Latest Updates
-
ಯೋಗದ ನಂತರ ಮೈಕೈ ನೋವು ಕಾಡುತ್ತಿದೆಯೇ? ಕಚೇರಿಯಲ್ಲಿ ಕೆಲಸ ಮಾಡುವಾಗ ಈ 12 ನಿಮಿಷದ ಟಿಪ್ಸ್ ಪಾಲಿಸಿ -
NEET ಮರುಪರೀಕ್ಷೆ ಮುಗಿದಿದೆ: ಮಕ್ಕಳ ಆತಂಕ ದೂರ ಮಾಡಲು ಪೋಷಕರು ಮಾಡಬೇಕಾದ ಅತ್ಯಗತ್ಯ ಕೆಲಸಗಳಿವು! -
ಪುಣೆ-ಮುಂಬೈ ಮಳೆಗಾಲ: ನಿಮ್ಮ ಮನೆಯನ್ನು ಸುರಕ್ಷಿತವಾಗಿಡಲು ಇಂದೇ ರಾತ್ರಿ ಈ 45 ನಿಮಿಷಗಳ ಕೆಲಸ ಮಾಡಿ! -
ಮಳೆಗಾಲದಲ್ಲಿ ಆರೋಗ್ಯದ ಬಗ್ಗೆ ಎಚ್ಚರ: ಅತಿಸಾರ ತಡೆಯಲು ಮತ್ತು ಸುರಕ್ಷಿತ ಆಹಾರಕ್ಕಾಗಿ ಈ ಸರಳ ಟಿಪ್ಸ್ ಪಾಲಿಸಿ -
ಫಾದರ್ಸ್ ಡೇ 2026: ಅಪ್ಪನ ಮುಖದಲ್ಲಿ ನಗು ಮೂಡಿಸಲು ಇಲ್ಲಿದೆ ಸಿಂಪಲ್ ಮತ್ತು ಬೆಸ್ಟ್ ಐಡಿಯಾಗಳು! -
10ನೇ ಅಂತರಾಷ್ಟ್ರೀಯ ಯೋಗ ದಿನ: ಮಳೆಯನ್ನೂ ಮೀರಿ ಕೋಲ್ಕತ್ತಾದಲ್ಲಿ ಯೋಗ ಸಂಭ್ರಮ, ಮನೆಯಲ್ಲೇ ಅಭ್ಯಾಸ ಮಾಡಲು ಇಲ್ಲಿದೆ ಸರಳ ಟಿಪ್ಸ್! -
ಭಾರತ vs ಅಫ್ಘಾನಿಸ್ತಾನ ಪಂದ್ಯ: ಮ್ಯಾಚ್ ನೋಡುವಾಗ ಮನೆಯಲ್ಲಿ ಶಾಂತಿ ಕಾಪಾಡಲು ಈ ಟಿಪ್ಸ್ ಫಾಲೋ ಮಾಡಿ! -
ನಾಳೆ ನೀಟ್ ಮರುಪರೀಕ್ಷೆ: ಮಳೆಗಾಲದ ನಡುವೆ ಪರೀಕ್ಷೆಗೆ ಸಜ್ಜಾಗುವುದು ಹೇಗೆ? ಇಲ್ಲಿದೆ ಫೈನಲ್ ಚೆಕ್ಲಿಸ್ಟ್ -
ಪಿಎಂ-ಕಿಸಾನ್ ಹಣ ಜಮೆ: ರೈತರೇ, ಈ 2,000 ರೂಪಾಯಿಯಲ್ಲಿ ಆರೋಗ್ಯಕರ ಆಹಾರ ಖರೀದಿಸಿ, ಮಧುಮೇಹ ನಿಯಂತ್ರಿಸಿ! -
ಭಾರಿ ಗಾಳಿ-ಮಳೆಯ ಎಚ್ಚರಿಕೆ: ಜೂನ್ 20ರಂದು ನಿಮ್ಮ ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆ ಕ್ರಮಗಳನ್ನು ಮರೆಯದಿರಿ!
ಬುಧವಾರದ ದಿನ ಭವಿಷ್ಯ

ಪ್ರತಿಯೊಬ್ಬರು ಜೀವನದಲ್ಲಿ ಖುಷಿಯಿಂದ ಇರಬೇಕು ಎಂದು ಬಯಸುವುದು ಸಹಜ. ಆದರೆ ಸುಖ ದುಃಖಗಳು ಮನುಷ್ಯನ ಜೀವನದಲ್ಲಿ ಸಮ ಪ್ರಮಾಣದಲ್ಲಿ ಅನುಭವಿಸಬೇಕು ಎನ್ನುವುದು ವಿಧಿ ನಿಯಮ. ಹಾಗಾಗಿ ಸುಖ ಬಂದಾಗ ಅಹಂಕಾರ ಪಡದೆ, ದುಃಖ ಬಂದಾಗ ಜೀವನದ ಭರವಸೆಯನ್ನೇ ಕಳೆದುಕೊಳ್ಳದೆ ಬದುಕನ್ನು ನಡೆಸಬೇಕು. ಆಗ ಜೀವನದ ನಿಜವಾದ ಅರ್ಥ ಹಾಗೂ ಸೊಬಗು ಅರಿವಾಗುವುದು.
ಸುಖ ಬಂದಾಗ ದೈವ ಶಕ್ತಿಯನ್ನು ಮರೆಯುವುದು ಹಾಗೂ ದುಃಖ ಬಂದಾಗ ದೇವರಲ್ಲಿ ಪರಪರಿಯಾಗಿ ಮೊರೆಯಿಡಬಾರದು. ಪ್ರತಿಕ್ಷಣವೂ ದೇವರ ಬಗ್ಗೆ ನಂಬಿಕೆ ಹಾಗೂ ಭರವಸೆಯಿಟ್ಟು, ಭಕ್ತಿ ಭಾವದಿಂದ ಆರಾಧಿಸಬೇಕು. ಆಗ ನೋವಿನ ಪ್ರಮಾಣ ಕಡಿಮೆಯಾಗಿ ಖುಷಿಯ ಪ್ರಮಾಣ ಹೆಚ್ಚಾಗುವುದು. ನಾವು ಹುಟ್ಟಿದಗಳಿಗೆ ಹಾಗೂ ಕುಂಡಲಿಯಲ್ಲಿ ಉಂಟಾಗುವ ಗ್ರಹಗತಿಗಳ ಬದಲಾವಣೆಯಿಂದ ನಮ್ಮ ಅದೃಷ್ಟ ಹಾಗೂ ನತದೃಷ್ಟಗಳು ನಿರ್ಧರಿತವಾಗುತ್ತದೆ. ಬುಧವಾರವಾದ ಇಂದು ನಮ್ಮ ಭವಿಷ್ಯದಲ್ಲಿ ಯಾವೆಲ್ಲಾ ಬದಲಾವಣೆ ಉಂಟಾಗುವುದು? ಪರಿಹಾರಗಳು ಏನು? ಎನ್ನುವ ಸೂಕ್ತ ವಿವರಣೆಯನ್ನು ರಾಶಿಫಲಗಳ ದಿನ ಭವಿಷ್ಯವನ್ನು ನೋಡಿ ಅರಿಯಿರಿ....

ಮೇಷ
ಬಂಧು ಮಿತ್ರರ ಆಗಮನ ಆಗುವುದು. ಸಮಾಧಾನಕರವಾದಂತಹ ವಾತಾವರಣ ನಿಮಗೆ ಲಭಿಸುವುದು. ಸುಂದರವಾದ ಬದುಕು ಹಾಗೂ ಭಗವಂತನ ಕೃಪೆಯಿಂದ ಉತ್ತಮ ಕಾರ್ಯಾರಂಭವಾಗುವುದು. ಸಾಧನೆ ಮಾಡಬೇಕೆಂಬ ಬಯಕೆಯನ್ನು ನೀವು ಹೊಂದಿದ್ದರೆ. ಇಂದು ಅದು ನೆರವೇರುವುದು. ಮಾನಸಿಕ ನೆಮ್ಮದಿಯೊಂದಿಗೆ ಆರ್ಥಿಕವಾಗಿ ಲಾಭಾಂಶಗಳು ನಿಮಗೆ ದೊರೆಯುವುದು. ವ್ಯಾಪಾರ ವಹಿವಾಟುಗಳಿಂದ ಸಮೃದ್ಧಿ ಉಂಟಾಗುವುದು. ಚಿತ್ರೋದ್ಯಮದಲ್ಲಿ ಕಲಾವಿದರಿಗೆ ಅನುಕೂಲವಾಗುವುದು. ಇನ್ನಷ್ಟು ಒಳಿತಿಗಾಗಿ ವಿಷ್ಣುವಿನ ಆರಾಧನೆ ಮಾಡಿ.

ವೃಷಭ
ಸಮಾಧಾನದ ಬದುಕನ್ನು ಕಾಣಲು ಕಷ್ಟವಾಗುವುದು. ನಿರ್ದಿಷ್ಟವಾದ ಗುರಿ ತಲುಪಲು ಅಸಾಧ್ಯವಾಗುವುದು. ಬಂಧುಗಳು ಕಿರಿಕಿರಿಯನ್ನುಂಟುಮಾಡುವರು. ವಿದ್ಯಾರ್ಥಿಗಳ ಜೀವನದಲ್ಲಿ ಅಡೆತಡೆಗಳು ಉಂಟಾಗುವಂತಹ ಸಾಧ್ಯತೆಗಳಿವೆ. ಯಾವುದೇ ಕೆಲಸಗಳಿಗೆ ಜಾಮೀನು ನೀಡಲು ಮುಂದಾಗದಿರಿ. ಸಮಸ್ಯೆಗಳ ನಿವಾರಣೆ ಹಾಗೂ ಸಮೃದ್ಧಿಯ ಜೀವನಕ್ಕಾಗಿ ಗಣೇಶನ ಆರಾಧನೆ ಹಾಗೂ ಕುಲದೇವರ ಪ್ರಾರ್ಥನೆ ಮಾಡುವುದು ಸೂಕ್ತ.

ಮಿಥುನ
ಇಂದು ಸಮಾಧಾನಕರ ಬದುಕು ನಿಮ್ಮದಾಗುವುದು. ತಂದೆ ಮಕ್ಕಳ ನಡುವೆ ಇದ್ದ ಭಿನ್ನಾಭಿಪ್ರಾಯ ಉಪಶಮನವಾಗುವುದು. ಮನೆಯಲ್ಲಿ ನೆಮ್ಮದಿಯ ವಾತಾರವರಣ ಉಂಟಾಗುವುದು. ದೂರದ ಬಂಧುಗಳು ಅಗಲಿದ ವಾರ್ತೆಯನ್ನು ಕೇಳಬೇಕಾಗುವುದು. ಪ್ರಯಾಣ ಮಾಡುವಾಗ ಆದಷ್ಟು ಜಾಗ್ರತರಾಗಿರಿ. ಯುವಕರು ವಾಹನ ಚಲಾಯಿಸುವಾಗ ಆದಷ್ಟು ಕಾಳಜಿಯಿಂದ ಇರಬೇಕು. ಸಮಸ್ಯೆಗಳ ನಿವಾರಣೆ ಹಾಗೂ ಉತ್ತಮ ಬದುಕಿಗಾಗಿ ವಿಷ್ಣು ಹಾಗೂ ಗಣೇಶನ ಆರಾಧನೆ ಮಾಡಬೇಕು.

ಕರ್ಕ
ಮನೆಯಲ್ಲಿ ನೆಮ್ಮದಿಯ ವಾತಾವರಣ ಇರುವುದರಿಂದ ಮಾನಸಿಕವಾಗಿ ಸಂತೋಷಗೊಳ್ಳುವಿರಿ. ಪತ್ನಿ ಹೇಳುವ ಧನಾತ್ಮಕ ವಿಚಾರಗಳನ್ನು ಅನುಸರಿಸಿದರೆ ಲಾಭ ಪಡೆದುಕೊಳ್ಳಬಹುದು. ಮಕ್ಕಳಿಂದ ಶುಭವಾರ್ತೆ ಲಭಿಸುವುದು. ಉದ್ಯೋಗವಿಲ್ಲದವರಿಗೆ ಉದ್ಯೋಗ ಪ್ರಾಪ್ತಿಯಾಗುವುದು. ಉದ್ಯೋಗ ಕ್ಷೇತ್ರದಲ್ಲಿ ಲಾಭ ಉಂಟಾಗುವುದು. ಯುವಕ ಯುವತಿಯರಿಗೂ ನೆಮ್ಮದಿಯ ದಿನವಾಗಲಿದೆ. ನಿಮ್ಮ ಕನಸು ನಸಾಗಲು ಗಣೇಶನ ಆರಾಧನೆಯನ್ನು ಮಾಡಿ.

ಸಿಂಹ
ಇಂದು ನಿಮಗೆ ಮಾನಸಿಕವಾಗಿ ಕಿರಿಕಿರಿ ಉಂಟಾಗುವುದು. ವಿಪರೀತವಾದ ದೇಹದ ಆಯಾಸ ಹಾಗೂ ಆರೋಗ್ಯ ಸಮಸ್ಯೆ ನಿಮ್ಮನ್ನು ಕಾಡುವುದು. ಮನೆ ಮಂದಿಯ ಬಗ್ಗೆ ಗಮನಹರಿಸಲು ಸಾಧ್ಯವಾಗದು. ದಿನದಿಂದ ದಿನಕ್ಕೆ ಸಾಲ ಹೆಚ್ಚುವುದು. ಈ ಕುರಿತು ಇನ್ನಷ್ಟು ಚಿಂತೆ ನಿಮ್ಮನ್ನು ಕಾಡುವುದು. ಒಂದಲ್ಲಾ ಎರಡಲ್ಲಾ ಹತ್ತಾರು ಸಮಸ್ಯೆಗಳು ನಿಮ್ಮನ್ನು ಕಾಡುವುದು. ಸಮಸ್ಯೆಗಳ ನಿವಾರಣೆಗೆ ಈಶ್ವರನ ಆರಾಧನೆ ಹಾಗೂ ಆಂಜನೇಯನ ಸ್ತುತಿಯನ್ನು ಓದಿ.

ಕನ್ಯಾ
ಇಂದು ನಿಮಗೆ ಸಾಮಾನ್ಯವಾದಂತಹ ದಿನ ಎಂದು ಹೇಳಬಹುದು. ಅಂದುಕೊಂಡ ಕೆಲಸವು ಸುಗಮವಾಗಿ ಈಡೇರದು. ವಿದ್ಯಾರ್ಥಿಗಳಿಗೆ ಇಂದು ಶುಭದಿನ. ಬಂಧು ಮಿತ್ರರಿಂದ ಕೆಲವು ಸಮಸ್ಯೆ ಉಂಟಾಗುವ ಸಾಧ್ಯತೆ ಇದೆ. ಆಯಾಸಗೊಂಡ ಶರೀರ ಇಂದು ನಿರಾಳತೆಯನ್ನು ಪಡೆಯುವುದು. ಆರೋಗ್ಯ ಸುಧಾರಣೆ ಹೊಂದುವುದು. ವ್ಯಾಪಾರ ವಹಿವಾಟಿನಲ್ಲೂ ಲಾಭ ಉಂಟಾಗುವುದು. ರೈತರಿಗೆ ಸಮಾಧಾನ ನೀಡುವಂತಹ ದಿನ. ಇನ್ನಷ್ಟು ಒಳಿತಿಗಾಗಿ ಗಣೇಶ ಹಾಗೂ ಕುಲದೇವರ ಆರಾಧನೆ ಮಾಡಿ.

ತುಲಾ
ಇಂದು ನಿಮಗೆ ಅದೃಷ್ಟದ ದಿನ. ಕೆಲಸ ಕಾರ್ಯಗಳಲ್ಲಿ ಜಯ ಲಭಿಸುವುದು. ಬರಬೇಕಾದ ಹಣಕಾಸು ಕೈಸೇರುವುದು. ತಾಂತ್ರಿಕ ವರ್ಗದಲ್ಲಿ ಕೆಲಸ ಮಾಡುವವರಿಗೂ ಉತ್ತಮ ಲಾಭ ಉಂಟಾಗುವುದು. ಮನೆಯಲ್ಲಿ ಶಾಂತಿ ನೆಮ್ಮದಿಯ ವಾತಾವರಣ ಇರುವುದು. ನಿರ್ದಿಷ್ಟ ಗುರಿ ತಲುಪಲು ಸಾಧ್ಯವಾಗುವುದು. ಹೆಣ್ಣುಮಕ್ಕಳಿಗೆ ಸ್ನೇಹಿತನ ಒಡಂಬಡಿಕೆಯಿಂದ ಸಮಾಧಾನ ಉಂಟಾಗುವುದು. ಇನ್ನಷ್ಟು ಒಳಿತಿಗಾಗಿ ದೇವಿ ಮತ್ತು ಗಣೇಶನ ಆರಾಧನೆಯನ್ನು ಮಾಡಿ.

ವೃಶ್ಚಿಕ
ಪೂರ್ಣಪ್ರಮಾಣದ ಸಮಾಧಾನ ದೊರೆಯದು. ಮಾನಸಿಕವಾದ ಕಿರಿಕಿರಿಯನ್ನು ಅನುಭವಿಸುವಿರಿ. ನೀವು ಅಂದುಕೊಂಡ ಗುರಿ ಸಾಧಿಸಲು ಸಾಧ್ಯವಾಗದು. ಬಂಧು ಮಿತ್ರರಿಂದ ಕಿರಿಕಿರಿಯಾದ ವಾತಾವರಣ ಸೃಷ್ಟಿಯಾಗುವುದು. ಆಸ್ತಿಗಾಗಿ ಜಗಳ ಮಾಡದಿರಿ. ವಕೀಲ ವೃತ್ತಿಯಲ್ಲಿರುವವರಿಗೆ ಇಂದು ಒಳ್ಳೆಯ ದಿನವಲ್ಲ. ಜೀವನದ ಎಲ್ಲಾ ಸಮಸ್ಯೆಗಳ ನಿವಾರಣೆಗಾಗಿ ಗಣೇಶ ಮತ್ತು ಆಂಜನೇಯನ ಉಪಾಸನೆಯನ್ನು ಮಾಡಿ.

ಧನು
ಇಂದು ನಿಮಗೆ ಅಷ್ಟು ಒಳ್ಳೆಯ ದಿನವಲ್ಲ ಎಂದೇ ಹೇಳಬೇಕು. ಮಾನಸಿಕವಾಗಿ ಅನೇಕ ವಿಚಾರಗಳು ನಿಮ್ಮನ್ನು ಅಸಮಧಾನಗೊಳಿಸುತ್ತದೆ. ಮನೆಯಲ್ಲೂ ನೆಮ್ಮದಿಯ ವಾತಾವರಣ ಇಲ್ಲದಿರುವುದು. ಮಕ್ಕಳು ಮಾಡಿದ ತಪ್ಪಿಗೆ ಹಣವನ್ನು ವ್ಯಯಿಸಬೇಕಾಗುವುದು. ರಾಹು ಕಾಲದಲ್ಲಿ ಪ್ರಯಾಣ ಮಾಡದಿರಿ. ವಾಹನ ಚಲಿಸುವಾಗ ಆದಷ್ಟು ಜಾಗ್ರತರಾಗಿರಿ. ಕೋರ್ಟು ಕಚೇರಿಯಲ್ಲೂ ಅಪಜಯ ಉಂಟಾಗುವುದು. ರಾಜಕೀಯ ಕ್ಷೇತ್ರದಲ್ಲಿರುವವರಿಗೂ ಅಷ್ಟು ಅನುಕೂಲಕರವಲ್ಲದ ದಿನ. ಉತ್ತಮ ಭವಿಷ್ಯಕ್ಕಾಗಿ ಗಣೇಶ ಮತ್ತು ವಿಷ್ಣುವಿನ ಆರಾಧನೆ ಮಾಡಿ.

ಮಕರ
ಮನೆಯಲ್ಲಿ ನೆಮ್ಮದಿ ಇರದು. ಮಾನಸಿಕವಾಗಿ ನೆಮ್ಮದಿ ಹಾಳಾಗುವುದು. ಉದ್ಯೋಗ ಕ್ಷೇತ್ರದಲ್ಲೂ ಏರು ಪೇರು ಉಂಟಾಗುವುದು. ಆರ್ಥಿಕವಾಗಿ ಅನೇಕ ಸಮಸ್ಯೆಗಳು ಉಂಟಾಗುವುದು. ಸಮಸ್ಯೆಗಳ ನಿವಾಋಣೆ ಹಾಗೂ ಸುಂದರ ಬದುಕಿಗಾಗಿ ಶಿವ ಮತ್ತು ಆಂಜನೇಯನ ಆರಾಧನೆ ಮಾಡಿ.

ಕುಂಬ
ಇಂದು ನಿಮಗೆ ಒಳ್ಳೆಯದಿನ. ಸ್ತ್ರೀಯರು ಮಾಡುತ್ತಿರುವ ಉದ್ಯೋಗ ಕ್ಷೇತ್ರದಲ್ಲಿ ಪ್ರಗತಿ ಉಂಟಾಗುವುದು. ಸ್ತ್ರೀಯರಿಗೆ ತವರು ಮನೆಯಿಂದ ಉಡುಗೊರೆ ದೊರೆಯುವುದು. ಮಕ್ಕಳಿಂದ ಶುಭವಾರ್ತೆ ಲಭಿಸುವುದು. ನಿಮ್ಮ ಗುರಿಸಾಧನೆ ಸುಗಮವಾಗಿ ಆಗುವುದು. ತೈಲ ಮತ್ತು ಖನಿಜ ವ್ಯಾಪಾರಸ್ಥರಿಗೆ ಉತ್ತಮ ಲಾಭ ಉಂಟಾಗುವುದು. ಇನ್ನಷ್ಟು ಒಳಿತಿಗಾಗಿ ಕುಲದೇವರ ಆರಾಧನೆ ಹಾಗೂ ಗಣೇಶನ ಪ್ರಾರ್ಥನೆ ಮಾಡಿ.

ಮೀನ
ಬಂಧು ಮಿತ್ರರಿಂದ ಸಹಕಾರ ದೊರೆಯುವುದು. ಮನೆಯಲ್ಲಿ ನೆಮ್ಮದಿಯ ವಾತಾವರಣ. ಸಹೋದ್ಯೋಗಿಗಳಿಂದ ಸಹಕಾರ ಹಾಗೂ ಉದ್ಯೋಗ ಕ್ಷೇತ್ರದಲ್ಲಿ ಧನಾಗಮನ ಉಂಟಾಗುವುದು. ಅವಿವಾಹಿತರಿಗೆ ವಿವಾಹ ಯೋಗ ಕೂಡಿಬರುವುದು. ನಿಮ್ಮ ಸಮಸ್ಯೆಗಳ ನಿವಾರಣೆ ಹಾಗೂ ಉತ್ತಮ ಭವಿಷ್ಯಕ್ಕಾಗಿ ವಿಷ್ಣು ಮತ್ತು ಗಣೇಶನ ಆರಾಧನೆ ಮಾಡಿ.



Click it and Unblock the Notifications