Latest Updates
-
ಮನೆಯವರ ವಿರೋಧದ ನಡುವೆ ಮದುವೆ: ಅಲಹಾಬಾದ್ ಹೈಕೋರ್ಟ್ನಿಂದ ಜೋಡಿಗಳಿಗೆ ಸಿಕ್ಕಿತು ಭರ್ಜರಿ ರಕ್ಷಣೆ! -
ಮಳೆ ನಂತರ ದೆಹಲಿ-ಎನ್ಸಿಆರ್ನಲ್ಲಿ ಶುದ್ಧ ಗಾಳಿ: ನಿಮ್ಮ ಮನೆಯನ್ನು ಫ್ರೆಶ್ ಆಗಿಡಲು ಈ ಸರಳ ಟಿಪ್ಸ್ ಪಾಲಿಸಿ! -
ಯೋಗಿನಿ ಏಕಾದಶಿ: ಮಧುಮೇಹಿಗಳು ಉಪವಾಸ ಮಾಡುವಾಗ ಈ ಆರೋಗ್ಯ ಟಿಪ್ಸ್ ಮರೆಯದಿರಿ! -
ವಿಶ್ವ ಜನಸಂಖ್ಯಾ ದಿನ: ಉಚಿತ ಗರ್ಭನಿರೋಧಕಗಳು ಮತ್ತು ನಿಮ್ಮ ಗೌಪ್ಯತೆ ಬಗ್ಗೆ ತಿಳಿಯಲೇಬೇಕಾದ ಸತ್ಯಗಳು -
ಭಾರತ-ಇಂಗ್ಲೆಂಡ್ ಟಿ20 ಪಂದ್ಯದ ರೋಚಕತೆ ನಡುವೆ ಫಿಟ್ ಆಗಿರಲು ಈ 7 ನಿಮಿಷದ ಟಿಪ್ಸ್ ಮಿಸ್ ಮಾಡ್ಬೇಡಿ! -
ಮಳೆಗಾಲದ ಡೇಟಿಂಗ್: ಬಜೆಟ್ ಸ್ನೇಹಿ ಐಡಿಯಾಗಳು ಮತ್ತು ಸುರಕ್ಷಿತವಾಗಿರಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ಕೋಲ್ಕತ್ತಾದಲ್ಲಿ ಭಾರಿ ಮಳೆ: ನಿಮ್ಮ ಬಾಲ್ಕನಿ ಮತ್ತು ಗಿಡಗಳನ್ನು ಸುರಕ್ಷಿತವಾಗಿಡಲು ಈ ಟಿಪ್ಸ್ ಮಿಸ್ ಮಾಡಬೇಡಿ! -
ಮಳೆಗಾಲದಲ್ಲಿ ಹೊಟ್ಟೆಯ ಸಮಸ್ಯೆ ಕಾಡ್ತಿದೆಯಾ? ಆರೋಗ್ಯವಾಗಿರಲು ಈ ಆಹಾರ ಪದ್ಧತಿ ಪಾಲಿಸಿ -
ಧಮಾಲ್ 4 ರಿಲೀಸ್: ಅಜಯ್ ದೇವಗನ್ ಕಾಮಿಡಿ ಹಬ್ಬಕ್ಕೆ ಫ್ಯಾಮಿಲಿ ಜೊತೆ ರೆಡಿಯಾಗಿ! -
ಸಮಲಿಂಗಿ ಜೋಡಿಗಳೇ ಎಚ್ಚರ: ಗಿಫ್ಟ್ ಟ್ಯಾಕ್ಸ್ನಿಂದ ಪಾರಾಗಲು ಈ ದಾಖಲೆಗಳು ಕಡ್ಡಾಯ!
ಮರಣದಂಡನೆ ವಿಧಿಸಿದ್ದ ವ್ಯಕ್ತಿಯ ವಿಚಿತ್ರ ಬಯಕೆ! ಹೀಗೂ ಉಂಟೇ?
ಮರಣದಂಡನೆಗೆ ವಿಧಿಸಲಾದ ಬಳಿಕ ಈತನಲ್ಲಿ ಅಂತಿಮ ಇಚ್ಛೆ ಏನೆಂದು ಕೇಳಿದಾಗ ಈತ ತನ್ನ ಅಂತಿಮ ಊಟ ಒಬ್ಬ ಬಾಲಕನನ್ನು ತಿನ್ನುವ ಮೂಲಕ ಆಗಬೇಕು ಎಂದು ಹೇಳಿದನಂತೆ!
ನರಮಾಂಸದ ಸೇವನೆಯನ್ನು ಯಾವುದೇ ಧರ್ಮ ಪುರಸ್ಕರಿಸುವುದಿಲ್ಲ. ಆದರೆ ಆಹಾರವೇ ಇಲ್ಲದ ಪರಿಸ್ಥಿತಿಯಲ್ಲಿ ಮರಣಹೊಂದಿದ ತಮ್ಮ ಸಹಚರರ ಸ್ನಾಯುಗಳನ್ನು ಸೇವಿಸಿ ಜೀವಂತವಿದ್ದ ಕೆಲವು ಪ್ರಕರಣಗಳಿವೆ. ಇನ್ನುಳಿದ ಪ್ರಕರಣಗಳೆಲ್ಲಾ ನರಮಾಂಸ ಸೇವನೆಯ ವ್ಯಸನದ ಭೀಭತ್ಸಕಥೆಗಳಾಗಿವೆ. ಕೆಲವು ನರಹಂತಕರು ತಾವು ಬೇಟೆಯಾಡಿದವರ ಒಳ ಅಂಗಗಳನ್ನು ತಿನ್ನುವ ವ್ಯಸನ ಹೊಂದಿದ್ದು ಮನುಕುಲಕ್ಕೆ ಅತ್ಯಂತ ಅಪಾಯಕಾರಿ ವ್ಯಕ್ತಿಗಳಾಗಿದ್ದಾರೆ. ಸದ್ಯ ಇಂತಹ ಅಸಹ್ಯ ಕಾನೂನುಗಳು ನಮ್ಮ ದೇಶದಲ್ಲಿಲ್ಲ ಬಚಾವ್!
ನರಮಾಂಸ ತಿಂದವರ ಕಥೆಗಳನ್ನು ಹಲವಾರು ಬಾರಿ ಓದಿದೆವೆ, ಹಾಗೂ ಕೇಳಿದ್ದೇವೆ, ಆದರೆ ಈ ವಿವರಗಳನ್ನು ಓದಲೂ ಕೇಳಲೂ ಅತ್ಯಂತ ಅಸಹ್ಯವಾಗಿದ್ದು ಈ ವ್ಯಕ್ತಿಗಳಿಗೆ ಭೂಮಿಯ ಮೇಲೆ ಬದುಕುವ ಯಾವುದೇ ಅರ್ಹತೆ ಇಲ್ಲವೆಂದು ಭಾರತದ ಸಂವಿಧಾನದಲ್ಲಿ ಸ್ಪಷ್ಟವಾಗಿ ಸೂಚಿಸಲಾಗಿದೆ. ತೀರ್ಪಿನ ಬಳಿಕ ನ್ಯಾಯಾಧೀಶರು ಪೆನ್ನಿನ ನಿಬ್ಬನ್ನು ಮುರಿಯುವುದೇಕೆ?
ಇಂದಿನ ಲೇಖನದಲ್ಲಿ ಇಂತಹ ಒಂದು ಭೀಭತ್ಸತೆಯಿಂದ ಕೂಡಿದ ಪ್ರಕರಣವನ್ನು ನಿಮ್ಮ ಮುಂದಿಡಲಾಗಿದೆ. ಮರಣದಂಡನೆಗೆ ವಿಧಿಸಲಾದ ಬಳಿಕ ಈತನಲ್ಲಿ ಅಂತಿಮ ಇಚ್ಛೆ ಏನೆಂದು ಕೇಳಿದಾಗ ಈತ ತನ್ನ ಅಂತಿಮ ಊಟ ಒಬ್ಬ ಬಾಲಕನನ್ನು ತಿನ್ನುವ ಮೂಲಕ ಆಗಬೇಕು ಎಂದು ಹೇಳಿದನಂತೆ! ಅತ್ಯಂತ ಹೇಯ ಹಾಗೂ ಅಮಾನವೀಯ ಕೋರಿಕೆಯನ್ನು ಅಂತಿಮ ಇಚ್ಛೆ ಎಂದು ನಮ್ಮ ನ್ಯಾಯಾಲಯ ಪೂರೈಸಿತೋ ಇಲ್ಲವೋ ಎಂಬ ಕುತೂಹಲವೇ ಮುಂದೆ ಓದಿ.....

ಯಾರೀತ?
ಅಮೇರಿಕಾದ ಟೆಕ್ಸಸ್ ಪ್ರಾಂತದ ನಿವಾಸಿಯಾದ Doug Stephener ಎಂಬ ಹೆಸರಿನ ಈ ವ್ಯಕ್ತಿ ಓರ್ವ pedophile ಅಂದರೆ ಮಕ್ಕಳಲ್ಲಿ ಕಾಮತೃಷೆಯನ್ನು ಕಾಣುವಂತಹ ವ್ಯಕ್ತಿಯಾಗಿದ್ದ.

ಈತನ ಶಿಕ್ಷೆ ಏನು?
ಅಮೇರಿಕಾದ ನ್ಯಾಯಾಲಯ ಈತನ ಪ್ರಕರಣವನ್ನು ಪರಿಗಣಿಸಿ ಸಾವೇ ಶಿಕ್ಷೆ ಎಂಬ ತೀರ್ಪನ್ನು ನೀಡಿದೆ. ಆದರೆ ಈ ಮರಣ ವಿಷದ ಇಂಜೆಕ್ಷನ್ ಚುಚ್ಚಿ ನಿರಾಯಾಸವಾಗಿ ಸಾಯುವಂತಿದೆ. ಈ ತೀರ್ಪನ್ನು ಕೇಳಿದ ಜನತೆ ನಮ್ಮ ಕೈಗೆ ಕೊಟ್ಟಿದ್ದರೆ ಒಳ್ಳೆಯದಿತ್ತು, ಕೊಚ್ಚಿ ಕೊಚ್ಚಿ ಕೊಂದು ಹಾಕುತ್ತಿದ್ದೆವು ಎಂದು ಆಕ್ರೋಶ ತೋರಿದರಂತೆ.

ಅಂತಿಮ ಇಚ್ಛೆಯ ಬಯಕೆ
ನ್ಯಾಯಾಧೀಶರು ಅಂತಿಮ ಇಚ್ಛೆ ಏನೆಂದು ಕೇಳಿದಾಗ ತಾನೊಬ್ಬ ಬಾಲಕ ಮಾಂಸವನ್ನು ಅಂತಿಮವಾಗಿ ತಿನ್ನಬೇಕು, ಅದರಲ್ಲಿಯೂ ಬಾಲಕ ಎಂಟು ವರ್ಷಕ್ಕೂ ಚಿಕ್ಕವನಿರಬೇಕು ಎಂಬ ಬೇಡಿಕೆ ಇಟ್ಟನಂತೆ ಈ ಭೂಪ. ಅದರಲ್ಲೂ ಬಾಲಕ ಏಷಿಯಾದವನಾಗಿರಬೇಕು ಎಂದೂ ಹೇಳಿದನಂತೆ!

ಈತನ ಇಚ್ಚೆಯನ್ನು ಪೂರೈಸಲಾಯಿತೇ?
ಅಮೇರಿಕಾದ ಸಂವಿಧಾನದ ಪ್ರಕಾರ ಮರಣದಂಡನೆಯ ಗುರಿಯಾದ ವ್ಯಕ್ತಿಯ ಅಂತಿಮ ಇಚ್ಛೆಯನ್ನು ಪೂರೈಸುವುದು ಸರ್ಕಾರದ ಕರ್ತವ್ಯವಾಗಿದೆ. ಆದರೆ ಈತನ ವಿಚಿತ್ರ ಕೋರಿಕೆಯನ್ನು ಪೂರೈಸುವುದೆಂದರೆ ಯಾವುದೇ ಸರ್ಕಾರಕ್ಕೆ ಅಸಾಧ್ಯವಾದ ಮಾತಾಗಿತ್ತು.

ಹಾಗಾದರೆ ಈ ಪರಿಸ್ಥಿತಿಯನ್ನು ಹೇಗೆ ನಿಭಾಯಿಸಲಾಯಿತು?
ಕಾನೂನನ್ನೂ ಪಾಲಿಸಬೇಕು, ಬಯಕೆಯನ್ನೂ ಪೂರೈಸಬೇಕು ಎಂಬ ದ್ವಂದ್ವವನ್ನು ಪೋಲೀಸಲು ಇನ್ನೊಂದು ರೀತಿಯಲ್ಲಿ ಪೂರೈಸಿದರು. ಈತನನ್ನು ನೇರವಾಗಿ ಶವಾಗಾರಕ್ಕೆ ಕೊಂಡೊಯ್ದರು. ಅಲ್ಲಿ ಲಭ್ಯವಿದ್ದ ಯಾವುದೇ ಶವವನ್ನು ಆಯ್ದು ತಿನ್ನಬಹುದು ಎಂದು ತಿಳಿಸಿದರಂತೆ.

ಕೆಲವು ವರದಿಗಳ ಪ್ರಕಾರ ಇದು ಸುಳ್ಳು
ಮೇಲಿನ ಅಷ್ಟೂ ವಿವರಗಳು ಮಾತ್ರವೇ ಇದುವರೆಗೆ ಲಭ್ಯವಿರುವ ಮಾಹಿತಿಯಾಗಿದ್ದು ಈತ ನಿಜವಾಗಿಯೂ ತಿಂದನೇ ಇಲ್ಲವೇ ಗೊತ್ತಿಲ್ಲ. ಆದರೆ ಕೆಲವು ಮಾಧ್ಯಮಗಳ ವರದಿಯಂತೆ ಈತನ ಅಂತಿಮ ಇಚ್ಛೆಯನ್ನು ಪೂರೈಸಲಾಗಿಲ್ಲ, ಮತ್ತು ಕೆಲವು ಮಾಧ್ಯಮಗಳ ಪ್ರಕಾರ ಇಡಿಯ ಪ್ರಕರಣವೇ ಸುಳ್ಳು. ಏನೇ ಆಗಲಿ ಇಂತಹ ಅಸಂಬದ್ಧ ಕಾನೂನುಗಳನ್ನು ಪೂರ್ಣಗೊಳಿಸದೇ ಇರುವುದರಲ್ಲಿಯೇ ಮಾನವತೆ ಅಡಗಿದೆ.



Click it and Unblock the Notifications