For Quick Alerts
ALLOW NOTIFICATIONS  
For Daily Alerts

  ಮೀನಿಗೆ ಕಿಸ್ ಮಾಡಿದ ತಪ್ಪಿಗೆ, ಈತ ಸಾವಿನ ಬಾಗಿಲು ತಟ್ಟುವಂತಾಯಿತು!!

  By Deepu
  |

  ಒಂದು ಚುಂಬನ ಜೀವಕ್ಕೇ ಮಾರಕವಾಬಹುದೆಂದು ನಿಮಗೆ ಅನ್ನಿಸಿದೆಯೇ? ಈ ಮೀನುಗಾರ ತಾನು ಹಿಡಿದ ಮೀನನ್ನು ಚುಂಬಿಸಿದ ಬಳಿಕ ಆತ ಸಾವಿನ ದವಡೆಯಿಂದ ಕಷ್ಟದಿಂದ ನೂಲಿನೆಳೆಯ ಅಂತರದಲ್ಲಿ ಪಾರಾಗಿದ್ದುದನ್ನು ಕಂಡರೆ ಹೀಗೇ ಅನ್ನಿಸಬಹುದು. ಇದು ಅಸಾಧ್ಯವೆಂದು ಅನ್ನಿಸಿದರೂ ಈ ವಿಚಿತ್ರ ಘಟನೆ ನಡೆದಿರುವುದಂತೂ ಸತ್ಯ.

  ವಾಸ್ತವವಾಗಿ ಚುಂಬನದ ಸಂದರ್ಭದಲ್ಲಿ ಮೀನು ಪುಳಕ್ಕನೇ ಕೈಜಾರಿ ನೇರವಾಗಿ ಆತನ ಬಾಯಿಯೊಳಗೇ ಹೋಗಿ ಗಂಟಲಲ್ಲಿ ಸಿಕ್ಕಿಕೊಂಡಿತ್ತು. ಉಸಿರುಗಟ್ಟಿ ಇನ್ನೇನು ಸಾಯುವುದರಲ್ಲಿದ್ದ ಆತ ಕೊನೆಯ ಕ್ಷಣದಲ್ಲಿ ಬದುಕಿ ಬಂದ. ಬನ್ನಿ, ಈ ಬಗ್ಗೆ ಹೆಚ್ಚಿನ ವಿವರಗಳನ್ನು ನೋಡೋಣ... 

  ಈ ಮೀನುಗಾರನಿಗೆ ಈ ಮೀನನ್ನು ಹಿಡಿದ ಬಗ್ಗೆ ಹೆಮ್ಮೆ ಇತ್ತು

  ಈ ಮೀನುಗಾರನಿಗೆ ಈ ಮೀನನ್ನು ಹಿಡಿದ ಬಗ್ಗೆ ಹೆಮ್ಮೆ ಇತ್ತು

  ಬ್ರಿಟಿಷ್ ನಾಗರಿಕರಾಗಿರುವ ಸ್ಯಾಮ್ ಕ್ವಿಲ್ಲಿಂ ಎಂಬ ಪುರುಷನೇ ಈ ಮೀನುಗಾರನಾಗಿದ್ದು ಈತನಿಗೆ ತಾನು ಹಿಡಿದ ಮೀನಿನ ಬಗ್ಗೆ ಅತೀವವಾದ ಹೆಮ್ಮೆ ಇತ್ತು. ಮೀನು ಹಿಡಿದ ಸಂಭ್ರಮದಲ್ಲಿ ಎರಡೂ ಕೈಗಳಿಂದ ಮೀನನ್ನು ಹಿಡಿದು ಅದರ ಮುಖಕ್ಕೆ ಚುಂಬಿಸಲು ಮುಂದಾದ.

  ಈ ಮೀನುಗಾರನಿಗೆ ಈ ಮೀನನ್ನು ಹಿಡಿದ ಬಗ್ಗೆ ಹೆಮ್ಮೆ ಇತ್ತು

  ಈ ಮೀನುಗಾರನಿಗೆ ಈ ಮೀನನ್ನು ಹಿಡಿದ ಬಗ್ಗೆ ಹೆಮ್ಮೆ ಇತ್ತು

  ಇದೊಂದು ಸುಮಾರು ಆರಿಂಚು ಉದ್ದದ, ನಮ್ಮ ತೊಳ್ಳೆಮೀನನ್ನೇ ಹೋಲುವ ಡೋವರ್ ಸೋಲ್ ಎಂಬ ಮೀನಾಗಿದ್ದು ಕೈಗಳಿಂದ ಸುಲಭವಾಗಿ ಜಾರಿಹೋಗುತ್ತಿತ್ತು. ಯಾವಾಗ ಈತ ಮೀನನ್ನು ಚುಂಬಿಸಲು ತನ್ನ ತುಟಿಗಳನ್ನು ಮೀನಿನ ತುಟಿಗಳ ಹತ್ತಿರ ತಂದನೋ ಇಲ್ಲವೋ, ಕ್ಷಣಾರ್ಧದಲ್ಲಿ ಆತನ ಜೀವಮಾನದ ಆಘಾತದ ಘಟನೆ ನಡೆದೇ ಹೋಯ್ತು.

  ಇವೆಲ್ಲಾ ಕ್ಷಣಾರ್ಧದಲ್ಲಿ ನಡೆದುಹೋಯಿತು

  ಇವೆಲ್ಲಾ ಕ್ಷಣಾರ್ಧದಲ್ಲಿ ನಡೆದುಹೋಯಿತು

  ವರದಿಗಳ ಪ್ರಕಾರ, ಇನ್ನೂ ಜೀವಂತವಿದ್ದ ಮೀನು ಕ್ಷಣಾರ್ಧದಲ್ಲಿ ಆತನ ಕೈಗಳಿಂದ ಜಾರಿ ನೇರವಾಗಿ ಬಾಯಿಯ ಮೂಲಕ ಗಂಟಲ ಒಳಗೆ ನುಗ್ಗೇ ಬಿಟ್ಟಿತ್ತು. ಹೆಚ್ಚೂ ಕಡಿಮೆ ಗಂಟಲಿನ ಒಳವ್ಯಾಸಕ್ಕೂ ಕೊಂಚ ಹೆಚ್ಚೇ ದಪ್ಪ ಇದ್ದ ಈ ಮೀನು ಆತನ ಗಂಟಲೊಳಗೆ ಸಿಲುಕಿಕೊಂಡು ಉಸಿರು ಕಟ್ಟಿಸಿಬಿಟ್ಟಿತು. ಮಾನಸಿಕ ಆಘಾತಕ್ಕೆ ಒಳಗಾದ ಈತ ಆ ಕ್ಷಣಕ್ಕೆ ಲಘು ಹೃದಯಾಘಾತವನ್ನೂ ಅನುಭವಿಸಿದ!

  ಮೀನನ್ನು ಹೊರತೆಗೆಯಲು ವೈದ್ಯರು ಶ್ರಮಪಡಬೇಕಾಯಿತು

  ಮೀನನ್ನು ಹೊರತೆಗೆಯಲು ವೈದ್ಯರು ಶ್ರಮಪಡಬೇಕಾಯಿತು

  ತಕ್ಷಣವೇ ಅಲ್ಲಿದ್ದವರು ಅಂಬ್ಯುಲೆನ್ಸ್ ಕರೆಮಾಡಿದ ಬಳಿಕ ಕೆಲವೇ ನಿಮಿಷಗಳಲ್ಲಿ ಆಗಮಿಸಿದ ವೈದ್ಯರು ಇನ್ನೂ ಜೀವಂತವಿದ್ದ ಮೀನನ್ನು ಹೊರತೆಗೆದು ಈತನ ಪ್ರಾಣ ರಕ್ಷಿಸಲು ತಮ್ಮ ವಿದ್ಯೆಯನ್ನೆಲ್ಲಾ ಖರ್ಚು ಮಾಡಬೇಕಾಯಿತು. ಏಕೆಂದರೆ ಗಂಟಲೊಳಗೆ ಸಿಲುಕಿಕೊಂಡಿದ್ದ ಮೀನು ಅಲುಗಾಡಿದರೆ ಅವರ ಸೂಕ್ಷ್ಮ ಅಂಗಗಳಿಗೆ ಘಾಸಿಯಾಗುವ ಸಂಭವವಿತ್ತು.

  ವೈದ್ಯರ ವಿವರಣೆ

  ವೈದ್ಯರ ವಿವರಣೆ

  "ಪರಿಸ್ಥಿತಿಯನ್ನು ಕಂಡ ಬಳಿಕ ಈ ಪ್ರಯತ್ನ ಎಷ್ಟು ಗಂಭೀರವಾದುದು ಎಂದು ಮನದಟ್ಟಾಗಿತ್ತು. ಏಕೆಂದರೆ ಮೀನು ಇನ್ನೂ ಜೀವಂತವಿತ್ತು ಹಾಗೂ ಈಗಾಗಲೇ ಗಂಟಲಿನಿಂದ ಸಾಕಷ್ಟು ಒಳಗೆ ಹೋಗಿ ಆಗಿತ್ತು. ಮೀನಿನ ಬಾಲವೊಂದನ್ನು ಹಿಡಿಯುವುದು ಬಿಟ್ಟು ಬೇರೇನೂ ಹಿಡಿಯಲು ಇರಲೇ ಇಲ್ಲ.

  ವೈದ್ಯರ ವಿವರಣೆ

  ವೈದ್ಯರ ವಿವರಣೆ

  ಒಂದು ವೇಳೆ ಬಾಲ ತುಂಡಾಗಿ ಹೋದರೆ ಮೀನು ಇನ್ನಷ್ಟು ಹೆಚ್ಚಿನ ಒತ್ತಡದಿಂದ ಒಳನುಗ್ಗುವ ಸಂಭವವಿತ್ತು. ಮೀನನ್ನು ಹೊರತೆಗೆಯುವುದು ಅವಶ್ಯವಾಗಿತ್ತು ಹಾಗೂ ಸಮೀಪದ ಆಸ್ಪತ್ರೆಯಾಗಿರುವ ರಾಯಲ್ ಬೋರ್ನ್ಮೌಥ್ ಆಸ್ಪತ್ರೆ ಸೇರುವಷ್ಟೂ ನಮಗೆ ಸಮಯಾವಕಾಶವಿರಲಿಲ್ಲ"

  ಅದೃಷ್ಟವಶಾತ್, ಮೀನನ್ನು ಹೊರತೆಗೆಯಲಾಯ್ತು

  ಅದೃಷ್ಟವಶಾತ್, ಮೀನನ್ನು ಹೊರತೆಗೆಯಲಾಯ್ತು

  ಧೃತಿಗೆಡದ ಈ ವೈದ್ಯರು ಮೀನಿನ ಬಾಲದ ಭಾಗದ ಬುಡವನ್ನೇ ತಮ್ಮೆಲ್ಲಾ ಶಕ್ತಿ ಒಗ್ಗೂಡಿಸಿ ಹಿಂದೆ ಎಳೆದರು. ಮೀನಿನ ಕಿವಿರುಗಳು ಅರಳಿ ಶ್ವಾಸನಾಳವನ್ನು ಪೂರ್ಣವಾಗಿ ಮುಚ್ಚಿತ್ತು. ಕೂಡಲೇ ಇತರ ವೈದ್ಯರು ಹೃದಯಾಘಾತಕ್ಕೆ ಒಳಗಾಗಿದ್ದ ರೋಗಿಗೆ ಅಗತ್ಯ ನೆರವು ನೀಡುವ ಮೂಲಕ ಹೃದಯದ ಬಡಿತ ಮತ್ತೊಮ್ಮೆ ಬಡಿಯಲು ಪ್ರಾರಂಭಿಸಲು ನೆರವಾದರು.

  ಅದೃಷ್ಟವಶಾತ್, ಮೀನನ್ನು ಹೊರತೆಗೆಯಲಾಯ್ತು

  ಅದೃಷ್ಟವಶಾತ್, ಮೀನನ್ನು ಹೊರತೆಗೆಯಲಾಯ್ತು

  ಕೊಂಚ ಕಾಲದ ಬಳಿಕ ರೋಗಿ ಚೇತರಿಸಿಕೊಂಡರು. ವೈದ್ಯರ ಸಕಾಲಿಕ ನೆರವು ಹಾಗೂ ಅಕ್ಕಪಕ್ಕದಲ್ಲಿದ್ದವರು ತಕ್ಷಣವೇ ವೈದ್ಯರನ್ನು ಕರೆಸಿದ ಪರಿಣಾಮವಾಗಿ ಇವರ ಜೀವ ಉಳಿಯುವಂತಾಯ್ತು. ಇನ್ನೆಂದೂ ಮೀನನ್ನು ಚುಂಬಿಸಲಾರೆ ಎಂದು ಅವರು ಈಗಾಗಲೇ ಭೀಷ್ಮ ಪ್ರತಿಜ್ಞೆ ಮಾಡಿರಬಹುದು!!

  Image Source

  English summary

  Man Kisses Fish And Goes Into Cardiac Arrest

  Did you know that kissing a fish can be deadly at times? Well, this is a lesson that a fisherman learnt when he almost died after he kissed his catch! This bizarre incident can make you wonder as to how it even took place, as it seems to be so impractical! After all, how can a fish go through the man's mouth \and get stuck in the airway, making the man almost lose his life! Read on to know more about the bizarre incident...
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more