For Quick Alerts
ALLOW NOTIFICATIONS  
For Daily Alerts

  ದೇಶಕ್ಕೆ ದೊರೆಯಾದ ಸುಯೋಗ್‌ಗೆ ಒಲಿದ ಯೋಗ

  By Jayasubramanya
  |

  ಅದೃಷ್ಟ ಮತ್ತು ಬುದ್ಧಿವಂತಿಕೆಯನ್ನು ಹೊಂದಿದ್ದರೆ ಸಾಧಿಸಲು ಸಾಧ್ಯವಾಗದೇ ಇರುವಂತಹದ್ದು ಯಾವುದೂ ಇಲ್ಲ. ನೀವು ಅದೃಷ್ಟವನ್ನು ಹೊಂದಿದ್ದರೆ ರಾತ್ರಿ ಕಳೆದು ಬೆಳಗಾಗುವಷ್ಟರಲ್ಲಿ ನೀವು ಕೋಟಿಗಳ ಒಡೆಯರಾಗಿರುತ್ತೀರಿ. ಇದಕ್ಕೆ ಸರಿಯಾದ ಉದಾಹರಣೆ ಯಾಗಿರುವವರು ಸುಯಾಶ್ ದೀಕ್ಷಿತ್ ಆಗಿದ್ದಾರೆ.

  ಒಂದು ಸ್ಥಳದ ಕುರಿತು ಇವರು ಮಾಡಿದ ಸಂಶೋಧನೆ ಇಂದು ಅವರನ್ನು ಆ ಭೂಮಿಗೆ ಒಡೆಯನಾಗಿ ಮಾಡಿದೆ. "ಬಿರ್ ತವಾಲಿ" ಎಂಬ ಸ್ಥಳದ ಮೇಲೆ ಇವರು ಸಂಶೋಧನೆಯನ್ನು ನಡೆಸಿ ಈಗ ಅದನ್ನು ತನ್ನ ಸ್ವಂತದ್ದನ್ನಾಗಿ ಮಾಡಿಕೊಂಡಿದ್ದಾರೆ. ತಮ್ಮ ಈ ಯೋಜನೆಯ ಕುರಿತು ಅವರು ಫೇಸ್‌ಬುಕ್‌ನಲ್ಲಿ ವಿವರಗಳನ್ನು ಹಂಚಿಕೊಂಡಿದ್ದು ಈ ಕುರಿತು ಮತ್ತಷ್ಟು ತಿಳಿಯೋಣ....

  King Of An Unclaimed Land!

  ಆರಂಭ ಹೇಗಾಯಿತು

  ನಾನು ಸುಯಾಸ್ ದೀಕ್ಷಿತ್, ನಾನು ನನ್ನದೇ ಆದ ರಾಜ್ಯವನ್ನು ಹೊಂದಿದ್ದೇನೆ ಮತ್ತು ಅದಕ್ಕೆ "ದೀಕ್ಷಿತ್ ರಾಜ್ಯ" ಎಂಬುದಾಗಿ ಹೆಸರೂ ಇರಿಸಿದ್ದೇನೆ. ಹಕ್ಕುಸ್ವಾಮ್ಯವಿಲ್ಲದಿರುವ ಬಿರ್ ತವಾಲಿಯನ್ನು ನಾನು ನನ್ನದಾಗಿ ಮಾಡಿಕೊಂಡಿದ್ದು ಇದನ್ನು ನನ್ನ ದೇಶ ಮತ್ತು ಜನತೆಯ ಏಳಿಗೆಗಾಗಿ ಮುಡಿಪಾಗಿರಿಸುತ್ತೇನೆ.

  ಪ್ರಯಾಣ

  ಈ ಬಿರ್ ತವಾಲಿಯನ್ನು ಕಂಡುಕೊಳ್ಳಲು ದೀಕ್ಷಿತ್ ಮಾಡಿದ ಪ್ರಯಾಣ ಅಷ್ಟಿಷ್ಟಲ್ಲ. 319 ಕಿಮೀನಷ್ಟು ಇವರು ಸಂಚರಿಸಿದ್ದು 800 ಸ್ಕ್ವೇರ್ ಫೀಟ್ ಭೂಮಿಯನ್ನು ಯಾವುದೇ ದೇಶ ಹೊಂದಿಲ್ಲ ಎಂಬುದನ್ನು ಕಂಡುಕೊಂಡಿದ್ದಾರೆ. ಇದು ಮರುಭೂಮಿಯಲ್ಲಿದ್ದರೂ ಇಲ್ಲಿ ಜನರು ಬದುಕಬಹುದಾಗಿದೆ. ಈ ಭೂಮಿಯಲ್ಲಿ ಬೆಳೆಯನ್ನು ಬೆಳೆಯಬಹುದಾಗಿದೆ. ಅವರು ಬೀಜವನ್ನು ನೆಟ್ಟು ಅದಕ್ಕೆ ನೀರುಣಿಸುವ ಚಿತ್ರವನ್ನು ಪೋಸ್ಟ್ ಮಾಡಿದ್ದಾರೆ.

  King Of An Unclaimed Land!

  ಪ್ರಯಾಣದ ಕುರಿತು

  ಅಬು ಸಿಂಬಲ್‌ನಿಂದ ಬೆಳಗ್ಗೆ 4 ಕ್ಕೆ ನನ್ನ ಪ್ರಯಾಣ ಆರಂಭವಾಗಿತ್ತು. ಸ್ಥಳೀಯ ಚಾಲಕ ಮುಸ್ತಫಾರ ಸಹಾಯದಿಂದ ನಾನು ಕಾರು ಮತ್ತು ಚಾಲನೆಯ ಸಹಾಯವನ್ನು ಪಡೆದುಕೊಂಡೆ. ನನ್ನ ಯೋಜನೆಯನ್ನು ಮೊದಲು ಅವರಿಗೆ ತಿಳಿಸಿದಾಗ ಮೊದಲು ಅವರು ನನಗೆ ಹುಚ್ಚು ಎಂದುಕೊಂಡಿದ್ದರು. ಆದರೂ ನನ್ನ ಸಾಹಸಕ್ಕೆ ಅವರು ಬೆಂಬಲವನ್ನು ನೀಡಿದರು. ಅವರು ಪ್ರಯಾಣ ಮಾಡಿದ ಸ್ಥಳವು ಈಜಿಪ್ಟ್ ಮಿಲಿಟರಿಯ ರಕ್ಷಣೆಯಲ್ಲಿತ್ತು.

  ಭಯೋತ್ಪಾದಕರ ದಾಳಿಯಿಂದಾಗಿ ಶೂಟ್ ಏಂಡ್ ಸೈಟ್ ಆದೇಶ ಜಾರಿಯಲ್ಲಿತ್ತು. ಅದಾಗ್ಯೂ ಇವರು ಅನುಮತಿಯನ್ನು ಪಡೆದುಕೊಂಡು ಈ ಸ್ಥಳವನ್ನು ಅವಲೋಕಿಸಲು ಮುಂದಾದರು. ಮಿಲಿಟರಿ ಸ್ಥಳದ ಫೋಟೋವನ್ನು ತೆಗೆಯುವಂತಿಲ್ಲ, ಅದೇ ದಿನ ಮರಳಿ ಬರಬೇಕು ಮತ್ತು ಬೆಲೆಬಾಳುವ ವಸ್ತುಗಳನ್ನು ತೆಗೆದುಕೊಂಡು ಹೋಗುವಂತಿಲ್ಲ ಎಂಬುದು ಷರತ್ತಾಗಿತ್ತು.

  King Of An Unclaimed Land!

  ಆರು ತಾಸುಗಳ ಕಾಲ ನಾವು ಪ್ರಯಾಣ ಮಾಡಿದೆವು ನಮಗೆ ಶಿಖರಗಳು, ಒಣ ಭೂಮಿ ಪ್ರಯಾಣದ ಸಮಯದಲ್ಲಿ ಕಂಡುಬಂದಿತು. ನನ್ನ ಸ್ಥಳೀಯ ಗೆಳತಿಯ ಬಳಿ ಬೆಲೆಬಾಳುವ ವಸ್ತುಗಳನ್ನು ಇರಿಸಿ ಮಧ್ಯರಾತ್ರಿಯೊಳಗೆ ಬರದೇ ಇದ್ದರೆ ಪೊಲೀಸರಿಗೆ ತಿಳಿಸುವಂತೆ ವಿನಂತಿಸಿದೆವು.

  ನಾನು ಬರುವುದರ ಮುಂಚೆಯೇ ಸಾಕಷ್ಟು ಜನ ಈ ಸ್ಥಳಕ್ಕೆ ಬಂದು ಹೋಗಿದ್ದಾರೆ ಆದರೆ ಈಗ ಈ ಭೂಮಿ ನನ್ನದಾಗಿದೆ. 2 ಸ್ಥಳಗಳಲ್ಲಿ ನಾವು ಧ್ವಜವನ್ನು ನೆಟ್ಟಿದ್ದೇವೆ. ಕೆಓಡಿ ಕ್ಯಾಪಿಟಲ್ ಎಂದು ನಾವು ಇದನ್ನು ಕರೆದಿದ್ದೇವೆ. ನಮ್ಮ ಪ್ರಯಾಣದ ಸಮಯದಲ್ಲಿ ಕಾರು ಕೈಕೊಟ್ಟರೆ, ನೀಡಿದ ಸಮಯವನ್ನು ನಾವು ಮುಗಿಸಿದರೆ ಎಂಬ ಆತಂಕ ಕೂಡ ಇತ್ತು. ಆದರೆ ನಮ್ಮ ಧೈರ್ಯದ ಮುಂದೆ ನಮ್ಮ ಆತಂಕ ದೂರಾಯಿತು.

  ಕೆಓಡಿ ಕುರಿತು

  ಹೆಸರು: ಕಿಂಗ್‌ಡಮ್ ಆಫ್ ದೀಕ್ಷಿತ್

  ಫ್ಲ್ಯಾಗ್:

  ಪ್ರಸ್ತುತ ಜನಸಂಖ್ಯೆ: 1

  ರಾಜಧಾನಿ: ಸುಯಾಶ್‌ಪುರ್

  ಆಡಳಿತಾಗರ: ಕಿಂಗ್ ಸುಯಾಶ್ 1

  ಸ್ಥಾಪನೆಯ ದಿನಾಂಕ: ನವೆಂಬರ್ 5, 2017

  King Of An Unclaimed Land!

  ರಾಷ್ಟ್ರೀಯ ಪ್ರಾಣಿ: ಹಲ್ಲಿ

  ನನ್ನ ತಂದೆಯೇ ಅಧ್ಯಕ್ಷರು

  ಸುಯೋಗ್ ದೀಕ್ಷಿತ್ ಆಗಿರು ನಾನು ಇಂದಿನಿಂದ ಮಿಲಿಟರಿಯ ಮುಖ್ಯಸ್ಥ ಮತ್ತು ಪ್ರಧಾನಿಯಾಗಿದ್ದೇನೆ. ಇತರ ಪೋಸ್ಟ್‌ಗಳಿಗಾಗಿ ನಾವು ಅಪ್ಲಿಕೇಶನ್‌ಗಳನ್ನು ತೆಗೆದುಕೊಳ್ಳುತ್ತಿದ್ದೇವೆ. ನನ್ನ ತಂದೆಯೇ ಕೆಓಡಿ ಅಧ್ಯಕ್ಷರಾಗಿದ್ದು ಅವರಿಗೆ ಜನ್ಮದಿನದ ಉಡುಗೊರೆಯಾಗಿ ಇದನ್ನು ನೀಡುತ್ತಿದ್ದೇನೆ. ಹುಟ್ಟುಹಬ್ಬದ ಶುಭಾಶಯ ಅಪ್ಪ! ಜೀವನದಲ್ಲಿ ಏನಾದರೂ ಸಾಧಿಸಲೇ ಬೇಕು, ಇಲ್ಲದಿದ್ದರೆ ನಿಮ್ಮ ಜೀವನ ವ್ಯರ್ಥವಾಗಿಬಿಡುತ್ತದೆ.

  ನಾನು ಹೇಳುತ್ತಿರುವುದು ಹಾಸ್ಯವಲ್ಲ

  ನಾನು ಒಂದು ದೇಶಕ್ಕೆ ಒಡೆಯನಾಗಿದ್ದೇನೆ ಮತ್ತು ಯುಎನ್‌ಗೆ ಈ ಕುರಿತು ಮೇಲ್ ಬರೆಯುತ್ತೇನೆ.

  English summary

  Indian Guy Who Became The King Of An Unclaimed Land!

  Being lucky and smart is something that can do wonders to any person. If your luck favours you right, you could even become a millionaire overnight. Suyash Dixit is the perfect example of the man who did proper research about the only unclaimed place on earth "Bir Tawil" and decided to own it in the most easiest way. Check out on his Facebook post where he revealed about his plans in a swag style!
  Story first published: Wednesday, November 15, 2017, 23:47 [IST]
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more