ಮುಗಿಸಿ ಬಂದರೆ ಅದೇನೋ ಒಂದು ಬಗೆಯ ನಿರಾಳ ಭಾವ ಉಂಟಾಗುವುದು. ಆದರೆ ನಮ್ಮದೇ ಮೂತ್ರವನ್ನು ನಾವೇ ಕುಡಿಯುವುದು ಅಥವಾ ಅದರಲ್ಲಿ ಸ್ನಾನ ಮಾಡುವುದು ಎಂದರೆ ಅದೊಂದು ರೀತಿಯ ಅಸಹ್ಯ ಎನಿಸುವುದು.
ನಿಜ, ಈ ರೀತಿಯ ಒಂದು ಕ್ರಿಯೆಯನ್ನು ಒಬ್ಬ ವ್ಯಕ್ತಿ ಸತತವಾಗಿ ಆರು ವರ್ಷಗಳಿಂದ ಮಾಡುತ್ತಾ ಬಂದಿದ್ದಾನೆ. ಈತ ತನ್ನ ಮೂತ್ರವನ್ನೇ ತಾನು ಕುಡಿಯುತ್ತಿದ್ದಾನೆ. ಇದು ಕೇಳುಗರಿಗೆ ಮತ್ತು ನೋಡುವವರಿಗೆ ಒಂದು ರೀತಿಯ ಅಸಹ್ಯ ಎನಿಸಬಹುದು. ಆದರೆ ಇದೊಂದು ಬಗೆಯ ಮೂತ್ರ ಚಿಕಿತ್ಸೆಯನ್ನು ವಿವರಿಸುತ್ತದೆ.
ನಿತ್ಯವೂ ನಮ್ಮ ಮೂತ್ರವನ್ನು ನಾವೇ ಕುಡಿಯುವುದರಿಂದ ಹಲವಾರು ಪ್ರಯೋಜನಗಳಿವೆ. ಈ ಮೂತ್ರ ಚಿಕಿತ್ಸೆಯನ್ನು ಮಾಡುವುದರಿಂದ ಯಾವೆಲ್ಲಾ ಆರೋಗ್ಯಕರ ಪರಿಣಾಮಗಳು ಉಂಟಾಗುತ್ತದೆ? ಆರು ವರ್ಷದಿಂದ ತನ್ನ ಮೂತ್ರವನ್ನು ತಾನೇ ಸೇವಿಸಿದ್ದರಿಂದ ವ್ಯಕ್ತಿಯ ಆರೋಗ್ಯದಲ್ಲಿ ಯಾವೆಲ್ಲಾ ಬದಲಾವಣೆಯಾಗಿವೆ ಎನ್ನುವುದನ್ನು ತಿಳಿಯೋಣ ಬನ್ನಿ...

ಆರು ವರ್ಷದಿಂದ ಪ್ರಾರಂಭವಾದ ಚಿಕಿತ್ಸೆ ಕ್ರಮ
ಡೇವ್ ಮರ್ಫಿ ಎನ್ನುವವನು 2011ರಲ್ಲಿ ತನ್ನ ಮೂತ್ರವನ್ನು ತಾನೇ ಕುಡಿಯಲು ಪ್ರಾರಂಭಿಸಿದರು. ಮೊದ ಮೊದಲು ತನ್ನ ಮೂತ್ರವನ್ನು ಕುಡಿಯುವಾಗ ಅದನ್ನು ಫ್ರಿಜ್‍ನಲ್ಲಿಟ್ಟು ಕುಡಿಯಬೇಕೆ ಎಂಬ ಗೊಂದಲದಲ್ಲಿದ್ದರಂತೆ. ನಂತರ ಮೂತ್ರವನ್ನು ಹಾಗೇ ಬೆಚ್ಚಗಿರುವಾಗಲೇ ಕುಡಿಯುವುದನ್ನು ರೂಢಿಸಿಕೊಂಡಿದ್ದೇನೆ ಎಂದು ಹೇಳುತ್ತಾರೆ.

ಡಯಟ್ ಮಾಡಲು ಉತ್ತಮ ಕ್ರಿಯೆ
ಇವರು ನಿತ್ಯವೂ ಎರಡು ಗ್ಲಾಸ್ ಮೂತ್ರವನ್ನು ಕುಡಿಯುವುದರ ಮೂಲಕ ತನ್ನ ದೇಹದ ತೂಕವನ್ನು ಇಳಿಸಿಕೊಂಡಿದ್ದರು ಎನ್ನುತ್ತಾರೆ.

ಹೆಚ್ಚು ಆರೋಗ್ಯವಾಗಿರಬಹುದು
ತನ್ನ ಮೂತ್ರವನ್ನು ತಾನೇ ಕುಡಿಯಲು ಪ್ರಾರಂಭಿಸಿದ ಮೇಲೆ ಮೊದಲಿಗಿಂತ ಹೆಚ್ಚು ಆರೋಗ್ಯ ಸುಧಾರಣೆ ಕಂಡು, ದೇಹದಲ್ಲಿ ಫಿಟ್ ಆಗಿದ್ದೇನೆ ಎನ್ನುತ್ತಾರೆ. ಈ ಮಾರ್ಗದಿಂದ ಮುಂದಿನ ದಿನದಲ್ಲೂ ನಾನು ಹೆಚ್ಚು ಆರೋಗ್ಯವಾಗಿರುತ್ತೇನೆ. ಜೀವನಕ್ಕಾಗಿ ಹೆಚ್ಚು ಹಣ ಬೇಕಾಗದು ಎಂದು ಹೇಳುತ್ತಾರೆ.

ಅವರ ಪ್ರಕಾರ
ಮೂತ್ರವು ಒಂದು ಅಪ್ರಯೋಜಕ ಅಥವಾ ತ್ಯಾಜ್ಯ ಎನ್ನುತ್ತಾರೆ. ನನ್ನ ಪ್ರಕಾರ ನಮ್ಮ ಮೂತ್ರವು ಒಂದು ಔಷಧೀಯ ಗುಣವನ್ನು ಒಳಗೊಂಡಿದೆ. ಇದನ್ನು ಸೇವಿಸಿದರೆ ಹೆಚ್ಚು ಹಸಿವಾಗದು. ನೀರಿಗಿಂತ ಹೆಚ್ಚು ಶುದ್ಧವಾದದ್ದು ಎಂದು ಅಭಿಪ್ರಾಯಿಸಿದ್ದಾರೆ.

ಮುಖದ ಸ್ವಚ್ಛತೆಗೆ ಬಳಕೆ!
ಡೇವ್ ಅವರು ತಮ್ಮ ಮುಖವನ್ನು ತೊಳೆಯಲು ಹಾಗೂ ಮುಖದ ಕಾಂತಿ ಹೆಚ್ಚಿಸಿಕೊಳ್ಳಲು ಸಹ ಮೂತ್ರವನ್ನೇ ಬಳಕೆ ಮಾಡುತ್ತಾರೆ. ಇದರಿಂದ ಮುಖದಲ್ಲಿ ಸುಕ್ಕು ಗಟ್ಟಿರುವುದು ಕಡಿಮೆಯಾಗಿ ಹೆಚ್ಚು ಕಾಂತಿಯುತ ತ್ವಚೆಯನ್ನಾಗಿ ಮಾಡಿಕೊಂಡಿದ್ದಾರೆ.

ಪುಸ್ತಕವನ್ನೂ ಬರೆದಿದ್ದಾರೆ
ಇವರು ಮೂತ್ರದಿಂದ "The Human Body Owners Workshop Manual" ಎಂಬ ಪುಸ್ತಕವನ್ನು ಬರೆದಿದ್ದಾರೆ. ತನ್ನ ಮೂತ್ರವನ್ನು ಕುಡಿಯಲು ಪ್ರಾರಂಭಿಸಿ ಒಂದು ವರ್ಷದ ನಂತರ ರಕ್ತದೊತ್ತಡವು ಕಡಿಮೆಯಾಗಿದೆ ಎನ್ನುತ್ತಾರೆ.

ತಜ್ಞರ ಪ್ರಕಾರ
ಡೇವ್ ಅವರು ಮೂತ್ರ ಕುಡಿಯುವುದು ಒಂದು ಉಪಯುಕ್ತವಾದ ಸಾಧನೆ, ಮೂತ್ರ ಕುಡಿಯುವುದು ಆರೋಗ್ಯಕರ ಆಯ್ಕೆ ಎಂದು ಹೇಳಲು ಸಾಧ್ಯವಿಲ್ಲ. ಇದಕ್ಕೆ ಯಾವುದೇ ವೈಜ್ಞಾನಿಕ ಪುರಾವೆಗಳಿಲ್ಲ ಎಂದು ತಜ್ಞರು ಹೇಳುತ್ತಾರೆ.



Click it and Unblock the Notifications