05-12-2017 ಬುಧವಾರದ ದಿನ ಭವಿಷ್ಯ

By Divya Pandith
Subscribe to Boldsky
Daily Astrology 06 /12/2017 | Oneindia Kannada

ನಮ್ಮ ನಿತ್ಯದ ಬದುಕಿಗೆ ಒಂದು ನೀತಿ ನಿಯಮ ಎನ್ನುವುದು ಇರಬೇಕು. ನಾವು ವಾಸಿಸುವ ಮನೆಯ ಉದ್ದಳತೆ ಚಿಕ್ಕದಾಗಿದ್ದರೂ ಮನಸ್ಸು ವಿಶಾಲವಾಗಿರಬೇಕು. ನಮ್ಮ ಸುತ್ತಲಿರುವ ಜನರೊಂದಿಗೆ ಬೆರೆಯಬೇಕು, ಹಣದಲ್ಲಿ ಬಡತನ ಇದ್ದರೂ ನಮ್ಮ ಮನಸ್ಸು ಶ್ರೀಮಂತಿಕೆಯಿಂದ ಕೂಡಿರಬೇಕು. ನಮ್ಮವರು-ತನ್ನವರು ಎನ್ನುವ ಪ್ರೀತಿ ವಿಶ್ವಾಸದಿಂದ ಕೂಡಿರಬೇಕು. ಆಗಲೇ ಆ ಭಗವಂತ ನಮಗೆ ಒಳ್ಳೆಯದನ್ನು ಕರುಣಿಸುತ್ತಾನೆ.

ಬುಧವಾರವಾದ ಇಂದು ಸಾಮಾನ್ಯವಾಗಿ ಎಲ್ಲರೂ ಕೆಲಸದ ಒತ್ತಡದಲ್ಲಿಯೇ ಮುಳುಗಿರುತ್ತಾರೆ. ಈ ಒತ್ತಡದ ಬದುಕಿನ ನಡುವೆಯೂ ಯಾವೆಲ್ಲಾ ಬದಲಾವಣೆಯನ್ನು ನಾವು ಕಾಣಬಹುದು? ಹೊಸದಾದ ಯಾವ ತಿರುವು ನಮ್ಮನ್ನು ಆಕರ್ಷಿಸಲಿದೆ? ಎನ್ನುವುದನ್ನು ಅರಿಯಬೇಕೆಂದುಕೊಂಡಿದ್ದರೆ ಇಂದಿನ ರಾಶಿ ಭವಿಷ್ಯವನ್ನು ಅರಿಯಿರಿ...

ಮೇಷ

ಮೇಷ

ಸಮಾಧಾನಕರವಾದ ಜೀವನ ನಿಮಗೆ ಲಭ್ಯವಾಗುತ್ತದೆ. ಬಂಧು ಮಿತ್ರರಿಂದಲೂ ಸಂಪೂರ್ಣ ಸಹಕಾರ ಲಭಿಸುವುದು. ಮಾಡುತ್ತಿರುವ ಕೆಲಸದಲ್ಲಿ ಯಶಸ್ಸು ಹಾಗೂ ಲಾಭತಂದುಕೊಡುವುದು. ವ್ಯಾಪಾರ ವಹಿವಾಟುಗಳಲ್ಲಿ ಅಧಿಕ ಪ್ರಮಾಣದ ಲಾಭಾಂಶವನ್ನು ನೀವು ಪಡೆದುಕೊಳ್ಳುವಿರಿ. ವಿದ್ಯಾರ್ಥಿಗಳಿಗೂ ಶುಭ ದಿನ. ಇನ್ನಷ್ಟು ಉತ್ತಮ ಬದುಕಿಗಾಗಿ ಶಿವ ಮತ್ತು ವಿಷ್ಣುವಿನ ಆರಾಧನೆ ಮಾಡಿ.

ವೃಷಭ

ವೃಷಭ

ಆರ್ಥಿಕವಾಗಿ ಏರು ಪೇರು ಉಂಟಾಗುವುದು. ವಿಪರೀತವಾದ ಆರೋಗ್ಯ ಸಮಸ್ಯೆಯಿಂದ ವೈದ್ಯರನ್ನು ಭೇಟಿಯಾಗಬೇಕಾಗುವುದು. ಸ್ತ್ರೀಯರಿಂದಲೂ ಅವಮಾನ ಉಂಟಾಗುವುದು. ವ್ಯಾಪಾರ ವಹಿವಾಟುಗಳಲ್ಲಿ ಸಂಪೂರ್ಣವಾದ ಲಾಭ ಪಡೆಯದೆ ಇರುವ ವಿಚಾರವಾಗಿ ಮನಸ್ಸಿಗೆ ತೀವ್ರವಾದ ನೋವು ಉಂಟಾಗುವುದು. ಸಮಸ್ಯೆಗಳ ನಿವಾರಣೆ ಹಾಗೂ ಉತ್ತಮ ಬದುಕಿಗಾಗಿ ಗಣೇಶನ ಆರಾಧನೆ ಮತ್ತು ವಿಷ್ಣುವಿನ ಸ್ಮರಣೆ ಮಾಡಿ.

ಮಿಥುನ

ಮಿಥುನ

ಮಾಡುತ್ತಿರುವ ಕೆಲಸದಲ್ಲಿ ಬದಲಾವಣೆ ಕಾಣಬೇಡಿ. ಬೇರೆಯವರ ವಿಚಾರದಲ್ಲಿ ನೀವು ಹಸ್ತಕ್ಷೇಪ ಮಾಡದಿರಿ. ನಿಮಗೆ ಇಂದು ಉತ್ತಮವಾದ ದಿನವಾಗಿದ್ದರೂ ಮಾನಸಿಕವಾಗಿ ಕಿರಿಕಿರಿ ಉಂಟಾಗುವುದು. ವಿದ್ಯಾರ್ಥಿಗಳ ಪ್ರಯತ್ನಕ್ಕೆ ಕೊಂಚ ಪ್ರತಿಫಲ ದೊರೆಯುವುದು. ಸರಕಾರದ ಮನ್ನಣೆಗೆ ಪಾತ್ರರಾಗುವಿರಿ. ಉದ್ಯೋಗ ಕ್ಷೇತ್ರದಲ್ಲಿ ಉನ್ನತಿ ಕಾಣುವಿರಿ. ಇನ್ನಷ್ಟು ಒಳಿತು ಹಾಗೂ ಉತ್ತಮ ಬದುಕಿಗಾಗಿ ವಿಷ್ಣುವಿನ ಆರಾಧನೆ ಮಾಡಿ.

 ಕರ್ಕ

ಕರ್ಕ

ಇಂದು ನಿಮಗೆ ಉತ್ತಮವಾದ ದಿನವಾಗಲಿದೆ. ಬಂಧುಗಳು ನೀವು ನಿರೀಕ್ಷಿಸಿದ ಮಟ್ಟದಲ್ಲಿಯೇ ಸಹಕಾರವನ್ನು ನೀಡುವರು. ಮಾದ್ಯಮಗಳಲ್ಲಿ ಕೆಲಸ ಮಾಡುವವರಿಗೆ ಹಾಗೂ ರಾಜಕೀಯ ಕ್ಷೇತ್ರದಲ್ಲಿ ತೊಡಗಿಕೊಂಡವರಿಗೆ ಉತ್ತಮವಾದ ಫಲ ದೊರೆಯುವುದು. ಅನುಕೂಲಕರ ವಾತಾವರಣವು ಸೃಷ್ಟಿಯಾಗುವುದು. ಜೀವನದಲ್ಲಿ ಇನ್ನಷ್ಟು ಪ್ರಗತಿಗಾಗಿ ವೆಂಕಟೇಶ್ವರನ ಆರಾಧನೆ ಮಾಡಿ.

ಸಿಂಹ

ಸಿಂಹ

ವಿಪರೀತವಾದ ದೇಹದ ಆಯಾಸ ಹಾಗೂ ಅನಾರೋಗ್ಯ ನಿಮ್ಮನ್ನು ಕಾಡುವುದು. ಸಾಲವನ್ನು ಮಾಡಲೇ ಬೇಕಾದ ಪರಿಸ್ಥಿತಿ ಎದುರಾಗುವುದು. ಸ್ಥಿರಾಸ್ತಿಯಿಂದ ನಷ್ಟ ಉಂಟಾಗುವುದು. ತೀರ್ಮಾನಿಸಿದ ಕೆಲಸದಲ್ಲಿ ಅನೇಕ ಅಡೆ ತಡೆಗಳು ಉಂಟಾಗುವವು. ಮನೆಯಲ್ಲಿ ಅನೇಕ ಸಮಸ್ಯೆಗಳು ನಿಮ್ಮನ್ನು ಕಾಡುವುದು. ಜೀವನದಲ್ಲಿ ಕಷ್ಟಗಳ ನಿವಾರಣೆಗಾಗಿ ವಿಷ್ಣುವಿನ ಆರಾಧನೆ ಮಾಡಿ.

ಕನ್ಯಾ

ಕನ್ಯಾ

ಆಸ್ತಿಗಾಗಿ ಕಚ್ಚಾಡದಿರಿ. ವೈದ್ಯರು ಮತ್ತು ನ್ಯಾಯಾಧೀಶರು ಹೆಚ್ಚಿನ ಪ್ರಮಾಣದ ಲಾಭಾಂಶವನ್ನು ನಿರೀಕ್ಷಿಸುವಂತಿಲ್ಲ. ನೀವು ಮಾಡುತ್ತಿರುವ ಕೆಲಸವನ್ನು ಶ್ರದ್ಧೆಯಿಂದ ಮಾಡಿ. ಉತ್ತಮ ಲಾಭ ಉಂಟಾಗುವುದು. ವಿದ್ಯಾರ್ಥಿಗಳ ಜೀವನದಲ್ಲಿ ಏರು ಪೇರು ಉಂಟಾಗುವುದು. ಕಷ್ಟಗಳ ನಿವಾರಣೆಗೆ ವಿಷ್ಣುವಿನ ಆರಾಧನೆ ಮಾಡಿ.

ತುಲಾ

ತುಲಾ

ತುಲಾ ರಾಶಿಯವರು ಸಮಾಧಾನಕರ ಬದುಕನ್ನು ಕಾಣುವಿರಿ. ಮುಂದಿನ ದಿನಗಳಲ್ಲೂ ಉತ್ತಮ ಭವಿಷ್ಯವನ್ನು ಕಾಣಲಿದ್ದೀರಿ. ಇನ್ನಷ್ಟು ಯಶಸ್ಸು ಹಾಗೂ ಸಂತೋಷಕರವಾದ ದಿನಗಳಿಗಾಗಿ ಶಿವ ಮತ್ತು ವಿಷ್ಣುವಿನ ಆರಾಧನೆ ಮಾಡಿ.

ವೃಶ್ಚಿಕ

ವೃಶ್ಚಿಕ

ಆರ್ಥಿಕ ಸ್ಥಿತಿಯಲ್ಲಿ ತೊಂದರೆ ಉಂಟಾಗುವುದು. ಬಂಧು ಮಿತ್ರರಿಂದಲೂ ಕಿರಿಕಿರಿ ಉಂಟಾಗುವುದು. ಬಹುದಿನಗಳಿಂದ ಕೈಗೊಂಡ ತೀರ್ಮಾನದಲ್ಲಿ ಏರು ಪೇರು ಉಂಟಾಗುವುದು. ಇದು ನಿಮ್ಮ ಮಾನಸಿಕ ಸ್ಥಿತಿಯನ್ನು ತಲ್ಲಣಗೊಳಿಸುವ ಸಾಧ್ಯತೆ ಇದೆ. ಆದಷ್ಟು ಕಾಳಜಿಯಿಂದ ಇರಬೇಕಾಗುವುದು. ಸ್ತ್ರೀಯರಿಂದ ಅವಮಾನ ಹಾಗೂ ಆರೋಪಗಳನ್ನು ಎದುರಿಸ ಬೇಕಾಗುವುದು. ಸಮಸ್ಯೆಗಳ ನಿವಾರಣೆಗೆ ಶಿವ ಮತ್ತು ಶಕ್ತಿಯ ಆರಾಧನೆ ಮಾಡಿ.

ಧನು

ಧನು

ಮಾನಸಿಕವಾದ ಕಿರಿಕಿರಿ ಮುಂದುವರಿಯುವುದು. ಅನಿರೀಕ್ಷಿತ ಮಾರ್ಪಾಡುಗಳನ್ನು ಕಾಣಲಿದ್ದೀರಿ. ಬಂಧು ಮಿತ್ರರಿಂದ ಕಿರಿಕಿರಿ. ನಿರೀಕ್ಷಿತ ಮಟ್ಟದ ಯಶಸ್ಸು ಲಭಿಸದು. ವಾಹನ ಚಲಾಯಿಸುವಾಗ ಕಾಳಜಿ ವಹಿಸಿ. ಆಮದು ರಫ್ತು ವ್ಯವಹಾರದಲ್ಲಿ ನಷ್ಟ ಅನುಭವಿಸುವ ಸಾಧ್ಯತೆಗಳಿವೆ. ಬಂಧುಗಳು ಅಗಲಿದ ಸುದ್ದಿ ಕೇಳಬಹುದು. ವಿದೇಶ ಪ್ರಯಾಣದ ಆಸೆ ಭಗ್ನಗೊಳ್ಳುವುದು. ಸಮಸ್ಯೆಗಳ ನಿವಾರಣೆಗೆ ಶಿವ ಮತ್ತು ವಿಷ್ಣುವಿನ ಆರಾಧನೆ ಮಾಡಿ.

ಮಕರ

ಮಕರ

ಕೆಲವರು ಮಾತ್ರ ಸಮಾಧಾನಕರ ಬದುಕನ್ನು ಕಾಣಲಿದ್ದಾರೆ. ವಿಪರೀತವಾದ ದೇಹದ ಆಯಾಸ ಕಾಣಿಸಿಕೊಳ್ಳುವುದು. ಅಧಿಕ ಹಣವನ್ನು ವ್ಯಯಿಸಿ, ದೂರದ ಪ್ರಯಾಣ ಮಾಡಬೇಕಾದ ಪರಿಸ್ಥಿತಿ ಒದಗಿ ಬರುವುದು. ಕಬ್ಬಿಣ ವ್ಯಾಪಾರದಲ್ಲಿ ಏರು ಪೇರು ಉಂಟಾಗುವುದು. ಸಮಸ್ಯೆಗಳ ನಿವಾರಣೆಗೆ ವಿಷ್ಣುವಿನ ಆರಾಧನೆ ಮಾಡಿ.

 ಕುಂಬ

ಕುಂಬ

ನಿಮಗೆ ಸುಖಮಯವಾದ ಜೀವನ. ನೆಮ್ಮದಿಯನ್ನು ಕಾಣಲಿದ್ದೀರಿ. ತಂದೆ ತಾಯಿಯ ಆಶೀರ್ವಾದ ಲಭಿಸುವುದು. ಬಂಧು ಮಿತ್ರರು ಸಕಾರಾತ್ಮಕವಾಗಿ ಸಹಕಾರ ನೀಡುವರು. ಅಭಿವೃದ್ಧಿಯ ಪತದಲ್ಲಿ ನಿಮ್ಮ ಜೀವನ ಸಾಗಲಿದೆ. ಆಂತರ್ಯದ ವಿಚಾರವನ್ನು ಯಾರೊಂದಿಗೂ ಹಂಚಿಕೊಳ್ಳದಿರಿ. ಸಹೋದರಿಯ ಸಹಕಾರ ದೊರೆಯುವುದು. ನಿರೀಕ್ಷಿತ ಮಟ್ಟದ ಯಶಸ್ಸಿಗೆ ವಿಷ್ಣುವಿನ ಆರಾಧನೆ ಮಾಡಿ.

ಮೀನ

ಮೀನ

ಸುಖಪ್ರದವಾದ ದಿನ ನಿಮಗೆ. ಮನೆಯಲ್ಲಿ ನೆಮ್ಮದಿಯನ್ನು ಕಾಣಲಿದ್ದೀರಿ. ಮಾಡುತ್ತಿರುವ ಉದ್ಯೋಗವನ್ನು ಮುಂದುವರಿಸಿ. ಮನೆಯಲ್ಲಿ ನೆಮ್ಮದಿಯ ವಾತಾವರಣ ಲಭಿಸುವುದು. ಹೆಂಡತಿಯಿಂದಲೂ ಆರ್ಥಿಕ ಸ್ಥಿತಿ ಸುಧಾರಣೆ ಕಾಣುವುದು. ವಿದೇಶಯಾನದ ಕನಸು ನನಸಾಗುವುದು. ಇನ್ನಷ್ಟು ಅಭಿವೃದ್ಧಿಗೆ ದೇವಿ ಮತ್ತು ವಿಷ್ಣುವಿನ ಆರಾಧನೆ ಮಾಡಿ.

For Quick Alerts
ALLOW NOTIFICATIONS
For Daily Alerts

    English summary

    rashi-bhavishya-December-5th

    Know what astrology and the planets have in store for you today. Choose your zodiac sign and read the details...
    We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more