2018 ರಾಶಿ ಚಕ್ರ- ನೋಡಿ ಈ ಏಳು ರಾಶಿಯವರಿಗೆ ಅದೃಷ್ಟ ಒಲಿಯಲಿದೆ...

Posted By: Divya Pandith
Subscribe to Boldsky

ಪ್ರತಿಯೊಂದು ರಾಶಿ ಚಕ್ರದ ಅದೃಷ್ಟ ಹಾಗೂ ದುರಾದೃಷ್ಟವೆಲ್ಲವೂ ಗ್ರಹಗತಿಗಳ ಸಂಚಾರವನ್ನು ಅವಲಂಭಿಸಿರುತ್ತದೆ. ಅವುಗಳ ಆಧಾರದ ಮೇಲೆಯೇ ನಮ್ಮ ಜೀವನವು ನಿಂತಿರುತ್ತದೆ. ಒಳ್ಳೆಯ ಫಲಿತಾಂಶ ಕೊಡುತ್ತದೆ ಎಂದರೆ ನಮ್ಮ ಜೀವನದಲ್ಲಿ ಸುಖ ಶಾಂತಿ, ಶ್ರೀಮಂತಿಕೆ, ಆರೋಗ್ಯ, ಉತ್ತಮ ಉದ್ಯೋಗ, ಸಂಸಾರ ಸುಖ ಹೀಗೆ ಅನೇಕ ಬಗೆಯ ಉತ್ತಮ ಫಲಗಳು ದೊರೆಯುತ್ತವೆ. ಹಾಗೊಂದು ವೇಳೆ ಉತ್ತಮ ಪರಿಣಾಮ ಇಲ್ಲವೆಂದಾದರೆ ಅನೇಕ ಬಗೆಯ ಸಮಸ್ಯೆಗಳು ಒಂದಾದ ಮೇಲೊಂದರಂತೆ ನಮ್ಮನ್ನು ಕಾಡುತ್ತದೆ.

ಹೊಸ ವರ್ಷ ಎಂದೊಡನೆ ಸಾಮಾನ್ಯವಾಗಿ ಎಲ್ಲರಿಗೂ ಹೊಸ ಹೊಸದಾದ ಅನುಭವಗಳು, ಅದೃಷ್ಟವು ಹಾಗೂ ಶುಭ ಫಲಗಳು ಲಭಿಸುವುದೇ ಎನ್ನುವ ಬಯಕೆ ಇರುತ್ತದೆ. ಈ ವರ್ಷದ ಗ್ರಹಗತಿಗಳ ಸಂಚಾರದ ಆಧಾರದ ಮೇಲೆ ಸಾಮಾನ್ಯ ಪ್ರಮಾಣದ ಒಳಿತನ್ನು ಬಯಸಬಹುದು ಎಂದು ಜ್ಯೋತಿಷ್ಯ ಶಾಸ್ತ್ರ ಹೇಳುತ್ತದೆ. ಈ ಅಕ್ಟೋಬರ್ ನಲ್ಲಿಯೇ ಶನಿಯು ವೃಶ್ಚಿಕ ರಾಶಿಯಿಂದ ಹೊರ ಬಂದಿದೆ.

ಸಡನ್ ಆಗಿ ಈ ರಾಶಿಯವರಿಗೆ ಅದೃಷ್ಟ ಕೈಕೊಡಬಹುದು! ಆದರೆ ಪರಿಹಾರವಿದೆ...

ಗುರುವು ಆ ಸ್ಥಾನವನ್ನು ಅಲಂಕರಿಸಿದೆ. ನೀರು ಮತ್ತು ಗಾಳಿಯು ಸೂರ್ಯನಿಗೆ ಅದೃಷ್ಟವನ್ನು ನೀಡುತ್ತದೆ. 2018ರ ವರ್ಷವು ಕೆಲವು ರಾಶಿ ಚಕ್ರದವರಿಗೆ ಅದೃಷ್ಟವನ್ನು ತಂದುಕೊಡುತ್ತದೆ. ಉಳಿದ ರಾಶಿಚಕ್ರದವರಿಗೆ ಸಾಮಾನ್ಯ ಫಲಗಳು ದೊರೆಯುವುದು ಎಂದು ಜ್ಯೋತಿಷ್ಯ ಶಾಸ್ತ್ರ ಹೇಳುತ್ತದೆ.... 

ರಾಶಿ ಚಕ್ರದ ಲೆಕ್ಕಾಚಾರಗಳು

ರಾಶಿ ಚಕ್ರದ ಲೆಕ್ಕಾಚಾರಗಳು

ಸಾಮಾನ್ಯವಾಗಿ ಜ್ಯೋತಿಷಿಗಳು ಭವಿಷ್ಯವನ್ನು ನುಡಿಯುವಾಗ ಅಥವಾ ಮುಂಬರುವ ವರ್ಷದ ಫಲಾನುಫಲಗಳನ್ನು ಹೇಳುವಾಗ ಅವರು ಮೊದಲು ಗ್ರಹಗತಿಗಳ ಸ್ಥಾನ ಮಾನ ಹಾಗೂ ಅವರ ಸಂಚಾರದ ಬಗ್ಗೆ ತುಲನೆ ನಡೆಸುತ್ತಾರೆ. ಗ್ರಹಗತಿಗಳ ಸಂಚಾರ ಹಾಗೂ ಇರುವಿಕೆಯ ಬಗ್ಗೆ ಯಾವ ರಾಶಿಯವರಿಗೆ ಏನೆಲ್ಲಾ ಒಳ್ಳೆಯದು ಹಾಗೂ ಕೆಟ್ಟದ್ದು ಸಂಭವಿಸಬಹುದು? ಎನ್ನುವುದನ್ನು ಹೇಳುತ್ತಾರೆ. ಹಾಗೆಯೇ ಹೊಸ ವರ್ಷದ ಸಮಯದಲ್ಲಿ ಗ್ರಹಗಳ ಬದಲಾವಣೆ ಹೇಗಿದೆ? ಅದರ ಪರಿಣಾಮ ಹೇಗಿರುತ್ತದೆ? ಎನ್ನುವ ಆಧಾರದ ಮೇಲೆ ಆ ವರ್ಷ ನಿಮ್ಮ ಪರವಾಗಿ ಇದೆಯೋ? ಇಲ್ಲವೋ? ಎನ್ನುವುದನ್ನು ಹೇಳುತ್ತಾರೆ.

ಗುರು ಗ್ರಹದ ಪರಿವರ್ತನೆಯ ಪರಿಣಾಮ

ಗುರು ಗ್ರಹದ ಪರಿವರ್ತನೆಯ ಪರಿಣಾಮ

ಗುರು ಗ್ರಹವನ್ನು ಅನುಕೂಲವನ್ನು ತಂದುಕೊಡುವ ಗ್ರಹ. ಉತ್ತಮವಾದ ಲಾಭವನ್ನು ನೀಡುತ್ತದೆ ಎಂದು ನಂಬಲಾಗುತ್ತದೆ. ಇತರ ಗ್ರಹಗಳ ಸಂಚಾರ ಹಾಗೂ ಗುರುವಿನ ಪ್ರಭಾವದ ಆಧಾರದ ಮೇಲೆ ರಾಶಿಚಕ್ರಗಳ ಮೇಲೆ ಉತ್ತಮ ಹಾಗೂ ಕೆಟ್ಟ ಪರಿಣಾಮವನ್ನು ಬೀರುತ್ತದೆ. ಜನ್ಮದಲ್ಲಿ ಸೂರ್ಯನ ಪ್ರಭಾವ ಎಷ್ಟಿದೆ ಎನ್ನುವುದರ ಮೇಲೆಯೂ ಅದೃಷ್ಟ ತುಲನೆಗೆ ಬರುವುದು. ಅದರ ಆಧಾರದ ಮೇಲೆ ಗುರುವಿನ ಪ್ರಭಾವ ಹೇಗೆ ಬೀರುತ್ತದೆ ಎಂದು ಹೇಳಲಾಗುವುದು.

ಶನಿಯ ಪ್ರಭಾವ

ಶನಿಯ ಪ್ರಭಾವ

ದುರ್ಬಲ ಮತ್ತು ಅನಾರೋಗ್ಯಕರವಾದ ಗ್ರಹ ಶನಿ ಎಂದು ಹೇಳುತ್ತಾರೆ. ಆದರೆ ಶನಿಯ ಪ್ರಭಾವದಿಂದ ಜೀವನದ ಸತ್ಯ ಹಾಗೂ ಕಷ್ಟಗಳ ನಡುವೆ ಬದುಕುವ ಪರಿಯನ್ನು ತೋರಿಸಿ ಕೊಡುತ್ತಾನೆ. ಈ ಸಂದರ್ಭದಲ್ಲಿ ಜೀವನದಲ್ಲಿ ಅನೇಕ ಅಡೆತಡೆಗಳು ಹಾಗೂ ಆರ್ಥಿಕವಾಗಿ ಹಿನ್ನೆಡೆಯು ಉಂಟಾಗುತ್ತದೆ. ಇದೀಗ ಶನಿಯು ವೃಶ್ಚಿಕ ರಾಶಿಯನ್ನು ಬಿಟ್ಟಿರುವುದರಿಂದ ಮುಂದಿನ ದಿನದಲ್ಲಿ ಉತ್ತಮ ಪ್ರಭಾವವನ್ನು ಪಡೆಯಬಹುದು.

 2018ರಲ್ಲಿ ರಾಶಿ ಚಕ್ರದ ಅವಲೋಕನ

2018ರಲ್ಲಿ ರಾಶಿ ಚಕ್ರದ ಅವಲೋಕನ

2018ರಲ್ಲಿ ಉತ್ತಮ ಗ್ರಹಗತಿಗಳ ಸಂಚಾರ ಹಾಗೂ ಪ್ರಭಾವ ಇರುವುದರಿಂದ ಉತ್ತಮ ಫಲಗಳನ್ನು ಪಡೆದುಕೊಳ್ಳುವ ಅವಕಾಶಗಳಿವೆ. ಆದರೆ ಅವು ಯಾವ ರಾಶಿಯ ಮೇಲೆ ಹೆಚ್ಚಿನ ಪ್ರಭಾವವನ್ನು ಉಂಟುಮಾಡುತ್ತವೆ? ಧನಾತ್ಮಕ ಫಲಿತಾಂಶ ಏನು ಎನ್ನುವುದನ್ನು ಮುಂದಿನ ವಿವರಣೆಯಲ್ಲಿ ತಿಳಿಯೋಣ...

2018ರಲ್ಲಿ ಅದೃಷ್ಟವನ್ನು ಪಡೆಯುವ ರಾಶಿ ಚಕ್ರಗಳು

2018ರಲ್ಲಿ ಅದೃಷ್ಟವನ್ನು ಪಡೆಯುವ ರಾಶಿ ಚಕ್ರಗಳು

ಜ್ಯೋತಿಷ್ಯದ ಪ್ರಕಾರ ಮುಂಬರುವ ಅಂದರೆ 2018ರ ವರ್ಷವು ತುಲಾ, ಸಿಂಹ, ಮಿಥುನ, ಕರ್ಕ, ವೃಶ್ಚಿಕ, ಕುಂಬ, ಮೀನ ರಾಶಿಯವರಿಗೆ ಒತ್ತಡಗಳು ದೂರವಾಗಿ ಸಂತೋಷವು ಲಭಿಸುವುದು. ಇವರು ಕುಳಿತು ಜೀವನವನ್ನು ಆನಂದಿಸಬಹುದು. ಇವರ ಜೀವನದಲ್ಲಿ ಆರೋಗ್ಯ ಸುಧಾರಣೆ, ವಿವಾಹ ಯೋಗ, ಆರ್ಥಿಕ ಸಮೃದ್ಧಿ ಸೇರಿದಂತೆ ಉತ್ತಮ ಫಲವನ್ನು ಅನುಭವಿಸಲಿರುವರು.

2018ರಲ್ಲಿ ಅದೃಷ್ಟವನ್ನು ಪಡೆಯುವ ರಾಶಿ ಚಕ್ರಗಳು

2018ರಲ್ಲಿ ಅದೃಷ್ಟವನ್ನು ಪಡೆಯುವ ರಾಶಿ ಚಕ್ರಗಳು

ಈ ವರ್ಷದಲ್ಲಿ ನೀವು ಯಾವುದೇ ಮುಂದಾಲೋಚನೆ ಮಾಡದೆ ನಡೆಸುವ ಕಾರ್ಯಗಳಿಗೂ ಯಶಸ್ಸು ದೊರೆಯುವುದು. ಈ ವರ್ಷವು ನಿಮಗೆ ಹಣದ ಹೂಡಿಕೆಗಳಿಗೆ ಉತ್ತಮ ಲಾಭವನ್ನು ತಂದುಕೊಡುವುದು. ಆರೋಗ್ಯವೂ ಉತ್ತಮವಾದ ಸ್ಥಿತಿಯಲ್ಲಿರುವುದು. ಒಳ್ಳೆಯ ಸಮಯ ಎಂದು ತಪ್ಪು ಕೆಲಸಗಳಿಗೆ, ಮಾರಣಾಂತಿಕ ಕೃತ್ಯಗಳಲ್ಲಿ ತೊಡಗಿದರೆ ಸೂಕ್ತವಾದ ಶಿಕ್ಷೆ ಹಾಗೂ ಬಂಧನಕ್ಕೆ ಒಳಗಾಗುವಿರಿ ಎನ್ನುವುದನ್ನು ನೆನಪಿಟ್ಟುಕೊಂಡಿರಬೇಕು.

2018ರಲ್ಲಿ ದುರಾದೃಷ್ಟ ಅನುಭವಿಸುವ ರಾಶಿಚಕ್ರಗಳು

2018ರಲ್ಲಿ ದುರಾದೃಷ್ಟ ಅನುಭವಿಸುವ ರಾಶಿಚಕ್ರಗಳು

ಮೇಷ, ವೃಷಭ, ಧನು, ಕನ್ಯಾ ರಾಶಿಯವರಿಗೆ ಈ ವರ್ಷವು ಅಷ್ಟು ಅದೃಷ್ಟಕರವಾದ ದಿನವಲ್ಲ ಎಂದು ಹೇಳಲಾಗುತ್ತದೆ. ಹಾಗಂತ ಭಯ ಪಡುವ ಅಗತ್ಯವಿಲ್ಲ. ಉಳಿದ ರಾಶಿಗಳಿಗೆ ಹೋಲಿಸಿದರೆ ಅಷ್ಟು ಅದೃಷ್ಟಕರವಾದ ದಿನಗಳಲ್ಲ ಎಂದು ಹೇಳ ಬಹುದು. ಪ್ರತಿಯೊಂದು ಕಾರ್ಯದಲ್ಲೂ ಹೆಚ್ಚಿನ ಪರಿಶ್ರಮ ಅಗತ್ಯ ವಾಗಿರುತ್ತದೆ. ಮುಂಬರುವ ದಿನಗಳಿಗೆ ಉತ್ತಮ ತಯಾರಿಗೆ ಅವಕಾಶಗಳು ಎಂದುಕೊಳ್ಳಬೇಕು. ಅನಾರೋಗ್ಯವೂ ಕೊಂಚ ತೊಂದರೆಯನ್ನುಂಟು ಮಾಡಬಹುದು.

2018ರಲ್ಲಿ ದುರಾದೃಷ್ಟ ಅನುಭವಿಸುವ ರಾಶಿಚಕ್ರಗಳು

2018ರಲ್ಲಿ ದುರಾದೃಷ್ಟ ಅನುಭವಿಸುವ ರಾಶಿಚಕ್ರಗಳು

ಸಾಕಷ್ಟು ಕಷ್ಟಗಳು ಹಾಗೂ ಕಠಿಣವಾದ ಪರಿಸ್ಥಿತಿಗಳು ನಿಮಗೆ ಎದುರಾಗುವುದು. ಯಾವುದೇ ಸಂದರ್ಭದಲ್ಲೂ ಭಯಕ್ಕೆ ಒಳಗಾಗದೆ ಸೂಕ್ತ ನಿಧಾರ ಹಾಗೂ ಉತ್ತಮವಾದ ಹಾದಿಯನ್ನು ಆಯ್ಕೆ ಮಾಡಿಕೊಂಡರೆ ಉತ್ತಮವಾದ ಫಲಗಳು ದೊರೆಯುವುದು.

ಆಸಕ್ತಿದಾಯಕ ವಿಚಾರ ಮುಂದಿದೆ ನೋಡಿ

ಆಸಕ್ತಿದಾಯಕ ವಿಚಾರ ಮುಂದಿದೆ ನೋಡಿ

ಹೊಸ ವರ್ಷದಲ್ಲಿ ಜನಿಸಲಿರುವ ಮಗು, ಆರೋಗ್ಯ, ವಿವಾಹ ಯೋಗ, ಉಯೋಗಗಳ ಬಗ್ಗೆ ಪ್ರಸಿದ್ಧ ಜ್ಯೋತಿಷಿಗಳು ಹೇಳುವ ಪ್ರಕಾರ ಹೇಗಿದೆ ಎನ್ನುವುದನ್ನು ಈ ಮುಂದೆ ವಿವರಿಸಲಾಗಿದೆ.

ಯಾರು ಆರ್ಥಿಕವಾಗಿ ಸದೃಢರಾಗುವರು?

1993, 1981, 1969, 2000, 1988, 1976,1964, 1994, 1982 ಮತ್ತು 1970ರಲ್ಲಿ ಜನಿಸಿದವರಿಗೆ ಆರ್ಥಿಕವಾಗಿ ಉತ್ತಮ ಸ್ಥಿತಿಯನ್ನು ಹೊಂದುವರು.

ವ್ಯಾಪಾರ ಕ್ಷೇತ್ರದಲ್ಲಿ ಯಾರು ಯಶಸ್ಸು ಸಾಧಿಸುವರು?

ವ್ಯಾಪಾರ ಕ್ಷೇತ್ರದಲ್ಲಿ ಯಾರು ಯಶಸ್ಸು ಸಾಧಿಸುವರು?

1990, 1978, 1966, 1994, 1982, 1970, 1998, 1986, 1974 ಮತ್ತು 1962 ರಲ್ಲಿ ಜನಿಸಿದವರು ವ್ಯಾಪಾರ ಕ್ಷೇತ್ರದಲ್ಲಿ ಯಶಸ್ಸು ಸಾಧಿಸುವರು.

 ಯಾರು ಮಾನನಷ್ಟ ಅಥವಾ ಗಾಸಿಪ್‍ಗಳಿಗೆ ಒಳಗಾಗುವರು?

ಯಾರು ಮಾನನಷ್ಟ ಅಥವಾ ಗಾಸಿಪ್‍ಗಳಿಗೆ ಒಳಗಾಗುವರು?

1991, 1979, 1967, 1995, 1983, 1971, 1996, 1984, 1972 ಮತ್ತು 1960 ರಲ್ಲಿ ಜನಿಸಿದರು ಮಾನನಷ್ಟ ಅಥವಾ ಗಾಸಿಪ್‍ಗಳಿಗೆ ಒಳಗಾಗುವರು.

ಯಾರು ವಿವಾಹ ಬಂಧನಕ್ಕೆ ಒಳಗಾಗುವರು?

ಯಾರು ವಿವಾಹ ಬಂಧನಕ್ಕೆ ಒಳಗಾಗುವರು?

1988, 1976, 1990, 1978, 1996, 1984, ಮತ್ತು 1972 ರಲ್ಲಿ ಜನಿಸಿದವರು ವಿವಾಹ ಯೋಗ ಪಡೆದುಕೊಂಡಿರುತ್ತಾರೆ. ಇವರು ಸಂಸಾರವನ್ನು ಪ್ರಾರಂಭಿಸಲು ಉತ್ತಮ ನಿರ್ಧಾರ ಕೈಗೊಳ್ಳಬಹುದಾಗಿದೆ.

ಯಾರು ತಮ್ಮ ಆರೋಗ್ಯದ ಬಗ್ಗೆ ಹೆಚ್ಚು ಗಮನ ನೀಡಬೇಕು

ಯಾರು ತಮ್ಮ ಆರೋಗ್ಯದ ಬಗ್ಗೆ ಹೆಚ್ಚು ಗಮನ ನೀಡಬೇಕು

2009, 1997, 1985, 1973, 1961, 2011, 1999, 1987, 1975, 1963, 2016, 2004, 1992, 1980, ಮತ್ತು 1968 ರಲ್ಲಿ ಜನಿಸಿದವರು ಆದಷ್ಟು ಆರೋಗ್ಯದ ಕಡೆ ಗಮನ ನೀಡಬೇಕು.

English summary

Know if your Zodiac Sign will be Lucky or Unlucky in 2018

Saturn has moved out of Scorpio this October, and Jupiter has taken its place, which according to astrologers has brought in a wave of good fortune for the water and air sun signs. So, according to them, the coming Year 2018 will be lucky for only a few zodiac signs, while the rest may have to struggle.